All posts by nagaraj11081993

ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!

ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!

ಗುವಾಹಟಿ, ಮಾರ್ಚ್ 13: ವಿಧಾನಸಭಾ ಚುನಾವಣೆಗೆ ಸಿದ್ಧವಾಗಿರುವ ಅಸ್ಸಾಂಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಈ ವೇಳೆ ಅವರು 19,480 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಅಸ್ಸಾಂನಲ್ಲಿ ಹಲವು ದಶಕಗಳಿಂದ ಚಹಾ ಬುಡಕಟ್ಟು ಸಮುದಾಯವು ಭೂಮಿಯ ಮೇಲೆ ಯಾವುದೇ ಹಕ್ಕುಗಳಿಲ್ಲದೆ ಬದುಕುತ್ತಿದೆ. ಇದಾಗಿ ತಲೆಮಾರುಗಳೇ ಕಳೆದಿವೆ. ಅವರು ಸರ್ಕಾರಿ ಯೋಜನೆಗಳು ಮತ್ತು ಅವಕಾಶಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ, ಅಸ್ಸಾಂನಲ್ಲಿ ಪ್ರಧಾನಿ ಮೋದಿ (PM Modi) ಅವರು 800 ಚಹಾ ತೋಟಗಳಲ್ಲಿರುವ 3.5 ಲಕ್ಷ ಕುಟುಂಬಗಳಿಗೆ 28,000 ಭೂ ಪಟ್ಟಾಗಳನ್ನು ವಿತರಿಸಿದ್ದಾರೆ. ಈ ವೇಳೆ ಚಹಾ ಬುಡಕಟ್ಟು ಮಹಿಳೆಯೊಬ್ಬರು ಪ್ರಧಾನಿ ಮೋದಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ತಲೆಬಾಗಿ ಆಕೆಯ ಪಾದಗಳನ್ನು ಮುಟ್ಟಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಕಾಂಗ್ರೆಸ್ “ಬಣವಿ ಸುಟ್ಟು ಅರಳು ಮುಕ್ಕುವ” ಕೆಲಸ ಮಾಡುತ್ತಿದೆ: ಕೇಂದ್ರ ಸಚಿವ ಜೋಶಿ ಕಿಡಿ

ಬೆಂಗಳೂರು, (ಮಾರ್ಚ್ 13): ಮಧ್ಯಪ್ರಾಚ್ಯದ ಯುದ್ಧ (War) ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದಲ್ಲಿ ಎಲ್ಲೂ ಗ್ಯಾಸ್ (LPG Gas) ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ. ಆದರೆ, ಕಾಂಗ್ರೆಸ್ (Congress)  ಪಕ್ಷ “ಬಣವಿ ಸುಟ್ಟು ಅರಳು ಮುಕ್ಕುವ” ಕೆಲಸ ಮಾಡುತ್ತಿದೆ. ದೇಶದಲ್ಲಿ ಈ ಹಿಂದೆಲ್ಲಾ ಕ್ರೈಸಿಸ್ ಉಂಟಾದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ಕಾಂಗ್ರೆಸ್ ತೀರಾ ತೀರಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Union Minister pralhad joshi) ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಅವರು “ಕೇಂದ್ರದ ವಿರುದ್ಧ ಪ್ರತಿಭಟನೆಗೆ ಇಳಿಯಿರಿ” ಎಂದು ಜನರನ್ನು ಎತ್ತಿ ಕಟ್ಟುತ್ತಿರುವುದು ನಿಜಕ್ಕೂ ದೇಶದ ದೌರ್ಭಾಗ್ಯವೇ ಸರಿ ಎಂದು ಎಂದಿದ್ದಾರೆ.

ಇದನ್ನೂ ಓದಿ: ದೇಶದ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ್ದೇ ಅಗ್ರ ಪಾಲು!

ಕಾಂಗ್ರೆಸ್ ದುರಾಲೋಚನೆ

ಯುದ್ಧದ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ‘ಏನಾದರೂ ಮಾಡಿ ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು” ಎಂಬ ದುರಾಲೋಚನೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ದೇಶದಲ್ಲಿ ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಭಾವವಿದೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಜೋಶಿ ಹರಿಹಾಯ್ದರು.

