ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರು ‘ವಾರಣಾಸಿ’ ಸಿನಿಮಾನ ನಿರ್ದೇಶನ ಮಾಡುವುದರಲ್ಲಿ ಬ್ಯುಸಿ ಇದ್ದಾರೆ. ವಿವಿಧ ಹಂತಗಳಲ್ಲಿ ಸಿನಿಮಾದ ಶೂಟ್ ನಡೆಯುತ್ತಿದ್ದು 2027ರ ಏಪ್ರಿಲ್ನಲ್ಲಿ ಸಿನಿಮಾ ತೆರೆಗೆ ಬರಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಕಥೆ ರಾಮಾಯಣದಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಈ ಚಿತ್ರದ ಸೆಟ್ಗೆ ಸುದೀಪ್ ಸೇರಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಕಿಚ್ಚ ಸುದೀಪ್ ಅವರು ‘ವಾರಣಾಸಿ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಈ ಮೊದಲು ವರದಿ ಆಗಿತ್ತು. ಈ ವರದಿ ಬಗ್ಗೆ ರಾಜಮೌಳಿ ಆಗಲಿ, ಸುದೀಪ್ ಆಗಲಿ ಅಧಿಕೃತವಾಗಿ ಹೇಳಿಲ್ಲ. ಈಗ ಕೇಳಿ ಬರಿತ್ತಿರುವ ಒಸ ಮಾಹಿತಿ ಎಂದರೆ ಸುದೀಪ್ ಏಪ್ರಿಲ್ನಲ್ಲಿ 15 ದಿನಗಳ ಶೂಟ್ನಲ್ಲಿ ಭಾಗಿ ಆಗಲಿದ್ದಾರೆ ಎಂದು ವರದಿ ಆಗಿದೆ. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಅವರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿದೆ. ಇನ್ನು, ಸದ್ಯಕ್ಕಂತೂ ಈ ಬಗ್ಗೆ ಅವರು ಮಾಹಿತಿ ನೀಡುವುದು ಅನುಮಾನವೇ.
ಸುದೀಪ್ ಹಾಗೂ ರಾಜಮೌಳಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಕಾರಣ ಆಗಿದ್ದು, ‘ಈಗ’ ಸಿನಿಮಾ. ಈ ಚಿತ್ರವನ್ನು ರಾಜಮೌಳಿ ನಿರ್ದೇಶನ ಮಾಡಿದರೆ, ಸುದೀಪ್ ಅವರು ಇದಕ್ಕೆ ವಿಲನ್. ಈ ಚಿತ್ರದಲ್ಲಿ ಸುದೀಪ್ ಅವರು ಶೋ ವಿನ್ನರ್ ಎನಿಸಿಕೊಂಡರು. ಅವರ ನಟನೆ ಬೇರೆಯದೇ ಲೆವೆಲ್ನಲ್ಲಿ ಇತ್ತು. ಈ ಕಾರಣಕ್ಕೆ ರಾಜಮೌಳಿಗೆ ಸುದೀಪ್ ಎಂದರೆ ಫೇವರಿಟ್. ಈ ಕಾರಣದಿಂದಲೇ ‘ವಾರಣಾಸಿ’ ಸಿನಿಮಾದಲ್ಲಿ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಸುದೀಪ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಮಾರ್ಕ್’ ಚಿತ್ರದಲ್ಲಿ. ಕಳೆದ ವರ್ಷ ಡಿಸೆಂಬರ್ನಲ್ಲಿ ಸಿನಿಮಾ ತೆರೆಗೆ ಬಂತು. ಈ ಚಿತ್ರ ಗಮನ ಸೆಳೆಯಿತು. ಇದಾದ ಬಳಿಕ ರೋಮ್-ಕಾಮ್ ಅಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ತೆಲುಗು ನಿರ್ದೇಶಕ ಸುಕುಮಾರ್ ಅಡಿಯಲ್ಲಿ ಪಳಗಿದ ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಉಡುಪಿ, ಮಾ.14: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ (DC) ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ 15 ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ.
ಸ್ಥಿರ ಆಸ್ತಿಗಳು ಒಟ್ಟು 6,90,64,716 ರೂ. ಇದರಲ್ಲಿ ವಿವಿಧೆಡೆ 11 ನಿವೇಶನಗಳು ಇವೆ. 6 ಸುಸಜ್ಜಿತ ವಾಸದ ಮನೆಗಳು ಇದೆ. 31 ಎಕರೆ ಕೃಷಿ ಭೂಮಿ ಇದೆ ಎಂದು ಹೇಳಲಾಗಿದೆ. ಚರಾಸ್ತಿಗಳು ಒಟ್ಟು 2,66,90,001 ರೂ. ಇದರಲ್ಲಿ 3,95,941 ಹಣ, 1.47 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು, 17 ಲಕ್ಷ ರೂ. ಬೆಲೆಬಾಳುವ ಕಾರುಗಳು, 25.75 ಲಕ್ಷ ರೂ. ನಗದು ಠೇವಣಿ, 72.68 ಲಕ್ಷ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
ಅಧಿಕಾರಿ ಶ್ರೀನಿವಾಸ್ ಅವರು ತಮ್ಮ ಆದಾಯದ ಮೂಲಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸರು ಈ ದಾಳಿಯನ್ನು ನಡೆಸಿದ್ದಾರೆ. ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಏಕಕಾಲಕ್ಕೆ ಎರಡು ದಿನಗಳ ಕಾಲ ಈ ಶೋಧ ಕಾರ್ಯ ನಡೆದಿದೆ. ಲೋಕಾಯುಕ್ತ ಪೊಲೀಸರು ಶ್ರೀನಿವಾಸ್ ಟಿ. ಎಂ. ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಈಗಾಗಲೇ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 13ರ ಹೊತ್ತಿಗೆ ಅವರ ವಿರುದ್ಧ ಅಧಿಕೃತವಾಗಿ ತನಿಖೆ ಆರಂಭವಾಗಿದೆ.
ಸಾಮಾನ್ಯವಾಗಿ ಲೋಕಾಯುಕ್ತ ದಾಳಿಯಲ್ಲಿ ಇಷ್ಟು ದೊಡ್ಡ ಮಟ್ಟದ ಅಕ್ರಮ ಆಸ್ತಿ ಪತ್ತೆಯಾದಾಗ, ಸಂಬಂಧಪಟ್ಟ ಇಲಾಖೆಯು (ಅಬಕಾರಿ ಇಲಾಖೆ) ಲೋಕಾಯುಕ್ತ ವರದಿಯನ್ನು ಆಧರಿಸಿ ಅಧಿಕಾರಿಯನ್ನು ಅಮಾನತುಮಾಡುವುದು ವಾಡಿಕೆ. ಶ್ರೀನಿವಾಸ್ ಅವರ ವಿರುದ್ಧದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಲೋಕಾಯುಕ್ತರು ಸರ್ಕಾರಕ್ಕೆ ನೀಡುವ ಪ್ರಾಥಮಿಕ ವರದಿಯ ಆಧಾರದ ಮೇಲೆ ಮುಂದಿನ ಒಂದೆರಡು ದಿನಗಳಲ್ಲಿ ಅಮಾನತು ಆದೇಶ ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಸ್ತುತ, ದಾಳಿಯ ವೇಳೆ ಪತ್ತೆಯಾದ 31 ಎಕರೆ ಕೃಷಿ ಜಮೀನು, 6 ಮನೆಗಳು ಮತ್ತು 11 ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಈ ಆಸ್ತಿಗಳು ಅವರ ಮತ್ತು ಅವರ ಕುಟುಂಬದ ಹೆಸರಿನಲ್ಲಿ ಹೇಗೆ ಬಂತು ಎಂಬುದಕ್ಕೆ ಶ್ರೀನಿವಾಸ್ ಅವರಿಂದ ಸಮರ್ಥನೆ ಕೇಳಲಾಗುತ್ತದೆ.
ಬೆಂಗಳೂರು, ಮಾರ್ಚ್ 14: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಯಾಕೆ ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಿ ಹೊರಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯ ಕೆಲವು ನಿರ್ದಿಷ್ಟ ಸ್ಥಳಗಳಿಗೆ ದೈವಿಕ ಅನುಗ್ರಹವಿರುತ್ತದೆ ಎಂದು ನಂಬಲಾಗಿದೆ. ಅಂತಹ ಪ್ರಮುಖ ಸ್ಥಳಗಳಲ್ಲಿ ಹೊಸ್ತಿಲು ಕೂಡ ಒಂದು. ಹೊಸ್ತಿಲಲ್ಲಿ ಮಹಾಲಕ್ಷ್ಮಿಯ ಕೃಪೆ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.
ಮನೆಯಿಂದ ಹೊರಹೋಗುವಾಗ ಬಲಗಾಲನ್ನು ಆಚೆ ಇಟ್ಟು, ಹೊಸ್ತಿಲನ್ನು ಸ್ಪರ್ಶಿಸಿ, ಅದಕ್ಕೆ ಕೃತಜ್ಞತೆ ಸಲ್ಲಿಸಿ ನಮಸ್ಕರಿಸುವುದು ಶುಭವೆಂದು ಪರಿಗಣಿಸಲಾಗಿದೆ. ನಮ್ಮ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಸಂಕಲ್ಪ ಮಾಡಿಕೊಳ್ಳುವ ಪದ್ಧತಿ ಇದೆ. ಅದೇ ರೀತಿ, ಹೊರಗಿನಿಂದ ಮನೆಗೆ ಬರುವಾಗ ಹೊಸ್ತಿಲಿಗೆ ನಮಸ್ಕರಿಸಿ, ಬಲಗಾಲನ್ನು ಒಳಗೆ ಇಡುವುದು ವಾಡಿಕೆ. ಇದು ಹೊರಗಿನಿಂದ ತಂದಿರಬಹುದಾದ ಋಣಾತ್ಮಕ ಶಕ್ತಿ, ದೃಷ್ಟಿ, ಅಥವಾ ಪಾಪದ ಭಾರವನ್ನು ಹೋಗಲಾಡಿಸಿ, ಸಕಾರಾತ್ಮಕತೆಯನ್ನು ಮನೆಗೆ ತರುತ್ತದೆ ಎಂಬುದು ನಂಬಿಕೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 14, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಉತ್ತರಾಷಾಡ ನಕ್ಷತ್ರ, ವರಿಯನ್ ಯೋಗ, ಭವಕರಣಗಳನ್ನು ಒಳಗೊಂಡಿದೆ. ರಾಹುಕಾಲ ಬೆಳಿಗ್ಗೆ 9:29 ರಿಂದ 10:59 ರವರೆಗೆ ಇರುತ್ತದೆ. ಸರ್ವ ಸಿದ್ಧಿ ಕಾಲವು ಮಧ್ಯಾಹ್ನ 1:59 ರಿಂದ 3:29 ರವರೆಗೆ ಇದೆ.
ಇಂದಿನ ದಿನವು ಪಾಪ ವಿಮೋಚನಿ ಏಕಾದಶಿ ಮತ್ತು ಅಲಂಕಾರು ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವದ ವಿಶೇಷತೆಯನ್ನು ಹೊಂದಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಧನುಸ್ಸು ರಾಶಿಯಲ್ಲಿ ಸಂಚರಿಸಲಿದ್ದಾನೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೂ ಗ್ರಹಗಳ ಶುಭ ಫಲ, ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಸಂಬಂಧಗಳು, ಅದೃಷ್ಟ ಸಂಖ್ಯೆಗಳು, ಬಣ್ಣಗಳು ಮತ್ತು ಮಂತ್ರಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ತೆಹ್ರಾನ್, ಮಾ.14: ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಭೀಕರ ಬಾಂಬ್ ದಾಳಿಯನ್ನು ಅಮೆರಿಕ ಇರಾನ್ ಮೇಲೆ ನಡೆಸಿದೆ. ಇರಾನ್‌ನ ಮಿಲಿಟರಿ ಶಕ್ತಿ ಮತ್ತು ಆರ್ಥಿಕತೆಯ ಮೇಲೆ ಅಮೆರಿಕದ ಸೇನೆ ಮರಣಾಂತಿಕ ಪೆಟ್ಟು ನೀಡಿದ್ದು, ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದಾರೆ. ಇರಾನ್‌ನ ಆರ್ಥಿಕತೆಯ ಬೆನ್ನೆಲುಬು ಎನ್ನಲಾದ ಖಾರ್ಗ್ ದ್ವೀಪದ (Kharg Island) ಮೇಲೆ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬ್‌ಗಳ ಮಳೆ ಸುರಿಸಿದೆ. ಇದರಿಂದ ಇರಾನ್‌ನ ತೈಲ ರಫ್ತು ಮತ್ತು ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ.
ಇರಾನ್‌ನ ಆರ್ಥಿಕತೆಯ ಬೆನ್ನೆಲುಬು ಎನ್ನಲಾದ ಖಾರ್ಗ್ ದ್ವೀಪದ (Kharg Island) ಮೇಲೆ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬ್‌ಗಳ ಮಳೆ ಸುರಿಸಿದೆ. ಇದರಿಂದ ಇರಾನ್‌ನ ತೈಲ ರಫ್ತು ಮತ್ತು ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯಲ್ಲಿ (Strait of Hormuz) ಹಡಗುಗಳ ಮುಕ್ತ ಸಂಚಾರಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಮೆರಿಕ ಸುಮ್ಮನಿರುವುದಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
“ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವಂತಿಲ್ಲ. ವಿಶ್ವದ ಶಾಂತಿಗೆ ಧಕ್ಕೆ ತರುವ ಸಾಮರ್ಥ್ಯವನ್ನು ಇರಾನ್‌ಗೆ ಪಡೆಯಲು ಬಿಡುವುದಿಲ್ಲ” ಎಂದು ಟ್ರಂಪ್ ಗುಡುಗಿದ್ದಾರೆ. “ಇರಾನ್ ಮಿಲಿಟರಿ ಪಡೆಗಳು ಕೂಡಲೇ ಶರಣಾಗಬೇಕು. ಇನ್ನುಳಿದಿರುವ ದೇಶವನ್ನಾದರೂ ಉಳಿಸಿಕೊಳ್ಳಬೇಕಾದರೆ ಆಯುಧಗಳನ್ನು ಕೆಳಗಿಡಬೇಕು” ಎಂದು ಇರಾನ್‌ಗೆ ಟ್ರಂಪ್ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯು ಜಾಗತಿಕ ರಾಜಕೀಯದಲ್ಲಿ ಭಾರಿ ಕಂಪನ ಸೃಷ್ಟಿಸಿದ್ದು, ಕಚ್ಚಾ ತೈಲ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.14: ರಾಜ್ಯಾದ್ಯಂತ ತೀವ್ರವಾದ ಶಾಖದ ಅಲೆ (Heat Wave) ಎದುರಾಗಿದ್ದು, ಬಿಸಿಲಿನಿಂದ ಜನ ತತ್ತರಿಸಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ರಾಜ್ಯಾದ್ಯಂತ ಹವಾಮಾನವು ಸಂಪೂರ್ಣ ಶುಷ್ಕವಾಗಿದ್ದು, ಬಿಸಿಲಿನ ಝಳ ತೀವ್ರವಾಗಿದೆ. ಕನಿಷ್ಠ ತೇವಾಂಶದ ಕಾರಣದಿಂದಾಗಿ ಸೆಖೆಯ ಅನುಭವ ಹೆಚ್ಚಾಗಿದೆ.ಬೆಂಗಳೂರಿನಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ನಗರದಲ್ಲಿ ‘ತೀವ್ರ ತಾಪಮಾನದ ಎಚ್ಚರಿಕೆ’ ನೀಡಲಾಗಿದೆ.
ಬೆಂಗಳೂರು ಮತ್ತು ಕರ್ನಾಟಕದ ಒಳನಾಡಿನಲ್ಲಿ ಬಿಸಿಲು ಮತ್ತು ಒಣ ವಾತಾವರಣದ ನಿರೀಕ್ಷೆ. ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಗರಿಷ್ಠ ತಾಪಮಾನ ಸಮೀಪಿಸುವ ಸಾಧ್ಯತೆ ಇದೆ.ಕರಾವಳಿ ಕರ್ನಾಟಕ (ಮಂಗಳೂರು/ಉಡುಪಿ)ದಲ್ಲಿ ಹೆಚ್ಚಾಗಿ ಬಿಸಿಲು ಮತ್ತು ಬಿಸಿಲಿನ ವಾತಾವರಣವಿದ್ದು, ಸುತ್ತಲೂ ಹೆಚ್ಚಿನ ಆರ್ದ್ರತೆ ಮತ್ತು ಗರಿಷ್ಠ ತಾಪಮಾನವಿರುತ್ತದೆ. ಹೆಚ್ಚಿನ ಶಾಖದ ಅಲೆಗಳ ಅಪಾಯಗಳ ಕಾರಣ, ನಿವಾಸಿಗಳು ನೀರಿನಂಶದಿಂದ ಇರಲು, ಗರಿಷ್ಠ ಸಮಯದಲ್ಲಿ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಎಚ್ಚರಿಕೆ ಕ್ರಮವನ್ನು ನೀಡಲಾಗಿದೆ.
ನಗರ
ಗರಿಷ್ಠ ತಾಪಮಾನ (ಅಂದಾಜು)
ಸ್ಥಿತಿಗತಿ
ಕಲಬುರಗಿ
41°C – 42°C
ತೀವ್ರ ಶಾಖದ ಅಲೆ (Heat Wave)
ಬಳ್ಳಾರಿ / ರಾಯಚೂರು
40°C
ಒಣ ಹವೆ, ಸುಡುವ ಬಿಸಿಲು
ಬೆಂಗಳೂರು
35°C – 36°C
ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಳ
ಮೈಸೂರು
36°C
ಶುಷ್ಕ ವಾತಾವರಣ
ಮಂಗಳೂರು
34°C
ಅಧಿಕ ತೇವಾಂಶ (ಹೆಚ್ಚಿನ ಸೆಖೆ)
ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ‘ರೆಡ್ ಅಲರ್ಟ್’ ಮಾದರಿಯ ಪರಿಸ್ಥಿತಿ ಇದೆ. ಇಲ್ಲಿ ಬಿಸಿಗಾಳಿ (Loo) ಬೀಸುವ ಸಾಧ್ಯತೆ ಹೆಚ್ಚಿದೆ.ಇಂದು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ UV ಇಂಡೆಕ್ಸ್ 10+ (Extremely High) ದಾಟುವ ನಿರೀಕ್ಷೆಯಿದೆ. ಇದು ನೇರವಾಗಿ ಚರ್ಮಕ್ಕೆ ತಗುಲಿದರೆ ಹಾನಿಕಾರಕ ಎಂದು ಹೇಳಲಾಗಿದೆ.
ಸೂರ್ಯನ ಕಿರಣಗಳಲ್ಲಿ ಅತಿನೇರಳೆ (UV) ಮಟ್ಟ ಹೆಚ್ಚಿರಲಿದ್ದು, ಇದು ಚರ್ಮದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಿ. ಈ ಸಮಯದಲ್ಲಿ ಸೂರ್ಯನ ತಾಪಮಾನ ಮತ್ತು ಶಾಖದ ಅಲೆ ಅತ್ಯಂತ ತೀವ್ರವಾಗಿರುತ್ತದೆ. ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳನ್ನು ಸೇವಿಸಿ. ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ ಸಡಿಲವಾದ ಹತ್ತಿ ಬಟ್ಟೆ ಧರಿಸಿ, ಛತ್ರಿ ಅಥವಾ ಟೋಪಿಯನ್ನು ಬಳಸಿ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಭೂಮಿ ಅಥವಾ ಮನೆಗೆ ಸಂಬಂಧಿಸಿದ ದಾಖಲೆ- ಕಾಗದ- ಪತ್ರಗಳನ್ನು ಹೊಂದಿಸಿಕೊಳ್ಳುತ್ತಾ ಇರುವವರಿಗೆ ಇಷ್ಟು ಸಮಯ ಕಾಡುತ್ತಿದ್ದ ಹಿನ್ನಡೆ ಅಥವಾ ವಿಳಂಬ ಗತಿ ಇದ್ದಲ್ಲಿ ಅದು ನಿವಾರಣೆ ಆಗುವಂಥ ಯೋಗ ಇದೆ. ಅಯ್ಯೋ, ಬೇರೆಯವರಿಂದ ಸಹಾಯ ಕೇಳಬೇಕಾದ ಸನ್ನಿವೇಶ ಬರುತ್ತದೆಯೇ ಎಂದು ಆತಂಕಗೊಂಡಿದ್ದಲ್ಲಿ ಇತರರ ಸಹಾಯ ಇಲ್ಲದೆ ಕೆಲಸ- ಕಾರ್ಯಗಳು ಆಗುವುದಕ್ಕೆ ಬೇಕಾದದ್ದು ದೊರೆಯುವ ಅವಕಾಶ ಇದೆ.
ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಒಂದು ಬಗೆಯ ಸಮಾಧಾನ, ನೆಮ್ಮದಿ ದೊರೆಯಲಿದೆ. ಮನೆಯಿಂದ ದೂರದಲ್ಲಿ ನಿಮ್ಮ ಹಿರಿಯರು ಇದ್ದಲ್ಲಿ ಅಥವಾ ವೃದ್ಧಾಶ್ರಮ ಅಥವಾ ಇನ್ಯಾವುದಾದರೂ ಕಡೆ ಮನೆಯ ಹಿರಿಯರನ್ನು ಬಿಟ್ಟಿದ್ದಲ್ಲಿ ಅವರ ಆರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣ ಆಗಲಿದೆ. ಇದೇ ಕಾರಣಕ್ಕೆ ತುರ್ತಾಗಿ ಹಣದ ಅಗತ್ಯ ಕಂಡುಬರಲಿದೆ. ನಿಮ್ಮದು ಬೇಜವಾಬ್ದಾರಿ ಎಂಬ ಆಕ್ಷೇಪಗಳನ್ನು ಕೇಳಿಸಿಕೊಳ್ಳುವಂತಾಗುತ್ತದೆ.
ಇತರರ ಹಣದ ನಿಗಾ ಮಾಡುವ ಅಥವಾ ಆ ಹಣದ ಲೆಕ್ಕಾಚಾರದ ವ್ಯವಹಾರವನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಅಂತಾದಲ್ಲಿ ಇತರ ದಿನಗಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮದುವೆ ನಿಶ್ಚಯ ಆಗಿರುವಂಥವರಿಗೆ ಅಂದುಕೊಂಡಿದ್ದಕ್ಕಿಂತ ಖರ್ಚು ಹೆಚ್ಚಾಗುವ ಸುಳಿವು ದೊರೆಯಲಿದೆ. ಈಗಾಗಲೇ ಇದಕ್ಕಾಗಿ ಹಣ ಹೊಂದಿಸಿಕೊಂಡಿದ್ದವರಿದ್ದರೆ ಇದೀಗ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ.
ಹಪ್ಪಳ, ಸಂಡಿಗೆ, ಚಟ್ನಿಪುಡಿ, ಹುಳಿಪುಡಿ- ಸಾರಿನಪುಡಿ ಇಂಥದ್ದನ್ನು ಮಾರಾಟ ಮಾಡುವಂಥವರಿಗೆ ಆದಾಯದಲ್ಲಿ ಹಾಗೂ ಲಾಭದಲ್ಲಿ ದೊಡ್ಡ ಏರಿಕೆ ಆಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯಲಿದೆ. ರಾಜಕಾರಣದಲ್ಲಿ ಇರುವಂಥವರಿಗೆ ಪದೋನ್ನತಿ ದೊರೆಯಲಿದೆ. ಅದರ ಬಗ್ಗೆ ಸುಳಿವು ಸಿಗಬಹುದು. ಮನೆಯ ನವೀಕರಣಕ್ಕೆ, ಹೊಸದಾಗಿ ಕೋಣೆ ನಿರ್ಮಾಣಕ್ಕೆ, ವಾರ್ಡ್ ರೋಬ್ ಇಂಥದ್ದನ್ನು ಮಾಡಿಸುವುದಕ್ಕೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
ಇತರರು ತಮ್ಮಿಂದ ಆದ ತಪ್ಪನ್ನು ಹೇಳಿಕೊಂಡು, ಅದರಿಂದ ಆಗಬಹುದಾದ ಸಮಸ್ಯೆಗಳಿಂದ ಕಾಪಾಡುವಂತೆ ನಿಮ್ಮನ್ನು ಕೇಳಿಕೊಂಡು ಬರಬಹುದು. ತಾಯಿಯ ಕಡೆ ಸಂಬಂಧಿಕರು ಹಣಕಾಸಿನ ನೆರವನ್ನು ಕೇಳಿಕೊಂಡು ಬರಬಹುದು. ಒಟ್ಟಿನಲ್ಲಿ ನಿಮ್ಮ ಕೈ ಅಳತೆಯ ವ್ಯಾಪ್ತಿಯಲ್ಲಿ ಇತರರಿಗೆ ಸಹಾಯ ಮಾಡಲೇಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ನಿಮ್ಮ ಪದ ಬಳಕೆಯಿಂದ ಎದುರಿಗೆ ಇರುವಂಥ ವ್ಯಕ್ತಿಯ ಮನಸ್ಸಿನಲ್ಲಿ ಉದ್ಭವಿಸಬಹುದಾದ ಭಾವನೆ ಏನು ಎಂಬುದರ ಅಂದಾಜು ಇರಲಿ.
ಈ ದಿನ ಸಾಧ್ಯವಾದಷ್ಟೂ ಬೇಕರಿ ಪದಾರ್ಥಗಳಿಂದ ದೂರ ಇದ್ದುಬಿಡಿ. ಮೈದಾ ಹಿಟ್ಟಿನಿಂದ ಮಾಡಿದ ಖಾದ್ಯಗಳನ್ನು ಸೇವನೆ ಮಾಡಿದರೂ ಅದರಿಂದಲೂ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮಲ್ಲಿ ಯಾರಿಗೆ ಈಗಾಗಲೇ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ ಅಂಥವರಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ. ಇನ್ನು ದೊಡ್ಡಪ್ಪ- ಚಿಕ್ಕಪ್ಪನ ಮಕ್ಕಳ ವರ್ತನೆಯಿಂದ ಅವಮಾನಕ್ಕೆ ಗುರಿ ಆಗಲಿದ್ದೀರಿ.
ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಮನೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಬೇಕು ಎಂದುಕೊಂಡಿರುವವರಿಗೆ ಅದಕ್ಕೆ ಪೂರಕವಾದ ವಾತಾವರಣ ದೊರೆಯಬಹುದು. ವಸ್ತ್ರಾಭರಣಗಳ ಖರೀದಿಗಾಗಿ ಹಣ ಖರ್ಚು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಆಂಟಿಕ್ ಆಭರಣಗಳನ್ನು ಖರೀದಿಸುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಇದೇ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸುವಂಥ ಸಾಧ್ಯತೆಗಳಿವೆ.
ಪೊಲೀಸ್, ಸಿಐಡಿ, ಸಿಬಿಐ, ಗುಪ್ತಚರ ಸಂಸ್ಥೆ ಇಂಥ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಮೇಲೆ ಕೆಲವು ಆರೋಪಗಳು ಬರಬಹುದು. ಅದರಲ್ಲೂ ಮುಖ್ಯವಾಗಿ ನಿಮ್ಮ ನಿರ್ಧಾರ- ತೀರ್ಮಾನಗಳು ಅಲಕ್ಷ್ಯದಿಂದ ಬಂದಿರುವಂಥವು ಎಂಬ ಆರೋಪ ಬರಬಹುದು. ಸಾಧ್ಯವಾದಷ್ಟೂ ನಿಮ್ಮ ಜವಾಬ್ದಾರಿಯನ್ನು ಇತರರ ಮೇಲೆ ವರ್ಗಾಯಿಸುವುದಕ್ಕೆ ಹೋಗಬೇಡಿ. ನಾನು ಮಾಡಿರುವುದೆಲ್ಲವೂ ಸರಿ ಎಂಬ ವಾದ ಸಹ ಮಾಡುವುದಕ್ಕೆ ಹೋಗಬೇಡಿ.
ಆರೋಗ್ಯ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಈ ದಿನ ನೀಡಲಿದ್ದೀರಿ. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬಹುದು. ನಿಮ್ಮ ಜತೆಗೆ ಬಹಳ ಸ್ನೇಹದಿಂದ ಹಾಗೂ ಆತ್ಮೀಯತೆಯಿಂದ ಇರುವ ವ್ಯಕ್ತಿಗಳು ತಾತ್ಕಾಲಿಕವಾಗಿಯಾದರೂ ದೂರ ಹೋಗಬಹುದು. ಮನಸ್ತಾಪದ ಕಾರಣಕ್ಕಾದರೂ ಹೀಗಾಗಬಹುದು ಅಥವಾ ಔದ್ಯೋಗಿಕ ಅಥವಾ ವೈಯಕ್ತಿಕ ಕಾರಣಗಳಿಂದ ಇಬ್ಬರ ಮಧ್ಯೆ ಅಂತರ ಸೃಷ್ಟಿ ಆಗುವಂಥ ಸನ್ನಿವೇಶ ಎದುರಾಗಲಿದೆ.
ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಹೊಂದಾಣಿಕೆ ಕಷ್ಟವಾದರೂ ಅನಿವಾರ್ಯವಾಗಬಹುದು. ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ ಮನೋಗತವನ್ನು ಅರಿತುಕೊಳ್ಳುವಿರಿ. ಹಿರಿಯರ ಜೊತೆ ವರ್ತನೆಗಳು ಬಿಗುಮಾನದಿಂದ ಇರಲಿದೆ.
ವೃಷಭ ರಾಶಿ:
ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು ಸೂಕ್ತ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹತಾಶರಾಗುವಿರಿ. ಮನೆಯ ಕೆಲಸದಲ್ಲಿ ಅಧಿಕ ಸಮಯವನ್ನು ಕಳೆಯುವಿರಿ. ವ್ಯತ್ಯಾಸವನ್ನು ಸರಿದೂಗಿಸವ ಕಲೆ ಬರಬಹುದು.
ಮಿಥುನ ರಾಶಿ:
ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ನ್ಯಾಯಕ್ಕೆ ಸಮ್ಮತವಾದ ಕಾರ್ಯವನ್ನು ಮಾಡಿ. ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಬರಬಹುದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ವೈದ್ಯರಿಗೆ ಹೆಚ್ಚಿನ ಅವಕಾಶವು ಸಿಗಬಹುದು. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ನಿಮ್ಮ ಚಿಂತನೆಗಳು ನಿಮಗೆ ಮಾತ್ರ ಸರಿ ಎನಿಸುವುದು.
ಕರ್ಕಾಟಕ ರಾಶಿ:
ಎಂದೋ ಪಡೆದ ಸಾಲದ ಮರುಪಾವತಿಯನ್ನು ಮಾಡಬೇಕಾಗಿಬರಬಹುದು. ಶತ್ರುಬಾಧೆಯನ್ನು ನಿವಾರಿಸಿಕೊಳ್ಳಲು ಕಷ್ಟವಾದೀತು. ನಿಮ್ಮನ್ನು ನಿಂದಿಸುವವರಿಗೆ ಉತ್ತರವನ್ನು ಕೊಡುವ ಯೋಚನೆಯಲ್ಲಿಯೇ ಇರುವಿರಿ. ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಕೊಡು ಕೊಳ್ಳುವುದರಲ್ಲಿ ಸಮಾನತೆ ಇರಲಿ. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ಕೆಲವು ಸಮಸ್ಯೆಯನ್ನು ನೀವಾಗಿಯೇ ತಂದುಕೊಳ್ಳುವಿರಿ.
ಸಿಂಹ ರಾಶಿ:
ಯಾವುದೇ ಪೂರ್ವನಿರ್ಧಾರವಿಲ್ಲದೇ ವಿದೇಶ ಪ್ರಯಾಣ ಮಾಡುವಿರಿ. ಅಪಾತ್ರರಿಗೆ ನಿಮ್ಮ ವಸ್ತುವನ್ನು ಗೊತ್ತಿಲ್ಲದೇ ಕೊಡುವಿರಿ. ಇಂತಹ ದಾನದಿಂದ ಪ್ರಯೋಜನವಾಗದು. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಸೂಚನೆ ಬರಬಹುದು. ಯಾರನ್ನೂ ಅವಲಂಬಿಸದೇ ನಡೆಯಬೇಕು ಎನ್ನುವ ಹಠವು ಬರುವುದು.
ಕನ್ಯಾ ರಾಶಿ:
ಸಹೋದ್ಯೋಗಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ವಿಶ್ವಾಸದಿಂದ ಕೊಟ್ಟ ಸಾಲಕ್ಕೆ ಬೆಲೆ ಇರಲಿ. ಯಾರ ಬಲವಂತಕ್ಕೂ ಮಣಿಯುವುದಿಲ್ಲ. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ. ನಿಮ್ಮ ಸ್ವಭಾವವು ಇತರರಿಗೆ ಅಸಹಜತೆಯಂತೆ ಕಾಣಿಸಬಹುದು. ಯಾರ ಮೇಲೂ ಹಿಡಿತ ಸಾಧಿಸುವ ಪ್ರಯತ್ನವು ಬೇಡ. ಸಮಯ ಮಾತ್ರ ವ್ಯರ್ಥವಾಗಬಹುದು.
ತುಲಾ ರಾಶಿ:
ನಿಮ್ಮ ವಿದ್ಯೆಗೆ ಯೋಗ್ಯವಾದ ಅವಕಾಶಗಳು ಅನಿರ್ಬಂಧಿತವಾಗಿ ಸಿಗಬಹುದು. ದಾಯದಿ ಕಲಹವು ನಿಮ್ಮನ್ನು ಹಿಮ್ಮೆಟ್ಟಿಸೀತು. ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ವ್ಯಾಪಾರದಲ್ಲಿ ಜನರ ಆಕರ್ಷಣೆಯನ್ನು ಮಾಡುವ ಕಲೆ ಸಿದ್ಧಿಸಿದೆ. ಗತ್ತಿನಿಂದ ಮಾತನಾಡುವುದನ್ನು ನಿಲ್ಲಿಸಿ. ನಿಮ್ಮ ಅಸಮಾಧಾನವನ್ನು ಅಸ್ಥಾನದಲ್ಲಿ ಹೊರಹಾಕಿ ಮುಜುಗರಕ್ಕೆ ಒಳಗಾಗುವಿರಿ.
ವೃಶ್ಚಿಕ ರಾಶಿ:
ಗೃಹನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ನಿಮ್ಮ ಉದ್ಯಮಕ್ಕೆ ಹೂಡಕೆ ಬರಬಹುದು. ನೆರೆಹೊರೆಯರ ಮಾತು ನಿಮಗೆ ಬೇಸರ ತರಿಸಿ, ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಡಬಹುದು. ನಿಮಗೆ ಖುಷಿ ಕೊಡುವ ಸಂಗತಿಯ ಕಡೆಗೆ ಗಮನಹರಿಸಿ. ಕೆಲವರಿಂದ ಸಹಾಯವನ್ನು ನಿರೀಕ್ಷಿಸದೇ ಇದ್ದರೂ ಸಹಕಾರ ದೊರೆತೀತು.
ಧನು ರಾಶಿ:
ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ನೀವು ಗಮನಿಸಿ ಅದಕ್ಕೆ ಬೇಕಾದ ಮಾರ್ಗದರ್ಶನ ಮಾಡುವಿರಿ. ಉದ್ಧಟತನದ ಮಾತುಗಳಿಂದ ನಿಮ್ಮ ಸ್ವಭಾವವು ಸ್ಪಷ್ಟವಾಗುವುದು. ಪುಣ್ಯಸ್ಥಳಗಳನ್ನು ಕುಟುಂಬ ಜೊತೆ ಹೋಗಿ ದರ್ಶನ ಮಾಡುವಿರಿ. ಸಹಾಯವನ್ನು ದುರುಪಯೋಗ ಮಾಡಿಕೊಳ್ಳಬಹುದಿ. ಅತಿಯಾದ ದೇಹದಂಡನೆಯಿಂದ ನಿಮಗೆ ಆಯಾಸವಾಗಲಿದೆ. ವಿದ್ಯಾಭ್ಯಾಸದ ಕಾರಣಕ್ಕೆ ಹಣವನ್ನು ಪಡೆದು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ.
ಮಕರ ರಾಶಿ:
ನಿರೀಕ್ಷಿತ ಗೌರವವು ನಿಮಗೆ ಸಿಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಒತ್ತಡ. ಇಂದಿನ ಕೆಲವು ಮಾತುಗಳನ್ನು ನೀವು ನಿರ್ಲಕ್ಷಿಸುವಿರಿ. ಹೆಣ್ಣು ಮಕ್ಕಳಿಂದ ನಿಮಗೆ ಯಶಸ್ಸು ಪ್ರಾಪ್ತಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಕೋಪ ಬರಬಹುದು. ಹೊಸ ಉದ್ಯೋಗದ ಅಭಿವೃದ್ಧಿಗೆ ದೇವರಲ್ಲಿ ಶರಣಾಗುವಿರಿ. ಪ್ರಯತ್ನಗಳು ಆರಂಭವಾಗಲಿದೆ. ಪಿತ್ರಾರ್ಜಿತ ಆಸ್ತಿಯು ತಾನಾಗಿಯೇ ಬರಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವಂತೆ ಮಾಡುವ ಹೊಣೆಗಾರಿಕೆ ಇರಲಿದೆ.
ಕುಂಭ ರಾಶಿ:
ಹೊಸ ಉದ್ಯಮಕ್ಕೆ ಒಬ್ಬೊಬ್ಬರದರು ಒಂದೊಂದು ಅಭಿಪ್ರಾಯ. ಆಸ್ತಿಗೆ ಸಂಬಂಧಿಸಿದ ಪತ್ರ ವ್ಯವಹಾರವನ್ನು ಜೋಪಾನ ಮಾಡಿಕೊಳ್ಳಿ. ಅಪರೂಪದ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ವಾಹನದಿಂದ ಬಿದ್ದು ಗಾಯವಾಗುವ ಸಾಧ್ಯತೆ ಇದೆ. ನಿಮಗೆ ಬೇಕಾದ ವಾತಾವರಣದಲ್ಲಿ ಇರುವುದು ಇಷ್ಟವಾಗುವುದು. ನಿಮ್ಮ ಕನಸನ್ನು ಸಕಾರ ಮಾಡಿಕೊಳ್ಳಲು ಪ್ರಗತಿಯಲ್ಲಿ ಇರುವಿರಿ.
ಮೀನ ರಾಶಿ:
ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡಿಕೊಂಡು ಪಶ್ಚಾತ್ತಾಪ ಪಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ಅನ್ಯ ಕಾರ್ಯದಿಂದ ನಿಮ್ಮ ಮುಖ್ಯ ಕಾರ್ಯದಲ್ಲಿ ವೇಗವು ಕಡಿಮೆ ಆಗಬಹುದು. ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ಸ್ನೇಹಿತರ ಸಂಪಾದನೆಯ ದಾರಿಯನ್ನು ಹಾಕಿಕೊಡುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಉತ್ತರಾಷಾಢಾ, ಯೋಗ : ವರಿಯಾನ್, ಕರಣ : ಬವ, ಸೂರ್ಯೋದಯ – 06 – 34 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:04 – 12:34, ಯಮಗಂಡ ಕಾಲ 15:34 – 17:03, ಗುಳಿಕ ಕಾಲ 08:04 – 09:34