All posts by nagaraj11081993

ಬುಕ್​​ ಆಗದ ಗ್ಯಾಸ್​​​: ಖಾಲಿ ಸಿಲಿಂಡರ್ ಹಿಡಿದು ಕುಳಿತ ಜನ; ಮನೆ ಅಡುಗೆಗೂ ಕುತ್ತು

ಬುಕ್​​ ಆಗದ ಗ್ಯಾಸ್​​​: ಖಾಲಿ ಸಿಲಿಂಡರ್ ಹಿಡಿದು ಕುಳಿತ ಜನ; ಮನೆ ಅಡುಗೆಗೂ ಕುತ್ತು

ಹುಬ್ಬಳ್ಳಿ, ಮಾರ್ಚ್​​  14: ರಾಜ್ಯದಲ್ಲಿ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್ (gas cylinder) ಪೂರೈಕೆಗೆ ಸಮಸ್ಯೆಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಅಭಾವವಿದ್ದು, ಹೋಟೆಲ್ ಮಾಲೀಕರು ದೊಡ್ಡಮಟದಲ್ಲಿ ಪರದಾಡುತ್ತಿದ್ದಾರೆ. ಆದರೆ ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಲು ಸರ್ವರ್ ಸಮಸ್ಯೆಯಾಗುತ್ತಿದ್ದು, ಸಿಲಿಂಡರ್ ಬುಕ್ ಮಾಡಲು ಗ್ರಾಹಕರು ಪರದಾಡುತ್ತಿದ್ದಾರೆ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಮುಂದೆ ತಮಗೆ ಎಲ್ಲಿ ಸಿಲಿಂಡರ್ ಸಿಗೋದಿಲ್ವೋ ಅನ್ನೋ ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ತಗೆದುಕೊಂಡು ಬರ್ತಿದ್ದು, ಹೊಸ ಸಿಲಿಂಡರ್​ಗಾಗಿ ಬೇಡಿಕೆ ಇಡ್ತಿದ್ದಾರೆ. ಇದೇ ಕಾರಣಕ್ಕೆ ಅನೇಕರು ಇಂದು ಹುಬ್ಬಳ್ಳಿಯಲ್ಲಿ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ ಹಾಕಿದರು. ತಮಗೆ ಸಿಲಿಂಡರ್ ಬೇಕು ಅಂತ ಏಜನ್ಸಿ ಸಿಬ್ಬಂದಿ ವಿರುದ್ದ ವಾಗ್ವಾದ ನಡೆಸಿದರು.

ಸಿಬ್ಬಂದಿ ಹರಸಾಹಸ

ಹುಬ್ಬಳ್ಳಿ ನಗರದ ಕಾರವಾರ ರಸ್ತೆಯಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿ ಮುಂದೆ ಇಂದು ಮುಂಜಾನೆ ಬಾಗಿಲು ತಗೆಯುವ ಮೊದಲೇ ಅನೇಕರು ಏಜೆನ್ಸಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ತಾವು ಅಷ್ಟೇ ಅಲ್ಲದೇ ಸಿಲಿಂಡರ್​ಗಳನ್ನು ಕೂಡ ಸರದಿ ಸಾಲಿನಲ್ಲಿ ಇಟ್ಟಿದ್ದರು. ತಾವು ಖಾಲಿ ಸಿಲಿಂಡರ್ ತಂದಿದ್ದೇವೆ. ತಮಗೆ ಖಾಲಿ ಸಿಲಿಂಡರ್ ಪಡೆದು, ತುಂಬಿರೋ ಸಿಲಿಂಡರ್ ಕೊಡಿ ಅಂತ ಕೇಳುತ್ತಿದ್ದರು. ಆದರೆ ನೀವು ಸಿಲಿಂಡರ್ ಬುಕ್ ಮಾಡಬೇಕು. ನಾವು ನಿಮ್ಮ ಮನೆಗೆ ಸಿಲಿಂಡರ್ ತಂದು ಕೊಡ್ತೇವೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದರು ಜನರು ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಸಿಲಿಂಡರ್ ಸಿಗದೇ ಇದ್ದಿದ್ದಕ್ಕೆ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು. ಗ್ರಾಹಕರನ್ನು ಸಮಾಧಾನ ಮಾಡಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ಗ್ಯಾಸ್​​​ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್​​​ವೊಂದರಿಂದ ಭರ್ಜರಿ ಆಫರ್​​: ಷರತ್ತು ಅನ್ವಯ

ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಆದರೆ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್​ಗೆ ಸಮಸ್ಯೆಯಾಗಿಲ್ಲ. ಸಿಲಿಂಡರ್ ಬುಕ್ ಆದವರ ಮನೆಗೆ ಸಿಲಿಂಡರ್​ ಡೆಲಿವರಿ ಆಗುತ್ತಿದೆ. ಆದರೆ ಕಳೆದ ಎರಡ್ಮೂರು ದಿನಗಳಿಂದ ಸಿಲಿಂಡರ್ ಬುಕ್​ಗೆ ಹೆಚ್ಚಿನ ಜನರು ಮುಂದಾಗಿದ್ದರಿಂದ ಬುಕ್ಕಿಂಗ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಹಗಲು ಹೊತ್ತಲ್ಲಿ ಬುಕ್ ಮಾಡಲು ಮುಂದಾದವರಿಗೆ ಶಾಕ್ ಆಗ್ತಿದ್ದು, ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಹೀಗಾಗಿ ಗ್ಯಾಸ್ ಏಜೆನ್ಸಿಗಳ ಅಂಗಡಿಗಳಿಗೆ ತಮ್ಮ ಖಾಲಿ ಸಿಲಿಂಡರ್ ಸಮೇತ ಬರ್ತಿರೋ ಜನರು, ತಮಗೆ ಸಿಲಿಂಡರ್ ಕೊಡಿ ಅಂತ ಪಟ್ಟು ಹಿಡಿಯುತ್ತಿದ್ದಾರೆ. ಆದರೆ ಬುಕ್ ಮಾಡಿದವರಿಗೆ ಮಾತ್ರ ಸಿಲಿಂಡರ್ ಕೊಡ್ತೇವೆ ಅಂತ ಸಿಬ್ಬಂದಿ ಹೇಳ್ತಿದ್ದಾರೆ. ಇದು ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ.

ಮಿಸ್ ಕಾಲ್ ಕೊಟ್ಟರು ಸಿಲಿಂಡರ್ ಬುಕ್ ಆಗ್ತಿಲ್ಲ. ಮತ್ತೊಂದೆಡೆ ವಾಟ್ಸಪ್, ಅಮೆಜಾನ್​ನಿಂದ ಕೂಡ ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದೀಗ ಹಬ್ಬ ಬಂದಿದೆ. ತಮಗೆ ಗ್ಯಾಸ್ ಸಿಲಿಂಡರ್ ನೀಡಬೇಕು ಅಂತ ಗ್ರಾಹಕರು ಪಟ್ಟು ಹಿಡದಿದ್ದರೆ, ಗ್ಯಾಸ್ ಏಜೆನ್ಸಿ ಸಿಬ್ಬಂದಿ ಕೇಳಿದರೆ ಸಿಲಿಂಡರ್ ಅಭಾವವಿಲ್ಲ. ಬುಕ್ ಮಾಡಿದ ಪ್ರತಿಯೊಬ್ಬರಿಗೂ ಸಿಲಿಂಡರ್ ನೀಡ್ತಿದ್ದೇವೆ. ಆದರೆ ಸರ್ವರ್ ಡೌನ್​​ನಿಂದ ಸಿಲಿಂಡರ್ ಬುಕ್ ಆಗೋದು ವಿಳಂಬವಾಗುತ್ತಿದೆ. ಹೀಗಾಗಿ ಜನರು ಆತಂಕಕ್ಕೊಳಗಾಗಿದ್ದಾರೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳ್ತಿದ್ದಾರೆ. ಆದರೆ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಏಜೆನ್ಸಿಯವರು ಜನರಿಂದ ಸ್ಥಳದಲ್ಲಿಯೇ ಹಣ ಪಡೆದು, ಅನೇಕರಿಗೆ ಸಿಲಿಂಡರ್ ಕೊಟ್ಟು ಕಳುಹಿಸಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್​​ ಇಲ್ಲದಿದ್ದರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸಿಗುತ್ತೆ ಹೊಟ್ಟೆ ತುಂಬ ಪ್ರಸಾದ

ಸದ್ಯ ಗೃಹ ಬಳಕೆ ಸಿಲಿಂಡರ್​ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸರ್ವರ್ ಡೌನ್​ನಿಂದ ಬುಕ್ ಆಗದೇ ಇರೋದರಿಂದ ಗ್ರಾಹಕರು ಮತ್ತು ಏಜೆನ್ಸಿ ಸಿಬ್ಬಂದಿ ನಡುವೆ ವಾಗ್ವಾದಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಲಿಂಡರ್ ಬುಕ್ ಮಾಡಲು ಆಗುತ್ತಿರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ವಾರ ಒಟಿಟಿಗೆ ಬಂದಿವೆ ಜಬರ್ದಸ್ಥ್ ಸಿನಿಮಾಗಳು: ಇಲ್ಲಿದೆ ಪಟ್ಟಿ

Source link

ಬಿಳಿ ಬಣ್ಣದ ಬಟ್ಟೆ ದೀರ್ಘಕಾಲದವರೆಗೆ ಹೊಸದರಂತೆ ಕಾಣಬೇಕೆಂದರೆ ಈ ಸಲಹೆ ಪಾಲಿಸಿ

ಬಿಳಿ ಬಟ್ಟೆಗಳು (White Clothes) ತುಂಬಾನೇ ಸ್ಟೈಲಿಶ್‌ ಆಗಿ ಕಾಣುವ ಕಾರಣ ಪ್ರತಿಯೊಬ್ಬರೂ ಈ ಬಣ್ಣದ ಬಟ್ಟೆಯನ್ನೇ ಧರಿಸಲು ಇಷ್ಟಪಡುತ್ತಾರೆ. ಬಿಳಿ ಬಣ್ಣದ ಬಟ್ಟೆಗಳು ಸುಂದರವಾಗಿ ಕಾಣಿಸುವಂತೆ ಮಾಡುವುದು ನಿಜ. ಅದೇ ರೀತಿ ಈ ಬಟ್ಟೆಗಳು ಬೇಗನೆ ಮಾಸುಕಾಗುತ್ತವೆ. ಹೌದು ಬೆವರು, ಧೂಳು, ಕಲೆ ಸಂಗ್ರಹಣೆಯಿಂದ ಹಾಗೂ ಸರಿಯಾದ ರೀತಿಯಲ್ಲಿ ತೊಳೆಯದಿರುವ ಕಾರಣ ಬಿಳಿ ಬಟ್ಟೆಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ವಾಸ್ತವವಾಗಿ, ನಾವು ಮಾಡುವ ಸಣ್ಣ ತಪ್ಪುಗಳೇ ಬಿಳಿ ಬಟ್ಟೆಗಳು ಹೊಳಪನ್ನು ಕಸಿದುಕೊಳ್ಳಲು ಮುಖ್ಯ ಕಾರಣ. ಹೀಗಿರುವಾಗ  ಬಿಳಿ ಬಟ್ಟೆಯನ್ನು ಒಗೆಯುವಾಗ ಕೆಲವು ಸರಳ ನಿಯಮಗಳನ್ನು ಅಳವಡಿಸಿಕೊಂಡರೆ, ಅವು ದೀರ್ಘಕಾಲದವರೆಗೆ ಹೊಸದರಂತೆ ಕಾಣುವಂತೆ ಮಾಡಬಹುದು.

ಬಿಳಿ ಬಟ್ಟೆಯನ್ನು ಒಗೆಯುವಾಗ ಪಾಲಿಸಬೇಕಾದ ಸಲಹೆಗಳು:

ಯಾವಾಗಲೂ ಬಿಳಿ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ: ಅನೇಕ ಜನರು ಆತುರದಲ್ಲಿ ಬಿಳಿ ಬಟ್ಟೆಗಳನ್ನು ಇತರ ಬಣ್ಣದ ಬಟ್ಟೆಗಳೊಂದಿಗೆ ವಾಷಿಂಗ್‌ ಮಷೀನ್‌ನಲ್ಲಿ ಹಾಕಿ ಬಿಡುತ್ತಾರೆ, ಇಲ್ಲವೇ ಬೇರೆ ಬಟ್ಟೆಗಳೊಂದಿಯೇ ಬಿಳಿ ಬಣ್ಣದ ಬಟ್ಟೆಯನ್ನೂ ಒಗೆಯುತ್ತಾರೆ. ಈ ರೀತಿ ಮಾಡುವುದರಿಂದ ಇತರೆ ಬಟ್ಟೆಗಳ ಬಣ್ಣವು ಬಿಳಿ ಬಟ್ಟೆಗೆ ತಾಕುತ್ತವೆ. ಈ ತಪ್ಪಿನ ಕಾರಣದಿಂದ ಕ್ರಮೇಣ ಬಿಳಿ ಬಟ್ಟೆಗಳು ಮಸುಕಾಗಿ ಕಾಣಲು ಪ್ರಾರಂಭಿಸುತ್ತವೆ. ಆದ್ದರಿಂದ, ಬಿಳಿ ಬಟ್ಟೆಗಳನ್ನು ಯಾವಾಗಲೂ ಪ್ರತ್ಯೇಕವಾಗಿಯೇ ಒಗೆಯಬೇಕು. ಹೀಗೆ ಮಾಡುವುದರಿಂದ ಬಿಳಿ ಬಟ್ಟೆಯ ಬಣ್ಣ ಮಾಸುವುದಿಲ್ಲ.

ಸರಿಯಾದ ಡಿಟರ್ಜೆಂಟ್  ಬಳಸಿ: ಬಿಳಿ ಬಟ್ಟೆಗಳಿಗೆ ವಿಶೇಷ ಡಿಟರ್ಜೆಂಟ್ ಬಳಸಬೇಕು. ನಿಮ್ಮ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗಬಾರದು ಎಂದು ನೀವು ಬಯಸಿದರೆ, ಡಿಟರ್ಜೆಂಟ್ ಜೊತೆಗೆ ತೊಳೆಯುವಾಗ ಸ್ವಲ್ಪ ಅಡಿಗೆ ಸೋಡಾ ಅಥವಾ ಬಿಳಿ ವಿನೆಗರ್ ಅನ್ನು ಕೂಡ ಸೇರಿಸಬಹುದು. ಈ ನೈಸರ್ಗಿಕ ಪದಾರ್ಥಗಳು ಬಿಳಿ ಬಟ್ಟೆಗಳ ಕೊಲೆಗಳನ್ನು ಬುಡದಿಂದ ತೆಗೆದು ಹಾಕಿ ಬಟ್ಟೆ  ಸ್ವಚ್ಛವಾಗಿ ಮತ್ತು ಹೊಸದರಂತೆ ಕಾಣಿಸಲು ಸಹಾಯ ಮಾಡುತ್ತದೆ.

