All posts by nagaraj11081993

ಚಿತ್ರರಂಗಕ್ಕೆ ಬರಲು ಸಜ್ಜಾದ ಹೃತಿಕ್ ರೋಷನ್ ಮಗ ಹೃದಾನ್ ರೋಷನ್

ಚಿತ್ರರಂಗಕ್ಕೆ ಬರಲು ಸಜ್ಜಾದ ಹೃತಿಕ್ ರೋಷನ್ ಮಗ ಹೃದಾನ್ ರೋಷನ್

ಬಾಲಿವುಡ್‌ನ ಖ್ಯಾತ ರೋಶನ್ ಕುಟುಂಬದಿಂದ ಮತ್ತೊಬ್ಬ ಪ್ರತಿಭೆ ಚಿತ್ರರಂಗಕ್ಕೆ ಬರಲು ಸಿದ್ಧವಾಗುತ್ತಿದೆ. ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರ ಕಿರಿಯ ಪುತ್ರ, 17ರ ಪ್ರಾಯದ ಹೃದಾನ್ ರೋಷನ್ (Hridaan Roshan) ಅವರು ಸಿನಿಮಾ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ಹಾರುತ್ತಿದ್ದಾರೆ. ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮೇಕಿಂಗ್ ಕಲಿಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕಿದೆ. ಶಿಕ್ಷಣ ಮುಗಿಸಿದ ಬಳಿಕ ಅವರು ಕೂಡ ತಂದೆ ಹೃತಿಕ್ ರೋಷನ್ (Hrithik Roshan) ರೀತಿಯೇ ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ.

ಹೃದಾನ್ ಅವರು ಅಮೆರಿಕದ ಪ್ರಸಿದ್ಧ ‘ಲ ಫಿಲ್ಮ್ ಮತ್ತು ಟೆಲಿವಿಷನ್ ಪ್ರೊಡಕ್ಷನ್ ಕೋರ್ಸ್‌ಗೆ ದಾಖಲಾಗಿದ್ದಾರೆ. ಈ ವಿಶ್ವವಿದ್ಯಾಲಯವು ವಿಶ್ವದಾದ್ಯಂತ ಸಿನಿಮಾ ರಂಗಕ್ಕೆ ಅನೇಕ ದಿಗ್ಗಜರನ್ನು ನೀಡಿದ ಖ್ಯಾತಿ ಹೊಂದಿದೆ. ಹೃದಾನ್ ಅವರ ಶಾಲೆಯಾದ ‘ಅಮೆರಿಕನ್ ಸ್ಕೂಲ್ ಆಫ್ ಬಾಂಬೆ’ ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಹೃದಾನ್‌ಗೆ ಅಭಿನಂದನೆ ಸಲ್ಲಿಸಿದೆ.

‘ಹೃದಾನ್ ಯುಎಸ್‌ಸಿಯಲ್ಲಿ ಸಿನಿಮಾ ಕಲಿಯಲಿದ್ದಾರೆ ಎಂಬುದು ನಮಗೆ ಆಶ್ಚರ್ಯವೇನಲ್ಲ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂದು ಶಾಲೆಯು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಹೃತಿಕ್ ಅವರ ಕುಟುಂಬದವರು ಮತ್ತು ಸ್ನೇಹಿತರು ಮೆಚ್ಚುಗೆ ಸೂಚಿಸಿದ್ದಾರೆ.

ಹೃದಾನ್ ಅವರ ರಕ್ತದಲ್ಲೇ ಸಿನಿಮಾ ಇದೆ ಎನ್ನಬಹುದು. ಅವರ ತಂದೆ ಹೃತಿಕ್ ರೋಷನ್ ಜಾಗತಿಕ ಮಟ್ಟದ ನಟರಾಗಿದ್ದರೆ, ತಾತ ರಾಕೇಶ್ ರೋಷನ್ ಖ್ಯಾತ ನಟ ಮತ್ತು ಯಶಸ್ವಿ ನಿರ್ದೇಶಕ. ಇನ್ನು ತಾಯಿಯ ಕಡೆಯಿಂದ ಸಂಜಯ್ ಖಾನ್ ಕೂಡ ಚಿತ್ರರಂಗದ ದೊಡ್ಡ ಹೆಸರು. ಈಗ ಹೃದಾನ್ ಚಿತ್ರನಿರ್ಮಾಣದ ತಾಂತ್ರಿಕ ಮಗ್ಗಲುಗಳನ್ನು ಕಲಿಯುತ್ತಿರುವುದು ಅವರು ಭವಿಷ್ಯದಲ್ಲಿ ತಂದೆಯಂತೆ ನಟರಾಗುತ್ತಾರೋ ಅಥವಾ ತಾತನಂತೆ ನಿರ್ದೇಶಕರಾಗುತ್ತಾರೋ ಎಂಬ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಹೃತಿಕ್ ರೋಷನ್​​ಗೆ ವಿಚಿತ್ರ ರೋಗ; ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸುತ್ತವೆ ಕಾಲುಗಳು

ವಿಶೇಷವೆಂದರೆ, ಹೃತಿಕ್ ರೋಷನ್ ಕೂಡ ಶೀಘ್ರದಲ್ಲೇ ಕ್ಯಾಮೆರಾ ಹಿಂದೆ ನಿಲ್ಲಲು ಸಜ್ಜಾಗುತ್ತಿದ್ದಾರೆ. ತಮ್ಮ ಜನಪ್ರಿಯ ‘ಕ್ರಿಶ್’ ಸರಣಿಯ ಮುಂದಿನ ಭಾಗವನ್ನು ಹೃತಿಕ್ ಅವರೇ ನಿರ್ದೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದೆಡೆ ತಂದೆ ನಿರ್ದೇಶನದತ್ತ ಮುಖ ಮಾಡುತ್ತಿದ್ದರೆ, ಇನ್ನೊಂದೆಡೆ ಮಗ ಫಿಲ್ಮ್ ಮೇಕಿಂಗ್ ಕಲಿಯುತ್ತಿರುವುದು ರೋಶನ್ ಕುಟುಂಬದ ಸಿನಿಮಾ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಹೊಸಕೋಟೆ, ಮಾ.31 : ಬಡ ಮಕ್ಕಳಿಗಾಗಿಯೇ ಮೀಸಲಾಗಿರುವ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಆರೋಪ ಭಾರಿ ಸಂಚಲನ ಮೂಡಿಸಿದೆ. ಸ್ಪೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಹೊಸಕೋಟೆಯ 14 ವರ್ಷದ ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡದೇ ಒಂದು ವರ್ಷಗಳ ಕಾಲ ಪರಿತಪಿಸುವಂತೆ ಮಾಡಿದ್ದ ಆಸ್ಪತ್ರೆಯ ವಿರುದ್ಧ ಬಡ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಳೆದೊಂದು ವರ್ಷದಿಂದ ಬೆಡ್ ಹಿಡಿದಿದ್ದ ಬಾಲಕನ ಪೋಷಕರು, ಇಂದಿರಾಗಾಂಧಿ ಆಸ್ಪತ್ರೆಗೆ ತಿಂಗಳಾನುಗಟ್ಟಲೆ ಓಡಾಡಿದ್ದಾರೆ. ಆದರೆ ವೈದ್ಯರು ಸಮಸ್ಯೆಯ ಮೂಲವನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದರು. ಬ್ರೈನ್, ಐ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ಗಳನ್ನು ಮಾಡಿಸಿದರೂ ಫಲಿತಾಂಶ ಶೂನ್ಯವಾಗಿತ್ತು. ಕೊನೆಯಲ್ಲಿ “ಬಾಲಕನಿಗೆ ಚಿಕಿತ್ಸೆ ಸಾಧ್ಯವಿಲ್ಲ” ಎಂದು ಹೇಳಿ ಆತನನ್ನು ಮನೆಗೆ ಕಳುಹಿಸಿದ್ದರು. ಇದರಿಂದ ಅಸಹಾಯಕಗೊಂಡ ಪೋಷಕರು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯ ಮೊರೆ ಹೋಗಿದ್ದಾರೆ.

ಸಿಲಿಕಾನ್ ಸಿಟಿ ಆಸ್ಪತ್ರೆಯ ವೈದ್ಯರು ಬಾಲಕನ ಸಮಸ್ಯೆಯನ್ನು ಸರಿಯಾಗಿ ಗುರುತಿಸಿ, ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕೇವಲ ಒಂದು ತಿಂಗಳಲ್ಲೇ ಬಾಲಕ ನಡೆದಾಡುವಂತಾಗಿದ್ದು, ಅವನ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. “ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗದ ಚಿಕಿತ್ಸೆ ಸಣ್ಣ ಖಾಸಗಿ ಆಸ್ಪತ್ರೆಗಳಲ್ಲಿ ಯಾಕೆ ಸಾಧ್ಯವಾಗುತ್ತಿದೆ?” ಎಂದು ಬಾಲಕನ ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದು, ಇಂದಿರಾಗಾಂಧಿ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.

