All posts by nagaraj11081993

ಬೆಂಗಳೂರಿನಲ್ಲಿ ಪಬ್ಗಳಿಗೂ ಸಿಲಿಂಡರ್ ಸಮಸ್ಯೆ: ಕೋಲಾರದಲ್ಲಿ ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!

ಬೆಂಗಳೂರಿನಲ್ಲಿ ಪಬ್ಗಳಿಗೂ ಸಿಲಿಂಡರ್ ಸಮಸ್ಯೆ: ಕೋಲಾರದಲ್ಲಿ ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!

ಬೆಂಗಳೂರು, ಕೋಲಾರ ಮಾರ್ಚ್ 17: ಕರ್ನಾಟಕದಲ್ಲಿ ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡಿದ್ದು, ಕಳೆದ ಎಂಟು ದಿನಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ. ಇದರ ಬಿಸಿ ಬೆಂಗಳೂರಿನಾದ್ಯಂತ ಪಬ್‌ಗಳಿಗೂ ತಟ್ಟಿದೆ. ವಿಶೇಷವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ, ಸಿಲಿಂಡರ್ ಕೊರತೆಯಿಂದ ಪಬ್​ಗಳ ಮಾಲಕರು ಕಂಗಾಲಾಗಿದ್ದಾರೆ. ಹಲವು ಪಬ್‌ಗಳಲ್ಲಿ ‘ಫೈರ್‌ಲೆಸ್ ಕುಕಿಂಗ್’ ಅಂದರೆ ಬೆಂಕಿ ಬಳಸದೆ ತಯಾರಿಸುವ ಸಲಾಡ್, ಹಣ್ಣುಗಳಂತಹ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.

ಕೋಲಾರ ಜಿಲ್ಲೆಯಲ್ಲೂ ಹೋಟೆಲ್‌ಗಳು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಪರದಾಡುತ್ತಿವೆ. ವಾಣಿಜ್ಯ ಸಿಲಿಂಡರ್ ಸಿಗದೆ ಇರುವ ಕಾರಣ ಪಂಚವಟಿಯಂತಹ ಹಳೆಯ ಹೋಟೆಲ್‌ಗಳು ಸೌದೆ ಒಲೆಯ ಮೊರೆ ಹೋಗಿವೆ. ಹೊಗೆಯ ಸಮಸ್ಯೆ, ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ, ಮತ್ತು ಮೆನು ನಿರ್ಬಂಧಗಳಿಂದಾಗಿ ಹೋಟೆಲ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಹೋಟೆಲ್ ಸಿಬ್ಬಂದಿಯೂ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಹೋಟೆಲ್​ಗಳು ಕಲ್ಯಾಣ ಮಂಟಪಗಳಲ್ಲಿ ಅಡುಗೆ ಮಾಡಿ ಹೋಟೆಲ್‌ಗಳಿಗೆ ತಂದು ಗ್ರಾಹಕರಿಗೆ ಬಡಿಸುವಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುಗಾದಿಗೆ ಮೈಸೂರು, ಧರ್ಮಸ್ಥಳ, ಕುಕ್ಕೆಗೆ ಹೋಗುವವರಿಗೆ ಬಿಗ್​​ ಶಾಕ್​​​​​ ನೀಡಿದ ಖಾಸಗಿ ಬಸ್​​​: ಟಿಕೆಟ್​​​​ ದರ ಏರಿಕೆ ಪಟ್ಟಿ ಇಲ್ಲಿದೆ

ಬೆಂಗಳೂರು, ಮಾ.17: ಸತತ ನಾಲ್ಕು ದಿನಗಳ ರಜೆ ಮತ್ತು ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮೂರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ (Bengaluru private bus ) ಮಾಲೀಕರು ದರ ಏರಿಕೆಯ ಬಿಸಿ ಮುಟ್ಟಿಸಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಸಾರಿಗೆ ಸಂಸ್ಥೆಗಳು, ಟಿಕೆಟ್ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಿವೆ.

ಖಾಸಗಿ ಬಸ್ ದರ ಏರಿಕೆಯ ಕಟು ಸತ್ಯ (ನಾರ್ಮಲ್ vs ಹಬ್ಬದ ದರ):

ಬೆಂಗಳೂರು-ಮಂಗಳೂರು: 600 ರೂ. ಇದ್ದ ದರ ಈಗ 2,999 ರೂ. ವರೆಗೆ ಏರಿಕೆಯಾಗಿದೆ.

ಬೆಂಗಳೂರು-ಧಾರವಾಡ/ಹುಬ್ಬಳ್ಳಿ: 400-1,300 ರೂ. ಇದ್ದ ದರ ಭರ್ಜರಿ 4,500 ರೂ. ತಲುಪಿದೆ.

ಬೆಂಗಳೂರು-ಶಿವಮೊಗ್ಗ: 400 ರೂ. ಇದ್ದ ಸಾಮಾನ್ಯ ದರ ಹಬ್ಬದ ವೇಳೆ 2,799 ರೂ.ಕ್ಕೆ ಜಿಗಿದಿದೆ.