ಕಲೆಗಳನ್ನು ಮೊದಲೇ ತೆಗೆದು ಹಾಕಿ: ಬಿಳಿ ಉಡುಪಿನ ಮೇಲೆ ಕಲೆ ಆದ್ರೆ, ಆ ಕಲೆಗಳನ್ನು ಮೊದಲೇ ತೆಗೆದುಹಾಕಬೇಕು. ಹೌದು ಉಡುಪನ್ನು ನೇರವಾಗಿ ವಾಷಿಂಗ್‌ ಮಷೀನ್‌ಗೆ ಹಾಕುವ ಮೊದಲು ಕಲೆ ಇರುವ ಜಾಗಕ್ಕೆ ಸ್ವಲ್ಪ ಡಿಟರ್ಜೆಂಟ್ ಅಥವಾ ಸ್ಟೇನ್ ರಿಮೂವರ್ ಹಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಅದನ್ನು ಬ್ರಷ್‌ ಸಹಾಯದಿಂದ ಉಜ್ಜಿ ಕಲೆ ತೆಗೆಯಿರಿ. ಹೀಗೆ ಮಾಡುವುದರಿಂದ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ ಮತ್ತು  ಬಟ್ಟೆಯ ಬಣ್ಣವೂ ಮಾಸುವುದಿಲ್ಲ.

ಇದನ್ನೂ ಓದಿ: ಗ್ಯಾಸ್‌ ಉಳಿತಾಯ ಮಾಡಲು ಸಿಂಪಲ್‌ ಸಲಹೆ ಅನುಸರಿಸಿ

ನೀರಿನ ತಾಪಮಾನಕ್ಕೆ ವಿಶೇಷ ಗಮನ ಕೊಡಿ: ವಿಶೇಷವಾಗಿ ಬಟ್ಟೆ ಒಗೆಯುವಾಗ ನೀರಿನ ತಾಪಮಾನವನ್ನು ನೋಡುವುದು ಬಹಳ ಮುಖ್ಯ. ಬಿಳಿ ಬಟ್ಟೆಗಳನ್ನು ತೊಳೆಯಲು ಸ್ವಲ್ಪ ಬೆಚ್ಚಗಿನ ನೀರನ್ನು ಉಪಯೋಗಿಸುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ಬೆವರು, ಕೊಳಕು ಮತ್ತು ಎಣ್ಣೆಯ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಆದರೆ ಬಿಳಿ ಬಣ್ಣದ ರೇಷ್ಮೆ ಅಥವಾ ಸೂಕ್ಷ್ಮ ಬಟ್ಟೆಗಳಿಗೆ ತಣ್ಣೀರನ್ನು ಮಾತ್ರ ಬಳಸಬೇಕು.

ಬಿಸಿಲಿನಲ್ಲಿಯೇ ಬಟ್ಟೆಗಳನ್ನು ಒಣಗಿಸಿ: ಬಿಳಿ ಬಟ್ಟೆಗಳನ್ನು ಯಾವಾಗಲೂ  ಸೂರ್ಯನ ನೇರ ಬೆಳಕಿನಲ್ಲಿಯೇ ಒಣಗಿಸಬೇಕು. ಸೂರ್ಯನ ಬೆಳಕು  ನೈಸರ್ಗಿಕ ಬ್ಲೀಚ್  ರೀತಿಯಲ್ಲಿ ಕಾರಣ, ಬಿಳಿ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಿದರೆ, ಅವುಗಳ ಬಿಳುಪು ಮತ್ತು ಹೊಳಪು ದೀರ್ಘಕಾಲ ಉಳಿಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು

ಚಿಕ್ಕಮಗಳೂರು, (ಮಾರ್ಚ್ 14): ತಂದೆ ತಾಯಿಯರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳು ಮಾಡುವುದು ಸಾಮಾನ್ಯ. ತಂದೆಯ ಚಿತೆಗೆ ಮೊದಲು ಆತನ ಹಿರಿಯ ಮಗನೇ ಅಗ್ನಿ ಸ್ಪರ್ಶಮಾಡಬೇಕೆಂದು ಹಿಂದೂ ಸಂಪ್ರದಾಯದಲ್ಲಿ ಹೇಳಲಾಗಿದೆ. ಆದ್ರೆ, ಚಿಕ್ಕಮಗಳೂರಿನಲ್ಲಿ ಸಹೋದರಿಯರೇ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಹೌದು…ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ವಿಶ್ವನಾಥ್ ಎನ್ನುವರು ಮೃತಪಟ್ಟಿದ್ದು, ಇವರಿಗೆ ಗಂಡು ಮಕ್ಕಳು ಇಲ್ಲ. ಹೀಗಾಗಿ ಇವರ ಅಂತ್ಯಕ್ರಿಯೆಯನ್ನು ಇಬ್ಬರು ಪುತ್ರಿಯರು ಸೇರಿಕೊಂಡು ನೆರವೇರಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಭಾವಸಾರ ಕ್ಷತ್ರಿಯ ಸಮಾಜದಂತೆ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿ ಅಗ್ನಿ ಸ್ಪರ್ಷ ಮಾಡಿದರು. ಇನ್ನು ಇವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳು ತಂದೆಯ ಅಂತ್ಯಸಂಸ್ಕಾರವನ್ನು ತಾವೇ ನೆರವೇರಿಸುವ ಮೂಲಕ ಲಿಂಗಸಮಾನತೆಯ ಸಂದೇಶವನ್ನು ಸಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

BCCI Awards: ಇಬ್ಬರು ಕನ್ನಡಿಗರು ಸೇರಿದಂತೆ ಮೂವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಭಾರತ ಕ್ರಿಕೆಟ್​ನ ಮೂವರು ದಿಗ್ಗಜ ಆಟಗಾರರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ (BCCI Lifetime Achievement Award) ಘೋಷಿಸಿದೆ. ಈ ಪ್ರಶಸ್ತಿಗೆ ಭಾಜನರಾದವರಲ್ಲಿ ಇಬ್ಬರು ಕನ್ನಡಿಗರು ಸೇರಿದ್ದರೆ, ಮತ್ತೊಬ್ಬರು ಭಾರತ ಮಹಿಳಾ ತಂಡದ ಮಾಜಿ ನಾಯಕಿಯಾಗಿದ್ದಾರೆ. ವಾಸ್ತವವಾಗಿ ಬಿಸಿಸಿಐ ಮಾರ್ಚ್ 15 ರಂದು ನವದೆಹಲಿಯಲ್ಲಿ ನಮನ್ ವಾರ್ಷಿಕ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಿದ್ದು, ಈ ಸಮಾರಂಭದಲ್ಲಿ 2024-25 ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಿದೆ. ಹೆಚ್ಚುವರಿಯಾಗಿ, ಬಿಸಿಸಿಐ ಮೂವರು ಭಾರತೀಯ ಕ್ರಿಕೆಟ್ ದಂತಕಥೆಗಳಿಗೆ ಬಿಸಿಸಿಐನ ಅತ್ಯುನ್ನತ ಗೌರವವಾದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.

ಈ ಮೂವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಬಿಸಿಸಿಐ, 1983 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಕನ್ನಡಿಗ ರೋಜರ್ ಬಿನ್ನಿ ಹಾಗೂ ಮತ್ತೊಬ್ಬ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದೆ. ಇವರಿಬ್ಬರ ಜೊತೆಗೆ ಮಹಿಳಾ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಅವರಿಗೆ ಬಿಸಿಸಿಐ ಮಹಿಳಾ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಿದೆ. ಬಿಸಿಸಿಐ ಈ ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನೂ ನೀಡಲಿದ್ದು, ವರದಿಗಳ ಪ್ರಕಾರ ಈ ಮೂವರು ಪ್ರಶಸ್ತಿ ವಿಜೇತರಿಗೆ ತಲಾ 25 ಲಕ್ಷ ರೂ. ನಗದು ಬಹುಮಾನ ನೀಡಲಿದೆ.

ಭಾರತಕ್ಕೆ ಮೊದಲ ವಿಶ್ವಕಪ್

ಮೇಲೆ ಹೇಳಿದಂತೆ ರೋಜರ್ ಬಿನ್ನಿ 1983 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಭಾರತದ ಮೊದಲ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿನ್ನಿ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದರು. ಹಾಗೆಯೇ 1985 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಕ್ರಿಕೆಟ್‌ನಲ್ಲಿಯೂ ಬಿನ್ನಿ ತಂಡದ ಭಾಗವಾಗಿದ್ದರು. ವೃತ್ತಿಜೀವನಕ್ಕೆ ವಿದಾಯ ಹೇಳಿದ ನಂತರ ಬಿನ್ನಿ ತರಬೇತಿ, ಆಯ್ಕೆ ಮತ್ತು ಆಡಳಿತಾತ್ಮಕ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2000 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡಕ್ಕೆ ಅವರು ತರಬೇತುದಾರರಾಗಿದ್ದರು. ಹಾಗೆಯೇ ಅವರು 2012 ರಿಂದ 2016 ರವರೆಗೆ ರಾಷ್ಟ್ರೀಯ ಆಯ್ಕೆದಾರರಾಗಿಯೂ ಸೇವೆ ಸಲ್ಲಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ, ಅವರು 2022 ರಿಂದ 2025 ರವರೆಗೆ ಬಿಸಿಸಿಐನ 36 ನೇ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ರಾಹುಲ್ ದ್ರಾವಿಡ್ ಕೊಡುಗೆ ಅಪಾರ

‘ದಿ ವಾಲ್’ ಎಂದೇ ಖ್ಯಾತಿ ಪಡೆದ ರಾಹುಲ್ ದ್ರಾವಿಡ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,000 ಕ್ಕೂ ಹೆಚ್ಚು ರನ್ ಗಳಿಸಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಬ್ಯಾಟಿಂಗ್‌ನ ಬೆನ್ನೆಲುಬಾಗಿದ್ದವರು. ಹಾಗೆಯೇ ನಾಯಕನಾಗಿ ಭಾರತವನ್ನು ಅನೇಕ ಸ್ಮರಣೀಯ ವಿಜಯಗಳಿಗೆ ಕರೆದೊಯ್ದವರು. ನಿವೃತ್ತಿಯ ನಂತರ, ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಮುಖ್ಯಸ್ಥರಾಗಿ ಯುವ ಆಟಗಾರರಿಗೆ ತರಬೇತಿ ನೀಡಿದರು. 2018 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡಕ್ಕೂ ಅವರು ತರಬೇತಿ ನೀಡಿದರು. ಭಾರತೀಯ ಪುರುಷರ ತಂಡದ ಮುಖ್ಯ ತರಬೇತುದಾರರಾಗಿ, ಅವರು 2024 ರ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಮಹಿಳಾ ಕ್ರಿಕೆಟ್‌ನ ಐಕಾನ್

ಮಿಥಾಲಿ ರಾಜ್ ಅವರನ್ನು ಮಹಿಳಾ ಕ್ರಿಕೆಟ್‌ನ ಐಕಾನ್ ಎಂದು ಪರಿಗಣಿಸಲಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ಏಕದಿನದಲ್ಲಿ 7805 ರನ್ ಕಲೆಹಾಕಿರುವ ಮಿಥಾಲಿ ಈ ಮಾದರಿಯಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ನಾಯಕಿಯಾಗಿ, ಅವರು ಭಾರತವನ್ನು ಎರಡು ವಿಶ್ವಕಪ್ ಫೈನಲ್‌ಗಳಿಗೆ ಮುನ್ನಡೆಸಿದರಾದರೂ ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಬಲಿಷ್ಠ ಭಾರತ ಮಹಿಳಾ ತಂಡವನ್ನು ನಿರ್ಮಿಸುವಲ್ಲಿ ಮಿಥಾಲಿ ಪಾತ್ರ ಅಪಾರವಾಗಿದೆ. ಹೀಗಾಗಿ ಮಹಿಳಾ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದ ಮಿಥಾಲಿಗೆ ಅರ್ಹ ಗೌರವ ಧಕ್ಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ವಾಹನ ಚಲಾಯಿಸುವಾಗ ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು

ನೀವು ರಸ್ತೆಯಲ್ಲಿ ಹೋಗುವಾಗ ಮಾಡುವ ಒಂದು ತಪ್ಪಿನಿಂದ ಎಂಥಾ ದೊಡ್ಡ ಅಪಘಾತ ಸಂಭವಿಸಬಹುದು. ಸಿಮೆಂಟ್ ಮಿಕ್ಸರ್ ಟ್ರಕ್ ಒಂದು ಬರುವಾಗ ಪಕ್ಕದಲ್ಲಿ ಬರುತ್ತಿದ್ದ ಬೈಕ್ ಸವಾರ ನಿಧಾನವಾಗಿ ಎಡಕ್ಕೆ ಚಲಿಸಿದ್ದಾನೆ. ಆಗ ಟ್ರಕ್ ಚಾಲಕ ಗೊತ್ತಾಗದೇ ಬೈಕ್ ಮೇಲೆ ವಾಹನ ಹತ್ತಿಸಿದ್ದಾರೆ. ದೊಡ್ಡ ವಾಹನಗಳು ಬ್ಲೈಂಡ್ ಸ್ಪಾಟ್​ಗಳನ್ನು ಹೊಂದಿರುತ್ತವೆ. ಹಾಗಾಗಿ ನೀವು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ಸಮಸ್ಯೆಯನ್ನೇ ತಂದೊಡ್ಡಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Video: ನನ್ನ ಹೆಂಡ್ತಿಗೆ ಏನಾದ್ರೂ ಅಂದ್ರೆ ಹುಷಾರ್! ಪತ್ನಿಗೆ ಅವಾಚ್ಯ ಪದ ಬಳಸಿದ ಮಹಿಳೆಗೆ ರೈಲಿನಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಯುವಕ!

ಪಾಟ್ನಾ: ಬಿಹಾರದ ರೈಲೊಂದರ ಜನರಲ್ ಬೋಗಿಯಲ್ಲಿ ಸೀಟಿಗಾಗಿ ನಡೆದ ಜಗಳದ ವಿಡಿಯೋ ಸೋಶಿಯಲ್​ ಮಿಡಿಯಾಗಳಲ್ಲಿ ಭಾರೀ ಹರಿದಾಡುತ್ತಿದೆ. ಯುವಕನೊಂದಿಗೆ ಮಹಿಳೆಯೊಬ್ಬಳು ಏಕಾಏಕಿ ಜಗಳಕ್ಕೆ ಇಳಿದಿದ್ದು, ಚಪ್ಪಲಿ ತೋರಿಸಿ ಆತನಿಗೆ ಬೈಯಲು ಶುರು ಮಾಡಿದ್ದಾಳೆ. ಆದರೂ ಕೂಡ ಎಲ್ಲವನ್ನೂ ಕೇಳಿಸಿ ಸಹಿಸಿಕೊಂಡು ಸುಮ್ಮನಾಗಿದ್ದಾನೆ. ಆದರೆ ಮಹಿಳೆ ಯಾವಾಗ ತನ್ನ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಶುರುಮಾಡುತ್ತಿದ್ದಂತೆ ಕೆರಳಿದ ಯುವಕ ಆಕೆ ಮಹಿಳೆಯೆಂದು ಲೆಕ್ಕಿಸದೇ ಮುಖಮೂತಿ ನೋಡದೆ ಸರಿಯಾಗಿ ಜಾಡಿಸಿದ್ದಾನೆ. ಸದ್ಯ ವಿಡಿಯೋ ಎಲ್ಲಡೆ ವೈರಲ್​ ಆಗಿದ್ದು, ಬಾರೀ ಚರ್ಚೆಗೆ ಕಾರಣವಾಗಿದೆ.

ಮಹಿಳೆ ಕೈಯಲ್ಲಿ ಚಪ್ಪಲಿ ಹಿಡಿದು ಯುವಕನಿಗೆ ಬೆದರಿಕೆ ಹಾಕುತ್ತಿರುವುದು, ನನ್ನ ಮಗ ಬೆಂಗಳೂರಿನಲ್ಲಿ ಇಂಜಿನಿಯರ್, ನನ್ನ ಪತಿ ಸೂಪರ್‌ವೈಸರ್ ಎಂದು ಅಹಂಕಾರದಿಂದ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೂ ಕೂಡ ಶಾಂತ ರೀತಿಯಿಂದಲೇ ಯುವಕ ವರ್ತಿಸಿರುವುದನ್ನು ಕಾಣಬಹುದು. ಆದರೆ ತನ್ನ ಪತ್ನಿಗೆ ಮುಜುಗರಕ್ಕೀಡುಮಾಡುವಂತಹ ಪದಗಳನ್ನು ಮಹಿಳೆ ಬಳಸುತ್ತಿದ್ದಂತೆ ಕೋಪಗೊಂಡ ಯುವಕ ಏಕಾಏಕಿ ಸೀಟಿನಿಂದ ಎದ್ದು ಸರಿಯಾಗಿ ಆ ಹೆಂಗಸಿಗೆ ಕಾಪಾಳಮೋಕ್ಷ ಮಾಡಿದ್ದಾನೆ. @bihta_vision ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್

ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮಹಿಳೆಯ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ರೈಲು ಪ್ರಯಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಅವಶ್ಯಕ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗ್ಯಾಸ್​​​ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್​​​ವೊಂದರಿಂದ ಭರ್ಜರಿ ಆಫರ್​​: ಷರತ್ತು ಅನ್ವಯ

ಮಂಗಳೂರು, ಮಾರ್ಚ್​​ 14: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧ ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಗ್ಯಾಸ್ (Gas) ಎಮರ್ಜೆನ್ಸಿ ಗ್ರಾಹಕರ ಉಸಿರುಗಟ್ಟಿಸಿದೆ. ಇತ್ತ ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲೂ ಸಿಲಿಂಡರ್ ಕೊರತೆ ಉಂಟಾಗಿದ್ದು, ಸೌದೆ ಒಲೆಯತ್ತ ಮುಖ ಮಾಡುತ್ತಿದ್ದರೆ, ಮತ್ತೆ ಕೆಲ ಹೋಟೆಲ್‌ಗಳು ಬಂದ್​ ಮಾಡಲಾಗುತ್ತಿದೆ. ಈ ಮಧ್ಯೆ ಮಂಗಳೂರಿನ ಹೋಟೆಲ್ ಉದ್ಯಮ ಸಂಸ್ಥೆಯೊಂದು ಸ್ಪೆಷಲ್ ಆಫರ್​​ ನೀಡಿದೆ. ಅದೆನೇಂದರೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊಟ್ಟವರಿಗೆ ಸುಮಾರು ‌5,500 ರೂ ಮೌಲ್ಯದ ಫುಡ್ ಉಚಿತವಾಗಿ ನೀಡಲಾಗುತ್ತಿದೆ.

ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಹೋಟೆಲ್​​

ಮಂಗಳೂರಿನ ವೋಕ್ ಆ್ಯಂಡ್​ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆಯಿಂದ ಈ ಭರ್ಜರಿ ಆಫರ್​​ ನೀಡಲಾಗಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಸಂಸ್ಥೆ ತನ್ನ ಔಟ್ಲೆಟ್ ಹೊಂದಿದೆ. ಹತ್ತಿರದ ಯಾವುದೇ ಔಟ್ಲೆಟ್​ಗೆ ಹೋದರೆ ಈ ಆಫರ್​ ಸಿಗುತ್ತದೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಸಿಲಿಂಡರ್ ಕೊರತೆ: ಸೌದೆ ಒಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್​ ಸಿಬ್ಬಂದಿ

ಗ್ಯಾಸ್ ಅಭಾವ ಹಿನ್ನೆಲೆ ಮಂಗಳೂರಿನ ವೋಕ್ ಆ್ಯಂಡ್​ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆ ಆಫರ್ ಮೊರೆ ಹೋಗಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿದವರಿಗೆ 50 ಪ್ಲೇಟ್ ಮೊಮೊಸ್, ಇನ್ನೊಂದು ಸಂಸ್ಥೆಯಿಂದ 25 ರೋಲ್​​​ ಸಿಗಲಿದೆ. ಅಂದರೆ ಬರೋಬ್ಬರಿ 5,500 ರೂ ಮೌಲ್ಯದ ಫುಡ್ ಉಚಿತವಾಗಿ ದೊರೆಯಲಿದೆ.

ಗ್ಯಾಸ್ ತಂದು ಕೊಟ್ಟವರಿಗೆ ಈ ಆಫರ್: ಮ್ಯಾನೇಜರ್ ಅನಾಸ್

ಇನ್ನು ಈ ಉಚಿತ ಫುಡ್ ಆಫರ್​​ ಬಗ್ಗೆ ಟಿವಿ 9ಗೆ ಹೋಟೆಲ್​​ ಮ್ಯಾನೇಜರ್ ಅನಾಸ್ ಪ್ರತಿಕ್ರಿಯಿಸಿದ್ದು, ಇದು ಸೀಮಿತ ಅವಧಿಗೆ ಮಾತ್ರ ನೀಡಲಾಗುತ್ತಿರುವ ಆಫರ್​​. ನಮಗೆ ಎಲ್ಲಿಯೂ ಕಮರ್ಷಿಯಲ್ ಗ್ಯಾಸ್ ಸಿಗುತ್ತಿಲ್ಲ. ಈಗ ಫುಡ್ ಕಸ್ಟಮೈಸ್ ಮಾಡಿ ಕೊಡುತ್ತಿದ್ದೇವೆ. ಗ್ಯಾಸ್ ಡೆಲಿವರಿ ಮಾಡುತ್ತಿದ್ದವರು ಕೈ ಕೊಟ್ಟಿದ್ದಾರೆ. ಹೀಗಾಗಿ ಕಮರ್ಷಿಯಲ್ ಗ್ಯಾಸ್ ತಂದು ಕೊಟ್ಟವರಿಗೆ ಈ ಆಫರ್ ಸಿಗುತ್ತೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