ಜನರನ್ನು ಕೆರಳಿಸೋ ಯತ್ನ: ಯುದ್ಧದಿಂದಾಗಿ ಜಗತ್ತೇ ತತ್ತರಿಸುತ್ತಿದೆ. ಸಂಘರ್ಷ ಸನ್ನಿವೇಶದಲ್ಲೂ ಭಾರತದಲ್ಲಿ ಯಾವುದೇ ಅಭಾವ, ತೊಡಕು ಉಂಟಾಗದಂತೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಉತ್ತಮಪಡಿಸಿಕೊಂಡು ದೇಶವಾಸಿಗಳ ಹಿತ ಕಾಯಲು ಬದ್ಧವಾಗಿ ಉತ್ತಮ ಆಡಳಿತ ನಡೆಸುತ್ತಿದೆ. ಆದರೆ, ‘ಕಾಂಗ್ರೆಸ್ ಪಾರ್ಟಿ ಮೋದಿ ಸರ್ಕಾರದ ವಿರುದ್ಧ ಜನರ ಭಾವನೆ ಕೆರಳಿಸಲು ಯತ್ನಿಸುತ್ತಿದೆ’ ಎಂದು ಸಚಿವ ಜೋಶಿ ಕಿಡಿಕಾರಿದರು.

ದೇಶದಲ್ಲೆಲ್ಲೂ ಏನೂ ಕೊರತೆಯಿಲ್ಲ: ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ದೇಶದಲ್ಲಿ ಎಲ್ಲೂ ಇಲ್ಲ. ದೇಶದ 33 ಕೋಟಿ ಕುಟುಂಬಗಳಿಗೆ LPG ಪೂರೈಕೆಯಾಗುತ್ತಿದೆ. ಮೊದಲಿನಂತೆ ಸಿಲಿಂಡರ್ ಬುಕ್ ಮಾಡಿದ ಎರಡ್ಮೂರು ದಿನದಲ್ಲೇ ಪೂರೈಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

40 ದೇಶಗಳಿಂದ ಬರುತ್ತಿದೆ: ಭಾರತಕ್ಕೆ ಈ ಮೊದಲು ಕೇವಲ 20 ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನ ಬರುತ್ತಿತ್ತು. ಆದರೆ, ನಾವಿಂದು ಅದನ್ನು 40 ರಾಷ್ಟಗಳಿಗೆ ಹೆಚ್ಚಿಸಿದ್ದೇವೆ. ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಆಫ್ರಿಕನ್ ಕಂಟ್ರಿಗಳಿಂದಲೂ ತರಿಸಿಕೊಳ್ಳಲು ಯೋಜಿಸಿದ್ದೇವೆ. ಅಲ್ಲದೆ, ದೇಶದಲ್ಲೇ ಶೇ.20ರಷ್ಟು LPG ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆತ್ಮನಿರ್ಭರ ಭಾರತ ಕೆಡಿಸೋ ಕೆಲಸ

ಯುಪಿಎ ಕಾಲದಲ್ಲಿ ಕೇವಲ ಶೇ.1.5ರಷ್ಟಿದ್ದ ಎಥೆನಾಲ್ ಬೈಂಡಿಂಗ್ ಅನ್ನು ಇದೀಗ ಶೇ.20ಕ್ಕೆ ಹೆಚ್ಚಿಸಿದೆ. ಇದು ಮಾತ್ರವಲ್ಲದೆ ಪೆಟ್ರೋಲ್, ಡೀಸೆಲ್ ಪಂಪಗಳನ್ನು ಸೌರ ಪಂಪ್ ಗಳನ್ನಾಗಿ ಪರಿವರ್ತಿಸಲಾಗಿದೆ. ದೇಶದಲ್ಲೇ ಕಲ್ಲಿದ್ದಲು ಉತ್ಪಾದನೆ ಸಹ ಹೆಚ್ಚಿದೆ. ಇನ್ನು “ರಿನಿವೆಬಲ್ ಇಂಧನ ಉತ್ಪಾದನೆ” ಸಹ ಅತಿ ಹೆಚ್ಚಾಗಿದೆ. ಹೀಗೆ ನಮ್ಮ ದೇಶ “ಆತ್ಮನಿರ್ಭರ ಭಾರತ”ವಾಗಿದೆ. ಆದರೆ, ಕಾಂಗ್ರೆಸ್ ನಾಯಕರು “ಆತ್ಮನಿರ್ಭರ ಭಾರತ”ವನ್ನು ಕೆಡಿಸುವ ಸಂಚು ಹೂಡಿದ್ದಾರೆ ಎಂದು ಪ್ರಲ್ಹಾದ ಜೋಶಿ ಕಾಂಗ್ರೆಸ್ ವಿರುದ್ಧ ಗುಡುಗಿದರು.

ಎಲ್ಲೂ LPG ಅಭಾವವಿಲ್ಲ: ದೇಶದಲ್ಲಿ ಎಲ್ಲೂ LPG ಅಭಾವವಿಲ್ಲ. ಜನಸಾಮಾನ್ಯರ ಹಿತದೃಷ್ಟಿಯಿಂದ ಬುಕ್ಕಿಂಗ್ ನಿಯಮಿತಗೊಳಿಸಿ ಕಮರ್ಷಿಯಲ್ ಗ್ಯಾಸ್ ಮೇಲೆ ಕೇಂದ್ರ ನಿಗಾ ವಹಿಸುತ್ತಿದೆ ಅಷ್ಟೇ. ಆದರೆ, ಅಪ್ರಬುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪರಿಸ್ಥಿತಿಯ ಲಾಭ ಪಡೆದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಗುವಾಹಟಿ, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಇಂದು ಸುಮಾರು 19,480 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಅರ್ಪಿಸಿದರು. ದೇಶಾದ್ಯಂತ 9.3 ಕೋಟಿಗೂ ಹೆಚ್ಚು ರೈತರಿಗೆ ಪ್ರಧಾನ ಮಂತ್ರಿ-ಕಿಸಾನ್ ಯೋಜನೆಯ 22ನೇ ಕಂತನ್ನು ಕೂಡ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಿಡುಗಡೆ ಮಾಡಿದರು. ಇದೇ ವೇಳೆ ಇನ್ನೂ ಕೆಲವು ಯೋಜನೆಗಳಿಗೂ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ತಪ್ಪು ಮಾಹಿತಿ ಮತ್ತು ಸುಳ್ಳುಗಳನ್ನು ಹರಡುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ನಿಂದ ಹರ್ಷಿತ್ ರಾಣಾ ಔಟ್; ಕೆಕೆಆರ್‌ಗೆ ಹೆಚ್ಚಿದ ಸಂಕಷ್ಟ

Source link

ಮತ್ತೆ ಕೇಳಿಬಂತು ಅನುಷ್ಕಾ ಶೆಟ್ಟಿ ಮದುವೆ ವಿಷಯ: ಈ ಬಾರಿ ಪ್ರಭಾಸ್ ಹೆಸರಿಲ್ಲ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಬಣ್ಣದ ಲೋಕದಲ್ಲಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಅನೇಕ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಸಿಂಗಲ್ ಆಗಿಯೇ ಉಳಿದುಕೊಂಡಿದ್ದಾರೆ. ಅವರ ಮದುವೆ (Anushka Shetty Marriage) ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಿದೆ. ಈಗ ಮತ್ತೊಮ್ಮೆ ಅವರ ಮದುವೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಅನುಷ್ಕಾ ಶೆಟ್ಟಿ ಅವರ ಹೆಸರು ನಟ ಪ್ರಭಾಸ್ (Prabhas) ಜೊತೆ ತಳುಕು ಹಾಕಿಕೊಳ್ಳುತ್ತಲೇ ಇತ್ತು. ಆದರೆ ಈಗ ಬೇರೆ ವರನ ಬಗ್ಗೆ ಗಾಸಿಪ್ ಹಬ್ಬಿದೆ.

ಹೌದು, ಈ ಬಾರಿ ಅನುಷ್ಕಾ ಶೆಟ್ಟಿ ಮದುವೆ ಗಾಸಿಪ್ ಜೊತೆ ಪ್ರಭಾಸ್ ಹೆಸರು ಕೇಳಿಬಂದಿಲ್ಲ. ಯಾಕೆಂದರೆ, ಈಗಾಗಲೇ ಈ ಜೋಡಿ ಅನೇಕ ಬಾರಿ ‘ನಾವಿಬ್ಬರು ಜಸ್ಟ್ ಫ್ರೆಂಡ್ಸ್’ ಎನ್ನುವ ಮೂಲಕ ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ್ದಾರೆ. ಹಾಗಾಗಿ ಈ ಬಾರಿ ಹರಿದಾಡುತ್ತಿರುವ ಸುದ್ದಿ ಬೇರೆಯೇ ಆಗಿದೆ. ಈ ಸಲ ಅನುಷ್ಕಾ ಅವರ ಮದುವೆ ಯಾವುದೇ ನಟನ ಜೊತೆಗಲ್ಲ, ಬದಲಿಗೆ ಅವರ ಕುಟುಂಬಕ್ಕೆ ಮೊದಲೇ ಪರಿಚಯ ಇರುವ ಒಬ್ಬ ಉದ್ಯಮಿಯ ಜೊತೆಗೆ ನಡೆಯಲಿದೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಮೂಲಗಳ ಪ್ರಕಾರ, ಅನುಷ್ಕಾ ಶೆಟ್ಟಿ ಮತ್ತು ಈ ಉದ್ಯಮಿಯ ವಿವಾಹದ ಬಗ್ಗೆ ಕುಟುಂಬದ ಹಿರಿಯರ ಮಟ್ಟದಲ್ಲಿ ಈಗಾಗಲೇ ಮಾತುಕತೆಗಳು ಆರಂಭವಾಗಿವೆ ಎನ್ನಲಾಗಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರಲ್ಲೇ ಅನುಷ್ಕಾ ಶೆಟ್ಟಿ ಅವರು ಸಪ್ತಪದಿ ತುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸಾಮಾನ್ಯವಾಗಿ ಅನುಷ್ಕಾ ಶೆಟ್ಟಿ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ತಮ್ಮ ಬಗ್ಗೆ ಬರುವ ಯಾವುದೇ ವದಂತಿಗಳಿಗೆ ಅವರು ತಕ್ಷಣ ಪ್ರತಿಕ್ರಿಯಿಸುವುದಿಲ್ಲ. ಈಗಲೂ ಸಹ ಅವರು ಈ ಮದುವೆಯ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವರನ ಗುರುತನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿದ್ದು, ಮದುವೆಯ ತಯಾರಿಗಳ ಬಗ್ಗೆ ಯಾವುದೇ ಸುಳಿವು ಹೊರಬೀಳದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಗಾಸಿಪ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಂದ ಇನ್ನಷ್ಟು ದೂರ ಸರಿದ ನಟಿ ಅನುಷ್ಕಾ ಶೆಟ್ಟಿ

ಸದ್ಯಕ್ಕೆ ನಟನೆಯಿಂದ ಅನುಷ್ಕಾ ಶೆಟ್ಟಿ ಅವರು ದೂರ ಉಳಿದುಕೊಂಡಿದ್ದಾರೆ. ‘ಬಾಹುಬಲಿ’ ರೀತಿಯ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು ಕೂಡ ಅನುಷ್ಕಾ ಅವರು ಈಗ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ. ಅವರನ್ನು ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೌಕಾ ಡ್ರೋನ್​ಗಳು, ಕ್ಷಿಪಣಿಗಳಿರುವ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಟೆಹ್ರಾನ್, ಮಾರ್ಚ್ 13: ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವುದನ್ನು ನಿರ್ಬಂಧಿಸಲು ನಿಯೋಜಿಸಲಾದ ಆತ್ಮಾಹುತಿ ಡ್ರೋನ್ ಹಡಗುಗಳ ದೊಡ್ಡ ಸಂಗ್ರಹವನ್ನು ಇರಾನ್ (Iran) ಸೇನೆ ಹೊಂದಿದೆ. ಇರಾನ್​ನ ಅಧಿಕಾರಿಗಳು “ಕ್ಷಿಪಣಿ ನಗರ” ಎಂದು ಹೇಳುವ ಭೂಗತ ಕಾಂಪ್ಲೆಕ್ಸ್​ ಒಳಗೆ ಚಿತ್ರೀಕರಿಸಲಾದ ವಿಡಿಯೋಗಳನ್ನು ಇರಾನ್​ನ ಮಾಧ್ಯಮಗಳು ಬಿಡುಗಡೆ ಮಾಡಿದೆ. ನೌಕಾ ಡ್ರೋನ್‌ಗಳು, ಹಡಗು ವಿರೋಧಿ ಕ್ಷಿಪಣಿಗಳು ಮತ್ತು ಸಮುದ್ರ ಗಣಿಗಳಿಂದ ಕೂಡಿದ ಉದ್ದವಾದ ಸುರಂಗಗಳನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ರೆಕಾರ್ಡಿಂಗ್‌ಗಳನ್ನು ಯಾವಾಗ ಮಾಡಲಾಯಿತು, ಅಮೆರಿಕನ್ ಅಥವಾ ಇಸ್ರೇಲಿ ಪಡೆಗಳು ಆ ಸ್ಥಳವನ್ನು ಧ್ವಂಸ ಮಾಡಿವೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಎಲ್​ಪಿಜಿ ಕೊರತೆ ಇನ್ನಿಲ್ಲ; ಹಾರ್ಮುಜ್ ಜಲಸಂಧಿ ದಾಟಿ ಬಂತು ಭಾರತದ 2 ಗ್ಯಾಸ್ ಟ್ಯಾಂಕರ್

ನವದೆಹಲಿ, ಮಾರ್ಚ್ 13: ಇರಾನ್ ಹಾಗೂ ಇಸ್ರೇಲ್-ಅಮೆರಿಕದ ನಡುವೆ ಸಂಘರ್ಷ ಆರಂಭವಾದ ನಂತರ ಜಗತ್ತಿನಾದ್ಯಂತ ಹಲವೆಡೆ ಇಂಧನ, ಎಲ್​ಪಿಜಿ ಬಿಕ್ಕಟ್ಟು (LPG Crisis) ತಲೆದೋರಿತ್ತು. ಅದಕ್ಕೆ ಭಾರತವೂ ಹೊರತಾಗಿರಲಿಲ್ಲ. ಆದರೆ, ಕೊನೆಗೂ ಭಾರತದಲ್ಲಿ ಉದ್ಭವವಾಗಿದ್ದ ಎಲ್​ಪಿಜಿ ಕೊರತೆಗೆ ಪರಿಹಾರ ಸಿಕ್ಕಂತಾಗಿದೆ. ಭಾರತ ಮತ್ತು ಇರಾನ್ ಹಾರ್ಮುಜ್ ಜಲಸಂಧಿಯಿಂದ ಹಡಗುಗಳ ಸಾಗಣೆಗೆ ಒಪ್ಪಂದ ಮಾಡಿಕೊಂಡಿವೆ. ಈಗಾಗಲೇ 40,000 ಮೆಟ್ರಿಕ್ ಟನ್ ಬೃಹತ್ ಎಲ್‌ಪಿಜಿಯನ್ನು ಹೊತ್ತ ಶಿವಾಲಿಕ್ ಎಂಬ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಿ ಬಂದಿದೆ. ಮತ್ತೊಂದು ಹಡಗು ಕೂಡ ಈ ಜಲಸಂಧಿಯನ್ನು ದಾಟಿ ಮುಂದಿನ ವಾರದೊಳಗೆ ಭಾರತದಲ್ಲಿ ಡಾಕ್ ಮಾಡಲಿದೆ ಎಂದು ವರದಿಗಳು ತಿಳಿಸಿವೆ.

ಇರಾನ್ ಮತ್ತು ಭಾರತದ ನಡುವೆ ನಡೆದ ಹಲವಾರು ಸುತ್ತಿನ ಮಾತುಕತೆಗಳ ನಂತರ ಇರಾನ್ ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಅವಕಾಶ ನೀಡಿತ್ತು. ಇದರ ಬೆನ್ನಲ್ಲೇ ಈ ದೊಡ್ಡ ಬೆಳವಣಿಗೆ ಸಂಭವಿಸಿದೆ. ಶಿವಾಲಿಕ್ ಹಡಗು ಇರಾನ್‌ನ ಬಂದರ್ ಅಬ್ಬಾಸ್ ಬಂದರಿನಿಂದ ಹೊರಟು ಕೆಲವು ಗಂಟೆಗಳ ಹಿಂದೆ ಹಾರ್ಮುಜ್ ಜಲಸಂಧಿಯನ್ನು ದಾಟಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗಕ್ಕೆ ಅವಕಾಶ; ಇರಾನ್ ರಾಯಭಾರಿ ಮಾಹಿತಿ

ಇಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರು ಭಾರತಕ್ಕೆ ಸುರಕ್ಷಿತ ಮಾರ್ಗದ ಬಗ್ಗೆ ಪಾಸಿಟಿವ್ ಹೇಳಿಕೆಗಳನ್ನು ನೀಡಿದ್ದರು. “ಭಾರತ ನಮ್ಮ ಸ್ನೇಹಿತನಾಗಿರುವುದರಿಂದ ನೀವು ಎರಡು ಅಥವಾ ಮೂರು ಗಂಟೆಗಳಲ್ಲಿ ಅದರ ಪರಿಣಾಮವನ್ನು ನೋಡುತ್ತೀರಿ. ಇರಾನ್ ಮತ್ತು ಭಾರತ ಈ ಪ್ರದೇಶದಲ್ಲಿ ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತವೆ” ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಭಾರತದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ಹಾದುಹೋಗಲು ಅನುಮತಿ ಸಿಕ್ಕಿದೆ. ಇಂದು ಮಧ್ಯಾಹ್ನ ಯಾವುದೇ ತೊಂದರೆಯಿಲ್ಲದೆ ಭಾರತೀಯ ಹಡಗು ಜಲಸಂಧಿಯನ್ನು ದಾಟಿದೆ.

ಎರಡು ವಾರಗಳ ಹಿಂದೆ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ, ಇರಾನ್ ಜಲಸಂಧಿಯನ್ನು ದಿಗ್ಬಂಧನಗೊಳಿಸುವುದಾಗಿ ಘೋಷಿಸಿತ್ತು. ಹೀಗಾಗಿ, ಭಾರತದ ದೊಡ್ಡ ಟ್ಯಾಂಕರ್‌ಗಳು ಅಲ್ಲೇ ಸಿಕ್ಕಿಹಾಕಿಕೊಂಡಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಿದ್ದರಾಮಯ್ಯ ಬೆನ್ನಲ್ಲೇ ಈಗ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ಹುಬ್ಲೋಟ್‌ ವಾಚ್‌

ಕೊಪ್ಪಳ (ಮಾರ್ಚ್ 13): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದ ದುಬಾರಿ ಹ್ಯೂಬ್ಲೋಟ್ ವಾಚ್ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಹ್ಯೂಬ್ಲೋಟ್ ವಾಚ್ ಅಂದ್ರೆ ಸಾಕು ಥಂಟ್ ಅಂತ ಸಿಎಂ ಸಿದ್ದರಾಮಯ್ಯನವರರು ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯನವರ ಹ್ಯೂಬ್ಲೋಟ್ ವಾಚ್ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ ಅವರನ್ನು ಮುಜುಗರಕ್ಕೀಡು ಮಾಡಿತ್ತು. ಇದೀಗ ಸಿದ್ದರಾಮಯ್ಯನವರ ಆಪ್ತ ಶಾಸಕ ರಾಘವೇಂದ್ರ ಹಿಟ್ನಾಳ್ ಬಳಿಯೂ ಸಹ ದುಬಾರಿ ಮೌಲ್ಯದ ಹ್ಯೂಬ್ಲೋಟ್ ವಾಚ್ ಇರುವುದು ಬೆಳಕಿಗೆ ಬಂದಿದೆ. ಹೌದು..ಸುಮಾರು ಕೊಪ್ಪಳ ಕಾಂಗ್ರೆಸ್ ಶಾಸಕ ಶಾಸಕ ರಾಘವೇಂದ್ರ ಹಿಟ್ನಾಳ್ 18 ಲಕ್ಷ ರೂಪಾಯಿ ಮೌಲ್ಯದ ಹ್ಯೂಬ್ಲೋಟ್ ವಾಚ್ ಧರಿಸಿರುವುದು ಕಂಡುಬಂದಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

Source link

ಸಿಕ್ಕಳೆನ್ನುವಷ್ಟರಲ್ಲಿ ಮತ್ತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಕುಖ್ಯಾತ ಕಳ್ಳಿ ಮಾಲಾ

ರಾಮನಗರ, ಮಾರ್ಚ್​ 13: ಪೊಲೀಸ್ ಕಸ್ಟಡಿಯಲ್ಲಿದ್ದ ಕುಖ್ಯಾತ ಕಳ್ಳಿ (Thief) ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಿಂದ ಪರಾರಿ ಆಗಿರುವಂತಹ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿರುವ ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಲ್ಲಿ ನಡೆದಿದೆ. ಆಂಧ್ರಪ್ರದೇಶದ ಕುಪ್ಪಂ ಮೂಲದ ಮಾಲಾ ಪರಾರಿಯಾದ ಕಳ್ಳಿ. ಮಾಲಾ ಪರಾರಿ ಸಂಬಂಧ ರಾಮನಗರ ಟೌನ್ ಠಾಣೆಯಲ್ಲಿ ಕೇಸ್​​​​ ದಾಲಾಗಿದ್ದು, ಕುಖ್ಯಾತ ಕಳ್ಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಹದಿನಾರು ವರ್ಷದಿಂದ ಪೊಲೀಸರ ಕೈಗೆ ಸಿಗದ ಕಳ್ಳಿ

ಮೂಲತಃ ಆಂಧ್ರಪ್ರದೇಶದ ಕುಪ್ಪಂ ಮೂಲದ ಮಾಲಾ ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡು ತಿರುಗಾಡುತ್ತಿದ್ದಳು. ಕಳೆದ ಹದಿನಾರು ವರ್ಷಗಳಿಂದ ವಿವಿಧ ಕಡೆಗಳಲ್ಲಿ ಕಳ್ಳತನ ಎಸಗಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.

