ದೂರುದಾರರ ಮೊಬೈಲ್ ಸಂಖ್ಯೆ ಪೊಲೀಸರಿಂದಲೇ ದುರುಪಯೋಗ?: ಚರ್ಚೆಗೆ ಗ್ರಾಸವಾದ ಮಹಿಳೆಯ ಪೋಸ್ಟ್ – Kannada News | Bengaluru Police Under Fire After Woman Alleges Officer Misused Her Complaint Contact for Private WhatsApp Texts
ಬೆಂಗಳೂರು, ಜೂನ್ 18: ನೀಡಿದ್ದ ದೂರಿನಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಪೊಲೀಸರೇ ದುರುಪಯೋಗಪಡಿಸಿಕೊಂಡು ವಾಟ್ಸ್ಯಾಪ್ನಲ್ಲಿ ಮೆಸೇಜ್ ಮಾಡುತ್ತಿರೋದಾಗಿ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ನಿವಾಸಿ ಜಾನ್ಹವಿ ದೇಸಾಯಿ ಅವರು ಜೂನ್ 17ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ತಾವು 2025ರ ಆಗಸ್ಟ್ 31ರಂದು ಪೊಲೀಸ್ ದೂರು ದಾಖಲಿಸಿದ್ದೆ ಎಂದು ತಿಳಿಸಿದ್ದಾರೆ. ದೂರು ದಾಖಲಿಸಿದ ಹಲವು ತಿಂಗಳ ಬಳಿಕ ತಮ್ಮ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಸಂದೇಶ ಬಂದಿರುವುದನ್ನು ಪ್ರಶ್ನಿಸಿರುವ ಅವರು, ತಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆ ಬಗ್ಗೆ…