ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ? – Kannada News | Melody trends as modi gifts toffee to meloni confusion of parle products vs parle industries

ಮೆಲೋನಿ ವರ್ಸಸ್ ಮೆಲೋಡಿImage Credit source: Giorgia Meloni X Account

ನವದೆಹಲಿ, ಮೇ 20: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೆಲೋಡಿ ಚಾಕೊಲೇಟ್​ಗಳ (Parle Melody Toffee) ಪ್ಯಾಕೆಟ್ ಅನ್ನು ಗಿಫ್ಟ್ ಆಗಿ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇಟಲಿ ಪಿಎಂ ಮೆಲೋನಿ ಅವರೇ ಖುದ್ದಾಗಿ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದು ಅದು ಬಹಳ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ರಿಯಲ್ ಎಸ್ಟೇಟ್ ಕಂಪನಿಯೊಂದರ ಷೇರು ಬೆಲೆ ಇಂದು ಬುಧವಾರ ಸಿಕ್ಕಾಪಟ್ಟೆ ಏರಿದೆ.

ಮೆಲೋಡಿ ಚಾಕೊಲೇಟ್​ಗೂ ರಿಯಲ್ ಎಸ್ಟೇಟ್ ಕಂಪನಿಗೂ ಏನು ಸಂಬಂಧ?

ಮೋದಿ ಅವರು ಮೆಲೋನಿಗೆ ಗಿಫ್ಟ್ ಆಗಿದ್ದ ನೀಡಿದ್ದ ಮೆಲೋಡಿ ಚಾಕೊಲೇಟ್ ಅನ್ನು ತಯಾರಿಸುವ ಕಂಪನಿ ಹೆಸರು ಪಾರ್ಲೆ ಪ್ರಾಡಕ್ಟ್ಸ್ ಲಿಮಿಟೆಡ್. ಇದು ಚೌಹಾಣ್ ಕುಟುಂಬ ಸ್ಥಾಪಿಸಿದ ಬಹುರಾಷ್ಟ್ರೀಯ ಕಂಪನಿ. ಬೆಂಗಳೂರು ಸೇರಿದಂತೆ ಹಲವೆಡೆ ಇದರ ಉತ್ಪಾದಕ ಘಟಕಗಳಿವೆ. ಪಾರ್ಲೆ-ಜಿ ಬಿಸ್ಕತ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುವ ಈ ಕಂಪನಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ.

ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

ಆದರೆ, ಪಾರ್ಲೆ ಇಂಡಸ್ಟ್ರೀಸ್ ಎನ್ನುವ ಇನ್ನೊಂದು ಕಂಪನಿಯ ಷೇರುಗಳಿಗೆ ಇಂದು ಬೇಡಿಕೆ ಬಂದಿತ್ತು. ಇದು ರಿಯಲ್ ಎಸ್ಟೇಟ್ ಕಂಪನಿ. ಇದರ ಹೆಸರಲ್ಲಿ ಪಾರ್ಲೆ ಇರುವುದರಿಂದ ಬಹಳಷ್ಟು ರೀಟೇಲ್ ಹೂಡಿಕೆದಾರರು ಫೂಡ್ ಕಂಪನಿ ಎಂದು ಗೊಂದಲ ಮಾಡಿಕೊಂಡಿರಬಹುದು.

ಪಾರ್ಲೆ ಇಂಡಸ್ಟ್ರೀಸ್​ನ ಲಕ್ ಕೂಡ ಹೌದು. ಕಳೆದ ಕೆಲ ತಿಂಗಳಿಂದ ಇದರ ಷೇರುಬೆಲೆ ಶೇ. 35ರಷ್ಟು ಕುಸಿದಿತ್ತು. ಇವತ್ತು ಮೆಲೋನಿಗೆ ಪಾರ್ಲೆ ಮೆಲೋಡಿ ಚಾಕೊಲೇಟ್ ಗಿಫ್ಟ್ ಆಗಿ ಮೋದಿ ಕೊಟ್ಟ ಬಳಿಕ ಪಾರ್ಲೆ ಇಂಡಸ್ಟ್ರೀಸ್​ಗೆ ಒಂದು ದಿನದ ಶುಕ್ರ ದೆಸೆ ಬಂದು ಶೇ. 5ರಷ್ಟು ಬೆಲೆ ಹೆಚ್ಚಿದೆ.

ಮೆಲೋನಿಗೆ ಮೋದಿ ಮೆಲೋಡಿ ಚಾಕೊಲೇಟ್ ಕೊಟ್ಟಿದ್ದು ಯಾಕೆ?

ಜಾರ್ಜಿಯಾ ಮೆಲೋನಿ ಅವರು ಇಟಲಿ ಪ್ರಧಾನಿಯಾದಾಗಿನಿಂದ ನರೇಂದ್​ರ ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಅವರಿಬ್ಬರು ಭೇಟಿಯಾದಾಗ ಆಪ್ತತೆ ಎದ್ದು ಕಾಣುವಂತಿರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನರು #Melody ಎನ್ನುವ ಹ್ಯಾಷ್​ಟ್ಯಾಗ್ ಕೂಡ ಹಾಕಿ ಟ್ವೀಟ್ ಮಾಡಿರುವುದುಂಟು. Melody ಎಂಬುದು ಮೆಲೋನಿ ಮತ್ತು ಮೋದಿ ಅವರ ಮಿಶ್ರ ರೂಪದ ಪದ.

ಇದನ್ನೂ ಓದಿ: ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ

ಇದೇ ಹೊತ್ತಲ್ಲಿ ಮೆಲೋನಿ ಅವರು ಪ್ರಧಾನಿ ಮೋದಿ ತಮಗೆ ಮೆಲೋಡಿ ಟಾಫಿಯನ್ನು ಗಿಫ್ಟ್ ಆಗಿ ನೀಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೆಲೋಡಿ ಟ್ರೆಂಡ್ ಅನ್ನು ಹೆಚ್ಚು ಮಾಡುವ ಉದ್ದೇಶ ಇರಲಿಕ್ಕೆ ಸಾಕು.

ಜಾರ್ಜಿಯಾ ಮೆಲೋನಿ ಅವರ ಟ್ವೀಟ್

ಚಾಕೊಲೇಟ್ ಕಂಪನಿ ರಿಯಾಕ್ಷನ್

ಮೆಲೋಡಿ ಚಾಕೊಲೇಟ್ ಅನ್ನು ಇಟಲಿ ಪಿಎಂಗೆ ಗಿಫ್ಟ್ ಆಗಿ ನೀಡಿದ ಬಳಿಕ ಮೆಲೋಡಿ ಟ್ರೆಂಡಿಂಗ್​ನಲ್ಲಿದೆ. ಈ ಬಗ್ಗೆ ಪಾರ್ಲೆ ಪ್ರಾಡಕ್ಟ್ಸ್​ನ ವೈಸ್ ಪ್ರೆಸಿಡೆಂಟ್ ಮಯಂಕ್ ಶಾ ಪ್ರತಿಕ್ರಿಯಿಸಿ, ತಮ್ಮ ಈ ಬ್ರ್ಯಾಂಡ್ ಹೊಸ ಮಟ್ಟಕ್ಕೆ ಏರಿರುವುದನ್ನು ಒಪ್ಪಿಕೊಂಡಿದ್ದಾರೆ, ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *