Tulsi Gabbard Resigns: ಟ್ರಂಪ್ ಸರ್ಕಾರದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ರಾಜೀನಾಮೆ – Kannada News | Tulsi Gabbard Resigns from Trump Admin: Husband’s Cancer and Iran Policy Differences
ವಾಷಿಂಗ್ಟನ್, ಮೇ 23: ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯಾಗಿದ್ದ 45 ವರ್ಷದ ತುಳಸಿ ಗಬ್ಬಾರ್ಡ್(Tulsi Gabbard) ಅವರು ಶುಕ್ರವಾರ ಟ್ರಂಪ್ ಆಡಳಿತವನ್ನು ತೊರೆದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ‘X’ (ಟ್ವಿಟರ್) ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತುಳಸಿ ಗಬ್ಬಾರ್ಡ್ ಅವರ ಈ ನಿರ್ಧಾರದ ಹಿಂದೆ ಅವರ ಕುಟುಂಬಕ್ಕೆ ಎದುರಾಗಿರುವ ದೊಡ್ಡ ಸವಾಲಿದೆ. ಅವರ ಪತಿ ಅಬ್ರಹಾಂ ಅವರಿಗೆ ಅತ್ಯಂತ ಅಪರೂಪದ ಮೂಳೆ ಕ್ಯಾನ್ಸರ್ (Bone Cancer) ಇರುವುದು ಇತ್ತೀಚೆಗಷ್ಟೇ ಪತ್ತೆಯಾಗಿದೆ. ತಮ್ಮ…