All posts by nagaraj11081993

GT vs CSK IPL 2026 Live Score: ಟಾಸ್ ಗೆದ್ದ ಸಿಎಸ್​ಕೆ ಬೌಲಿಂಗ್ ಆಯ್ಕೆ – Kannada News | Gujarat Titans vs Chennai Super Kings IPL 2026 Live Cricket Score GT vs CSK Match on 21st May latest news in Kannada

ಐಪಿಎಲ್ 2026 ರ 66 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರಸ್ಪರ ಮುಖಾಮುಖಿಯಾಗಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ 14 ನೇ ಮತ್ತು ಕೊನೆಯ ಪಂದ್ಯ ಇದಾಗಿದೆ. ಈ ಸೀಸನ್​ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಗುಜರಾತ್ ಪ್ಲೇಆಫ್ ಟಿಕೆಟ್ ಪಡೆದುಕೊಂಡಿದೆ. ಇತ್ತ ಸಿಎಸ್​ಕೆಗೆ ಪ್ಲೇಆಫ್‌ ಹಾದಿ ಭಾಗಶಃ ಮುಚ್ಚಿದ್ದರೂ ಅವಕಾಶವೆಂತು ಇದೆ.

Source link

ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ? – Kannada News | India Semiconductor Mission 2.0: 12 Year Plan to Boost Chip Manufacturing & MSMEs

ನವದೆಹಲಿ, ಮೇ 21: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ದೇಶದ ಮಹತ್ವಾಕಾಂಕ್ಷೆಯ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ (ISM- India Semiconductor Mission)) ಯೋಜನೆಯ ಎರಡನೇ ಹಂತವನ್ನು (ISM 2.0) ಬರೋಬ್ಬರಿ 12 ವರ್ಷಗಳ ದೀರ್ಘಾವಧಿಗೆ ವಿಸ್ತರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಈ ಹಿಂದೆ ಇಂತಹ ಯೋಜನೆಗಳ ಅವಧಿ ಕೇವಲ 5 ವರ್ಷಗಳಾಗಿರುತ್ತಿದ್ದವು. ಚಿಪ್ ಉತ್ಪಾದನಾ ವಲಯದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ದೀರ್ಘಾವಧಿ ಬೇಕಾಗುವುದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಬೃಹತ್ ಆರ್ಥಿಕ ವೆಚ್ಚಕ್ಕೆ ಸಜ್ಜು

ಸೆಮಿಕಂಡಕ್ಟರ್ ಮಿಷನ್‌ನ ಎರಡನೇ ಹಂತಕ್ಕಾಗಿ ಸರ್ಕಾರ ಸುಮಾರು 1.5 ಲಕ್ಷ ಕೋಟಿ ರೂ ಹಣವನ್ನು ಮೀಸಲಿಡುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಕೇವಲ ಬೃಹತ್ ಚಿಪ್ ಉತ್ಪಾದನಾ ಘಟಕಗಳ (Fabs) ಸ್ಥಾಪನೆಗೆ ಆದ್ಯತೆ ನೀಡಲಾಗಿತ್ತು. ಆದರೆ, ISM 2.0 ಅಡಿಯಲ್ಲಿ ಚಿಪ್ ತಯಾರಿಕೆಗೆ ಬೇಕಾಗುವ ಅನಿಲಗಳು (gases), ಇಂಗುಗಳು (ingots) ಹಾಗೂ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ದೇಶೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSMEs) ಜಾಗತಿಕ ಮಟ್ಟಕ್ಕೆ ಬೆಳೆಸಲು ನಿರ್ಧರಿಸಲಾಗಿದೆ.

ಚಿಪ್ ವಿನ್ಯಾಸ (Chip Design): ಭಾರತದಲ್ಲೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು (Intellectual Property Rights) ಉಳಿಸಿಕೊಳ್ಳುವಂತಹ ದೇಶೀಯ ಚಿಪ್ ವಿನ್ಯಾಸ ಕಂಪನಿಗಳಿಗೆ ಸರ್ಕಾರ ವಿಶೇಷ ಪ್ರೋತ್ಸಾಹ ನೀಡಲಿದೆ.

ಸಬ್ಸಿಡಿ ದರದಲ್ಲಿ ಬದಲಾವಣೆ: ಮೊದಲ ಹಂತದಲ್ಲಿ (ISM 1.0) ಚಿಪ್ ಫ್ಯಾಬ್ರಿಕೇಶನ್ ಮತ್ತು ಪ್ಯಾಕೇಜಿಂಗ್ ಘಟಕಗಳಿಗೆ ಸರ್ಕಾರ ಶೇ. 50 ರಷ್ಟು ಧನಸಹಾಯ (Incentive) ನೀಡುತ್ತಿತ್ತು. ಆದರೆ, ಎರಡನೇ ಹಂತದಲ್ಲಿ ಇದನ್ನು ಶೇ. 30 ಕ್ಕೆ ಇಳಿಸಲು ಸರ್ಕಾರ ಯೋಜಿಸುತ್ತಿದೆ.

ಇದನ್ನೂ ಓದಿ: SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?

