ಬೆಂಗಳೂರು, ಮಾರ್ಚ್ 13: ಸುಮಾರು 350 ಮಕ್ಕಳು ವ್ಯಾಸಂಗ ಮಾಡುತ್ತಿರುವ ಈಸ್ಟ್ ವೆಸ್ಟ್ ಅಕಾಡೆಮಿ ಶಾಲೆಯನ್ನ (East West Academy school) ಮುಚ್ಚುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ತೀವ್ರ ಆರ್ಥಿಕ ಸಂಕಷ್ಟವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಹೀಗಾಗಿ ಮಕ್ಕಳ ಭವಿಷ್ಯವೇ ಅತಂತ್ರವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೋಷಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ಪೋಷಕರು ಆಕ್ರೋಶ
ರಾಜಾಜಿನಗರ ಮಾರುತಿ ಎಕ್ಸ್ಟೆನ್ಷನ್ನಲ್ಲಿರುವ 58 ವರ್ಷಗಳ ಇತಿಹಾಸವಿರುವ ಈಸ್ಟ್ ವೆಸ್ಟ್ ಅಕಾಡೆಮಿ ಶಾಲೆಗೆ ಇಂದು ಪೋಷಕರು ದೌಡಾಯಿಸಿದ್ದರು. ಏಕೆಂದರೆ ಶಾಲೆಯನ್ನೇ ಬಂದ್ ಮಾಡುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿರುವುದೇ ಇದಕ್ಕೆ ಕಾರಣ. ಹೀಗಾಗಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ 350ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿರುವ ಹಿನ್ನೆಲೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಶಾಲೆಯು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ನಿರ್ವಹಣೆ ಕಷ್ಟವಾಗಿದೆ ಎಂದು ಹೇಳುತ್ತಿರುವ ಆಡಳಿತ ಮಂಡಳಿ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಈ ಶೈಕ್ಷಣಿಕ ವರ್ಷಗಳ ಪರೀಕ್ಷೆಗಳು ಮುಗಿದ ಬಳಿಕ ಮಕ್ಕಳನ್ನ ಬೇರೆ ಶಾಲೆಗೆ ದಾಖಲು ಮಾಡಿ ಅಂತಾ ಪೋಷಕರಿಗೆ ಸೂಚನೆ ನೀಡಿದ್ದಾರೆ. ಆದರೆ ಪೋಷಕರು ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಫೀಸ್ ಸ್ವಲ್ಪ ಹೆಚ್ಚಿಗೆ ಮಾಡಿ, ಇನ್ನೊಂದು ವರ್ಷ ಶಾಲೆ ನಡೆಸಿ ಅಂತಾ ಪಟ್ಟು ಹಿಡಿದಿದ್ದಾರೆ.
ಇನ್ನು ಈ ಬಗ್ಗೆ ಸ್ಥಳೀಯ ಶಿಕ್ಷಣಾಧಿಕಾರಿ ಕೂಡ ಗಮನ ವಹಿಸದೇ ನಿರ್ಲಕ್ಷ್ಯ ತೋರಿದ್ದಾರಂತೆ. ಮ್ಯಾನೇಜ್ಮೆಂಟ್ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪೋಷಕರು ಕಿಡಿಕಾರಿದ್ದು, ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.
ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಬಿಡುಗಡೆಗೆ ಕೆಲವೇ ದಿನ ಬಾಕಿ ಇದೆ. ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಈ ಸಿನಿಮಾದ ಟ್ರೇಲರ್ ಈಗಾಗಲೇ ಧೂಳೆಬ್ಬಿಸಿದೆ. ಸದ್ಯಕ್ಕೆ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್ ಮಾತ್ರ ಶುರುವಾಗಿದೆ. ಅದಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಬಂದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾದ ಟಿಕೆಟ್ ಬುಕಿಂಗ್ ಆರಂಭಿಸಲು ವಿಳಂಬ ಆಗಿದೆ. ಅದಕ್ಕೆ ಒಂದಷ್ಟು ಕಾರಣಗಳಿವೆ.
ಮಾರ್ಚ್ 18ರಂದು ಸಂಜೆ 5 ಗಂಟೆಯಿಂದ ಚಿತ್ರದ ಪೇಯ್ಡ್ ಪ್ರಿವ್ಯೂಗಳು ಆರಂಭವಾಗಲಿವೆ. ಈ ಪ್ರದರ್ಶನಗಳ ಟಿಕೆಟ್ ದರ ಗಗನಕ್ಕೇರಿದ್ದರೂ ಕೂಡ ದೆಹಲಿ, ಮುಂಬೈ ಬೆಂಗಳೂರು ಮುಂತಾದ ನಗರಗಳಲ್ಲಿ ಟಿಕೆಟ್‌ಗಳು ಬಿಸಿ ಬಿಸಿ ಕಜ್ಜಾಯದಂತೆ ಮಾರಾಟವಾಗುತ್ತಿವೆ. ಆದರೆ, ವಾರಾಂತ್ಯದ ಸಾಮಾನ್ಯ ಪ್ರದರ್ಶನಗಳ ಬುಕಿಂಗ್ ಇನ್ನೂ ಓಪನ್ ಆಗಿಲ್ಲ.
ಸಿನಿಮಾ ನಿರ್ಮಾಣ ಸಂಸ್ಥೆ ‘ಜಿಯೋ ಸ್ಟುಡಿಯೋಸ್’ ಚಿತ್ರಮಂದಿರಗಳ ಮಾಲೀಕರಿಂದ ಒಂದು ಕಠಿಣ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಮೊದಲ 4 ವಾರಗಳ ಕಾಲ ಕೇವಲ ‘ಧುರಂಧರ್ 2’ ಚಿತ್ರವನ್ನೇ ಪ್ರದರ್ಶಿಸಬೇಕು ಮತ್ತು ಬೇರೆ ಯಾವುದೇ ಸಿನಿಮಾಗೆ ಶೋಗಳನ್ನು ಹಂಚಬಾರದು ಎಂಬುದು ಇವರ ಶರತ್ತು. ಆದರೆ, ಈ ಚಿತ್ರ ಬಿಡುಗಡೆಯಾದ 4ನೇ ವಾರದಲ್ಲಿ ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿ, ಚಿತ್ರಮಂದಿರಗಳ ಮಾಲೀಕರು ಅಕ್ಷಯ್ ಚಿತ್ರಕ್ಕೆ ಶೋ ನೀಡಲು ಬಯಸುತ್ತಿದ್ದು, ಈ ಕುರಿತು ತಿಕ್ಕಾಟ ನಡೆಯುತ್ತಿದೆ.
ವಿತರಕರ ಜೊತೆ ಲಾಭದ ಹಂಚಿಕೆಯಲ್ಲಿ ಮಾತುಕಥೆ ಅಂತಿಮವಾಗಿಲ್ಲ. ‘ಧುರಂಧರ್’ ಮೊದಲ ಭಾಗವು ನಿಧಾನವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಆಗ ವಿತರಕರಿಗೆ ಸರಿಯಾದ ಲಾಭದ ಪಾಲು ಸಿಕ್ಕಿರಲಿಲ್ಲ ಎನ್ನಲಾಗಿದೆ. ಆದ್ದರಿಂದ, ಈ ಬಾರಿ ವಿತರಕರು ಹೆಚ್ಚಿನ ಶೇಕಡವಾರು ಲಾಭದ ಪಾಲನ್ನು ಕೇಳುತ್ತಿದ್ದಾರೆ. ಈ ಮಾತುಕತೆಗಳು ಇತ್ಯರ್ಥವಾಗದ ಕಾರಣ ಪೂರ್ಣ ಪ್ರಮಾಣದ ಬುಕಿಂಗ್ ವಿಳಂಬ ಆಗಿದೆ.
ಪೂರ್ಣ ಪ್ರಮಾಣದಲ್ಲಿ ಬುಕಿಂಗ್ ಆರಂಭವಾಗದ ಕಾರಣ, ಪ್ರೇಕ್ಷಕರು ಅನಿವಾರ್ಯವಾಗಿ ಹೆಚ್ಚಿನ ಹಣ ಕೊಟ್ಟು ಪೇಯ್ಡ್ ಪ್ರಿವ್ಯೂಗಳ ಟಿಕೆಟ್ ಖರೀದಿಸುತ್ತಿದ್ದಾರೆ. ಇದು ಪ್ರಿವ್ಯೂ ಪ್ರದರ್ಶನಗಳಿಗೆ ಲಾಭ ತಂದರೂ, ಸಾಮಾನ್ಯ ಪ್ರೇಕ್ಷಕರಿಗೆ ಹೊರೆಯಾಗುತ್ತಿದೆ. ಒಟ್ಟಿನಲ್ಲಿ ‘ಧುರಂಧರ್ 2’ ಸಿನಿಮಾದಿಂದ ಬಾಕ್ಸ್ ಆಫೀಸ್ನಲ್ಲಿ ಹಣದ ಹೊಳೆ ಹರಿಯುವ ಸೂಚನೆ ಸಿಕ್ಕಿದೆ.
ದಾವಣಗೆರೆ, (ಮಾರ್ಚ್ 13): ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ ಸರಿಪಡಿಸಲು ಹೋರಾಡುತ್ತಿರುವ ಬಿಜೆಪಿ (BJP) ಈಗ ಉಪಚುನಾವಣೆಯನ್ನು (Davanagere South By Election) ಗೆದ್ದು ಕೊಳ್ಳುವ ನೆಪದಲ್ಲಾದರೂ ಭಿನ್ನಮತಕ್ಕೆ ಕೊನೆ ಹಾಡಲು ಸರ್ಕಸ್ ಮುಂದುವರಿಸಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಎರಡೂ ಬಣಗಳನ್ನು ಕೂರಿಸಿ ಚರ್ಚೆ ನಡೆಸಲಾಗಿದೆ. ಇನ್ನು ಕಾಂಗ್ರೆಸ್ನಲ್ಲೂ (Congress) ಸಹ ಅಭ್ಯರ್ಥಿ ಆಯ್ಕೆಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ಎಸ್ಎಸ್ ಮಲ್ಲಿಕಾರ್ಜುನ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಮಿತಿ ಸಹ ಎರಡು ಕಡೆಯವರನ್ನು ಕೂರಿಸಿ ಸಭೆ ಮಾಡಿದೆ.
ಐವರು ಆಕಾಂಕ್ಷಿಗಳ ಬಗ್ಗೆ ಚರ್ಚಿಸಿದ ಬಿಜೆಪಿ
ಕಳೆದೆರಡು ವರ್ಷಗಳಿಂದಲೂ ಭಿನ್ನಮತದಿಂದ ಬಳಲುತ್ತಿರುವ ದಾವಣಗೆರೆ ಜಿಲ್ಲಾ ಬಿಜೆಪಿ ಉಪಚುನಾವಣೆಯಿಂದಲಾದರೂ ಒಗ್ಗೂಡುವ ವಿಶ್ವಾಸವಿಟ್ಟುಕೊಂಡು ಈಗ ಪ್ರಯತ್ನ ಶುರುವಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಅಂತಿಮಗೊಳಿಸಲು ಬಿಜೆಪಿ ರಾಜ್ಯ ಕೋರ್ ಕಮಿಟಿ ಇಂದು (ಮಾರ್ಚ್ 13) ಚರ್ಚೆ ನಡೆಸಿದೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಐವರು ಟಿಕೆಟ್ ಆಕಾಂಕ್ಷಿಗಳ ಹೆಸರನ್ನು ಚರ್ಚೆ ನಡೆಸಲಾಗಿದೆ. ಯಶವಂತ್ ರಾವ್ ಜಾಧವ್, ಬಿ.ಜಿ. ಅಜಯ್ ಕುಮಾರ್, ಶ್ರೀನಿವಾಸ್ ದಾಸ್ ಕರಿಯಪ್ಪ, ದೇವಮುನಿ ಮತ್ತು ರಾಜನಹಳ್ಳಿ ಶಿವಕುಮಾರ್ ಆಕಾಂಕ್ಷಿಗಳಾಗಿದ್ದು, ಎರಡು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸುಗೊಳ್ಳಲಿದೆ.
ಕೋರ್ ಕಮಿಟಿ ಸಭೆಯ ಬಳಿಕವೂ ಸಹ ದಾವಣಗೆರೆಯ ಎರಡೂ ಬಣಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕ ಬಿ.ಪಿ. ಹರೀಶ್ ಮತ್ತು ದಾವಣಗೆರೆ ಜಿಲ್ಲಾಧ್ಯಕ್ಷ ರಾಜಶೇಖರ್ ಸೇರಿದಂತೆ ಎರಡೂ ಬಣಗಳ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಎಲ್ಲಾ ವ್ಯತ್ಯಾಸಗಳನ್ನೂ ಪಕ್ಕಕ್ಕಿಟ್ಟು ಉಪಚುನಾವಣೆಯನ್ನು ಎದುರಿಸಬೇಕೆಂದು ಸೂಚನೆ ನೀಡಲಾಗಿದೆ. ನಾಯಕರ ಸೂಚನೆಗೆ ಒಪ್ಪಿಕೊಂಡಂತಿರುವ ಎರಡೂ ಬಣ ಪಕ್ಷದ ಕೆಲಸ ಮಾಡುವುದಾಗಿ ಒಪ್ಪಿಕೊಂಡಿವೆ.
ಈ ಮಧ್ಯೆ ಕೋರ್ ಕಮಿಟಿ ಸಭೆಗೂ ಮುನ್ನ ಜಿ.ಎಂ. ಸಿದ್ದೇಶ್ವರ ಬಣವನ್ನು ಸಮಾಧಾನಿಸುವ ಕೆಲಸವನ್ನೂ ಬಿಜೆಪಿ ಮಾಡಿದೆ. ಹಾಲಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ರೇಣುಕಾಚಾರ್ಯ ಬಣದಲ್ಲಿ ಗುರುತಿಸಿಕೊಂಡಿದ್ದು, ಸಿದ್ದೇಶ್ವರ ಬಣದ ರಾಜನಹಳ್ಳಿ ಶಿವಕುಮಾರ್, ಬಾತಿ ವೀರೇಶ್ ಮತ್ತು ಶಿವಪ್ರಕಾಶ್ ಅವರಿಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ನೀಡಲಾಗಿದೆ.
ಕಾಂಗ್ರೆಸ್ ನಲ್ಲೂ ಅಭ್ಯರ್ಥಿ ಆಯ್ಕೆ ಗೊಂದಲ
ಇನ್ನು ಕಾಂಗ್ರೆಸ್ ನಲ್ಲಿ ಕೂಡಾ ಅಭ್ಯರ್ಥಿ ಆಯ್ಕೆಯ ಸರ್ಕಸ್ ಮುಂದುವರಿದಿದೆ. ಒಂದೆಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಸಚಿವ ಜಮಿರ್ ಅಹಮ್ಮದ್ ಖಾನ್ ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ಎಸ್ಎಸ್ ಮಲ್ಲಿಕಾರ್ಜುನ ತಮ್ಮ ಪುತ್ರಿನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹೀಗಾಗಿ ಕಾಂಗ್ರೆಸ್ನಲ್ಲೂ ಸಹ ಟಿಕೆಟ್ಗಾಗಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ನೇತೃತ್ವದಲ್ಲಿ ನಿನ್ನೆ (ಮಾರ್ 12) ವಿಧಾನಸೌಧದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಸಭೆ ನಡೆದಿದೆ. ಮತ್ತೊಂದೆಡೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪುತ್ರ ಸಮರ್ಥ ಶಾಮನೂರು ಪರವಾಗಿ ದಾವಣಗೆರೆಯಿಂದ ಒಂದು ತಂಡ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿ ಟಿಕೆಟ್ ನೀಡುವಂತೆ ಒತ್ತಾಯಿಸಿದೆ.
ಒಟ್ಟಿನಲ್ಲಿ ದಾವಣಗೆರೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಗೊಂದಲ ಉದ್ಭವಿಸಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತೋ ಕಾದುನೋಡಬೇಕಿದೆ.
ಇತ್ತೀಚಿನ ವರ್ಷಗಳಲ್ಲಿ ಬ್ರೈನ್ ಸ್ಟ್ರೋಕ್ (Stroke) ಸಮಸ್ಯೆ ಕೇವಲ ವೃದ್ಧರಲ್ಲಿ ಮಾತ್ರವಲ್ಲದೆ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿಯೂ ಹೆಚ್ಚುತ್ತಿರುವುದು ವೈದ್ಯ ಲೋಕಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಮೆದುಳಿಗೆ ರಕ್ತದ ಹರಿವು ನಿಂತಾಗ ಅಥವಾ ರಕ್ತನಾಳ ಒಡೆದಾಗ ಸಂಭವಿಸುವ ತುರ್ತು ವೈದ್ಯಕೀಯ ಸ್ಥಿತಿಯಾಗಿದೆ, ಇದು ಮೆದುಳಿನ ಕೋಶಗಳನ್ನು ನಿಮಿಷಗಳಲ್ಲಿ ಸಾಯಿಸುತ್ತದೆ. ಇದಕ್ಕೆ ಕಾರಣಗಳು ಸ್ಪಷ್ಟವಾಗಿ ತಿಳಿಯದಿದ್ದರೂ ಕೂಡ ಯುವಕರಲ್ಲಿ ಧೂಮಪಾನ, ಒತ್ತಡ ಮತ್ತು ಜೀವನಶೈಲಿಯಲ್ಲಿ ಮಾಡಿಕೊಳ್ಳುತ್ತಿರುವ ಅನಾರೋಗ್ಯಕರ ಬದಲಾವಣೆಗಳು ಹೆಚ್ಚುತ್ತಿರುವುದರಿಂದ ಬ್ರೇನ್ ಸ್ಟ್ರೋಕ್ ಅಪಾಯದಲ್ಲಿ ಏರಿಕೆ ಕಂಡುಬಂದಿರಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಇವುಗಳ ಲಕ್ಷಣಗಳ ಬಗ್ಗೆ ತಿಳಿದುಕೊಂಡಿರುವುದು ಬಹಳ ಒಳ್ಳೆಯದು ಏಕೆಂದರೆ ಅವುಗಳನ್ನು ತಕ್ಷಣ ಗುರುತಿಸುವುದರಿಂದ ಅಪಾಯವನ್ನು ತಡೆಯಬಹುದಾಗಿದೆ.
ಅಚಾನಕ್ ಆಗಿ ಕಂಡುಬರುವ ಲಕ್ಷಣಗಳು:
ವೈದ್ಯರ ಪ್ರಕಾರ, ಬ್ರೇನ್ ಸ್ಟ್ರೋಕ್‌ನ ಲಕ್ಷಣಗಳು ಸಾಮಾನ್ಯವಾಗಿ ಅಚಾನಕ್ ಆಗಿ ಕಾಣಿಸಿಕೊಳ್ಳುತ್ತವೆ. ಮಾತನಾಡಲು ಕಷ್ಟವಾಗುವುದು, ಮುಖದ ಒಂದು ಭಾಗ ಅಥವಾ ದೇಹದ ಒಂದು ಭಾಗದಲ್ಲಿ ದುರ್ಬಲತೆ ಅಥವಾ ಸುಣ್ಣವಾಗುವುದು, ತೀವ್ರ ತಲೆನೋವು, ತಲೆ ಸುತ್ತುವುದು, ನಡೆಯಲು ಅಥವಾ ನೋಡಲು ಕಷ್ಟವಾಗುವುದು ಮುಂತಾದವು ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಅಗತ್ಯ.
ಯುವಕರಲ್ಲಿ ಸ್ಟ್ರೋಕ್ ಹೆಚ್ಚಾಗಲು ಕಾರಣಗಳು:
ದೆಹಲಿ ನಗರದ ಜಿ.ಬಿ. ಪಂತ್ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ಮಾಜಿ ನಿರ್ದೇಶಕ ಡಾ. ದಲ್ಜೀತ್ ಸಿಂಗ್ ಅವರು ಹೇಳುವ ಪ್ರಕಾರ, ಯುವಕರಲ್ಲಿ ಬ್ರೇನ್ ಸ್ಟ್ರೋಕ್ ಪ್ರಕರಣಗಳು ಹೆಚ್ಚಲು ಪ್ರಮುಖ ಕಾರಣ ಧೂಮಪಾನ ಮತ್ತು ಸಿಗರೆಟ್ ಮತ್ತು ತಂಬಾಕಿನ ಸೇವನೆ. ಇವುಗಳಲ್ಲಿರುವ ಹಾನಿಕರ ರಾಸಾಯನಿಕಗಳು ರಕ್ತನಾಳಗಳಿಗೆ ಹಾನಿ ಉಂಟುಮಾಡಿ ರಕ್ತದ ಗಡ್ಡೆಗಳು ರೂಪುಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ ಹೆಚ್ಚು ಒತ್ತಡ, ಹೈ ಬ್ಲಡ್ ಪ್ರೆಷರ್, ಅಸ್ವಸ್ಥ ಆಹಾರ ಪದ್ಧತಿ ಮತ್ತು ಶಾರೀರಿಕ ಚಟುವಟಿಕೆಗಳ ಕೊರತೆ ಕೂಡ ಅಪಾಯವನ್ನು ಹೆಚ್ಚಿಸುತ್ತವೆ.
