All posts by nagaraj11081993

Chanakya Niti: ತಂದೆಯ ಈ ತಪ್ಪುಗಳು ಮಗಳ ಭವಿಷ್ಯವನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

Chanakya Niti: ತಂದೆಯ ಈ ತಪ್ಪುಗಳು ಮಗಳ ಭವಿಷ್ಯವನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರ ಪ್ರಕಾರ, ಮಗಳು (daughter) ಕುಟುಂಬದ ಹೆಮ್ಮೆಯಷ್ಟೇ ಅಲ್ಲ, ಸಮಾಜದ ಶಕ್ತಿಯೂ ಹೌದು. ಆದ್ದರಿಂದ, ಅವಳನ್ನು ಸರಿಯಾಗಿ ಬೆಳೆಸುವುದು ಬಹಳ ಮುಖ್ಯ. ಸರಿಯಾದ ಮೌಲ್ಯಗಳು, ಆತ್ಮವಿಶ್ವಾಸ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಅವಳಲ್ಲಿ ತುಂಬುವುದು ಪೋಷಕರ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕಾದರೇ ಈ ಒಂದಷ್ಟು ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ಅದೇ ತಂದೆ ತನ್ನ ಮುದ್ದು ಮಗಳ ವಿಚಾರದಲ್ಲಿ ಮಾಡುವಂತಹ ಈ ಕೆಲವೊಂದಿಷ್ಟು ತಪ್ಪುಗಳ ಮಗಳ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ.  ಹಾಗಿದ್ರೆ ತಂದೆಯ ಯಾವ ತಪ್ಪುಗಳು ಮಗಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

ತಂದೆಯಾದವನು ಮಗಳ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಲೇಬಾರದು:

ಮಗಳ ಕನಸುಗಳನ್ನು ನಿರ್ಬಂಧಿಸುವ ತಪ್ಪನ್ನು ಮಾಡಬಾರದು:  ಚಾಣಕ್ಯ ನೀತಿಯ ಪ್ರಕಾರ, ತಂದೆಯಾದವನು ಮಗಳ ಕನಸುಗಳನ್ನು ಕಡಿಮೆ ಅಂದಾಜು ಮಾಡಬಾರದು.  ಅವಳು ಹುಡುಗಿ ಎಂಬ ಕಾರಣಕ್ಕೆ ಅವಳ ಶಿಕ್ಷಣ ಅಥವಾ ವೃತ್ತಿಜೀವನವನ್ನು ನಿರ್ಲಕ್ಷಿಸುವುದು ತಪ್ಪು. ಅವಳು ಅಭಿವೃದ್ಧಿ ಹೊಂದಲು ಪ್ರತಿಯೊಂದು ಅವಕಾಶವನ್ನೂ ನೀಡಬೇಕು, ಆಗ ಆಕೆ ಖಂಡಿಯವಾಗಿಯೂ ಗಂಡು ಮಕ್ಕಳಿಗಿಂತ ಹೆಚ್ಚಿನ ಸಾಧನೆ ಮಾಡಿ ತಂದೆ ಹೆಮ್ಮೆ ಪಡುವಂತೆ ಮಾಡುತ್ತಾಳೆ ಎಂದಿದ್ದಾರೆ ಚಾಣಕ್ಯ. ಹಾಗಾಗಿ ಮಗಳ ಭವಿಷ್ಯದ ದೃಷ್ಟಿಯಿಂದ ಆಕೆಯ ಕನಸುಗಳನ್ನು ಈಡೇರಿಸಿ.

ಅತಿಯಾಗಿ ನಿರ್ಭಂದಿಸಬೇಡಿ: ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ನೀಡುವುದರಿಂದ ಅವರು ನಿಯಂತ್ರಣ ತಪ್ಪಬಹುದು ಎಂಬುದು ಹೆಚ್ಚಿನವರ ಭಾವನೆ. ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ತುಸು ಹೆಚ್ಚೇ ನಿಯಮ, ನಿಬಂಧನೆಗಳಿರುತ್ತವೆ. ಆದರೆ ಪ್ರತಿಯೊಂದು ವಿಚಾರದಲ್ಲೂ ಮಕ್ಕಳನ್ನು ಕಂಟ್ರೋಲ್‌ ಮಾಡಬಾರದು. ಮಗನಾಗಿರಲಿ ಅಥವಾ ಮಗಳಾಗಿರಲಿ, ಅವರಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡದಿದ್ದರೆ, ಭವಿಷ್ಯದಲ್ಲಿ ಅವರ ಆತ್ಮವಿಶ್ವಾಸವ ದುರ್ಬಲಗೊಳ್ಳುತ್ತದೆ, ಅವರು ಸ್ವತಂತ್ರವಾಗಿ ಯಾವುದೇ ಕಷ್ಟಗಳನ್ನು ಎದುರಿಸಲು ಸಹ ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳಿಗೆ ತಮ್ಮದೇ ಆದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಕಲಿಸಿ.

