Vastu Tips: ಮನೆಯಲ್ಲಿ ಪೂರ್ವಜರ ಫೋಟೋ ಈ ದಿಕ್ಕಿನಲ್ಲಿಟ್ಟರೆ ಕಷ್ಟ ತಪ್ಪಿದ್ದಲ್ಲ! – Kannada News | Ancestor Photo Vastu: Place Safely to Attract Blessings and Avoid Pitra Dosha

ಹಿಂದೂ ಧರ್ಮದಲ್ಲಿ ಅಗಲಿದ ಹಿರಿಯರನ್ನು (ಪೂರ್ವಜರನ್ನು) ದೇವರಿಗೆ ಸಮಾನವಾಗಿ ಕಾಣಲಾಗುತ್ತದೆ. ಅವರ ನೆನಪಿಗಾಗಿ ಮತ್ತು ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂಬ ಕಾರಣಕ್ಕೆ ಮನೆಯಲ್ಲಿ ಅವರ ಫೋಟೋಗಳನ್ನು ಇಡುವುದು ಸಾಮಾನ್ಯ. ಆದರೆ, ಗರುಡ ಪುರಾಣ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವಜರ ಫೋಟೋಗಳನ್ನು ಎಲ್ಲೆಂದರಲ್ಲಿ ಇಡುವುದು ಮಹಾ ತಪ್ಪು. ತಪ್ಪಾದ ಜಾಗ ಅಥವಾ ದಿಕ್ಕಿನಲ್ಲಿ ಫೋಟೋ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ, ಆರ್ಥಿಕ ನಷ್ಟ ಹಾಗೂ ಕುಟುಂಬದಲ್ಲಿ ಕಲಹಗಳು ಉಂಟಾಗಬಹುದು. ಹಾಗಾದರೆ, ಮನೆಯಲ್ಲಿ ಸುಖ-ಶಾಂತಿ ನೆಲೆಸಲು ಹಿರಿಯರ ಫೋಟೋಗಳನ್ನು ಎಲ್ಲಿ ಮತ್ತು ಹೇಗೆ ಇಡಬೇಕು? ಗರುಡ ಪುರಾಣ ಸೂಚಿಸುವ ಪ್ರಮುಖ ನಿಯಮಗಳು ಇಲ್ಲಿವೆ.

ಫೋಟೋ ಇಡಲು ಅತ್ಯಂತ ಶುಭ ದಿಕ್ಕು ಯಾವುದು?

ಗರುಡ ಪುರಾಣ ಮತ್ತು ವಾಸ್ತು ನಿಯಮಗಳ ಪ್ರಕಾರ, ಪೂರ್ವಜರ ಫೋಟೋವನ್ನು ಯಾವಾಗಲೂ ಮನೆಯ ದಕ್ಷಿಣ (South) ಅಥವಾ ಪಶ್ಚಿಮ (West) ದಿಕ್ಕಿನ ಗೋಡೆಗೆ ಹಾಕಬೇಕು. ಈ ದಿಕ್ಕಿನಲ್ಲಿ ಫೋಟೋ ಇಟ್ಟಾಗ, ಅವರ ಮುಖವು ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಮುಖ ಮಾಡಿರುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ದೇವತೆಗಳ ಸಕಾರಾತ್ಮಕ ಶಕ್ತಿಯ ದಿಕ್ಕೆಂದು ಪರಿಗಣಿಸಲಾಗುತ್ತದೆ. ಈ ರೀತಿ ಇಡುವುದರಿಂದ ಪಿತೃಗಳ ಆಶೀರ್ವಾದ ಸದಾ ಕುಟುಂಬದ ಮೇಲಿರುತ್ತದೆ.

ದೇವರ ಕೋಣೆಯಲ್ಲಿ ಹಿರಿಯರ ಫೋಟೋ ಇಡಬೇಡಿ:

ಅನೇಕರು ಭಕ್ತಿ ಮತ್ತು ಗೌರವದಿಂದಾಗಿ ದೇವರ ಫೋಟೋಗಳ ಜೊತೆಯಲ್ಲೇ ಹಿರಿಯರ ಫೋಟೋಗಳನ್ನೂ ಇಟ್ಟು ಪೂಜಿಸುತ್ತಾರೆ. ಆದರೆ ಶಾಸ್ತ್ರಗಳ ಪ್ರಕಾರ ಇದು ತಪ್ಪು. ಪೂರ್ವಜರು ನಮಗೆ ಎಷ್ಟೇ ಗೌರವಾನ್ವಿತರಾಗಿದ್ದರೂ, ಅವರಿಗೆ ದೇವತೆಗಳಿಗೆ ಸಮಾನವಾದ ಸ್ಥಾನವನ್ನು ನೀಡಲು ಬರುವುದಿಲ್ಲ. ದೇವರನ್ನು ಮತ್ತು ಪಿತೃಗಳನ್ನು ಒಂದೇ ಜಾಗದಲ್ಲಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ‘ಪಿತೃ ದೋಷ’ ಉಂಟಾಗಬಹುದು ಮತ್ತು ದೇವರ ಅನುಗ್ರಹ ಸಿಗುವುದಿಲ್ಲ ಎಂದು ಗರುಡ ಪುರಾಣ ಹೇಳುತ್ತದೆ.

