‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್ – Kannada News | Jeff Bezos Proposes US Tax Reform: Waive Federal Income Tax for Bottom 50pc
ವಾಷಿಂಗ್ಟನ್, ಮೇ 22: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಅವರು ಅಮೆರಿಕದ ತೆರಿಗೆ ವ್ಯವಸ್ಥೆಯಲ್ಲಿ (Federal Tax system) ಪ್ರಮುಖ ಬದಲಾವಣೆ ತರಲು ಪ್ರಸ್ತಾಪಿಸಿದ್ದಾರೆ. ಕಡಿಮೆ ಆದಾಯ ಗಳಿಸುವ ಶೇ. 50 ರಷ್ಟು ಜನರಿಗೆ (Bottom half of earners) ಫೆಡರಲ್ ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಸಿಎನ್‌ಬಿಸಿ (CNBC) ವಾಹಿನಿಯ ಆಂಡ್ರ್ಯೂ ರಾಸ್ ಸೋರ್ಕಿನ್ ಅವರೊಂದಿಗೆ ಮಾತನಾಡಿದ ಬೆಜೋಸ್, ಪ್ರಸ್ತುತ ಅಮೆರಿಕದ ಒಟ್ಟು ಆದಾಯ ತೆರಿಗೆಯಲ್ಲಿ (Income…