ಮಗಳ ಮುಂದೆ ಕೆಟ್ಟ ಗುಣದ ಪ್ರದರ್ಶನ ಬೇಡ: ಹೆಣ್ಣುಮಕ್ಕಳು ತಮ್ಮ ತಂದೆಯಿಂದ ಬಹಳಷ್ಟು ಕಲಿಯುತ್ತಾರೆ. ತಂದೆ ಪ್ರಾಮಾಣಿಕ, ಜವಾಬ್ದಾರಿಯುತ ಮತ್ತು ತಿಳುವಳಿಕೆಯುಳ್ಳವರಾಗಿದ್ದರೆ, ಮಗಳು ಅದೇ ಗುಣಗಳನ್ನು ಅಳವಡಿಸಿಕೊಳ್ಳುತ್ತಾಳೆ. ಹಾಗಾಗಿ ತಂದೆಯಾದವನ ನಡವಳಿಕೆ ಒಳ್ಳೆಯದಿರಬೇಕು. ತಂದೆಯ ಕೆಟ್ಟ ನಡವಳಿಕೆಗಳು ಮಗಳ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಹೆಣ್ಣು ಮಕ್ಕಳ ಮದುವೆ ವಿಚಾರದಲ್ಲಿ ತಪ್ಪು ಮಾಡಬಾರದು: ಹೆಚ್ಚಿನ ತಂದೆಯಂದಿರು, ಮನೆಯವರು ಮಗಳ ಮದುವೆಯನ್ನು ನಿರ್ಧರಿಸುವಾಗ ಆಕೆಯನ್ನು  ತಮ್ಮ ಸಮಾಲೋಚಿಸುವುದಿಲ್ಲ. ತಮ್ಮ ಇಷ್ಟಕ್ಕನುಸಾರವಾಗಿ ಮಗಳ ಮದುವೆ ಮಾಡಿ ಬಿಡುತ್ತಾರೆ. ಈ ರೀತಿ ಮಾಡುವುದರಿಂದ ಭವಿಷ್ಯದಲ್ಲಿ ಆಕೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ಸಾಮಾಜಿಕ ಒತ್ತಡದಲ್ಲಿ ಮಗಳ ಮದುವೆಯನ್ನು ಬೇಗನೆ ಮಾಡುವುದು ಸರಿಯಲ್ಲ. ಬದಲಿಗೆ ಆಕೆಗೆ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಲು, ಕೆಲಸಕ್ಕೆ ಹೋಗಿ ಸ್ವಂತ ಕಾಲಿನ ಮೇಲೆ ನಿಲ್ಲಲು ಅನುವು ಮಾಡಿಕೊಡಬೇಕು.

ಇದನ್ನೂ ಓದಿ: ಸಣ್ಣ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ಬಲಶಾಲಿಯನ್ನಾಗಿ ಮಾಡುತ್ತವೆ

ಮಗಳನ್ನು ಭಯದಲ್ಲಿ ಇರಿಸುವ ತಪ್ಪನ್ನು ಮಾಡಬಾರದು: ಅನೇಕ ಮನೆಗಳಲ್ಲಿ, ಹೆಣ್ಣು ಮಕ್ಕಳನ್ನು ಭಯದ ವಾತಾವರಣದಲ್ಲಿ ಇರಿಸಲಾಗುತ್ತದೆ. ಇದರಲ್ಲಿ ತಂದೆ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇದು ತಪ್ಪು ಎನ್ನುತ್ತಾರೆ ಚಾಣಕ್ಯ. ಮನೆಯ ವಾತಾವರಣವು ಮಗಳು ಭಯವಿಲ್ಲದೆ ಮಾತನಾಡುವಂತೆ ಇರಬೇಕು. ಅವಳು ತನ್ನ ಸಮಸ್ಯೆಗಳನ್ನು ಮರೆಮಾಡಲು ಪ್ರಾರಂಭಿಸಿದರೆ, ಅದು ಅವಳಿಗೆ ಹಾನಿಕಾರಕವಾಗಬಹುದು. ಆದ್ದರಿಂದ ಆಕೆಗೆ ಮುಕ್ತವಾಗಿ ಮಾತನಾಡಲು ಅವಕಾಶಗಳನ್ನು ಒದಗಿಸಬೇಕು.  ತಂದೆ ಮಗಳ ಸ್ನೇಹಿತನಂತಿರಬೇಕು ಎನ್ನುತ್ತಾರೆ ಚಾಣಕ್ಯ.

ಮಗಳ ಸ್ವಾವಲಂಬಿ ಬದುಕಿಗೆ ಅಡ್ಡಲಾಗಿ ನಿಲ್ಲಬೇಡಿ: ಸುರಕ್ಷತೆಯನ್ನು ಮಾತ್ರವಲ್ಲ, ಸ್ವಾವಲಂಬನೆಯನ್ನೂ ಮಗಳಿಗೆ ತಂದೆಯಾದವನು ಕಲಿಸಬೇಕು.  ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸವಾಲುಗಳನ್ನು ಎದುರಿಸಲು ಅವಳನ್ನು ಸಿದ್ಧಪಡಿಸಿ. ಇದು ಆಕೆಯನ್ನು ಸದೃಢಳನ್ನಾಗಿ ಮಾಡುತ್ತದೆ. ಯಶಸ್ವಿಯಾಗಿ ಬದುಕಲು ಅವಕಾಶ ಮಾಡಿಕೊಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ravindra Jadeja: ಸ್ವಲ್ಪ ಬೇಸರವಾಗಿತ್ತು… ಏನು ಮಾಡೋದು, ಇದೆಲ್ಲಾ ಸಹಜ..!

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಆಲ್-ರೌಂಡರ್​ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ, 2026ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದಿದ್ದಾರೆ. ಒಂದೂವರೆ ದಶಕಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಅವಿಭಾಜ್ಯ ಅಂಗವಾಗಿದ್ದ ಜಡೇಜಾ, ಈಗ ತಮ್ಮ ವೃತ್ತಿಜೀವನ ಆರಂಭಿಸಿದ ತಂಡಕ್ಕೇ ಮರಳಿರುವುದು ವಿಶೇಷ.

ಸಿಎಸ್‌ಕೆ ಜೊತೆಗಿನ ಸುದೀರ್ಘ ಸಂಬಂಧ:

ಜಡೇಜಾ ಅವರು ಸಿಎಸ್‌ಕೆ ತಂಡದೊಂದಿಗೆ 13-14 ಸೀಸನ್‌ಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು ತಂಡದ ಪ್ರಮುಖ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಎಂ.ಎಸ್. ಧೋನಿ ಅವರ ನೆರಳಿನಲ್ಲಿ ಬೆಳೆದ ಅವರು, ತಂಡಕ್ಕೆ ಹಲವು ಬಾರಿ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಷ್ಟು ಸುದೀರ್ಘ ಕಾಲದ ಬಾಂಧವ್ಯವನ್ನು ಕಡಿದುಕೊಳ್ಳುವುದು ಸುಲಭವಾಗಿರಲಿಲ್ಲ ಎಂದು ಸ್ವತಃ ಜಡೇಜಾ ಅವರೇ ಒಪ್ಪಿಕೊಂಡಿದ್ದಾರೆ.

ಜಡೇಜಾ ಭಾವುಕ ಮಾತುಗಳು:

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕವೇ ರಾಜಸ್ಥಾನ್ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದ ರವೀಂದ್ರ ಜಡೇಜಾ ಪಂದ್ಯದ ಬಳಿಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಬದಲಾವಣೆಯ ಕುರಿತು ಮಾತನಾಡಿದ ಜಡೇಜಾ, “13-14 ಸೀಸನ್‌ಗಳ ಕಾಲ ಸಿಎಸ್‌ಕೆ ಪರ ಆಡಿದ ನಂತರ ಆ ತಂಡವನ್ನು ಬಿಡುವುದು ಆರಂಭದಲ್ಲಿ ಸ್ವಲ್ಪ ಕಷ್ಟ ಮತ್ತು ಬೇಸರವಾಗಿತ್ತು. ಆದರೆ ಏನು ಮಾಡೋದು, ಜೀವನದಲ್ಲಿ ಬದಲಾವಣೆಗಳು ಸಹಜ. ಇದು ಪಯಣದ ಒಂದು ಭಾಗ ಎಂದು ನಾನು ಭಾವಿಸಿದೆ.

ವಿಶೇಷವೆಂದರೆ, ನಾನು ಯಾವ ತಂಡದೊಂದಿಗೆ ನನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದಿದ್ದೆನೋ (2008ರಲ್ಲಿ), ಈಗ ಮತ್ತೆ ಅದೇ ತಂಡಕ್ಕೆ ಮರಳಿದ್ದೇನೆ ಎನ್ನುವುದು ನನಗೆ ಹೆಮ್ಮೆ ಮತ್ತು ಸಂತಸ ತಂದಿದೆ,” ಎಂದು ರವೀಂದ್ರ ಜಡೇಜಾ ಭಾವುಕರಾಗಿ ಹೇಳಿದ್ದಾರೆ.

ಹಳೆಯ ನೆನಪುಗಳ ಮೆಲುಕು:

2008ರ ಉದ್ಘಾಟನಾ ಐಪಿಎಲ್ ಆವೃತ್ತಿಯಲ್ಲಿ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆಗಿತ್ತು. ಅಂದು ಯುವ ಆಟಗಾರನಾಗಿದ್ದ ಜಡೇಜಾ ಅವರನ್ನು ವಾರ್ನ್ ‘ರಾಕ್‌ಸ್ಟಾರ್’ ಎಂದು ಕರೆಯುತ್ತಿದ್ದರು. ಈಗ 18 ವರ್ಷಗಳ ನಂತರ ಅದೇ ತಂಡಕ್ಕೆ ಮರಳಿರುವುದು ವಿಶೇಷ.

ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಇತ್ತ ರವೀಂದ್ರ ಜಡೇಜಾ ಅವರ ನಿರ್ಗಮನವು ಸಿಎಸ್‌ಕೆ ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ಅತ್ತ ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳು ತಮ್ಮ ‘ರಾಕ್‌ಸ್ಟಾರ್’ ಪುನರಾಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಅನುಭವ ಮತ್ತು ಕೌಶಲ್ಯದೊಂದಿಗೆ ಮರಳಿರುವ ಜಡೇಜಾ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಮ್ಮೆ ಟ್ರೋಫಿ ಗೆದ್ದು ಕೊಡಲಿದ್ದಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

 

 

Source link

Viral: ವಿಶ್ವದ ಅತ್ಯಂತ ದುಬಾರಿ ವೈನ್ 7.63 ಕೋಟಿ ರೂಗೆ ಮಾರಾಟ, ಏನಿದರ ವಿಶೇಷತೆ?

ಮದ್ಯ ಪ್ರಿಯರಿಗಂತೂ ವಿಸ್ಕಿ, ವೈನ್‌, ಬಿಯರ್‌ ಬ್ರಾಂಡ್‌ಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ಕೆಲವು ವೈನ್‌ಗಳ ಬೆಲೆ (wine price) ಕೇಳಿದ್ರೆ ತಲೆ ಗಿರ್ರ್ ಅನ್ನುತ್ತೆ. ಇದೀಗ 2026ರ ಮಾರ್ಚ್ ಅಂತ್ಯದಲ್ಲಿ ನಡೆದ ಅಕರ್ ಹರಾಜಿನಲ್ಲಿ, ಅಪರೂಪದ 1945ರ ಡೊಮೈನ್ ಡೆ ಲಾ ರೊಮಾನಿ ಕಾಂಟಿ (Domaine de la Romanee Conti) ವೈನ್ ಬಾಟಲಿ 7.63 ಕೋಟಿ ರೂಗೆ ಮಾರಾಟವಾಗಿದೆ.

ಅಮೆರಿಕದ ಅತ್ಯಂತ ಹಳೆಯ ವೈನ್ ವ್ಯಾಪಾರಿ ಮತ್ತು ವಿಶ್ವದ ಅತಿದೊಡ್ಡ ಉತ್ತಮ ವೈನ್ ಹರಾಜು ಮನೆ ಅಕರ್ ಆಯೋಜಿಸಿದ್ದ ವಾರ್ಷಿಕ ಲಾ ಪೌಲೀ ಹರಾಜಿನ ಸಂದರ್ಭದಲ್ಲಿ ಮಾರಾಟ ಮಾಡಲಾಗಿದೆ. ಈ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಬಾಟಲಿಯ ಹಿಂದಿನ ವಿಶ್ವ ದಾಖಲೆಯನ್ನು ಸುಮಾರು 50% ರಷ್ಟು ಮುರಿದಿದೆ. ದಾಖಲೆಯ ಈ ವೈನ್ ಬಾಟಲಿಯನ್ನು ಯಾರು ಖರೀದಿಸಿದರು ಎಂಬುದನ್ನು ಅಕರ್ ಬಹಿರಂಗಪಡಿಸಲಿಲ್ಲ. ಈ ವೈನ್ ಆರಂಭದಲ್ಲಿ ರಾಬರ್ಟ್ ಡ್ರೌಹಿನ್ ಅವರ ವೈಯಕ್ತಿಕ ನೆಲಮಾಳಿಗೆಯಿಂದ ಪಡೆಯಲಾಗಿದೆ ಎಂಬ ಮಾಹಿತಿ ಅಕರ್‌ ಹಂಚಿಕೊಂಡಿದೆ ಎಂದು ದಿ ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ: ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ: AI ಆಧಾರಿತ ಬಫೆ ಆ್ಯಪ್ ನಿರ್ಮಿಸಿದ ಬೆಂಗಳೂರಿನ ಟೆಕ್ಕಿಗೆ ಜೀವ ಬೆದರಿಕೆ

ಈ ವೈನ್ ದುಬಾರಿಯಾಗಲು ಕಾರಣ ಇದು

1945ರ ದ್ವಿತೀಯ ಮಹಾಯುದ್ಧದ ಅಂತ್ಯದ ಸೀಮಿತ ಉತ್ಪಾದನೆಯಾಗಿದ್ದು, ಕೇವಲ 600 ಬಾಟಲಿಗಳಲ್ಲಿ ತಯಾರಿಸಲಾಗಿತ್ತು. ಈ ವೈನ್ ದುಬಾರಿಯಾಗಲು ಕಾರಣ ಈ ವೈನ್ ತಯಾರಾದ ನಂತರ ದ್ರಾಕ್ಷಿಯ ಹಳೆಯ ಬಳ್ಳಿಗಳನ್ನು ಕಿತ್ತುಹಾಕಲಾಯಿತು. ಅಂದರೆ, ಈ ವೈನ್ ತಯಾರಾದ ನಂತರ, ದ್ರಾಕ್ಷಿತೋಟವನ್ನು ಮರು ನೆಡಲಾಯಿತು. ಹೀಗಾಗಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ವೈನ್ ಎಂಬ ಖ್ಯಾತಿ ಪಡೆದಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಮ್ ವಾಲ್ಷ್ ನೂತನ ಸಿಇಒ

ನವದೆಹಲಿ, ಮಾರ್ಚ್ 31: ಭಾರತದ ನಂಬರ್ ಒನ್ ಏರ್​ಲೈನ್ಸ್ ಎನಿಸಿರುವ ಇಂಡಿಗೋದ ಮಾಲಕ ಸಂಸ್ಥೆ ಇಂಟರ್​​ಗ್ಲೋಬ್ ಏವಿಯೇಶನ್ ಲಿಮಿಟೆಡ್​ಗೆ ನೂತನ ಸಿಇಒ ಆಗಿ ವಿಲಿಯಮ್ ವಾಲ್ಷ್ (William Walsh) ಅವರನ್ನು ನೇಮಕ ಮಾಡಲಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಈ ನೇಮಕಾತಿಯನ್ನು ಘೋಷಿಸಿದೆ. ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ಮಾರ್ಚ್ 10 ರಂದು ರಾಜೀನಾಮೆ ನೀಡಿ ಕಂಪನಿಯಿಂದ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ಬ್ರಿಟಿಷ್ ಏರ್ವೇಸ್​ನ ಮಾಜಿ ಮುಖ್ಯಸ್ಥ ವಿಲಿಯಮ್ ವಾಲ್ಷ್ ಅವರನ್ನು ತರಲಾಗಿದೆ.

ವಿಲಿಯಮ್ ವಾಲ್ಷ್ ಅವರು ಸದ್ಯ ಇಂಟರ್​ನ್ಯಾಷನಲ್ ಏರ್ ಟ್ರಾನ್ಸ್​ಪೋರ್ಟ್ ಅಸೋಸಿಯೇಶನ್​ನಲ್ಲಿ ಮಹಾನಿರ್ದೇಶಕರಾಗಿ (ಡೈರೆಕ್ಟರ್ ಜನರಲ್) ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಅವಧಿ ಜುಲೈ 31ಕ್ಕೆ ಅಂತ್ಯಗೊಳ್ಳುತ್ತದೆ. ಇಂಡಿಗೋ ಸಿಇಒ ಆಗಿ ವಾಲ್ಷ್ ಅವರು ಆಗಸ್ಟ್ 3ರೊಳಗೆ ಹೊಸ ಜವಾಬ್ದಾರಿ ಪಡೆಯಲಿದ್ದಾರೆ. ಅವರ ನೇಮಕಾತಿಗೆ ಭಾರತೀಯ ನಿಯಂತ್ರಕ ಪ್ರಾಧಿಕಾರಿಗಳ ಅನುಮೋದನೆ ಸಿಕ್ಕ ಬಳಿಕವಷ್ಟೇ ಅವರು ಆ ಸ್ಥಾನ ಪಡೆಯಲು ಸಾಧ್ಯ.

ಇದನ್ನೂ ಓದಿ: ಗುಜರಾತ್​ನಲ್ಲಿ 3,300 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ

ಏವಿಯೇಷನ್ ಸೆಕ್ಟರ್​ನಲ್ಲಿ ದೊಡ್ಡ ಹೆಸರು ವಿಲಿಯಮ್ ವಾಲ್ಷ್

ಇಂಡಿಗೋ ಸಂಸ್ಥೆ ಭಾರತದ ನಂಬರ್ ಒನ್ ಏರ್ಲೈನ್ ಎನಿಸಿದರೂ ಸಾಕಷ್ಟು ಸಮಸ್ಯೆಗಳು ಹಾಗು ವಿವಾದಗಳಿಂದ ಬಳಲುತ್ತಿದೆ. ಇಂಥ ಹೊತ್ತಲ್ಲಿ ವಿಲಿಯಮ್ ವಾಲ್ಷ್ ಅವರಿಗೆ ಇಂಡಿಗೋ ಚುಕ್ಕಾಣಿ ವಹಿಸಲಾಗಿದೆ. ವಾಲ್ಷ್ ಅವರು ಜಾಗತಿಕ ಏವಿಯೇಷನ್ ಉದ್ಯಮದಲ್ಲಿ ಬಹಳ ಅನುಭವ ಇರುವ ಮತ್ತು ಪ್ರಭಾವಶಾಲಿ ಎನಿಸಿರುವ ಮುಖಂಡ. ಹೀಗಾಗಿ, ಅವರು ಇಂಡಿಗೋ ಸಿಇಒ ಆಗುತ್ತಿರುವುದು ಉದ್ಯಮದಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ.

ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದ ವಾಲ್ಷ್

ವಿಲಿಯಂ ವಾಲ್ಷ್ ಅವರು 1979ರಲ್ಲಿ ಇಂಟರ್ನ್ಯಾಷನಲ್ ಏರ್​ಲೈನ್ಸ್ ಗ್ರೂಪ್​ನ ಏರ್ ಲಿಂಗಸ್​ನಲ್ಲಿ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ, ಐರ್​ಲ್ಯಾಂಡ್ ಮೂಲದ ಆ ಏರ್​ಲೈನ್ಸ್ ಗ್ರೂಪ್​ಗೆ ಸಿಇಒ ಸ್ಥಾನಕ್ಕೆ ಏರಿದರು. ಅದಾದ ಬಳಿಕ ಬ್ರಿಟಿಷ್ ಏರ್​ವೇಸ್​ಗೂ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. 2021ರ ಏಪ್ರಿಲ್​ನಿಂದ ಜಾಗತಿಕ ಏರ್ಲೈನ್ ಉದ್ಯಮದ ಸಂಘಟನೆಯಾದ ಐಎಟಿಎಯಲ್ಲಿ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ಧಾರೆ. ಹೀಗಾಗಿ, ಜಾಗತಿಕ ಏವಿಯೇಷನ್ ಉದ್ಯಮದಲ್ಲಿ ಇವರು ಪ್ರಭಾವಶಾಲಿ ಹೆಸರು ಹೊಂದಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಪೋಸ್ಟ್ ಹಾಕುವಾಗ ಹುಷಾರ್; ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೂ ಬಿಸಿ; ಇದು ಸರ್ಕಾರದ ಪ್ರಸ್ತಾವಿತ ಐಟಿ ನಿಯಮಗಳ ಎಫೆಕ್ಟ್

ಇಂಡಿಗೋದಲ್ಲಿ ವಾಲ್ಷ್​ಗೆ ಸಾಕಷ್ಟು ಸವಾಲುಗಳು

ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಏವಿಯೇಷನ್ ಮಾರುಕಟ್ಟೆ ಭಾರತವಾಗಿದೆ. ಇಂಡಿಗೋ ಭಾರತದ ನಂಬರ್ ಒನ್ ಏರ್​ಲೈನ್ಸ್ ಸಂಸ್ಥೆಯಾಗಿದೆ. ಇದರ ಆಪರೇಷನಲ್ ಪರ್ಫಾರ್ಮೆನ್ಸ್ ಹೆಚ್ಚಿಸುವುದು ವಾಲ್ಷ್​ಗೆ ಇರುವ ಸವಾಲು. ಹಾಗೆಯೇ, ಬೆಳೆಯುತ್ತಿರುವ ಏವಿಯೇಶನ್ ಮಾರುಕಟ್ಟೆಯಲ್ಲಿ ಇಂಡಿಗೋವನ್ನು ಮುಂಚೂಣಿ ಸ್ಥಾನದಲ್ಲಿ ಮುಂದುವರಿಸುವ ಸವಾಲೂ ಅವರ ಮುಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ತಂದೆ ಮೇಲಿನ ದ್ವೇಷಕ್ಕೆ ಪುಟ್ಟ ಮಗನನ್ನು ದರದರನೆ ಎಳೆದು ತಲೆಕೆಳಗಾಗಿಸಿ ನೆಲಕ್ಕೆ ಬಡಿದ ವ್ಯಕ್ತಿ

ವಸಾಯಿ, ಮಾರ್ಚ್​ 31: ವ್ಯಕ್ತಿಯೊಬ್ಬ ತನ್ನ ಆಟೋದ ಮೇಲೆ ಕುಳಿತಿದ್ದ ಬೇರೆ ಮಕ್ಕಳನ್ನು ಓಡಿಸಿ ಓರ್ವ ಬಾಲಕನನ್ನು ದರ ದರನೆ ಎಳೆದು ತಲೆಕೆಳಗಾಗಿಸಿ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಾಲ್ಕು ವರ್ಷದ ವಿಘ್ನೇಶ್ ಎಂಬ ಬಾಲಕನನ್ನು ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸಿದ್ದು, ವಸಾಯಿ-ವಿರಾರ್ ಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮತ್ತು ಮಗುವಿನ ತಂದೆಯ ನಡುವಿನ ಸಣ್ಣ ಜಗಳ ನಡೆದಿತ್ತು. ಕೋಪದ ಭರದಲ್ಲಿ, ಸಂದೀಪ್ ಪವಾರ್ ಎಂದು ಗುರುತಿಸಲಾದ ಆರೋಪಿ ಅಮಾಯಕ ಮಗುವಿನ ಮೇಲೆ ತನ್ನ ಕೋಪವನ್ನು ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಧಾನ ಸಭೆಯಲ್ಲಿ ದೋಸ್ತಿ, ಹೊರಗಡೆ ಕುಸ್ತಿ: ಸಿದ್ದರಾಮಯ್ಯ ಮತ್ತು ಅಶೋಕ್​​ ನಡುವೆ ಕಳ್ಳೆತ್ತು, ಕುಂಟೆತ್ತು ಕಾಳಗ

ಬೆಂಗಳೂರು, ಮಾರ್ಚ್​​ 31: ವಿಧಾನಸಭೆ ಬಜೆಟ್​​ ಅಧಿವೇಶನದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್​​. ಅಶೋಕ್​​ ನಡುವೆ ಹೇಳಿಕೊಳ್ಳುವಂತಹ ವಾಗ್ಯುದ್ಧವೇನೂ ನಡೆದಿರಲಿಲ್ಲ. ಇಬ್ಬರ ಮಾತುಗಳೂ ಕೊಂಚ ಮಟ್ಟಿಗೆ ಮೃದು ಎಂಬಂತೆಯೇ ಭಾಸವಾಗಿತ್ತು. ಆದರೆ ಇದೀಗ ಉಪ ಚುನಾವಣೆ ಅಖಾಡದಲ್ಲಿ ಇವರಿಬ್ಬರ ನಡುವಿನ ಮಾತಿನ ಸಮರ ಬಹಳ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಸಿಎಂ ಸಿದ್ದರಾಮಯ್ಯ 2028ಕ್ಕೂ ನಾವೇ ಗೆಲ್ತೇವೆ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಳುಮೆ ಮಾಡುವ ಎತ್ತುಗಳು ಬೇಕು. ಬಿಜೆಪಿಯವರು ಕಳ್ಳೆತ್ತುಗಳು, ಅವರಿಗೆ ವೋಟ್​​ ಹಾಕಬಾರದು ಎಂದಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಗೀಗ ಅಶೋಕ್​​ ಕೌಂಟರ್​​ ಕೊಟ್ಟಿದ್ದಾರೆ.

‘ಜೋಡೆತ್ತುಗಳಲ್ಲ, ಕುಂಟೆತ್ತುಗಳು’

ಕಾಂಗ್ರೆಸ್​​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರ್​​. ಅಶೋಕ್​​, ಸಿದ್ದರಾಮಯ್ಯ ಮತ್ತು ಡಿಕೆ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ತಿವಿದಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಒಬ್ಬರ ದಾರಿಗೆ ಮತ್ತೊಬ್ಬರು ಬರಲ್ಲ. ಹೀಗಾಗಿ ಕುಂಟೆತ್ತುಗಳು ಬೇಡವೆಂದು ಜನ ತೀರ್ಮಾನಿಸಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡದೆ ಅಭಿವೃದ್ಧಿಗೆ ಒತ್ತು ನೀಡಿದ್ದೆವು. ಆದರೆ ಈ ಸರ್ಕಾರ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​ ಬೆಲೆ ಕಡಿಮೆ‌ ಮಾಡಿದೆ. ಹೀಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಜಾಸ್ತಿ ಮಾಡಿದೆ. ಉಪ‌ ಚುನಾವಣೆ ಬಳಿಕ ಜನರ ಮೇಲೆ ಎಲ್ಲಾ ತೆರಿಗೆ ಹಾಕಲಿದ್ದು, ಜನ ಕಾಂಗ್ರೆಸ್ ಸರ್ಕಾರಕ್ಕೆ ಈಗ ಬುದ್ಧಿ ಕಲಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ದಾವಣಗರೆ ದಕ್ಷಿಣ ಬೈ ಎಲೆಕ್ಷನ್​​ನಿಂದ ಜಮೀರ್ ದೂರವಾಗಿದ್ಯಾಕೆ? ಅಸಲಿಗೆ ಆಗಿದ್ದೇನು?

ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾ ರಾಮಯ್ಯ ಎಂದೂ ಕಿಡಿ ಕಾರಿರುವ ಅಶೋಕ್​​, ಕರ್ನಾಟಕದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ. ಸಿಎಂ ಸಿದ್ದರಾಮಯ್ಯ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಆರ್ಥಿಕ ಶಿಸ್ತಿನ ರೇಖೆ ದಾಟಿದೆ, ಆದ್ರೆ ದಾಟಿಲ್ಲ ಎಂಬಂತೆ ತೋರಿಸ್ತಾರೆ. ಗೃಹಲಕ್ಷ್ಮೀ ಯೋಜನೆ ಹಣ ಕೇವಲ 10 ತಿಂಗಳು ನೀಡಿ, ಎರಡು ತಿಂಗಳಿನದ್ದನ್ನು ದೋಚಿದ್ದಾರೆ. ರಾಜ್ಯದಿಂದ ವರ್ಷಕ್ಕೆ 45,600 ಕೋಟಿ ಬಡ್ಡಿ ಕಟ್ಟಬೇಕಿದ್ದು, ಪ್ರತಿ ದಿನಕ್ಕೆ 125 ಕೋಟಿ ಹಣ ಬಡ್ಡಿ ಭರಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಸಾಲಗಾರ ಆಗಿದ್ದು, ರಾಜ್ಯದ ಜನರು ಈ ಸರ್ಕಾರ ಕಿತ್ತೊಗೆಯುವ ಹಾದಿಯಲ್ಲಿದ್ದಾರೆ ಎಂದು ಅಶೋಕ್​​ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಶಾಕ್​​: ಎಸ್ಕಾಂಗಳಿಂದ ಹಳೆ ಬಾಕಿ ವಸೂಲಿ; ಯಾವ ವರ್ಗಕ್ಕೆ ಎಷ್ಟು ದರ ಏರಿಕೆ?

ಬೆಂಗಳೂರು, ಮಾ,31: ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ವಿದ್ಯುತ್ ಸರಬರಾಜು ಕಂಪನಿಗಳ (ESCOMs) ನಷ್ಟವನ್ನು ಸರಿದೂಗಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ದರ ಪರಿಷ್ಕರಣೆಗೆ ಹಸಿರು ನಿಶಾನೆ ತೋರಿಸಿದ್ದು, ಏಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ವಿಶೇಷವೆಂದರೆ, ಈ ದರ ಏರಿಕೆಯು 2025-26ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಘೋಷಿಸಲಾಗಿದೆ. ಅಂದರೆ, ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಬಳಕೆ ಮಾಡಿರುವ ವಿದ್ಯುತ್‌ಗೆ ಬಳಕೆದಾರರು ಈಗ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ಈ ಬಾಕಿ ಮೊತ್ತವನ್ನು ಬೆಸ್ಕಾಂ (BESCOM) ಸೇರಿದಂತೆ ಎಲ್ಲಾ ಎಸ್ಕಾಂಗಳು 2026-27ರ ಆರ್ಥಿಕ ವರ್ಷದ ಬಿಲ್‌ಗಳಲ್ಲಿ ವಸೂಲಿ ಮಾಡಲಿವೆ.

ಕೈಗಾರಿಕೆ ಮತ್ತು ಹೋಟೆಲ್, ಸಿನಿಮಾ ಹಾಲ್‌ಗಳಂತಹ ವಾಣಿಜ್ಯ ಸಂಕೀರ್ಣಗಳಿಗೆ ಗರಿಷ್ಠ ದರ ಏರಿಕೆ ಮಾಡಲಾಗಿದ್ದು, ಇದು ಉತ್ಪಾದನಾ ವೆಚ್ಚ ಮತ್ತು ಸೇವಾ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇನ್ನು ಇತ್ತೀಚಿನ ವರದಿಗಳ ಪ್ರಕಾರ ರಾಜ್ಯದ ವಿದ್ಯುತ್​​ ಬಳಕೆಗಳು ಹೆಚ್ಚಾಗಿದೆ. ದಾಖಲೆ ಮಟ್ಟದಲ್ಲಿ ಈ ಭಾರೀ ಕರೆಂಟ್​​ ಉಪಯೋಗಿಸಲಾಗಿದೆ ಎಂದು ಹೇಳಿದೆ.

ಇನ್ನು ಬೆಂಗಳೂರಿನಲ್ಲಿ ಹೆಚ್ಚು ವಿದ್ಯುತ್​​ ಉಪಯೋಗಿಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ತಿಂಗಳು ರಾಜ್ಯದ ಒಟ್ಟು ವಿದ್ಯುತ್ ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ. ಒಂದು ಸಣ್ಣ ರಾಜ್ಯ ಬಳಸುವ ವಿದ್ಯುತ್ ಅನ್ನು ಕೇವಲ ಬೆಂಗಳೂರು ನಗರವೊಂದೇ ಬಳಸುತ್ತಿದೆ ಎಂಬ ಅಚ್ಚರಿಯ ವಿಚಾರವೊಂದು ಹೊರಬಂದಿದೆ. ಬೆಂಗಳೂರಿನ ಪೀಕ್ ಡಿಮ್ಯಾಂಡ್ 2,000 ರಿಂದ 2,500 ಮೆಗಾವ್ಯಾಟ್ (MW) ತಲುಪಿದೆ.

ಇದನ್ನೂ ಓದಿ: ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಮಾರ್ಚ್ ತಿಂಗಳಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಬೇಸಿಗೆಯ ಶಾಖದಿಂದಾಗಿ ನಗರವಾಸಿಗಳು ಎಸಿಗಳ ಮೇಲೆ ಅವಲಂಬಿತರಾಗಿದ್ದಾರೆ.ಗ್ರಾಮೀಣ ಕರ್ನಾಟಕದಲ್ಲಿ ರೈತರು ಬೇಸಿಗೆ ಬೆಳೆಗಾಗಿ ನೀರಾವರಿ ಪಂಪ್‌ಸೆಟ್‌ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ.ಅಡುಗೆ ಅನಿಲದ ಕೊರತೆಯೂ ವಿದ್ಯುತ್ ಬೇಡಿಕೆ ಹೆಚ್ಚಲು ಕಾರಣವಾಗಬಹುದು. ಹೋಟೆಲ್‌ಗಳು ಮತ್ತು ಮನೆಗಳು ಗ್ಯಾಸ್ ಬದಲು ಇಂಡಕ್ಷನ್ ಸ್ಟೌವ್ ಅಥವಾ ಹೀಟರ್‌ಗಳಿಗೆ ಬದಲಾದರೆ, ಗ್ರಿಡ್ ಮೇಲೆ ಮತ್ತೆ 400 ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ ಎಂದು ಹೇಳಲಾಗಿದೆ.

ವರದಿ: ಲಕ್ಷ್ಮೀ ನರಸಿಂಹ ಮೆಟ್ರೋ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರವಣ ದೋಷದಿಂದ ಬಳಲುತ್ತಿರುವ ಗಾಯಕಿ ಅಲ್ಕಾ ಯಾಗ್ನಿಕ್; ಇನ್ಮುಂದೆ ಹಾಡೋದು ಅನುಮಾನ

ಬಾಲಿವುಡ್‌ನ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ (Alka Yagnik) ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಸುದ್ದಿ ಹೊರಬಿದ್ದಿದೆ. ಕಳೆದ ವರ್ಷ ತಮಗೆ ಅಪರೂಪದ ಶ್ರವಣ ದೋಷ (Sensory Neural Nerve Hearing Loss) ಇರುವುದಾಗಿ ಅವರು ಬಹಿರಂಗಪಡಿಸಿದ್ದರು. ಆತಂಕದ ವಿಚಾರ ಏನೆಂದರೆ, ಈಗಲೂ ಅವರು ಆ ಸಮಸ್ಯೆಯಿಂದ ಗುಣಮುಖರಾಗಿಲ್ಲ. ಈ ನೋವಿನ ಸುದ್ದಿಯನ್ನು ಅವರು ಈಗ ಬಹಿರಂಗಪಡಿಸಿದ್ದಾರೆ. ಇನ್ಮುಂದೆ ಅವರು ಹಾಡುವುದು ಕಷ್ಟ ಎಂಬಂತಾಗಿದೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅಲ್ಕಾ ಯಾಗ್ನಿಕ್ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ‘ನಾನು ಇನ್ನೂ ಆ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಗೀತ ನಿರ್ದೇಶಕರು ಪದೇ ಪದೇ ನನ್ನನ್ನು ಸಂಪರ್ಕಿಸುತ್ತಿದ್ದಾರೆ, ಆದರೆ ಹಾಡಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ. ಪ್ರಸ್ತುತ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಕಾ ಯಾಗ್ನಿಕ್ ಅವರು ಹಾಡುವುದು ನಿಲ್ಲಿಸಿ 2 ವರ್ಷ ಆಗಿದೆ. ಅವರ ಧ್ವನಿಯಲ್ಲಿ ಕೊನೆಯದಾಗಿ ಮೂಡಿಬಂದ ಹಾಡು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ‘ನರಂ ಕಾಲ್ಜಾ’. 1980ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರಿಗೆ ಈಗ 60 ವರ್ಷ ವಯಸ್ಸು. ಇತ್ತೀಚೆಗಷ್ಟೇ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕೆಲವು ದಿನಗಳ ಹಿಂದೆ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿದ್ದರು. ಬೇಡಿಕೆಯ ಉತ್ತುಂಗದಲ್ಲಿ ಇದ್ದಾಗಲೇ ಅವರು ಇಂಥ ನಿರ್ಧಾರ ತೆಗೆದುಕೊಂಡರು. ಸತತವಾಗಿ ಹಿಟ್ ಹಾಡುಗಳನ್ನು ನೀಡುತ್ತಿದ್ದ ಅರಿಜಿತ್ ಅವರ ಈ ಹಠಾತ್ ನಿರ್ಧಾರ ಸಂಗೀತ ಪ್ರಿಯರಲ್ಲಿ ಬೇಸರ ತಂದಿದೆ. ಈಗ ಅಲ್ಕಾ ಯಾಗ್ನಿಕ್ ಕೂಡ ಹಾಡುವುದನ್ನು ನಿಲ್ಲಿಸಿರುವುದು ಇನ್ನಷ್ಟು ಬೇಸರ ಮೂಡಿಸಿದೆ.

