ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ – Kannada News | One Nation One Election: JPC Report Projects 7 Lakh Crore Savings, 1.6pc GDP Growth for India

ನವದೆಹಲಿ, ಮೇ 20: ಒಂದು ರಾಷ್ಟ್ರ, ಒಂದು ಚುನಾವಣೆಯ ವ್ಯವಸ್ಥೆಯಿಂದ (One Nation One Election) ಬಹಳಷ್ಟು ಹಣ ಉಳಿಸಬಹುದು. ದೇಶಾದ್ಯಂತ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಒಮ್ಮೆಗೇ ನಡೆಸಿದರೆ 7 ಲಕ್ಷ ಕೋಟಿ ರೂನಷ್ಟು ಹಣ ಉಳಿಸಬಹುದು. ಇದರಿಂದ ಹಣ ಉಳಿತಾಯ ಆಗುವುದರ ಜೊತೆಗೆ, ದೇಶದ ಆರ್ಥಿಕತೆ ಶೇ. 1.6ರಷ್ಟು ಹೆಚ್ಚುತ್ತದೆ. ಆಡಳಿತದ ಕ್ಷಮತೆಯೂ ಸುಧಾರಿಸುತ್ತದೆ. ಹೀಗೆಂದು ಹೇಳಿದ್ದು ಸರ್ಕಾರದ ಮಂತ್ರಿಗಳಲ್ಲ. ಜಂಟಿ ಸಂಸದೀಯ ಸಮಿತಿ (JPC- Joint Parliamentary Committee) ವ್ಯಕ್ತಪಡಿಸಿದ ಅನಿಸಿಕೆ ಇದು.

ಏಕ ರಾಷ್ಟ್ರ ಏಕ ಚುನಾವಣೆ ಪ್ರಸ್ತಾಪದ ಕುರಿತು ಅವಲೋಕಿಸಲು ನರೇಂದ್ರ ಮೋದಿ ಅವರು ಎಂಟು ಸದಸ್ಯರಿರುವ ಸಮಿತಿಯೊಂದನ್ನು ರಚಿಸಿದ್ದರು. 186 ದಿನಗಳ ನಂತರ ಈ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಜಂಟಿ ಸಂಸದೀಯ ಸಮಿತಿಗೆ ನೀಡಲಾಗಿದೆ. ಬಿಜೆಪಿ ಸಂಸದ ಪಿಪಿ ಚೌಧರಿ ನೇತೃತ್ವದ ಈ ಜೆಪಿಸಿಯಲ್ಲಿ 39 ಸದಸ್ಯರಿದ್ದಾರೆ.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ಏಕ ರಾಷ್ಟ್ರ, ಏಕ ಚುನಾವಣೆ ವ್ಯವಸ್ಥೆಯ ಪ್ರಸ್ತಾಪದ ಪ್ರಕಾರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳೆಲ್ಲವನ್ನೂ ಏಕಕಾಲದಲ್ಲೇ ನಡೆಸಬೇಕು. ಅದಾಗಿ 100 ದಿನದೊಳಗೆ ಎಲ್ಲಾ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ನಡೆಸಬೇಕು.

ಗುಜರಾತ್​ನ ಗಾಂಧಿನಗರದಲ್ಲಿ ಜೆಪಿಸಿ ಅಧ್ಯಕ್ಷ ಪಿ.ಪಿ. ಚೌಧರಿ ಅವರು ಸುದ್ದಿಗೋಷ್ಠಿ ಕರೆದು, ಏಕ ರಾಷ್ಟ್ರ ಏಕ ಚುನಾವಣೆ ವ್ಯವಸ್ಥೆಯಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೆಯೇ, ಬೇರೆ ಬೇರೆ ಅವಧಿಯಲ್ಲಿ ಚುನಾವಣೆಗಳು ನಡೆಯುವ ವ್ಯವಸ್ಥೆ ಹೇಗೆ ಆಡಳಿತ ಸಮಸ್ಯೆ ಸೃಷ್ಟಿಸಬಹುದು ಎಂಬುದನ್ನು ನಿವೇದಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ

‘ಪ್ರತೀ ವರ್ಷ ಐದಾರು ವಿಧಾನಸಭಾ ಚುನಾವಣೆಗಳು ನಡೆಯುವುದನ್ನು ವಿಶ್ವದಲ್ಲಿ ಬೇರೆಲ್ಲೂ ನೋಡಲು ಸಿಗುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳು ಜನರನ್ನು ತಲುಪುವುದಿಲ್ಲ. ಶಿಕ್ಷಕರಿಗೆ ಚುನಾವಣಾ ಕೆಲಸದ ಹೊರೆ ಬೀಳುತ್ತದೆ. ಚುನಾವಣೆಗಳನ್ನು ಒಟ್ಟಿಗೆ ನಡೆಸುವುದು ಮುಖ್ಯ’ ಎಂದು ಹೇಳಿದ ಪಿ.ಪಿ. ಚೌಧರಿ, 1952ರಿಂದ 1967ರವರೆಗೆ ನಾಲ್ಕು ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಒಟ್ಟಿಗೆ ನಡೆದಿದ್ದ ಸಂಗತಿಯನ್ನು ಎತ್ತಿತೋರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *