All posts by nagaraj11081993

ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ

ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ, ರಿಷ್ಮಾ ನಾಣಯ್ಯ ನಟಿಸಿರುವ ‘ಕೆಡಿ’ ಸಿನಿಮಾದ ಹಾಡು ಇಂದು (ಮಾರ್ಚ್ 14) ಅದ್ಧೂರಿಯಾಗಿ ಬಿಡುಗಡೆ ಆಗಿದೆ. ನೋರಾ ಫತೇಹಿ ಸಖತ್ ಆಗಿ ಡ್ಯಾನ್ಸ್ ಮಾಡಿರುವ ‘ಸೆರಗು ಸರ್ಸು’ ಹಾಡು ಇಂದು ಬಿಡುಗಡೆ ಆಗಿದೆ. ಹಾಡಿನ ಬಿಡುಗಡೆ ಅದ್ಧೂರಿಯಾಗಿ ನಡೆದಿದ್ದು, ಸಿನಿಮಾದ ನಟರು, ಪ್ರಮುಖ ತಂತ್ರಜ್ಞರು ಭಾಗಿ ಆಗಿದ್ದರು. ನಟಿ ರಕ್ಷಿತಾ ಮಾತನಾಡಿ, ತಮ್ಮ ಸಿನಿಮಾ ಪಯಣ ನೆನಪಿಸಿಕೊಂಡ ಜೊತೆಗೆ ಅರ್ಜುನ್ ಜನ್ಯ, ಇನ್ನೂ ಕೆಲವರ ಸಹಕಾರ ನೆನಪು ಮಾಡಿಕೊಂಡರು. ನೋರಾ ಫತೇಹಿಯನ್ನು ಸಹ ರಕ್ಷಿತಾ ಸಖತ್ ಆಗಿ ಕೊಂಡಾಡಿದ್ದಾರೆ ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PAK vs BAN: ರನೌಟ್ ವಿವಾದ; ಸಲ್ಮಾನ್ ಆಘಾ ವಿರುದ್ಧ ಕಠಿಣ ಕ್ರಮ ಜರುಗಿಸಿದ ಐಸಿಸಿ

ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತು. ಈ ಪಂದ್ಯ ಈ ಫಲಿತಾಂಶದಿಂದ ಸದ್ದು ಮಾಡುವುದಕ್ಕಿಂತ ಪಂದ್ಯದ ಸಮಯದಲ್ಲಿ ನಡೆದ ರನೌಟ್​ನಿಂದ ಕ್ರಿಕೆಟ್​ ಲೋಕದಲ್ಲಿ ಸಂಚಲನ ಸೃಷ್ಟಿಸಿತು. ಬಾಂಗ್ಲಾದೇಶ ಬೌಲರ್​ಗೆ ಸಹಾಯ ಮಾಡಲು ಹೋಗಿ ರನೌಟ್​ಗೆ ಬಲಿಯಾಗಿದ್ದ ಪಾಕಿಸ್ತಾನ ತಂಡದ ಸಲ್ಮಾನ್ ಅಲಿ ಆಘಾ (Salman Agha ) ಮೈದಾನದಲ್ಲಿಯೇ ತಮ್ಮ ಆಕ್ರೋಶ ಹೊರಹಾಕಿದ್ದರು. ಜೊತೆಗೆ ತಮ್ಮ ಹೆಲ್ಮೆಟ್, ಬ್ಯಾಟ್ ಮತ್ತು ಕೈ ಗ್ಲೌಸ್​ಗಳನ್ನು ನೆಲಕ್ಕೆ ಬಿಸಾಡಿ ಐಸಿಸಿ (ICC) ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಹೀಗಾಗಿ ಸಲ್ಮಾನ್ ಆಘಾಗೆ ಐಸಿಸಿಯಿಂದ ಶಿಕ್ಷೆ ಖಚಿತವಾಗಿತ್ತು. ಅದರಂತೆ ಪಂದ್ಯ ಮುಗಿದ ಒಂದು ದಿನದ ಬಳಿಕ ಐಸಿಸಿ ಸಲ್ಮಾನ್ ಆಘಾಕ್ಕೆ ಶಿಕ್ಷೆ ವಿಧಿಸಿದೆ.

ಆಘಾಗೆ 1 ಡಿಮೆರಿಂಟ್ ಅಂಕ

ಸಲ್ಮಾನ್ ಆಘಾ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿರುವುದು ಖಚಿತವಾಗಿದ್ದು, ಪಂದ್ಯದ ಮರುದಿನ, ಐಸಿಸಿ ಸಲ್ಮಾನ್ ಆಘಾಗೆ ಶಿಕ್ಷೆ ವಿಧಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಐಸಿಸಿ, ಪಂದ್ಯದ ನಂತರ ಸಲ್ಮಾನ್ ಆಘಾ, ಮ್ಯಾಚ್ ರೆಫ್ರಿ ನೀಮೂರ್ ರಶೀದ್ ರಾಹುಲ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದು, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಆದಾಗ್ಯೂ, ಐಸಿಸಿ ಆಘಾ ಅವರ ಪಂದ್ಯ ಶುಲ್ಕವನ್ನು ಕಡಿತಗೊಳಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ವಾಸ್ತವವಾಗಿ ಈ ರೀತಿಯ ನಿಯಮ ಉಲ್ಲಂಘಿಸುವವರಿಗೆ ಡಿಮೆರಿಂಟ್ ಅಂಕವನ್ನು ನೀಡುವುದರ ಜೊತೆಗೆ ಇಂತಿಷ್ಟು ಪಂದ್ಯ ಶುಲ್ಕವನ್ನು ಸಹ ದಂಡವಾಗಿ ಕಟ್ಟಿಸಲಾಗುತ್ತದೆ. ಆದರೆ ಆಘಾ ವಿಚಾರದಲ್ಲಿ ಅದು ಸಂಭವಿಸಿಲ್ಲ. ಹೀಗಾಗಿ ಆಘಾ ದಂಡದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

ಏನಿದು ವಿವಾದ?

ವಾಸ್ತವವಾಗಿ ಎರಡನೇ ಏಕದಿನ ಪಂದ್ಯದ ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್‌ ವಿಚಿತ್ರ ರನೌಟ್​ಗೆ ಸಾಕ್ಷಿಯಾಯಿತು​. ಬಾಂಗ್ಲಾದೇಶದ ಬೌಲರ್ ಮೆಹದಿ ಹಸನ್ ಎಸೆದ ಈ ಓವರ್‌ನ ನಾಲ್ಕನೇ ಚೆಂಡನ್ನು ರಿಜ್ವಾನ್ ನೇರವಾಗಿ ಬೌಲರ್ ಕಡೆಗೆ ಆಡಿದರು. ಇತ್ತ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಲ್ಮಾನ್ ಆಘಾ ರನ್​ಗಾಗಿ ತಮ್ಮ ಕ್ರೀಸ್‌ನಿಂದ ಹೊರಬಂದರಾದರೂ ಅಲ್ಲಿ ರನ್ ಇಲ್ಲದಿರುವುದನ್ನು ಗಮನಿಸಿ ಅಲ್ಲಿಯೇ ನಿಂತರು. ಅಷ್ಟರಲ್ಲಿ ರಿಜ್ವಾನ್ ಬಾರಿಸಿದ ಚೆಂಡು ಕೂಡ ಆಘಾ ಕಡೆಗೆ ಬಂತು. ಹೀಗಾಗಿ ಆಘಾ ಚೆಂಡನ್ನು ಹಿಡಿದು ಬೌಲರ್​ ಮೆಹದಿ ಹಸನ್​ಗೆ ರವಾನಿಸಲು ಪ್ರಯತ್ನಿಸಿದರು.

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೂರ್ನಮೆಂಟ್ ತಂಡ ಪ್ರಕಟಿಸಿದ ಐಸಿಸಿ

ಈ ಹಂತದಲ್ಲಿ ಚಾಣಾಕ್ಷತೆ ತೋರಿದ ಮೆಹದಿ ಹಸನ್ ಚೆಂಡನ್ನು ಹಿಡಿದು, ನೇರವಾಗಿ ಸ್ಟಂಪ್​ಗೆ ಎಸೆದರು. ಇದೆಲ್ಲ ನಡೆಯುವಾಗ ಕ್ರೀಸ್​ನಿಂದ ಹೊರಗೆ ನಿಂತಿದ್ದ ಆಘಾ, ಕ್ರೀಸ್ ಒಳಗೆ ಬರುವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಚೆಂಡನ್ನು ಸ್ಟಂಪ್​ಗೆ ಎಸೆದ ಕೂಡಲೇ ಮೆಹದಿ ಹಸನ್​ ಔಟ್​ಗಾಗಿ ಅಂಪೈರ್ ಬಳಿ ಮನವಿ ಮಾಡಲಾರಂಬಿಸಿದರು. ಇದನ್ನು ನೋಡಿ ಕಕ್ಕಾಬಿಕ್ಕಿಯಾದ ಆಘಾ, ಹಸನ್ ಜೊತೆಗೆ ವಾದಿಸಲು ಪ್ರಾರಂಭಿಸಿದರು. ಇತ್ತ ಫಿಲ್ಡ್ ಅಂಪೈರ್ ಮೂರನೇ ಅಂಪೈರ್​ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿದ ಅಂಪೈರ್, ಸಲ್ಮಾನ್ ಆಘಾ ಔಟೆಂದು ತೀರ್ಪು ನೀಡಿದರು. ಇದರಿಂದ ಇನ್ನಷ್ಟು ಕೆರಳಿದ ಆಘಾ, ತಮ್ಮ ಹೆಲ್ಮೆಟ್ ಮತ್ತು ಕೈಗವಸುಗಳನ್ನು ತೆಗೆದು ನೆಲದ ಮೇಲೆ ಎಸೆದು ಆಕ್ರೋಶ ಹೊರಹಾಕಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು

ಕೊಪ್ಪಳ, ಮಾರ್ಚ್​​ 14: ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಮೂರು ಜೋಡಿಗಳು ಮುನಿಸು ಮರೆತು ನ್ಯಾಯಾಲಯದಲ್ಲಿ ಮತ್ತೆ ಒಂದಾದ ಘಟನೆ ಗಂಗಾವತಿ ಒಂದನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ಲೋಕ​ ಅದಾಲತ್​​ನಲ್ಲಿ ನಡೆದಿದೆ. ಒಂದಾದ ಜೋಡಿಗಳಿಗೆ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್, ಗುಂಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ, ನಾಗೇಶ ಪಾಟೀಲ್ ಮೇಘಾ ಸೋಮಣ್ಣವರ ಸಮ್ಮುಖದಲ್ಲಿ ಮರು ಮದುವೆ ಮಾಡಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಡುಗಡೆ ಆಯ್ತು ‘ಕೆಡಿ’ಯ ಸೆರಗಿನ ಹಾಡು, ಹಾಟ್ ಅವತಾರದಲ್ಲಿ ನೋರಾ

ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ ಸಿನಿಮಾದ ಹೊಸ ಹಾಡೊಂದು ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಪ್ರೇಮ್ ನಿರ್ದೇಶನದ ಸಿನಿಮಾ ಎಂದರೆ ಹಾಡುಗಳು ಪಕ್ಕಾ ಸೂಪರ್ ಹಿಟ್ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ‘ಕೆಡಿ’ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಹಿಟ್ ಎನಿಸಿಕೊಂಡಿದೆ. ಇಂದು (ಮಾರ್ಚ್ 14) ‘ಕೆಡಿ’ಯ ಹೊಸ ಹಾಡು ಬಿಡುಗಡೆ ಆಗಿದೆ.

‘ಸೆರಗ ಸರ್ಸೆ’ ಎಂಬ ಈ ಹಾಡಿನ ಪ್ರೋಮೊ ಕೆಲ ದಿನಗಳ ಹಿಂದೆ ಪ್ರೇಮ್ ಹಂಚಿಕೊಂಡಿದ್ದರು. 26 ಸೆಕೆಂಡಿನ ಆ ಪ್ರೋಮೊನಲ್ಲಿ ನೋರಾ ಹಾಕಿರುವ ಸ್ಟೆಪ್ಪು ನೋಡಿಯೇ ಹಲವರು ಹಾಡಿನ ಬಿಡುಗಡೆಗೆ ಕಾಯುತ್ತಿದ್ದರು. ಅದರಂತೆ ಇಂದು ಅದ್ಧೂರಿಯಾಗಿ ಹಾಡು ಬಿಡುಗಡೆ ಆಗಿದೆ. ಪ್ರೇಮ್ ಅವರು ಹಾಡು ಬಿಡುಗಡೆಗೆ ವಿಶೇಷ ಕಾರ್ಯಕ್ರಮವನ್ನು ಸಹ ಆಯೋಜಿಸಿ, ಅದ್ಧೂರಿಯಾಗಿ ಹಾಡು ಬಿಡುಗಡೆ ಮಾಡಿದ್ದಾರೆ.

ಈಗ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿರುವ ‘ಸೆರಗ ಸರ್ಸೆ’ ಹಾಡು ಲಿರಿಕಲ್ ಹಾಡಾಗಿದ್ದು, ಹಾಡಿನ ವಿಡಿಯೋಗಳು ಕಡಿಮೆ ಇವೆ. ಪ್ರೋಮೊನಲ್ಲಿ ಇದ್ದಿದ್ದ ನೋರಾ, ಸೆರಗು ಸರಿಸುತ್ತಿರುವ ಸ್ಟೆಪ್ಪಿನ ಜೊತೆಗೆ ಸಂಜಯ್ ದತ್ ಅವರ ಒಂದು ಹುಕ್ ಸ್ಟೆಪ್ಪಿದೆ. ಬಿಟ್ಟರೆ ಕೇವಲ ಹಾಡಿನ ಸ್ಕ್ರೀನ್​​ ಶಾಟ್​​ಗಳನ್ನೇ ಪ್ರದರ್ಶಿಸಿ ಹಾಡು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:ಸುದೀಪ್ ಹೇಳಿಕೆಗೆ ಧ್ರುವ ಸರ್ಜಾ ನೀಡಿದ ಪ್ರತಿಕ್ರಿಯೆ ಹೇಗಿತ್ತು?

ಪ್ರೇಮ್ ಅವರು ಸಾಹಿತ್ಯ ಬರೆದಿರುವ ‘ಸೆರಗ ಸರ್ಸೆ’ ಹಾಡು ಸಾಕಷ್ಟು ದ್ವಂದ್ವಾರ್ಥಗಳನ್ನು ಒಳಗೊಂಡಿದೆ. ಎಣ್ಣೆ ಅಂಗಡಿ ಯುವತಿ ಎಣ್ಣೆಯ ಬಗ್ಗೆ ಡಬಲ್ ಮೀನಿಂಗ್ ಅಲ್ಲಿ ಹೇಳುತ್ತಿರುವ ಸಾಹಿತ್ಯವನ್ನು ಒಳಗೊಂಡಿರುವ ಹಾಡು ಇದಾಗಿದ್ದು, ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಜಯ್ ದತ್ ಅವರಿಗೆ ‘ಖಳನಾಯಕ್’ ಎಂಬ ಕ್ಯಾಚಿ ಲೈನನ್ನೂ ಸಹ ಪ್ರೇಮ್ ಸೇರಿಸಿದ್ದಾರೆ.

‘ಕೆಡಿ’ ಸಿನಿಮಾನಲ್ಲಿ ಧ್ರುವ ಸರ್ಜಾ ಜೊತೆಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಂಜಯ್ ದತ್, ವಿ ರವಿಚಂದ್ರನ್, ರಮೇಶ್ ಅರವಿಂದ್, ಜಿಸು ಸೇನ್ ಗುಪ್ತ ಇನ್ನೂ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಪ್ರೇಮ್ ನಿರ್ದೇಶಿಸಿರುವ ಈ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೋಹಿತ್- ಕೊಹ್ಲಿ ಕ್ರೇಜ್; ವಿದೇಶಿ ಮಂಡಳಿಗಳಿಂದ ಬಿಸಿಸಿಐ ಬಳಿ ವಿಶೇಷ ಮನವಿ

ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ (Team India) ಸುಮಾರು ಮೂರು ತಿಂಗಳ ಕಾಲ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವುದಿಲ್ಲ. ಈ ಸಮಯದಲ್ಲಿ ಐಪಿಎಲ್​ನಲ್ಲಿ (IPL 2026) ನಿರತವಾಗುವ ಭಾರತ ತಂಡ, ಆ ಬಳಿಕ ಜೂನ್ ತಿಂಗಳಲ್ಲಿ ಕಣಕ್ಕಿಳಿಯಲಿದೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯೊಂದಿಗೆ ಟೀಂ ಇಂಡಿಯಾದ ಅಭಿಯಾನ ಶುರುವಾಗಲಿದೆ. ಇದೆಲ್ಲದರ ನಡುವೆ ಹಲವಾರು ಕ್ರಿಕೆಟ್ ಮಂಡಳಿಗಳು ಟೀಂ ಇಂಡಿಯಾದ ಮುಂಬರುವ ವಿದೇಶ ಪ್ರವಾಸಗಳ ಸಮಯದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡುವಂತೆ ಬಿಸಿಸಿಐ (BCCI) ಬಳಿ ವಿನಂತಿಸುತ್ತಿವೆ ಎಂದು ವರದಿಯಾಗಿದೆ.

ರೋಹಿತ್, ಕೊಹ್ಲಿಯ ಕ್ರೇಜ್

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಟೀಂ ಇಂಡಿಯಾ ಈಗಾಗಲೇ ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌ನಂತಹ ದೇಶಗಳ ಕ್ರಿಕೆಟ್ ಮಂಡಳಿಗಳು ಬಿಸಿಸಿಐ ಅನ್ನು ಸಂಪರ್ಕಿಸಿ ಈ ಪ್ರವಾಸಗಳಲ್ಲಿ ಏಕದಿನ ಸರಣಿಗಳನ್ನು ಆಡಲು ಪ್ರಸ್ತಾಪಿಸಿವೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಕ್ರೇಜ್ ಎಂದು ವರದಿಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಇವರಿಬ್ಬರು ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಆಟವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.

ಅಲ್ಲದೆ 2027 ರ ಏಕದಿನ ವಿಶ್ವಕಪ್ ಬಳಿಕ ಇವರಿಬ್ಬರು ಈ ಮಾದರಿಗೂ ನಿವೃತ್ತಿ ಘೋಷಿಸಬಹುದು. ಆದ್ದರಿಂದ, ವಿಶ್ವಕಪ್‌ಗೆ ಮೊದಲು ಟೀಂ ಇಂಡಿಯಾ ಪ್ರವಾಸ ಮಾಡುತ್ತಿರುವ ದೇಶಗಳ ಅಭಿಮಾನಿಗಳು ಈ ಇಬ್ಬರು ದಿಗ್ಗಜರನ್ನು ಕೊನೆಯ ಬಾರಿಗೆ ನೋಡುವ ಅವಕಾಶ ಹೊಂದಿರುತ್ತಾರೆ. ಹೀಗಾಗಿ ಇದರ ಲಾಭ ಪಡೆಯಲು ಮುಂದಾಗಿರುವ ವಿದೇಶಿ ಮಂಡಳಿಗಳು ಬಿಸಿಸಿಐ ಬಳಿ ಅಧಿಕ ಏಕದಿನ ಪಂದ್ಯಗಳನ್ನಾಡುವಂತೆ ಮನವಿ ಮಾಡಿವೆ. ಇತ್ತ ಬಿಸಿಸಿಐ ಕೂಡ ವಿದೇಶಿ ಮಂಡಳಿಗಳ ಮನವಿಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿವೆ. ಏಕೆಂದರೆ 2027 ರಲ್ಲಿ ಏಕದಿನ ವಿಶ್ವಕಪ್ ಇರುವ ಕಾರಣ, ಹೆಚ್ಚಿನ ಪಂದ್ಯಗಳನ್ನಾಡುವುದು ತಂಡದ ಅಭ್ಯಾಸಕ್ಕೆ ನೆರವಾಗಲಿದೆ.

ಈ ವಿದೇಶಿ ಪ್ರವಾಸಗಳಲ್ಲಿ ಏಕದಿನ ಸರಣಿ

ಐಪಿಎಲ್ ನಂತರ, ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಲಿದೆ. ನಂತರ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿ 3 ಏಕದಿನ ಮತ್ತು 5 ಟಿ 20 ಪಂದ್ಯಗಳನ್ನು ಆಡಲಿದೆ. ಇದರ ಜೊತೆಗೆ ಇನ್ನೂ ಎರಡು ಏಕದಿನ ಪಂದ್ಯಗಳನ್ನು ಸೇರಿಸುವ ಸಾಧ್ಯತೆಯಿದೆ. ಈ ಪ್ರವಾಸದಲ್ಲಿ ಐರ್ಲೆಂಡ್ ವಿರುದ್ಧವೂ ಸರಣಿಯನ್ನು ಆಡಲಾಗುತ್ತದೆ. ಆದರೆ ಈ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಾಗುತ್ತದೆಯೇ ಅಥವಾ ಮೂರು ಟಿ 20 ಪಂದ್ಯಗಳನ್ನು ಆಡಲಾಗುತ್ತದೆಯೇ ಎಂದು ನಿರ್ಧರಿಸಬೇಕಾಗಿದೆ.

ಇದರ ನಂತರ ಭಾರತ ತಂಡ ಶ್ರೀಲಂಕಾ ಪ್ರವಾಸ ಮಾಡಲಿದ್ದು, ಅಲ್ಲಿ ಟಿ20 ಸರಣಿ ಬದಲಿಗೆ 3 ಏಕದಿನ ಪಂದ್ಯಗಳನ್ನು ಆಡಬೇಕೆಂದು ಲಂಕಾ ಮಂಡಳಿ ವಿನಂತಿಸಿದೆ. ಪರಿಣಾಮವಾಗಿ, ಶ್ರೀಲಂಕಾದ ವೀಕ್ಷಕರಿಗೆ ವಿರಾಟ್ ಮತ್ತು ರೋಹಿತ್ ಅವರನ್ನು ಕೊನೆಯ ಬಾರಿಗೆ ನೋಡುವ ಅವಕಾಶ ಸಿಗಬಹುದು. ಈ ಸರಣಿಯಿಂದ ಸಂಗ್ರಹವಾದ ಹಣವನ್ನು ಶ್ರೀಲಂಕಾದಲ್ಲಿ ಚಂಡಮಾರುತದಿಂದ ತೊಂದರೆಗೊಳಗಾದ ಜನರಿಗೆ ದೇಣಿಗೆ ನೀಡಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ಬುಡಕಟ್ಟು ಸಮುದಾಯದವನ್ನು ಅವಮಾನಿಸಿದೆ, ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿಸುತ್ತಿದೆ; ಮೋದಿ ವಾಗ್ದಾಳಿ

ನವದೆಹಲಿ, ಮಾರ್ಚ್ 14: ಇನ್ನೊಂದು ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಂದು ಕೊಲ್ಕತ್ತಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Modi in West Bengal) 18,680 ಕೋಟಿ ರೂ. ಮೌಲ್ಯದ ಸಂಪರ್ಕ ಯೋಜನೆಗಳನ್ನು ಅನಾವರಣಗೊಳಿಸಿದರು. ಭಾರತದ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬಂಗಾಳದಲ್ಲಿ ಬರೆಯಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ಪ್ರಧಾನಿ ಮೋದಿ ಟಿಎಂಸಿ ಸರ್ಕಾರವನ್ನು ಟೀಕಿಸಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು, “ಈ ದಬ್ಬಾಳಿಕೆಯ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ, ಬದಲಾವಣೆಯ ಬಿರುಗಾಳಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಮೊದಲು ಕಾಂಗ್ರೆಸ್, ನಂತರ ಕಮ್ಯುನಿಸ್ಟರು ಮತ್ತು ಈಗ ಟಿಎಂಸಿ, ಈ ಪಕ್ಷಗಳು ಒಂದರ ನಂತರ ಒಂದರಂತೆ ಬಂದು ತಮ್ಮ ಜೇಬುಗಳನ್ನು ತುಂಬಿಸಿಕೊಂಡವು. ಆದರೆ ಬಂಗಾಳದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲೇ ಇಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ದೌರ್ಜನ್ಯದ ಆರೋಪ ಹೊತ್ತಿರುವ ಟಿಎಂಸಿ ನಾಯಕರನ್ನು ಬಿಡುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!

ಟಿಎಂಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಗೌರವ ತೋರಿದೆ. ಕೆಲವೇ ದಿನಗಳ ಹಿಂದೆ, ನಮ್ಮ ದೇಶದ ರಾಷ್ಟ್ರಪತಿ, ಆದಿವಾಸಿ ಸಮುದಾಯದ ಮಗಳಾದ ದ್ರೌಪದಿ ಮುರ್ಮು ಅವರು ಬಂಗಾಳಕ್ಕೆ ಬಂದಿದ್ದರು. ಅವರು ಸಂತಾಲ್ ಆದಿವಾಸಿ ಸಂಪ್ರದಾಯದ ಪವಿತ್ರ ಉತ್ಸವದಲ್ಲಿ ಭಾಗವಹಿಸಬೇಕಿತ್ತು. ಆದರೆ ದುರಹಂಕಾರದಲ್ಲಿ ಮುಳುಗಿರುವ ಈ ನಿರ್ದಯ ಸರ್ಕಾರವು ಆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಅವ್ಯವಸ್ಥೆಗೊಳಪಡಿಸಿತು” ಎಂದು ಪ್ರಧಾನಿ ಮೋದಿ ಹೇಳಿದರು.

“ಕೇಂದ್ರ ಸರ್ಕಾರ ಪ್ರಾರಂಭಿಸಿದ ಹಲವಾರು ಕಲ್ಯಾಣ ಯೋಜನೆಗಳನ್ನು ತಡೆಯುವ ಮೂಲಕ ತೃಣಮೂಲ ಕಾಂಗ್ರೆಸ್ ಬಂಗಾಳ ರಾಜ್ಯದಲ್ಲಿ ಅಭಿವೃದ್ಧಿಯನ್ನು ತಡೆಯುತ್ತಿದೆ. ಟಿಎಂಸಿ ತಾನೂ ಕೆಲಸ ಮಾಡುವುದಿಲ್ಲ, ಇತರರಿಗೂ ಕೆಲಸ ಮಾಡಲು ಬಿಡುವುದಿಲ್ಲ. ಜನರಿಗೆ ಪ್ರಯೋಜನಕಾರಿಯಾಗುವ ಯೋಜನೆಗಳನ್ನು ರಾಜ್ಯ ಸರ್ಕಾರ ನಿಲ್ಲಿಸುತ್ತಿದೆ” ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಚಾಣಕ್ಯರ ಈ ತತ್ವಗಳನ್ನು ಅನುಸರಿಸಿ

ಜೀವನದಲ್ಲಿ (life) ಹ್ಯಾಪಿ ಆಗಿರ್ಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ಹೆಚ್ಚಿನವರು ಒತ್ತಡದಲ್ಲಿಯೇ ಜೀವನವನ್ನು ನಡೆಸುತ್ತಿದ್ದಾರೆ. ಹೌದು ಹೆಚ್ಚಿನವರಿಗೆ ಇಂದು ಸಂತೋಷವನ್ನು ಕಂಡುಕೊಳ್ಳುವುದೇ ಬಹುದೊಡ್ಡ ಸವಾಲಾಗಿದೆ. ನೀವು ಕೂಡ ಇದೇ ರೀತಿ ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ಬಯಸುತ್ತಿದ್ದೀರಾ? ಹಾಗಿದ್ರೆ ಚಾಣಕ್ಯರು ಹೇಳಿರುವ ಈ ಮಾತುಗಳನ್ನು ತಪ್ಪದೆ ಪಾಲಿಸಿ. ಇದರಿಂದ ನೀವು ಖಂಡಿತವಾಗಿ ಜೀವನದಲ್ಲಿ ಖುಷಿ ಖುಷಿಯಾಗಿರಬಹುದು.

ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು ಗೊತ್ತಾ?