ಇದನ್ನೂ ಓದಿ: ‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’: ಸಂತೆಯಲ್ಲೇ ಮತಾಂತರಕ್ಕೆ ಇಳಿದವರಿಗೆ ಸಾರ್ವಜನಿಕರಿಂದ ಧರ್ಮದೇಟು

ಈ ಕುರಿತು ಪ್ರತಿಕ್ರಿಯಿಸಿದ ಖಾಸಗಿ ಆಸ್ಪತ್ರೆಯ ಸರ್ಜನ್ ಡಾ. ಸುಪ್ರಿತ್, “ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸೂಕ್ತ ಚಿಕಿತ್ಸೆ ಸಮಯಕ್ಕೆ ಸಿಗುತ್ತಿಲ್ಲ. ಸರ್ಕಾರ ವೈದ್ಯರ ನೇಮಕಾತಿಯನ್ನು ಹೆಚ್ಚಿಸಿ ಎಲ್ಲರಿಗೂ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ. ಆರೋಗ್ಯ ಇಲಾಖೆ ಈ ಬಗ್ಗೆ ತಕ್ಷಣ ಎಚ್ಚೆತ್ತು ಬಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PBKS vs GT IPL 2026 Live Score: ಕಿಂಗ್ಸ್​ vs ಟೈಟಾನ್ಸ್ ನಡುವಣ ಕದನಕ್ಕೆ ಕ್ಷಣಗಣನೆ

ಇಂಡಿಯನ್ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಉಭಯ ತಂಡಗಳು ಐಪಿಎಲ್ ಅಭಿಯಾನ ಆರಂಭಿಸಲಿದ್ದಾರೆ. ಇಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರೆ, ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಶುಭ್​ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಹೀಗಾಗಿ ಈ ಮ್ಯಾಚ್​ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್​ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಝ್ಮತುಲ್ಲಾ ಒಮರ್​ಝಾಹಿ, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪನ್ನು, ಸೂರ್ಯಾಂಶ್ ಶೆಡ್ಗೆ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಲಾಕಿ ಫರ್ಗುಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

 

Source link

ನಟ ಪ್ರಕಾಶ್ ರಾಜ್ ತಾಯಿ ನಿಧನ: ಶಾಂತಿನಗರ ಚರ್ಚ್​​ನಲ್ಲಿ ಪ್ರಾರ್ಥನೆ: ವಿಡಿಯೋ

ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರ ತಾಯಿ ನಿಧನ ಹೊಂದಿದ್ದಾರೆ. ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ನಿನ್ನೆ ನಿಧನ ಹೊಂದಿದ್ದು, ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಸ್ವರ್ಣಲತಾ ಹೈದರಾಬಾದ್​ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಸ್ವರ್ಣಲತಾ ಅವರ ಅಂತಿಮ ಸಂಸ್ಕಾರ ಕ್ರೈಸ್ತ ಪದ್ಧತಿಯಂತೆ ನೆರವೇರಿದ್ದು, ಇಂದು ಶಾಂತಿನಗರ ಚರ್ಚ್​​ನಲ್ಲಿ ಸ್ವರ್ಣಲತಾ ಅವರಿಗಾಗಿ ವಿಶೇಷ ಪ್ರಾರ್ಥನೆ ಸಹ ಮಾಡಲಾಯ್ತು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ಆಟಗಾರ ಫಖರ್ ಝಮಾನ್​ಗೆ 2 ಪಂದ್ಯಗಳ ನಿಷೇಧ!

ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ಆವೃತ್ತಿಯಲ್ಲಿ ಲಾಹೋರ್ ಖಲಂದರ್ಸ್ ತಂಡದ ಸ್ಟಾರ್ ಆರಂಭಿಕ ಆಟಗಾರ ಫಖರ್ ಝಮಾನ್ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ಚೆಂಡು ವಿರೂಪಗೊಳಿಸಿದ (Ball Tampering) ಗಂಭೀರ ಆರೋಪದ ಮೇಲೆ ಅವರಿಗೆ ಎರಡು ಪಂದ್ಯಗಳ ನಿಷೇಧ ಹೇರಲಾಗಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಮಂಗಳವಾರ ಅಧಿಕೃತವಾಗಿ ತಿಳಿಸಿದೆ.

ಮಾರ್ಚ್ 29 ರಂದು ನಡೆದ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಫಖರ್ ಝಮಾನ್ ಚೆಂಡನ್ನು ವಿರೂಪಗೊಳಿಸಿದ್ದರು. ಇದನ್ನು ಗಮನಿಸಿದ್ದ ಅಂಪೈರ್ ಚೆಂಡನ್ನು ಬದಲಿಸಿ ಮ್ಯಾಚ್ ಮುಂದುವರೆಸಿದ್ದರು. ಅಲ್ಲದೆ ಲಾಹೋರ್ ಖಲಂದರ್ಸ್ ತಂಡಕ್ಕೆ 5 ರನ್​ಗಳ ಪೆನಾಲ್ಟಿಯನ್ನು ಸಹ ವಿಧಿಸಲಾಗಿತ್ತು.

ಇದೀಗ ಫಖರ್ ಝಮಾನ್  ಪಿಸಿಬಿ ನೀತಿ ಸಂಹಿತೆಯ ಆರ್ಟಿಕಲ್ 2.14 ಅನ್ನು ಉಲ್ಲಂಘಿಸಿರುವುದು ದೃಢವಾಗಿರುವ ಕಾರಣ ಅವರನ್ನು 2 ಪಂದ್ಯಗಳಿಂದ ಬ್ಯಾನ್ ಮಾಡಲಾಗಿದೆ.

ಯಾವ ಪಂದ್ಯಗಳಿಂದ ಹೊರಕ್ಕೆ?

ಈ ನಿಷೇಧದ ಕಾರಣದಿಂದ ಫಖರ್ ಝಮಾನ್ ಏಪ್ರಿಲ್ 3 ರಂದು ನಡೆಯುವ ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಹಾಗೂ ಏಪ್ರಿಲ್ 9 ರಂದು ನಡೆಯಲಿರುವ ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಾಗುವುದಿಲ್ಲ.

 

Source link

ಭಾರತದ ಟೆನಿಸ್ ಲೆಜೆಂಡ್ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ; ಬಂಗಾಳದಲ್ಲಿ ಮತ್ತಷ್ಟು ಸ್ಟಾರ್​ಗಳ ಮೆರಗು

ಕೋಲ್ಕತಾ, ಮಾರ್ಚ್ 31: ಭಾರತೀಯ ಟೆನಿಸ್​ನ ಸರ್ವಶ್ರೇಷ್ಠ ಆಟಗಾರನೆಂದು ಪರಿಗಣಿಸಲಾಗಿರುವ ಲಿಯಾಂಡರ್ ಪೇಸ್ (Leander Paes) ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಅಖಾಡಕ್ಕೆ ಪೇಸ್ ಧುಮುಕಿದ್ದಾರೆ. ಇದರೊಂದಿಗೆ, ಬಂಗಾಳದ ಚುನಾವಣಾ ರಂಗು ಮತ್ತಷ್ಟು ಹೆಚ್ಚಿದೆ. ಸೆಲಬ್ರಿಟಿಗಳ ಸಂಖ್ಯೆಯೂ ಹೆಚ್ಚಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ ಇದೀಗ ಪೇಸ್​ರ ಬಿಜೆಪಿ ಸೇರ್ಪಡೆಯನ್ನು ಲೇವಡಿ ಮಾಡಿದ್ದಾರೆ. ಮತ್ತೊಬ್ಬ ಹೊರಗಿನವರು ಬಿಜೆಪಿಗೆ ಬಂದಿದ್ದಾರೆ ಎಂದು ಟಿಎಂಸಿ ಟೀಕಿಸಿದೆ.

ಲಿಯಾಂಡರ್ ಪೇಸ್ ಬಂಗಾಳಿಯಲ್ಲವಾ?

ಲಿಯಾಂಡರ್ ಪೇಸ್ ಅವರು ಅರ್ಧ ಬಂಗಾಳಿ, ಅರ್ಧ ಗೋವನ್. ಅವರ ತಂದೆ ವೀಸ್ ಪೇಸ್ ಗೋವಾದವರು. ತಾಯಿ ಬಂಗಾಳಿಯವರು. ಲಿಯಾಂಡರ್ ಪೇಸ್ ಹುಟ್ಟಿ ಬೆಳೆದಿದ್ದೆಲ್ಲಾ ಕೋಲ್ಕತಾದಲ್ಲಿ. ನಂತರದ ಅವರ ಕಾರ್ಯಕ್ಷೇತ್ರ ಗೋವಾಗೆ ವರ್ಗವಾಯಿತು.

ಇದನ್ನೂ ಓದಿ: ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಮ್ ವಾಲ್ಷ್ ನೂತನ ಸಿಇಒ

ಅಪ್ಪಟ ಕ್ರೀಡಾ ಕುಟುಂಬ ಪೇಸ್​ರದ್ದು

ಲಿಯಾಂಡರ್ ಪೇಸ್ ಅವರ ತಂದೆ ವೀಸ್ ಪೇಸ್ ಅವರು ಪ್ರಖ್ಯಾತ ಹಾಕಿ ಆಟಗಾರ. 1972ರಲ್ಲಿ ಜರ್ಮನಿಯ ಮ್ಯೂನಿಕ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರಾಗಿದ್ದರು.

ಪೇಸ್ ಅವರ ತಾಯಿ ಜೆನ್ನಿಫರ್ ಅವರು ಬಂಗಾಳಿ ಕವಿ ಮೈಕೇಲ್ ಮಧುಸೂದನ್ ದತ್ತ ಅವರ ಮರಿಮೊಮ್ಮಗಳು. 1980ರ ಏಷ್ಯನ್ ಬ್ಯಾಸ್ಕೆಟ್​ಬಾಲ್ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು.

ಇದನ್ನೂ ಓದಿ: ಗುಜರಾತ್​ನಲ್ಲಿ 3,300 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ

ಟೆನಿಸ್ ಮಾಂತ್ರಿಕ ಲಿಯಾಂಡ್ ಪೇಸ್

ಲಿಯಾಂಡರ್ ಪೇಸ್ ಅವರು ಒಲಿಂಪಿಕ್ಸ್ ಪದಕ ಗೆದ್ದಿರುವ ಹೆಗ್ಗಳಿಕೆ ಹೊಂದಿದ್ಧಾರೆ. ಅನೇಕ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ವಿಶ್ವ ಸಾರ್ವಕಾಲಿಕ ಟೆನಿಸ್ ಡಬಲ್ಸ್ ಆಟಗಾರರಲ್ಲಿ ಅವರೂ ಒಬ್ಬರು. ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ವಿಶ್ವ ಟೆನಿಸ್ ಡಬಲ್ಸ್​ನಲ್ಲಿ ಅದ್ವಿತೀಯ ಎನಿಸಿತ್ತು. 1986ರಿಂದ 2020ರವರೆಗೂ ಅವರು ಟೆನಿಸ್​ನಲ್ಲಿ ಸಕ್ರಿಯವಾಗಿದ್ದರು. 47ರ ವಯಸ್ಸಲ್ಲಿ ನಿವೃತ್ತಿಯಾಗುವ ಮುನ್ನ 18 ಗ್ರ್ಯಾನ್ ಸ್ಲಾಂ ಜಯಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಹೊರಟಿರುವ ಬಿಜೆಪಿಗೆ ಪೇಸ್ ಸೇರ್ಪಡೆ ಎಷ್ಟು ಸಹಾಯವಾದೀತು ಗೊತ್ತಿಲ್ಲ? ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಮೇ 4ರಂದು ಫಲಿತಾಂಶ ಪ್ರಕಟವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Ratanpur’s Female Hanuman: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?

ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ವಿಶಿಷ್ಟ ದೇವಾಲಯಗಳ ತವರೂರು. ಸಾಮಾನ್ಯವಾಗಿ ನಾವು ಆಂಜನೇಯನನ್ನು ಬ್ರಹ್ಮಚಾರಿ, ಶಕ್ತಿಶಾಲಿ ಪುರುಷ ರೂಪದಲ್ಲಿ ಪೂಜಿಸುವುದನ್ನು ಕಂಡಿದ್ದೇವೆ. ಆದರೆ, ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ರತನ್‌ಪುರ ಎಂಬಲ್ಲಿ ಹನುಮಂತನನ್ನು ‘ಸ್ತ್ರೀ’ ಅವತಾರದಲ್ಲಿ ಆರಾಧಿಸಲಾಗುತ್ತದೆ. ‘ಗಿರ್ಜಬಂದ್ ಹನುಮಾನ್ ದೇವಾಲಯ’ ಎಂದು ಕರೆಯಲ್ಪಡುವ ಈ ಪುಣ್ಯಕ್ಷೇತ್ರವು ಹನುಮನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ವಿಶ್ವದ ಏಕೈಕ ಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿರುವ ವಿಗ್ರಹವು ಅತ್ಯಂತ ವಿಶಿಷ್ಟವಾಗಿದ್ದು, ಸ್ತ್ರೀ ಮುಖ ಮತ್ತು ದೇಹವನ್ನು ಹೊಂದಿದೆ. ಪೂರ್ವಕ್ಕೆ ಮುಖ ಮಾಡಿರುವ ಈ ವಿಗ್ರಹವು ಶ್ರೀರಾಮ ಮತ್ತು ಲಕ್ಷ್ಮಣರನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವಂತೆ ಕೆತ್ತಲಾಗಿದೆ. ಅಷ್ಟೇ ಅಲ್ಲದೆ, ಹನುಮಂತನ ಪಾದಗಳ ಕೆಳಗೆ ಇಬ್ಬರು ರಾಕ್ಷಸರನ್ನು ನಿಗ್ರಹಿಸಿರುವ ದೃಶ್ಯವೂ ಇಲ್ಲಿದೆ. ಈ ಅಪರೂಪದ ವಿಗ್ರಹದ ಹಿಂದೆ ನೂರಾರು ವರ್ಷಗಳ ಇತಿಹಾಸವಿದ್ದು, ರತನ್‌ಪುರದ ರಾಜ ಪೃಥ್ವಿ ದೇವ್ಜು ಈ ದೇವಾಲಯವನ್ನು ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ.

