Headlines

nagaraj11081993

ಬುಕ್​​ ಆಗದ ಗ್ಯಾಸ್​​​: ಖಾಲಿ ಸಿಲಿಂಡರ್ ಹಿಡಿದು ಕುಳಿತ ಜನ; ಮನೆ ಅಡುಗೆಗೂ ಕುತ್ತು

ಹುಬ್ಬಳ್ಳಿ, ಮಾರ್ಚ್​​  14: ರಾಜ್ಯದಲ್ಲಿ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್ (gas cylinder) ಪೂರೈಕೆಗೆ ಸಮಸ್ಯೆಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಅಭಾವವಿದ್ದು, ಹೋಟೆಲ್ ಮಾಲೀಕರು ದೊಡ್ಡಮಟದಲ್ಲಿ ಪರದಾಡುತ್ತಿದ್ದಾರೆ. ಆದರೆ ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಲು ಸರ್ವರ್ ಸಮಸ್ಯೆಯಾಗುತ್ತಿದ್ದು, ಸಿಲಿಂಡರ್ ಬುಕ್ ಮಾಡಲು ಗ್ರಾಹಕರು ಪರದಾಡುತ್ತಿದ್ದಾರೆ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಮುಂದೆ ತಮಗೆ ಎಲ್ಲಿ ಸಿಲಿಂಡರ್ ಸಿಗೋದಿಲ್ವೋ ಅನ್ನೋ ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ತಗೆದುಕೊಂಡು ಬರ್ತಿದ್ದು, ಹೊಸ ಸಿಲಿಂಡರ್​ಗಾಗಿ ಬೇಡಿಕೆ ಇಡ್ತಿದ್ದಾರೆ….

Read More

ಈ ವಾರ ಒಟಿಟಿಗೆ ಬಂದಿವೆ ಜಬರ್ದಸ್ಥ್ ಸಿನಿಮಾಗಳು: ಇಲ್ಲಿದೆ ಪಟ್ಟಿ

ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಇನ್ನೂ ಕೆಲವು ಪ್ರಮುಖ ಕಲಾವಿದರು ನಟಿಸಿರುವ ‘ಲ್ಯಾಂಡ್​ಲಾರ್ಡ್’ ಸಿನಿಮಾ ಒಟಿಟಿಗೆ ಬರುತ್ತಿದೆ. ಆದರೆ ಈ ವಾರ ಅಲ್ಲ ಬದಲಿಗೆ ಮುಂದಿನ ವಾರ ಮಾರ್ಚ್ 15ಕ್ಕೆ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಮಹಿಳೆ ಮತ್ತು ಒಂದು ನಾಯಿಯ ಕತೆಯನ್ನು ಒಳಗೊಂಡ ಹಾಸ್ಯಮಯ ಸಾಮಾಜಿಕ ಸಿನಿಮಾ ‘ಪೊನ್ನುಂ-ಪೋರಾಟಂ’. ಮಲಯಾಳಂನ ಈ ಸಿನಿಮಾ ಈ ವಾರ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳನ್ನು ಹಾಸ್ಯಮಯವಾಗಿ ತೋರಿಸುವ ಕತೆಯನ್ನು ಈ ಸಿನಿಮಾ…

Read More

ಬಿಳಿ ಬಣ್ಣದ ಬಟ್ಟೆ ದೀರ್ಘಕಾಲದವರೆಗೆ ಹೊಸದರಂತೆ ಕಾಣಬೇಕೆಂದರೆ ಈ ಸಲಹೆ ಪಾಲಿಸಿ

ಬಿಳಿ ಬಟ್ಟೆಗಳು (White Clothes) ತುಂಬಾನೇ ಸ್ಟೈಲಿಶ್‌ ಆಗಿ ಕಾಣುವ ಕಾರಣ ಪ್ರತಿಯೊಬ್ಬರೂ ಈ ಬಣ್ಣದ ಬಟ್ಟೆಯನ್ನೇ ಧರಿಸಲು ಇಷ್ಟಪಡುತ್ತಾರೆ. ಬಿಳಿ ಬಣ್ಣದ ಬಟ್ಟೆಗಳು ಸುಂದರವಾಗಿ ಕಾಣಿಸುವಂತೆ ಮಾಡುವುದು ನಿಜ. ಅದೇ ರೀತಿ ಈ ಬಟ್ಟೆಗಳು ಬೇಗನೆ ಮಾಸುಕಾಗುತ್ತವೆ. ಹೌದು ಬೆವರು, ಧೂಳು, ಕಲೆ ಸಂಗ್ರಹಣೆಯಿಂದ ಹಾಗೂ ಸರಿಯಾದ ರೀತಿಯಲ್ಲಿ ತೊಳೆಯದಿರುವ ಕಾರಣ ಬಿಳಿ ಬಟ್ಟೆಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ವಾಸ್ತವವಾಗಿ, ನಾವು ಮಾಡುವ ಸಣ್ಣ ತಪ್ಪುಗಳೇ ಬಿಳಿ ಬಟ್ಟೆಗಳು ಹೊಳಪನ್ನು ಕಸಿದುಕೊಳ್ಳಲು ಮುಖ್ಯ ಕಾರಣ….

Read More

ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು

ಚಿಕ್ಕಮಗಳೂರು, (ಮಾರ್ಚ್ 14): ತಂದೆ ತಾಯಿಯರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳು ಮಾಡುವುದು ಸಾಮಾನ್ಯ. ತಂದೆಯ ಚಿತೆಗೆ ಮೊದಲು ಆತನ ಹಿರಿಯ ಮಗನೇ ಅಗ್ನಿ ಸ್ಪರ್ಶಮಾಡಬೇಕೆಂದು ಹಿಂದೂ ಸಂಪ್ರದಾಯದಲ್ಲಿ ಹೇಳಲಾಗಿದೆ. ಆದ್ರೆ, ಚಿಕ್ಕಮಗಳೂರಿನಲ್ಲಿ ಸಹೋದರಿಯರೇ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಹೌದು…ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ವಿಶ್ವನಾಥ್ ಎನ್ನುವರು ಮೃತಪಟ್ಟಿದ್ದು, ಇವರಿಗೆ ಗಂಡು ಮಕ್ಕಳು ಇಲ್ಲ. ಹೀಗಾಗಿ ಇವರ ಅಂತ್ಯಕ್ರಿಯೆಯನ್ನು ಇಬ್ಬರು ಪುತ್ರಿಯರು ಸೇರಿಕೊಂಡು ನೆರವೇರಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಭಾವಸಾರ ಕ್ಷತ್ರಿಯ ಸಮಾಜದಂತೆ…

Read More

BCCI Awards: ಇಬ್ಬರು ಕನ್ನಡಿಗರು ಸೇರಿದಂತೆ ಮೂವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಭಾರತ ಕ್ರಿಕೆಟ್​ನ ಮೂವರು ದಿಗ್ಗಜ ಆಟಗಾರರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ (BCCI Lifetime Achievement Award) ಘೋಷಿಸಿದೆ. ಈ ಪ್ರಶಸ್ತಿಗೆ ಭಾಜನರಾದವರಲ್ಲಿ ಇಬ್ಬರು ಕನ್ನಡಿಗರು ಸೇರಿದ್ದರೆ, ಮತ್ತೊಬ್ಬರು ಭಾರತ ಮಹಿಳಾ ತಂಡದ ಮಾಜಿ ನಾಯಕಿಯಾಗಿದ್ದಾರೆ. ವಾಸ್ತವವಾಗಿ ಬಿಸಿಸಿಐ ಮಾರ್ಚ್ 15 ರಂದು ನವದೆಹಲಿಯಲ್ಲಿ ನಮನ್ ವಾರ್ಷಿಕ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಿದ್ದು, ಈ ಸಮಾರಂಭದಲ್ಲಿ 2024-25 ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಿದೆ. ಹೆಚ್ಚುವರಿಯಾಗಿ, ಬಿಸಿಸಿಐ ಮೂವರು ಭಾರತೀಯ ಕ್ರಿಕೆಟ್ ದಂತಕಥೆಗಳಿಗೆ ಬಿಸಿಸಿಐನ ಅತ್ಯುನ್ನತ…