ಈ ಜಾಗಗಳಲ್ಲಿ ಫೋಟೋ ಇಟ್ಟರೆ ದಾರಿದ್ರ್ಯ ಗ್ಯಾರಂಟಿ:

ಬೆಡ್‌ರೂಮ್‌ನಲ್ಲಿ ಅಥವಾ ಮೆಟ್ಟಿಲುಗಳ ಕೆಳಗೆ ಹಿರಿಯರ ಫೋಟೋ ಹಾಕಬಾರದು. ಇದು ಮನೆಯ ವಾತಾವರಣವನ್ನು ಕೆಡಿಸಿ, ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಬಹುದು. ಇದಲ್ಲದೇ ಮನೆಗೆ ಬರುವ ಹೊರಗಿನವರ ಕಣ್ಣಿಗೆ ನೇರವಾಗಿ ಕಾಣಿಸುವ ಜಾಗದಲ್ಲಿ ಅಥವಾ ಲಿವಿಂಗ್ ರೂಮ್‌ನ ಮಧ್ಯಭಾಗದಲ್ಲಿ ಫೋಟೋ ಇಡಬೇಡಿ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮನೆಯ ಮಧ್ಯಭಾಗವನ್ನು ‘ಬ್ರಹ್ಮಸ್ಥಾನ’ ಎನ್ನಲಾಗುತ್ತದೆ, ಇಲ್ಲಿ ಫೋಟೋ ಇಟ್ಟರೆ ಕುಟುಂಬದ ಸದಸ್ಯರ ಗೌರವಕ್ಕೆ ಧಕ್ಕೆ ಬರಬಹುದು. ಇನ್ನು ಅಡುಗೆ ಮನೆಯಲ್ಲಿ ಫೋಟೋ ಇಟ್ಟರೆ ದಿನನಿತ್ಯ ಜಗಳ ಹಾಗೂ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ.

ಬದುಕಿರುವವರ ಜೊತೆ ಸತ್ತವರ ಫೋಟೋ ಫ್ರೇಮ್ ಮಾಡಬೇಡಿ:

ಜನರು ಸಾಮಾನ್ಯವಾಗಿ ಮಾಡುವ ದೊಡ್ಡ ತಪ್ಪೆಂದರೆ, ಜೀವಂತವಾಗಿರುವ ವ್ಯಕ್ತಿಗಳ ಫೋಟೋದೊಂದಿಗೆ ಮರಣ ಹೊಂದಿದ ಹಿರಿಯರ ಫೋಟೋವನ್ನು ಸೇರಿಸಿ ಒಂದೇ ಫ್ರೇಮ್ ಮಾಡಿಸುವುದು. ಗರುಡ ಪುರಾಣದಲ್ಲಿ ಇದಕ್ಕೆ ಸ್ಪಷ್ಟ ನಿಷೇಧವಿದೆ. ಹೀಗೆ ಮಾಡುವುದರಿಂದ ಆ ಫೋಟೋದಲ್ಲಿರುವ ಜೀವಂತ ವ್ಯಕ್ತಿಗಳ ಆಯುಷ್ಯ ಮತ್ತು ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಹಾಗೂ ಅವರಲ್ಲಿ ನಿರಾಶಾವಾದ ಮೂಡುತ್ತದೆ.

ಹಿರಿಯರ ಫೋಟೋ ಹೇಗಿರಬೇಕು?

ಹಿರಿಯರ ಫೋಟೋವನ್ನು ಗೋಡೆಗೆ ತಗಲಿಸುವುದಕ್ಕಿಂತ, ಒಂದು ಸಣ್ಣ ಸ್ಟ್ಯಾಂಡ್ ಅಥವಾ ಶೆಲ್ಫ್ (Shelf) ಮೇಲೆ ಗೌರವಪೂರ್ವಕವಾಗಿ ಇಡುವುದು ಉತ್ತಮ. ಯಾವಾಗಲೂ ಅವರ ಮುಖದಲ್ಲಿ ನಗು ಇರುವ, ಶಾಂತವಾಗಿರುವ ಫೋಟೋವನ್ನೇ ಆಯ್ದುಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *