ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: vecernji.hr
ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸುವಂತಹ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು, ಬ್ರೈನ್ ಟೀಸರ್ ಆಟಗಳು ಖಂಡಿತ ನಿಮಗೆ ನೆರವಾಗುತ್ತದೆ. ಆದರೆ ಈ ಟ್ರಿಕ್ಕಿ ಒಗಟು ಬಿಡಿಸುವಾಗ ನಿಮ್ಮ ಮೆದುಳನ್ನು ಬಳಸಿಕೊಳ್ಳಬೇಕಷ್ಟೇ. ಇದೀಗ ನೀವು ಅತೀ ಬುದ್ಧಿವಂತರೇ ಎಂದು ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. ಕಪ್ಪು ಹಾಗೂ ಬಿಳಿ ರೇಖೆಗಳನ್ನೊಳಗೊಂಡ ಚಿತ್ರದಲ್ಲಿ ಎಷ್ಟು ವೃತ್ತಗಳಿವೆ ಎಂದು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ಇರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ. ನೀವು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಲು ರೆಡಿ ಇದ್ದೀರಾ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ನೆರವಾಗುತ್ತದೆ. ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗಿರುವ ಚಿತ್ರದಲ್ಲಿ ಕಪ್ಪು ಬಿಳಿ ರೇಖೆಗಳನ್ನೊಳಗೊಂಡ ವೃತ್ತಗಳು ಕಾಣಿಸುತ್ತವೆ. ಈ ರೇಖೆಗಳ ಜೋಡಣೆಯೂ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಈ ಚಿತ್ರ ನೋಡಿದಾಗ ಕಣ್ಣಿಗೆ ಬೀಳುವುದೇ ಮೂರು ನಾಲ್ಕು ವೃತ್ತಗಳಷ್ಟೇ. ಆದರೆ ಕಣ್ಣು ಬಿಟ್ಟು ನೋಡಿದಾಗ ಮಾತ್ರ ವೃತ್ತಗಳ ನಿಖರ ಸಂಖ್ಯೆಯನ್ನು ಹೇಳಲು ಸಾಧ್ಯ.
ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಗೂಬೆಗಳ ನಡುವೆ ಅಡಗಿರುವ ಬೆಕ್ಕನ್ನು ಹುಡುಕಬಲ್ಲಿರಾ?
ವೃತ್ತಗಳನ್ನು ಗುರುತಿಸಲು ಸಾಧ್ಯವಾಯಿತೇ?
ಈ ಚಿತ್ರದಲ್ಲಿ 16 ವೃತ್ತಗಳಿವೆ. ಆದರೆ ವಿನ್ಯಾಸದಿಂದ ಇಲ್ಲಿರುವ ಎಲ್ಲಾ ವೃತ್ತಗಳು ಕಣ್ಣಿಗೆ ಗೋಚರಿಸುವುದಿಲ್ಲ. ನಿಮಗೆ ಸುಳಿವನ್ನು ನೀಡಿ ವೃತ್ತಗಳ ನಿಖರ ಸಂಖ್ಯೆಯನ್ನು ಹೇಳಲು ಸಹಾಯ ಮಾಡುತ್ತೇವೆ. ರೇಖೆಗಳ ನಡುವಿನ ಖಾಲಿ ಜಾಗದ ನಡುವೆ ನಿಮ್ಮ ಗಮನವನ್ನು ಕೇಂದ್ರಿಕರಿಸಿ. ಆಗ ನಿಮಗೆ ಒಂದೊಂದು ವೃತ್ತಗಳು ಕಾಣಿಸುತ್ತವೆ. ಒಂದು ವೇಳೆ ವೃತ್ತಗಳನ್ನು ಗುರುತಿಸಲು ವಿಫಲವಾದರೆ ಈ ಕೆಳಗಿನ ಚಿತ್ರದಲ್ಲಿ ವೃತ್ತಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