All posts by nagaraj11081993

ಜೂ. ಎನ್‌ಟಿಆರ್ ಜನ್ಮದಿನ: ಟಾಲಿವುಡ್ ನಟನ ಕನ್ನಡ ಪ್ರೇಮ, ಅಪ್ಪು ಜೊತೆ ವಿಶೇಷ ಬಾಂಧವ್ಯ – Kannada News | Jr NTR Birthday: The Emotional Bond Between Tarak and Power Star Puneeth Rajkumar

ಇಂದು (ಮೇ 20) ಟಾಲಿವುಡ್‌ನ ಸ್ಟಾರ್ ನಟ ಜೂನಿಯರ್ ಎನ್​​ಟಿಆರ್ (Jr NTR) ಅವರ ಜನ್ಮದಿನ. ‘ಆರ್‌ಆರ್‌ಆರ್’, ‘ದೇವರ’ ಮತ್ತು ಈಗ ಅನೌನ್ಸ್ ಆಗಿರುವ ‘ಡ್ರ್ಯಾಗನ್’ ಸಿನಿಮಾ ಮೂಲಕ ವಿಶ್ವಾದ್ಯಂತ ಸೌಂಡ್ ಮಾಡುತ್ತಿರುವ ತಾರಕ್ ಅವರಿಗೆ ಕರ್ನಾಟಕ ಹಾಗೂ ಕನ್ನಡದೊಂದಿಗೆ ಕೇವಲ ವೃತ್ತಿಪರ ಸಂಬಂಧ ಮಾತ್ರವಲ್ಲ, ಒಂದು ಆಪ್ತವಾದ ಭಾವನಾತ್ಮಕ ಬಾಂಧವ್ಯವಿದೆ. ಈ ವಿಶೇಷ ದಿನದಂದು ಜೂ. ಎನ್​​ಟಿಆರ್ ಅವರ ಕನ್ನಡ ಪ್ರೇಮ ಹಾಗೂ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಒಡನಾಟದ ಸುದೀರ್ಘ ವರದಿ ಇಲ್ಲಿದೆ.

ಜೂನಿಯರ್ ಎನ್​​ಟಿಆರ್ ಅವರಿಗೆ ಕರ್ನಾಟಕದ ಜೊತೆ ರಕ್ತದ ಸಂಬಂಧವಿದೆ. ಅವರ ತಾಯಿ ಶಾಲಿನಿ ಅವರು ಮೂಲತಃ ಕುಂದಾಪುರದವರು. ಹೀಗಾಗಿ ಬಾಲ್ಯದಿಂದಲೇ ತಾರಕ್ ಅವರಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಇಲ್ಲಿನ ಜನರ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ಇದೆ. ತೆಲುಗಿನಲ್ಲಿ ಸ್ಟಾರ್ ನಟನಾಗಿದ್ದರೂ, ಕರ್ನಾಟಕಕ್ಕೆ ಬಂದಾಗಲೆಲ್ಲ ಅವರು ಅತ್ಯಂತ ಸ್ಪಷ್ಟ ಹಾಗೂ ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಾರೆ.

ಅಪ್ಪು-ತಾರಕ್: ಪರದೆ ಆಚೆಯ ಅಪರೂಪದ ಸ್ನೇಹ

ಕನ್ನಡ ಚಿತ್ರರಂಗದ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಹಾಗೂ ಜೂನಿಯರ್ ಎನ್​​ಟಿಆರ್ ನಡುವಿನ ಬಾಂಧವ್ಯ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಮಾದರಿಯಾಗಿತ್ತು. ಇಬ್ಬರೂ ಕೇವಲ ಸಹೋದ್ಯೋಗಿಗಳಾಗಿರಲಿಲ್ಲ, ಬದಲಿಗೆ ಸ್ವಂತ ಸಹೋದರರಂತೆ ಇದ್ದರು. ಬೆಂಗಳೂರಿಗೆ ಬಂದಾಗಲೆಲ್ಲ ತಾರಕ್ ಅವರು ಅಪ್ಪು ನಿವಾಸಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಅಪ್ಪು ಅವರಿಗೆ ಹೈದರಾಬಾದ್‌ನಲ್ಲಿ ಆತಿಥ್ಯ ನೀಡುತ್ತಿದ್ದರು.

ಪುನೀತ್ ನಟನೆಯ ಸೂಪರ್ ಹಿಟ್ ಚಿತ್ರ ‘ಚಕ್ರವ್ಯೂಹ’ಕ್ಕಾಗಿ ಜೂ. ಎನ್​​ಟಿಆರ್ ಅವರು ‘ಗೆಳೆಯಾ ಗೆಳೆಯಾ…’ ಹಾಡನ್ನು ಹಾಡಿದ್ದರು. ಅಪ್ಪು ಮೇಲಿನ ಪ್ರೀತಿಗಾಗಿ ತಾರಕ್ ಒಂದು ಪೈಸೆ ಸಂಭಾವನೆಯನ್ನೂ ಪಡೆಯದೆ ಈ ಹಾಡನ್ನು ಹಾಡಿಕೊಟ್ಟಿದ್ದರು. ಈ ಹಾಡು ಬಿಡುಗಡೆಯಾದಾಗ ಕರ್ನಾಟಕದಲ್ಲಿ ಸಂಚಲನ ಮೂಡಿಸಿತ್ತು.

