All posts by nagaraj11081993

‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಟೀಸರ್ ಬಿಡುಗಡೆ – Kannada News | Country Made Part 2 Kannada Movie directed by Aravind Kaushik Character Teaser Released

ರೌಡಿಸಂ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿದೆ. ಗಂಡಸರ ನಡುವಿನ ಈ ಸಂಘರ್ಷದಿಂದ ಮನೆಯ ಹೆಣ್ಮಕ್ಕಳ ಬದುಕು ಯಾವ ರೀತಿ ತೊಂದರೆಗೆ ಸಿಲುಕುತ್ತದೆ ಎಂಬ ಎಳೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ‘ಕಂಟ್ರಿ ಮೇಡ್ ಪಾರ್ಟ್ 2’ (Country Made Part 2) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಹತ್ತು ಹಲವು ಇಂಟರೆಸ್ಟಿಂಗ್ ಪಾತ್ರಗಳಿವೆ. ಆ ಪಾತ್ರಗಳನ್ನು ಪರಿಚಯಿಸುವ ಸಲುವಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ಅರವಿಂದ್‍ ಕೌಶಿಕ್‍ (Aravind Kaushik) ಅವರು ನಿರ್ದೇಶನ ಮಾಡಿದ್ದಾರೆ.

ಈ ಮೊದಲು ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾ ಮಾಡಿದ್ದ ಅರವಿಂದ್‍ ಕೌಶಿಕ್‍ ಅವರು ಈಗ ಸದ್ದಿಲ್ಲದೆ ‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾ ಮಾಡಿ ಮುಗಿಸಿದ್ದಾರೆ. ಇದುವರೆಗೂ ಬೇರೆಬೇರೆ ಶೈಲಿಯ ಸಿನಿಮಾಗಳನ್ನು ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಒಂದು ಗ್ಯಾಂಗ್‍ಸ್ಟರ್ ಕಥೆಯೊಂದನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

‘ಕಂಟ್ರಿ ಮೇಡ್‍ ಪಾರ್ಟ್ 2’ ಸಿನಿಮಾ ಟೀಸರ್‍ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಟೀಸರ್‍ ಬಿಡುಗಡೆ ಮಾಡಿದ ನಂತರ ಈ ಸಿನಿಮಾದಲ್ಲಿ ಅಭಿನಯಿಸಿರುವ ಹಲವು ಕಲಾವಿದರನ್ನು ಅರವಿಂದ್‍ ಕೌಶಿಕ್ ಅವರು ಪರಿಚಯಿಸಿದರು. ಎಲ್ಲರೂ ಚಿತ್ರದಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ಈ ಸಿನಿಮಾ ರೂಪುಗೊಂಡಿದ್ದು ಹೇಗೆ ಎಂದು ಅರವಿಂದ್‍ ಹೇಳಿದರು.

‘ಕಂಟ್ರಿ ಮೇಡ್ ಪಾರ್ಟ್ 2’ ಟೀಸರ್:

‘ನನ್ನ ಹಿಂದಿನ ಸಿನಿಮಾ ಬಿಡುಗಡೆಯಾದ ಮೇಲೆ ಒಂದು ದಿನ ಪಾವಗಡದ ಕಡೆ ಹೋದೆ. ಬಾಲ್ಯದಿಂದಲೂ ನನಗೆ ಬಹಳ ಕಾಡಿದಂತಹ ಊರು ಅದು. ಅಲ್ಲೇನಾದರೂ ಶೂಟಿಂಗ್‍ ಮಾಡಬೇಕೆಂಬ ಆಸೆ ಇತ್ತು. ಆ ಊರಿನಲ್ಲಿ ನಾನು ನೋಡಿದ ಒಂದಿಷ್ಟು ನಿಜ ಜೀವನದ ವ್ಯಕ್ತಿಗಳನ್ನು ಆಧರಿಸಿ ಪಾತ್ರಗಳನ್ನು ಸೃಷ್ಟಿಸಿದೆ. ಹಾಗೆ ಹುಟ್ಟಿಕೊಂಡಿದ್ದೇ ಈ ಸಿನಿಮಾದ ಪಾತ್ರಗಳು. ಅವುಗಳಿಂದಲೇ ಕಂಟ್ರಿ ಮೇಡ್‍ ಪಾರ್ಟ್ 2 ಸಿನಿಮಾ ಆಗಿದೆ’ ಎಂದು ಅರವಿಂದ್ ಕೌಶಿಕ್ ಅವರು ವಿವರಿಸಿದರು.

ಇದನ್ನೂ ಓದಿ: ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ ‘ಲ್ಯಾಂಡ್ ಲಾರ್ಡ್​’ ಸಿನಿಮಾ; ಇಲ್ಲಿದೆ ವಿವರ

ಈ ಸಿನಿಮಾದಲ್ಲಿ ಅರವಿಂದ್‍ ಕೌಶಿಕ್‍, ರಾಘವ್‍ ರಾಮ್‍, ಅಭಿಲಾಷ್‍ ದ್ವಾರಕೀಶ್‍, ಶಿಲ್ಪಾ ಅರವಿಂದ್‍, ಪ್ರದೀಪ್‍ ರೋಶನ್‍, ಕುಲದೀಪ್, ಅಶ್ವಿತಾ ಗೌಡ, ಗೌರವ್‍ ಆರ್ಯನ್, ಸುಜಿತ್‍ ಶೆಟ್ಟಿ, ಅಪೂರ್ವಶ್ರೀ, ವೀರೇನ್‍ ಸಾಗರ್, ಸುಧಾ ಪ್ರಸನ್ನ ಮುಂತಾದವರು ನಟಿಸಿದ್ದಾರೆ. ಉಮೇಶ್‍ ಮಠಪತಿ, ಸೂರ್ಯ, ಅರವಿಂದ್‍ ಕೌಶಿಕ್‍ ಹಾಗೂ ಚಂದನ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರ್ಜುನ್‍ ರಾಮು ಅವರ ಸಂಗೀತ, ಸೂರ್ಯ ಅವರ ಛಾಯಾಗ್ರಹಣ, ಅಲ್ಟಿಮೇಟ್‍ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರಿ ಮಳೆ ಗಾಳಿಗೆ ಹೊಸಕೋಟೆ ಟೋಲ್ ಪ್ಲಾಜಾ ಬಳಿ ಮುರಿದು ಬಿದ್ದ ಬೃಹತ್ ಜಾಹೀರಾತು ಫಲಕ

ಬೆಂಗಳೂರು, (ಮೇ 22): ಭಾರೀ ಮಳೆಗೆ (heavy rain) ಹೊಸಕೋಟೆ (Hoskote) ಟೋಲ್ ಸಮೀಪ ಬೃಹತ್ ಜಾಹೀರಾತು ಫಲಕ ಧರೆಗೆ ಬಿದ್ದಿದೆ. ದೊಡ್ಡ ಅಮಾನಿಕೆರೆ ನಾಲದ ರಾಜಕಾಲುವೆ ದಂಡೆ ಮೇಲೆ ಇದ್ದ ಬೃಹತ್ ಜಾಹಿರಾತು ಫಲಕ ಮತ್ತು ಎರಡು ಬೃಹತ್ ಕಂಬಗಳು ಗುರುವಾರ ಸಂಜೆ ಬಿರುಗಾಳಿಯ ರಭಸಕ್ಕೆ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಈಚರ್ ವಾಹನದ ಮೇಲೆ ಬಿದ್ದಿದೆ. ನಾಮಫಲಕ ಬಿದ್ದ ರಭಸಕ್ಕೆ ಕ್ಯಾಂಟರ್ ವಾಹನ ಸಂಪೂರ್ಣ ನುಚ್ಚುನೂರಾಗಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಈ ಘಟನೆಯಿಂದಾಗಿ ಸರ್ವಿಸ್ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಉಂಟಾಗಿದ್ದು, ಕೊನೆಗೆ ಹೊಸಕೋಟೆ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹವೇ ಪಡಬೇಕಾಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ – Kannada News | Nora Fatehi shared behind the scene video of her new music video

ಕೆಡಿ’ (KD) ಸಿನಿಮಾದ ಐಟಂ ಹಾಡಿನಿಂದಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿ ನೋರಾ ಫತೇಹಿ ಇದೀಗ ತಮ್ಮದೇ ಆದ ಹೊಸ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಿಂದ ಮ್ಯೂಸಿಕ್ ವಿಡಿಯೋನ ಕೆಲವು ಗ್ಲಿಂಪ್ಸ್​​ಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ನೋರಾ ಫತೇಹಿ, ಇದೀಗ ಮ್ಯೂಸಿಕ್ ವಿಡಿಯೋನ ಶೂಟಿಂಗ್, ಪ್ರ್ಯಾಕ್ಟೀಸ್, ನೀಡಿದ ತರಬೇತಿ, ನೃತ್ಯ ನಿರ್ದೇಶನ, ಮ್ಯೂಸಿಕ್ ಹೀಗೆ ತೆರೆ ಹಿಂದೆ ನಡೆದ ಕೆಲಸಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಮೊದಲ ಮ್ಯೂಸಿಕ್ ವಿಡಿಯೋಗೆ ಎಷ್ಟು ಶ್ರಮ ಹಾಕಿರುವುದಾಗಿ ಅವರು ವಿಡಿಯೋನಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

BEL Recruitment 2026: ಬಿಇಎಲ್​​ನಲ್ಲಿ ನೇಮಕಾತಿ; ಇಂಜಿನಿಯರಿಂಗ್ ಮತ್ತು ಐಟಿ ಪದವೀಧರರಿಗೆ ಸುವರ್ಣವಕಾಶ – Kannada News | Bharat Electronics Ltd. Jobs: 56 Engineer Posts– Last Date June 8

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಇಂಜಿನಿಯರಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಜನರಿಗಾಗಿ ಹೊಸ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಕಂಪನಿಯು ವಿವಿಧ ವಿಭಾಗಗಳಲ್ಲಿ ಒಟ್ಟು 56 ಫೀಲ್ಡ್ ಆಪರೇಷನ್ಸ್ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ನೇಮಕಾತಿಯು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ನಡೆಯಲಿದ್ದು, ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ಹಂಬಲ ಉಳ್ಳವರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ.

ಬಿಇಎಲ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆ:

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತನ್ನ ಅಧಿಕೃತ ವೃತ್ತಿ ಪೋರ್ಟಲ್‌ನಲ್ಲಿ ಮೇ 20 ರಂದು ವಿವರವಾದ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಡ್ರೈವ್ ಮೂಲಕ ಒಟ್ಟು 56 ಫೀಲ್ಡ್ ಆಪರೇಷನ್ಸ್ ಇಂಜಿನಿಯರ್ (FOE) ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಕಂಪನಿಯ ಹೆಚ್‌ಎಲ್‌ಎಸ್ ಮತ್ತು ಎಸ್‌ಸಿಬಿ (HLS & SCB) ಸ್ಟ್ರಾಟೆಜಿಕ್ ಬಿಸಿನೆಸ್ ಯೂನಿಟ್‌ಗಳಲ್ಲಿ ನಿಯೋಜಿಸಲಾಗುವುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಯಶಸ್ವಿಯಾಗಿ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕವಾಗಿದೆ.

ಶೈಕ್ಷಣಿಕ ಅರ್ಹತೆ:

ಈ ನೇಮಕಾತಿಯಲ್ಲಿ ಇಂಜಿನಿಯರಿಂಗ್ ಪದವೀಧರರು ಹಾಗೂ ಎಂಸಿಎ (MCA) ಪದವಿ ಪಡೆದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ:

  • ಫೀಲ್ಡ್ ಇಂಜಿನಿಯರ್ ಹುದ್ದೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ (ECE), ದೂರಸಂಪರ್ಕ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಐಟಿ ಅಥವಾ ಸಂಬಂಧಿತ ವಿಭಾಗಗಳಲ್ಲಿ ಬಿಇ, ಬಿ.ಟೆಕ್, ಬಿಎಸ್ಸಿ ಇಂಜಿನಿಯರಿಂಗ್ ಅಥವಾ ಎಂಇ/ಎಂಟೆಕ್ ಪದವಿ ಪಡೆದಿರಬೇಕು. ಇದರೊಂದಿಗೆ ಎಂಸಿಎ ಮುಗಿಸಿದ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ.
  • ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಕಡ್ಡಾಯವಾಗಿ 4 ವರ್ಷಗಳ ಬಿಇ/ಬಿ.ಟೆಕ್/ಬಿಎಸ್ಸಿ ಇಂಜಿನಿಯರಿಂಗ್ ಪದವಿ ಅಗತ್ಯವಿದೆ.

ವಯೋಮಿತಿ ಮತ್ತು ಸಡಿಲಿಕೆ:

ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:

  • ಫೀಲ್ಡ್ ಇಂಜಿನಿಯರ್ ಹುದ್ದೆ: ಗರಿಷ್ಠ ವಯೋಮಿತಿ 40 ವರ್ಷಗಳು.
  • ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ವರ್ಷಗಳು.

(ಗಮನಿಸಿ: ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ).

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಎರಡು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆ:

ಅರ್ಹ ಅಭ್ಯರ್ಥಿಗಳನ್ನು ಒಟ್ಟು 100 ಅಂಕಗಳ ಮೌಲ್ಯಮಾಪನದ ಆಧಾರದ ಮೇಲೆ ಎರಡು ಪ್ರಮುಖ ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:

  • ಮೊದಲ ಹಂತ (ಲಿಖಿತ ಪರೀಕ್ಷೆ): ಅಭ್ಯರ್ಥಿಗಳ ತಾಂತ್ರಿಕ ಮತ್ತು ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲು 85 ಅಂಕಗಳ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.
  • ಎರಡನೇ ಹಂತ (ಸಂದರ್ಶನ): ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಯಶಸ್ವಿ ಅಭ್ಯರ್ಥಿಗಳನ್ನು 15 ಅಂಕಗಳ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
  • ಅಂತಿಮವಾಗಿ, ಈ ಎರಡೂ ಹಂತಗಳಲ್ಲಿ ಅಭ್ಯರ್ಥಿಗಳು ಪ್ರದರ್ಶಿಸಿದ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಮೆರಿಟ್ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳಿಗೆ ಬಿಇಎಲ್ ಸಲಹೆ:

ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳನ್ನು ತಪ್ಪಿಸಲು, ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು (Official Notification) ಎಚ್ಚರಿಕೆಯಿಂದ ಮತ್ತು ಸಂಪೂರ್ಣವಾಗಿ ಓದಿಕೊಳ್ಳಬೇಕೆಂದು ಬಿಇಎಲ್ (BEL) ಅಭ್ಯರ್ಥಿಗಳಿಗೆ ಸಲಹೆ ನೀಡಿದೆ. ಅರ್ಹತೆ, ಶುಲ್ಕ ಮತ್ತು ಅಗತ್ಯ ದಾಖಲೆಗಳ ವಿವರಗಳಿಗಾಗಿ ಹಾಗೂ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಇತ್ತೀಚಿನ ಹೊಸ ಮಾಹಿತಿ ಮತ್ತು ಅಪ್ಡೇಟ್‌ಗಳಿಗಾಗಿ ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Viral: ಕನಸು ನನಸಾದ ಕ್ಷಣ; ತನ್ನ ಅಜ್ಜಿಯನ್ನು ಮೈಕ್ರೋ ಸಾಫ್ಟ್ ಆಫೀಸ್ ತೋರಿಸಲು ಕರೆದೊಯ್ದ ಉದ್ಯೋಗಿ – Kannada News | Bengaluru: Microsoft employee shows his grandmother the Bengaluru office where he works

ಬೆಂಗಳೂರು, ಮೇ 22: ತಾವು ಚೆನ್ನಾಗಿ ಓದಬೇಕು, ಹೆತ್ತವರನ್ನು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಆಸೆಗಳನ್ನು ಈಡೇರಿಸಬೇಕು ಹೀಗೆ ಪ್ರತಿಯೊಬ್ಬರಿಗೆ ಇಂತಹ ಸಾಕಷ್ಟು ಆಸೆಗಳಿರುತ್ತವೆ. ಅಂತಹ ಕ್ಷಣ ಬಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರ ಜೀವನದಲ್ಲಿ ಭಾವನಾತ್ಮಕ ಕ್ಷಣವು ಎದುರಾಗಿದೆ. ಈ ವ್ಯಕ್ತಿ ತನ್ನ ಅಜ್ಜಿಯನ್ನು ಬೆಂಗಳೂರಿನ (Bengaluru) ಮೈಕ್ರೋಸಾಫ್ಟ್ ಆಫೀಸ್ ತೋರಿಸಲು ಕರೆದುಕೊಂಡು ಹೋಗಿದ್ದಾರೆ. ಈ ಭಾವನಾತ್ಮಕ ಕ್ಷಣದ ಪೋಸ್ಟ್ ಹಂಚಿಕೊಂಡು ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

Vyanktesh Bajaj ಎಂಬ ವ್ಯಕ್ತಿ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಜೀವನದ ಅಮೂಲ್ಯ ಕ್ಷಣದ ಪೋಸ್ಟ್ ಹಂಚಿಕೊಂಡಿದ್ದಾರೆ. ಸೀನಿಯರ್ ಮ್ಯಾನೇಜರ್ ಆಗಿ  ವ್ಯಂಕ್ತೇಶ್ ಬಜಾಜ್ ಅವರು ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೋಸ್ಟ್ ನಲ್ಲಿ, ಇಂದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿತ್ತು. ನಾನು ಮಹಾರಾಷ್ಟ್ರದ ಮಂಗ್ರುಲ್‌ಪಿರ್ ಎಂಬ ಸಣ್ಣ ಪಟ್ಟಣದಿಂದ ಬಂದಿದ್ದೇನೆ, ಅಲ್ಲಿ ಅವಕಾಶಗಳು ಹಾಗೂ ಕಾರ್ಪೊರೇಟ್ ಜಗತ್ತಿಗೆ ಒಡ್ಡಿಕೊಳ್ಳುವುದು ಏನೂ ಇರಲಿಲ್ಲ, ಮೆಟ್ರೋ-ನಗರ ಐಷಾರಾಮಿಗಳು ಸಹ ನಮಗೆ ದೂರವಿತ್ತು ಎಂದು ಹೇಳಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ನನ್ನ ಬಾಲ್ಯದಲ್ಲಿ, ನಾನು ಟಿವಿಯಲ್ಲಿ ನೋಡುತ್ತಿದ್ದ ಆ ಎತ್ತರದ ಗಾಜಿನ ಕಟ್ಟಡಗಳಲ್ಲಿ ಇರಬೇಕೆಂದು ಯಾವಾಗಲೂ ಕನಸು ಕಾಣುತ್ತಿದ್ದೆ. ಇಂದು, ನಾನು ನನ್ನ 81 ವರ್ಷದ ಅಜ್ಜಿಯನ್ನು ಬೆಂಗಳೂರಿನ ಮೈಕ್ರೋಸಾಫ್ಟ್ ಕ್ಯಾಂಪಸ್ ಗೆ ಕರೆದುಕೊಂಡು ಹೋಗಿದ್ದೆ. ಈ ಕಾರ್ಪೊರೇಟ್ ಜಗತ್ತನ್ನು ಒಳಗಿನಿಂದ ನೋಡಿದ್ದು ಇದೇ ಮೊದಲು. ತಂತ್ರಜ್ಞಾನ ಮತ್ತು ಕೆಲಸದ ಸ್ಥಳದ ವಾತಾವರಣವನ್ನು ಗಮನಿಸುತ್ತಾ ಅಜ್ಜಿ “ಶುದ್ಧ ಕುತೂಹಲ ಮತ್ತು ಆಶ್ಚರ್ಯ” ದಿಂದ ಸುತ್ತಲೂ ನೋಡುತ್ತಿದ್ದರು ಎಂದು ಆ ಕ್ಷಣವನ್ನು ವಿವರಿಸಿದ್ದಾರೆ.

ಇಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಹೇಗೆ ನಡೆಯುತ್ತದೆ? ಎಂದು ಅಜ್ಜಿ ನನ್ನನ್ನು ಕೇಳುತ್ತಲೇ ಇದ್ದರು. ತರಗತಿಗಳು ಎಂದಿಗೂ ಸಾಧ್ಯವಾಗದ ರೀತಿಯಲ್ಲಿ ಜೀವನವು ಅವಳಿಗೆ ಬುದ್ಧಿವಂತಿಕೆಯನ್ನು ಕಲಿಸಿತು. ತಲೆಮಾರುಗಳ ತ್ಯಾಗಗಳು ಸದ್ದಿಲ್ಲದೆ ಪೂರ್ಣ ವೃತ್ತಕ್ಕೆ ಬರುತ್ತಿವೆ” ಎಂಬುದರ ಸಂಕೇತವಾಗಿ ಕಚೇರಿ ಭೇಟಿ ಕಂಡುಬಂದಿದೆ. ಅಜ್ಜಿ ಮುಗುಳ್ನಕ್ಕು, ‘ನೀನು ತುಂಬಾ ಅರ್ಥಪೂರ್ಣ ಕೆಲಸ ಮಾಡುತ್ತಿದ್ದೀಯಾ ಎಂದು ಸರಳವಾಗಿ ಹೇಳಿದರು. ಆ ಒಂದು ವಾಕ್ಯವು ಯಾವುದೇ ಬಡ್ತಿ, ಶೀರ್ಷಿಕೆ ಅಥವಾ ಪ್ರಶಸ್ತಿಗಿಂತ ದೊಡ್ಡದಾಗಿದೆ ಎಂದು ಭಾವಿಸಿದೆ. ಇಂದು ನಾನು ಸ್ವಲ್ಪ ಎತ್ತರವಾಗಿದ್ದೇನೆ ಎಂದು ಭಾವಿಸಿದೆ. ನನ್ನ ಪದವಿ ಅಥವಾ ನನ್ನ ಅಧಿಕಾರಾವಧಿಯಿಂದಾಗಿ ಅಲ್ಲ, ಆದರೆ ನಾನು ಅವಳ ಕಣ್ಣುಗಳ ಮೂಲಕ ನನ್ನ ಜಗತ್ತನ್ನು ನೋಡಿದ್ದರಿಂದ. ಮಹಾರಾಷ್ಟ್ರದ ಒಂದು ಸಣ್ಣ ಪಟ್ಟಣವಾದ ಮಂಗ್ರುಲ್‌ಪಿರ್‌ನಿಂದ ಮೈಕ್ರೋಸಾಫ್ಟ್‌ನ ಕಾರಿಡಾರ್‌ಗಳವರೆಗೆ – ಇಂದು ವಿಶೇಷವೆನಿಸಿತು ಎಂದು ಅನುಭವವನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗಿಂತ ಜರ್ಮನಿಯೇ ಬೆಸ್ಟ್; ಬೆಂಗಳೂರಿನ ಟೆಕ್ಕಿ ಹೀಗೆಂದಿದ್ದೇಕೆ ಗೊತ್ತಾ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಎಲ್ಲರಿಗೂ ಇಂತಹ ಅವಕಾಶಗಳು ಬರುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರತಿಯೊಬ್ಬ ವ್ಯಕ್ತಿಗೂ ಇದು ಹೆಮ್ಮೆಯ ಕ್ಷಣ ಎಂದರೆ, ಮತ್ತೊಬ್ಬರು, ಅಜ್ಜಿಗೆ ಮೊಮ್ಮಗನ ಮೇಲೆ ಎಷ್ಟು ಹೆಮ್ಮೆ ಅನಿಸಿದ್ದೀರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:29 pm, Fri, 22 May 26

Source link

ಮೋದಿಯ ಮನವಿಗೆ ದನಿಗೂಡಿಸಿದ ಕಮಲ್ ಹಾಸನ್, ಹೇಳಿದ್ದೇನು? – Kannada News | Kamal Haasan explains why we must conserve energy amid conflict

ಕಮಲ್ ಹಾಸನ್ (Kamal Haasan) ಖ್ಯಾತ ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು. ಮಕ್ಕಳ್ ನಿಧಿ ಮಯಂ ಹೆಸರಿನ ಪಕ್ಷ ಸ್ಥಾಪಿಸಿದ್ದ ಕಮಲ್ ಹಾಸನ್ ಈಗ ಡಿಎಂಕೆ ಕೃಪೆಯಿಂದ ರಾಜ್ಯಸಭೆ ಸದಸ್ಯರೂ ಆಗಿದ್ದಾರೆ. ಸದಾ ಕೇಂದ್ರ ಸರ್ಕಾರವನ್ನು, ಬಿಜೆಪಿಯನ್ನು ಟೀಕಿಸುತ್ತಲೇ ಬರುತ್ತಿದ್ದ ಕಮಲ್ ಹಾಸನ್, ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಈ ಸಮಯದಲ್ಲಿ ರಾಜಕೀಯವನ್ನು ಬದಿಗೊತ್ತಿ ಪ್ರಧಾನಿ ಮೋದಿ ಮಾಡಿರುವ ಮನವಿಗೆ ತಾವೂ ದನಿಗೂಡಿಸಿದ್ದಾರೆ. ದೇಶದ ನಾಗರೀಕರಲ್ಲಿ ಖುದ್ದು ಮನವಿಯೊಂದನ್ನು ಮಾಡಿದ್ದಾರೆ. ನಾಗರೀಕರಿಗೆ ಕರೆಯನ್ನು ಸಹ ಕಮಲ್ ಹಾಸನ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಕಮಲ್ ಹಾಸನ್, ‘ಇರಾನ್ ಯುದ್ಧದ ಪರಿಣಾಮಗಳ ಬಗ್ಗೆ ಕಳವಳ ಹೊಂದಿರುವ ಒಬ್ಬ ಭಾರತೀಯನಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ತೈಲ ಬೆಲೆಗಳು ಏರುತ್ತಿವೆ, ಸಮುದ್ರ ವ್ಯಾಪಾರ ಮಾರ್ಗಗಳು ಮುಚ್ಚಲ್ಪಡುತ್ತಿವೆ, ನಮ್ಮ ಮನೆಗಳು ಮತ್ತು ಅಡುಗೆಮನೆಗಳಿಗೆ ಶಕ್ತಿ ನೀಡುವ ಇಂಧನ, ನಮ್ಮ ಹೊಲಗಳು ಮತ್ತು ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರಗಳು, ನಮ್ಮ ಕೈಗಾರಿಕೆಗಳು ಮತ್ತು ವಾಹನಗಳನ್ನು ಚಲಾಯಿಸುವ ಇಂಧನ ಇವೆಲ್ಲವೂ ದುಬಾರಿಯಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, 60 ಕ್ಕೂ ಹೆಚ್ಚು ದೇಶಗಳು ಈಗಾಗಲೇ ಇಂಧನ ಉಳಿತಾಯ ನಿಯಮಗಳನ್ನು ಜಾರಿಗೆ ತಂದಿವೆ’

‘ಇತ್ತೀಚೆಗೆ, ಸಿಂಗಪುರದ ಪ್ರಧಾನಮಂತ್ರಿಗಳು ತಮ್ಮ ಜನರಿಗೆ ಮುಂದಿನ ಕಠಿಣ ದಿನಗಳಿಗೆ ಸಿದ್ಧರಾಗುವಂತೆ ಹೇಳಿರುವುದನ್ನು ಕೇಳಿದ್ದೇವೆ. ನಾವು ಅದಕ್ಕಿಂತಲೂ ದೊಡ್ಡ ದೇಶವಾಗಿದ್ದೇವೆ ಮತ್ತು ನಮ್ಮ ಪ್ರಧಾನಮಂತ್ರಿಗಳು ಮುಂದಿನ ಒಂದು ವರ್ಷದವರೆಗೆ ಇಂಧನವನ್ನು ಉಳಿಸುವಂತೆ ನಮ್ಮನ್ನು ಕೇಳಿದ್ದಾರೆ. ಇಂತಹ ಸಮಯದಲ್ಲಿ, ರಾಷ್ಟ್ರೀಯ ಜವಾಬ್ದಾರಿ ಪಕ್ಷ ರಾಜಕೀಯಕ್ಕಿಂತ ಮೇಲಿರಬೇಕು. ಶ್ರೀ ವಾಜಪೇಯಿ ಅವರು ಹೇಳಿದಂತೆ, ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ದೇಶ ಶಾಶ್ವತವಾಗಿರುತ್ತದೆ. 1962ರ ಚೀನಾ ಯುದ್ಧದ ಸಮಯದಲ್ಲಿ, ಗಡಿಯಲ್ಲಿ ಹೋರಾಡುತ್ತಿದ್ದ ನಮ್ಮ ಸೈನಿಕರಿಗೆ ಬೆಂಬಲವಾಗಿ ನಾವು ನಮ್ಮ ಮನೆಗಳಿಂದ ಚಿನ್ನವನ್ನು ದಾನ ಮಾಡಿದ್ದೆವು. 1965ರಲ್ಲಿ ಭಾರತದಲ್ಲಿ ಆಹಾರ ಧಾನ್ಯಗಳ ಕೊರತೆಯಿದ್ದಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕಾಗಿ ವಾರಕ್ಕೆ ಒಂದು ಊಟವನ್ನು ತ್ಯಜಿಸುವಂತೆ ನಾಗರಿಕರಿಗೆ ಮನವಿ ಮಾಡಿದ್ದರು’

ಇದನ್ನೂ ಓದಿ:ಚಲನಚಿತ್ರ ರಂಗಕ್ಕೆ ಕಮಲ್ ಹಾಸನ್ ಮನವಿ: ನೀಡಿದ ಸಲಹೆ ಏನು?

‘ಇಂದು ಭಾರತಕ್ಕೆ ಅಂತಹ ತ್ಯಾಗದ ಅಗತ್ಯವಿಲ್ಲ. ಆದರೆ ನಮ್ಮ ಪೋಷಕರು ದೇಶಕ್ಕಾಗಿ ಇನ್ನೂ ಹೆಚ್ಚಿನ ತ್ಯಾಗ ಮಾಡಿರುವಾಗ, ನಾವು ಇದನ್ನಾದರೂ ದೇಶಕ್ಕಾಗಿ ಮಾಡಲೇಬೇಕು. ಒಬ್ಬ ಮಧ್ಯಮ ಮಾರ್ಗದ ವ್ಯಕ್ತಿಯಾಗಿ, ನನ್ನ ರಾಜಕೀಯ ಸಂಬಂಧಗಳನ್ನು ಮೀರಿ ಒಳ್ಳೆಯ ಕೆಲಸಗಳನ್ನು ನಾನು ಒಪ್ಪಿಕೊಳ್ಳಲೇಬೇಕು. ಪ್ರಧಾನಮಂತ್ರಿಗಳ ನಾಯಕತ್ವದಲ್ಲಿ ಕಳೆದ ದಶಕದಲ್ಲಿ ಭಾರತದ ಸೌರ ಮತ್ತು ಗಾಳಿ ಶಕ್ತಿ ಸಾಮರ್ಥ್ಯ ಹೆಚ್ಚಾಗಿದೆ. ಕಲ್ಲಿದ್ದಲು ಅನಿಲೀಕರಣ, ನವೀಕರಿಸಬಹುದಾದ ಶಕ್ತಿ ಮತ್ತು ಅಣುಶಕ್ತಿಯ ಮೇಲಿನ ಇತ್ತೀಚಿನ ಹೂಡಿಕೆಗಳು ನನಗೆ ಆಶಾದಾಯಕವಾಗಿ ಕಾಣುತ್ತಿವೆ. ವಿದೇಶಿ ತೈಲ ಮತ್ತು ಅನಿಲದ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ಇವು ಪ್ರಮುಖ ಹೆಜ್ಜೆಗಳಾಗಿವೆ’

‘ಅದೇ ಸಮಯದಲ್ಲಿ, ತ್ಯಾಗವನ್ನು ಕೇವಲ ನಾಗರಿಕರಿಂದ ಮಾತ್ರ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರಗಳೂ ಈ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕು. ಆದ್ದರಿಂದ, ಎಲ್ಲಾ ಮುಖ್ಯಮಂತ್ರಿಗಳ ರಾಷ್ಟ್ರೀಯ ಸಭೆಯನ್ನು ಕರೆಯುವಂತೆ ನಾನು ಪ್ರಧಾನಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಸಾಮಾನ್ಯ ಜನರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ತಕ್ಷಣ ಎರಡು ಕೆಲಸಗಳನ್ನು ಮಾಡಬೇಕು. ಮೊದಲನೆಯದಾಗಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್‌ನಂತಹ ರಾಜ್ಯ ತೆರಿಗೆಗಳನ್ನು ಕಡಿಮೆ ಮಾಡಬೇಕು. ಎರಡನೆಯದಾಗಿ, ರೈಲು, ಮೆಟ್ರೋ ಮತ್ತು ಬಸ್ ದರಗಳನ್ನು ಕಡಿಮೆ ಮಾಡಬೇಕು, ಇದರಿಂದ ಹೆಚ್ಚು ಜನರು ಖಾಸಗಿ ವಾಹನಗಳಿಂದ ಸಾರ್ವಜನಿಕ ಸಾರಿಗೆ ಕಡೆಗೆ ಬದಲಾಗಲು ಸಾಧ್ಯವಾಗುತ್ತದೆ’

‘ಇಂದು ಉಳಿಸಿದ ಪ್ರತಿಯೊಂದು ಇಂಧನ ಘಟಕವೂ ನಾಳೆಯ ಭಾರತವನ್ನು ಬಲಪಡಿಸುತ್ತದೆ ಎಂಬುದನ್ನು ನೆನಪಿಡಿ. ಮತ್ತು ಉಳಿಸಿದ ಪ್ರತಿಯೊಂದು ಹನಿ ತೈಲವೂ ಹಣದುಬ್ಬರದಿಂದ ಅತ್ಯಂತ ಬಡ ಭಾರತೀಯನನ್ನು ರಕ್ಷಿಸುತ್ತದೆ. ಜಾಗತಿಕ ರಾಜಕೀಯದ ಪರಿಣಾಮಗಳು ಶ್ರೀಮಂತರಷ್ಟೇ ಬೀದಿಯಲ್ಲಿ ನಡೆಯುವ ಸಾಮಾನ್ಯ ಜನರ ಮೇಲೂ ಬೀಳುತ್ತವೆ. ಆದರೆ ನಾವು ಈ ಸಂಕಷ್ಟವನ್ನು ಒಗ್ಗಟ್ಟಿನಿಂದ ಎದುರಿಸಿದರೆ, ಭಾರತ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಬಹುದು’ ಎಂದಿದ್ದಾರೆ ಕಮಲ್ ಹಾಸನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆಗೆ ಬಂದು ಬಾಲಕನಿಗೆ ಇಂಜೆಕ್ಷನ್​​ ಚುಚ್ಚಿ ಹೋದ ಮುಸುಕುಧಾರಿಗಳು: ಗ್ರಾಮದಲ್ಲಿ ಆತಂಕ – Kannada News | Masked men came to the house and injected a boy: Fear in the village

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಹುಬ್ಬಳ್ಳಿ, ಮೇ 22: ಮನೆಯಲ್ಲಿ ಆಟವಾಡಿಕೊಂಡಿದ್ದ ಬಾಲಕನಿಗೆ (Boy) ಅಪರಿಚಿತ ಮುಸುಕುಧಾರಿಗಳು ಇಂಜೆಕ್ಷನ್ (injection) ಚುಚ್ಚಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಧಾರವಾಡ (dharwad) ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಣಿಕಂಠ ಗಾಣಿಗೇರ (11) ಎಂಬ ಬಾಲಕನಿಗೆ ಇಂಜೆಕ್ಷನ್ ಚುಚ್ಚಲಾಗಿದ್ದು, ಇದು ಸಹಜವಾಗಿ ಗ್ರಾಮೀಣ ಭಾಗದಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಬಾಲಕನನ್ನು ಹುಬ್ಬಳ್ಳಿ ಕಿಮ್ಸ್​​ಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಖ್ಯಾಂಶಗಳು

  • ಬಾಲಕನಿಗೆ ಇಂಜೆಕ್ಷನ್ ಚುಚ್ಚಿ ಮುಸುಕುಧಾರಿಗಳು ಎಸ್ಕೇಪ್​​
  • ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಆತಂಕ
  • ಕುಂದಗೋಳ ಪೊಲೀಸರಿಂದ ತನಿಖೆ ಆರಂಭ

ನಡೆದಿದ್ದೇನು?

ಬೈಕ್​​ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಮುಸುಕುಧಾರಿಗಳು ಮಣಿಕಂಠ ಗಾಣಿಗೇರಗೆ ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಸ್ವತಃ ಬಾಲಕ ಹೇಳುವ ಪ್ರಕಾರ, ‘ನಾನು ಮನೆಯಲ್ಲಿ ಆಟವಾಡುತ್ತಿದ್ದೆ. ಹೆತ್ತವರು ಕೆಲಸಕ್ಕೆ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಊಟ ಮಾಡಿ ಮನೆಯಲ್ಲಿದ್ದಾಗ, ಇಬ್ಬರು ಮುಸುಕು ಹಾಕಿಕೊಂಡು ಬೈಕ್ ಮೇಲೆ ಬಂದಿದ್ದರು. ನಿಮ್ಮ ತಂದೆ-ತಾಯಿ ಎಲ್ಲಿ ಅಂತ ಕೇಳಿದರು. ನಾನು ಹೊಲಕ್ಕೆ ಹೋಗಿದ್ದಾರೆ ಅಂತ ಹೇಳಿದೆ. ಅವರಿಬ್ಬರು ಏಕಾಏಕಿ ನನ್ನ ಗಟ್ಟಿಯಾಗಿ ಹಿಡಿದರು. ನಾನು ಕಚ್ಚಲು ಮುಂದಾದೆ, ಆಗ ಬಾಯಿಯನ್ನು ಕೂಡ ಗಟ್ಟಿಯಾಗಿ ಹಿಡಿದು ನನ್ನ ಎಡಗೈಗೆ ಇಂಜೆಕ್ಷನ್ ಮಾಡಿ ಹೋದರು. ನಾನು ಸ್ವಲ್ಪ ಹೊತ್ತು ಮೂರ್ಛೆ ಹೋಗಿದ್ದೆ. ಸಂಜೆ ತಂದೆ-ತಾಯಿ ಮನೆಗೆ ಬರುತ್ತಿದ್ದಂತೆ ನಡೆದಿರುವ ಘಟನೆ ಬಗ್ಗೆ ಹೇಳಿದ್ದೇನೆ’ ಎಂದಿದ್ದಾನೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲೊಂದು ಕರುಳು ಹಿಂಡುವ ಘಟನೆ: ಮಗನ ಜೀವ ಉಳಿಸಲು ಕಿವಿಯೋಲೆ ಮಾರಿದ ತಾಯಿ

ಇನ್ನು ಪೋಷಕರು ಗ್ರಾಮದಲ್ಲಿ ಮಕ್ಕಳಿಗೆ ಯಾರಾದರೂ ಇಂಜೆಕ್ಷನ್ ಮಾಡಿದ್ದಾರಾ ಅಂತ ವಿಚಾರಿಸಿದ್ದಾರೆ. ಗ್ರಾಮದ ಬೇರೆ ಯಾವ ಮಕ್ಕಳಿಗೂ ಯಾರು ಇಂಜೆಕ್ಷನ್ ಮಾಡಿಲ್ಲ. ಇಂಜೆಕ್ಷನ್ ಮಾಡಲು ಯಾರು ಕೂಡ ಬಂದಿಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಕೂಡಲೇ ಬಾಲಕನನ್ನು ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಹೆತ್ತವರು ಕರೆದುಕೊಂಡು ಹೋಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ.

ಬಾಲಕನಿಗೆ ಯಾರೋ ಅಪರಿಚಿತರು ಬಂದು ಇಂಜೆಕ್ಷನ್ ಮಾಡಿ ಹೋಗಿದ್ದಾರೆ ಅನ್ನೋ ಸುದ್ದಿ ನೆಲಗುಡ್ಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ಹೆತ್ತವರು ತಮ್ಮ ಮಕ್ಕಳನ್ನು ಮನೆ ಹೊರಗಡೆ ಬಿಡಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಬಾಲಕನ ಮಾತುಗಳಲ್ಲಿ ಅನೇಕ ಅನುಮಾನಗಳು ಮೂಡಿವೆ. ಬಾಲಕ ಮಣಿಕಂಠ, ತನಗೆ ಇಂಜೆಕ್ಷನ್ ಮಾಡಿದ್ದಾರೆ ಅಂತ ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಆದರೆ ಗ್ರಾಮದಲ್ಲಿ ಇಬ್ಬರು ಬೈಕ್ ಮೇಲೆ ಬಂದು ಬಾಲಕನಿಗೆ ಇಂಜೆಕ್ಷನ್ ಮಾಡಿದ್ದನ್ನು ಬೇರೆಯವರು ನೋಡಿಲ್ಲ. ಜೊತೆಗೆ ಬೇರೆ ಯಾವ ಮಕ್ಕಳಿಗೂ ಇಂಜೆಕ್ಷನ್ ಮಾಡಿಲ್ಲ. ಬಾಲಕನ ಕೈ ಮೇಲೆ ಇಂಜೆಕ್ಷನ್ ಮಾಡಿರುವ ಯಾವುದೇ ಗುರುತುಗಳು ಕೂಡ ಸ್ಪಷ್ಟವಾಗಿ ಕಾಣುತ್ತಿಲ್ಲ. ಈ ಬಗ್ಗೆ ಆತನ ಹೆತ್ತವರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಹೆತ್ತವರು ಹೇಳಿದ್ದಿಷ್ಟು

‘ನಮ್ಮ ಮಗ ನನಗೆ ಇಂಜೆಕ್ಷನ್ ಮಾಡಿದ್ದಾನೆ ಅಂತ ಹೇಳಿದ್ದಾನೆ. ನಾವು ಆತನಿಗೆ ಅನೇಕ ಬಾರಿ ಕೇಳಿದರು ಅದನ್ನೇ ಹೇಳಿದ್ದಾನೆ. ಹೀಗಾಗಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದೇವೆ’ ಎಂದು ಮಣಿಕಂಠ ತಾಯಿ ಸುಜಾತಾ ಹೇಳಿದ್ದಾರೆ. ಇನ್ನು ಹುಬ್ಬಳ್ಳಿ ಕಿಮ್ಸ್ ವೈದ್ಯರು, ಬಾಲಕನ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಯಾವುದೇ ಇಂಜೆಕ್ಷನ್ ಮಾಡಿರುವ ಗುರುತುಗಳು ಸ್ಪಷ್ಟವಾಗಿ ಕಂಡಿಲ್ಲ. ಹೀಗಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಮಗುವಿನ ಹೊಟ್ಟೆಯಲ್ಲಿದ್ದ 25 ಸೆಂ.ಮೀ ಕೂದಲಿನ ಗುಡ್ಡೆ ಹೊರಗೆ ತೆಗೆದ ವೈದ್ಯರು!

ಇನ್ನು ಬಾಲಕನಿಗೆ ಇಂಜೆಕ್ಷನ್ ಮಾಡಿರುವ ಬಗ್ಗೆ ಅಸಲಿಯತ್ತು ತಿಳಿಯುವ ನಿಟ್ಟಿನಲ್ಲಿ ಕುಂದಗೋಳ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮತ್ತೊಂದಡೆ ಹುಬ್ಬಳ್ಳಿ ಕಿಮ್ಸ್​ನಲ್ಲಿ ಬಾಲಕನ ಬ್ಲಡ್ ಟೆಸ್ಟ್, ಎಕ್ಸ್ ರೇ ಕೂಡ ಮಾಡಲಾಗುತ್ತಿದೆ. ವೈದ್ಯಕೀಯ ವರದಿ ಮತ್ತು ಪೊಲೀಸರ ತನಿಖೆ ನಂತರವೇ, ಬಾಲಕನಿಗೆ ಯಾರಾದರು ಇಂಜೆಕ್ಷನ್ ಮಾಡಿದರಾ ಅಥವಾ ಈ ಘಟನೆ ಹಿಂದೆ ಬೇರೆ ಏನಾದರೂ ಉದ್ದೇಶ ಇದೆಯಾ ಅನ್ನೋದು ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಥಿಯೇಟರ್​​​ನಲ್ಲಿ 65ದಿನ ಪೂರೈಸಿದ ‘ಧುರಂಧರ್ 2’; ಒಟ್ಟೂ ಗಳಿಕೆ ಎಷ್ಟು? – Kannada News | Dhurandhar 2 Box Office: 50 Days of Dominance and Record Breaking Global Collection

ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರ ಯಶಸ್ವಿಯಾಗಿ 65 ದಿನಗಳನ್ನು ಪೂರೈಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡ ಈ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರಮಂದಿರಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಮುನ್ನುಗ್ಗಿದೆ.

‘ಧುರಂಧರ್ 2’ ಈವರೆಗೆ ದೇಶಾದ್ಯಂತ ಒಟ್ಟು 5,24,278 ಶೋಗಳು ಪ್ರದರ್ಶನ ಕಂಡಿವೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರ ವಿಶ್ವಾದ್ಯಂತ ಬರೋಬ್ಬರಿ 1,799.09 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದು ಭಾರತ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ. ಭಾರತೀಯ ಚಿತ್ರಮಂದಿರಗಳಿಂದಲೇ ಈ ಸಿನಿಮಾ 1,372 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಭಾರತದಲ್ಲಿ ಸಿನಿಮಾದ ಒಟ್ಟು ನೆಟ್ ಕಲೆಕ್ಷನ್ 1,146 ಕೋಟಿ ರೂಪಾಯಿ ಆಗಿದೆ.

ಕೇವಲ ದೇಶದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಈ ಚಿತ್ರದ ಹವಾ ಜೋರಾಗಿದ್ದು, ಬರೋಬ್ಬರಿ 426 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಅನಿವಾಸಿ ಭಾರತೀಯರ ಮನ ಗೆದ್ದಿದೆ. ವಿಶೇಷ ಎಂದರೆ, ಪಾಕಿಸ್ತಾನ, ಸೌದಿ ರಾಷ್ಟ್ರಗಳಲ್ಲಿ ಈ ಸಿನಿಮಾ ಬ್ಯಾನ್ ಆಗಿತ್ತು. ಆದಾಗ್ಯೂ ಈ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ

ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಒಟಿಟಿ (OTT) ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿ ಹೊರಬಿದ್ದಿದೆ. ಇದೇ ಜೂನ್ 4 ರಂದು ‘ಧುರಂಧರ್ 2’ ಹಾಟ್​ಸ್ಟಾರ್ ಮೂಲಕ ಪ್ರಸಾರ ಕಾಣಲಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಹಾಗೂ ಮತ್ತೊಮ್ಮೆ ಈ ಹೈ-ವೋಲ್ಟೇಜ್ ಸಿನಿಮಾವನ್ನು ಮನೆಯಲ್ಲೇ ಕುಳಿತು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಸಂಭ್ರಮ ತಂದಿದೆ. ದೃಶ್ಯ ವೈಭವ ಹಾಗೂ ತಾರಾಗಣದ ಅದ್ಭುತ ನಟನೆಯಿಂದಾಗಿ ಈ ಚಿತ್ರವು 2026ರ ಅತ್ಯಂತ ಯಶಸ್ವಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಧೋನಿ ಮುಂದಿನ ಸೀಸನ್ ಆಡ್ತಾರಾ? ಅಡ್ಡ ಗೋಡೆ ಮೇಲೆ ದೀಪವಿಟ್ಟ ರುತುರಾಜ್ – Kannada News | CSK’s IPL 2026 Debacle: Dhoni’s Injury Impact and Gaikwad’s Hint on His Return

2026 ರ ಐಪಿಎಲ್‌ನಲ್ಲಿ (IPL 2026) ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪ್ರಯಾಣ ಲೀಗ್ ಹಂತದಲ್ಲೇ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಸೀಸನ್‌ನಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣಗಳು ಒಂದಲ್ಲ, ಎರಡಲ್ಲ, ಹಲವು. ಆದರೆ ಆ ಕಾರಣಗಳಲ್ಲಿ ಪ್ರಮುಖವಾದದ್ದು, ಎಂಎಸ್ ಧೋನಿ (MS Dhoni) ಇಡೀ ಸೀಸನ್​ನಲ್ಲಿ ಒಂದೇ ಒಂದು ಪಂದ್ಯವನ್ನು ಆಡದಿರುವುದು. ಇದೀಗ ಧೋನಿ ಮುಂದಿನ ಸೀಸನ್‌ನಲ್ಲಿ ತಂಡದ ಪರ ಆಡುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಸೋತ ಬಳಿಕ ಈ ಬಗ್ಗೆ ಮಾತನಾಡಿದ ನಾಯಕ ರುತುರಾಜ್ ಗಾಯಕ್ವಾಡ್ ಯಾವುದನ್ನು ಖಚಿತವಾಗಿ ಹೇಳದೆ ಅಡ್ಡ ಗೋಡೆ ಮೇಲೆ ದೀಪವಿಟ್ಟರು.

ಧೋನಿ ಬಗ್ಗೆ ಗಾಯಕ್ವಾಡ್ ಹೇಳಿದ್ದೇನು?

ಪಂದ್ಯದ ನಂತರ, ಪ್ರಸ್ತುತಿ ಸಮಾರಂಭಕ್ಕೂ ಮುನ್ನ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಪ್ರಸಾರಕರು ಮುಂದಿನ ಆವೃತ್ತಿಯಲ್ಲಿ ಧೋನಿಯ ಲಭ್ಯತೆಯ ಪ್ರಶ್ನಿಸಿದರು. ರುತುರಾಜ್ ಗಾಯಕ್ವಾಡ್ ಈ ಪ್ರಶ್ನೆಗೆ ಸ್ಪಷ್ಟವಾಗಿ ಯಾವುದೇ ಭರವಸೆಗಳನ್ನು ನೀಡಲಿಲ್ಲ. ಆದರೆ ಪ್ರಸ್ತುತ ತಂಡದಲ್ಲಿರುವ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ ಧೋನಿ ಮುಂದಿನ ಸೀಸನ್ ಆಡುತ್ತಾರಾ ಅಥವಾ ಇಲ್ಲವಾ ಎಂಬುದು ನಿಮಗೆ ಮುಂದಿನ ವರ್ಷ ತಿಳಿಯಲಿದೆ. ಆದರೆ ಈ ಸೀಸನ್​ನಲ್ಲಿ ನಾವು ಅವರನ್ನು ತುಂಬಾ ಮಿಸ್ ಮಾಡಿಕೊಂಡೆವು. ಕೊನೆಯ ಓವರ್‌ಗಳಲ್ಲಿ ಬಂದು ಕ್ರೀಸ್‌ನಲ್ಲಿ ಉಳಿಯುವ ಮೂಲಕ ಅವರು ಆಟವನ್ನು ಬದಲಾಯಿಸುತ್ತಿದ್ದರು. ಆದರೆ ಮುಂದಿನ ಸೀಸನ್ ಬಗ್ಗೆ ನಾನು ಏನನ್ನೂ ಹೇಳಲಾರೆ ಎಂದಿದ್ದಾರೆ.

ಒಂದು ಪಂದ್ಯವನ್ನು ಆಡದ ಧೋನಿ

ಸೀಸನ್ ಆರಂಭಕ್ಕೆ ಎರಡು ದಿನಗಳ ಮೊದಲು ಧೋನಿ ಗಾಯಗೊಂಡರು, ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿಯಿತು. ಪರಿಣಾಮವಾಗಿ, ಅವರು ತಂಡದೊಂದಿಗೆ ಎಲ್ಲಿಗೂ ಪ್ರಯಾಣಿಸದೆ ಚೆನ್ನೈನಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದರು. ಲೀಗ್ ಹಂತ ಮುಗಿಯುವುದಕ್ಕೂ ಮುನ್ನ ಧೋನಿ ಸಿಎಸ್​ಕೆ ತವರು ನೆಲದಲ್ಲಿ ಪಂದ್ಯವನ್ನು ಆಡಲಿದ್ದಾರೆ ಎಂದು ವರದಿಯಾಗಿತ್ತು.

IPL 2026: ಒಂದೇ ಒಂದು ಪಂದ್ಯವನ್ನಾಡದೆ ರಾಂಚಿಗೆ ವಾಪಸ್ಸಾದ ಧೋನಿ

ಆದರೆ ಆ ಪಂದ್ಯಕ್ಕೂ ಮುನ್ನವೇ ಧೋನಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು. ಹೀಗಾಗಿ ಧೋನಿ ಚೆನ್ನೈನ ತವರು ಮೈದಾನದಲ್ಲಿ ನಡೆದ ತಂಡದ ಅಂತಿಮ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಹಾಜರಾದರೂ, ಆ ಪಂದ್ಯದಲ್ಲೂ ಆಡಲು ಸಾಧ್ಯವಾಗಲಿಲ್ಲ. ಇನ್ನು ಗುಜರಾತ್ ವಿರುದ್ಧದ ಸೀಸನ್​ನ ಕೊನೆಯ ಪಂದ್ಯಕ್ಕೂ ಮೊದಲೇ ಧೋನಿ ಮನೆಗೆ ವಾಪಸ್ಸಾಗಿದ್ದರು. ಹೀಗಾಗಿ ಧೋನಿ ಕೊನೆಯ ಲೀಗ್ ಪಂದ್ಯದಲ್ಲೂ ತಂಡದೊಂದಿಗೆ ಕಾಣಿಸಿಕೊಳ್ಳಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ – Kannada News | A Bidar Farmer Cultivates World’s Costliest Mango Miyazaki, That’s Worth Rs 2.5 Lakh Per KG

ಬೀದರ್, (ಮೇ 22): ಜಪಾನ್ ಮೂಲದ ಮಿಯಾಜಾಕಿ ಮಾವಿನಹಣ್ಣು (Miyazaki Mango) ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಿನ ತಳಿಗಳಲ್ಲಿ ಒಂದಾಗಿದೆ. ಇದರ ಬೆಲೆ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿಗಳವರೆಗೆ ತಲುಪುತ್ತದೆ. ಇಂತಹ ದುಬಾರಿ ದರದ ಮಾವು ತಳಿಯನ್ನು ಬೀದರ್ ನ (Bidar) ರೈತ ಬೆಳೆದು ಗಮನಸೆಳೆದಿದ್ದಾರೆ. ಹೌದು…ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದ ರೈತ ಹಣಮಂತರಾವ್ ಶ್ರೀಮಾಳೆ ಅವರು ವಿಶ್ವದ ದುಬಾರಿ ಬೆಲೆಯ ಮಾವನ್ನ ಬೀದರ್ ನ ರೈತ ಬೆಳೆಸಿ ಸೈ ಎಣಿಸಿಕೊಂಡಿದ್ದಾರೆ. ವಿದೇಶಿ ತಳಿ ನಮ್ಮ ನೆಲದಲ್ಲಿ ಬೆಳೆಯುತ್ತಾ ಎಂದು ಹಣಮಂತರಾವ್ ಶ್ರೀಮಾಳೆ ಅವರಯ ತೋಟದಲ್ಲಿ ಪ್ರಾಯೋಗಿಕವಾಗಿ ಮಿಯಾಜಾಕಿ ಮಾವು ಬೆಳೆದಿದ್ದು, ಅದು ಇದೀಗ ಉತ್ತಮ ಫಲ ಕೊಟ್ಟಿದೆ.

ಈ ಯಶಸ್ಸಿನಿಂದ ಪ್ರೇರಿತರಾಗಿ ಮುಂದಿನ ದಿನಗಳಲ್ಲಿ ಎರಡು ಎಕರೆ ಪ್ರದೇಶದಲ್ಲಿ ಮಿಯಾಜಾಕಿ ಮಾವು ಬೆಳೆಸಲು ರೈತ ನಿರ್ಧರಿಸಿದ್ದಾರೆ. ಜಪಾನ್ ದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ಮಿಯಾಜಾಕಿ ಮಾವು ತನ್ನ ವಿಶಿಷ್ಟ ರುಚಿ ಮತ್ತು ಗುಣಮಟ್ಟದಿಂದ ವಿಶ್ವದ ಗಮನ ಸೆಳೆದಿದೆ. ಈ ಹಣ್ಣು ಅತ್ಯಂತ ಸಿಹಿಯಾಗಿದ್ದು, ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್‌ಗಳು, ಬೀಟಾ ಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುವುದಾಗಿ ಹೇಳಲಾಗುತ್ತಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಭಾರೀ ಬೇಡಿಕೆ ಇದ್ದು, ಕೆಲವೆಡೆ ಕೆಜಿಗೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತಿದೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೊಸ ತಳಿಗಳ ಬೆಳೆಗಳತ್ತ ರೈತರು ಆಸಕ್ತಿ ತೋರುತ್ತಿರುವುದು ಕೃಷಿಯಲ್ಲಿ ಹೊಸ ಆಶಾಭರವನ್ನ ಮೂಡಿಸಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸುರೇಶ್ ನಾಯಕ ಕೊಟ್ಟಿರುವ ಪ್ರತ್ಯೇಕ್ಷ ವರದಿ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link