Read More

Video: ವಾಹನ ಚಲಾಯಿಸುವಾಗ ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು

ನೀವು ರಸ್ತೆಯಲ್ಲಿ ಹೋಗುವಾಗ ಮಾಡುವ ಒಂದು ತಪ್ಪಿನಿಂದ ಎಂಥಾ ದೊಡ್ಡ ಅಪಘಾತ ಸಂಭವಿಸಬಹುದು. ಸಿಮೆಂಟ್ ಮಿಕ್ಸರ್ ಟ್ರಕ್ ಒಂದು ಬರುವಾಗ ಪಕ್ಕದಲ್ಲಿ ಬರುತ್ತಿದ್ದ ಬೈಕ್ ಸವಾರ ನಿಧಾನವಾಗಿ ಎಡಕ್ಕೆ ಚಲಿಸಿದ್ದಾನೆ. ಆಗ ಟ್ರಕ್ ಚಾಲಕ ಗೊತ್ತಾಗದೇ ಬೈಕ್ ಮೇಲೆ ವಾಹನ ಹತ್ತಿಸಿದ್ದಾರೆ. ದೊಡ್ಡ ವಾಹನಗಳು ಬ್ಲೈಂಡ್ ಸ್ಪಾಟ್​ಗಳನ್ನು ಹೊಂದಿರುತ್ತವೆ. ಹಾಗಾಗಿ ನೀವು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ಸಮಸ್ಯೆಯನ್ನೇ ತಂದೊಡ್ಡಬಹುದು.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    Source link

Read More

Video: ನನ್ನ ಹೆಂಡ್ತಿಗೆ ಏನಾದ್ರೂ ಅಂದ್ರೆ ಹುಷಾರ್! ಪತ್ನಿಗೆ ಅವಾಚ್ಯ ಪದ ಬಳಸಿದ ಮಹಿಳೆಗೆ ರೈಲಿನಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಯುವಕ!

ಪಾಟ್ನಾ: ಬಿಹಾರದ ರೈಲೊಂದರ ಜನರಲ್ ಬೋಗಿಯಲ್ಲಿ ಸೀಟಿಗಾಗಿ ನಡೆದ ಜಗಳದ ವಿಡಿಯೋ ಸೋಶಿಯಲ್​ ಮಿಡಿಯಾಗಳಲ್ಲಿ ಭಾರೀ ಹರಿದಾಡುತ್ತಿದೆ. ಯುವಕನೊಂದಿಗೆ ಮಹಿಳೆಯೊಬ್ಬಳು ಏಕಾಏಕಿ ಜಗಳಕ್ಕೆ ಇಳಿದಿದ್ದು, ಚಪ್ಪಲಿ ತೋರಿಸಿ ಆತನಿಗೆ ಬೈಯಲು ಶುರು ಮಾಡಿದ್ದಾಳೆ. ಆದರೂ ಕೂಡ ಎಲ್ಲವನ್ನೂ ಕೇಳಿಸಿ ಸಹಿಸಿಕೊಂಡು ಸುಮ್ಮನಾಗಿದ್ದಾನೆ. ಆದರೆ ಮಹಿಳೆ ಯಾವಾಗ ತನ್ನ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಶುರುಮಾಡುತ್ತಿದ್ದಂತೆ ಕೆರಳಿದ ಯುವಕ ಆಕೆ ಮಹಿಳೆಯೆಂದು ಲೆಕ್ಕಿಸದೇ ಮುಖಮೂತಿ ನೋಡದೆ ಸರಿಯಾಗಿ ಜಾಡಿಸಿದ್ದಾನೆ. ಸದ್ಯ ವಿಡಿಯೋ ಎಲ್ಲಡೆ ವೈರಲ್​ ಆಗಿದ್ದು, ಬಾರೀ ಚರ್ಚೆಗೆ…

Read More

ಗ್ಯಾಸ್​​​ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್​​​ವೊಂದರಿಂದ ಭರ್ಜರಿ ಆಫರ್​​: ಷರತ್ತು ಅನ್ವಯ

