Headlines

nagaraj11081993

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರದಿಂದಲೇ ಸಿಗಲಿದೆ ಉಚಿತ ನೀಟ್ ಕೋಚಿಂಗ್!

ಬೆಂಗಳೂರು, ಮಾರ್ಚ್ 17: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹಳ್ಳಿಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ನೀಟ್ (NEET) ತರಬೇತಿ ನೀಡಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Dr Sharanaprakash R Patil) ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರ ಪ್ರಶ್ನೆಗೆ ಸಚಿವರು…

Read More

ಲಂಚ ಪಡೆಯುವಾಗ ಲೋಕಾಯುಕ್ತ ಟ್ರ್ಯಾಪ್: ಸಿಕ್ಕಿಬೀಳುತ್ತಿದ್ದಂತೆ ಕೈ ಕೊಯ್ದುಕೊಂಡು ಮಹಿಳಾ ಪಿಡಿಒ ಹೈಡ್ರಾಮಾ!

ಮೈಸೂರು, ಮಾ.17: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕಾರ ಮಾಡುತ್ತಿರುವ ಹಾಗೂ ಅಕ್ರಮ ಆಸ್ತಿಗಳನ್ನು ಹೊಂದಿರುವ ಪ್ರಕರಣಗಳು ಆಗ್ಗಾಗೆ ಬೆಳಕಿಗೆ ಬರುತ್ತಿದೆ. ಅಧಿಕಾರಿಗಳು ಹಣ ಸ್ವೀಕಾರ ಮಾಡುತ್ತಿರುವಾಗ ಲೋಕಾಯುಕ್ತ ಕೈ ಸಿಕ್ಕಿ ಬಿದ್ದಿರುವ ಅದೆಷ್ಟೋ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮಹಿಳಾ ಅಧಿಕಾರಿ ಲೋಕ ಬಲೆಗೆ ಬಿದ್ದಿದ್ದಾರೆ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು (PDO), ಬಂಧನದಿಂದ ತಪ್ಪಿಸಿಕೊಳ್ಳಲು ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿದ ಘಟನೆ ಜಿಲ್ಲೆಯ…

Read More

ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?

ಪವನ್ ಕಲ್ಯಾಣ್ (Pawan Kalyan), ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಆಂಧ್ರ ಡಿಸಿಎಂ ಆಗಿದ್ದರೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ್ ಅವರ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಪವನ್ ಕಲ್ಯಾಣ್ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಸಹ ನಟಿಸಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ಶ್ರೀಲೀಲಾ, ರಾಶಿ ಖನ್ನಾ ಇನ್ನೂ ಹಲವರು ಭಾಗಿ ಆಗಿದ್ದರು….

Read More

ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ! ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ

ಕೋಲಾರ, ಮಾ.17: ಜಿಲ್ಲೆಯ ಜಯನಗರ ಬಡಾವಣೆಯಲ್ಲಿ ಇಂದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಅಡುಗೆ ಕೋಣೆಯೊಳಗೆ ಬೃಹತ್ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಮನೆಯವರನ್ನು ಬೆಚ್ಚಿಬೀಳಿಸಿದೆ. ಕೋಲಾರದ ಜಯನಗರ ಬಡಾವಣೆಯ ನಿವಾಸಿ ಮಂಜುನಾಥ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಅಡುಗೆ ಕೆಲಸಕ್ಕಾಗಿ ಅಡುಗೆ ಮನೆಗೆ ಹೋದಾಗ, ಅಲ್ಲಿದ್ದ ಸಾಮಗ್ರಿಗಳ ನಡುವೆ ನಾಗರಹಾವು ಅಡಗಿ ಕುಳಿತಿರುವುದು ಪತ್ತೆಯಾಗಿದೆ. ಹಾವನ್ನು ಕಂಡು ಮನೆಯವರು ದಿಕ್ಕಾಪಾಲಾಗಿ ಓಡಿದ್ದು, ಕೂಡಲೇ ಸ್ಥಳೀಯ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ…

Read More

ನಿಮ್ಮ ಈ ಕೃತ್ಯ ಅಸಹ್ಯಕರ: ಪಾಕ್ ವಿರುದ್ಧ ಅಫ್ಘಾನ್ ಕ್ರಿಕೆಟಿಗರ ಆಕ್ರೋಶ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಸೋಮವಾರ (ಮಾರ್ಚ್ 16, 2026) ರಾತ್ರಿ ಪಾಕಿಸ್ತಾನ್ ನಡೆಸಿದ ವೈಮಾನಿಕ ದಾಳಿಯಲ್ಲಿ 400 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.  ಕಾಬೂಲ್‌ನಲ್ಲಿರುವ ಓಮಿದ್ ಮಾದಕ ವ್ಯಸನ ಮುಕ್ತಿ ಕೇಂದ್ರ (Omid Addiction Treatment Hospital) ಎಂಬ 2,000 ಹಾಸಿಗೆಗಳ ಆಸ್ಪತ್ರೆಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಈ ಭೀಕರ ದಾಳಿಯಿಂದಾಗಿ ನಾನೂರಕ್ಕೂ ಅಧಿಕ ಮಂದಿ ಮೃತಪಟ್ಟರೆ, ಸುಮಾರು 250ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಫ್ಘಾನ್ ಕ್ರಿಕೆಟಿಗರ ಆಕ್ರೋಶ ಪಾಕಿಸ್ತಾನ್…

Read More

ಶೆಲ್ ಪೆಟ್ರೋಲ್ ಬೆಲೆ 10 ದಿನದಲ್ಲಿ 4.50 ರೂ ಏರಿಕೆ; ಇಲ್ಲಿದೆ ದರಪಟ್ಟಿ

ನವದೆಹಲಿ, ಮಾರ್ಚ್ 17: ಇರಾನ್ ಯುದ್ಧದ ಪರಿಣಾಮ ತೈಲ ಬೆಲೆಗಳು ಏರಿಕೆ ಆಗುತ್ತಿದ್ದು, ಜಾಗತಿಕವಾಗಿ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೂ ಏರಿಕೆ ಆಗುತ್ತಿದೆ. ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆ (Petrol and Diesel Rates) ಏರಿಕೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ ವೇಳೆ, ಖಾಸಗಿ ಪೆಟ್ರೋಲಿಯಂ ಕಂಪನಿಯಾದ ಶೆಲ್ ಸತತವಾಗಿ ಪೆಟ್ರೋಲ್, ಡೀಸಲ್ ಬೆಲೆ ಏರಿಸಿದೆ. ಮೂರು ದಿನಗಳ ಹಿಂದೆ ದರ ಪರಿಷ್ಕರಣೆ ಮಾಡಿದ್ದ ಶೆಲ್ 2 ರೂ ಹೆಚ್ಚಿಸಿದೆ. ಹತ್ತು…

Read More

ವಿರೋಧದ ಬೆನ್ನಲ್ಲೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ತೆಗೆದುಹಾಕಿದ್ದು ನಿಜವೇ?

ಜೋಗಿ ಪ್ರೇಮ್ (Prem) ನಿರ್ದೇಶನದ ‘ಕೆಡಿ’ ಸಿನಿಮಾ ಈಗ ಸುದ್ದಿ ಆಗಿದೆ. ಇದಕ್ಕೆ ಕಾರಣ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು. ಈ ಹಾಡಿನಲ್ಲಿ ನೋರಾ ಫತೇಹಿ ಹಾಗೂ ಸಂಜಯ್ ದತ್ ನಟಿಸಿದ್ದರು. ಈ ಹಾಡಿಗೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಅನೇಕ ಸೆಲೆಬ್ರಿಟಿಗಳು ಈ ಹಾಡಿನ ಸಾಹಿತ್ಯವನ್ನು ಟೀಕಿಸಿದರು. ಈ ಬೆನ್ನಲ್ಲೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ತೆಗೆದುಹಾಕಲಾಗಿದೆ ಎನ್ನಲಾಗಿತ್ತು. ಆದರೆ, ಇದು ನಿಜವಲ್ಲ. ಪ್ರೇಮ್ ಅವರು ‘ಕೆಡಿ’…

Read More

ಕನ್ನಡದ ಕೋಟ್ಯಧಿಪತಿಯಿಂದ ಪುನೀತ್​​​ಗೆ ಸಿಕ್ಕಿದ್ದ ಸಂಭಾವನೆ ಎಷ್ಟು? ಅದರಿಂದ ಅವರು ಮಾಡಿದ್ದೇನು?

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ನಟನೆ, ಗಾಯನ, ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಅವರು ನಿರೂಪಕನಾಗಿಯೂ ಜನಪ್ರಿಯತೆ ಪಡೆದುಕೊಂಡಿದ್ದು ಗೊತ್ತೇ ಇದೆ. ‘ಕನ್ನಡದ ಕೋಟ್ಯಧಿಪತಿ’ ಶೋನ ಅವರು ನಡೆಸಿಕೊಟ್ಟಿದ್ದರು. ಈ ಶೋ ನಡೆಸಿಕೊಟ್ಟಿದ್ದಕ್ಕೆ ಅವರಿಗೆ ಒಳ್ಳೆಯ ಸಂಭಾವನೆ ಸಿಕ್ಕಿತ್ತು. ಇದನ್ನು ಅವರು ಧರ್ಮದ ಕೆಲಸಕ್ಕೆ ಬಳಸಿಕೊಂಡಿದ್ದರು. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಿಂದ ಪುನೀತ್​​ ಅವರಿಗೆ ಸಿಕ್ಕಿದ್ದು ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಆಗಿತ್ತು. ಈ ಬಗ್ಗೆ ಭಗವಾನ್​ ಹೇಳಿದ್ದರು. ಪುನೀತ್​ ಅವರು…

Read More

Video: ಮನೆ ಮುಂದೆ ಬಂದು ನಿಂತ ಹಸುವಿನ ಹಸಿವು ನೀಗಿಸಿದ ಪುಟಾಣಿ

ಈ ಪುಟ್ಟ ಮಕ್ಕಳು (little kids) ತಮ್ಮ ಕೈಯಲ್ಲಿ ಏನಾದ್ರೂ ತಿಂಡಿ ತಿನಿಸು ಇದ್ರೆ ಮನೆಯ ಬೆಕ್ಕು, ನಾಯಿಗೂ ಹಾಕಿ ತಾನು ತಿನ್ನುವುದನ್ನು ನೋಡಿರುತ್ತೇವೆ. ಕೆಲವೊಮ್ಮೆ ಅವುಗಳನ್ನು ತಿನ್ನದಿದ್ದರೆ ತಿನ್ನು ತಿನ್ನು ಎಂದು ಗದರುವ ದೃಶ್ಯಗಳು ಮುದ್ದು ಮುದ್ದಾಗಿ ಕಾಣುತ್ತದೆ. ಇಂತಹ ವಿಡಿಯೋಗಳನ್ನು ನೋಡುವಾಗ ನಗು ತಡೆದುಕೊಳ್ಳಲಾಗುವುದಿಲ್ಲ. ಆದರೆ ಇದೀಗ ಇಲ್ಲೊಂದು ಪುಟಾಣಿಯೂ ಮನೆಬಾಗಿಲಿನ ಮುಂದೆ ಬಂದು ನಿಂತ ಗೋವಿಗೆ ಕೈಯಲ್ಲಿದ್ದ ಚಪಾತಿ ಕೊಟ್ಟು ಹಣೆ ಮುಟ್ಟಿ ಆಶೀರ್ವಾದ ಪಡೆದುಕೊಂಡಿದೆ. ಈ ಮುದ್ದಾದ ವಿಡಿಯೋಗೆ ನೆಟ್ಟಿಗರು ಫುಲ್…

Read More

Ugadi 2026: ಯುಗಾದಿ ಬಳಿಕ ಈ ರಾಶಿಯ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುವ ಯೋಗ

ಹಿಂದೂ ಪಂಚಾಂಗದ ಪ್ರಕಾರ, 2026ರ ಯುಗಾದಿ ಹಬ್ಬವನ್ನು ಮಾರ್ಚ್ 19 ಗುರುವಾರದಂದು ಆಚರಿಸಲಾಗುತ್ತಿದೆ. ಈ ವರ್ಷ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಸಾಕಷ್ಟು ಶುಭ ಫಲಗಳು ಒದಗಿಬರಲಿದೆ. ಅದರಲ್ಲೂ ಕುಂಭ ರಾಶಿಯ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. ಕುಂಭ ರಾಶಿಯವರಿಗೆ ಗುರುವು ಐದನೇ ಮನೆಯಿಂದ ಆರನೇ ಮನೆಗೆ ಸಾಗಲಿದ್ದಾನೆ. ಶನಿ ಗ್ರಹವು ವರ್ಷ ಪೂರ್ತಿ ಎರಡನೇ ಮನೆಯಲ್ಲೇ…

Read More