Headlines

nagaraj11081993

ಸಿಎಸ್​​ಕೆ ವಿರುದ್ಧ ದಾವೆ ಹೂಡಿದ ‘ಜೈಲರ್’ ನಿರ್ಮಾಪಕ, ಕಾರಣವೇನು?

ಭಾರತದಲ್ಲಿ ಕ್ರಿಕೆಟ್, ಸಿನಿಮಾ (Cinema) ಮತ್ತು ರಾಜಕೀಯ ಜೊತೆ-ಜೊತೆಯಾಗಿ ಸಾಗುತ್ತವೆ. ಅದರಲ್ಲೂ ಕ್ರಿಕೆಟ್ ಮತ್ತು ಸಿನಿಮಾಗಳು ಬಲು ಆಪ್ತ ನಂಟು ಹೊಂದಿವೆ. ಆದರೆ ಇನ್ನೇಣು ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ದಕ್ಷಿಣ ಭಾರತದ ಇಬ್ಬರು ದೈತ್ಯರ ನಡುವೆ ಕಾನೂನು ಸಮರ ಏರ್ಪಟ್ಟಿದೆ. ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಸನ್ ಪಿಕ್ಚರ್ಸ್​​ನವರು ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೂರು ದಾಖಲಿಸಿದೆ. ಇದಕ್ಕೆ ಕಾರಣವಾಗಿರುವುದು ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ….

Read More

ಕೊಪ್ಪಳದ ಗವಿಮಠ ದಾಸೋಹಕ್ಕೆ ತಟ್ಟದ ಗ್ಯಾಸ್​ ಸಿಲಿಂಡರ್ ಎಫೆಕ್ಟ್: ಏಕೆ ಗೊತ್ತಾ?

ಕೊಪ್ಪಳ, ಮಾರ್ಚ್​​ 15: ಎಲ್‌ಪಿಜಿ ಬಿಕ್ಕಟ್ಟು ಇಡೀ ರಾಜ್ಯವನ್ನು ಕಾಡುತ್ತಿರುವ ಮಧ್ಯೆ ಕೊಪ್ಪಳದ ಗವಿಮಠ ಒಂದು ವಿಶಿಷ್ಟ ಪರಿಹಾರದೊಂದಿಗೆ ಮಾದರಿಯಾಗಿ ನಿಂತಿದೆ. ಗವಿಮಠದಲ್ಲಿ ಎಂದಿನಂತೆ ಅನ್ನಪ್ರಸಾದ ಸೇವೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಇಲ್ಲಿ ಶೇಕಡ 90ರಷ್ಟು ಅಡುಗೆಯನ್ನು ಸೌದೆ ಒಲೆಯಲ್ಲೇ ತಯಾರಿಸಲಾಗುತ್ತದೆ. ಪ್ರತಿದಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಸೌದೆ ಒಲೆಯಲ್ಲಿಯೇ ಸಿದ್ಧಪಡಿಸಲಾಗುತ್ತದೆ. ಮಠದಲ್ಲಿ ಪ್ರತಿ ತಿಂಗಳು ಸುಮಾರು 10 ರಿಂದ 12 ಟ್ರ್ಯಾಕ್ಟರ್ ಸೌದೆಯನ್ನು ಅಡುಗೆಗಾಗಿ ಬಳಸಲಾಗುತ್ತದೆ. ಇದರಿಂದಾಗಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆ…

Read More

ಕೋಲಾರ: ಹೋಟೆಲ್​, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್​ ವಶಕ್ಕೆ

ಕೋಲಾರ, ಮಾರ್ಚ್​​ 15: ಗ್ಯಾಸ್​ ಸಿಲಿಂಡರ್​ (LPG Cylinder) ಹೊಡೆತಕ್ಕೆ ಕೇವಲ ಉದ್ಯಮಗಳು ಮಾತ್ರವಲ್ಲ, ಜನಸಾಮಾನ್ಯರು ಕೂಡ ತತ್ತರಿಸಿ ಹೋಗಿದ್ದಾರೆ. ಖಾಲಿ ಗ್ಯಾಸ್​​ ಹಿಡಿದು ಜನರು ಏಜೆನ್ಸಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್​ಗಳನ್ನು ಪೂರೈಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ. ಈ ಮಧ್ಯೆ ನಗದರಲ್ಲಿ ಹೋಟೆಲ್​, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್​ಗಳನ್ನು ತಹಶೀಲ್ದಾರ್ ವಶಕ್ಕೆ ಪಡೆದಿದ್ದಾರೆ. ತಹಶೀಲ್ದಾರ್ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. 2…

Read More

NHPC Recruitment 2026: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಎಂಜಿನಿಯರಿಂಗ್ ಪದವೀಧರರಿಗೆ ಸುವರ್ಣಾವಕಾಶ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಎಂಜಿನಿಯರಿಂಗ್ ಪದವೀಧರರಿಗೆ ಸುವರ್ಣಾವಕಾಶ. ರಾಷ್ಟ್ರೀಯ ಜಲ ವಿದ್ಯುತ್ ನಿಗಮ (NHPC) ತನ್ನ ಅಧಿಕೃತ ಅಧಿಸೂಚನೆಯ ಮೂಲಕ 81 ‘ಟ್ರೈನಿ ಎಂಜಿನಿಯರ್’ (Trainee Engineer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಏಪ್ರಿಲ್ 06 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಿವಿಲ್, ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ BE, B.Tech ಅಥವಾ B.Sc ಪದವಿ ಪೂರೈಸಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಗರಿಷ್ಠ…

Read More

ಐದು ರಾಜ್ಯಗಳ ಚುನಾವಣೆ: ಏಪ್ರಿಲ್ 9ರಿಂದ 29ರವರೆಗೂ ಮತದಾನ; ಚುನಾವಣಾ ಆಯುಕ್ತ ಘೋಷಣೆ

ನವದೆಹಲಿ, ಮಾರ್ಚ್ 15: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಮ್ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಿಂದ 29ರವರೆಗೂ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ನಾಲ್ಕು ಕಡೆ ಒಂದೇ ಹಂತದಲ್ಲಿ ಮತದಾನವಾಗಲಿದೆ. ಚುನಾವಣೆ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ದಿನಾಂಕಗಳನ್ನು ಪ್ರಕಟಿಸಿದರು. ಇದರೊಂದಿಗೆ ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರುತ್ತದೆ. ಅಸ್ಸಾಮ್,…

Read More

ಕಿಮ್ಸ್​​ ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಗಂಭೀರ ಗಾಯಗೊಂಡಿದ್ದ ಯುವಕ ಸಾವು

ಹುಬ್ಬಳ್ಳಿ, ಮಾರ್ಚ್​​ 15: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಕಿಮ್ಸ್​​ ಸಿಬ್ಬಂದಿ ಬೇಜವಾಬ್ದಾರಿ ತೋರಿರುವ ಕಾರಣ ಆತ ಬ್ರೈನ್​ ಡೆಡ್​​ ಆಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಧಾರವಾಡದ ತಾಲೂಕಿನ ಮೊರಬ ಗ್ರಾಮದ ನಿವಾಸಿ ಪ್ರಕಾಶ್ (25) ಮೃತರಾಗಿದ್ದು, ಜೆಸಿಬಿ ಚಾಲಕನಾಗಿ ಇವರು ಕೆಲಸಮಾಡಿಕೊಂಡಿದ್ದರು. ಮಾರ್ಚ್ 13ರಂದು ಕೆಲಸ ಮುಗಿಸಿ ಬೈಕ್​ನಲ್ಲಿ ತಮ್ಮೂರಿಗೆ ಹೋಗುತ್ತಿದ್ದ ವೇಳೆ ಯಾವುದೋ ಅಪರಿಚಿತವಾಹನ ಡಿಕ್ಕಿಯಾಗಿ ಪ್ರಕಾಶ್​​ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ್ಯಂಬುಲೆನ್ಸ್​ ಮೂಲಕ ಕೂಡಲೇ ಅವರನ್ನು…

Read More

ಶಾಸಕ ಯತ್ನಾಳ್​​ ಪುತ್ರನ ಆರತಕ್ಷತೆಯಲ್ಲಿ ಜನವೋ ಜನ!: ವಿವಿಧ ಗಣ್ಯರು, ಮಠಾಧೀಶರು ಭಾಗಿ

ವಿಜಯಪುರ, ಮಾರ್ಚ್​​ 15: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ರ ರಾಮನಗೌಡ ಅವರ ಅದ್ದೂರಿ ವಿವಾಹ ಆರತಕ್ಷತೆ ಕಾರ್ಯಕ್ರಮವು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ರಾಮನಗೌಡ ಹಾಗೂ ಅಬೋಲಿ ಅವರ ವಿವಾಹೋತ್ಸವದ ಆರತಕ್ಷತೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿ ನೂತನ ದಂಪತಿಗಳನ್ನು ಶುಭ ಹಾರೈಸಿದ್ದಾರೆ. ಮಂತ್ರ-ಘೋಷಗಳ ಮಧ್ಯೆ ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ಅವರ ನೃತ್ಯ ವಿಶೇಷವಾಗಿತ್ತು….

Read More

ಬೇಸಿಗೆಯಲ್ಲಿ ಕಾಡುವ ಆಯಾಸ, ನಿರ್ಜಲೀಕರಣವನ್ನು ದೂರ ಮಾಡಲು ಸೇವಿಸಲೇಬೇಕಾದ ಆಹಾರಗಳು

ಈ ಸುಡು ಬೇಸಿಗೆಯಲ್ಲಿ (summer) ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಆಯಾಸ, ಸುಸ್ತು, ನಿರ್ಜಲೀಕರಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ  ಈ ಸಮಯದಲ್ಲಿ ದೇಹವನ್ನು ಹೈಡ್ರೇಟ್‌ ಆಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕಾಗಿ ಸಾಕಷ್ಟು ನೀರು ಕುಡಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ಆದರೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿದರೂ ಬಿರು ಬೇಸಿಗೆಯಲ್ಲಿ ದೇಹ ಹೆಚ್ಚು ಬೆವರುವ ಕಾರಣ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಗಟ್ಟಲು…

Read More

Salary Hike: ಸರ್ಕಾರಿ ಉದ್ಯೋಗಿಗಳಿಗೆ ಶೇ 35ರಷ್ಟು ವೇತನ ಏರಿಕೆಯಾ?

ನವದೆಹಲಿ, ಮಾರ್ಚ್ 15: ಏಳನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31ಕ್ಕೆ ಮುಗಿದಿದೆ. ಎಂಟನೇ ವೇತನ ಆಯೋಗ ಜಾರಿಗೆ ಬರುತ್ತಿದೆ. ಎಂಟನೇ ವೇತನ ಆಯೋಗವು ಕೋಟ್ಯಂತರ ಸರ್ಕಾರಿ ನೌಕರರು ಮತ್ತು ನಿವೃತ್ತರಿಗೆ ಸಂಬಳ, ಪಿಂಚಣಿ, ಭತ್ಯೆಗಳನ್ನು ಪರಿಷ್ಕರಿಸುವ ಕೆಲಸ ಮಾಡುತ್ತಿದೆ. ಅಧಿಸೂಚನೆಯಾಗಿ 18 ತಿಂಗಳೊಳಗೆ ಆಯೋಗವು ತನ್ನ ಈ ಜವಾಬ್ದಾರಿಯನ್ನು ಮುಗಿಸಬೇಕಿದೆ. ವೇತನ, ಪಿಂಚಣಿ ಮತ್ತು ಭತ್ಯೆ ಪರಿಷ್ಕರಣೆ ಕುರಿದಂತೆ ಉದ್ಯೋಗಿಗಳು, ಪಿಂಚಣಿದಾರು, ಉದ್ಯೋಗಿಗಳ ಒಕ್ಕೂಟಗಳು ಮತ್ತಿತರ ಭಾಗೀದಾರರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ. 2026ರ ಏಪ್ರಿಲ್…

Read More

Video: ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿ ಗೆದ್ದಂತೆ ಸಂಭ್ರಮಿಸಿದ ಮಹಿಳೆ

ಹೆತ್ತವರಿಗೆ (parents) ಮಕ್ಕಳೇ ಪ್ರಪಂಚ. ಹೀಗಾಗಿ ಮಕ್ಕಳ ಸಂತೋಷಕ್ಕಾಗಿ ತಂದೆ ತಾಯಿ ಏನನ್ನೂ ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಇತ್ತ ಮಕ್ಕಳಿಗೂ ಕೂಡ ತಮ್ಮ ಹೆತ್ತವರ ಮೊಗದಲ್ಲಿನ ಖುಷಿ, ಸಂತೋಷ ಕಂಡು ಖುಷಿ ಪಡುತ್ತಾರೆ. ಇಲ್ಲೊಬ್ಬಳು ಮಗಳು ತನ್ನ ತಾಯಿಯ (mother) ಖುಷಿಯನ್ನು ಕಣ್ತುಂಬಿಸಿಕೊಂಡಿದ್ದಾಳೆ. ಮಹಿಳೆಯೊಬ್ಬಳು ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿದ್ದು, ಆಕೆಯ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಮಗಳ ಮುಂದೆ ತನ್ನ ಖುಷಿಯನ್ನು ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ…

Read More