ಮಂಗಳೂರು, ಮಾರ್ಚ್​​ 14: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧ ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಗ್ಯಾಸ್ (Gas) ಎಮರ್ಜೆನ್ಸಿ ಗ್ರಾಹಕರ ಉಸಿರುಗಟ್ಟಿಸಿದೆ. ಇತ್ತ ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲೂ ಸಿಲಿಂಡರ್ ಕೊರತೆ ಉಂಟಾಗಿದ್ದು, ಸೌದೆ ಒಲೆಯತ್ತ ಮುಖ ಮಾಡುತ್ತಿದ್ದರೆ, ಮತ್ತೆ ಕೆಲ ಹೋಟೆಲ್‌ಗಳು ಬಂದ್​ ಮಾಡಲಾಗುತ್ತಿದೆ. ಈ ಮಧ್ಯೆ ಮಂಗಳೂರಿನ ಹೋಟೆಲ್ ಉದ್ಯಮ ಸಂಸ್ಥೆಯೊಂದು ಸ್ಪೆಷಲ್ ಆಫರ್​​ ನೀಡಿದೆ. ಅದೆನೇಂದರೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊಟ್ಟವರಿಗೆ ಸುಮಾರು ‌5,500 ರೂ ಮೌಲ್ಯದ ಫುಡ್ ಉಚಿತವಾಗಿ ನೀಡಲಾಗುತ್ತಿದೆ….

Read More

ಗ್ಯಾಸ್ ಸಿಲಿಂಡರ್​​ ಇಲ್ಲದಿದ್ದರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸಿಗುತ್ತೆ ಹೊಟ್ಟೆ ತುಂಬ ಪ್ರಸಾದ

ಮೈಸೂರು, (ಮಾರ್ಚ್ 14): ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಭಾರತದಲ್ಲಿ ವಾಣಿಜ್ಯ ಹಾಗೂ ಅಡುಗೆ ಅನಿಲ ಸಿಲಿಂಡರ್ ಕೊರತೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಕರ್ನಾಟಕದ ದೇವಸ್ಥಾನದ ಪ್ರಸಾದಕ್ಕೂ ಬಿಸಿ ತಟ್ಟಿದೆ. ಹೌದು…ದೇವಸ್ಥಾನಗಳಲ್ಲಿ ಭಕ್ತರಿಗೆ ತಯಾರಿಸುವ ಪ್ರಸಾದಕ್ಕೆ ಗ್ಯಾಸ್ ಸಮಸ್ಯೆ ಎದುರಾಗಿದೆ. ಹೀಗಾಗಿ ಕೆಲ ದೇವಾಲಯಗಳು ಸೌದೆ ಒಲೆ ಮೊರೆ ಹೋಗಿವೆ. ಹೌದು.. ಮೈಸೂರು ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲೂ ಸಹ ಸೌದೆ ಒಲೆಯಿಂದಲೇ…

Read More

ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು! ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ರಾಯಚೂರು, ಮಾರ್ಚ್​ 14: ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಹಾವು ಕಚ್ಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 8ರಂದು ರಾತ್ರಿ ಈ ಘಟನೆ ನಡೆದಿದ್ದು, ಯಲ್ಲಮ್ಮ ಎಂಬ ವೃದ್ಧೆ ಬೇಸಿಗೆ ಹಿನ್ನೆಲೆ ಮನೆಯ ಹೊರಾಂಗಣದಲ್ಲಿ ಮಲಗಿದ್ದರು. ಈ ವೇಳೆ ಕಪ್ಪೆಯನ್ನು ಅಟ್ಟಾಡಿಸಿಕೊಂಡು ಬಂದ ಹಾವು ಹಾಸಿಗೆಯೊಳಗೆ ನುಗ್ಗಿ ಯಲ್ಲಮ್ಮಗೆ ಕಚ್ಚಿದೆ. ಹಾವು ಕಡಿತದ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವು ಕಚ್ಚುತ್ತಿದ್ದಂತೆ…

Read More