ಬೆಂಗಳೂರು-ಧರ್ಮಸ್ಥಳ: 500 ರೂ. ರಿಂದ 3,600 ರೂ.ಕ್ಕೆ ಏರಿಕೆ ಕಂಡುಬಂದಿದೆ.

ಬೆಂಗಳೂರು-ಮೈಸೂರು: ಕೇವಲ 350 ರೂ. ಇದ್ದ ದರ ಈಗ 2,500 ರೂ. ವರೆಗೆ ವಸೂಲಿ ಮಾಡಲಾಗುತ್ತಿದೆ.

ಆದರೆ ಇದರ ನಡುವೆ ಖಾಸಗಿ ಬಸ್‌ಗಳ ದರ ಏರಿಕೆಯಿಂದ ಕಂಗಾಲಾದ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೆರವಾಗಲಿದೆ.ಮಾರ್ಚ್ 18, 19 ಮತ್ತು 20 ರಂದು ಬೆಂಗಳೂರಿನ ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಸ್ಯಾಟಲೈಟ್ ಮತ್ತು ಶಾಂತಿನಗರ ನಿಲ್ದಾಣಗಳಿಂದ ರಾಜ್ಯದ ವಿವಿಧ ಮೂಲೆಗಳಿಗೆ 2,000 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ: ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರು

“ಡೀಸೆಲ್ ದರ ಏರಿಕೆ ಮತ್ತು ಸರ್ಕಾರದ ತೆರಿಗೆ ಹೊರೆಯಿಂದಾಗಿ ಅನಿವಾರ್ಯವಾಗಿ ದರ ಹೆಚ್ಚಿಸಬೇಕಾಗಿದೆ. ಯುದ್ಧದಂತಹ ಪರಿಸ್ಥಿತಿಯಿಂದ ಡೀಸೆಲ್ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದರ ಏರಿಕೆ ಅಷ್ಟೊಂದು ಹೆಚ್ಚಿಲ್ಲ” ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ. ಇನ್ನು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆಯ ( ಸ್ಯಾಟ್ ಲೈಟ್ )ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಿಂದ ಸಂಚಾರ ಮಾಡಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನಿಗೆ ಸುರಕ್ಷತೆಯ ಪಾಠ ಮಾಡಿದ ಪುಟ್ಟ ಹುಡುಗಿ

ವಾಹನ ಚಲಾಯಿಸುವ ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (helmet) ಧರಿಸುವುದು ಕಡ್ಡಾಯ. ಆದರೆ ಕೆಲವರು ಈ ರೂಲ್ಸ್ ಬ್ರೇಕ್ ಮಾಡ್ತಾರೆ. ಕೆಲವೊಮ್ಮೆ ಪೊಲೀಸರ ಕೈಯಲ್ಲಿ ತಗಲಾಕಿ ಕೊಳ್ತಾರೆ. ಆದರೆ ಇಲ್ಲೊಬ್ಬ ಯುವಕ ಪೋಲೀಸರ ಕೈಯಲ್ಲಿ ಅಲ್ಲ, ಪುಟಾಣಿಯ (little girl) ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಹೌದು, ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನಿಗೆ ಪುಟ್ಟ ಹುಡುಗಿಯೂ ಸುರಕ್ಷತೆಯ ಪಾಠ ಮಾಡಿದ್ದು, ಹೆಲ್ಮೆಟ್ ಧರಿಸುವಂತೆ ಹೇಳಿದ್ದಾಳೆ. ಈ ಪುಟಾಣಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

instaviral.inm ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಹೆಲ್ಮೆಟ್ ಧರಿಸದೇ ವಾಹನ ಓಡಿಸುವುದನ್ನು ಕಾಣಬಹುದು. ಹೆತ್ತವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಪುಟ್ಟ ಹುಡುಗಿಯೂ ಅದನ್ನು ಗಮನಿಸಿದ್ದಾಳೆ. ತಕ್ಷಣವೇ ಈ ಯುವಕನನ್ನು ಕರೆದು, ಹೆಲ್ಮೆಟ್ ಹಾಕುವಂತೆ ಹೇಳುವುದನ್ನು ಕಾಣಬಹುದು. ಈ ಪುಟಾಣಿ ಹೆತ್ತವರು, ಈ ಮಗಳ ಮಾತು ಕೇಳಿ ಜೋರಾಗಿ ನಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಹುಡುಗಿ ಐಸ್ ಕ್ರೀಮ್ ಕೊಟ್ಟಿದ್ದಕ್ಕೆ ಮುತ್ತು ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ

ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಪುಟಾಣಿಯನ್ನು ಬ್ರಾಂಡ್ ಅಂಬಾಸಿಡರ್ ಮಾಡಿ ಎಂದಿದ್ದಾರೆ. ಇನ್ನೊಬ್ಬರು, ಹೇ ಬಾಬು, ಜೈ ಬಾಬು ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಅಲಭ್ಯ..!

