ಬೆಂಗಳೂರು ಟ್ರಾಫಿಕ್ನಲ್ಲಿ 3 ಗಂಟೆ ಪರದಾಟ: ನಡೆದೇ ಮನೆಗೆ ಹೋಗಬಹುದಿತ್ತು ಎಂದ ವ್ಯಕ್ತಿ; ಪೋಸ್ಟ್ ವೈರಲ್ – Kannada News | Bengaluru Man’s Post On 3 Hour Traffic Nightmare Goes Viral in Social Media
ಬೆಂಗಳೂರು, ಮೇ 20: ಮಳೆ ಬಂತೆಂದರೆ ಸಾಕು ಬೆಂಗಳೂರಿನ (Bengaluru) ರಸ್ತೆಗಳು ಹೊಳೆಯಂತಾಗೋದು ನಗರ ನಿವಾಸಿಗಳಿಗೆ ಹೊಸದೇನೂ ಅಲ್ಲ. ಈ ವೇಳೆ ಉಂಟಾಗುವ ಟ್ರಾಫಿಕ್ ಸಮಸ್ಯೆಯ ಕುರಿತಂತೂ ಮತ್ತೆ ಹೇಳಬೇಕಿಲ್ಲ. ಯಾವಾಗ ಮನೆ, ಕಚೇರಿ ಅಥವಾ ಗಮ್ಯ ಸ್ಥಾನ ತಲುಪುತ್ತೇವೆ ಎಂದು ವಾಹನ ಸವಾರರು ಹೇಳಲು ಸಾಧ್ಯವೇ ಇಲ್ಲ. ಈ ನಡುವೆ ಮೊನ್ನೆ ಬೆಂಗಳೂರಲ್ಲಿ ಸುರಿದ ಮಳೆಯ ವೇಳೆ ಕಲ್ಯಾಣನಗರದಿಂದ ಮಾನ್ಯತಾ ಟೆಕ್ ಪಾರ್ಕ್‌ವರೆಗೆ ಸುಮಾರು 4 ಕಿ.ಮೀ. ಕ್ರಮಿಸಲು ವ್ಯಕ್ತಿಯೋರ್ವರು ಒಂದೂವರೆ ಗಂಟೆ ಸಮಯ ತೆಗೆದುಕೊಂಡ…