All posts by nagaraj11081993

IPL 2026: ಐಪಿಎಲ್ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದ ಅನುಭವಿ

Source link

‘ಗಬ್ಬರ್ ಸಿಂಗ್’ ನೆನಪಿಸುತ್ತಿದೆ ‘ಉಸ್ತಾದ್ ಭಗತ್ ಸಿಂಗ್’: ಟ್ರೈಲರ್ ಬಿಡುಗಡೆ

ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಅದುವೇ ‘ಉಸ್ತಾದ್ ಭಗತ್ ಸಿಂಗ್’. ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಪವನ್ ಕಲ್ಯಾಣ್ ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ದೊಡ್ಡ ಹಿಟ್ ನೀಡಿದ ‘ಗಬ್ಬರ್ ಸಿಂಗ್’ ಸಿನಿಮಾದ ಹಾಸ್ಯಮಯ ಪೊಲೀಸ್ ಪಾತ್ರಧಾರಿ ಪಾತ್ರವೇ ‘ಉಸ್ತಾದ್ ಭಗತ್ ಸಿಂಗ್’ನಲ್ಲಿಯೂ ಇರಲಿದೆ ಎಂಬುದನ್ನು ಟ್ರೈಲರ್ ಸ್ಪಷ್ಟವಾಗಿ ಹೇಳುತ್ತಿದೆ.

ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ‘ಗಬ್ಬರ್ ಸಿಂಗ್’ ಅಂತಹ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ್ದ ಈ ಜೋಡಿ. ಇದೇ ಜೋಡಿ ಈಗ ‘ಉಸ್ತಾದ್ ಭಗತ್ ಸಿಂಗ್’ ಮೂಲಕ ಮತ್ತೆ ಒಂದಾಗಿದೆ, ಆದರೆ ಹಳೆಯ ಫಾರ್ಮುಲಾನಲ್ಲಿಯೇ ಹೊಸ ಸಿನಿಮಾ ಮಾಡಿದ್ದಾರೆ ಎಂಬುದು ದಟ್ಟವಾಗಿ ಟ್ರೈಲರ್​​ನಲ್ಲಿ ಕಾಣುತ್ತಿದೆ. ಆದರೆ ಇದೇ ರೀತಿಯ ಪವನ್ ಅನ್ನು ನೋಡಲು ಅಭಿಮಾನಿಗಳು ಸಹ ಕಾತರದಿಂದಿದ್ದರು, ಹಾಗಾಗಿ ಈಗ ಬಿಡುಗಡೆ ಆಗಿರುವ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಆಕಾಶಕ್ಕೆ ಏರಿಸಿದೆ.

ಟ್ರೈಲರ್​​ನಲ್ಲಿ ಪವನ್ ಕಲ್ಯಾಣ್ ಮತ್ತೊಮ್ಮೆ ಖಾಕಿ ತೊಟ್ಟು ಅಬ್ಬರಿಸಿದ್ದಾರೆ. ಟ್ರೈಲರ್‌ನಲ್ಲಿ ಅವರ ಮ್ಯಾನರಿಸಂ, ಸ್ಟೈಲ್ ಮತ್ತು ಖಡಕ್ ಡೈಲಾಗ್‌ಗಳು ಅಭಿಮಾನಿಗಳಿಗೆ ಹಳೆಯ ‘ಗಬ್ಬರ್ ಸಿಂಗ್’ ನೆನಪಿಸುತ್ತಿವೆ. ಹರೀಶ್ ಶಂಕರ್ ಅವರು ಪವನ್ ಕಲ್ಯಾಣ್​​ಗೆ ಕೆಲವು ಪವರ್​​ಫುಲ್ ಡೈಲಾಗ್​​ಗಳನ್ನು ನೀಡಿದ್ದಾರೆ. ‘ಈ ಸಲ ಕೇವಲ ಮನರಂಜನೆ ಮಾತ್ರವಲ್ಲ, ಯುದ್ಧವೂ ಇರುತ್ತದೆ’ ಎಂಬ ಡೈಲಾಗ್‌ ವೈರಲ್ ಆಗುವುದು ಪಕ್ಕಾ. ಮಾತ್ರವಲ್ಲದೆ ಪವನ್ ಅವರು ಸಖತ್ ಕಾಮಿಡಿ ಸಹ ಮಾಡಿದಂತಿದ್ದಾರೆ. ಅದರಲ್ಲೂ ‘ಗಬ್ಬರ್ ಸಿಂಗ್’ ಶೈಲಿಯ ಕಾಮಿಡಿ ಪ್ರೇಕ್ಷಕರಿಗೆ ಪಕ್ಕಾ ಹಿಡಿಸಲಿದೆ.

ಇದನ್ನೂ ಓದಿ:ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಹಾಡುಗಳಿಗೆ ಸಂಗೀತ ನೀಡಿದ್ದರೆ ಹಿನ್ನೆಲೆ ಸಂಗೀತವನ್ನು ಎಸ್ ತಮನ್ ನೀಡಿದ್ದಾರೆ. ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ಪವನ್ ಕಲ್ಯಾಣ್ ಹಾಡೊಂದರಲ್ಲಿ ಸಖತ್ ಆಗಿ ಡ್ಯಾನ್ಸ್ ಸಹ ಮಾಡಿದ್ದಾರೆ. ಅಸಲಿಗೆ ಪವನ್ ಕಲ್ಯಾಣ್​​ಗೆ ಡ್ಯಾನ್ಸ್ ಎಂದರೆ ಆಗುವುದಿಲ್ಲ ಆದರೆ ಈ ಸಿನಿಮಾನಲ್ಲಿ ಅವರು ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾದ ಟ್ರೈಲರ್​​ನಲ್ಲಿ ಪವನ್ ಕಲ್ಯಾಣ್ ಹೊರತಾಗಿ ಶ್ರೀಲೀಲಾ ಬಹಳ ಗಮನ ಸೆಳೆಯುತ್ತಿದ್ದಾರೆ. ಮುದ್ದು-ಮುದ್ದಿ ಯುವತಿಯಾಗಿ ಅವರು ಸಖತ್ ಆಗಿ ಕಾಣುತ್ತಿದ್ದಾರೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ತಮಿಳಿನ ಸೂಪರ್ ಹಿಟ್ ಚಿತ್ರ ‘ತೆರಿ’ಯ ರೀಮೇಕ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಖಾತ್ರಿ ಇಲ್ಲ. ಸಿನಿಮಾದ ಟ್ರೈಲರ್, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಒಳ್ಳೆಯ ಪ್ರಚಾರ ದೊರಕಿಸಿಕೊಡುವ ಸಂಭವ ಇದೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದಾಸೆಗೆ ವೃದ್ಧೆಯನ್ನೇ ಹತ್ಯೆಗೈದು ಕಥೆ ಕಟ್ಟಿದ್ದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅರೆಸ್ಟ್

ತುಮಕೂರು, ಮಾರ್ಚ್​​ 14: ಆ ಕೊಲೆ ಇಡಿ ಊರನ್ನೇ ಬೆಚ್ಚಿಬೀಳಿಸಿತ್ತು. ಒಂಟಿಯಾಗಿ ವಾಸವಿದ್ದ ವೃದ್ಧೆಯ ಸಾವು (kill) ಹತ್ತಾರು ಅನುಮಾನ ಹುಟ್ಟುಹಾಕಿತ್ತು. ಮನೆ ಬಾಗಿಲು ತೆಗೆದ ಪೊಲೀಸರಿಗೆ ಶವದ ಸುತ್ತ ಚೆಲ್ಲಿದ ಖಾರದ ಪುಡಿ, ಮದ್ಯದ ಬಾಟಲ್​​ಗಳು ದರೋಡೆಕೋರರ ಕಥೆ ಹೇಳುತ್ತಿದ್ದರೆ, ಹಂತಕ ಬಿಟ್ಟು ಹೋಗಿದ್ದ ಅದೊಂದು ಕ್ಲ್ಯೂ ಪರಿಚಯಸ್ಥನಿಂದಲೇ ನಡೆದ ಕೃತ್ಯ ಎನ್ನುವುದು ಬಯಲು ಮಾಡಿತ್ತು.

ನಡೆದದ್ದೇನು?

ಮಾರ್ಚ್​​ 10ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಉಜ್ಜಿನಿ ಗ್ರಾಮದಲ್ಲಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಒಂಟಿಯಾಗಿ ವಾಸವಿದ್ದ ನಾಗಮ್ಮ ಎಂಬ ವೃದ್ಧೆ ತನ್ನ ಮನೆಯೊಳಗೆ ಕೊಲೆಯಾಗಿದ್ದರು. ಬೀಗ ಹಾಕಿದ್ದ ಮನೆಯೊಳಗೆ ಉಸಿರುಗಟ್ಟಿಸಿ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾದ ಶವದ ಮೇಲೆ ಖಾರದ ಪುಡಿ ಎರಚಲಾಗಿತ್ತು. ಮನೆಯ ಹಿತ್ತಲಿನ ಜಾಗದಲ್ಲಿ ಮದ್ಯದ ಬಾಟಲ್ ಹಾಗೂ ಮೂರು ಗ್ಲಾಸ್​ಗಳನ್ನು ಇಡಲಾಗಿತ್ತು. ಜೊತೆ ಅಪರಿಚಿತರ ಚಪ್ಪಲಿ ಮನೆ ಬಾಗಿಲ ಮುಂದಿತ್ತು. ಇದನ್ನು ಕಂಡವರು ಯಾರೋ ಮೂವರು ದರೋಡೆಕೋರರು ಸಂಚು ಮಾಡಿ ಮನೆ ದೋಚುವಾಗ ವೃದ್ಧೆಯ ಹತ್ಯೆಗೈದ ಅನುಮಾನ ಮೂಡಿತ್ತು. ಇದೇ ಮಾದರಿ ಪ್ರಕರಣ ದಾಖಲಿಸಿಕೊಂಡ ಹುಲಿಯೂರುದುರ್ಗ ಪೊಲೀಸರು, ತನಿಖೆ ವೇಳೆ ಸಿಕ್ಕ ಅದೊಂದು ಕ್ಲ್ಯೂನಿಂದ ಪರಿಚಯಸ್ಥನಿಂದಲೇ ಈ ಕೃತ್ಯ ನಡೆದಿದೆ ಎಂಬುವುದನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಆರೋಪಿಯನ್ನು ಬಂಧಿಸಿದ್ದಾರೆ.

ಸಾಲದ ಹಣ ವಾಪಾಸ್ ಕೇಳಿದ್ದಕ್ಕೆ ಹತ್ಯೆ

ಮುತ್ತುರಾಜ್​​​ ಬಂಧಿತ ಆರೋಪಿ. ಮುತ್ತುರಾಜ್ ಉಜ್ಜಿನಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ. ಜೊತೆಗೆ ಸ್ಥಳೀಯ ಸಂಘ ಸಂಸ್ಥೆಯೊಂದರಲ್ಲಿ ಪ್ರಸ್ತುತ ಸಕ್ರಿಯ ವ್ಯಕ್ತಿ. ರಾಜಕೀಯವಾಗಿ ಗುರುತಿಸಿಕೊಂಡಿರುವ ಈತನಿಗೆ ಜೂಜಾಟದ ಚಟ. ಈ ಚಟದಿಂದಲೇ ತನ್ನ ಬಳಿ ಇದ್ದ ಹಣ ಎಲ್ಲಾ ಕಳೆದುಕೊಂಡು ಬರೋಬ್ಬರಿ ಒಂದುವರೆ ಕೋಟಿ ರೂ ಸಾಲ ಮಾಡಿಕೊಂಡಿದ್ದಾನಂತೆ.

ಇದನ್ನೂ ಓದಿ: ವೈಯರ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕವಾಡಿದ್ದ ಪ್ರಿಯಕರ!

ಒಂದು ಕಾಲದಲ್ಲಿ ಉತ್ತಮ ರೇಷ್ಮೆ ಕೃಷಿಕನಾಗಿದ್ದ ಈತ. ನಂತರದಲ್ಲಿ ಕುಡಿತಕ್ಕೆ ದಾಸನಾಗಿದ್ದ. ಈ ಹಿಂದೆ ಇದೇ ರೀತಿ ನಾಗಮ್ಮ ಬಳಿ 50 ಸಾವಿರ ರೂ ಸಾಲ ಪಡೆದಿದ್ದ. ಈತ ಒಂದುವರೆ ವರ್ಷ ಕಳೆದರೂ ಹಣ ವಾಪಾಸ್ ನೀಡಿರಲಿಲ್ಲ. ಇದೇ ವಿಚಾರಕ್ಕೆ ಒಮ್ಮೆ ಕ್ಲಾಸ್ ತೆಗೆದುಕೊಂಡಿದ್ದ ನಾಗಮ್ಮ ಬಡ್ಡಿ ಬಿಟ್ಟು ಬಾಕಿ ಇರುವ ಅಸಲನ್ನೇ ಕೊಟ್ಟು ಬಿಡು ಎಂದಿದ್ದರು. ಆದರೆ ಹಣ ಕೊಡಲು ಪರದಾಡಿದ ಈತ ಆಕೆಯ ಮೈಮೇಲಿದ್ದ ಚಿನ್ನದ ಆಭರಣದ ಮೇಲೆ ಕಣ್ಣು ಹಾಕಿದ್ದ. ಅದರಂತೆ ಒಂದು ವಾರ ಯೋಚಿಸಿ ಸಿನಿಮಾ ಮಾದರಿ ಪ್ಲ್ಯಾನ್ ಮಾಡಿ ವೃದ್ಧೆ ಹತ್ಯೆಗೈದಿದ್ದ.

ತಾನೇ ವೃದ್ಧೆಗೆ ಕರೆ ಮಾಡಿ ಬಾಕಿ ಹಣ ಕೊಡುವುದಾಗಿ ಹೇಳಿ ಸೋಮವಾರ ಸಂಜೆ 7 ಗಂಟೆಗೆ ಬಂದಿದ್ದ ಮುತ್ತುರಾಜ್, ಮನೆ ಬಳಿ ಯಾರು ಇಲ್ಲದನ್ನು ಗಮನಿಸಿದ್ದ. ನಂತರ ಮನೆ ಒಳಗೆ ಬಂದು ಮಾತು ಆರಂಭಿಸಿದ ಎರಡು ನಿಮಿಷದಲ್ಲೇ ಆಕೆ ಮೇಲೆ ಹಲ್ಲೆ ಮಾಡಿ ಬಳಿಕ ಸೀರೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದ. ನಂತರ ದರೋಡೆಕೋರರ ಕೃತ್ಯದಂತೆ ಬಿಂಬಿಸಲು ಮನೆಯಲ್ಲಿ ಖಾರದ ಪುಡಿ ಎರಚಿ, ರಸ್ತೆಯಲ್ಲಿ ಬಿದಿದ್ದ ಮದ್ಯದ ಬಾಟಲ್, ಗ್ಲಾಸ್​ಗಳನ್ನಿಟ್ಟು ಕಥೆ ಸೃಷ್ಟಿಸಿ ಪರಾರಿಯಾಗಿದ್ದ. ಆದರೆ ಈ ವೇಳೆ ತಾನೇ ಮನೆ ಬೀಗ ಹಾಕಿಕೊಂಡು ಹೋಗಿದ್ದು, ಇದು ಪರಿಚಯಸ್ಥನ ಕೃತ್ಯ ಎನ್ನುವುದು ಪೊಲೀಸರಿಗೆ ಗೊತ್ತಾಗಿತ್ತು.

ಇದನ್ನೂ ಓದಿ: 76ರ ವಯಸ್ಸಿನಲ್ಲಿ ಅಕ್ರಮ ಸಂಬಂಧ?: ಒಬ್ಬಂಟಿಯಾಗಿದ್ದ ವೃದ್ಧನ ಭೀಕರ ಹತ್ಯೆ

ಇನ್ನು ಕೃತ್ಯ ಬಳಿಕ ಚಿನ್ನವನ್ನು ತನ್ನೂರಿನ ತೋಟದ ತೆಂಗಿನ ಮರದ ಪೊಟರೆಯೊಳಗೆ ಬಚ್ಚಿಟ್ಟಿದ್ದ. ಆದರೆ ಹುಲಿಯೂರುದುರ್ಗ ಪೊಲೀಸರು ಸಿಕ್ಕ ಕ್ಲ್ಯೂ ಆಧರಿಸಿ ತನಿಖೆ ಚುರುಕುಗೊಳಿಸಿದ್ದು, ಕೊಲೆ ಮಾಡಿ ಊರಿನಲ್ಲೇ ಓಡಾಡಿಕೊಂಡಿದ್ದ ಹಂತಕನನ್ನು ಬಂಧಿಸಿದ್ದಾರೆ. ಸದ್ಯ ನಾಗಮ್ಮಗೆ ಕೊಡಬೇಕಾದ ಬಾಕಿ ಹಣ ಕೊಡಲಾಗದೇ ಕೊಲೆ ಮಾಡಿದ್ದು, ತನಗೆ ಅವಶ್ಯಕವಾಗಿದ್ದ ಜೂಜಾಟಕ್ಕೆ ಹಾಗೂ ಬೇರೊಬ್ಬರ ಬಳಿ ಪಡೆದಿದ್ದ ಸಾಲ ತೀರಿಸಲು ಕೃತ್ಯ ಎಸಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಆದರೆ ಇದನ್ನು ಹೊರತು ಪಡಿಸಿ ಬೇರೆ ಕಾರಣ ಇತ್ತಾ ಎನ್ನುವುದನ್ನು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಆರ್​ಸಿಬಿಯ ಸಾರ್ವಕಾಲಿಕ ಪ್ಲೇಯಿಂಗ್ 11 ಹೆಸರಿಸಿದ ಡಿಕೆ; ಕೊಹ್ಲಿಗಿಲ್ಲ ನಾಯಕತ್ವ

2026 ರ ಐಪಿಎಲ್ (IPL 2026) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮೊದಲ 20 ಪಂದ್ಯಗಳ ವೇಳಾಪಟ್ಟಿಯ ಪ್ರಕಾರ, ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್ (RCB vs SRH) ನಡುವೆ ನಡೆಯಲಿದೆ. ಮೊದಲ ಪಂದ್ಯಕ್ಕೆ ಆರ್​ಸಿಬಿಯ ಪ್ಲೇಯಿಂಗ್ 11 ಹೇಗಿರಲಿದೆ ಎಂಬ ಕುತೂಹದ ನಡುವೆ ತಂಡದ ಮಾಜಿ ಆಟಗಾರ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (Dinesh Karthik) ಆರ್​ಸಿಬಿಯ ಸಾರ್ವಕಾಲಿಕ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ. ದಿನೇಶ್ ಕಾರ್ತಿಕ್ ಹೆಸರಿಸಿರುವ ತಂಡದಲ್ಲಿ ಕಿಂಗ್ ಕೊಹ್ಲಿ (Virat Kohli) ಇದ್ದಾರೆಯಾದರೂ, ತಂಡವನ್ನು ಚಾಂಪಿಯನ್ ಮಾಡಿದ ರಜತ್ ಪಾಟಿದರ್​ಗೆ ನಾಯಕತ್ವ ನೀಡಿದ್ದಾರೆ.

ಡಿಕೆ ತಂಡಕ್ಕೆ ರಜತ್ ನಾಯಕ

ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್ ಅವರನ್ನು ತಮ್ಮ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲು ಕಾರಣವೂ ಇದೆ. ಅದೆನೆಂದರೆ ಬರೋಬ್ಬರಿ 17 ವರ್ಷಗಳಿಂದ ಒಂದೇ ಒಂದು ಐಪಿಎಲ್ ಟ್ರೋಫಿ ಗೆಲ್ಲದ ಆರ್​ಸಿಬಿ, ರಜತ್ ಪಾಟಿದರ್ ನಾಯಕನಾದ ಮೊದಲ ಆವೃತ್ತಿಯಲ್ಲೇ ತನ್ನ ಟ್ರೋಫಿ ಬರವನ್ನು ನೀಗಿಸಿಕೊಂಡಿತ್ತು. ಹೀಗಾಗಿ ಆರ್​ಸಿಬಿಯ ಈ ಐತಿಹಾಸಿಕ ಗೆಲುವಿನಲ್ಲಿ ನಾಯಕನಾಗಿ ರಜತ್ ಪಾಟಿದಾರ್ ವಹಿಸಿದ ಪಾತ್ರವನ್ನು ಶ್ಲಾಘಿಸಿರುವ ಕಾರ್ತಿಕ, ‘ವಿರಾಟ್ ಕೊಹ್ಲಿ ಹಲವು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿ ಯಶಸ್ವಿಯಾಗಿದ್ದಾರೆ. ಆದರೆ ರಜತ್ ಪಾಟಿದಾರ್ ತಂಡಕ್ಕೆ ಕಪ್ ನೀಡಿದ ನಾಯಕ. ಬ್ಯಾಟ್ಸ್‌ಮನ್ ಆಗಿ ಅವರು ಕಡಿಮೆ ಅವಧಿಯಲ್ಲಿ ಮಾಡಿದ ಪ್ರಭಾವ ಅಸಾಧಾರಣವಾಗಿದೆ’ ಎಂದು ಕಾರ್ತಿಕ್ ವಿವರಿಸಿದ್ದಾರೆ.

ಬ್ಯಾಟಿಂಗ್ ಕ್ರಮಾಂಕ ಹೇಗಿದೆ?

ಉಳಿದಂತೆ ತಂಡದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಹೊಸ ಪ್ರಯೋಗ ಮಾಡಿರುವ ಡಿಕೆ, ‘ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮತ್ತು ಫಾಫ್ ಡು ಪ್ಲೆಸಿಸ್ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಸ್ಥಾನ ಪಡೆದರೆ, ನಾಯಕ ರಜತ್ ಪಾಟಿದಾರ್ ನಾಲ್ಕನೇ ಸ್ಥಾನವನ್ನುನ ಪಡೆದುಕೊಂಡಿದ್ದಾರೆ. ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಐದನೇ ಸ್ಥಾನ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಆರನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಕೃನಾಲ್ ಪಾಂಡ್ಯ ಆಲ್ ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಯಾರ್ಯಾರು?

ಬೌಲಿಂಗ್ ವಿಭಾಗದಲ್ಲಿ ಅನುಭವಿ ಮತ್ತು ಹೊಸಬರ ಮಿಶ್ರಣವಿದೆ. ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ಯುಜ್ವೇಂದ್ರ ಚಾಹಲ್ ಮತ್ತು ಹರ್ಷಲ್ ಪಟೇಲ್‌ಗೆ ಸ್ಥಾನ ನೀಡಲಾಗಿದೆ. ವೇಗದ ಬೌಲಿಂಗ್ ಜವಾಬ್ದಾರಿಗಳನ್ನು ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹೇಜಲ್‌ವುಡ್‌ಗೆ ವಹಿಸಲಾಗಿದೆ. ಆರ್​ಸಿಬಿ ಕಪ್ ಗೆಲ್ಲುವಲ್ಲಿ ಹೇಜಲ್‌ವುಡ್ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರನ್ನು ತಂಡದಲ್ಲಿ ಸೇರಿಸಲಾಗಿದೆ ಎಂದು ಡಿಕೆ ಹೇಳಿಕೊಂಡಿದ್ದಾರೆ.

IPL 2026: 49, 158.. ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್; ಕೆರಳಿ ಕೆಂಡವಾದ ಫ್ಯಾನ್ಸ್

ದಿನೇಶ್ ಕಾರ್ತಿಕ್ ಸಾರ್ವಕಾಲಿಕ ಆರ್​ಸಿಬಿ ಪ್ಲೇಯಿಂಗ್ 11: ಕ್ರಿಸ್ ಗೇಲ್, ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಎಬಿ ಡಿವಿಲಿಯರ್ಸ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಜೋಶ್ ಹೇಜಲ್‌ವುಡ್,

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಗಡ ತೆರಿಗೆ ಪಾವತಿಯ ಇ-ಮೇಲ್ ಬರುತ್ತಿದೆಯಾ? ಆದಾಯ ತೆರಿಗೆ ಇಲಾಖೆಯ ಸ್ಪಷ್ಟೀಕರಣ ಇಲ್ಲಿದೆ

ನವದೆಹಲಿ, ಮಾರ್ಚ್ 14: ಕಳೆದೆರಡು ದಿನಗಳಿಂದ ಅನೇಕ ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ತೆರಿಗೆದಾರರಿಗೆ ಮುಂಗಡ ತೆರಿಗೆಯ ಬಗ್ಗೆ ಆದಾಯ ತೆರಿಗೆ (Income Tax) ಇಲಾಖೆಯಿಂದ ಇಮೇಲ್‌ಗಳು ಬರುತ್ತಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಚರ್ಚೆಯೂ ಶುರುವಾಗಿದೆ. ಹೀಗಾಗಿ, ಮುಂಗಡ ತೆರಿಗೆ ಇ-ಅಭಿಯಾನದ ಅಡಿಯಲ್ಲಿ ಕಳುಹಿಸಲಾದ ಇ-ಮೇಲ್‌ಗಳ ಕುರಿತು ಆದಾಯ ತೆರಿಗೆ ಇಲಾಖೆ ಸ್ಪಷ್ಟೀಕರಣವನ್ನು ನೀಡಿದೆ. ‘ಮಹತ್ವದ ವಹಿವಾಟುಗಳ’ ಬಗ್ಗೆ ನಕಲಿ ಮುಂಗಡ ತೆರಿಗೆ ಪಾವತಿಯ ಇ-ಮೇಲ್​ಗಳು ಕೆಲವರಿಗೆ ಬರುತ್ತಿವೆ. ಅವುಗಳನ್ನು ನಿರ್ಲಕ್ಷಿಸಲು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಆದಾಯ ತೆರಿಗೆ ಇಲಾಖೆಯು ಪ್ರಸ್ತುತ ಮುಂಗಡ ತೆರಿಗೆ ಇ-ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನದ ಅಡಿಯಲ್ಲಿ, ಜನರು ತಮ್ಮ ಮುಂಗಡ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಅವರು ಮಾಡಿದ ಪ್ರಮುಖ ಹಣಕಾಸು ವಹಿವಾಟುಗಳನ್ನು ನೆನಪಿಸಲಾಗುತ್ತದೆ. ಈ ಸ್ವಯಂಚಾಲಿತ ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ತಾಂತ್ರಿಕ ದೋಷ ಸಂಭವಿಸಿದೆ. ಇದರ ಪರಿಣಾಮವಾಗಿ, ಅನೇಕ ತೆರಿಗೆದಾರರು ತಮ್ಮ ಹಣಕಾಸಿನ ವಹಿವಾಟುಗಳ ಬಗ್ಗೆ ವಾಸ್ತವಕ್ಕೆ ಯಾವುದೇ ಸಂಬಂಧವಿಲ್ಲದ ಡೇಟಾ ಮತ್ತು ವಿವರಗಳನ್ನು ಪಡೆದಿದ್ದಾರೆ. ಈ ದೋಷವು ಎಲ್ಲ ತೆರಿಗೆ ದಾಖಲೆಗಳನ್ನು ಹೊಂದಿರುವ ಮತ್ತು ನಿಯಮಗಳಿಗೆ ಅನುಸಾರವಾಗಿ ತಮ್ಮ ಎಲ್ಲಾ ತೆರಿಗೆಗಳನ್ನು ಪಾವತಿಸಿದವರಲ್ಲಿಯೂ ಸಹ ಭಯವನ್ನು ಉಂಟುಮಾಡಿದೆ.

ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೂ EMI?: ಜಿಬಿಎಯಿಂದ ಬೆಂಗಳೂರಿಗರಿಗೆ ಸಿಗುತ್ತಾ ಗುಡ್​​ ನ್ಯೂಸ್​?

2026-27 (ಹಣಕಾಸು ವರ್ಷ 2025-26)ರಲ್ಲಿ ನಡೆಯುತ್ತಿರುವ ಮುಂಗಡ ತೆರಿಗೆ ಇ-ಅಭಿಯಾನದ ಭಾಗವಾಗಿ ಕೆಲವು ತೆರಿಗೆದಾರರು ಕೈಗೊಂಡ ‘ಮಹತ್ವದ ವಹಿವಾಟುಗಳ’ ಬಗ್ಗೆ ತಪ್ಪಾದ ವಿವರಗಳನ್ನು ಹೊಂದಿರುವ ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಅದನ್ನು ನಿರ್ಲಕ್ಷ್ಯಿಸಿ. ಈ ದೋಷವನ್ನು ತಮ್ಮ ಗಮನಕ್ಕೆ ತಂದಿದ್ದಕ್ಕಾಗಿ ತೆರಿಗೆದಾರರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಇದರಿಂದ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಇದನ್ನೂ ಓದಿ: ಟ್ಯಾಕ್ಸ್ ಪಾಲು ಕರ್ನಾಟಕಕ್ಕೆ ಅತಿಹೆಚ್ಚು ಏರಿಕೆ ಆಗಿದ್ದು ಯಾಕೆ? ಇಲ್ಲಿದೆ ಕಾರಣ, ಮತ್ತು ವಿವಿಧ ರಾಜ್ಯಗಳ ತೆರಿಗೆ ಪಟ್ಟಿ

“ಕೆಲವು ತೆರಿಗೆದಾರರು ಮುಂಗಡ ತೆರಿಗೆ ಇ-ಅಭಿಯಾನದ ಭಾಗವಾಗಿ ಅವರು ಕೈಗೊಂಡ ‘ಮಹತ್ವದ ವಹಿವಾಟುಗಳ’ ಬಗ್ಗೆ ತಪ್ಪಾದ ವಿವರಗಳನ್ನು ಹೊಂದಿರುವ ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ. ನಮ್ಮ ಸೇವಾ ಪೂರೈಕೆದಾರರೊಂದಿಗೆ ಸಮನ್ವಯದಿಂದ ಈ ವಿಷಯವನ್ನು ಪರಿಹರಿಸಲು ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ಹಿಂದಿನ ಇಮೇಲ್ ಸಂವಹನವನ್ನು ನಿರ್ಲಕ್ಷಿಸಿ. ಇ-ಫೈಲಿಂಗ್ ಪೋರ್ಟಲ್ ಮೂಲಕ ಪ್ರವೇಶಿಸಬಹುದಾದ ಪೋರ್ಟಲ್‌ನಲ್ಲಿರುವ ಇ-ಕ್ಯಾಂಪೇನ್ ಟ್ಯಾಬ್ ಮೂಲಕ ತಮ್ಮ ವಹಿವಾಟಿನ ವಿವರಗಳನ್ನು ಪರಿಶೀಲಿಸಬಹುದು” ಎಂದು ತೆರಿಗೆದಾರರಿಗೆ ಸಲಹೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ

ನೆಲಮಂಗಲ, ಮಾರ್ಚ್​​ 14: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ರಾಷ್ಟ್ರಪಕ್ಷಿ 6 ನವಿಲುಗಳು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಿಲಾಲ್ ನಗರದ ತೋಟದ ಶೆಡ್ ಬಳಿ ಒಂದೇ ಜಾಗದಲ್ಲಿ ಆರು ನವಿಲುಗಳ ಕಳೇಬರ ಪತ್ತೆಯಾಗಿದೆ. ನವಿಲುಗಳಿಗೆ ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ನೆಲಮಂಗಲ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟೌನ್ ಠಾಣೆ​ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ದೇಹದಲ್ಲಿ ಪದೇಪದೇ ದದ್ದುಗಳು ಕಂಡುಬರುತ್ತಿದ್ದರೆ ನಿರ್ಲಕ್ಷಿಸಬೇಡಿ! ಇದು ಈ ರೋಗ ಬರುವ ಮುನ್ಸೂಚನೆ

ಅನೇಕರಿಗೆ ದೇಹದ ಮೇಲೆ ಪದೇಪದೇ ದದ್ದುಗಳು (Skin Rashes) ಅಥವಾ ಚರ್ಮದ ಮೇಲೆ ಕೆಂಪು ಕಲೆಗಳು ಕಾಣಿಸುವ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯ ಅಲರ್ಜಿ ಅಥವಾ ಹವಾಮಾನ ಪರಿಣಾಮ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ, ಏಕೆಂದರೆ ಇದು ಕೆಲವೊಮ್ಮೆ ದೇಹದಲ್ಲಿನ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ದದ್ದುಗಳು ಸಣ್ಣ ಕೆಂಪು ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಕೆಲವರಿಗೆ ಇದರ ಜೊತೆಗೆ ಉರಿ, ಚರ್ಮದ ಊತ ಅಥವಾ ಸ್ವಲ್ಪ ನೋವು ಕಾಣಿಸಬಹುದು. ಕೆಲ ಸಂದರ್ಭಗಳಲ್ಲಿ ದದ್ದುರಗಳು ದೇಹದ ಒಂದು ಭಾಗದಲ್ಲೇ ಸೀಮಿತವಾಗಿರಬಹುದು, ಮತ್ತೊಂದಿಷ್ಟು ಜನರಲ್ಲಿ ಇದು ದೇಹದ ಹಲವೆಡೆ ಕಾಣಿಸಬಹುದು. ಕೆಲವರಿಗೆ ಚರ್ಮ ಒಣಗುವಂತಹ ಸಮಸ್ಯೆಯೂ ಕಾಣಿಸಬಹುದು.

ಯಾವ ಕಾರಣಕ್ಕೆ ದದ್ದುಗಳು ಕಂಡುಬರುತ್ತವೆ?

ಚರ್ಮ ತಜ್ಞೆ ಡಾ. ಸೌಮ್ಯ ಸಚದೇವಾ ಅವರು ಹೇಳುವ ಪ್ರಕಾರ, ದೇಹದಲ್ಲಿ ಪದೇಪದೇ ದದ್ದುರಗಳು ಕಾಣಿಸಿಕೊಳ್ಳಲು ಹಲವು ಕಾರಣಗಳಿರಬಹುದು. ಅಲರ್ಜಿ ಪ್ರಮುಖ ಕಾರಣವಾಗಿದ್ದು, ಕೆಲವು ಆಹಾರ ಪದಾರ್ಥಗಳು, ಔಷಧಿ, ಧೂಳು, ಬೆವರು ಅಥವಾ ರಾಸಾಯನಿಕಗಳ ಸಂಪರ್ಕದಿಂದ ದದ್ದುಗಳು ಉಂಟಾಗಬಹುದು. ಎಕ್ಸಿಮಾ ಅಥವಾ ಡರ್ಮಟೈಟಿಸ್‌ ನಂತಹ ಚರ್ಮದ ಕಾಯಿಲೆಗಳೂ ಇದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಕೂದಲಿಗೆ ಹೇರ್ ಡೈ ಹಚ್ಚುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ಸಂವೇದನಶೀಲ ಚರ್ಮ ಹೊಂದಿರುವವರು, ಹೆಚ್ಚು ಬೆವರುವವರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ಹೆಚ್ಚಾಗಿ ರಾಸಾಯನಿಕಗಳಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸುವವರಲ್ಲಿಯೂ ಸಮಸ್ಯೆ ಹೆಚ್ಚಾಗಬಹುದು.

ತಡೆಗಟ್ಟುವುದು ಹೇಗೆ?

ಚರ್ಮವನ್ನು ಸ್ವಚ್ಛವಾಗಿ ಮತ್ತು ಒಣಗಿಡುವುದು ಮುಖ್ಯ. ಹೆಚ್ಚು ಬೆವರು ಬಂದರೆ ನಿಯಮಿತವಾಗಿ ಸ್ನಾನ ಮಾಡುವುದು ಮತ್ತು ಸ್ವಚ್ಛ ಬಟ್ಟೆ ಧರಿಸುವುದು ಉತ್ತಮ. ಅಲರ್ಜಿ ಉಂಟುಮಾಡುವ ವಸ್ತುಗಳಿಂದ ದೂರವಿರುವುದು ಮತ್ತು ಸಮತೋಲನ ಆಹಾರ ಸೇವಿಸುವುದು ಸಹ ಮುಖ್ಯ. ದದ್ದುರಗಳು ಮತ್ತೆ ಮತ್ತೆ ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: 49, 158… ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್; ಕೆರಳಿ ಕೆಂಡವಾದ ಫ್ಯಾನ್ಸ್

2026 ರ ಐಪಿಎಲ್ ಇದೇ ಮಾರ್ಚ್​ 28 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್‌ ಆರ್​ಸಿಬಿ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವೆ ನಡೆಯಲಿದೆ. ಆದಾಗ್ಯೂ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್​ ಫ್ರಾಂಚೈಸಿ ತನ್ನ ನೂತನ ಜೆರ್ಸಿ ಬಿಡುಗಡೆ ಪ್ರೋಮೋದಲ್ಲಿ ಆರ್​ಸಿಬಿ ತಂಡವನ್ನು ಬಹಿರಂಗವಾಗಿಯೇ ಗೇಲಿ ಮಾಡಿದ್ದು, ಇದು ಹಾಲಿ ಚಾಂಪಿಯನ್‌ ತಂಡದ ಅಭಿಮಾನಿಗಳನ್ನು ಕೆರಳಿಸಿದೆ. ಕಳೆದ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಇದೇ ಆರ್​ಸಿಬಿ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿದ್ದ ಮತ್ತು ಇಡೀ ಆವೃತ್ತಿಯಲ್ಲಿ ಕೇವಲ 5 ಪಂದ್ಯಗಳನ್ನು ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದ್ದ ಕೆಕೆಆರ್, ಟೂರ್ನಿ ಆರಂಭಕ್ಕೂ ಮುನ್ನವೇ ಆರ್​ಸಿಬಿ ಅಭಿಮಾನಿಗಳನ್ನು ಕೆಣಕಿ ಲೀಗ್​ನ ಕಾವು ಹೆಚ್ಚಾಗುವಂತೆ ಮಾಡಿದೆ.

ವಾಸ್ತವವಾಗಿ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕೆಕೆಆರ್ ಫ್ರಾಂಚೈಸಿ ತನ್ನ ತಂಡದ ನೂತನ ಜೆರ್ಸಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. 1:38 ನಿಮಿಷಗಳ ವಿಡಿಯೋದಲ್ಲಿ ಕೆಕೆಆರ್ ತನ್ನ ಕೆಲವು ಐತಿಹಾಸಿಕ ಸಾಧನೆಗಳನ್ನು ನೆನಪು ಮಾಡಲು ಪ್ರಯತ್ನಿಸಲಿದೆ. ಇದರಲ್ಲಿ ಹೆಚ್ಚಿನದಾಗಿ ಆರ್​ಸಿಬಿ ವಿರುದ್ಧ ಕೆಕೆಆರ್ ತಂಡದ ಪಾರುಪತ್ಯ ಹೇಗಿತ್ತು ಎಂಬುದನ್ನು ಹೇಳಿದೆ. ಅದರಲ್ಲೂ ಕೆಕೆಆರ್, ಪ್ರಸ್ತುತ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಉದ್ದೇಶಪೂರ್ವಕವಾಗಿ ಅಣಕಿಸುವ ಕೆಲಸ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲವನ್ನು ಉಂಟುಮಾಡಿದೆ.

ಮಾರ್ಚ್ 14 ರ ಶನಿವಾರ, ಕೆಕೆಆರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೊಸ ಜೆರ್ಸಿಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಮೊದಲಿಗೆ ಟ್ರಾಫಿಕ್ ಸಿಗ್ನಲ್‌ ತೋರಿಸಲಾಗಿದ್ದು, ಆ ಸಿಗ್ನಲ್​ನ ಒಂದು ದೀಪದಲ್ಲಿ 49 ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಇದು 49 ಸೆಕೆಂಡುಗಳನ್ನು ಅರ್ಥೈಸುತ್ತದೆಯಾದರೂ, ಇಲ್ಲಿ ತನ್ನ ಬುದ್ಧಿ ಬಳಸಿರುವ ಕೆಕೆಆರ್, ಹಾಲಿ ಚಾಂಪಿಯನ್ ಬೆಂಗಳೂರು ತಂಡವನ್ನು 49 ರನ್​ಗಳಿಗೆ ಆಲೌಟ್ ಮಾಡಿದ್ದನ್ನು ನೆನಪಿಸುವ ಕೆಲಸ ಮಾಡಿದೆ.

ವಾಸ್ತವವಾಗಿ, 2017 ರ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ಆರ್​ಸಿಬಿ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್ 131 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಆರ್​ಸಿಬಿ ಕೇವಲ 49 ರನ್​ಗಳಿಗೆ ಆಲೌಟ್ ಆಗಿ, ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಮೊದಲ ತಂಡವೆಂಬ ಮುಜುಗರದ ದಾಖಲೆಗೆ ಕೊರಳೊಡ್ಡಿತ್ತು.

ಇದಾದ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ 158ನೇ ಟೇಕ್ ಎಂಬುದನ್ನು ಬಳಸಿರುವ ಕೆಕೆಆರ್ ಮತ್ತೆ ಆರ್​ಸಿಬಿಯನ್ನು ಅಣಕಿಸುವ ಕೆಲಸ ಮಾಡಿದೆ. ಐಪಿಎಲ್ ಮೊದಲ ಆವೃತ್ತಿಯಲ್ಲಿ ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಪರ ಆಡಿದ್ದ ಬ್ರೆಂಡನ್ ಮೆಕಲಮ್ ಬರೋಬ್ಬರಿ 158 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲೂ ಆರ್​ಸಿಬಿ ಹೀನಾಯವಾಗಿ ಸೋತಿತ್ತು. ವಿಡಿಯೋ ಮುಂದುವರೆದಂತೆ ಸ್ಕೂಟರ್​ನ ನಂಬರ್ ಪ್ಲೇಟ್ ತೋರಿಸಲಾಗಿದೆ. ಅದರಲ್ಲಿ 272-7 ಎಂದು ಬರೆಯಲಾಗಿದೆ. ಇದು ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್‌ ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿದೆ.

ಅದೇ ರೀತಿ, ಒಂದು ಸ್ಥಳದಲ್ಲಿ, 105/0, 6 ಓವರ್‌ಗಳು ಮತ್ತು 5 ಸಿಕ್ಸರ್ಗಳು​ ಎಂದು ಬರೆಯಲಾಗಿದೆ. ಇದು 2017 ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದ ಪವರ್‌ಪ್ಲೇನಲ್ಲಿ ಕೆಕೆಆರ್‌ ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಇನ್ನು 6 ಎಸೆತಗಳಲ್ಲಿ 5 ಸಿಕ್ಸರ್ ಎಂಬುದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್​ನಲ್ಲಿ ರಿಂಕು ಸಿಂಗ್ ಸತತ 5 ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಂದಹಾಗೆ ಆ ಓವರ್ ಬೌಲ್ ಮಾಡಿದ್ದು, ಪ್ರಸ್ತುತ ಆರ್​ಸಿಬಿ ಪರ ಆಡುತ್ತಿರುವ ವೇಗಿ ಯಶ್ ದಯಾಳ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಂತೆ‌

ಅಡುಗೆಗೆ ಒಳ್ಳೆಯ ರುಚಿ ಮತ್ತು ಘಮ ಬರುತ್ತದೆಂದು ಪ್ರತಿಯೊಂದು ಅಡುಗೆಯಲ್ಲೂ ಸಹ ಕೊತ್ತಂಬರಿ ಸೊಪ್ಪನ್ನು (Coriander leaves) ಬಳಸಲಾಗುತ್ತದೆ. ಅಗ್ಗದ ಬೆಲೆಗೆ ಸಿಗುವಂತಹ ಈ ಹಸಿರು ಸೊಪ್ಪು ಆಹಾರದ ಟೇಸ್ಟ್‌ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಂತೆ. ಹೌದು ಕೊತ್ತಂಬರಿ ಸೊಪ್ಪು ವಿಟಮಿನ್‌ ಎ, ಸಿ, ಕೆ ಮತ್ತು ಖನಿಜಗಳು, ಫೈಬರ್  ಸಮೃದ್ಧವಾಗಿದ್ದು, ಮತ್ತು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಇದು  ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯು ಮೈಗ್ರೇನ್, ತಲೆನೋವು, ಥೈರಾಯ್ಡ್, ಮಧುಮೇಹ, ಕೊಲೆಸ್ಟ್ರಾಲ್, ಅಜೀರ್ಣ ಮತ್ತು ಹಾರ್ಮೋನುಗಳ ಅಸಮತೋಲನದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದಂತೆ ಜೊತೆಗೆ ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದಂತೆ. ಒಟ್ಟಾರೆಯಾಗಿ ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಲಭಿಸುವ ಪ್ರಯೋಜನಗಳೇನು?

ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ: ಮಧುಮೇಹದಿಂದ ಬಳಲುತ್ತಿರುವವರಿಗೆ, ಕೊತ್ತಂಬರಿ ಸೊಪ್ಪು ಒಂದು ಔಷಧವಾಗಿದೆ. ಈ ಸೊಪ್ಪು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಕ್ರಿಯ ಪಾತ್ರ ವಹಿಸುವ ವಿಶೇಷ ನೈಸರ್ಗಿಕ ಕಿಣ್ವಗಳನ್ನು ಹೊಂದಿರುತ್ತದೆ. ಇದು ನೈಸರ್ಗಿಕ ನಾರಿನಲ್ಲಿ ಸಮೃದ್ಧವಾಗಿದೆ, ಇದು ಆಹಾರವನ್ನು ನಿಧಾನವಾಗಿ ಜೀರ್ಣಿಸಿಕೊಳ್ಳುತ್ತದೆ ಮತ್ತು ಹಠಾತ್ ಸಕ್ಕರೆ ಏರಿಕೆಯನ್ನು ತಡೆಯುತ್ತದೆ. ನೀವು ಬಯಸಿದರೆ, ನೀವು ಕೊತ್ತಂಬರಿ ಸೊಪ್ಪನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಆ ನೀರನ್ನು ಕುಡಿಯಬಹುದು, ಇದು ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕೊತ್ತಂಬರಿ ಸೊಪ್ಪು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ದೇಹವು ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಇದು ದೇಹದ ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ ಮತ್ತು ದೀರ್ಘಕಾಲದವರೆಗೆ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.

ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ: ಹೊಟ್ಟೆಯಲ್ಲಿ ಪಿತ್ತರಸ ಅಥವಾ ಆಮ್ಲೀಯತೆಯ ಪ್ರಮಾಣ ಹೆಚ್ಚಾದರೆ, ಅದರ ನೇರ ಪರಿಣಾಮ ಮುಖದ ಮೇಲೆ ಗೋಚರಿಸುತ್ತದೆ. ಇದು ಮೊಡವೆ, ಕೆಂಪು ಮತ್ತು ದದ್ದುಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೊತ್ತಂಬರಿ ಸೊಪ್ಪು ಸ್ವಭಾವತಃ ತಂಪಾಗಿರುವುದರಿಂದ, ಅವು ದೇಹದಲ್ಲಿನ ಹೆಚ್ಚುವರಿ ಆಮ್ಲ ಅಥವಾ ಪಿತ್ತರಸವನ್ನು ಶಾಂತಗೊಳಿಸುತ್ತವೆ. ದೇಹವನ್ನು ಒಳಗಿನಿಂದ ಶುದ್ಧೀಕರಿಸಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಮುಖದ ಮೇಲಿನ ಕಲೆಗಳನ್ನು ನಿವಾರಿಸುತ್ತದೆ.

ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ: ಕೊತ್ತಂಬರಿ ಸೊಪ್ಪಿನಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಗ್ಯಾಸ್, ಅಜೀರ್ಣ ಮತ್ತು ಉಬ್ಬರದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿಡಲು ಮತ್ತು ನಿಮ್ಮ ಹೊಟ್ಟೆಯನ್ನು ಹಗುರವಾಗಿಡಲು ಬಯಸಿದರೆ, ನಿಮ್ಮ ದೈನಂದಿನ ಆಹಾರದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಬೇಸಿಗೆಯ ದಣಿವು ತಣಿಸಲು ಸಹಕಾರಿ ಪಾನೀಯ

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಕೊತ್ತಂಬರಿ ಸೊಪ್ಪು ನೈಸರ್ಗಿಕ ಮೂತ್ರವರ್ಧಕದಂತೆ ಕಾರ್ಯನಿರ್ವಹಿಸುತ್ತದೆ, ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳು ಕೊತ್ತಂಬರಿ ಸೊಪ್ಪಿನ ನಿಯಮಿತ ಮತ್ತು ಮಿತ ಸೇವನೆಯು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸಿವೆ.

ಕೂದಲಿಗೆ ಪ್ರಯೋಜನಕಾರಿ: ಕೊತ್ತಂಬರಿ ಸೊಪ್ಪು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅವುಗಳಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ಇದು ಕೂದಲನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ, ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೀಣ್ಯ ಇಂಡಸ್ಟ್ರಿಗೂ ತಟ್ಟಿದ ಗ್ಯಾಸ್ ​ಎಫೆಕ್ಟ್: ಕೆಲಸವಿಲ್ಲದೇ ಕೈಕಟ್ಟಿ ಕುಳಿತ ಕಾರ್ಮಿಕರು; ಕೋಟ್ಯಂತರ ರೂ ನಷ್ಟ

ನೆಲಮಂಗಲ, ಮಾರ್ಚ್​​ 14: ಮಧ್ಯಪ್ರಾಚ್ಯದಲ್ಲಿ ಯುದ್ದದ ಎಫೆಕ್ಟ್ ಹಿನ್ನೆಲೆ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​ಗಳ (gas cylinder) ಅಭಾವ ಉಂಟಾಗಿದ್ದು, ಹೋಟೆಲ್ ಉದ್ಯಮದ ಮೇಲೆ ಎಫೆಕ್ಟ್ ಜೊತೆಗೆ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಚ್ಚಾ ವಸ್ತು ಪೂರೈಕೆ ಮಾಡುವ ಕಂಪನಿಗಳಿದ್ದು ಸಿಲಿಂಡರ್ ಎಫೆಕ್ಟ್​ನಿಂದ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೂ ತಟ್ಟಿದ ಕಮರ್ಷಿಯಲ್ ಸಿಲಿಂಡರ್ ಬಿಸಿ

ಕಮರ್ಷಿಯಲ್ ಸಿಲಿಂಡರ್ ಸ್ಟಾಕ್ ಬಂದ್ ಹಿನ್ನೆಲೆ ಹೋಟೆಲ್ ಉದ್ಯಮದ ಜೊತೆಗೆ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೆ ದೊಡ್ಡ ಪರಿಣಾಮ ಬೀರಿದೆ. ದಶಕಗಳ ಕಾಲ ನಡೆಸಿಕೊಂಡು ಬಂದಿರುವ ಕಂಪನಿಗಳು ಗ್ಯಾಸ್ ಸಿಲಿಂಡರ್ ಇಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶದ ಶ್ರೀ ಲಕ್ಷ್ಮಿ ಫ್ರೋಫೈಲ್ ಕಂಪನಿಯಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರಿದ್ದು ಕೆಲಸವಿಲ್ಲದೆ ಕೈ ಕಟ್ಟಿ ಕುಳಿತಿದ್ದಾರೆ.

ಇದನ್ನೂ ಓದಿ: ಬುಕ್​​ ಆಗದ ಗ್ಯಾಸ್​​​: ಖಾಲಿ ಸಿಲಿಂಡರ್ ಹಿಡಿದು ಕುಳಿತ ಜನ; ಮನೆ ಅಡುಗೆಗೂ ಕುತ್ತು

ಇನ್ನು ಈ ಕಂಪನಿ 40 ಕಂಪನಿಗಳಿಗೆ ಕಚ್ಚಾ ವಸ್ತು ಪೂರೈಕೆ ಮಾಡುವ ಕಂಪನಿಯಾಗಿದ್ದು, 30 ವರ್ಷಗಳಿಂದ ನಡೆಸಿಕೊಂಡು ಬರ್ತಿದ್ದಾರೆ. ಇರಾಕ್ ಮತ್ತು ಇಸ್ರೇಲ್ ಯುದ್ದದಿಂದ ಗ್ಯಾಸ್ ಮೇಲೆ ಪರಿಣಾಮ ಬೀರಿದ್ದು ದಿನನಿತ್ಯ ಕಂಪನಿಯಲ್ಲಿ 50 ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಪ್ರತಿನಿತ್ಯ 15 ಗ್ಯಾಸ್​​ ಸಿಲಿಂಡರ್ ಅವಶ್ಯಕತೆದೆ. ಇದೀಗ ಸಿಲಿಂಡರ್ ಇಲ್ಲದೆ ಕಾರ್ಮಿಕರು ಕೈ ಕಟ್ಟಿ ಕುಳಿತಿದ್ದಾರೆ. ಇದ್ರಿಂದ ಕೋಟ್ಯಂತರ ರೂ ನಷ್ಟವಾಗಿದೆ.

ಇದನ್ನೂ ಓದಿ: ಗ್ಯಾಸ್​​​ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್​​​ವೊಂದರಿಂದ ಭರ್ಜರಿ ಆಫರ್​​: ಷರತ್ತು ಅನ್ವಯ

ಒಟ್ಟಿನಲ್ಲಿ ಕಮರ್ಷಿಯಲ್ ಸಿಲಿಂಡರ್ ಎಫೆಕ್ಟ್​ನಿಂದ ಸಾಕಷ್ಟು ಉದ್ಯಮಗಳ ಮೇಲೆ ಪರಿಣಾಮ ಬೀರಿದ್ದು, ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೂ ಇದರ ಎಫೆಕ್ಟ್ ತಟ್ಟಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link