Source link

‘ಕೆಡಿ’ ಹಾಡು ವಿವಾದ: ಪ್ರೇಮ್ ವಿರುದ್ಧ ದೆಹಲಿಯಲ್ಲಿ ದೂರು

ಧ್ರುವ ಸರ್ಜಾ (Dhrva Sarja) ನಟಿಸಿ, ಪ್ರೇಮ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ದ ಹಾಡೊಂದು ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ನೋರಾ ಫತೇಹಿ ನಟಿಸಿರುವ ಹಾಡನ್ನು ಬಲು ಅದ್ಧೂರಿಯಾಗಿ ಚಿತ್ರತಂಡೆ ಬಿಡುಗಡೆ ಮಾಡಿತು. ಹಾಡು ಕನ್ನಡದಲ್ಲಿ ಮಾತ್ರವೇ ಅಲ್ಲದೆ, ಹಿಂದಿ, ತೆಲುಗು ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಯೂಟ್ಯೂಬ್​​ನಲ್ಲಿ ರಿಲೀಸ್ ಆಯ್ತು. ಆದರೆ ಈ ಹಾಡು ಇದೀಗ ವಿವಾದಕ್ಕೆ ಸಿಲುಕಿದೆ. ಕನ್ನಡದಲ್ಲಿ ‘ಸರ್ಸೆ ಸೆರಗ ಸರ್ಸೆ’ ಎಂದಿರುವ ಈ ಹಾಡು ಹಿಂದಿಯಲ್ಲಿ ‘ಸರ್ಕೆ ಚುನರ್’ ಎಂದಿದೆ. ಆದರೆ ಈ ಹಾಡಿನ ಸಾಹಿತ್ಯ ತೀವ್ರ ಟೀಕೆಗೆ ಗುರಿ ಆಗಿದ್ದು, ಹಾಡಿನ ವಿರುದ್ಧ ದೂರುಗಳು ದಾಖಲಾಗಿವೆ.

ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಐಟಂ ಸಾಂಗ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನಲ್ಲಿರುವ ನೋರಾ ಫತೇಹಿ ಅವರ ನೃತ್ಯದ ಭಂಗಿಗಳು ‘ಅತಿರೇಕದ ಅಶ್ಲೀಲತೆ’ಯಿಂದ ಕೂಡಿವೆ ಎನ್ನಲಾಗಿತ್ತು. ಅದರಲ್ಲೂ ಹಾಡಿನ ಸಾಹಿತ್ಯವಂತೂ ತೀರ ಅಶ್ಲೀಲವಾಗಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಹಿಂದಿ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಇದೀಗ ದೆಹಲಿಯಲ್ಲಿ ಈ ಬಗ್ಗೆ ದೂರು ಸಹ ದಾಖಲಾಗಿದೆ.

ದೆಹಲಿಯ ವಕೀಲ ವಿನೀತ್ ಜಿಂದಾಲ್ ಎಂಬುವರು ಹಾಡಿನ ವಿರುದ್ಧ ಸಿಬಿಎಫ್​​ಸಿಗೆ ದೂರು ನೀಡಿದ್ದು, ಈ ಕೂಡಲೇ ಹಾಡನ್ನು ತೆಗೆಸಬೇಕು ಎಂದು ಮನವಿ ಮಾಡಿದ್ದಾರೆ. ವಕೀಲ ವಿನೀತ್ ಅವರು ದೆಹಲಿ ಸೈಬರ್ ಪೊಲೀಸರಿಗೂ ಸಹ ದೂರು ನೀಡಿದ್ದು, ಈ ಹಾಡಿನ ಸಾಹಿತ್ಯ ಬರೆದವರು, ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 (ಮಹಿಳೆಯ ಮಾನಕ್ಕೆ ಧಕ್ಕೆ) ಮತ್ತು ಪೋಕ್ಸೊ ಕಾಯ್ದೆಯ ಅಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ

ವಕೀಲ ವಿನೀತ್ ಮಾತ್ರವೇ ಅಲ್ಲದೆ ಕೆಲವು ಗಾಯಕರು ಸಹ ಈ ಹಾಡಿನ ಸಾಹಿತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇದರ ಗಂಭೀರತೆಯನ್ನು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳನ್ನು ಪ್ರದರ್ಶಿಸಿರುವುದನ್ನು ಆಯೋಗವು ಆಕ್ಷೇಪಿಸಿದೆ ಎನ್ನಲಾಗಿದೆ.

‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಐಟಂ ಹಾಡಾಗಿದ್ದು, ನೋರಾ ಫತೇಹಿ ಗ್ಲಾಮರಸ್ ಆಗಿ ಕುಣಿದಿದ್ದಾರೆ. ಸಂಜಯ್ ದತ್ ಸಹ ಹಾಡಿನಲ್ಲಿದ್ದಾರೆ. ನೋರಾ ಫತೇಹಿ ಮದ್ಯದ ಕುರಿತಾಗಿ ಹಾಡುವ ಹಾಡು ಅದಾಗಿದೆ ಆದರೆ ಹಾಡಿನಲ್ಲಿ ಸಾಕಷ್ಟು ದ್ವಂದ್ವಾರ್ಥಗಳಿವೆ. ಇದೇ ಕಾರಣಕ್ಕೆ ಇದೀಗ ಹಾಡು ವಿವಾದಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SSB Recruitment 2026: ಸಶಸ್ತ್ರ ಸೀಮಾ ಬಲದಲ್ಲಿ 233 ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ; ಹೀಗೆ ಅರ್ಜಿ ಸಲ್ಲಿಸಿ

ಸಶಸ್ತ್ರ ಸೀಮಾ ಬಲದಲ್ಲಿ (SSB) ವೃತ್ತಿಜೀವನವನ್ನು ಆರಂಭಿಸಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶವೊಂದು ಒದಗಿಬಂದಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಎಸ್‌ಎಸ್‌ಬಿ, ಖಾಲಿ ಇರುವ ಒಟ್ಟು 233 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ದೇಶದಾದ್ಯಂತ ಎಲ್ಲಿ ಬೇಕಾದರೂ ಕೆಲಸ ಮಾಡಲು ಸಿದ್ಧವಿರುವ ಮತ್ತು ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರುವ ಆಸಕ್ತರು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 25,500 ದಿಂದ 81,100 ರೂ. ರವರೆಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಶೈಕ್ಷಣಿಕ ಅರ್ಹತೆಯ ವಿಷಯಕ್ಕೆ ಬಂದರೆ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕನಿಷ್ಠ 10ನೇ ತರಗತಿ, 12ನೇ ತರಗತಿ, ಐಟಿಐ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು. ವಯೋಮಿತಿಯು ಕನಿಷ್ಠ 18 ವರ್ಷಗಳಿಂದ ಗರಿಷ್ಠ 27 ವರ್ಷಗಳ ಒಳಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳ ಆಯ್ಕೆಯನ್ನು ಒಟ್ಟು ನಾಲ್ಕು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ತೇರ್ಗಡೆಯಾದವರಿಗೆ ದೈಹಿಕ ದಕ್ಷತೆ ಪರೀಕ್ಷೆ ಮತ್ತು ದೈಹಿಕ ಪ್ರಮಾಣೀಕರಣ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳನ್ನು ಅಂತಿಮವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಅರ್ಜಿ ಸಲ್ಲಿಸಲು ಇಚ್ಛಿಸುವವರು ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಅವಶ್ಯಕ. ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವ ಮುನ್ನ ಚಾಲ್ತಿಯಲ್ಲಿರುವ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿ, ವಯಸ್ಸಿನ ಪುರಾವೆ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಎಸ್‌ಎಸ್‌ಬಿಯ ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಅಗತ್ಯವಿರುವ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಿ. ಏಪ್ರಿಲ್ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಿದ ನಂತರ ಮುಂದಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಪ್ರಿಂಟ್ ಪಡೆದುಕೊಳ್ಳುವುದು ಉತ್ತಮ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುಬಾರಿಯಾದ ಸಲ್ಮಾನ್ ಖಾನ್ ಸಿನಿಮಾ; 40 ದಿನ ರೀಶೂಟ್

‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾದ ಟೈಟಲ್​​ನ ಇತ್ತೀಚೆಗೆ ‘ಮಾತೃಭೂಮಿ’ (Matrabhoomi) ಎಂದು ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ತಂಡ ರಿವೀಲ್ ಮಾಡಿರಲಿಲ್ಲ. ಹೀಗಿರುವಾಗಲೇ ಇದರ ಹಿಂದಿನ ಅಸಲಿ ವಿಷಯ ರಿವೀಲ್ ಆಗಿದೆ. ಸಲ್ಮಾನ್ ಖಾನ್ ಸಿನಿಮಾ ದುಬಾರಿ ಆಗಿದೆ. ತಂಡದವರು ಸಿನಿಮಾದ ಟೈಟಲ್ ಬದಲಿಸಿದ್ದು ಮಾತ್ರವಲ್ಲ, 40 ದಿನಗಳ ರೀ ಶೂಟ್ ಮಾಡುತ್ತಿದ್ದಾರೆ.

ಅಪೂರ್ವ ಲಖಿಯಾ ಅವರು ‘ಮಾತೃಭೂಮಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಸಂಘರ್ಷದ ಬಗ್ಗೆ ಸಿನಿಮಾ ಇದೆ. ದಿವಂಗತ ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. 2205ರ ಸೆಪ್ಟೆಂಬರ್​​ ಅಲ್ಲಿ ಲಡಾಕ್​​​ನಲ್ಲಿ ಸಿನಿಮಾ ಶೂಟ್ ಮಾಡುವ ಪ್ಲ್ಯಾನ್ ಇತ್ತು. ಡಿಸೆಂಬರ್ ವೇಳೆಗೆ ಆ ಭಾಗದಲ್ಲಿ ಸಿನಿಮಾ ಶೂಟ್ ಕಂಪ್ಲೀಟ್ ಮಾಡುವ ಆಲೋಚನೆ ಇತ್ತು.

ಈಗ ಸಿನಿಮಾ ದುಬಾರಿ ಆಗುತ್ತಿದೆ. ಫೆಬ್ರವರಿಯಿಂದಲೇ ಸಿನಿಮಾದ ರೀಶೂಟ್ ಮುಂಬೈನಲ್ಲಿ ನಡೆದಿದೆ ಎನ್ನಲಾಗಿದೆ. ಸಿನಿಮಾದ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿರುವ ಕಾರಣದಿಂದ ರೀ ಶೂಟಿಂಗ್ ನಡೆದಿದೆ ಎಂದು ಹೇಳಲಾಗುತ್ತಾ ಇದೆ.

ಚೈನೀಸ್ ಹಾಡನ್ನು ಸಿನಿಮಾದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುತ್ತಿದೆ. ಹಿಮೇಶ್ ರೇಶ್ಮಿಯಾ ಅವರು ಈ ಹಾಡನ್ನು ಕಂಪೋಸ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರು ಕೂಡ ಈ ಹಾಡಿನಲ್ಲಿ ಇರಲಿದ್ದಾರೆ. ರೆಕಾರ್​ಡ್ ಮುಗಿದ ಬಳಿಕ ಹಾಡಿನ ಶೂಟ್ ನಡೆಯಲಿದೆ.

ಇದನ್ನೂ ಓದಿ: ‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆ ಬದಲು: ಸಲ್ಮಾನ್ ಖಾನ್ ಚಿತ್ರಕ್ಕೆ ಈಗ ‘ಮಾತೃಭೂಮಿ’ ಟೈಟಲ್

ಸದ್ಯದ ರಾಜಕೀಯ ಸನ್ನಿವೇಶಗಳ ಕಾರಣದಿಂದ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಥೆ ಬದಲಿಸಲಾಗಿದೆ. ಗಲ್ವಾನ್ ಸಂಘರ್ಷದ ಮೇಲೆ ಮಾತ್ರ ಕೇಂದ್ರೀಕರಿಸುವ ಬದಲು ಶಾಂತಿ, ಸಾಮರಸ್ಯ ಮತ್ತು ಯುದ್ಧ ಮಾಡುವುದರಿಂದ ಹೋಗುವ ಜೀವಗಳ ವಿಷಯದ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಪೀಕರ್ ಖಾದರ್ ಗುಡುಗಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ! ಇಲಾಖಾವಾರು ಎಷ್ಟು ಉತ್ತರ ನೀಡಲಾಯ್ತು? ಇಲ್ಲಿದೆ ವರದಿ

ಬೆಂಗಳೂರು, ಮಾರ್ಚ್ 17: ಶಾಸಕರ ಪ್ರಶ್ನೆಗಳಿಗೆ ಉತ್ತರಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಕರ್ನಾಟಕ (Karnataka) ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಅಸಮಾಧಾನಗೊಂಡು ಕಲಾಪ ಮುಂದೂಡಿದ ಘಟನೆಗೆ ಈಗ ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳು ಕಾಣುತ್ತಿವೆ. ಸ್ಪೀಕರ್ ಖಡಕ್ ಎಚ್ಚರಿಕೆಯ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇಲಾಖಾವಾರು ಲಿಖಿತ ಉತ್ತರಗಳನ್ನು ಸಲ್ಲಿಸಲು ಆರಂಭಿಸಿದೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಖಾದರ್, ಪರವಾಗಿಲ್ಲ ಈಗ ಸ್ವಲ್ಪ ಸುಧಾರಿಸಿದಂತೆ ಕಾಣುತ್ತಿದೆ ಎಂದಿದ್ದಾರೆ.

ಮಂಗಳವಾರದ ಕಲಾಪದಲ್ಲಿ ಇಲಾಖಾವಾರು ಉತ್ತರಗಳ ಅಂಕಿ-ಅಂಶಗಳನ್ನು ಪ್ರಸ್ತಾಪಿಸಿದ ಸ್ಪೀಕರ್ ಯುಟಿ. ಖಾದರ್, ‘ಈಗ ಸ್ವಲ್ಪ ಸುಧಾರಣೆ ಕಂಡುಬರುತ್ತಿದೆ’ ಎಂದು ಅಭಿಪ್ರಾಯಪಟ್ಟರು. ಸೋಮವಾರದ ಕಲಾಪದಲ್ಲಿ 230 ಪ್ರಶ್ನೆಗಳ ಪೈಕಿ ಕೇವಲ 84ಕ್ಕೆ ಮಾತ್ರ ಉತ್ತರ ಬಂದಿದ್ದರಿಂದ ಬೇಸತ್ತಿದ್ದ ಸ್ಪೀಕರ್, ಸಚಿವರು ಮತ್ತು ಕಾರ್ಯದರ್ಶಿಗಳು ಉತ್ತರಿಸುವವರೆಗೂ ಸದನ ನಡೆಸಲ್ಲ ಎಂದು ಪೀಠದಿಂದ ಕೆಳಗಿಳಿದು ತೆರಳಿದ್ದರು. ಈ ಐತಿಹಾಸಿಕ ಪ್ರತಿಭಟನೆಯ ನಂತರ ಇಂದು ಉತ್ತರಗಳ ಸಂಖ್ಯೆ ಏರಿಕೆಯಾಗಿದೆ.

ಯಾವ ಇಲಾಖೆಯಿಂದ ಎಷ್ಟು ಉತ್ತರ?

ಸ್ಪೀಕರ್ ಯುಟಿ ಖಾದರ್ ಸದನದಲ್ಲಿ ಮಂಡಿಸಿದ ಮಾಹಿತಿಯಂತೆ ವಿವಿಧ ಇಲಾಖೆಗಳು ಪ್ರಶ್ನೆಗಳಿಗೆ ನೀಡಿದ ಉತ್ತರದ ವಿವರ ಇಲ್ಲಿದೆ;

  • ಆರ್ಥಿಕ ಇಲಾಖೆ: ಒಟ್ಟು 30 ಪ್ರಶ್ನೆಗಳಲ್ಲಿ 6ಕ್ಕೆ ಉತ್ತರ ಲಭ್ಯ.
  • ಸಮಾಜ ಕಲ್ಯಾಣ ಇಲಾಖೆ: 9 ಪ್ರಶ್ನೆಗಳಲ್ಲಿ ಕೇವಲ 1ಕ್ಕೆ ಉತ್ತರ.
  • ಸಹಕಾರ ಇಲಾಖೆ: 12 ಪ್ರಶ್ನೆಗಳ ಪೈಕಿ ಒಂದಕ್ಕೂ ಉತ್ತರ ಬಂದಿಲ್ಲ.
  • ಜಲಸಂಪನ್ಮೂಲ ಇಲಾಖೆ: 11 ಪ್ರಶ್ನೆಗಳಲ್ಲಿ 4ಕ್ಕೆ ಉತ್ತರ ಲಭ್ಯ.
  • ನಗರಾಭಿವೃದ್ಧಿ ಇಲಾಖೆ: 24 ಪ್ರಶ್ನೆಗಳಲ್ಲಿ 7ಕ್ಕೆ ಮಾತ್ರ ಉತ್ತರ.
  • ಸಣ್ಣ ನೀರಾವರಿ ಇಲಾಖೆ: 19 ಪ್ರಶ್ನೆಗಳಲ್ಲಿ 13ಕ್ಕೆ ಉತ್ತರ ಬಂದಿದ್ದು, ಈ ಇಲಾಖೆ ಉತ್ತಮ ಪ್ರಗತಿ ಸಾಧಿಸಿದೆ.
  • ಮಾಹಿತಿ ತಂತ್ರಜ್ಞಾನ (IT) ಇಲಾಖೆ: ಕೇಳಲಾದ 2 ಪ್ರಶ್ನೆಗಳಿಗೂ ಉತ್ತರ ಬಂದಿದೆ.

ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬೇಕು: ಸ್ಪೀಕರ್ ಸೂಚನೆ

ಕಳೆದ ಐದು ದಿನಗಳಿಂದ ಕೇವಲ ಶೇ 10 ರಿಂದ 30ರಷ್ಟು ಮಾತ್ರ ಉತ್ತರ ಬರುತ್ತಿತ್ತು. ಈಗ ಸ್ವಲ್ಪ ಸುಧಾರಿಸಿದೆ. ಆದರೆ ಶಾಸಕರು ಸಾರ್ವಜನಿಕ ಹಿತದೃಷ್ಟಿಯಿಂದ ಕೇಳುವ ಪ್ರತಿಯೊಂದು ಪ್ರಶ್ನೆಗೂ ಸರ್ಕಾರ ಜವಾಬ್ದಾರಿಯುತವಾಗಿ ಉತ್ತರಿಸಬೇಕು ಎಂದು ಸ್ಪೀಕರ್ ಪುನರುಚ್ಚರಿಸಿದರು.