ಅಪ್ಪು ಅಗಲಿಕೆಗೆ ಕಣ್ಣೀರಿಟ್ಟಿದ್ದ ಜೂನಿಯರ್ ಎನ್‌ಟಿಆರ್

ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನ ತಾರಕ್ ಅವರಿಗೆ ವೈಯಕ್ತಿಕವಾಗಿ ದೊಡ್ಡ ಆಘಾತ ತಂದಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ಧಾವಿಸಿ ಬಂದಿದ್ದ ಜೂ. ಎನ್​​ಟಿಆರ್, ಅಪ್ಪು ಪಾರ್ಥಿವ ಶರೀರವನ್ನು ನೋಡಿ ಕಣ್ಣೀರು ಹಾಕಿದ್ದರು. ಆ ಸಂದರ್ಭದಲ್ಲಿ ಅವರು ಅಪ್ಪು ಅವರ ಸಹೋದರರಾದ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಅಪ್ಪಿಕೊಂಡು ದುಃಖ ಹಂಚಿಕೊಂಡ ದೃಶ್ಯ ಪ್ರತಿಯೊಬ್ಬ ಕನ್ನಡಿಗನ ಕಣ್ಣನ್ನು ಒದ್ದೆ ಮಾಡಿತ್ತು.

ಬಳಿಕ ನಡೆದ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎನ್​​ಟಿಆರ್, ‘ರಾಜ್‌ಕುಮಾರ್ ಅವರ ಕುಟುಂಬಕ್ಕೆ ನಾನು ಅಭಿಮಾನಿ. ಅಪ್ಪು ಅವರ ನಗು ಕೇವಲ ಪ್ರಶಸ್ತಿಯಲ್ಲ, ಅದು ಕರ್ನಾಟಕದ ಆಸ್ತಿ. ನಾನು ಇಂದು ಇಲ್ಲಿಗೆ ಒಬ್ಬ ನಟನಾಗಿ ಬಂದಿಲ್ಲ, ಪುನೀತ್ ಅವರ ಹೆಮ್ಮೆಯ ಗೆಳೆಯನಾಗಿ ಬಂದಿದ್ದೇನೆ’ ಎಂದು ಭಾವುಕರಾಗಿ ನುಡಿದಿದ್ದರು.

ವೇದಿಕೆಗಳಲ್ಲಿ ತಾರಕ್ ಕನ್ನಡ ಕಂಪು

‘ಆರ್‌ಆರ್‌ಆರ್’ ಸಿನಿಮಾ ಪ್ರಚಾರದ ವೇಳೆ ಬೆಂಗಳೂರಿಗೆ ಬಂದಿದ್ದ ಜೂನಿಯರ್ ಎನ್​​ಟಿಆರ್, ಇಡೀ ಪ್ರೆಸ್ ಮೀಟ್‌ನಲ್ಲಿ ಕನ್ನಡದಲ್ಲೇ ಉತ್ತರಿಸಿದ್ದರು. ಚಿತ್ರದಲ್ಲಿ ತಾವೇ ಸ್ವತಃ ಕನ್ನಡ ಡಬ್ಬಿಂಗ್ ಮಾಡುವ ಮೂಲಕ ಭಾಷೆಯ ಮೇಲಿನ ಹಿಡಿತವನ್ನು ಸಾಬೀತುಪಡಿಸಿದ್ದರು. ಕನ್ನಡಿಗರು ನೀಡುವ ಪ್ರೀತಿಗೆ ನಾನು ಯಾವಾಗಲೂ ಚಿರಋಣಿ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಮತ್ತೊಬ್ಬ ಕನ್ನಡದ ನಟ ಸೇರ್ಪಡೆ

ಇಂದು ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗಿ ಧೂಳೆಬ್ಬಿಸುತ್ತಿದ್ದು, ಈ ಚಿತ್ರದಲ್ಲೂ ತಾರಕ್ ಅವರ ಮಾಸ್ ಲುಕ್‌ಗೆ ಕನ್ನಡಿಗರು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಹೀಗೆ 2 ಶತಕ ತಪ್ಪಿಸಿಕೊಂಡ ಏಕೈಕ ಆಟಗಾರ ಮಿಚೆಲ್ ಮಾರ್ಷ್!

Source link

Dragon Glimpse: ‘ಡ್ರ್ಯಾಗನ್’ ಸಿನಿಮಾದಲ್ಲಿ ವಿಲನ್​​​ಗಳ ರಾಶಿ; ಗಮನ ಸೆಳೆದ ಗ್ಲಿಂಪ್ಸ್

Source link

Purushottama Masa: ಅಧಿಕ ಜೇಷ್ಠ ಮಾಸದಲ್ಲಿ ಸಂಖ್ಯೆ 33ಕ್ಕೆ ವಿಶೇಷ ಪ್ರಾಶಸ್ತ್ಯ ಏಕೆ? – Kannada News | Purushottama Masa: Understanding the Sacred Month for Spiritual Growth

ಹಿಂದೂ ಚಾಂದ್ರಮಾನ ಪದ್ಧತಿಯಲ್ಲಿ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸಗಳಲ್ಲಿ ಅಧಿಕ ಜೇಷ್ಠ ಮಾಸವೂ ಒಂದು. ಇದು ಸಾಮಾನ್ಯ ಜೇಷ್ಠ ಮಾಸಕ್ಕಿಂತ ಭಿನ್ನವಾಗಿದ್ದು, ಸೂರ್ಯ ಮತ್ತು ಚಂದ್ರರ ಚಲನೆಯ ಆಧಾರದ ಮೇಲೆ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ವಿಶೇಷವಾದ ಹೆಚ್ಚುವರಿ ಮಾಸವಾಗಿದೆ. ಇದನ್ನು ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದನ್ನು ಮಲಮಾಸ ಎಂದೂ ಕರೆಯುವುದುಂಟು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಜೇಷ್ಠ ಎಂದರೆ ದೊಡ್ಡದು ಎಂದರ್ಥ. ಮಾಸಗಳಲ್ಲಿ ಇದು ದೊಡ್ಡ ಮಾಸ, ಪವಿತ್ರ ಮಾಸ. ಹಿಂದೂ ಪಂಚಾಂಗದ ಪ್ರಕಾರ, ಅಧಿಕ ಜೇಷ್ಠ ಮಾಸವು 2026ರ ಮೇ 17ರಿಂದ ಜೂನ್ 15ರವರೆಗೆ ಇರುತ್ತದೆ ಎಂದು ವಿಶ್ಲೇಷಿಸಲಾಗಿದೆ. ಅಧಿಕಸ್ಯ ಅಧಿಕ ಫಲಂ ಎಂಬ ಮಾತಿನಂತೆ ಈ ಮಾಸದಲ್ಲಿ ನಡೆಸುವ ಧಾರ್ಮಿಕ ಕಾರ್ಯಗಳಿಂದ ಅಧಿಕ ಫಲ ದೊರೆಯುತ್ತದೆ ಎಂಬುದು ಜನರ ನಂಬಿಕೆ.

ಪುರುಷೋತ್ತಮ ಮಾಸ ಎಂಬ ಹೆಸರು ಹೇಗೆ ಬಂತು? ಪ್ರತಿ ಮಾಸಕ್ಕೂ ಒಬ್ಬ ನಿಯಾಮಕ ದೇವರಿದ್ದಾನೆ. ಆದರೆ ಅಧಿಕ ಮಾಸಕ್ಕೆ ಜವಾಬ್ದಾರಿ ವಹಿಸಿಕೊಳ್ಳಲು ದೇವರುಗಳು ಹಿಂಜರಿದಾಗ, ಸಾಕ್ಷಾತ್ ವಿಷ್ಣು ಭಗವಾನರು ಈ ಮಾಸದ ನಿರ್ವಹಣೆಯನ್ನು ವಹಿಸಿಕೊಂಡರು. ಆದ್ದರಿಂದ ಇದನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ. ಈ ಸಂಪೂರ್ಣ ಮಾಸಕ್ಕೆ ವಿಷ್ಣುವೇ ಅಧಿಪತಿಯಾಗಿದ್ದಾನೆ.

ಅಧಿಕ ಜೇಷ್ಠ ಮಾಸದಲ್ಲಿ ಮಾಡಬೇಕಾದ ಆಚರಣೆಗಳು:

ಈ ಮಾಸವು ವಿಷ್ಣುವಿನ ಆರಾಧನೆಗೆ ಅತ್ಯಂತ ಪ್ರಶಸ್ತವಾಗಿದೆ. ಈ ಅವಧಿಯಲ್ಲಿ ಮಾಡುವ ಜಪ, ಪೂಜೆ, ಉಪವಾಸ ಮತ್ತು ದಾನ ಧರ್ಮಗಳು ಶ್ರೇಷ್ಠ ಪುಣ್ಯವನ್ನು ತರುತ್ತವೆ ಮತ್ತು ಒಳ್ಳೆಯ ಯೋಗವನ್ನು ಪಡೆಯಲು ದಾರಿ ಮಾಡಿಕೊಡುತ್ತವೆ. ಇತರ ಮಾಸಗಳಲ್ಲಿ ಮಾಡುವ ಪೂಜೆ ಮತ್ತು ಜಪಗಳಿಗಿಂತ ಅಧಿಕ ಜೇಷ್ಠ ಮಾಸದಲ್ಲಿ ಮಾಡುವ ಕಾರ್ಯಗಳಿಗೆ ಹತ್ತು ಪಟ್ಟು ಹೆಚ್ಚು ಫಲ ದೊರೆಯುತ್ತದೆ.

  • ವಿಷ್ಣು ಸಹಸ್ರನಾಮ ಪಾರಾಯಣ: ಪ್ರತಿನಿತ್ಯ ಅಥವಾ ಸಂಧ್ಯಾಕಾಲದಲ್ಲಿ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡುವುದು.
  • ಮಂತ್ರ ಜಪ:“ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಸಾಧ್ಯವಾದಷ್ಟು ಜಪಿಸುವುದು. ಇದನ್ನು 12 ರಾಶಿಗಳವರೂ ಮಾಡಬಹುದು.
  • ಗ್ರಂಥ ಪಾರಾಯಣ: ಭಗವದ್ಗೀತೆ ಅಥವಾ ಭಾಗವತವನ್ನು ಪಾರಾಯಣ ಮಾಡುವುದು ಅಥವಾ ಆಲಿಸುವುದು.
  • ನಾಮಸ್ಮರಣೆ: ವಿಷ್ಣುವಿನ ನಾಮಸ್ಮರಣೆಯನ್ನು ನಿರಂತರವಾಗಿ ಮಾಡುವುದು ಶುಭ.
  • ದಾನ ಧರ್ಮ: ಬಡವರಿಗೆ ಅನ್ನದಾನ ಮಾಡುವುದು, ನಿರ್ಗತಿಕರಿಗೆ ಸಹಾಯ ಮಾಡುವುದು ಅತ್ಯಂತ ಪುಣ್ಯಕರ.

ವಿಶೇಷ ಆಚರಣೆ 33ರ ಮಹತ್ವ:

ಈ ಮಾಸದಲ್ಲಿ 33 ಎಂಬ ಸಂಖ್ಯೆಗೆ ವಿಶೇಷ ಪ್ರಾಶಸ್ತ್ಯವಿದೆ. 33 ಬಾರಿ ಮಂತ್ರ ಜಪ ಮಾಡುವುದು, 33 ವಸ್ತುಗಳನ್ನು ದಾನ ಮಾಡುವುದು, 33 ಜನರಿಗೆ ಅನ್ನ ಅಥವಾ ಪ್ರಸಾದ ನೀಡುವುದು, ಹಾಗೂ ಮಾಸ ಪೂರ್ತಿ 33 ದೀಪಗಳನ್ನು ದಾನ ಮಾಡುವುದರಿಂದ 33 ಕೋಟಿ ದೇವತೆಗಳ ಕೃಪೆ ದೊರೆಯುತ್ತದೆ ಎಂದು ನಂಬಲಾಗಿದೆ. ದಾನಂ ದಹತಿ ಪಾಪಂ – ದಾನವು ಪಾಪಗಳನ್ನು ಸುಡುತ್ತದೆ ಎಂಬುದು ಇದರ ಹಿಂದಿನ ತತ್ವ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಈ ಮಾಸದಲ್ಲಿ ಸಾಮಾನ್ಯವಾಗಿ ಮಾಡಬಾರದ ಕಾರ್ಯಗಳು:

ಅಧಿಕ ಜೇಷ್ಠ ಮಾಸದಲ್ಲಿ ವಿವಾಹ, ಉಪನಯನ, ಗೃಹಪ್ರವೇಶ ಮತ್ತು ನಾಮಕರಣದಂತಹ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇದಕ್ಕೆ ಕಾರಣ ಈ ಮಾಸವು ಪುಣ್ಯ ಸಂಪಾದನೆಗೆ ಹೆಚ್ಚು ಒತ್ತು ನೀಡುತ್ತದೆ ಹೊರತು ಲೌಕಿಕ ಕಾರ್ಯಗಳಿಗೆ ಅಲ್ಲ. ಈ ಮಾಸವು ದೇವತಾರಾಧನೆ ಮತ್ತು ಭಕ್ತಿಯ ಪರೀಕ್ಷೆಗೆ ಮೀಸಲಾಗಿದೆ.

ಒಟ್ಟಾರೆಯಾಗಿ, ಅಧಿಕ ಜೇಷ್ಠ ಮಾಸವು ಆಧ್ಯಾತ್ಮಿಕವಾಗಿ ಮಹತ್ತರ ಅವಕಾಶಗಳನ್ನು ನೀಡುವ ಕಾಲವಾಗಿದೆ. ವಿಷ್ಣುವಿನ ಆರಾಧನೆ, ಜಪ, ತಪಸ್ಸು ಮತ್ತು ದಾನ ಧರ್ಮಗಳ ಮೂಲಕ ಶುಭ ಫಲಗಳನ್ನು ಪಡೆದು ಜೀವನದಲ್ಲಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಕಂಡುಕೊಳ್ಳಲು ಈ ಮಾಸ ಸಹಕಾರಿಯಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

750 ಬ್ಯಾಟರ್​ಗಳಿಗೆ ಸಾಧ್ಯವಾಗಿಲ್ಲ… ಪ್ರಚಂಡ ದಾಖಲೆ ಬರೆದ ವೈಭವ್!

Source link

Karnataka Weather Forecast: ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್! – Kannada News | Karnataka Weather Update: Heavy Rain and Hailstorm Alert Issued for Bengaluru and Other Districts

ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ

ಬೆಂಗಳೂರು, ಮೇ 19: ಇಂದೂ ಸಹ ರಾಜ್ಯದ ಅನೇಕ ಕಡೆ ಮಳೆಯಾಗಲಿದ್ದು (Weather), ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆ.
  • ಬೆಂಗಳೂರು ಸೇರಿದಂತೆ ಹಲವೆಡೆ ಬಲವಾದ ಗಾಳಿ ಸಹಿತ ಮಳೆಯ ಸಾಧ್ಯತೆ.
  • ಸಾರ್ವಜನಿಕರು ಮತ್ತು ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ.

ಎಲ್ಲೆಲ್ಲಿ ಮಳೆ?

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಭಾರಿ ಮಳೆ ಮತ್ತು ಗುಡುಗು ಸಹಿತ ಆಲಿಕಲ್ಲು ಬೀಳುವ ಸಾಧ್ಯತೆಯಿದ್ದು, ಈ ಭಾಗಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಅದೇ ರೀತಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣದಿಂದ ಭಾರಿ ಮಳೆಯಾಗಲಿದ್ದು, ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಹಾಗೂ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಸಾರ್ವಜನಿಕರಿಗೆ ಸೂಚನೆ

ಈ ತೀವ್ರ ಹವಾಮಾನದ ಪರಿಣಾಮವಾಗಿ ತಗ್ಗು ಪ್ರದೇಶಗಳಲ್ಲಿ ಜಲಾವೃತ ಮತ್ತು ಸಂಚಾರ ದಟ್ಟಣೆ ಉಂಟಾಗಬಹುದು. ಬಲವಾದ ಗಾಳಿಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳುವ ಸಾಧ್ಯತೆಯಿರುವುದರಿಂದ ವಿದ್ಯುತ್ ಸರಬರಾಜಿಗೆ ತಾತ್ಕಾಲಿಕ ಅಡಚಣೆಯಾಗಬಹುದು. ಸಾರ್ವಜನಿಕರು ಮಳೆ-ಗಾಳಿಯ ಸಮಯದಲ್ಲಿ ಸುರಕ್ಷಿತವಾಗಿ ಮನೆಗಳ ಒಳಗೆ ಇರಲು, ಅನಗತ್ಯ ಪ್ರಯಾಣ ತಪ್ಪಿಸಲು ಮತ್ತು ಮರಗಳ ಕೆಳಗೆ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ. ತೆರೆದ ಪ್ರದೇಶಗಳಲ್ಲಿ ಸಂಗ್ರಹಿಸಿಟ್ಟಿರುವ ಕಟಾವು ಮಾಡಿದ ಬೆಳೆಗಳಿಗೆ ಹಾನಿಯಾಗುವ ಸಂಭವವಿರುವುದರಿಂದ, ರೈತರು ತಮ್ಮ ಉತ್ಪನ್ನಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಹವಾಮಾನ ಇಲಾಖೆ ಜಾಗೃತಿ ಮೂಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಮ್ಮ ಮೆಟ್ರೋ ಪಿಲ್ಲರ್​ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ: ಸಾರ್ವಜನಿಕರಿಂದ ಆಕ್ರೋಶ – Kannada News | Namma Metro Pillar Advertisement Row: BMRCL Invites Mega Tender for 5000 Pillars; Citizens Worry Over Accident Risks

ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಮೇ 20: ಬೆಂಗಳೂರಿನ ಲೈಫ್‌ಲೈನ್ ಎಂದೇ ಖ್ಯಾತಿಯಾಗಿರುವ ನಮ್ಮ ಮೆಟ್ರೋ (Namma Metro) ಇನ್ಮುಂದೆ ಕೇವಲ ಪ್ರಯಾಣಿಕರ ಸಾರಿಗೆ ಸಂಸ್ಥೆಯಾಗಿ ಉಳಿಯದೆ, ಭಾರಿ ಆದಾಯ ತರುವ ಬಿಸಿನೆಸ್ ಹಬ್ ಆಗಿ ಬದಲಾಗಲು ಸಜ್ಜಾಗಿದೆ. ಕೇವಲ ಟಿಕೆಟ್ ಆದಾಯದ ಮೇಲಷ್ಟೇ ಅವಲಂಬಿತವಾಗದೆ, ಟಿಕೆಟ್ ರಹಿತ ಇತರೆ ಮೂಲಗಳ ಆದಾಯವನ್ನು (ನಾನ್-ಫೇರ್ ಬಾಕ್ಸ್ ರೆವಿನ್ಯೂ) ಭರ್ಜರಿಯಾಗಿ ಹೆಚ್ಚಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ನಗರದಾದ್ಯಂತ ಇರುವ ಮೆಟ್ರೋ ಪಿಲ್ಲರ್​ಗಳನ್ನು ವಾಣಿಜ್ಯ ಮತ್ತು ಡಿಜಿಟಲ್ ಜಾಹೀರಾತುಗಳಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಈಗ ಮೆಗಾ ಟೆಂಡರ್ ಆಹ್ವಾನಿಸಿದೆ. ಆದರೆ, ಸರ್ಕಾರದ ಈ ನಿರ್ಧಾರವು ನಗರದ ಸೌಂದರ್ಯಕ್ಕೆ ಧಕ್ಕೆ ತರಲಿದೆ ಮತ್ತು ವಾಹನ ಸವಾರರ ಗಮನ ಭಂಗ ಮಾಡಲಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ಡಿಜಿಟಲ್ ಜಾಹೀರಾತುಗಳಿಗೆ 5,000ಕ್ಕೂ ಹೆಚ್ಚು ಪಿಲ್ಲರ್‌ಗಳ ಬಳಕೆ.
  • ಈಗಾಗಲೇ ಸ್ಥಳೀಯ ಕಲಾವಿದರು ಬಿಡಿಸಿರುವ ಸುಂದರ ಕಲಾಕೃತಿಗಳನ್ನು ಸಂರಕ್ಷಿಸಿ, ಪಿಲ್ಲರ್‌ಗಳ ಮಧ್ಯದ ಭಾಗದಲ್ಲಿ ಮಾತ್ರ ಜಾಹೀರಾತು ಬೋರ್ಡ್‌ಗಳನ್ನು ಅಳವಡಿಸಲು ಅವಕಾಶ.
  • ಅಪಘಾತಗಳ ಆತಂಕ ಮೂಡಿಸಿದ ಹೈಟೆಕ್ ದೃಶ್ಯ ವೈಭವ.

‘ದುಡ್ಡು ಮಾಡುವುದೇ ಉದ್ದೇಶ, ನಗರದ ಸೌಂದರ್ಯಕ್ಕೆ ಧಕ್ಕೆ’

ಬಿಎಂಆರ್‌ಸಿಎಲ್‌ನ ಈ ವಾಣಿಜ್ಯೀಕರಣದ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಮಾತನಾಡಿದ ಸಾರ್ವಜನಿಕರಾದ ವೀರೇಶ್, ‘ಮೆಟ್ರೋ ಸಂಸ್ಥೆಯು ಕೇವಲ ಹಣ ಗಳಿಸುವುದನ್ನೇ ಉದ್ದೇಶವಾಗಿಟ್ಟುಕೊಂಡು ನಗರದ ಸೌಂದರ್ಯವನ್ನು ಹಾಳುಗೆಡವಲು ಹೊರಟಿದೆ. ರಾತ್ರಿ ವೇಳೆ ಈ ಪ್ರಕಾಶಮಾನವಾದ ಡಿಜಿಟಲ್ ಬೋರ್ಡ್‌ಗಳಿಂದಾಗಿ ವಾಹನ ಚಾಲನೆ ಮಾಡುವುದು ಕಷ್ಟವಾಗುತ್ತದೆ’ ಎಂದು ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ.

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ವಂತ್ ಚೌಹಾಣ್, ‘ನಾವು ವಿಶ್ವ ದರ್ಜೆಯ ಸಂಘಟಿತ ಜಾಹೀರಾತು ಮಾದರಿಯನ್ನು ಜಾರಿಗೆ ತರುತ್ತಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಕಠಿಣ ನಿಯಮಾವಳಿಗಳಿಗೆ ಒಳಪಟ್ಟೇ ಈ ಬೋರ್ಡ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ಸ್ಟೇಷನ್ ಬಳಿ ವಾಹನ ಸವಾರರಿಗೆ ಹೊಸ ಸಮಸ್ಯೆ

ಸದ್ಯ ಆರ್ಥಿಕವಾಗಿ ಸ್ವಾವಲಂಬಿಯಾಗಲು ಮೆಟ್ರೋ ಸಂಸ್ಥೆ ಇಟ್ಟಿರುವ ಈ ಹೆಜ್ಜೆ, ರಸ್ತೆ ಸುರಕ್ಷತೆಯನ್ನು ಕಾಪಾಡುವಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಬಿಎಂಆರ್‌ಸಿಎಲ್‌ಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಆಕಾಶದಲ್ಲೇ ಕಳಚಿಬಿದ್ದ ಎಂಜಿನ್, 15 ಜನರ ಸಾವಿಗೆ ಕಾರಣವಾದ ಯುಎಸ್ ಕಾರ್ಗೋ ಜೆಟ್ ಅಪಘಾತದ ವಿಡಿಯೋ – Kannada News | Cargo Aircraft Crash in United States Leaves 15 Dead After Mid Flight Emergency

ಕೆಂಟುಕಿ, ಮೇ 20: ಅಮೆರಿಕದ ಕೆಂಟುಕಿಯ ಲೂಯಿಸ್​ವಿಲ್ಲೆ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸರಕು ಸಾಗಣೆ ವಿಮಾನ ದುರಂತದ ವಿಡಿಯೋ ವೈರಲ್ ಆಗಿದೆ. ಭಯಾನಕ ವೀಡಿಯೊವನ್ನು ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಬಿಡುಗಡೆ ಮಾಡಿದೆ. ಹೊನೊಲುಲುಗೆ ತೆರಳಬೇಕಿದ್ದ ಮೆಕ್‌ಡೊನೆಲ್ ಡೌಗ್ಲಾಸ್ MD-11F ಮಾದರಿಯ ಯುಪಿಎಸ್ ಫ್ಲೈಟ್ 2976 ವಿಮಾನವು ರನ್‌ವೇನಿಂದ ಮೇಲೆದ್ದ ಕೆಲವೇ ಸೆಕೆಂಡುಗಳಲ್ಲಿ ಎಂಜಿನ್ ಗಾಳಿಯಲ್ಲಿ ಕಳಚಿಬಿದ್ದಿತ್ತು.

ಬ್ಲ್ಯಾಕ್   ಬಾಕ್ಸ್ ಮತ್ತು ಫ್ಲೈಟ್ ರೆಕಾರ್ಡರ್ ದತ್ತಾಂಶದ ಪ್ರಕಾರ, ಟೇಕ್‌ಆಫ್ ಆದ ತಕ್ಷಣ ಎಂಜಿನ್ ಹಿಂಸಾತ್ಮಕವಾಗಿ ಬೇರ್ಪಟ್ಟಿದ್ದರಿಂದ ವಿಮಾನಕ್ಕೆ ಅಗತ್ಯವಾದ ಎತ್ತರವನ್ನು ಪಡೆಯಲು ಸಾಧ್ಯವಾಗಲಿಲ್ಲ. ನಿಯಂತ್ರಣ ಕಳೆದುಕೊಳ್ಳುವ ಮುನ್ನ ವಿಮಾನವು ನೆಲದಿಂದ ಕೇವಲ 30 ಅಡಿ ಎತ್ತರಕ್ಕಷ್ಟೇ ಏರಿತ್ತು. ಆಕಾಶದಲ್ಲೇ ಬೆಂಕಿಯ ಉಂಡೆಯಾಗಿ ಮಾರ್ಪಟ್ಟ ಸರಕು ವಿಮಾನವು ವಿಮಾನ ನಿಲ್ದಾಣದ ಬಳಿಯಿದ್ದ ಕೈಗಾರಿಕಾ ಕಟ್ಟಡಗಳ ಮೇಲೆ ನೇರವಾಗಿ ಅಪ್ಪಳಿಸಿತು.

ಈ ಭೀಕರ ಘರ್ಷಣೆಯ ತೀವ್ರತೆಗೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಅರ್ಧ ಮೈಲಿ ಪ್ರದೇಶದಾದ್ಯಂತ ಕೇವಲ ಅವಶೇಷಗಳ ರಾಶಿ ಮತ್ತು ವಿಮಾನದ ಇಂಧನದಿಂದ ಹೊತ್ತಿ ಉರಿದ ಭೀಕರ ಬೆಂಕಿಯ ಜ್ವಾಲೆ ಮಾತ್ರ ಕಾಣಿಸುತ್ತಿತ್ತು. ‘ನ್ಯೂಯಾರ್ಕ್ ಪೋಸ್ಟ್’ ವರದಿಯ ಪ್ರಕಾರ, ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಮತ್ತು ನೆಲದ ಮೇಲಿದ್ದ ಕನಿಷ್ಠ 12 ಕಾರ್ಮಿಕರು ಸೇರಿದಂತೆ ಒಟ್ಟು 15 ಜನರು ಸಜೀವದಹನವಾಗಿದ್ದರು. 2025ರ ನವೆಂಬರ್​​ನಲ್ಲಿ ಈ ಘಟನೆ ನಡೆದಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಕೆಜಿಎಫ್’ ಶೇಡ್​​ನಲ್ಲಿ ‘ಡ್ರ್ಯಾಗನ್’ ಗ್ಲಿಂಪ್ಸ್: ವಿಲನ್ ಆದ ಎನ್​​ಟಿಆರ್​; ಸಖತ್ ರಾ ಆಗಿದೆ ನೀಲ್ ಸಿನಿಮಾ – Kannada News | Dragon Glimpse: Jr. NTR and Prashanth Neel’s KGF esque Vision Unveiled in Intense 4 Min Glimpse

ಪ್ರಶಾಂತ್ ನೀಲ್ ಸಿನಿಮಾಗಳು ಯಾವಾಗಲೂ ಸಖತ್ ರಾ ಆಗಿರುತ್ತವೆ. ಅಷ್ಟೇ ಅಲ್ಲ, ಅವರ ನಿರ್ದೇಶನದ ಚಿತ್ರಗಳಲ್ಲಿ ಹೀರೋಗಳು ವಿಲನ್ ಶೇಡ್ ಹೊಂದಿರುತ್ತಾರೆ. ಈಗ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​​ಟಿಆರ್ (NTR) ಕಾಂಬಿನೇಷನ್ ಸಿನಿಮಾದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಜೂನಿಯರ್ ಎನ್​​ಟಿಆರ್ ಬರ್ತ್​​ಡೇ ಪ್ರಯುಕ್ತ ಈ ಟೀಸರ್ ಬಂದಿದೆ.