ಹಿಂದಿನ ಘಟನೆಗಳ ಬಗ್ಗೆ ವಿಷಾದಿಸಬೇಡಿ: ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ  ಅನೇಕ ಜನರು ತಮ್ಮ ಹಿಂದಿನ ತಪ್ಪುಗಳು ಅಥವಾ ಕೆಟ್ಟ ಸಮಯಗಳ ಬಗ್ಗೆ ಯೋಚಿಸಿ, ತಮ್ಮ ವರ್ತಮಾನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.  ಹಾಗಾಗಿ ಈ ಅಭ್ಯಾಸವನ್ನು ತ್ಯಜಿಸಬೇಕು. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಆಗಿ ಹೋದಂತಹ ಘಟನೆಗಳನ್ನು ಮರೆತು ವರ್ತಮಾನದಲ್ಲಿ ಬದುಕಲು ಕಲಿಯುವುದು ತುಂಬಾ ಮುಖ್ಯ ಎಂದಿದ್ದಾರೆ ಚಾಣಕ್ಯ.

ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ: ಜೀವನದಲ್ಲಿನ ನೆಮ್ಮದದಿ ಹಾಳಾಗಲು ಪ್ರಮುಖ ಕಾರಣವೆಂದರೆ ನಮ್ಮ ವೈಯಕ್ತಿಕ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು. ಚಾಣಕ್ಯರ ಪ್ರಕಾರ, ನಮ್ಮ ದೌರ್ಬಲ್ಯಗಳನ್ನು ಯಾರಿಗೂ ಬಹಿರಂಗಪಡಿಸಬಾರದು ಏಕೆಂದರೆ ಜನರು ಅವುಗಳನ್ನು ಅಪಹಾಸ್ಯ ಮಾಡಬಹುದು ಅಥವಾ ಅವುಗಳ ಲಾಭ ಪಡೆಯಬಹುದು. ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳದೆ ನಿಮ್ಮಲ್ಲಿಯೇ ಇಟ್ಟುಕೊಳ್ಳುವುದರಿಂದ ಅನಗತ್ಯ ಮಾನಸಿಕ ಒತ್ತಡವನ್ನು ತಪ್ಪಿಸಬಹುದು.

ಇದನ್ನೂ ಓದಿ: ಜೀವನದಲ್ಲಿ ಹಣ, ಶ್ರೀಮಂತಿಕೆ ಗಳಿಸಲು ಚಾಣಕ್ಯರ ಮಾತುಗಳನ್ನು ಪಾಲಿಸಿ

ಫಲಿತಾಂಶಗಳ ಬಗ್ಗೆ ಚಿಂತಿಸದೆ ಕೆಲಸ ಮಾಡಿ: ನಾವು ಕೆಲಸದ ಬಗ್ಗೆ ಯೋಚಿಸುವುದಕ್ಕಿಂತ ಫಲಿತಾಂಶಗಳ ಬಗ್ಗೆ ಹೆಚ್ಚು ಯೋಚಿಸಿದಾಗ ಒತ್ತಡ ಉಂಟಾಗುತ್ತದೆ. ಇದರಿಂದ ಮನಸ್ಸಿನ ನೆಮ್ಮದಿಯೇ ಹಾಳಾಗುತ್ತದೆ. ಹಾಗಾಗಿ ಕಠಿಣ ಪರಿಶ್ರಮದ ಮೇಲೆ ಮಾತ್ರ ಗಮನಹರಿಸಿ. ಫಲಿತಾಂಶದ ಬಗ್ಗೆ ಚಿಂತಿಸುವುದನ್ನು  ಬಿಟ್ಟಾಗ, ನಿಮ್ಮ ಮನಸ್ಸು ಸ್ವಯಂಚಾಲಿತವಾಗಿ ಶಾಂತವಾಗುತ್ತದೆ ಮತ್ತು ನೀವು ಕೆಲಸ ಮಾಡಲು ಹೆಚ್ಚು ಒಲವು ತೋರುತ್ತೀರಿ, ಸಂತೋಷವಾಗಿಯೂ ಇರುತ್ತೀರಿ.

ದುರಾಸೆ ಮತ್ತು ನಿರೀಕ್ಷೆಗಳಿಂದ ದೂರವಿರಿ: ನಿರೀಕ್ಷೆಯೇ ಮಾನವನ ಅತೃಪ್ತಿ ಮತ್ತು ನೋವಿಗೆ  ದೊಡ್ಡ ಕಾರಣ ಎನ್ನುತ್ತಾರೆ ಚಾಣಕ್ಯ.  ನಾವು ಇತರರಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಾಗ ಮತ್ತು ಅವುಗಳನ್ನು ಅವರು ಪೂರೈಸದಿದ್ದಾಗ, ನಮ್ಮ ಮನಸ್ಸಿಗೆ ತುಂಬಾನೇ ನೋವಾಗುತ್ತದೆ.  ಇದರೊಂದಿಗೆ ದುರಾಸೆಯೂ ಸಹ ನಮ್ಮ ಸಂತೋಷವನ್ನು ಕಿತ್ತುಕೊಳ್ಳುತ್ತದೆ.  ಹಾಗಾಗಿ ನಿಮ್ಮಲ್ಲಿರುವದರಲ್ಲಿ ಸಂತೋಷವಾಗಿರಲು ಕಲಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಚ್ 17ರೊಳಗೆ ಇರಾನ್‌ನಿಂದ 92,700 ಮೆಟ್ರಿಕ್ ಟನ್ ಎಲ್‌ಪಿಜಿ ಬರಲಿದೆ; ಕೇಂದ್ರ ಸರ್ಕಾರ ಭರವಸೆ

ನವದೆಹಲಿ, ಮಾರ್ಚ್ 14: ದೇಶದಲ್ಲಿ ಎಲ್​ಪಿಜಿ ಸಂಗ್ರಹದಲ್ಲಿ ಯಾವುದೇ ಕೊರತೆಯಿಲ್ಲ. ಪಶ್ಚಿಮ ಏಷ್ಯಾದ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ದೇಶದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ (LPG Shortage) ಸಾಕಷ್ಟು ಪೂರೈಕೆ ಭಾರತದಲ್ಲಿ ಲಭ್ಯವಿದೆ. ಜನರು ವಿನಾಕಾರಣ ಆತಂಕಕ್ಕೊಳಗಾಗಿ ಬುಕಿಂಗ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಖರೀದಿದಾರ ರಾಷ್ಟ್ರವಾಗಿದ್ದು, ಇದರಲ್ಲಿ ಶೇ. 90ರಷ್ಟು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಬರುತ್ತದೆ.

ಪರ್ಷಿಯನ್ ಕೊಲ್ಲಿಯಲ್ಲಿ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಭಾರತೀಯ ಧ್ವಜ ಹೊಂದಿರುವ ಒಟ್ಟು 24 ಹಡಗುಗಳು ಇದ್ದವು. ಈ ಪೈಕಿ ‘ಶಿವಾಲಿಕ್’, ‘ನಂದಾ ದೇವಿ’ ಹಡಗುಗಳು LPG ಸಾಗಿಸುತ್ತಿವೆ. ಇವು ನಿನ್ನೆ ತಡರಾತ್ರಿ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಈ ಹಡಗುಗಳಲ್ಲಿ ಸುಮಾರು 92,700 ಮೆಟ್ರಿಕ್ ಟನ್ LPG ಸಾಗಿಸಲಾಗುತ್ತಿದೆ. ಇವು ಕ್ರಮವಾಗಿ ಗುಜರಾತ್‌ನ ಮುಂದ್ರಾ, ಕಾಂಡ್ಲಾ ಬಂದರು ತಲುಪಲಿವೆ. ಮಾರ್ಚ್ 16 ಮತ್ತು ಮಾರ್ಚ್ 17ರಂದು ಇವು ಭಾರತದ ಬಂದರು ತಲುಪುವ ನಿರೀಕ್ಷೆಯಿದೆ. ಪರ್ಷಿಯನ್ ಕೊಲ್ಲಿಯಲ್ಲಿ ಇನ್ನೂ ಭಾರತದ 22 ಹಡಗುಗಳು ಇವೆ. ಇವುಗಳಲ್ಲಿ 611 ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಹಡಗು ಸಾಗಣೆ ಸಚಿವಾಲಯದ ಅಧಿಕಾರಿ ರಾಜೇಶ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಕೂಡ ಮಾತನಾಡಿದ್ದು, “ಭಾರತದಲ್ಲಿ ಸಾಕಷ್ಟು ಪ್ರಮಾಣದ ಕಚ್ಚಾ ತೈಲ ಪೂರೈಕೆ ಇದೆ. ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಇಂಧನದ ಕೊರತೆ ಕಂಡುಬಂದಿಲ್ಲ. ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದೆ” ಎಂದು ಹೇಳಿದ್ದಾರೆ. ಭಾರತವು ತನ್ನ ಅಗತ್ಯಗಳನ್ನು ಪೂರೈಸಲು ದೇಶೀಯವಾಗಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉತ್ಪಾದಿಸುತ್ತದೆ ಎಂದು ತಿಳಿಸಿದ್ದಾರೆ.

“ದೇಶದಲ್ಲಿ ಸಾಕಷ್ಟು ಕಚ್ಚಾ ತೈಲದ ಸ್ಟಾಕ್ ಇದೆ. ಜನರು ಆತಂಕದಿಂದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡುವುದನ್ನು ನಿಲ್ಲಿಸಿ. ಅಗತ್ಯವಿದ್ದಾಗ ಮಾತ್ರ ಬುಕ್ ಮಾಡಿ. ರಾಜ್ಯ ಸರ್ಕಾರಗಳಿಗೆ ವಾಣಿಜ್ಯ ಸಿಲಿಂಡರ್‌ಗಳನ್ನು ವಿಲೇವಾರಿ ಮಾಡಲಾಗಿದೆ. 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ವಿತರಣೆ ಪ್ರಾರಂಭವಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಬ್ಲಾಕ್ ಮಾರ್ಕೆಟ್ ಮತ್ತು ಸಂಗ್ರಹವನ್ನು ನಿಯಂತ್ರಿಸಲು ವಿವಿಧ ರಾಜ್ಯ ಸರ್ಕಾರಗಳು ಹಲವೆಡೆ ದಾಳಿ ಮತ್ತು ತಪಾಸಣೆಗಳನ್ನು ನಡೆಸುತ್ತಿವೆ. ನಾಗರಿಕರು ಆನ್​ಲೈನ್ ಮೂಲಕ ಸಿಲಿಂಡರ್‌ಗಳನ್ನು ಬುಕ್ ಮಾಡಬೇಕು. ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಷಾರ್..! ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ ಸಿಲಿಂಡರ್ ಬಳಸುವವರಿಗೆ ಖಡಕ್ ಎಚ್ಚರಿಕೆ

ಬೆಂಗಳೂರು, (ಮಾರ್ಚ್ 14): ಇಸ್ರೆಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ (War) ಭಾರತದ (India) ಮೇಲೂ ಪರಿಣಾಮ ಬೀರುತ್ತಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ವಸ್ತುಗಳು ನಿಂತುಕೊಂಡಿವೆ. ಅದರಲ್ಲೂ ಮುಖ್ಯವಾಗಿ ಕಚ್ಚಾ ತೈಲ ಆಮದು ಕಡಿಮೆಯಾಗಿದೆ. ಇದರಿಂದ ಗ್ಯಾಸ್ ಸಿಲಿಂಡರ್ (LPG cylinders) ಅಭಾವ ಉಂಟಾಗಿದೆ. ಕರ್ನಾಟದಲ್ಲೂ (Karnataka) ಸಹ ಕಮರ್ಷಿಯಲ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿರುವ ಬೆನ್ನಲ್ಲೇ ಹೋಟೆಲ್ ಉದ್ಯಮ ಕಂಗಾಲಾಗಿದೆ. ಇನ್ನು ಹೋಟೆಲ್, ರೆಸ್ಟೋರೆಂಟ್ ಉದ್ಯಮವನ್ನ ನಂಬಿಕೊಂಡ ವ್ಯಾಪಾರ ವಹಿವಾಟಿಗೂ ತೀವ್ರ ಹೊಡೆತ ಬಿದ್ದಿದ್ದು, ಕೆಲ ಕಡೆ ಗೃಹಬಳಕೆ ಸಿಲಿಂಡರ್​ ಬಳಸಲಾಗುತ್ತಿದ್ದು, ಈ ಸಂಬಂಧ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (karnataka food and civil supplies department) ದಾಳಿ ನಡೆಸಿ ಇದುವರೆಗೆ ಒಟ್ಟು 316 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ.

ಈ ಸಂಬಂಧ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇಂದು (ಮಾರ್ಚ್ 14) ಪ್ರಕಟಣೆ ಹೊರಡಿಸಿದ್ದು, ಕೆಲ ಕಡೆ ಗೃಹಬಳಕೆ ಸಿಲಿಂಡರ್​ ಬಳಸಲಾಗುತ್ತಿದ್ದು, ಈ ಸಂಬಂಧ ರಾಜ್ಯ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಒಟ್ಟು 316 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶ ಪಡೆದುಕೊಂಡಿದ್ದಾರೆ. ಇನ್ನು ಗೃಹಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಗೃಹ ಬಳಕೆ ಸಿಲಿಂಡರ್​​ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಸಂಬಂಧ ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗದಲ್ಲಿ 3, ಯಾದಗಿರಿ-46, ದಾವಣಗರೆಯಲ್ಲಿ 13 ಸಿಲಿಂಡರ್​​ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಜೊತೆಗೆ ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕೆಜಿಎಫ್​​ನಲ್ಲಿ ಅಕ್ರಮ ರಿಫಿಲ್ಲಿಂಗ್ ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಬಳಕೆಯ ಸಿಲಿಂಡರ್​​ಗಳ ಒಟ್ಟು ಶೇ.20ರಷ್ಟು ಸಿಲಿಂಡರ್​ಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚನೆಗಳಂತೆ ಆಸ್ಪತ್ರೆ, ಶಾಲಾ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳ ಕ್ಯಾಂಟೀನ್​, ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ಮಾಡಲು ಮತ್ತು ಸರ್ಕಾರಿ ಕಚೇರಿ, ವೃದ್ದಾಶ್ರಮ, ಪ್ರಮುಖ ಖಾಸಗಿ ವಲಯದ ಕಚೇಗಳಿಗೆ ಆದ್ಯತೆ ಮೇರೆಗೆ ವಾಣಿಜ್ಯ ಬಳಕೆಯ ಸಿಲಿಂಡರ್​ಗಳನ್ನು ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ರಾಜ್ಯದೆಲ್ಲೆಡೆ 14.2 kgಯ ಗೃಹ ಬಳಕೆಯ ಒಟ್ಟು 3,86,363 ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ 6,371 ಸಿಲಿಂಡರ್​ಗಳನ್ನ ವಿತರಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್​ಗಳ ಉಪಯೋಗಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಆಹಾರ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಗ್ಯಾಸ್​ ಬುಕ್ಕಿಂಗ್ ಬಗ್ಗೆ ಇರಲಿ ಎಚ್ಚರ

ಗ್ಯಾಸ್ ಸಿಲಿಂಡರ್​ಗಳ ಕೊರತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ಕಿರಾತಕರು, ಗ್ಯಾಸ್ ಏಜೆನ್ಸಿಗಳ ಸೋಗಿನಲ್ಲಿ ಲಿಂಕ್​​ಗಳನ್ನು ಕಳುಹಿಸಿ ವಂಚಿಸುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಆತಂಕಗೊಳ್ಳುತ್ತಿರುವ ನಾಗರಿಕರೂ ಗೃಹ ಬಳಕೆಯ ಸಿಲಿಂಡರ್​ಗಳಿಗಾಗಿ ಗ್ಯಾಸ್ ಬುಕ್ ಮಾಡುತ್ತಿದ್ಧಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ಖದೀಮರು, ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ಲಿಂಕ್ ಕಳುಹಿಸಿ ವಂಚಿಸುವ ಸಾಧ್ಯತೆಯಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರಬೇಕೆಂದು ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ

ಧಾರವಾಡ, ಮಾರ್ಚ್​​ 14: ರಾಜ್ಯದಲ್ಲಿ ಬಿಸಿಲು ಹೆಚ್ಚಳವಾಗಿದೆ. ಜನರು ಸೆಕೆಗೆ ಬೇಸತ್ತಿದ್ದಾರೆ. ಈ ಮಧ್ಯೆ ವಿದ್ಯಾಕಾಶಿ ಧಾರವಾಡಲ್ಲಿ ಇಂದು ಆಲಿಕಲ್ಲು ಸಹಿತ ಭಾರಿ ಮಳೆ ಆಗಿದೆ. ಆ ಮೂಲಕ ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ವರುಣ ತಂಪೆರೆದಿದೆ. ಗುಡುಗು ಸಹಿತ ಮಳೆಯಿಂದ ಜನರ ಮೊಗದಲ್ಲಿ ಹರ್ಷ ಮೂಡಿದೆ. ಆದರೆ ಗಾಳಿ ಜೋರಾಗಿ ಬೀಸುತ್ತಿರುವುದರಿಂದ ಮಾವಿನ ಬೆಳೆಗೆ ಈ ಬಾರಿಯೂ ಮಳೆ ಕಂಟಕವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link