ದೇವಾಲಯದ ಉಗಮದ ಹಿಂದಿದೆ ಒಂದು ರೋಚಕ ದಂತಕಥೆ:

ಸ್ಥಳೀಯ ನಂಬಿಕೆಗಳ ಪ್ರಕಾರ, ರಾಜ ಪೃಥ್ವಿ ದೇವ್ಜು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾಗ, ಹನುಮಂತನು ಅವನ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಈ ವಿಶಿಷ್ಟ ರೂಪವನ್ನು ದರ್ಶನ ನೀಡಿದನಂತೆ. ಅಲ್ಲದೆ, ಹತ್ತಿರದ ಕೊಳದ ಕೆಳಭಾಗದಲ್ಲಿ ತನ್ನ ವಿಗ್ರಹವು ಲಭ್ಯವಿದ್ದು, ಅದನ್ನು ತಂದು ದೇವಾಲಯ ನಿರ್ಮಿಸುವಂತೆ ಸೂಚಿಸಿದನಂತೆ. ರಾಜನು ಕೊಳವನ್ನು ಅಗೆಸಿದಾಗ ಅದರಲ್ಲಿ ಸ್ತ್ರೀ ರೂಪದ ಈ ಅದ್ಭುತ ವಿಗ್ರಹವು ದೊರೆಯಿತು. ಈ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಆರಂಭಿಸಿದ ನಂತರ ರಾಜನು ಪೂರ್ಣವಾಗಿ ಗುಣಮುಖನಾದನು ಎಂಬುದು ಭಕ್ತರ ಅಚಲ ನಂಬಿಕೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಇಂದಿಗೂ ಈ ದೇವಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿನ ಹನುಮಂತನ ದರ್ಶನ ಪಡೆದರೆ ಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮನದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಆಧ್ಯಾತ್ಮಿಕ ಶಕ್ತಿಯ ಜೊತೆಗೆ, ಈ ವಿಗ್ರಹದ ಕಲಾತ್ಮಕತೆ ಮತ್ತು ಐತಿಹಾಸಿಕ ಹಿನ್ನೆಲೆಯು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ಭಕ್ತಿ ಮತ್ತು ಕುತೂಹಲದ ಸಂಗಮವಾಗಿರುವ ಈ ಗಿರ್ಜಬಂದ್ ಹನುಮಾನ್ ದೇವಾಲಯವು ಭಾರತದ ಅಪರೂಪದ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’: ಸಂತೆಯಲ್ಲೇ ಮತಾಂತರಕ್ಕೆ ಇಳಿದವರಿಗೆ ಸಾರ್ವಜನಿಕರಿಂದ ಧರ್ಮದೇಟು

ಚಿಕ್ಕಮಗಳೂರು, ಮಾ.31: ಜಿಲ್ಲೆಯ ಹೊಸಪೇಟೆ ಗ್ರಾಮದ ಸಂತೆ ಮೈದಾನದಲ್ಲಿ ಪುಸ್ತಕಗಳನ್ನು ಹಂಚುವ ಮೂಲಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಮಂಗಳವಾರ (ಮಾ.31) ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಮೂಲದ ಓರ್ವ ವೃದ್ಧ ಮತ್ತು ಮಧ್ಯವಯಸ್ಕ ವ್ಯಕ್ತಿ ಹೊಸಪೇಟೆ ಗ್ರಾಮದ ಸಂತೆಯಲ್ಲಿ ‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’ ಎಂಬ ಪುಸ್ತಕಗಳನ್ನು ಹಂಚುತ್ತಿದ್ದರು. ಮನೆ-ಮನೆಗೆ ತೆರಳಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಇಬ್ಬರಿಗೂ ‘ಧರ್ಮದೇಟು’ ನೀಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಜನರು ಪ್ರಶ್ನೆ ಮಾಡುತ್ತಿದ್ದಂತೆಯೇ ಇಬ್ಬರೂ ಆರೋಪಿಗಳು ತಮ್ಮ ಓಮ್ನಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬೈಕ್‌ನಲ್ಲಿ ಚೇಸ್ ಮಾಡಿ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ವೇಳೆ “ನೀವು ಕನ್ವರ್ಟ್ ಆಗಿದ್ದೀರಲ್ಲವೇ? ವಾಪಸ್ ಹಿಂದೂ ಧರ್ಮಕ್ಕೆ ಬನ್ನಿ” ಎಂದು ಕಾರ್ಯಕರ್ತರು ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಶಾಕ್​​: ಎಸ್ಕಾಂಗಳಿಂದ ಹಳೆ ಬಾಕಿ ವಸೂಲಿ; ಯಾವ ವರ್ಗಕ್ಕೆ ಎಷ್ಟು ದರ ಏರಿಕೆ?

