ಸಿಲಿಕಾನ್ ಸಿಟಿ ಜನರೇ ಎಚ್ಚರ: ಬೆಂಗಳೂರಲ್ಲಿ ತಾಪಮಾನ ಏರಿಕೆ; ಬಿಸಿಲಿನಿಂದ ರಕ್ಷಣೆಗೆ ಆರೋಗ್ಯ ಇಲಾಖೆ ಸೂಚನೆ
ಬೆಂಗಳೂರು, ಮಾರ್ಚ್ 14: ರಾಜ್ಯದಲ್ಲಿ ಈ ವರ್ಷದ ಬೇಸಿಗೆ ಕಾಲ ಆರಂಭವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಜನರಿಗೆ ಬಿಸಿಲು (Heatwave) ಕಾಡೋದಕ್ಕೆ ಶುರುವಾಗಿದೆ. ಹೇಗೋ ಬಿಸಿಲನ್ನು ತಡೆದುಕೊಂಡು ಇರುವ ಜನರಿಗೆ ಮುಂದಿನ ದಿನದಲ್ಲಿ ಸೂರ್ಯ ಮತಷ್ಟು ಸುಡಲಿದ್ದಾನೆ. ಹೀಗಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಕೂಡ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನದ ಅಲರ್ಟ್ ಈಗಾಗಲೇ ಬೇಸಿಗೆ ಶುರುವಾಗಿದೆ. ದಿನನಿತ್ಯ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಮನೆಗಳಲ್ಲಿ,…