ಇನ್ನು ಗ್ರಾಹಕರ ಪ್ರತಿಕ್ರಿಯೆ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಫರ್ ಬಗ್ಗೆ ಘೋಷಣೆ ಮಾಡಿದ ಬಳಿಕ ವಿಚಾರಿಸುತ್ತಿದ್ದಾರೆ. ಆದರೆ ಈವರೆಗೆ ಯಾರು ತಂದು ಕೊಟ್ಟಿಲ್ಲ. 50 ಪ್ಲೇಟ್ ಮೊಮೊಸ್​​ಗೆ 5,500 ರೂಪಾಯಿ ಆಗುತ್ತೆ. ಆದರೆ ನಮಗೆ ಗ್ಯಾಸ್ ಸಿಗಬೇಕು. ಹೀಗಾಗಿ ನಮ್ಮ ಮುಖ್ಯ ಉದ್ದೇಶ ಗ್ಯಾಸ್. ನಮಗೆ ನಿತ್ಯ ಒಂದು ಸಿಲಿಂಡರ್ ಬೇಕು. ಆದರೆ ಈಗ ಗ್ಯಾಸ್ ಹೆಚ್ಚಾಗಿ ‌ಖರ್ಚಾಗುವ ಫುಡ್ ಮಾಡುವುದನ್ನ ನಿಲ್ಲಿಸಿದ್ದೇವೆ‌ ಎಂದು ಅನಾಸ್ ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗ್ಯಾಸ್ ಸಿಲಿಂಡರ್​​ ಇಲ್ಲದಿದ್ದರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸಿಗುತ್ತೆ ಹೊಟ್ಟೆ ತುಂಬ ಪ್ರಸಾದ

ಮೈಸೂರು, (ಮಾರ್ಚ್ 14): ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಭಾರತದಲ್ಲಿ ವಾಣಿಜ್ಯ ಹಾಗೂ ಅಡುಗೆ ಅನಿಲ ಸಿಲಿಂಡರ್ ಕೊರತೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಕರ್ನಾಟಕದ ದೇವಸ್ಥಾನದ ಪ್ರಸಾದಕ್ಕೂ ಬಿಸಿ ತಟ್ಟಿದೆ. ಹೌದು…ದೇವಸ್ಥಾನಗಳಲ್ಲಿ ಭಕ್ತರಿಗೆ ತಯಾರಿಸುವ ಪ್ರಸಾದಕ್ಕೆ ಗ್ಯಾಸ್ ಸಮಸ್ಯೆ ಎದುರಾಗಿದೆ. ಹೀಗಾಗಿ ಕೆಲ ದೇವಾಲಯಗಳು ಸೌದೆ ಒಲೆ ಮೊರೆ ಹೋಗಿವೆ. ಹೌದು.. ಮೈಸೂರು ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲೂ ಸಹ ಸೌದೆ ಒಲೆಯಿಂದಲೇ ಪ್ರಸಾದ ತಯಾರಿಸಲಾಗುತ್ತಿದೆ. ಹೀಗಾಗಿ ಗ್ಯಾಸ್ ಇಲ್ಲದಿದ್ದರೂ ಸಹ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಹೊಟ್ಟೆ ತುಂಬ ಪ್ರಸಾದ ದೊರೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು! ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ರಾಯಚೂರು, ಮಾರ್ಚ್​ 14: ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಹಾವು ಕಚ್ಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 8ರಂದು ರಾತ್ರಿ ಈ ಘಟನೆ ನಡೆದಿದ್ದು, ಯಲ್ಲಮ್ಮ ಎಂಬ ವೃದ್ಧೆ ಬೇಸಿಗೆ ಹಿನ್ನೆಲೆ ಮನೆಯ ಹೊರಾಂಗಣದಲ್ಲಿ ಮಲಗಿದ್ದರು. ಈ ವೇಳೆ ಕಪ್ಪೆಯನ್ನು ಅಟ್ಟಾಡಿಸಿಕೊಂಡು ಬಂದ ಹಾವು ಹಾಸಿಗೆಯೊಳಗೆ ನುಗ್ಗಿ ಯಲ್ಲಮ್ಮಗೆ ಕಚ್ಚಿದೆ. ಹಾವು ಕಡಿತದ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವು ಕಚ್ಚುತ್ತಿದ್ದಂತೆ ಯಲ್ಲಮ್ಮ ಥಟ್ಟನೆ ಎದ್ದು ಕುಳಿತುಕೊಂಡು ಹಾವನ್ನು ಹೊಡೆಯಲು ಯತ್ನಿಸಿರುವುದು ದೃಶ್ಯದಲ್ಲಿ ಕಾಣಿಸುತ್ತದೆ. ಸದ್ಯ ಯಲ್ಲಮ್ಮ ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link