ವೈದ್ಯರ ಪ್ರಕಾರ, ಬ್ರೇನ್ ಸ್ಟ್ರೋಕ್ ಬರದಂತೆ ತಡೆಯಲು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಮುಖ್ಯ. ಧೂಮಪಾನದಿಂದ ದೂರವಿರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸಮತೋಲನಯುತ ಆಹಾರ ಸೇವಿಸುವುದು ಮತ್ತು ಬ್ಲಡ್ ಪ್ರೆಷರ್, ಶುಗರ್ ಹಾಗೂ ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಅಗತ್ಯ. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಜೀವ ಉಳಿಸಲು ಸಹಾಯಕವಾಗಬಹುದು.
ನವದೆಹಲಿ, ಮಾರ್ಚ್ 13: ನೀತಿ ಆಯೋಗ್ನ ವಿತ್ತೀಯ ಆರೋಗ್ಯ ಸೂಚ್ಯಂಕ 2026ರ ಪಟ್ಟಿಯಲ್ಲಿ (NITI Aayog Fiscal Health Index) ಕರ್ನಾಟಕ 9ನೇ ಸ್ಥಾನ ಪಡೆದಿದೆ. 18 ಪ್ರಮುಖ ರಾಜ್ಯಗಳನ್ನು ಈ ಇಂಡೆಕ್ಸ್ನಲ್ಲಿ ಸೇರಿಸಲಾಗಿದೆ. ಇದರಲ್ಲಿ ಅಚೀವರ್, ಫ್ರಂಟ್ ರನ್ನರ್, ಪರ್ಫಾರ್ಮರ್, ಆಸ್ಪಿರೇಶನಲ್ ಎನ್ನುವ ನಾಲ್ಕು ಶ್ರೇಣಿಗಳನ್ನು ಮಾಡಲಾಗಿದೆ. ಅಗ್ರ ಮೂರು ರಾಜ್ಯಗಳು ಅಚೀವರ್ ಶ್ರೇಣಿ ಪಡೆದರೆ, 4ರಿಂದ 9ನೇ ಸ್ಥಾನದಲ್ಲಿರುವ ರಾಜ್ಯಗಳು ಫ್ರಂಟ್ ರನ್ನರ್ ಶ್ರೇಣಿಯಲ್ಲಿವೆ. 10-14ರ ಸ್ಥಾನದಲ್ಲಿರುವ ಐದು ರಾಜ್ಯಗಳು ಪರ್ಫಾರ್ಮರ್ ಎನಿಸಿವೆ. ಉಳಿದವು ಆಸ್ಪಿರೇಶನಲ್ ರಾಜ್ಯಗಳಾಗಿವೆ.
ಹಿಂದುಳಿದ ರಾಜ್ಯಗಳಲ್ಲೊಂದೆಂದು ಕರೆಯಿಸಿಕೊಳ್ಳುವ ಒಡಿಶಾ ಹಣಕಾಸು ಆರೋಗ್ಯ ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದು ಅಚ್ಚರಿ ಮೂಡಿಸಿದೆ. ಒಡಿಶಾ ಜೊತೆ ಗೋವಾ ಮತ್ತು ಜಾರ್ಖಂಡ್ ರಾಜ್ಯಗಳು ಅಚೀವರ್ ಶ್ರೇಣಿ ಪಡೆದಿವೆ. ಪಂಜಾಬ್ ರಾಜ್ಯ ಕೊನೆಯ ಸ್ಥಾನ ಪಡೆದಿದೆ. ಈ 18 ರಾಜ್ಯಗಳನ್ನು ಹೊರತುಪಡಿಸಿ, ಉಳಿದ ಈಶಾನ್ಯ ಮತ್ತು ಹಿಮಾಲಯ ಭಾಗದ ರಾಜ್ಯಗಳನ್ನು ಪ್ರತ್ಯೇಕ ಪಟ್ಟಿಗೆ ಸೇರಿಸಲಾಗಿದೆ. ಈ ಪ್ರತ್ಯೇಕ ಪಟ್ಟಿಯಲ್ಲಿ ಅರುಣಾಚಲಪ್ರದೇಶ ಅಗ್ರಕ್ರಮಾಂಕ ಪಡೆದಿದೆ. 2023-24ರ ಸಾಲಿನ ವರ್ಷದ ದತ್ತಾಂಶದ ಆಧಾರದ ಮೇಲೆ ಫಿಸ್ಕಲ್ ಹೆಲ್ತ್ ಇಂಡೆಕ್ಸ್ 2026 ರೂಪಿಸಲಾಗಿದೆ.
ನೀತಿ ಆಯೋಗ್ ಫಿಸ್ಕಲ್ ಹೆಲ್ತ್ ಇಂಡೆಕ್ಸ್ 2026, ರಾಜ್ಯಗಳು ಹಾಗೂ ಫಿಸ್ಕಲ್ ಸ್ಕೋರ್
ಒಡಿಶಾ: 73.1
ಗೋವಾ: 54.7
ಜಾರ್ಖಂಡ್: 50.5
ಗುಜರಾತ್: 49.9
ಮಹಾರಾಷ್ಟ್ರ: 45
ಛತ್ತೀಸ್ಗಡ್: 44.3
ತೆಲಂಗಾಣ: 44.3
ಉತ್ತರಪ್ರದೇಶ: 41.9
ಕರ್ನಾಟಕ: 41.7
ಮಧ್ಯಪ್ರದೇಶ: 37.8
ಹರ್ಯಾಣ: 34.5
ಬಿಹಾರ: 30.9
ತಮಿಳುನಾಡು: 29.8
ರಾಜಸ್ಥಾನ್: 27.6
ಕೇರಳ: 24.8
ಪಶ್ಚಿಮ ಬಂಗಾಳ: 23.8
ಆಂಧ್ರಪ್ರದೇಶ: 23.1
ಪಂಜಾಬ್: 12.4
ವಿತ್ತೀಯ ಆರೋಗ್ಯಕ್ಕೆ ಐದು ಮಾನದಂಡಗಳು
ಫಿಸ್ಕಲ್ ಹೆಲ್ತ್ ಇಂಡೆಕ್ಸ್ ರಚಿಸಲು ಐದು ಪ್ರಮುಖ ಮಾನದಂಡಗಳನ್ನು ಇಡಲಾಗಿದೆ. ಕಂದಾಯ ಕ್ರೋಢೀಕರಣ, ವೆಚ್ಚದ ಗುಣಮಟ್ಟ, ಹಣಕಾಸು ಕಾಳಜಿ, ಸಾಲ ನಿರ್ವಹಣೆ, ಸಾಲ ಸುಸ್ಥಿರತೆ, ಈ ಐದು ವಿಚಾರಗಳಲ್ಲಿ ರಾಜ್ಯಗಳು ಎಷ್ಟು ಜವಾಬ್ದಾರಿಯುತವಾಗಿ ವರ್ತಿಸುತ್ತವೆ ಎಂಬುದನ್ನು ಗಮನಿಸಿ ಸ್ಕೋರ್ ಕೊಡಲಾಗುತ್ತದೆ.
ನೀತಿ ಆಯೋಗ್ನ ಈ ಫಿಸ್ಕಲ್ ಹೆಲ್ತ್ ಇಂಡೆಕ್ಸ್ ಪ್ರಕಾರ 2023-24ರಲ್ಲಿ ಕರ್ನಾಟಕದ ಹಣಕಾಸು ಆರೋಗ್ಯ ಪರಿಸ್ಥಿತಿಯಲ್ಲಿ ಹೆಚ್ಚೇನೂ ವ್ಯತ್ಯಯ ಆಗಿಲ್ಲ. ಸರ್ಕಾರದ ವೆಚ್ಚದ ಗುಣಮಟ್ಟವು ಇತರ ಉನ್ನತ ರಾಜ್ಯಗಳಿಗಿಂತ ಉತ್ತಮವಾಗಿದೆ. ಕಂದಾಯ ಕ್ರೋಢೀಕರಣವೂ ಕೂಡ ಸಮರ್ಪಕವಾಗಿದೆ.
ಆದರೆ, ಜಿಡಿಪಿ ಮತ್ತು ವಿತ್ತೀಯ ಕೊರತೆ ಅಂತರ 2022-23ರಲ್ಲಿ ಶೇ. 2.05 ಇದ್ದದ್ದು 2023-24ರಲ್ಲಿ ಶೇ. 2.55ಕ್ಕೆ ಏರಿದೆ. ಆ ವರ್ಷ ಕಂದಾಯ ಕ್ರೋಢೀಕರಣ ಕಡಿಮೆಗೊಂಡಿದ್ದು ಅದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಜಿಡಿಪಿ ಮತ್ತು ಸಾಲದ ಅನುಪಾತ 2023-24ರಲ್ಲಿ ಹೆಚ್ಚಾಗಿದೆ. ಬಾಕಿ ಇರುವ ಸಾಲ ಜಿಡಿಪಿಯ ಶೇ. 23.49ರಷ್ಟಿದೆ. ಆದರೆ, 2026-27ನೇ ಸಾಲಿನ ಬಜೆಟ್ನಲ್ಲಿ ಈ ಸಾಲ ಮತ್ತು ಜಿಡಿಪಿ ಅನುಪಾ ಶೇ. 25ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಹೋಗಿದೆ.
ಟಿ20 ವಿಶ್ವಕಪ್ ಗೆದ್ದ ಸಂತಸದಲ್ಲಿರುವ ಟೀಂ ಇಂಡಿಯಾ ಪ್ರಸ್ತುತ ವಿಶ್ರಾಂತಿ ಮೂಡ್ನಲ್ಲಿದೆ. ತಂಡದ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗೆ ಮರಳಿದ್ದು, ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಳಿದ್ದಾರೆ. ಸುಮಾರು 2 ತಿಂಗಳ ಕಾಲ ನಡೆಯಲಿರುವ ಈ ಐಪಿಎಲ್ ಮುಗಿದ ಬಳಿಕ ಎಲ್ಲಾ ಆಟಗಾರರು ರಾಷ್ಟ್ರೀಯ ಕರ್ತವ್ಯಕ್ಕೆ ವಾಪಸ್ಸಾಗಲಾಗಿದೆ.