ಸಾಮಾನ್ಯವಾಗಿ ಗ್ಲಿಂಪ್ಸ್ ಎಂದಾಗ ಒಂದು ನಿಮಿಷದ ವಿಡಿಯೋ ರಿಲೀಸ್ ಮಾಡಿ ಕೈ ತೊಳೆದುಕೊಳ್ಳಲಾಗುತ್ತದೆ. ಆದರೆ,‘ಡ್ರ್ಯಾಗನ್’ ವಿಷಯದಲ್ಲಿ ಪ್ರಶಾಂತ್ ನೀಲ್ ಆ ರೀತಿ ಮಾಡಿಲ್ಲ. ಬರೋಬ್ಬರಿ 4 ನಿಮಿಷದ ಗ್ಲಿಂಪ್ಸ್ ರಿಲೀಸ್ ಮಾಡಿದ್ದಾರೆ. ಚಿತ್ರದ ಕಥೆ ಏನು ಹೇಳುತ್ತದೆ ಎಂಬುದನ್ನು ತೋರಿಸುವ ಕೆಲಸ ಮಾಡಿದ್ದಾರೆ.

ಬ್ರಿಟಿಷರು ಭಾರತಕ್ಕೆ ಏಕೆ ಬಂದರು ಎಂಬುದನ್ನು ಟೀಸರ್ ಆರಂಭದಲ್ಲಿ ವಿವರಿಸಲಾಗುತ್ತದೆ. ಸ್ಟೀಲ್, ಮಸಾಲೆ ಪದಾರ್ಥಗಳನ್ನು ಹುಡುಕಿ ಬ್ರಿಟಿಷರು ಭಾರತಕ್ಕೆ ಬಂದರೂ ಅವರನ್ನು 250 ವರ್ಷ ಇಲ್ಲಿ ಇರುವಂತೆ ಮಾಡಿದ್ದು ಒಂದು ಗಿಡ ಎಂದು ವಿವರಿಸಲಾಗುತ್ತದೆ. ಹೆರಾಯಿನ್ ತಯಾರಿಸಲು ಈ ಗಿಡ ಸಹಾಯ ಮಾಡುತ್ತದೆ ಎಂಬುದನ್ನು ಕೂಡ ಹೇಳಲಾಗುತ್ತದೆ.

ಚಿತ್ರದ ಕಥೆ 1967ರಲ್ಲಿ ಸಾಗುತ್ತದೆ. ರುಕ್ಮಿಣಿ ವಸಂತ್ ಅವರನ್ನು ಕೂಡ ಟ್ರೇಲರ್​​ನಲ್ಲಿ ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ಜೂನಿಯರ್ ಎನ್​​ಟಿಆರ್ ವಿಲನ್ ರೀತಿ ತೋರಿಸಲಾಗಿದೆ. ‘ಅಫ್ಗನ್ ಟ್ರೇಡಿಂಗ್ ಕಂಪನಿ’ ವಿಲನ್​​ಗಳನ್ನು ತೋರಿಸಲಾಗುತ್ತದೆ. ಕೆಜಿಎಫ್ ರೀತಿಯೇ ಇದರಲ್ಲಿ ಹಲವು ವಿಲನ್​​ಗಳಿದ್ದಾರೆ. ಗ್ಲಿಂಪ್ಸ್ ನೋಡಿದಾಗ ‘ಕೆಜಿಎಫ್’ ಶೇಡ್ ಎದ್ದು ಕಾಣಿಸುತ್ತದೆ.

ಇದನ್ನೂ ಓದಿ: ನಟ ಜೂ ಎನ್​ಟಿಆರ್ ಸಿಎಂ ಆಗಲಿದ್ದಾರೆ: ಶಾಸಕ ಹೇಳಿಕೆ

‘ನಾನು ಮಲಗಿದ್ದಾಗ ಕನಸಿನಲ್ಲಿ ನಾನು ಸಾಯಿಸಿದವರ ಮುಖ ಬರೋದಿಲ್ಲ, ಉಳಿದುಕೊಂಡ ವೈರಿಗಳ ಮುಖ ಬರುತ್ತದೆ. ಅಪ್ಪಿ ತಪ್ಪಿಯೂ ನನ್ನ ಕನಸಲ್ಲಿ ಬರಬೇಡಿ’ ಎಂದು ಜೂನಿಯರ್ ಎನ್​​ಟಿಆರ್ ಎಚ್ಚರಿಕೆ ನೀಡುತ್ತಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ! ಈ ಸಿನಿಮಾ 2027ರ ಜೂನ್ 6ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ಹಿತ ಶತ್ರುಗಳ ಕಾಟ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 20, ವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ವಿನಾಯಕ ಚತುರ್ಥಿಯಾಗಿದ್ದು, ಶುಕ್ಲ ಪಕ್ಷದ ಚತುರ್ಥಿ, ಆರ್ದ್ರಾ ನಕ್ಷತ್ರ, ಶೂಲ ಯೋಗ ಮತ್ತು ಭದ್ರಕರಣ ಇರಲಿದೆ. ಸೂರ್ಯ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯ ಆರ್ದ್ರಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ರಾಹುಕಾಲ ಮಧ್ಯಾಹ್ನ 12:15 ರಿಂದ 1:50 ರವರೆಗೆ ಇರಲಿದ್ದು, ಸರ್ವಸಿದ್ಧಿ ಕಾಲವು ಬೆಳಗ್ಗೆ 10:40 ರಿಂದ 12:15 ರವರೆಗೆ ಇರುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link