ಜನ್ಮದಿನದಂದೇ ಜೂನಿಯರ್ ಎನ್ಟಿಆರ್ ಗುಡ್ ನ್ಯೂಸ್; ಮನೆಗೆ ಬಂದ ಹೊಸ ಅತಿಥಿಗಳು – Kannada News | Junior NTR’s Birthday Good News: Welcomes New Pets Asahi and Yuhi, Japan Connection
ಟಾಲಿವುಡ್ ಸ್ಟಾರ್ ಜೂನಿಯರ್ ಎನ್ಟಿಆರ್ ತಮ್ಮ 43ನೇ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದ ನಟ, ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಜೂನಿಯರ್ ಎನ್ಟಿಆರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಎರಡು ಸಾಕು ಗಿಳಿಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಹಕ್ಕಿಗಳಿಗೆ ‘ಅಸಾಹಿ’ ಮತ್ತು ‘ಯೂಹಿ’ ಎಂದು ನಾಮಕರಣ ಮಾಡಲಾಗಿದ್ದು, ಇವುಗಳ ಹೆಸರಿನ ಹಿಂದೆ ಒಂದು ವಿಶೇಷವಾದ ಜಪಾನ್ ಕನೆಕ್ಷನ್ ಇದೆ. ‘ನನ್ನ ಮುದ್ದಿನ…