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿದ್ದ ಸುಮಾರು 2000ಕ್ಕೂ ಹೆಚ್ಚು ಮತಾಂತರ ಪ್ರಚೋದಿತ ಪುಸ್ತಕಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಾಲಿವುಡ್ ಬಗ್ಗೆ ಅಸಮಾಧಾನ? ಜೂ ಎನ್​​ಟಿಆರ್-ನೀಲ್ ಸಿನಿಮಾ ಆಫರ್ ತಿರಸ್ಕರಿಸಿದ ನಟ

ಒಂದು ಚಿತ್ರರಂಗದ (Movie Industry) ದೊಡ್ಡ ಸ್ಟಾರ್​​ಗಳು ಮತ್ತೊಂದು ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವುದು ತೀರಾ ಸಾಮಾನ್ಯ. ಹಲವು ದಶಕಗಳಿಂದಲೂ ಇದು ನಡೆಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಹವಾ ಹೆಚ್ಚಾದ ಬಳಿಕ ಈ ಸಂಪ್ರದಾಯ ಇನ್ನೂ ಹೆಚ್ಚಾಗಿದೆ. ಅದರಲ್ಲೂ ಮಲಯಾಳಂ ಚಿತ್ರರಂಗದ ಸ್ಟಾರ್ ನಟರನ್ನು ಬೇರೆ ಬೇರೆ ಭಾಷೆಯ ಚಿತ್ರರಂಗದವರು ತುಸು ಹೆಚ್ಚಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ಮೋಹನ್​​ಲಾಲ್ ಇನ್ನೂ ಹಲವು ನಟರು ಪರ ಭಾಷೆಯ ಸ್ಟಾರ್ ನಟರುಗಳೊಡನೆ ನಟಿಸಿದ್ದಾರೆ. ಆದರೆ ಇದೀಗ ಮಲಯಾಳಂ ಸ್ಟಾರ್ ನಟರಲ್ಲಿ ಒಬ್ಬರಾದ ಟೊವಿನೊ ಥಾಮಸ್, ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಆಯ್ಕೆ ಆಗಿದ್ದರು, ಆದರೆ ಸಿನಿಮಾದಿಂದ ಹೊರಬಂದಿದ್ದು, ಟಾಲಿವುಡ್​ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಶಾಂತ್ ನಿರ್ದೇಶಿಸಿ, ಜೂ ಎನ್​​ಟಿಆರ್ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಕನ್ನಡದ ರುಕ್ಮಿಣಿ ವಸಂತ್ ಈ ಸಿನಿಮಾದ ನಾಯಕಿ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಭಿನ್ನ ರೀತಿಯ ಕತೆಯನ್ನು ಸಿನಿಮಾಕ್ಕಾಗಿ ಹೆಣೆದಿರುವುದಾಗಿ ಪ್ರಶಾಂತ್ ನೀಲ್ ಹೇಳಿಕೊಂಡಿದ್ದರು. ಅವರ ಈ ಹಿಂದಿನ ಸಿನಿಮಾ ‘ಸಲಾರ್’ನಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರನ್ನು ಸಹ ನೀಲ್ ಹಾಕಿಕೊಂಡಿದ್ದರು. ಈ ಬಾರಿ ಜೂ ಎನ್​​ಟಿಆರ್ ಸಿನಿಮಾಕ್ಕೆ ಮಲಯಾಳಂನ ಟೊವಿನೊ ಥಾಮಸ್ ಅವರನ್ನು ಪ್ರಶಾಂತ್ ನೀಲ್ ಕಾಸ್ಟ್ ಮಾಡಿದ್ದರು. ಆದರೆ ಅವರು ಸಿನಿಮಾನಿಂದ ಹೊರಬಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಟೊವಿನೊ ಥಾಮಸ್, ‘ನಾನು ಜೂ ಎನ್​​ಟಿಆರ್ ಸಿನಿಮಾನಲ್ಲಿ ನಟಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನನಗೆ ತೆಲುಗು ಸಿನಿಮಾನಲ್ಲಿ ನಟಿಸುವ ಆಸೆ ಇತ್ತು. ಆದರೆ ಈ ಚಿತ್ರರಂಗದ ಪದ್ಧತಿಗಳು ನಮ್ಮ ಮಲಯಾಳಂ ಚಿತ್ರರಂಗಕ್ಕಿಂತಲೂ ಬಹಳ ಭಿನ್ನ. ನಾವು ಒಂದು ಶೆಡ್ಯೂಲ್​​ನಲ್ಲಿ ಸಿನಿಮಾ ಮುಗಿಸಿಬಿಡುತ್ತೇವೆ. ಆದರೆ ತೆಲುಗು ಚಿತ್ರರಂಗದವರು ಹಲವು ಶೆಡ್ಯೂಲ್​​ಗಳಲ್ಲಿ ಚಿತ್ರೀಕರಣ ಮಾಡುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ:‘ಪ್ರಶಾಂತ್ ನೀಲ್ ಅವಕಾಶ ಕೊಡಲಿಲ್ಲ, ಆದರೆ ಅದೃಷ್ಟ ಕೈ ಹಿಡಿಯಿತು’

ಮಾತು ಮುಂದುವರೆಸಿ, ‘ನಾನು ಒಂದು ಅವಧಿಯಲ್ಲಿ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಒಂದು ಸಿನಿಮಾನಲ್ಲಿ ನಟಿಸುವಾಗ ಬೇರೆ ಸಿನಿಮಾನಲ್ಲಿ ನಟಿಸುವುದಿಲ್ಲ. ಆದರೆ ನಾನು ತೆಲುಗು ಸಿನಿಮಾ ಒಪ್ಪಿಕೊಂಡರೆ ಅದನ್ನು ಮುಗಿಸಲು ಸುಮಾರು ಒಂದು ವರ್ಷ ಬೇಕಾಗುತ್ತದೆ. ಅಷ್ಟರಲ್ಲಿ ನಾನು ನಾಲ್ಕೈದು ಮಲಯಾಳಂ ಸಿನಿಮಾ ಮುಗಿಸುತ್ತೀನಿ. ನಾನು ತೆಲುಗು ಸಿನಿಮಾನಲ್ಲಿ ನಟಿಸಿದರೆ ನಾನು ಒಪ್ಪಿಕೊಂಡಿರುವ ಮಲಯಾಳಂ ಸಿನಿಮಾಗಳಿಗೆ ಕಷ್ಟವಾಗುತ್ತದೆ. ಹಾಗಾಗಿ ತೆಲುಗು ಸಿನಿಮಾನಲ್ಲಿ ನಾನು ನಟಿಸಲಿಲ್ಲ’ ಎಂದಿದ್ದಾರೆ ಟೊವಿನೊ ಥಾಮಸ್.

ಇದೀಗ ಟೊವಿನೊ ಥಾಮಸ್ ಸಿನಿಮಾದಿಂದ ಹೊರನಡೆದಿರುವ ಕಾರಣ ಪ್ರಶಾಂತ್ ನೀಲ್ ಹೊಸ ನಟರೊಬ್ಬರನ್ನು ಹುಡುಕಬೇಕಿದೆ. ಆ ಪಾತ್ರ ಕನ್ನಡದ ಯುವ ನಟನಿಗೆ ಸಿಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

ರಾಮನಗರ, ಮಾರ್ಚ್​​ 31: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೆಲ ಭಾಗಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಕೊಗ್ಗೆದೊಡ್ಡಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಏಕಾ ಏಕಿ ಗ್ರಾಮದತ್ತ ಬಂದ ಗಜಪಡೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಆನೆಗಳನ್ನು ಕಂಡು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಿರುಚಿದ್ದು, ಕೂಗಾಟ ಕೇಳಿ ಗಜಪಡೆ ಸ್ಥಳದಿಂದ ಕಾಲ್ಕಿತ್ತಿವೆ. ಇವು ಸಂಗಮ‌ ವನ್ಯಜೀವಿಧಾಮದಿಂದ ಬಂದಿರೋ ಆನೆಗಳು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link