ಇದನ್ನೂ ಓದಿ: ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ: ಖಾದರ್​​ ಮನವೊಲಿಕೆ ಬಳಿಕ ಸದನ ಪುನಾರಂಭ

ಶಾಸಕರ ಪ್ರಶ್ನೆಗಳಿಗೆ ಸಚಿವರು ಮತ್ತು ಅಧಿಕಾರಿಗಳು ಉತ್ತರ ನೀಡದೇ ಇರುವುದರಿಂದ ಬೇಸತ್ತು ಸ್ಪೀಕರ್ ಖಾದರ್ ಅವರೇ ಸದನದಿಂದ ಎದ್ದು ಹೋಗಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್: ಭಯಾನಕ ದೃಶ್ಯ ವೈರಲ್

ದೆಹಲಿ, ಮಾ.17: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂಬ ಹಂಬಲ ಮತ್ತು ಅಪಾಯಕಾರಿ ರೀಲ್ಸ್ ಮಾಡುವ ಹುಚ್ಚು ದೆಹಲಿಯ ಯುವಕನೊಬ್ಬನ ಪ್ರಾಣವನ್ನೇ ಬಲಿಪಡೆದಿದೆ. ಸಿನಿಮಾ ಶೈಲಿಯಲ್ಲಿ ರಿವಾಲ್ವರ್ ಹಿಡಿದು ರೀಲ್ಸ್ ಮಾಡುತ್ತಿದ್ದಾಗ ಅಚಾನಕ್ಕಾಗಿ ಗುಂಡು ಹಾರಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನನ್ನು ದೆಹಲಿಯ ದಲ್ಲುಪುರ ನಿವಾಸಿ ಪವನ್ ಎಂದು ಗುರುತಿಸಲಾಗಿದೆ. ಪವನ್ ತನ್ನ ಗೆಳೆಯನ ಜೊತೆ ಸೇರಿ ರೀಲ್ಸ್ ಮಾಡಲು ಮುಂದಾಗಿದ್ದ. ತನ್ನ ಬಳಿ ಇದ್ದ ರಿವಾಲ್ವರ್‌ಗೆ ಬುಲೆಟ್ ಲೋಡ್ ಮಾಡುವುದು ಹೇಗೆ ಮತ್ತು ಅದನ್ನು ಭಯವಿಲ್ಲದೆ ನಿಭಾಯಿಸುವುದು ಹೇಗೆ ಎಂದು ವಿಡಿಯೋ ಮೂಲಕ ತೋರಿಸುತ್ತಿದ್ದ. ವಿಡಿಯೋ ಮಾಡುತ್ತಾ ಪವನ್ ನಗುಮುಖದಿಂದಲೇ ಲೋಡೆಡ್ ರಿವಾಲ್ವರ್ ಅನ್ನು ತನ್ನ ಎದೆಗೆ ಇಟ್ಟುಕೊಂಡಿದ್ದಾನೆ. ಈ ವೇಳೆ ವಿಡಿಯೋ ಚಿತ್ರೀಕರಿಸುತ್ತಿದ್ದ ಗೆಳೆಯ “ಗುಂಡು ಹಾರಿಸಬೇಡ ಸಹೋದರ” ಎಂದು ಎಚ್ಚರಿಕೆ ನೀಡಿದ್ದಾನೆ. ಆದರೆ ಪವನ್ “ಅರೆ ಇಲ್ಲಪ್ಪ” ಎಂದು ಉತ್ತರಿಸುವಷ್ಟರಲ್ಲೇ ಟ್ರಿಗರ್ ಒತ್ತಲ್ಪಟ್ಟು ಗುಂಡು ಎದೆಯನ್ನು ಸೀಳಿ ಹೋಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಲಿವುಡ್​ ಸ್ಟಾರ್​​ಗೂ ತಟ್ಟಿತು ಎಲ್​​ಪಿಜಿ ಸಿಲಿಂಡರ್ ಕೊರತೆಯ ಬಿಸಿ

ದೇಶಾದ್ಯಂತ ಈಗ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ಸೃಷ್ಟಿಯಾಗಿರುವ ಸಂಘರ್ಷದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಭಾರತದಲ್ಲಿ ಎಲ್​​ಪಿಜಿ ಕೊರತೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ದೇಶದಾದ್ಯಂತ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಹಲವಾರು ಹೋಟೆಲ್​​ಗಳು ಈಗಾಗಲೇ ಬಾಗಿಲು ಹಾಕಿವೆ. ಗೃಹಬಳಕೆ ಸಿಲಿಂಡರ್​ ಲಭ್ಯತೆಯೂ ಕಡಿಮೆ ಆಗಿದೆ. ಈ ಪರಿಸ್ಥಿತಿಯಿಂದ ಸಾಮಾನ್ಯ ಜನರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸಾಮಾನ್ಯರಿಗೆ ಮಾತ್ರವಲ್ಲದೆ ಇದೀಗ ಬಾಲಿವುಡ್‌ನ ಸೆಲೆಬ್ರಿಟಿಗಳಿಗೂ ಎಲ್​​ಪಿಜಿ ಸಿಲಿಂಡರ್ ಕೊರತೆ ಸಮಸ್ಯೆಯ ಬಿಸಿ ತಟ್ಟಿದೆ. ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಇದೀಗ ಸಿಲಿಂಡರ್ ಕೊರತೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದು, ಇಂಡಕ್ಷನ್​​ ಕಡೆ ಮುಖ ಮಾಡಿದ್ದಾರೆ.