350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಮಾಲಾ 

ಇತ್ತೀಚೆಗೆ ಮಾಗಡಿ ಪಟ್ಟಣದಲ್ಲಿ ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಸುಮಾರು 350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಮಾಗಡಿ ಠಾಣೆ ಪೊಲೀಸರು ಮಾಲಾಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ಬಳಿಕ ಆರೋಪಿಯನ್ನು ರಾಮನಗರದ ಜಿಲ್ಲಾಸ್ಪತ್ರೆಯಲ್ಲಿರುವ ಸಖಿ ಕೇಂದ್ರದಲ್ಲಿ ತಡರಾತ್ರಿ ಇರಿಸಲಾಗಿತ್ತು. ಆದರೆ ಇದೇ ವೇಳೆ ಪೊಲೀಸರ ಗಮನವನ್ನು ಬೇರೆಡೆ ಸೆಳೆದು, ಅವರಿಗೆ ಚೆಳ್ಳೆಹಣ್ಣು ತಿನ್ನಿಸಿ ಮಾಲಾ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನು ಆರೋಪಿ ಮಾಲಾಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

97 ಲಕ್ಷಕ್ಕೂ ಅಧಿಕ ಮೌಲ್ಯದ ಡೈಮಾಂಡ್ ಮಿಶ್ರಿತ ಚಿನ್ನ ಕಳವು

ಕೊಪ್ಪಳ ನಗರದಲ್ಲಿ ಭಾರೀ ಮೌಲ್ಯದ ಚಿನ್ನ ಕಳುವಾಗಿರುವ ಪ್ರಕರಣ ಸಂಬಂಧ ಕೊನೆಗೂ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಮೂಲದ ಮೊಹಮ್ಮದ್ ಅಸ್ಗರ್ ಎಂಬುವವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಸುಮಾರು 97,17,700 ರೂ. ಮೌಲ್ಯದ ವಜ್ರ ಮಿಶ್ರಿತ ಚಿನ್ನಾಭರಣ ಜೊತೆಗೆ 26,000 ರೂ. ನಗದು ಮತ್ತು ಲ್ಯಾಪ್‌ಟಾಟ್​ ಕಳ್ಳತನವಾಗಿದೆ.

ಇದನ್ನೂ ಓದಿ: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್​​ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು

ಮೊಹಮ್ಮದ್ ಅಸ್ಗರ್ ಯುನಿಷೆಫ್ ಡೈಮಂಡ್ ಲಿ. ಕಂಪನಿಯ ಫೀಲ್ಡ್ ಆಪರೇಷನ್ ಮ್ಯಾನೇಜರ್ ಆಗಿದ್ದು, ಈ ಚಿನ್ನಾಭರಣ ಮಂಗಳೂರಿನ ಮೊಹಮ್ಮದ್ ಇರ್ಷಾದ್ ಅವರಿಗೆ ಸೇರಿದೆ. ಘಟನೆ ನಿನ್ನೆ ರಾತ್ರಿ ಕೊಪ್ಪಳ ನಗರದ ತವಾ ಪಂಜಾಬ್ ಹೋಟೆಲ್ ಬಳಿ ನಡೆದಿದೆ. ಸಿಂಧನೂರಿನಿಂದ ಮಂಗಳೂರಿಗೆ ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಅಸ್ಗರ್, ಊಟಕ್ಕಾಗಿ ಬಸ್ ನಿಲ್ಲಿಸಿದ್ದ ವೇಳೆ ಬಸ್‌ನಲ್ಲಿದ್ದ ಚಿನ್ನದ ಬ್ಯಾಗ್‌ನ್ನು ಯಾರೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಕೆಕೆಆರ್ ಸೇರಿದ ಮಾಜಿ ಆರ್​ಸಿಬಿ ವೇಗಿ

Source link