Video: ಅಜ್ಜ-ಅಜ್ಜಿ ಜತೆ ಬೈಕ್ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ – Kannada News | CCTV Captures Alleged Daylight Abduction of Child in Mohali
ಮೊಹಾಲಿ, ಮೇ 21: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಕುರಾಲಿಯಲ್ಲಿ ಇಡೀ ಸಮಾಜವೇ ಬೆಚ್ಚಿಬೀಳುವಂತಹ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಾಲ್ಕೂವರೆ ವರ್ಷದ ಹೆಣ್ಣು ಮಗುವನ್ನು ಹಗಲು ಹೊತ್ತಿನಲ್ಲೇ ನಡುರಸ್ತೆಯಲ್ಲಿ ಅಪಹರಿಸಲಾಗಿದೆ. ಈ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ. ವರದಿಗಳ ಪ್ರಕಾರ, ಮಗು ತನ್ನ ಅಜ್ಜ-ಅಜ್ಜಿಯೊಂದಿಗೆ ಬೈಕ್ನಲ್ಲಿ ಮನೆಯ ಸಮೀಪ ಬಂದಿದೆ. ಅಜ್ಜಿ ಬೈಕ್ನಿಂದ ಇಳಿದು ಮನೆಯ ಗೇಟ್ ತೆರೆಯಲು ಹೋಗಿದ್ದಾರೆ, ಆಗ ದುಷ್ಕರ್ಮಿಗಳು ಮಗುವನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಕಾರಿನೊಳಗೆ ತಳ್ಳಿದ್ದಾರೆ. ಕಣ್ಣೆದುರೇ…