All posts by nagaraj11081993

ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಭಾಗ್ಯ: ಹೊಸ ಜವಾಬ್ದಾರಿ ಖಂಡಿತ

ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಭಾಗ್ಯ: ಹೊಸ ಜವಾಬ್ದಾರಿ ಖಂಡಿತ

ಮಾರ್ಚ್ 15ರಿಂದ 21ರವರೆಗೆ ಮೂರನೇ ವಾರ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸ ಆಸೆ ಅಧಿಕ, ಕಿರಿಕಿರಿ ಕೆಲವರಿಗೆ, ಒತ್ತಡದ ಸುಧಾರಣೆಗೆ ಪ್ರಯತ್ನ ಇವೆಲ್ಲ ಬೇಕಾಗುವುದು. ಅಂತರಿಕ ಕಲಹ ಶಮನವಾಗಲಿದೆ.

ಮೇಷ:

ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಹೊಸ ಜವಾಬ್ದಾರಿಗಳು ಉನ್ನತ ಸ್ಥಾನಕ್ಕೆ ದಾರಿಯಾಗಲಿವೆ. ಉದ್ಯಮ ಸ್ಥಾಪನೆಗೆ ಇದು ಸಕಾಲ. ವೃತ್ತಿ ನಿಮಿತ್ತ ಕಿರು ಪ್ರಯಾಣ ಸಂಭವಿಸುವುದು. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ.

​ವೃಷಭ:

ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ಸಿಗಲಿದೆ. ವಿದೇಶಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಅಥವಾ ಉದ್ಯೋಗದ ಕಾರಣ ದೂರದ ಪ್ರಯಾಣವಿರುತ್ತದೆ. ಹೊಸ ಉದ್ಯಮ ಆರಂಭಿಸಲು ಹೂಡಿಕೆದಾರರು ಲಭ್ಯವಾಗುವ ಸಾಧ್ಯತೆ ಇದೆ.

​ಮಿಥುನ:

ಕೆಲಸದಲ್ಲಿ ಅತಿಯಾದ ಒತ್ತಡವಿದ್ದರೂ ಸ್ಥಾನಮಾನ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸುವವರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯಮದಲ್ಲಿ ಲಾಭಾಂಶ ಹೆಚ್ಚಾಗಲಿದ್ದು, ಹೊಸ ಪಾಲುದಾರಿಕೆ ವ್ಯವಹಾರಕ್ಕೆ ಉತ್ತಮ ಸಮಯ.

​ಕರ್ಕಾಟಕ:

ಉದ್ಯೋಗದಲ್ಲಿ ವರ್ಗಾವಣೆ ಅಥವಾ ಬದಲಾವಣೆಯ ಸಾಧ್ಯತೆ ದಟ್ಟವಾಗಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಉನ್ನತ ಹುದ್ದೆ ಲಭಿಸಲಿದೆ. ಉದ್ಯಮ ಸ್ಥಾಪನೆಗೆ ಕುಟುಂಬದ ಸಹಕಾರ ದೊರೆಯಲಿದ್ದು, ಆತ್ಮವಿಶ್ವಾಸ ಹೆಚ್ಚಾಗುವುದು.

​ಸಿಂಹ:

ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಹೊಂದುವ ಯೋಗವಿದೆ. ವೃತ್ತಿ ಸಂಬಂಧಿತ ಪ್ರಯಾಣಗಳು ಲಾಭದಾಯಕವಾಗಿರಲಿವೆ. ಹೊಸ ಉದ್ಯಮ ಆರಂಭಿಸಲು ತಾಂತ್ರಿಕ ನೆರವು ಹಾಗೂ ಆರ್ಥಿಕ ಸೌಲಭ್ಯ ದೊರೆಯಲಿದೆ.

​ಕನ್ಯಾ:

ಸ್ಥಿರವಾದ ಉದ್ಯೋಗ ಜೀವನವಿರಲಿದೆ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳು ಕಂಡುಬರುತ್ತವೆ. ವ್ಯಾಪಾರ ವಿಸ್ತರಣೆಗೆ ಇದು ಪೂರಕ ಸಮಯ. ದೀರ್ಘಕಾಲದ ಉದ್ಯೋಗದ ಸಮಸ್ಯೆಗಳು ಬಗೆಹರಿದು ಮಾನಸಿಕ ಶಾಂತಿ ಸಿಗಲಿದೆ.

​ತುಲಾ:

ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು. ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಬರಬಹುದು. ಉದ್ಯಮದಲ್ಲಿ ನಾವೀನ್ಯತೆ ತರಲು ಪ್ರಯತ್ನಿಸುವಿರಿ. ಉದ್ಯೋಗದ ನಿಮಿತ್ತ ರಾಜ್ಯದ ಹೊರಗೆ ಪ್ರಯಾಣಿಸುವ ಸಾಧ್ಯತೆ ಇದೆ.

​ವೃಶ್ಚಿಕ:

ಉದ್ಯೋಗದಲ್ಲಿ ಅಸ್ಥಿರತೆ ದೂರವಾಗಿ ನೆಮ್ಮದಿ ಸಿಗಲಿದೆ. ಉನ್ನತ ವ್ಯಾಸಂಗದ ಜೊತೆಗೆ ಉದ್ಯೋಗ ಮಾಡುವವರಿಗೆ ಪ್ರಗತಿ ಇರಲಿದೆ. ಸ್ವಂತ ಉದ್ಯಮ ಆರಂಭಿಸಲು ತಜ್ಞರ ಸಲಹೆ ಪಡೆಯುವುದು ಉತ್ತಮ. ಕಠಿಣ ಸವಾಲುಗಳನ್ನು ಜಯಿಸುವಿರಿ.

​ಧನು:

ಭಾಗ್ಯೋದಯದ ಸಮಯವಿದು. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳದ ಸೂಚನೆ ಇದೆ. ಉದ್ಯಮ ಸ್ಥಾಪನೆಗೆ ಬೇಕಾದ ಭೂಮಿ ಅಥವಾ ಕಟ್ಟಡದ ಯೋಗವಿದೆ. ವೃತ್ತಿ ನಿಮಿತ್ತ ಪ್ರವಾಸಗಳು ಯಶಸ್ವಿಯಾಗಿ ಮುಕ್ತಾಯಗೊಳ್ಳಲಿವೆ.

​ಮಕರ:

ಉದ್ಯೋಗದಲ್ಲಿ ಶಿಸ್ತು ಮತ್ತು ಸಮಯ ಪಾಲನೆ ನಿಮಗೆ ಉನ್ನತ ಸ್ಥಾನ ತಂದುಕೊಡಲಿದೆ. ಹಳೆಯ ಉದ್ಯಮದಲ್ಲಿ ಲಾಭ ಹೆಚ್ಚಾಗಲಿದ್ದು, ಹೊಸ ಶಾಖೆ ತೆರೆಯಲು ನಿರ್ಧರಿಸುವಿರಿ. ಕೆಲಸದ ಒತ್ತಡದ ನಡುವೆಯೂ ಯಶಸ್ಸು ನಿಮ್ಮದಾಗಲಿದೆ.

​ಕುಂಭ:

ವೃತ್ತಿ ಬದಲಾವಣೆ ಲಾಭದಾಯಕವಾಗಿರಲಿದೆ. ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಹೊಸ ಸ್ಟಾರ್ಟ್‌ಅಪ್ ಆರಂಭಿಸಲು ಇದು ಶುಭ ಸಮಯ. ವಿದೇಶಿ ಪ್ರವಾಸ ಅಥವಾ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ.

​ಮೀನ:

ಉದ್ಯೋಗದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಿರಿ. ಹಿರಿಯರ ಮಾರ್ಗದರ್ಶನದಿಂದ ಉನ್ನತ ಹುದ್ದೆ ಅಲಂಕರಿಸುವಿರಿ. ಉದ್ಯಮದಲ್ಲಿ ಹೂಡಿಕೆ ಮಾಡಲು ಹಣಕಾಸಿನ ನೆರವು ಸಿಗಲಿದೆ. ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.

– ಲೋಹಿತ ಹೆಬ್ಬಾರ್ – 8762924271

Source link

ದುಬೈನಿಂದ ಬರುತ್ತಿದ್ದಂತೆ ಕಾರು ಖರೀದಿಸಿದ ಅಜಿತ್; ನೀವಂದುಕೊಂಡಷ್ಟು ದುಬಾರಿ ಅಲ್ಲ

ಕಾಲಿವುಡ್ ನಟ ಅಜಿತ್ ಕುಮಾರ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ರೇಸ್​​ಗಾಗಿ ದುಬೈನಲ್ಲಿ ಇದ್ದರು. ಆದ್ರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ರೀತಿಯ ಪರಿಸ್ಥಿತಿಯಿಂದ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿತ್ತು. ಈ ಕಾರಣದಿಂದ ಅಜಿತ್ ಅವರು ದುಬೈನಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಈಗ ಅವರು ಚೆನ್ನೈಗೆ ಮರಳಿದ್ದಾರೆ. ಇಲ್ಲಿಗೆ ಆಗಮಿಸುತ್ತಿದ್ದಂತೆ ಅವರು 24 ಲಕ್ಷ ರೂಪಾಯಿ ಕಾರು ಖರೀದಿ ಮಾಡಿದ್ದಾರೆ.

ಅಜಿತ್ ಅವರು ಚೆನ್ನೈಗೆ ಮರಳಿದ ಬಳಿಕ ಸಾಯಿ ಬಾಬ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಾಯಿ ಬಾಬಾ ಮಂದಿರದವರೇ ಈ ವಿಡಿಯೋನ ಹಂಚಿಕೊಂಡಿದ್ದರು. ಬಿಗಿ ಭದ್ರತೆ ಜೊತೆ ಅಜಿತ್ ಅವರು ದೇವಸ್ಥಾನಕ್ಕೆ ತೆರಳಿದ್ದರು. ಆ ಬಳಿಕ ಅವರು ಚೆನ್ನೈಗೆ ಮರಳಿದ್ದಾರೆ ಎನ್ನಲಾಗಿದೆ.

ಅವರು ಮಹಿಂದ್ರ ಕಂಪನಿಯ ಬಿಇ6 ಕಾರನ್ನು ಖರೀದಿ ಮಾಡಿದ್ದಾರೆ. ಮಹಿಂದ್ರಾ ಎಲೆಕ್ಟ್ರಿಕ್ ಈ ವಿಷಯವನ್ನು ರಿವೀಲ್ ಮಾಡಿದೆ. ಕಂಪನಿಯ ವೆಬ್​ಸೈಟ್ ಪ್ರಕಾರ ಅಜಿತ್ ಖರೀದಿಸಿದ ಕಾರಿನ ಬೆಲೆ 24 ಲಕ್ಷ ರೂಪಾಯಿ. ಅವರು ಟ್ಯಾಂಗೋ ರೆಡ್ ಬಣ್ಣದ ಕಾರು ಇದಾಗಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ‘ಸರಿಯಾಗಿ ವರ್ತಿಸಿ, ಇದು ಥಿಯೇಟರ್ ಅಲ್ಲ’; ಅಭಿಮಾನಿಗಳ ಮೇಲೆ ಕೂಗಾಡಿದ ನಟ ಅಜಿತ್

ಅಜಿತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಸ್ಪೋರ್ಟ್ಸ್​ ಬಗ್ಗೆಯೂ ಆಸಕ್ತಿ ಇದೆ. ಅವರ ಬಳಿ ಫೇರಾರಿ ಸೇರಿದಂತೆ ಸಾಕಷ್ಟು ದುಬಾರಿ ಕಾರುಗಳು ಇವೆ. ಆದಾಗ್ಯೂ ಅವರು ಮಹಿಂದ್ರಾ ಕಾರನ್ನು ಆಯ್ಕೆ ಮಾಡಿಕೊಂಡಿದ್ದು ಸಾಕಷ್ಟು ಖುಷಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಅಶ್ಲೀಲ ವಿಡಿಯೋ ಪೋಸ್ಟ್ ಮಾಟಿ ನಟಿಗೆ ಕಿರುಕುಳ: ಇಬ್ಬರ ಬಂಧನ

ನಟಿಯರಿಗೆ ಆನ್​ಲೈನ್ (Onlie) ಕಿರುಕುಳ ಎಂಬುದು ಪಿಡುಗಾಗಿ ಪರಿಣಮಿಸಿದೆ. ಹಲವಾರು ನಟಿಯರು ಆನ್​​ಲೈನ್ ಕಿರುಕುಳದಿಂದ ತೀವ್ರ ಸಮಸ್ಯೆ, ಮಾನಸಿಕ ಹಿಂಸೆ ಅನುಭವಿಸುತ್ತಲೇ ಇದ್ದಾರೆ. ಅಶ್ಲೀಲ ಕಮೆಂಟುಗಳು, ಎಐ ಜನರೇಟೆಡ್ ಅಶ್ಲೀಲ ವಿಡಿಯೋಗಳು, ತಿರುಚಿದ ಚಿತ್ರಗಳು ಹೀಗೆ ನಟಿಯರನ್ನು ಹಲವು ರೀತಿಯಲ್ಲಿ ದುರುಳರು ಕಾಡುತ್ತಲೇ ಬಂದಿದ್ದಾರೆ. ಆದರೆ ಕೆಲವು ನಟಿಯರು ಮಾತ್ರ ಇಂಥಹವರ ವಿರುದ್ಧ ಹೋರಾಡುವ ಧೈರ್ಯ ತೋರುತ್ತಾರೆ. ಇತ್ತೀಚೆಗೆ ಸೈಬರ್ ಪೊಲೀಸರು ಸಹ ಇಂಥಹಾ ಟ್ರೋಲ್​​ಗಳ ವಿರುದ್ಧ ಗಂಭೀರವಾಗಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ತೆಲುಗಿನ ಗ್ಲಾಮರಸ್ ನಟಿಯೊಬ್ಬರಿಗೆ ಆನ್​​ಲೈನ್ ಕಿರುಕುಳ ನೀಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ತೆಲುಗು ಚಿತ್ರರಂಗ ಮತ್ತು ಟಿವಿ ಲೋಕದ ಜನಪ್ರಿಯ ನಟಿ ಹಾಗೂ ನಿರೂಪಕಿ ಆಗಿರುವ ಅನುಸೂಯ ಭಾರಧ್ವಜ (Anusuya Bharadwaj) ಅವರಿಗೆ ಆನ್​​ಲೈನ್​​ನಲ್ಲಿ ಕಿರುಕುಳ ನೀಡಿದ ಇಬ್ಬರನ್ನು ಸೈಬರಾಬಾದ್ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಜನಾರ್ದನ್ (29) ಮತ್ತು ಕೊಂಡಪುರಂ ಅರುಣ್ ಕುಮಾರ್ ಎಂಬುವರು ಇದೀಗ ಬಂಧನಕ್ಕೆ ಒಳಗಾಗಿದ್ದಾರೆ. ಈ ಇಬ್ಬರು ದುರುಳರು ಎಐ ಬಳಸಿ ಅನುಸೂಯ ಅವರ ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ನಟಿ ಅನುಸೂಯ ಅವರು ದೂರು ನೀಡಿದ್ದರು. ಅದರಂತೆ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 23 ರಂದು ದೂರು ನೀಡಿದ್ದ ಅನುಸೂಯ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಹಲವು ಸಾಮಾಜಿಕ ಮಾಧ್ಯಮ ಪುಟಗಳು ತನ್ನ ವಿರುದ್ಧ ಮಾನಹಾನಿಕರ, ನಿಂದನಾತ್ಮಕ ಮತ್ತು ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುತ್ತಿವೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಇದು ತನ್ನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಅವರು ದೂರಿದ್ದರು. ಕೂಡಲೇ ಅಂಥಹವರನ್ನು ಗುರುತಿಸಿ ದುಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು.

ದೂರು ಸ್ವೀಕರಿಸಿ ತನಿಖೆ ನಡೆಸಿದ ಸೈಬರಾಬಾದ್ ಸೈಬರ್ ಪೊಲೀಸರು ಹೈದರಾಬಾದ್​​ನಲ್ಲಿ ವಾಸವಿದ್ದ, ಆಂಧ್ರಪ್ರದೇಶದ ಕಡಪಾ ಮೂಲದ ಜನಾರ್ದನ್ ಎಂಬಾತನನ್ನು ಬಂಧಿಸಿದ್ದರು. ಈತ ‘@mmtt_official’ ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ನಡೆಸುತ್ತಿದ್ದ. ಈ ಖಾತೆಯ ಮೂಲಕ ಅನುಸೂಯ ಸೇರಿದಂತೆ ಇತರೆ ಕೆಲವು ನಟಿಯರನ್ನು ಗುರಿಯಾಗಿಸಿಕೊಂಡು ಎಐ ನಿರ್ಮಿತ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ. ಸಿಕಂದರಾಬಾದ್‌ನ ಪಶ್ಚಿಮ ಮಾರೇಡ್‌ಪಲ್ಲಿಯ ಆಟೋ ಚಾಲಕನಾಗಿರುವ ಅರುಣ್ ಕುಮಾರ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ರೀಲ್ಸ್‌ನಲ್ಲಿ ನಟಿಯ ವಿರುದ್ಧ ಅತ್ಯಂತ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ

ಪೊಲೀಸರು ಈ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ (Forensic) ತನಿಖೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಟ್ಟು 73 ವ್ಯಕ್ತಿಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಇದರಲ್ಲಿ ಕೆಲವು ಮಾಧ್ಯಮ ಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರೂ ಇದೆ ಎಂದು ತಿಳಿದುಬಂದಿದೆ. ನಟಿ ಅನಸೂಯ ಅವರು ಮಹಿಳೆಯರ ಉಡುಪಿನ ಕುರಿತಾದ ಚರ್ಚೆಯೊಂದರಲ್ಲಿ ತಮ್ಮ ವೈಯಕ್ತಿಕ ಸ್ವಾತಂತ್ರ್ಯದ ಪರವಾಗಿ ಮಾತನಾಡಿದ್ದರು. ಇದರ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಟ್ರೋಲ್ ಮತ್ತು ಹರಿತವಾದ ನಿಂದನೆಗಳು ಆರಂಭವಾಗಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ : ಈ ರಾಶಿಯವರಿಗೆ ಮಾ. 21ರವರೆಗೆ ಪ್ರೇಮದಲ್ಲಿ ಭಗ್ನತೆ

ಮಾರ್ಚ್ 15ರಿಂದ ಮಾರ್ಚ್ 21ರವರೆಗೆ ಪ್ರೇಮದಲ್ಲಿ ಭಗ್ನತೆ, ಹಳೆಯ ಪ್ರೇಮದ ಹೊಸ ಹುಟ್ಟು ಕಾಣಿಸುವುದು. ಮರು ವಿವಾಹಕ್ಕೆ ಪ್ರಯತ್ನ ಸಾಗಲಿದೆ. ಪ್ರೇಮಕ್ಕೆ ಆಕರ್ಷಣೆಯ ಲೇಪವನ್ನು ಹಚ್ಚುವಿರಿ. ಎಲ್ಲವೂ ಕ್ಷಣಿಕವೆಂದು ಅರಿವಾದಾಗ ಕಾಲ ಕಳೆಯುತ್ತದೆ. ಹೆಜ್ಜೆ ಇಟ್ಟು ದೃಷ್ಟಿ ಹರಿಸುವ ಬದಲು, ದೃಷ್ಟಿ ಇಟ್ಟು ಹೆಜ್ಜೆ ಹಾಕಿ.

ಮೇಷ

ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ವಾಗ್ವಾದಗಳಾಗಬಹುದು, ತಾಳ್ಮೆ ಅಗತ್ಯ. ಪ್ರೇಮಿಗಳಿಗೆ ಮನೆಯವರಿಂದ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸುಸಮಯವಿದು.

ವೃಷಭ

ಹಳೆಯ ಪ್ರೇಮ ನೆನಪಾಗಿ ಮನಸ್ಸು ಸ್ವಲ್ಪ ಚಂಚಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಗೌರವ ಹೆಚ್ಚಲಿದೆ. ಹೊಸ ಸಂಬಂಧಕ್ಕೆ ಕೈಹಾಕುವ ಮೊದಲು ಯೋಚಿಸಿ, ಪ್ರೇಮಭಂಗದ ಭೀತಿ ಇರುವವರು ಮೌನವಾಗಿರುವುದು ಒಳಿತು.

ಮಿಥುನ

ಸಂವಹನ ಕೊರತೆಯಿಂದ ದೂರವಾಗಿದ್ದ ಪ್ರೇಮಿಗಳು ಈ ವಾರ ಮತ್ತೆ ಒಂದಾಗುವರು. ಸಂಗಾತಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಪ್ರೀತಿ ಬಲಪಡಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಹುಡುಕಿ ಬರಲಿವೆ.

ಕಟಕ

ಕುಟುಂಬದಲ್ಲಿ ವಿವಾಹದ ಮಾತುಕತೆಗಳು ಶುಭ ಫಲ ನೀಡಲಿವೆ. ಪ್ರೇಮ ಜೀವನದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಮನಸ್ತಾಪ ಉಂಟಾಗಬಹುದು. ಸಂಗಾತಿಯ ಭಾವನೆಗಳಿಗೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ.

ಸಿಂಹ

ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಸಂಗಾತಿಯ ಮನ ಗೆಲ್ಲುವಿರಿ. ಪ್ರೇಮ ನಿವೇದನೆಗೆ ಇದು ಅತ್ಯಂತ ಶುಭ ವಾರ. ವಿವಾಹ ಜೀವನದಲ್ಲಿ ಹೊಸ ಚೈತನ್ಯ ಮೂಡಲಿದ್ದು, ದಂಪತಿಗಳ ನಡುವೆ ಸಾಮರಸ್ಯ ವೃದ್ಧಿಯಾಗಲಿದೆ.

ಕನ್ಯಾ

ಕೆಲಸದ ಒತ್ತಡದಿಂದ ಸಂಗಾತಿಯಿಂದ ದೂರ ಉಳಿಯುವ ಸಂದರ್ಭ ಬರಬಹುದು. ಅನಗತ್ಯ ಸಂಶಯಗಳು ಪ್ರೇಮಭಂಗಕ್ಕೆ ದಾರಿಯಾಗದಂತೆ ಎಚ್ಚರವಹಿಸಿ. ವಿವಾಹ ಪ್ರಸ್ತಾವನೆಗಳು ಅಂತಿಮವಾಗಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು.

ತುಲಾ

ಸಂಗಾತಿಯೊಂದಿಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಯೋಗವಿದೆ. ಪ್ರೇಮಿಗಳ ನಡುವೆ ಇದ್ದ ಗೊಂದಲಗಳು ಬಗೆಹರಿಯಲಿವೆ. ಹೊಸದಾಗಿ ವಿವಾಹವಾದವರಿಗೆ ಈ ವಾರ ಅತ್ಯಂತ ಮಧುರವಾದ ಕ್ಷಣಗಳನ್ನು ಕಳೆಯುವ ಅವಕಾಶ ಸಿಗಲಿದೆ.

ವೃಶ್ಚಿಕ

ನಿಮ್ಮ ಹಠಮಾರಿತನ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು, ಹೊಂದಾಣಿಕೆ ಮುಖ್ಯ. ಪ್ರೇಮ ವೈಫಲ್ಯ ಅನುಭವಿಸಿದವರಿಗೆ ಹಳೆಯ ನೋವಿನಿಂದ ಹೊರಬರಲು ಮಿತ್ರರ ಸಹಾಯ ಸಿಗಲಿದೆ. ಮದುವೆಯ ಮಾತುಕತೆಗಳಲ್ಲಿ ವಿಳಂಬ ಸಾಧ್ಯತೆ.

ಧನು

ಪ್ರೇಮ ಜೀವನದಲ್ಲಿ ನಂಬಿಕೆ ಮತ್ತು ಬದ್ಧತೆ ಹೆಚ್ಚಾಗಲಿದೆ. ಮನೆಯ ಹಿರಿಯರ ಸಮ್ಮತಿಯೊಂದಿಗೆ ವಿವಾಹ ನಿಶ್ಚಿತವಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.

ಮಕರ

ವೃತ್ತಿಜೀವನದ ಬಿಡುವಿಲ್ಲದ ವೇಳಾಪಟ್ಟಿಯಿಂದ ಪ್ರೇಮ ಜೀವನಕ್ಕೆ ಸಮಯ ನೀಡುವುದು ಕಷ್ಟವಾಗಬಹುದು. ಇದು ಸಂಗಾತಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಪ್ರೇಮಿಗಳು ಪರಸ್ಪರ ಸಹಕರಿಸುವುದರಿಂದ ಸಂಬಂಧ ಗಟ್ಟಿಯಾಗಲಿದೆ.

ಕುಂಭ

ಹೊಸಬರ ಪರಿಚಯ ಗಾಢವಾದ ಪ್ರೇಮವಾಗಿ ಬದಲಾಗುವ ಲಕ್ಷಣಗಳಿವೆ. ವಿಚ್ಛೇದನ ಅಥವಾ ಪ್ರೇಮಭಂಗ ಅನುಭವಿಸಿದವರಿಗೆ ಹೊಸ ಜೀವನ ಆರಂಭಿಸಲು ಇದು ಸಕಾಲ. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದ್ದು, ಸಂತೋಷದ ವಾತಾವರಣವಿರುತ್ತದೆ.

ಮೀನ

ಪ್ರೇಮ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ, ಭಾವನೆಗಳ ಮೇಲೆ ಹಿಡಿತವಿರಲಿ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು, ಶುಭ ಕಾರ್ಯಗಳು ನೆರವೇರಲಿವೆ. ಸಂಗಾತಿಯ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ.

ಲೋಹಿತ ಹೆಬ್ಬಾರ್

Source link

ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಅಮಾನವೀಯ ವರ್ತನೆ: 2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!

ಬೆಂಗಳೂರು, ಮಾ.14: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಯೊಂದರ ಅಮಾನವೀಯ ವರ್ತನೆ ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಎರಡು ನಿಮಿಷ ತಡವಾಗಿ ಶಾಲೆಗೆ ಬಂದಿದ್ದಕ್ಕಾಗಿ ಆರನೇ ವರ್ಷದ ಪುಟ್ಟ ಮಗುವನ್ನು ಸುಮಾರು ಎರಡು ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಶಾಲಾ ಮಂಡಳಿ ತನ್ನ ಕ್ರೌರ್ಯ ಮೆರೆದಿದೆ. ನಗರದ ಸಂಚಾರ ದಟ್ಟಣೆಯಿಂದಾಗಿ ಮಗು ಶಾಲೆಗೆ ಕೇವಲ 2 ನಿಮಿಷ ತಡವಾಗಿ ತಲುಪಿದೆ. ಇದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿದ ಶಾಲಾ ಸಿಬ್ಬಂದಿ, ಮೊದಲನೇ ತರಗತಿಯ ಮಗುವನ್ನು ಮಧ್ಯಾಹ್ನದ ಅತೀ ಹೆಚ್ಚು ತಾಪಮಾನವಿರುವ ಬಿಸಿಲಿನಲ್ಲಿ ಎರಡು ಗಂಟೆಗಳ ಕಾಲ ಮೈದಾನದಲ್ಲಿ ನಿಲ್ಲಿಸಿದ್ದಾರೆ. ಸುಡುವ ಬಿಸಿಲಿಗೆ ಮಗು ಕಂಗಾಲಾಗಿದ್ದು, ದೈಹಿಕವಾಗಿ ಅಸ್ವಸ್ಥಗೊಂಡಿದೆ. ಆರು ವರ್ಷದ ಮಗುವಿಗೆ ಇಂತಹ ಕಠಿಣ ಶಿಕ್ಷೆ ನೀಡಿರುವುದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲು ಹೋದಾಗ, ಕ್ಷಮೆ ಕೇಳುವ ಬದಲು ಅತ್ಯಂತ ಅಹಂಕಾರದಿಂದ ವರ್ತಿಸಿದ್ದಾರೆ. “ನಮ್ಮ ಶಿಸ್ತೇ ಹೀಗೆ, ನಿಮಗೆ ಇಷ್ಟವಿಲ್ಲದಿದ್ದರೆ ಮಗುವನ್ನು ಕರೆದುಕೊಂಡು ಹೋಗಿ” ಎನ್ನುವ ರೀತಿಯಲ್ಲಿ ಬೇಜವಾಬ್ದಾರಿಯುತ ಉತ್ತರ ನೀಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಈ ಬಗ್ಗೆ @gharkekalesh ಎಂಬ ಎಕ್ಸ್​​​ ಖಾತೆ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

IPLಗೆ ಎಂಟ್ರಿ ಬೆನ್ನಲ್ಲೇ PSL​ನಿಂದ ಬ್ಯಾನ್!

ಝಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರಬಾನಿ (Blessing Muzarabani) ಅವರು ಪಾಕಿಸ್ತಾನ್ ಸೂಪರ್ ಲೀಗ್ (PSL) ಒಪ್ಪಂದವನ್ನು ಉಲ್ಲಂಘಿಸಿರುವ ಕಾರಣ, ಪಾಕ್ ಕ್ರಿಕೆಟ್ ಮಂಡಳಿ (PCB) ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಮುಝರಬಾನಿ ಮುಂಬರುವ PSL 2026 ಸೀಸನ್‌ಗಾಗಿ ಇಸ್ಲಾಮಾಬಾದ್ ಯುನೈಟೆಡ್ ತಂಡದೊಂದಿಗೆ ಸುಮಾರು 1.1 ಕೋಟಿ ರೂಪಾಯಿ (PKR) ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದರು.

ಆದರೆ ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚಾನ್ಸ್ ಸಿಗುತ್ತಿದ್ದಂತೆ ಮುಝರಬಾನಿ ಪಾಕಿಸ್ತಾನ್ ಸೂಪರ್ ಲೀಗ್​ಗೆ ಕೈ ಕೊಟ್ಟಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬಾಂಗ್ಲಾದೇಶ್ ವೇಗಿ ಮುಸ್ತಫಿಝುರ್ ರೆಹಮಾನ್  ಬದಲಿಯಾಗಿ ಬ್ಲೆಸ್ಸಿಂಗ್ ಮುಝರಬಾನಿ ಅನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಪಿಸಿಬಿ ಕಾನೂನು ಕ್ರಮ:

ಬ್ಲೆಸ್ಸಿಂಗ್ ಮುಝರಬಾನಿ ಈಗಾಗಲೇ ಸಹಿ ಮಾಡಿದ ಒಪ್ಪಂದವನ್ನು ಅರ್ಧದಲ್ಲೇ ಕೈಬಿಟ್ಟಿರುವುದು ನಿಯಮ ಬಾಹಿರ ಎಂದು ಪರಿಗಣಿಸಿರುವ PCB, ಅವರ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಭವಿಷ್ಯದ PSL ಪಂದ್ಯಗಳಿಂದ ಅವರನ್ನು ನಿಷೇಧಿಸಲು ಯೋಜಿಸುತ್ತಿದೆ.

ಕಳೆದ ವರ್ಷ ಸೌತ್ ಆಫ್ರಿಕಾದ ಕಾರ್ಬಿನ್ ಬಾಷ್ ಕೂಡ ಇದೇ ರೀತಿ ಪೆಶಾವರ್ ಝಲ್ಮಿ ತಂಡವನ್ನು ಬಿಟ್ಟು ಮುಂಬೈ ಇಂಡಿಯನ್ಸ್ ಸೇರಿದ್ದರು. ಆಗ PCB ಅವರಿಗೆ ಒಂದು ವರ್ಷದ ನಿಷೇಧ ಹೇರಿತ್ತು.

ಇದೀಗ ಬ್ಲೆಸ್ಸಿಂಗ್ ಮುಝರಬಾನಿ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ಸಿಗುತ್ತಿದ್ದಂತೆ ಪಾಕಿಸ್ತಾನ್ ಸೂಪರ್ ಲೀಗ್​ಗೆ ಕೈ ಕೊಟ್ಟಿದ್ದಾರೆ. ಹೀಗಾಗಿ ಝಿಂಬಾಬ್ವೆ ವೇಗಿಯನ್ನು ಸಹ ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಒಂದು ವರ್ಷ ನಿಷೇಧಿಸಲಿದ್ದಾರೆ.