ಇದನ್ನೂ ಓದಿ: ಅಲ್ಕಾ ಯಾಗ್ನಿಕ್​ಗೆ ಕಿವಿ ಕೇಳದಿರಲು ಈ ಸೋಂಕು ಕಾರಣ, ಇದು ಬರದಂತೆ ಈ ರೀತಿ ಎಚ್ಚರಿಕೆ ವಹಿಸಿ

ಅಲ್ಕಾ ಯಾಗ್ನಿಕ್ ಅವರು ಅನೇಕ ಸೂಪರ್ ಹಿಟ್ ಗೀತೆಗಳಿಗೆ ಧ್ವನಿ ಆಗಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳು, ಬೆಂಗಾಲಿ, ಪಂಜಾಬಿ ಮುಂತಾದ ಭಾಷೆಯ ಹಾಡುಗಳನ್ನು ಕೂಡ ಅವರು ಹಾಡಿದ್ದಾರೆ. ಈಗಲೂ ಅವರಿಗೆ ಸಖತ್ ಬೇಡಿಕೆ ಇದೆ. ಆದರೆ ಅನಾರೋಗ್ಯದ ಕಾರಣ ಹಾಡಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉದ್ಯಮಿ ಆತ್ಮಹತ್ಯೆಗೆ ಕೇಸ್​ಗೆ ಬಿಗ್‌ ಟ್ವಿಸ್ಟ್: ಪತ್ನಿ ಸೌಮ್ಯಳ ನವರಂಗಿ ಆಟ ಬಿಚ್ಚಿಟ್ಟ ಹಳೆ ಲವರ್

ಮಂಗಳೂರು, (ಮಾರ್ಚ್ 31): ಮದುವೆಯಾದ ಒಂದೇ ತಿಂಗಳಿಗೆ  ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ Sandeep Suicide case) ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ ಪತ್ನಿ ಸೌಮ್ಯಾಳ ನವರಂಗಿ ಆಟದಿಂದ ಬೇಸತ್ತು ಮದ್ವೆಯಾದ ಒಂದೇ ತಿಂಗಳಲ್ಲಿ ಪತಿ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಬೆನ್ನಲ್ಲೇ ಸೌಮ್ಯ ಶೆಟ್ಟಿ ಒಂದೊಂದೇ ಕರ್ಮಕಾಂಡಗಳು ಬಯಲಿಗೆ ಬರುತ್ತಿವೆ. ಸೌಮ್ಯ ಶೆಟ್ಟಿ ಸಾಮಾನ್ಯ ಕಲಾವಿದೆ ಅಲ್ಲ. ಆಕೆಗೆ ಈಗಾಗಲೇ ಎರಡು ಮದ್ವೆಯಾಗಿದ್ದು, ಸಂದೀಪ್​​​ನೊಂದಿಗೆ ಮೂರನೇ ಮದ್ವೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸೌಮ್ಯ ಶೆಟ್ಟಿಯ ಮಾಜಿ ಲವರ್, ಸೌಮ್ಯಳ ನವರಂಗಿ ಆಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 3 ಮದುವೆ, ಸಾಕಷ್ಟು ಅಫೇರ್: ಮೇಕಪ್ ಆರ್ಟಿಸ್ಟ್​​ ನವರಂಗಿ ಆಟಕ್ಕೆ ಉದ್ಯಮಿಯ ಬಲಿ?

Source link

ಬೆಂಗಳೂರಲ್ಲಿ ಪೊಲೀಸರು ಇದ್ದಾರಾ.. ಇಲ್ವಾ?: ಹೈವೇಯಲ್ಲೇ ಕಾರಿನ ರೂಫ್ ಟಾಪ್ ಓಪನ್ ಮಾಡಿ ಬಾಟಲಿ ಎತ್ತಿದ ವ್ಯಕ್ತಿ

ಬೆಂಗಳೂರು, ಮಾ.31: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ ಓಪನ್ ಮಾಡಿ ಯುವಕನೊಬ್ಬ ಮದ್ಯ ಸೇವಿಸಿರುವ ಘಟನೆ ಬೆಂಗಳೂರು-ನೆಲಮಂಗಲ ಮಾರ್ಗದಲ್ಲಿ ನಡೆದಿದೆ. ಈ ಪುಂಡಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. KA 01 MM 7215 ನೋಂದಣಿ ಸಂಖ್ಯೆಯ XUV 500 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ, ಚಲಿಸುತ್ತಿದ್ದ ವಾಹನದ ರೂಫ್ ಟಾಪ್‌ನಿಂದ ಹೊರಬಂದು ಮದ್ಯ ಸೇವಿಸಿದ್ದಾನೆ. ನೀರಿನ ಬಾಟಲಿಯಲ್ಲಿ ಮದ್ಯ ತುಂಬಿಸಿಕೊಂಡು ಯಾರಿಗೂ ಹೆದರದೆ ‘ಜಾಲಿಯಾಗಿ’ ಕುಡಿಯುತ್ತಿರುವ ದೃಶ್ಯ ಹಿಂಬಂದಿ ಬರುತ್ತಿದ್ದ ವಾಹನ ಸವಾರರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮತ್ತೊಂದು ಕಾರಿನಲ್ಲಿ ಚಲಿಸುತ್ತಿದ್ದ ಮಹಿಳೆಯೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. “ಬೆಂಗಳೂರಲ್ಲಿ ಪೊಲೀಸರು ಇದ್ದಾರೋ ಇಲ್ಲವೋ?” ಎಂದು ಪ್ರಶ್ನಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಚಾರಿ ಪೊಲೀಸರು, ಕಾರಿನ ಮಾಲೀಕನ ಪತ್ತೆಗೆ ಮುಂದಾಗಿದ್ದಾರೆ. ಅತಿವೇಗ ಮತ್ತು ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಪ್ರಕರಣದಡಿ ಕ್ರಮ ಕೈಗೊಳ್ಳಲು ಮತ್ತು ವಾಹನದ ಪರವಾನಗಿ ರದ್ದುಗೊಳಿಸುವಂತೆ RTO ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link