ಬಿಹಾರದಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಶರಣಾಗುವುದಾಗಿ ಹೇಳಿದ್ದ ರೌಡಿ ಎನ್‌ಕೌಂಟರ್‌ಗೆ ಬಲಿ! – Kannada News | Bihar rowdy Who Offered To Surrender In Facebook Live Dies After Police Encounter
ಪಾಟ್ನಾ, ಜೂನ್ 18: ಬಿಹಾರದಲ್ಲಿ ಅಪರಾಧಿಯೊಬ್ಬ ಫೇಸ್‌ಬುಕ್ ಲೈವ್ ಬಂದು ತಾನು ಪೊಲೀಸರ ಮುಂದೆ ಶರಣಾಗುವುದಾಗಿ ನಾಟಕವಾಡಿದ್ದ. ಆ ಲೈವ್ ಪ್ರಸಾರ ಮುಗಿಯುವಷ್ಟರಲ್ಲಿ ಪೊಲೀಸರು ಆತನನ್ನು ಸುತ್ತುವರೆದಿದ್ದರು. ಈ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್‌ಕೌಂಟರ್ ನಡೆಸಲಾಗಿದೆ. ವರದಿಗಳ ಪ್ರಕಾರ, ಮೃತನಾದ ವ್ಯಕ್ತಿ ಬಿಹಾರದ ಪೊಲೀಸರಿಗೆ ಹಲವು ಗಂಭೀರ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿಯಾಗಿದ್ದ. ಪೊಲೀಸರು ತನ್ನನ್ನು ಹಿಡಿಯಲು ಜಾಲ ಬೀಸಿರುವುದನ್ನು ಅರಿತ ಈತ, ಸಾರ್ವಜನಿಕರ ಅನುಕಂಪ ಗಿಟ್ಟಿಸಲು ಮತ್ತು ಪೊಲೀಸರು ತನ್ನನ್ನು ಎನ್‌ಕೌಂಟರ್ (Police Encounter)…