ಸ್ವತಃ ಅಕ್ಷಯ್ ಕುಮಾರ್ ಈ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದು, ‘ನನಗೆ ಎಲ್‌ಪಿಜಿ ಕೊರತೆಯ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ, ಮನೆಯಲ್ಲಿ ಸದ್ಯಕ್ಕೆ ಅಡುಗೆ ಅನಿಲಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ನನ್ನ ಪತ್ನಿ ಟ್ವಿಂಕಲ್ ಈಗಾಗಲೇ ಎರಡು ಇಂಡಕ್ಷನ್ ಸ್ಟೌವ್‌ಗಳನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದಾರೆ’ ಎಂದು ಅಕ್ಷಯ್ ತಿಳಿಸಿದ್ದಾರೆ. ಭವಿಷ್ಯದಲ್ಲಿ ಒಂದು ವೇಳೆ ಅಡುಗೆ ಅನಿಲದ ಪೂರೈಕೆ ಸಂಪೂರ್ಣ ನಿಂತುಹೋದರೆ ಅಡುಗೆಗೆ ತೊಂದರೆಯಾಗಬಾರದು ಎಂಬ ದೂರದೃಷ್ಟಿಯಿಂದ ಟ್ವಿಂಕಲ್ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದಿದ್ದಾರೆ.

ಇದನ್ನು ಓದಿ:ರುಂಡ ಇಲ್ಲದ ವ್ಯಕ್ತಿ ಜೊತೆ ಅಕ್ಷಯ್ ಕುಮಾರ್

ವರದಿಗಳ ಪ್ರಕಾರ, ಮುಂಬೈ, ದೆಹಲಿ-ಎನ್‌ಸಿಆರ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳ ಮಾರಾಟದಲ್ಲಿ ಶೇ.300 ರಷ್ಟು ಏರಿಕೆಯಾಗಿದೆ. ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈಗಾಗಲೇ ಎಲ್‌ಪಿಜಿಯಿಂದ ಎಲೆಕ್ಟ್ರಿಕ್ ಪರ್ಯಾಯಗಳಿಗೆ ಅಥವಾ ಕಲ್ಲಿದ್ದಲು ಒಲೆಗಳಿಗೆ ಬದಲಾಗುತ್ತಿವೆ. ಹಲವು ರಾಜ್ಯಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬ್ಲಾಕ್ ಮಾರುಕಟ್ಟೆ ಬೆಲೆಯೂ ಅಚಾನಕ್ಕಾಗಿ ಗಗನಕ್ಕೇರಿರುವುದು ಮತ್ತು ಪೂರೈಕೆ ಕಡಿಮೆ ಇರುವುದು ಜನರನ್ನು ಇಂತಹ ಪರ್ಯಾಯಗಳತ್ತ ಸೆಳೆಯುತ್ತಿದೆ.

ಎಲ್‌ಪಿಜಿ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಸರ್ಕಾರವು ಸಾರ್ವಜನಿಕರಲ್ಲಿ ಸಿಲಿಂಡರ್‌ಗಳನ್ನು ಅನಗತ್ಯವಾಗಿ ಸಂಗ್ರಹಿಸಿಡಬೇಡಿ ಎಂದು ಮನವಿ ಮಾಡಿದೆ. ಸಾಧ್ಯವಾದಷ್ಟು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಅಥವಾ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದೆ. ಅಕ್ಷಯ್ ಕುಮಾರ್ ಅವರ ಈ ನಡೆ ಬಾಲಿವುಡ್ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಇತರ ತಾರೆಯರು ಸಹ ತಮ್ಮ ಮನೆಯ ಅಡುಗೆ ವ್ಯವಸ್ಥೆಯನ್ನು ಸುರಕ್ಷಿತವಾಗಿರಿಸಲು ಮುಂದಾಗುತ್ತಿದ್ದಾರೆ.

ಅಕ್ಷಯ್ ಕುಮಾರ್ ಅವರು ತಾವೊಬ್ಬ ಉತ್ತಮ ಅಡುಗೆಯವನೆಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ, ತಾವು ತಮ್ಮ ಮಕ್ಕಳಿಗೆ ‘ಚಾಕೊಲೇಟ್ ಪರಾಠ’ದಂತಹ ವಿಶೇಷ ಖಾದ್ಯಗಳನ್ನು ತಯಾರಿಸಿಕೊಡುವುದಾಗಿ ಹೇಳಿದ್ದರು. ಈಗ ಮನೆಯಲ್ಲಿ ಇಂಡಕ್ಷನ್ ಸ್ಟೌವ್ ಬಂದಿರುವುದರಿಂದ, ಅಕ್ಷಯ್ ಅವರ ಅಡುಗೆ ಪ್ರಯೋಗಗಳು ಇನ್ಮುಂದೆ ವಿದ್ಯುತ್ ಒಲೆಯ ಮೇಲೆ ಮುಂದುವರಿಯಲಿವೆ ಎಂದು ಊಹಿಸಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link