ಅತ್ಯುತ್ತಮ ಬೌಲಿಂಗ್:

ಐಪಿಎಲ್ 2025 ರಲ್ಲಿ ಆರ್​ಸಿಬಿ ತಂಡಕ್ಕೆ ತಾತ್ಕಾಲಿಕ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದ ಬ್ಲೆಸ್ಸಿಂಗ್ ಮುಝರಬಾನಿ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: ಸಂಜು ಸ್ಯಾಮ್ಸನ್ ಫೋಟೋ ಎಡಿಟ್ ಮಾಡಿ ಹಂಚಿಕೊಂಡ್ರಾ ಗಿಲ್: ಇಲ್ಲಿದೆ ನಿಜಾಂಶ

6 ಪಂದ್ಯಗಳಲ್ಲಿ ಮಾರಕ ದಾಳಿ ಸಂಘಟಿಸಿದ್ದ ಬ್ಲೆಸ್ಸಿಂಗ್ ಮುಝರಬಾನಿ ಒಟ್ಟು 13 ವಿಕೆಟ್ ಕಬಳಿಸಿದ್ದರು. ಹೀಗಾಗಿ ಮುಸ್ತಫಿಝುರ್ ರೆಹಮಾನ್ ಬದಲಿಯಾಗಿ ಬ್ಲೆಸ್ಸಿಂಗ್ ಮುಝರಬಾನಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದರಂತೆ ಮಾರ್ಚ್ 17 ರಂದು ಝಿಂಬಾಬ್ವೆ ವೇಗಿ ಕೆಕೆಆರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

 

Source link

ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿಸಿದ ಬ್ಯಾಂಕ್: ಹೇಗೆ ಗೊತ್ತಾ?

ಹಾಸನ, (ಮಾರ್ಚ್ 14): ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾ ಬ್ಯಾಂಕ್ (Sakleshpura canara bank) ನೀಡಬೇಕಿದ್ದ 66 ಪೈಸೆ ಹಣವನ್ನು ಕೊನೆಗೂ ಮರುಪಾವತಿಸಿದೆ. ಕೆಲವು ವರ್ಷಗಳ ಹಿಂದೆ ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂ. ಸಾಲವನ್ನು (Loan)  ಕೆನರಾ ಬ್ಯಾಂಕ್‌ನಲ್ಲಿ ಪಡೆದಿದ್ದರು. ಸಕಾಲಕ್ಕೆ ಸಾಲ ತೀರುವಳಿ ಮಾಡಿದ್ದ ರೈತನಿಗೆ ಕೆಲವು ದಿನಗಳ ನಂತರ ಇನ್ನೂ 9.34 ಪೈಸೆ ಸಾಲ ಬಾಕಿ ಇದ್ದು ತಕ್ಷಣವೇ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದಲ್ಲದೆ ಪದೇಪದೆ ಕರೆ ಮಾಡುತ್ತಿದ್ದರು. ಇದರಿಂದ ಬೇಸತ್ತ ರೈತ ಬ್ಯಾಂಕಿಗೆ ತೆರಳಿ 10 ರೂ. ನೀಡಿ ಸಾಲಕ್ಕೆ ಜಮಾ ಮಾಡಿಕೊಂಡು ಉಳಿದ 66 ಪೈಸೆ ವಾಪಸ್ ನೀಡುವಂತೆ ಬ್ಯಾಂಕ್‌ ಕ್ಯಾಷಿಯರ್ ಗೆ ಒತ್ತಾಯಿಸಿದ್ದರು. ಪೈಸೆಗೆ ಪೈಸೆ ಲೆಕ್ಕ ಹಾಕಿ ತಮ್ಮ ಹಣವನ್ನು ವಾಪಸ್‌ ಕೇಳುತ್ತೀರಾ. ನಮಗೂ ಹಣ ವಾಪಸ್ ಕೊಡಿ ಎಂದು ರೈತ ಚೊಕ್ಕಣ್ಣಗೌಡ ಬ್ಯಾಂಕ್ ಸಿಬ್ಬಂದಿಗೆ ಚಳಿ ಬಿಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಬ್ಯಾಂಕ್, ಚೊಕ್ಕಣ್ಣಗೌಡ ಖಾತೆಗೆ 66 ಪೈಸೆ ಹಣವನ್ನು ಅಕೌಂಟ್‌ಗೆ ಹಾಕಿದೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ರೈತ ಚೊಕ್ಕಣ್ಣಗೌಡ ಅವರು ಹಲವು ವರ್ಷಗಳಿಂದೆ ಬೆಳೆ ಸಾಲ ಪಡೆದುಕೊಂಡಿದ್ದರು. ಬಳಿಕ ಸಾಲವನ್ನು ವಾಪಸ್ ಕಟ್ಟಿದ್ದರು. ಆದ್ರೆ, ಬಾಕಿದ್ದ ಇದ್ದ 9 ರೂಪಾಯಿ 34 ಪೈಸೆ ಬಾಕಿ ಸಾಲ ಪಾವತಿಸುವಂತೆ ಬ್ಯಾಂಕ್ ಬೆನ್ನುಬಿದ್ದಿತ್ತು. ಹಲವು ಬಾರಿ ಕರೆ ಮಾಡಿ ಸಾಲ ಕಟ್ಟಲು ಒತ್ತಾಯಿಸಲಾಗಿತ್ತು. ಇದರಿಂದ ಕೆರಳಿದ ರೈತ ಚೊಕ್ಕಣ್ಣಗೌಡ, ಬ್ಯಾಂಕ್​​ಗೆ ಹೋಗಿ 10 ರೂ. ನೀಡಿ 9 ರೂಪಾಯಿ 34 ಪೈಸೆ ತೆಗೆದುಕೊಂಡು ಬಾಕಿ 66 ಪೈಸೆ ವಾಪಸ್ ಕೊಡುವಂತೆ ಆಗ್ರಹಿಸಿದ್ದರು.  66 ಪೈಸೆ ಚಿಲ್ಲರೆ ಇಲ್ಲ ಎಂಬ ಸಬೂಬು ಹೇಳಿದ್ದರಿಂದ ಮಾತಿನ ಚಕಮಕಿ ನಡೆದಿತ್ತು. ಪೈಸೆಗೆ ಪೈಸೆ ಲೆಕ್ಕ ಹಾಕಿ ತಮ್ಮ ಹಣವನ್ನು ವಾಪಸ್‌ ಕೇಳುತ್ತೀರಾ. ನಮಗೂ ಹಣ ವಾಪಸ್ ಕೊಡಿ ಎಂದು ರೈತ ಚೊಕ್ಕಣ್ಣಗೌಡ ಪಟ್ಟು ಹಿಡಿದಿದ್ದರು. ಈ ವೇಳೆ ಬ್ಯಾಂಕ್ ವ್ಯವಸ್ಥಾಪಕರು ರೈತನ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ಇತ್ಯರ್ಥ ಹಾಡಿದ್ದರು.

ಇದನ್ನೂ ಓದಿ: ಹಾಸನ: 9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ

ಅಲ್ಲದೇ ರೈತನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬ್ಯಾಂಕ್​​ನವರಿಗೆ ಸರಿಯಾಗಿಯೇ ಚಳಿ ಬಿಡಿಸಿದ್ದಾರೆ ಚೊಕ್ಕಣ್ಣಗೌಡರ ಪರ ಬ್ಯಾಟಿಂಗ್ ಮಾಡಿದ್ದರು. ಇನ್ನು ಈ ವಿಚಾರ ಬ್ಯಾಂಕ್​​​ಮ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ 66 ಪೆಸೆಯನ್ನು ರೈತನ ಅಕೌಂಟ್‌ಗೆ ಹಾಕಿ ಎಸ್‌ಎಂಎಸ್ ಕಳುಹಿಸಿದೆ. ಇದರೊಂದಿಗೆ ಪೈಸೆಗೆ ಪೈಸೆ ಕೊಡುಕೊಳ್ಳುವಿಕೆ ಸುಖಾಂತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ; ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ಮಣ್ಣುಪಾಲು!

ಬೆಂಗಳೂರು, ಮಾರ್ಚ್​ 14: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಸಿಲಿಂಡರ್ (LPG Gas Cylinder)ಕೊರತೆ ಜೊತೆಗೆ ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮದ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಯಾದಗಿರಿ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಮೊಟ್ಟೆಗಳ ವ್ಯಾಪಾರ ಬಹುತೇಕ ಸ್ಥಗಿತಗೊಂಡಿದ್ದು, ಇದರಿಂದ ಕೋಳಿ ಫಾರ್ಮ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾವೇರಿಯ ಮೊಟ್ಟೆ ವ್ಯಾಪಾರದಲ್ಲಿ ಭಾರೀ ನಷ್ಟ

ಹಾವೇರಿಯಲ್ಲಿ ಪ್ರತಿದಿನ ಭಾರತದಿಂದ ಸುಮಾರು 80 ಲಕ್ಷ ಮೊಟ್ಟೆಗಳು ವಿದೇಶಗಳಿಗೆ ರಫ್ತು ಆಗುತ್ತಿದ್ದವು. ಆದರೆ ಯುದ್ಧದ ಹಿನ್ನೆಲೆ ಆಮದು-ರಫ್ತು ವ್ಯವಹಾರ ಸ್ಥಗಿತಗೊಂಡಿರುವುದರಿಂದ ಮೊಟ್ಟೆಗಳ ದರದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಮೊದಲು ಒಂದು ಮೊಟ್ಟೆ 5 ರಿಂದ 6 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಈಗ 4 ರೂಪಾಯಿಗೆ ಮಾತ್ರ ಮಾರಾಟವಾಗುತ್ತಿದೆ ಎಂದು ಪೌಲ್ಟ್ರಿ ಫಾರ್ಮ್ ಮಾಲೀಕರು ತಿಳಿಸಿದ್ದಾರೆ.

ಕೊಪ್ಪಳ, ಯಾದಗಿರಿಯಲ್ಲೂ ಮೊಟ್ಟೆ ಮಾರುಕಟ್ಟೆ ಕುಸಿತ

ಕೊಪ್ಪಳ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 40 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತಿದ್ದು, ರಫ್ತು ನಿಂತಿರುವ ಕಾರಣ ಸಾವಿರಾರು ಮೊಟ್ಟೆಗಳು ಮಾರಾಟವಾಗದೆ ಉಳಿಯುತ್ತಿವೆ. ಕೆಲವು ಫಾರ್ಮ್‌ಗಳಲ್ಲಿ ಮಾರಾಟವಾಗದ ಮೊಟ್ಟೆಗಳನ್ನು ಗುಂಡಿ ತೋಡಿ ಹೂತು ಹಾಕಲಾಗುತ್ತಿದೆ. ಪ್ರತಿ ಫಾರ್ಮ್‌ಗೆ ದಿನಕ್ಕೆ 1 ರಿಂದ 1.5 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಎಲ್​ಪಿಜಿ ಸಿಲಿಂಡರ್ ಎಮರ್ಜೆನ್ಸಿ! ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ

ಯಾದಗಿರಿ ಜಿಲ್ಲೆಯಿಂದಲೂ ಕತಾರ್, ಕುವೈತ್, ಸೌದಿ ಹಾಗೂ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ಲಕ್ಷಾಂತರ ಮೊಟ್ಟೆಗಳು ರಫ್ತು ಆಗುತ್ತಿತ್ತು. ಆದರೆ ರಫ್ತು ನಿಂತಿರುವ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಧಾನಿ ಮೋದಿ ನಿರಂತರ ಪ್ರಯತ್ನದ ಬಳಿಕ ಅಂತೂ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎರಡು ಹಡಗುಗಳು

ನವದೆಹಲಿ, ಮಾರ್ಚ್​ 14: ಭಾರತದ ಧ್ವಜ ಹೊತ್ತ ಎರಡು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SCI) LPG ಟ್ಯಾಂಕರ್‌ಗಳು ಇಂದು ಹಾರ್ಮುಜ್(Hormuz) ಜಲಸಂಧಿಯನ್ನು ದಾಟಿ ಭಾರತದ ಕಡೆಗೆ ಸಾಗುತ್ತಿವೆ. ಹಡಗುಗಳ ಹೆಸರುಗಳು ಶಿವಾಲಿಕ್ ಮತ್ತು ನಂದಾ ದೇವಿ. ಇರಾನ್ ಮತ್ತು ಆ ಪ್ರದೇಶದ ಇತರ ಎಲ್ಲಾ ದೇಶಗಳ ಸಹಕಾರದೊಂದಿಗೆ ಇದು ಬಹಳ ಎಚ್ಚರಿಕೆಯಿಂದ ನಡೆಸಲಾದ ಕಾರ್ಯಾಚರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಇರಾನಿನ ನಾಯಕತ್ವಗಳ ನಡುವಿನ ಸರಣಿ ಮಾತುಕತೆ ನಂತರ ಈ ಎರಡು ಹಡಗುಗಳ ಓಡಾಟ ಆರಂಭಗೊಂಡಿದೆ ಎಂದು ಅವರು ಹೇಳಿದರು. ಹಾರ್ಮುಜ್ ಜಲಸಂಧಿಯ ಎರಡೂ ಬದಿಗಳಲ್ಲಿ ಪ್ರಸ್ತುತ ಬೀಡುಬಿಟ್ಟಿರುವ ಎರಡು ಡಜನ್‌ಗೂ ಹೆಚ್ಚು ಭಾರತೀಯ ಧ್ವಜ ಹೊಂದಿರುವ ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭಾರತ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟು ಆರಂಭವಾದಾಗಿನಿಂದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಫೆಬ್ರವರಿ 28, ಮಾರ್ಚ್ 5, ಮಾರ್ಚ್ 10 ಮತ್ತು ಮಾರ್ಚ್ 12 ರಂದು ತಮ್ಮ ಇರಾನಿನ ಪ್ರತಿರೂಪ ಸಯ್ಯದ್ ಅಬ್ಬಾಸ್ ಅರಗ್ಚಿ ಅವರೊಂದಿಗೆ ನಾಲ್ಕು ಸುತ್ತಿನ ಫೋನ್ ಕರೆಗಳನ್ನು ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗಕ್ಕೆ ಅವಕಾಶ; ಇರಾನ್ ರಾಯಭಾರಿ ಮಾಹಿತಿ

ಶಿವಾಲಿಕ್ ಸುಮಾರು 40,000 ಮೆಟ್ರಿಕ್ ಟನ್ ಅನಿಲವನ್ನು ಹೊತ್ತೊಯ್ಯುತ್ತಿದೆ ಮತ್ತು ನಂದಾ ದೇವಿ ಕೂಡ ಹೆಚ್ಚಿನ ಪ್ರಮಾಣದ ಅನಿಲವನ್ನು ಹೊತ್ತು ಬರುತ್ತಿದೆ. ಒಮನ್‌ನಿಂದ ಆಫ್ರಿಕಾಕ್ಕೆ ಗ್ಯಾಸೋಲಿಂಗ್ ಸಾಗಿಸುತ್ತಿರುವ ಭಾರತೀಯ ಧ್ವಜ ಹೊತ್ತ ಮತ್ತೊಂದು ತೈಲ ಟ್ಯಾಂಕರ್ ಜಗ್ ಪ್ರಕಾಶ್ ಕೂಡ ಹಾರ್ಮುಜ್ ಜಲಸಂಧಿಯ ಪೂರ್ವದಿಂದ ಪ್ರಯಾಣ ಬೆಳೆಸಿದೆ ಎಂದು ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.

ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ, ಸರಕು ಮತ್ತು ಇಂಧನದ ಅಡೆತಡೆಯಿಲ್ಲದ ಸಾಗಣೆಯು ಭಾರತದ ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಯಶ್ ಖಿನ್ನತೆಗೆ ಒಳಗಾಗಿದ್ದಾನೆ’; ವಿವಾದಿತ ಹೇಳಿಕೆ ನೀಡಿದ ಜ್ಯೋತಿಷಿ ವೇಣು ಸ್ವಾಮಿ

ಜ್ಯೋತಿಷಿ ವೇಣು ಸ್ವಾಮಿ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ಕಣ್ಣು ಯಶ್ ಮೇಲೆ ಬಿದ್ದಿದೆ. ಯಶ್ ಅವರನ್ನು ಏಕವಚನದಲ್ಲಿ ಕರೆದಿದ್ದು ಅಲ್ಲದೆ, ಅವರು ಖಿನ್ನೆತಗೆ ಒಳಗಾಗಿದ್ದಾರೆ ಎಂದಿದ್ದಾರೆ. ಇದು ಎರಡು ತಿಂಗಳ ಹಿಂದೆ ನೀಡಿದ ಸಂದರ್ಶನ ಆಗಿದ್ದು, ಈಗ ವೈರಲ್ ಆಗಿದೆ. ಯಶ್ ಬಗ್ಗೆ ಈ ರೀತಿ ಮಾತನಾಡಿದ ವೇಣು ಸ್ವಾಮಿ ವಿರದ್ಧ ಯಶ್ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ.

ವೇಣು ಸ್ವಾಮಿ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಸುದ್ದಿ ಆಗುತ್ತಾರೆ. ಅವರ ಮೇಲೆ ಈ ಹಿಂದೆ ಕೇಸ್ ಕೂಡ ದಾಖಲಾಗಿತ್ತು. ಈಗ ಅವರು ಹೊಸ ಹೇಳಿಕೆ ನೀಡಿದು ಚರ್ಚೆಗೆ ಕಾರಣ ಆಗಿದೆ. ವೇಣು ಸ್ವಾಮಿ ಈ ರೀತಿಯಲ್ಲಿ ಹೇಳಿಕೆ ನೀಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್

‘ಯಶ್ ಅಂತ ಒಬ್ಬರು ಹೀರೋ ಇದಾನೆ. ಆತನ ಪರಿಸ್ಥಿತಿ ತುಂಬಾ ಕಷ್ಟದಲ್ಲಿದೆ. ಕನ್ನಡದ ಹೀರೋ ಅಂತ ಹೆಸರು ತೆಗೆದುಕೊಂಡು ಮಾತನಾಡುತ್ತಿದ್ದೇನೆ. ತೆಲುಗು ಹೀರೋ ಆಗಿದ್ರೆ ಮಾತನಾಡುತ್ತಾ ಇರಲಿಲ್ಲ. ಯಶ್ ಡಿಪ್ರೆಷನ್​ ಅಲ್ಲಿದ್ದಾನೆ. ಆತ ಮಾಡಿದ ಎರಡು ಸಿನಿಮಾ ಎಲ್ಲಿಯೋ ಇವೆ. ಕೆಜಿಎಫ್​ನ ಪದೇ ಪದೇ ತೆಗೆಯೋಕಾಗಲ್ಲ. ಕೆಜಿಎಫ್ ರೀತಿಯ ಸಿನಿಮಾ ತೆಗೆಯಲು ಸಾಧ್ಯವಾಗದೆ, ಹೊಸ ಸಿನಿಮಾ ಆಯ್ಕೆ ಮಾಡಲಾಗದೆ ಡಿಪ್ರೆಷನ್​ಗೆ ಹೋಗಿದ್ದಾನೆ. ಸ್ಟಾರ್​ ಡಂನ ಉಳಿಸಿಕೊಳ್ಳೋಕೆ ಆಗ್ತಿಲ್ಲ. ಅದೇ ಟೆನ್ಷನ್​ ಅಲ್ಲಿ ಯಶ್ ಇದ್ದಾನೆ’ ಎಂದಿದ್ದಾರೆ ವೇಣು ಸ್ವಾಮಿ.

ಯಶ್ ಅವರು ‘ಟಾಕ್ಸಿಕ್’ ರೀತಿಯ ದೊಡ್ಡ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಅಕ್ಕಿನೇನಿ ನಾಗ ಚೈತನ್ಯ-ಸಮಂತಾ ಜಾತಕದ ಬಗ್ಗೆ ವೇಣುಸ್ವಾಮಿ ಹೇಳಿಕೆ ನೀಡಿದ್ದರು. ಅವರು ಬೇರೆ ಆಗುತ್ತಾರೆ ಎಂದು ಭವಿಷ್ಯ ಹೇಳಿದ್ದರು. ಅವರು ಬೇರೆ ಆಗುತ್ತಿದ್ದಂತೆ ಇವರಿಗೆ ಜನಪ್ರಿಯತೆ ಸಿಕ್ಕಿತು. ಸಮಂತಾ ಎರಡನೇ ವಿವಾದಹ ಬಗ್ಗೆಯೂ ಅವರು ಟೀಕೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link