ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ ರಾಷ್ಟ್ರ – Kannada News | Narendra Modi and Donald Trump May Hold Key Meeting in France
ನವದೆಹಲಿ, ಮೇ 20: ವಿಶ್ವದ ಇಬ್ಬರು ಪ್ರಭಾವಶಾಲಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶೀಘ್ರದಲ್ಲೇ ಮತ್ತೊಂದು ಮಹತ್ವದ ಮಾತುಕತೆ ನಡೆಯಲಿದೆ. ಆದರೆ, ಈ ಸಭೆಯು ಭಾರತದಲ್ಲಾಗಲಿ ಅಥವಾ ಅಮೆರಿಕದಲ್ಲಾಗಲಿ ನಡೆಯುತ್ತಿಲ್ಲ. ಬದಲಿಗೆ ಫ್ರಾನ್ಸ್ ದೇಶದಲ್ಲಿ ಉಭಯ ನಾಯಕರು ಒಟ್ಟಿಗೆ ಕುಳಿತು ಜಾಗತಿಕ ವಿದ್ಯಾಮಾನಗಳ ಚರ್ಚೆ ನಡೆಸಲಿದ್ದಾರೆ. ಮುಂದಿನ ತಿಂಗಳು ಅಂದರೆ ಜೂನ್ನಲ್ಲಿ ಫ್ರಾನ್ಸ್ ಆಯೋಜಿಸಿರುವ ಜಿ-7 ಶೃಂಗಸಭೆಯಲ್ಲಿ ಈ ಇಬ್ಬರು ನಾಯಕರು ಭಾಗವಹಿಸಲಿದ್ದಾರೆ. ಈ ವರ್ಷದ ಜಿ-7…