ಡಿಸೆಂಬರ್ 2021 ರಲ್ಲಿ 76,000 ಕೋಟಿ ರೂ ವೆಚ್ಚದಲ್ಲಿ ಈ ಮಿಷನ್ ಪ್ರಾರಂಭವಾಗಿತ್ತು. ಇದುವರೆಗೆ ಗುಜರಾತ್‌ನ ಸಾನಂದ್‌ನಲ್ಲಿ ಮೈಕ್ರಾನ್ ತಂತ್ರಜ್ಞಾನದ 2.75 ಬಿಲಿಯನ್ ಡಾಲರ್ ವೆಚ್ಚದ ಘಟಕ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ತೈವಾನ್‌ನ PSMC ಜಂಟಿ ಸಹಭಾಗಿತ್ವದ ಧೋಲೇರಾ ಫ್ಯಾಬ್ ಸೇರಿದಂತೆ ಒಟ್ಟು 12 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ.

12 ವರ್ಷದ ಸೆಮಿಕಂಡಕ್ಟರ್ ಮಿಷನ್​ನಿಂದ ಏನು ಪ್ರಯೋಜನ?

ಮೊದಲ ಸೆಮಿಕಂಡಕ್ಟರ್ ಮಿಷನ್ ಐದು ವರ್ಷದವರೆಗೆ ಮಾತ್ರ ಇರುವುದು. ಈಗ ಎರಡನೇ ಆವೃತ್ತಿಯು 12 ವರ್ಷದವರೆಗೆ ಇರಲಿದೆ. ಈ 12 ವರ್ಷಗಳ ದೀರ್ಘಾವಧಿಯ ನೀತಿಯು ಜಾಗತಿಕ ಚಿಪ್ ತಯಾರಕರಲ್ಲಿ ನಂಬಿಕೆಯನ್ನು ಮೂಡಿಸಲಿದ್ದು, ಭಾರತವು ವಾರ್ಷಿಕವಾಗಿ ಆಮದು ಮಾಡಿಕೊಳ್ಳುವ ಶತಕೋಟಿ ಡಾಲರ್ ಮೌಲ್ಯದ ಸೆಮಿಕಂಡಕ್ಟರ್‌ಗಳನ್ನು ದೇಶದಲ್ಲೇ ತಯಾರಿಸಲು ಮತ್ತು 2030 ರ ವೇಳೆಗೆ ಭಾರತೀಯ ಚಿಪ್ ಮಾರುಕಟ್ಟೆಯನ್ನು $100-$110 ಬಿಲಿಯನ್‌ಗೆ ಕೊಂಡೊಯ್ಯಲು ಇದು ದಾರಿಯಾಗಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಫೋನ್ ಖರೀದಿಸಿ, ಇಎಂಐ ಕಟ್ಟೋಕಾಗ್ತಿಲ್ವಾ? ಸಾಲಗಾರರು ನಿಮ್ಮ ಫೋನ್ ಲಾಕ್ ಮಾಡಬಹುದಾ? ಆರ್​ಬಿಐ ಬಳಿ ಪ್ರಸ್ತಾಪ

ಸೆಮಿಕಂಡಕ್ಟರ್ ಚಿಪ್ ಡಿಸೈನ್ ಹಂತದವರೆಗೆ ಭಾರತೀಯರು ಪರಿಣಿತಿ ಮತ್ತು ಕೌಶಲ್ಯ ಹೊಂದಿದ್ದಾರೆ. ಆದರೆ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಆಳಕ್ಕೆ ಹೋದಂತೆಲ್ಲಾ ಭಾರತದ ಕೊರತೆ ಎದ್ದುಗಾಣುತ್ತಾ ಹೋಗುತ್ತದೆ. ಎಂಜಿನಿಯರಿಂಗ್ ಜೊತೆಗೆ ಹೆಚ್ಚುವರಿ ಕೌಶಲ್ಯ ನೀಡುವ ವ್ಯವಸ್ಥೆಯ ನಿರ್ಮಾಣ, ಫೋಟೋಮಾಸ್ಕ್, ಅಲ್ಟ್ರಾಪ್ಯೂರ್ ಪ್ರೋಸಸ್ ಕೆಮಿಕಲ್ ಫೋಟೋರೆಸಿಸ್ಟ್​ಗಳು, ಎಚೆಂಟ್​ಗಳು ಇತ್ಯಾದಿಗಳನ್ನು ಒದಗಿಸುವ ಒಂದೂ ಭಾರತೀಯ ಕಂಪನಿಗಳಿಲ್ಲ. ಅಲ್ಲದೇ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗಾಗಲೇ ಪೈಪೋಟಿ ಶುರುವಾಗಿದೆ. ಅಮೆರಿಕ, ಚೀನಾ ಮತ್ತು ತೈವಾನ್ ಪಾರಮ್ಯವೇ ಮುಂದುವರಿದಿದೆಯಾದರೂ, ಯೂರೋಪ್, ಜಪಾನ್, ಸೌತ್ ಕೊರಿಯಾ ದೇಶಗಳೂ ಕೂಡ ದೇಶೀಯವಾಗಿ ಚಿಪ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿವೆ. ಇವುಗಳೊಂದಿಗೆ ಭಾರತ ಪೈಪೋಟಿ ನಡೆಸಬೇಕಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

FIFA ವಿಶ್ವಕಪ್ 2026 ರ ಬಹುಮಾನ ಪ್ರಕಟ: ವಿಜೇತರಿಗೆ 481 ಕೋಟಿ..! ಉಳಿದವರಿಗೆ? – Kannada News | ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2026 FIFA World Cup 2026: New Format, Hosts, and Record Prize Money Revealed!

2026 ರ ಫಿಫಾ ವಿಶ್ವಕಪ್ (FIFA World Cup 2026) ಇದೇ ಜೂನ್ 11, 2026 ರಿಂದ ಜುಲೈ 19, 2026 ರವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಮೂರು ದೇಶಗಳು ಜಂಟಿಯಾಗಿ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ. ಈ ಪಂದ್ಯಾವಳಿ ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿದೆ. ಅದರಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 11, ಮೆಕ್ಸಿಕೊದಲ್ಲಿ ಮೂರು ಮತ್ತು ಕೆನಡಾದಲ್ಲಿ ಎರಡು ಸೇರಿದಂತೆ ಒಟ್ಟು 16 ನಗರಗಳು ಪಂದ್ಯಗಳನ್ನು ಆಯೋಜಿಸುತ್ತವೆ. ಫೈನಲ್ ಪಂದ್ಯವು ಜುಲೈ 19, 2026 ರಂದು ನ್ಯೂಯಾರ್ಕ್-ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಬಾರಿಯ ವಿಶೇಷವೇನು?

ಈ ಬಾರಿಯ ಫಿಫಾ ವಿಶ್ವಕಪ್​ನ ವಿಶೇಷತೆ ಏನೆಂದರೆ, ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 32 ತಂಡಗಳು ಭಾಗವಹಿಸುತ್ತಿದ್ದ ಈ ಪಂದ್ಯಾವಳಿಯಲ್ಲಿ ಈ ಬಾರಿ 48 ತಂಡಗಳು ಕಣಕ್ಕಿಳಿಯಲಿವೆ. ಇದರ ಜೊತೆಗೆ ಸ್ವರೂಪವನ್ನು ಸಹ ಬದಲಾಯಿಸಲಾಗಿದೆ. 48 ತಂಡಗಳನ್ನು ತಲಾ 4 ತಂಡಗಳ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು, ಜೊತೆಗೆ ಮೂರನೇ ಸ್ಥಾನ ಪಡೆದ ಎಂಟು ಅತ್ಯುತ್ತಮ ತಂಡಗಳು 32 ರ ಸುತ್ತಿಗೆ ಮುನ್ನಡೆಯುತ್ತವೆ. ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.

ಬಹುಮಾನದ ಮೊತ್ತದಲ್ಲಿ ದಾಖಲೆಯ ಏರಿಕೆ

ಈ ವರ್ಷ ಫಿಫಾ ಬಹುಮಾನದ ಹಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಒಟ್ಟು US$655 ಮಿಲಿಯನ್ (ಸುಮಾರು 6300 ಕೋಟಿ ರೂ.) ಮೊತ್ತವನ್ನು 48 ತಂಡಗಳ ನಡುವೆ ಹಂಚಲಾಗುತ್ತದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಬಹುಮಾನದ ಮೊತ್ತದಲ್ಲಿ ಸುಮಾರು 50% ಹೆಚ್ಚಳವಾಗಿದೆ.

ಯಾವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ?

  • ಚಾಂಪಿಯನ್ ತಂಡ: ಸುಮಾರು 481 ಕೋಟಿ ರೂ.
  • ರನ್ನರ್ ಅಪ್: ಸುಮಾರು 317 ಕೋಟಿ ರೂ.
  • 3ನೇ ಸ್ಥಾನ: ಸುಮಾರು 279 ಕೋಟಿ ರೂ.
  • 4ನೇ ಸ್ಥಾನ: ಸುಮಾರು 259 ಕೋಟಿ ರೂ.
  • 5 ರಿಂದ 8 ನೇ ಶ್ರೇಯಾಂಕಿತ ತಂಡಗಳು: ಸುಮಾರು 182 ಕೋಟಿ ರೂ.
  • 9 ರಿಂದ 16 ನೇ ಸ್ಥಾನದಲ್ಲಿರುವ ತಂಡಗಳು: ಸುಮಾರು 144 ಕೋಟಿ ರೂ.
  • 17 ರಿಂದ 32 ನೇ ಸ್ಥಾನದಲ್ಲಿರುವ ತಂಡಗಳು: ಸುಮಾರು 105 ಕೋಟಿ ರೂ.
  • 33 ರಿಂದ 48 ನೇ ಸ್ಥಾನ: ಸುಮಾರು 86 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವರ್ಷವೇ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್ ಮದುವೆ? ಜೋರಾಗಿದೆ ಗಾಸಿಪ್ – Kannada News | Anirudh Ravichander Kavya Maran reportedly tying the knot later this year

ಸಿನಿಮಾ ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನಿರುದ್ಧ್ ರವಿಚಂದರ್ (Anirudh Ravichander) ಮತ್ತು ಐಪಿಎಲ್ ಫ್ರಾಂಚೈಸ್ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ (Kavya Maran) ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್, ಕಾಲಿವುಡ್ ಹಾಗೂ ಕ್ರಿಕೆಟ್ ವಲಯಗಳಲ್ಲಿ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಅವರ ಸಂಬಂಧ ಮತ್ತು ವಿವಾಹದ ಬಗ್ಗೆ ಅನೇಕ ಅಂತೆ-ಕಂತೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈಗ ಮತ್ತೆ ಗಾಸಿಪ್ ಜೋರಾಗಿದೆ.

ಕಾಲಿವುಡ್ ಮಾಧ್ಯಮದ ಇತ್ತೀಚಿನ ವರದಿಗಳ ಪ್ರಕಾರ, ಇಬ್ಬರೂ ಈ ವರ್ಷದ ದ್ವಿತೀಯಾರ್ಧದಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡುತ್ತಿದ್ದಾರೆ. ಅಲ್ಲದೇ, ಶೀಘ್ರದಲ್ಲೇ ಎರಡೂ ಕುಟುಂಬಗಳಿಂದ ಅಧಿಕೃತ ಘೋಷಣೆ ಬರುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಹರಡಿವೆ. ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹೊಸದೇನಲ್ಲ.

ಕಳೆದ ವರ್ಷ ಜೂನ್‌ನಿಂದ ಎಕ್ಸ್ ಮತ್ತು ರೆಡ್ಡಿಟ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇಬ್ಬರ ಡೇಟಿಂಗ್ ವದಂತಿಗಳು ಹರಿದಾಡುತ್ತಿವೆ. ಲಾಸ್ ವೇಗಸ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಅಲ್ಲಿ ಅವರು ಡಿನ್ನರ್ ಡೇಟ್‌ಗಳನ್ನು ಆನಂದಿಸುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಇದಲ್ಲದೇ, ಕಾವ್ಯಾ ಮಾರನ್ ಅವರ ತಂದೆ ಮತ್ತು ಮಾಧ್ಯಮ ದೊರೆ ಕಲಾನಿಧಿ ಮಾರನ್ ಒಡೆತನದ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅನಿರುದ್ಧ್ ಹಲವಾರು ದೊಡ್ಡ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದಾರೆ. ವದಂತಿಗೆ ಇದು ಹೆಚ್ಚಿನ ಬಲವನ್ನು ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಸುದ್ದಿಯೆಂದರೆ ಅನಿರುದ್ಧ್ ರವಿಚಂದರ್ ಅವರ ಸಂಬಂಧಿ, ಸೂಪರ್‌ಸ್ಟಾರ್ ರಜನಿಕಾಂತ್ ಅವರು ಈ ಮದುವೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ. ರಜನಿಕಾಂತ್ ಅವರೇ ಕಲಾನಿಧಿ ಮಾರನ್ ಅವರೊಂದಿಗೆ ಮಾತನಾಡಿ ಈ ಜೋಡಿಯನ್ನು ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ ಮತ್ತು ಎರಡೂ ಕಡೆಯ ಹಿರಿಯರು ಮದುವೆಗೆ ಬಹುತೇಕ ಹಸಿರು ನಿಶಾನೆ ತೋರಿಸಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಆದಾಗ್ಯೂ, ಈ ಕುಟುಂಬಗಳ ಸದಸ್ಯರು ಈ ವಿಷಯಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ಕನ್ನಡದಲ್ಲಿ ಯಾವ ಮ್ಯೂಸಿಕ್ ಡೈರೆಕ್ಟರ್​ಗಳೂ ಕೇಳದಷ್ಟು ಸಂಭಾವನೆ ಪಡೆದ ಅನಿರುದ್ಧ್ ರವಿಚಂದರ್

ಪ್ರಸ್ತುತ, ಕಾವ್ಯಾ ಮತ್ತು ಅನಿರುದ್ಧ್ ಅವರು ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಅನಿರುದ್ಧ್ ಅವರು ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ‘ಜೈಲರ್ 2’, ‘ಜನ ನಾಯಗನ್’, ‘ಕಿಂಗ್’ ರೀತಿಯ ದೊಡ್ಡ ಚಿತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಕಾವ್ಯಾ ಮಾರನ್ ಅವರು ಉದ್ಯಮಿಯಾಗಿ ಬ್ಯುಸಿಯಾಗಿದ್ದಾರೆ. ಇವರ ಮದುವೆಯ ಗಾಸಿಪ್ ನಿಜವಾಗುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಡ್ಗಿ ಆಯಸ್ಸು ಗಟ್ಟಿ: ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯ ರಕ್ಷಣೆ, ಪೊಲೀಸ್- ಅಗ್ನಿ ಶಾಮಕ ಸಿಬ್ಬಂದಿಗೆ ಸೆಲ್ಯೂಟ್ – Kannada News | Fire service personnel and policemen saved a 16 year old girl who jump from building in NRI Layout bengaluru

ಬೆಂಗಳೂರು, (ಮೇ 21): ಹೊಯ್ಸಳ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆ ಬಾಲಕಿ (Girl) ಜೀವ ಉಳಿದಿದೆ. ಇನ್ನೇನು ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು 16 ವರ್ಷದ ಬಾಲಕಿ ರಕ್ಷಣೆಯನ್ನು ರಕ್ಷಣೆ ಮಾಡಿಲಾಗಿದೆ. ಹೌದು…ಬೆಂಗಳೂರಿನ (Bengaluru) NRI ಲೇಔಟ್​ನ ಅಪಾರ್ಟ್​ಮೆಂಟ್​ನ 5ನೇ ಮಹಡಿ ಹತ್ತಿದ್ದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳಕ್ಕೆ ಹೊಯ್ಸಳ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಅನಾಯಸವಾಗಿ ಹೋಗುತ್ತಿದ್ದ ಒಂದು ಜೀವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಐದನೇ ಮಹಡಿ ಮೇಲೆ ಬಾಲಕಿಯನ್ನು ರಕ್ಷಿಸುತ್ತಿದ್ದಂತಯೇ ಇತ್ತ ಕೆಳಗೆ ಏನಾಗುತ್ತೋ ಎಂದು ಆತಂಕದಲ್ಲಿದ್ದ ಸಾರ್ವಜನಿಕರು ಶಿಳ್ಳೆ, ಚಪ್ಪಾಳೆ ತಟ್ಟಿ ನಿಟ್ಟುಸಿರುಬಿಟ್ಟರು.

ಮಖ್ಯಾಂಶಗಳು

  • ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ 16 ವರ್ಷದ ಬಾಲಕಿ ರಕ್ಷಣೆ
  • ಕಟ್ಟಡದ ಮೇಲಿಂದ ಜಂಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ
  • NRI ಲೇಔಟ್​ನ ಅಪಾರ್ಟ್​ಮೆಂಟ್​ನ 5ನೇ ಮಹಡಿ ಹತ್ತಿದ್ದ ಬಾಲಕಿ
  • ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಜೋರಾಗಿ ಕೂಗಿ ಹೇಳಿದ್ದ ಬಾಲಕಿ
  • ಕೂಡಲೇ 112ಗೆ ಕರೆ ಮಾಡಿದ್ದ ಮಾಹಿತಿ ನೀಡಿದ್ದ ಸಾರ್ವಜನಿಕರು
  • ಸ್ಥಳಕ್ಕೆ ಆಗಮಿಸಿದ ಹೊಯ್ಸಳ, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

16 ವರ್ಷದ ಬಾಲಕಿಯೋರ್ವಳು ಬೆಂಗಳೂರಿನ NRI ಲೇಔಟ್​ನ ಅಪಾರ್ಟ್​ಮೆಂಟ್​ನ 5ನೇ ಮಹಡಿ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಜೋರಾಗಿ ಕೂಗಿ ಹೇಳಿದ್ದಾಳೆ. ಬಾಲಕಿಯ ಧ್ವನಿ ಕೇಳುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಹೊಯ್ಸಳ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಹರಸಹಾಸೊಟ್ಟು ಬಾಲಕಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Tv9 Kannada News Live: ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ; ರಾಜ್ಯದಲ್ಲಿ ಭಾರಿ ಮಳೆ; ಈ ಹೊತ್ತಿನ ಪ್ರಮುಖ ಸುದ್ದಿಗಳು

ರಕ್ಷಣೆಯ ರೋಚಕ ವಿಡಿಯೋ ಹಂಚಿಕೊಂಡ ಪೂರ್ವ ಡಿಸಿಪಿ

ಇನ್ನು ಈ ಬಗ್ಗೆ ಬೆಂಗಳೂರಿನ ಪೂರ್ವ ಡಿಸಿಪಿ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿ ರಕ್ಷಣೆಯ ವಿಡಿಯೋ ಹಂಚಿಕೊಂಡಿದ್ದು, ಈ ದಿನ ಪೂರ್ವ ವಿಭಾಗದ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 16 ವರ್ಷದ ಯುವತಿಯೊಬ್ಬಳು 5 ಅಂತಸ್ತಿನ ಕಟ್ಟಡದ ಮೇಲಿನಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ, ರಾಮಮೂರ್ತಿನಗರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ಸಹಾಯದೊಂದಿಗೆ ಬಾಲಕಿಯನ್ನು ರಕ್ಷಿಸಿದ ಸಿಬ್ಬಂದಿ, ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಿದರು. ಆದ್ರೆ, ಬಾಲಕಿ ಏಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ಇಲ್ಲಿ  ಹೊಯ್ಸಳ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆಯನ್ನು ಮೆಚ್ಚಲೇಬೇಕು. ಯಾಕಂದ್ರೆ, ಇನ್ನೇನು ಸ್ವಲ್ಪ ತಡವಾಗಿದ್ದರೂ ಬಾಲಕಿ ಬಿದ್ದು ಜೀವ ಕಳೆದುಕೊಳ್ಳುತ್ತಿದ್ದಳು.

ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಬಾಲಕಿಯ ಜೀವ ಹೋಗಿಬಿಡೋದು. ಆದ್ರೆ, ಬಾಲಕಿಯ ಆಯಸ್ಸು ಗಟ್ಟಿ ಇದೆ ಅನ್ಸುತ್ತೆ.   ಸಾವಿನ ದವಡೆಯಿಂದ ಪಾರಾಗಿದ್ದಾಳೆ.

Published On – 6:35 pm, Thu, 21 May 26

Source link

‘ಡ್ರ್ಯಾಗನ್’ ಟೀಸರ್ ರಿಲೀಸ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ

ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸಿ ಜೂ ಎನ್​​ಟಿಆರ್ ನಟಿಸಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಖತ್ ಮಾಸ್ ಆಗಿರುವ ಟೀಸರ್​​ನಲ್ಲಿ ಜೂ ಎನ್​​ಟಿಆರ್ ಸಖತ್ ಆಗಿ ಮಿಂಚಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಟೀಸರ್ ಅನ್ನು ವಿಶೇಷವಾಗಿ ಪ್ರೀಮಿಯರ್ ಮಾಡಲಾಗಿದೆ. ಪ್ರಶಾಂತ್ ನೀಲ್ ಅವರ ಪತ್ನಿ ಲಿಖಿತಾ ರೆಡ್ಡಿ, ಜೂ ಎನ್​​ಟಿಆರ್ ಅವರ ಅಪ್ಪಟ ಅಭಿಮಾನಿ. ಲಿಖಿತಾ ರೆಡ್ಡಿ ಅವರು ಖುದ್ದು ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳೊಟ್ಟಿಗೆ ಟೀಸರ್ ವೀಕ್ಷಿಸಿದ್ದಲ್ಲದೆ, ಜೂ ಎನ್​​ಟಿಆರ್ ಗೆ ಜೈಕಾರಗಳನ್ನು ಹಾಕಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

FIFA ವಿಶ್ವಕಪ್ 2026 ರ ಬಹುಮಾನ ಪ್ರಕಟ: ವಿಜೇತರಿಗೆ 481 ಕೋಟಿ..! ಉಳಿದವರಿಗೆ? – Kannada News | ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2026 FIFA World Cup 2026: New Format, Hosts, and Record Prize Money Revealed!

2026 ರ ಫಿಫಾ ವಿಶ್ವಕಪ್ (FIFA World Cup 2026) ಇದೇ ಜೂನ್ 11, 2026 ರಿಂದ ಜುಲೈ 19, 2026 ರವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಮೂರು ದೇಶಗಳು ಜಂಟಿಯಾಗಿ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ. ಈ ಪಂದ್ಯಾವಳಿ ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿದೆ. ಅದರಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 11, ಮೆಕ್ಸಿಕೊದಲ್ಲಿ ಮೂರು ಮತ್ತು ಕೆನಡಾದಲ್ಲಿ ಎರಡು ಸೇರಿದಂತೆ ಒಟ್ಟು 16 ನಗರಗಳು ಪಂದ್ಯಗಳನ್ನು ಆಯೋಜಿಸುತ್ತವೆ. ಫೈನಲ್ ಪಂದ್ಯವು ಜುಲೈ 19, 2026 ರಂದು ನ್ಯೂಯಾರ್ಕ್-ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಬಾರಿಯ ವಿಶೇಷವೇನು?

ಈ ಬಾರಿಯ ಫಿಫಾ ವಿಶ್ವಕಪ್​ನ ವಿಶೇಷತೆ ಏನೆಂದರೆ, ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 32 ತಂಡಗಳು ಭಾಗವಹಿಸುತ್ತಿದ್ದ ಈ ಪಂದ್ಯಾವಳಿಯಲ್ಲಿ ಈ ಬಾರಿ 48 ತಂಡಗಳು ಕಣಕ್ಕಿಳಿಯಲಿವೆ. ಇದರ ಜೊತೆಗೆ ಸ್ವರೂಪವನ್ನು ಸಹ ಬದಲಾಯಿಸಲಾಗಿದೆ. 48 ತಂಡಗಳನ್ನು ತಲಾ 4 ತಂಡಗಳ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು, ಜೊತೆಗೆ ಮೂರನೇ ಸ್ಥಾನ ಪಡೆದ ಎಂಟು ಅತ್ಯುತ್ತಮ ತಂಡಗಳು 32 ರ ಸುತ್ತಿಗೆ ಮುನ್ನಡೆಯುತ್ತವೆ. ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.

ಬಹುಮಾನದ ಮೊತ್ತದಲ್ಲಿ ದಾಖಲೆಯ ಏರಿಕೆ

ಈ ವರ್ಷ ಫಿಫಾ ಬಹುಮಾನದ ಹಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಒಟ್ಟು US$655 ಮಿಲಿಯನ್ (ಸುಮಾರು 6300 ಕೋಟಿ ರೂ.) ಮೊತ್ತವನ್ನು 48 ತಂಡಗಳ ನಡುವೆ ಹಂಚಲಾಗುತ್ತದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಬಹುಮಾನದ ಮೊತ್ತದಲ್ಲಿ ಸುಮಾರು 50% ಹೆಚ್ಚಳವಾಗಿದೆ.

ಯಾವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ?

  • ಚಾಂಪಿಯನ್ ತಂಡ: ಸುಮಾರು 481 ಕೋಟಿ ರೂ.
  • ರನ್ನರ್ ಅಪ್: ಸುಮಾರು 317 ಕೋಟಿ ರೂ.
  • 3ನೇ ಸ್ಥಾನ: ಸುಮಾರು 279 ಕೋಟಿ ರೂ.
  • 4ನೇ ಸ್ಥಾನ: ಸುಮಾರು 259 ಕೋಟಿ ರೂ.
  • 5 ರಿಂದ 8 ನೇ ಶ್ರೇಯಾಂಕಿತ ತಂಡಗಳು: ಸುಮಾರು 182 ಕೋಟಿ ರೂ.
  • 9 ರಿಂದ 16 ನೇ ಸ್ಥಾನದಲ್ಲಿರುವ ತಂಡಗಳು: ಸುಮಾರು 144 ಕೋಟಿ ರೂ.
  • 17 ರಿಂದ 32 ನೇ ಸ್ಥಾನದಲ್ಲಿರುವ ತಂಡಗಳು: ಸುಮಾರು 105 ಕೋಟಿ ರೂ.
  • 33 ರಿಂದ 48 ನೇ ಸ್ಥಾನ: ಸುಮಾರು 86 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ; ರಾಜ್ಯದಲ್ಲಿ ಭಾರಿ ಮಳೆ; ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | Tv9 Kannada News Live: Bengaluru Airport Air India Tail Strike; Karnataka Rain Alert

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 21: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಬಂದ ಏರ್ ಇಂಡಿಯಾ ವಿಮಾನವೊಂದು (Air India Flight) ಲ್ಯಾಂಡಿಂಗ್​​ ವೇಳೆ ಅವರ ಹಿಂಭಾಗ ರನ್​ವೇಗೆ ಅಪ್ಪಳಿಸಿದ ಘಟನೆ ಇಂದು ನಡೆದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ವರದಿ ಆಗಿದೆ. ಸದ್ಯ 181 ಪ್ರಯಾಣಿಕರು ಸೇರಿದಂತೆ ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಂತ್ರಿಕ ಸಮಸ್ಯೆಯಾ ಅಥವಾ ಪೈಲಟ್​​ಗಳ ಎಡವಟ್ಟಾ ಎಂದು ತಿಳಿಯಲು ಡಿಜಿಸಿಎ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಲಾಗಿದೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಮುಖ್ಯಾಂಶಗಳು

  • ಲ್ಯಾಂಡಿಂಗ್​​ ವೇಳೆ ನೆಲಕ್ಕಪ್ಪಳಿಸಿದ ಏರ್​ಇಂಡಿಯಾ ವಿಮಾನದ ಹಿಂಭಾಗ
  • ರಾಜ್ಯದಲ್ಲಿ ಭಾರಿ ಮಳೆ ಎಂದ ಹವಾಮಾನ ಇಲಾಖೆ
  • ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿದ ಪಾಪರಾಜಿಗಳು
  • ಇಂಗ್ಲೆಂಡ್ ವೇಗಿ ರಿಚರ್ಡ್ ಗ್ಲೀಸನ್ ಆರ್‌ಸಿಬಿಗೆ ಸೇರ್ಪಡೆ

ಕರ್ನಾಟಕದಲ್ಲಿ ಭಾರಿ ಮಳೆ: ಹವಾಮಾನ ಇಲಾಖೆಯಿಂದ ಅಲರ್ಟ್!

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಮೇ 26ರ ವೇಳೆಗೆ ಕೇರಳ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಗುಡುಗು, ಮಿಂಚು ಹಾಗೂ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಶಾಂಗ್ರಿಲಾ ಹೋಟೆಲ್​ಗೆ

ಮುನ್ನೆಚ್ಚರಿಕೆ ಕ್ರಮವಾಗಿ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದೆ. ರಾಜಧಾನಿ ಬೆಂಗಳೂರು, ಮಂಡ್ಯ, ಕೋಲಾರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

‘ಸಾರಿ ಭಾಯ್, ಕ್ಷಮಿಸಿ’: ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿದ ಪಾಪರಾಜಿಗಳು

ಮುಂಬೈನ ಆಸ್ಪತ್ರೆಯೊಂದರ ಹೊರಗಡೆ ತಮ್ಮ ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳ ವರ್ತನೆಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತೀವ್ರ ಆಕ್ರೋಶ ಹೊರಹಾಕಿದ್ದರು. ಆದರೆ, ಈ ಘಟನೆ ಬಳಿಕ ಅಂದರೆ ಮರುದಿನವೇ ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿ ಪಾಪರಾಜಿಗಳು ರಾಜಿ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ಮುಂಬೈನಲ್ಲಿ ನಡೆದ ‘ರಾಜಾ ಶಿವಾಜಿ’ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದರು.

ಇದನ್ನೂ ಓದಿ: ನಟಿ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು; ಚಿತ್ರರಂಗ ತೊರೆಯಲು ಅಸಲಿ ಕಾರಣ ಇಲ್ಲಿದೆ

ಈ ಚಿತ್ರದಲ್ಲಿ ಸಲ್ಮಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕ ಹಾಗೂ ನಿರ್ದೇಶಕ ರಿತೇಶ್ ದೇಶ್‌ಮುಖ್ ಜೊತೆಗೆ ಸಲ್ಮಾನ್ ಹೊರಬರುತ್ತಿದ್ದಂತೆ, ಅಲ್ಲಿದ್ದ ಪಾಪರಾಜಿಗಳು ಒಟ್ಟಿಗೆ “ನಮ್ಮನ್ನು ಕ್ಷಮಿಸಿ ಭಾಯ್, ಸಾರಿ” ಎಂದು ಹೇಳಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಆರ್‌ಸಿಬಿ ತಂಡ ಸೇರಿದ ಇಂಗ್ಲೆಂಡ್ ವೇಗಿ ರಿಚರ್ಡ್ ಗ್ಲೀಸನ್

ಐಪಿಎಲ್ 2026ರ ಟೂರ್ನಿಯ ಮಧ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ವೇಗಿಯೊಬ್ಬರ ಎಂಟ್ರಿಯಾಗಿದೆ. ಇಂಗ್ಲೆಂಡ್ ತಂಡದ ಅನುಭವಿ ಬಲಗೈ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಅವರು ಅಧಿಕೃತವಾಗಿ ಆರ್‌ಸಿಬಿ ಪಡೆಗೆ ಸೇರಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪ್ರಮುಖ ವೇಗದ ಬೌಲರ್ ಒಬ್ಬರು ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನವನ್ನು ತುಂಬಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಇಂಗ್ಲೆಂಡ್‌ನ ರಿಚರ್ಡ್ ಗ್ಲೀಸನ್​​ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:01 pm, Thu, 21 May 26

Source link

‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ

ರಣ್ವೀರ್ ಸಿಂಗ್ (Ranveer Singh) ನಟಿಸಿರುವ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತದ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿವೆ. ಎರಡೂ ಸಿನಿಮಾಗಳು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 3000 ಕೋಟಿಗೂ ದೊಡ್ಡ ಮೊತ್ತ ಗಳಿಕೆ ಮಾಡಿವೆ. ಆದರೆ ಸಿನಿಮಾ ಹಿಟ್ ಆದ ಬಳಿಕ ಕೆಲವರು ಸಿನಿಮಾದ ವಿರುದ್ಧ ಒಂದಲ್ಲ ಒಂದು ಆರೋಪಗಳನ್ನು, ಪ್ರಕರಣಗಳನ್ನು ದಾಖಲಿಸುತ್ತಲೇ ಇದ್ದಾರೆ. ಇದೀಗ ಸಿನಿಮಾದ ವಿರುದ್ಧ ಗುರುತರ ಆರೋಪ ಒಂದನ್ನು ಮಾಡಲಾಗಿದೆ. ‘ಧುರಂಧರ್’ ಸಿನಿಮಾ ಭಾರತದ ಭದ್ರತೆಗೆ ತೊಂದರೆ ಆಗುವಂಥಹಾ ದೃಶ್ಯಗಳನ್ನು ತೋರಿಸಿದೆ ಎಂದು ಆರೋಪಿಸಲಾಗಿದೆ. ಪ್ರಕರಣದ ಪೂರ್ಣ ಮಾಹಿತಿ ತಿಳಿಯಲು ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ: ಕಾರಣ? – Kannada News | Rajinikanth starrer Jailer 2 movie release date postpone

ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಸಿನಿಮಾದ ಮೊದಲ ಭಾಗ ದೊಡ್ಡ ಹಿಟ್ ಆಗಿತ್ತು. ನಿರ್ದೇಶಕ ನೆಲ್ಸನ್, ರಜನೀಕಾಂತ್ ಅವರ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರನ್ನು ಒಟ್ಟಿಗೆ ಕರೆ ತಂದು ಒಳ್ಳೆಯ ಮಾಸ್ ಸಿನಿಮಾವನ್ನು ನೀಡಿದ್ದರು. ಇದೇ ಕಾರಣಕ್ಕೆ ‘ಜೈಲರ್ 2’ ಸಿನಿಮಾದ ಬಗ್ಗೆಯೂ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಈ ಹಿಂದೆ ‘ಜೈಲರ್ 2’ ಸಿನಿಮಾ ಜೂನ್ 12 ರಂದು ಬಿಡುಗಡೆ ಆಗಲಿದೆ ಎಂದು ಸುದ್ದಿ ಹರಡಿತ್ತು. ಆದರೆ ಇದೀಗ ಹಠಾತ್ತನೆ ಸಿನಿಮಾದ ಬಿಡುಗಡೆ ದಿನಾಂಕ ಬದಲಾಯಿಸಲಾಗಿದೆ.

ಇತ್ತೀಚೆಗಷ್ಟೆ ಸಿನಿಮಾದ ಸೆಟ್​​ನಲ್ಲಿ ಅವಘಡ ನಡೆದ ಸುದ್ದಿ ಹೊರಬಿತ್ತು. ‘ಜೈಲರ್ 2’ ಸಿನಿಮಾದ ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ವ್ಯಕ್ತಿಯೊಬ್ಬ ನಿಧನ ಹೊಂದಿದ್ದ. ಅದರ ಬೆನ್ನಲ್ಲೆ ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದ ಸುದ್ದಿ ಹೊರಬಿದ್ದಿದೆ. ಈಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಜೂನ್ 12 ರಂದು ಬಿಡುಗಡೆ ಆಗಬೇಕಿದ್ದ ‘ಜೈಲರ್ 2’ ಸಿನಿಮಾ ಸೆಪ್ಟೆಂಬರ್ 11 ರಂದು ಬಿಡುಗಡೆ ಆಗಲಿದೆ. ಆದರೆ ಇದು ಸಿನಿಮಾದ ಒಳಿತಿಗಾಗಿ ತೆಗೆದುಕೊಳ್ಳಲಾಗಿರುವ ನಿರ್ಣಯ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಲನ್ ಈ ನಟ

ಸೆಪ್ಟೆಂಬರ್ 14 ರ ಸೋಮವಾರ ಬರುವ ಗಣೇಶ ಚತುರ್ಥಿ ಹಬ್ಬದ ರಜಾದಿನಗಳ ಲಾಭವನ್ನು ಪಡೆಯಲೆಂದು ‘ಜೈಲರ್ 2’ ಸಿನಿಮಾವನ್ನು ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಲಾಗುತ್ತಿದೆ. ಹಬ್ಬ ಇರುವ ಕಾರಣ ಸತತ 4 ದಿನಗಳ ಲಾಂಗ್ ವೀಕೆಂಡ್ ಸಿಗಲಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಗಣೇಶ ಹಬ್ಬದ ಸಾರ್ವಜನಿಕ ರಜೆ ಇರುವುದರಿಂದ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಮಾಡಲು ಇದು ಸಹಕಾರಿಯಾಗಲಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಅವರು ಮತ್ತೊಮ್ಮೆ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. 2023 ರ ಬ್ಲಾಕ್‌ಬಸ್ಟರ್ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸೀಕ್ವೆಲ್‌ನಲ್ಲಿ ದೊಡ್ಡ ತಾರಾಬಳಗವೇ ಇದೆ. ಮೊದಲ ಭಾಗದಲ್ಲಿದ್ದ ಶಿವರಾಜ್‌ಕುಮಾರ್ ಮತ್ತು ಮೋಹನ್‌ಲಾಲ್ ಈ ಚಿತ್ರದಲ್ಲೂ ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ. ಇವರ ಜೊತೆಗೆ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಮತ್ತು ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ. ಸಿನಿಮಾನಲ್ಲಿ ಶಾರುಖ್ ಖಾನ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಸುದ್ದಿ ಖಾತ್ರಿ ಆಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link