ಟಿ20 ವಿಶ್ವಕಪ್ ಆಡಿ ಮುಗಿಸಿರುವ ಟೀಂ ಇಂಡಿಯಾ ಮತ್ತೆ ಕಣಕ್ಕಿಳಿಯುವುದು ಅಫ್ಘಾನಿಸ್ತಾನದ ವಿರುದ್ಧ. ಅದು ಜೂನ್ ತಿಂಗಳಲ್ಲಿ. ಉಭಯ ತಂಡಗಳ ನಡುವಿನ ಏಕದಿನ ಸರಣಿಯೊಂದಿಗೆ ಭಾರತದ ಅಭಿಯಾನವು ಶುರುವಾಗಲಿದೆ. ಇಲ್ಲಿಂದ ಮತ್ತೆ ಟೀಂ ಇಂಡಿಯಾ ಬ್ಯುಸಿಯಾಗಲಿದೆ. ಇದರ ನಡುವೆ ಭಾರತ ತಂಡ ಏಕ ಕಾಲದಲ್ಲಿ ಎರಡು ಸರಣಿಗಳಲ್ಲಿ ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಅಕ್ಟೋಬರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಜೊತೆಗೆ ಭಾರತೀಯ ಕ್ರಿಕೆಟ್ ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ ಎಂದು ವರದಿಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಅಕ್ಟೋಬರ್ನಲ್ಲಿ ನಡೆಯಲಿದೆ. ಈ ಸಮಯದಲ್ಲಿ, ಏಷ್ಯನ್ ಕ್ರೀಡಾಕೂಟ ಜಪಾನ್ನಲ್ಲಿ ನಡೆಯಲಿದ್ದು, ಅಲ್ಲಿ ಭಾರತದ ಟಿ20 ತಂಡವೂ ಭಾಗವಹಿಸಲಿದೆ ಎಂದು ವರದಿಯಾಗಿದೆ. ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕ ಗೆದ್ದಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
ಕ್ರಿಕ್ಬಜ್ ವರದಿಯ ಪ್ರಕಾರ, ಈ ಎರಡೂ ಸರಣಿಗಳಿಗಾಗಿ ಬಿಸಿಸಿಐ 30 ಭಾರತೀಯ ಆಟಗಾರರನ್ನು ಆಯ್ಕೆ ಮಾಡಲಿದ್ದು, ಈ ಪೈಕಿ 15 ಮಂದಿ ಏಷ್ಯನ್ ಕ್ರೀಡಾಕೂಟದಲ್ಲಿ ಕಣಕ್ಕಿಳಿದರೆ, ಉಳಿದ 15 ಮಂದಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಾರೆ. ಟೀಂ ಇಂಡಿಯಾ ಈ ಹಿಂದೆ ಎರಡು ಸರಣಿಗಳನ್ನು ಏಕಕಾಲದಲ್ಲಿ ಆಡಿದೆ ಎಂಬುದು ಗಮನಿಸಬೇಕಾದ ಸಂಗತಿ.
2021 ರಲ್ಲಿ, ವಿರಾಟ್ ಕೊಹ್ಲಿ ನೇತೃತ್ವದ ಒಂದು ತಂಡ ಇಂಗ್ಲೆಂಡ್ನಲ್ಲಿ ಡಬ್ಲ್ಯೂಟಿಸಿ ಫೈನಲ್ ಮತ್ತು ನಂತರ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದರೆ, ಶಿಖರ್ ಧವನ್ ನೇತೃತ್ವದ ಇನ್ನೊಂದು ತಂಡ ಶ್ರೀಲಂಕಾದಲ್ಲಿ ಏಕದಿನ ಮತ್ತು ಟಿ20 ಸರಣಿಯನ್ನು ಆಡಿತ್ತು. ಭಾರತದಲ್ಲಿ ಪ್ರತಿಭಾನ್ವಿತ ಆಟಗಾರರಿಗೆ ಕೊರತೆಯಿಲ್ಲ. ಹೀಗಾಗಿ ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐಗೆ ಯಾವುದೇ ಸಮಸ್ಯೆ ಇರುವುದಿಲ್ಲ.
2026 ರ ಏಷ್ಯನ್ ಕ್ರೀಡಾಕೂಟವು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್ನಲ್ಲಿ ನಡೆಯಲಿದೆ. ಏಷ್ಯನ್ ಕ್ರೀಡಾಕೂಟವನ್ನು ಟಿ20 ಸ್ವರೂಪದಲ್ಲಿ ಆಡಲಾಗುವುದರಿಂದ ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಕಣಕ್ಕಿಳಿಯಲಿದೆ. ಚೀನಾದಲ್ಲಿ ನಡೆದ 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಚಿನ್ನದ ಪದಕ ಗೆದ್ದಿತ್ತು.
ನವದೆಹಲಿ, ಮಾರ್ಚ್ 13: ಪರ್ಷಿಯನ್ ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಮುದ್ರದ ಭದ್ರತೆಯ ಬಗೆಗಿನ ಕಳವಳಗಳ ನಡುವೆ, ಭಾರತದಲ್ಲಿನ ಇರಾನ್ (Iran War) ರಾಯಭಾರಿ ಮೊಹಮ್ಮದ್ ಫಥಾಲಿ ಅವರು ಜಾಗತಿಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ ಸುರಕ್ಷಿತ ಮಾರ್ಗವನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ ರಾಯಭಾರಿ ಫಥಾಲಿ, ಭಾರತ ನಮ್ಮ ಸ್ನೇಹಿತ. ಜಲಮಾರ್ಗದ ಮೂಲಕ ಭಾರತದ ಪ್ರವೇಶವನ್ನು ಖಚಿತಪಡಿಸುವ ಬೆಳವಣಿಗೆಗಳು ಶೀಘ್ರದಲ್ಲೇ ಹೊರಹೊಮ್ಮಬಹುದು ಎಂದು ಸೂಚಿಸಿದ್ದಾರೆ.
ಪರ್ಷಿಯನ್ ಕೊಲ್ಲಿಯನ್ನು ಜಾಗತಿಕ ಮಾರುಕಟ್ಟೆಗಳಿಗೆ ಸಂಪರ್ಕಿಸುವ ಕಿರಿದಾದ ಕಾರಿಡಾರ್ ಮೂಲಕ ಹಡಗು ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಮಯದಲ್ಲಿ ಈ ಹೇಳಿಕೆಗಳು ಬಂದಿವೆ. ‘ಭಾರತ ಮತ್ತು ಇರಾನ್ ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತವೆ’ ಎಂದು ಅವರು ಹೇಳಿದ್ದಾರೆ. ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಲು ಸಾಧ್ಯವಾಗುತ್ತದೆಯೇ ಎಂದು ನೇರವಾಗಿ ಕೇಳಿದಾಗ, ಈ ಬಗ್ಗೆ ಪಾಸಿಟಿವ್ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ ಎಂದು ರಾಯಭಾರಿ ಸೂಚಿಸಿದ್ದಾರೆ.
ಭಾರತ ಮತ್ತು ಇರಾನ್ ನಡುವಿನ ವಿಶಾಲ ಸಂಬಂಧದ ಬಗ್ಗೆಯೂ ರಾಯಭಾರಿ ಮಾತನಾಡಿದ್ದಾರೆ. ಇದು ಸ್ನೇಹ ಮತ್ತು ಸಹಕಾರದ ಮೇಲೆ ನಿರ್ಮಿಸಲಾದ ಸಂಬಂಧ. ಇರಾನ್ ಮತ್ತು ಭಾರತ ಸ್ನೇಹಿತರು. ನಮಗೆ ಕಾಮನ್ ಹಿತಾಸಕ್ತಿಗಳಿವೆ. ಕಷ್ಟದ ಅವಧಿಯಲ್ಲಿ ಇರಾನ್ ಅನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ, ಮಾರ್ಚ್ 13: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಕನ್ನಡ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ವೇಳೆ ದಲಿತ ಯುವಕ ಸಾವನ್ನಪ್ಪಿರುವ (death) ಘಟನೆ ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ವಿದ್ಯಾರ್ಥಿನಿಯರಿಗೆ ಕಲ್ಲು ಹೊಡೆದಿದ್ದಕ್ಕೆ ಸ್ಥಳೀಯರು ಬಡಿದು ಕೊಂದಿದ್ದಾರೆ ಎಂದು ಆರೋಪವಿದೆ. ಇನ್ನೊಂದೆಡೆ ಯುವಕ ಕಲ್ಲು ಎಸೆದಿಲ್ಲ ಎನ್ನುವುದು ದಲಿತ ನಾಯಕರ ಮಾತು. ಮಲಗಿದ್ದ ದಲಿತ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿದೆ ಎಂದಿದ್ದಾರೆ. ಹೀಗಾಗಿ ಈ ಪ್ರಕರಣ ಗೊಂದಲಮಯವಾಗಿದೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಸುದ್ದಿಗಳು ಪ್ರಸಾರವಾಗುತ್ತಿವೆ. ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುತ್ತಿದ್ದಾಗ ಕದ್ದು ನೋಡಿದನೆಂದು ಸ್ಥಳೀಯರು ಥಳಿಸಿದ ಪರಿಣಾಮ ಆತ ಹೃದಯಾಘಾತದಿಂದ ಸಾವನ್ನಪ್ಪಿದನೆಂದು, ಕಾಲ್ತುಳಿತಕ್ಕೆ ಸಾವನ್ನಪ್ಪಿದ ಎನ್ನಲಾಗುತ್ತಿದೆ. ಆದರೆ ಮಲಗಿದ್ದ ಯುವಕನನ್ನು ಎಳೆದು ತಂದು ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ಮೂಲಕ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಾವಳಗಿ ಠಾಣೆಯಲ್ಲಿ ಕೊಲೆ ಪ್ರಕರಣ ಕೂಡ ದಾಖಲಾಗಿದೆ.
ನಡೆದಿದ್ದೇನು?
ಮಾರ್ಚ 11ರ ರಾತ್ರಿ 9ಗಂಟೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಕಾರಣ ಗ್ರಾಮದ ಸರ್ಕಾರಿ ಕನ್ನಡ ಪ್ರೌಢಶಾಲೆಯ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತ್ತು. ಮಕ್ಕಳು, ಪೋಷಕರು, ಶಾಲೆಯ ಸಿಬ್ಬಂದಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಭ್ರಮದಲ್ಲಿ ತೊಡಗಿದ್ದರು. ಗ್ರಾಮಸ್ಥರು ಕೂಡ ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಕೆಲ ಯುವಕರು ಗ್ರಾಮ ಪಂಚಾಯಿತಿ ಕಟ್ಟಡದ ಮೇಲ್ಛಾವಣಿ ಮೇಲೆ ಕುಳಿತು ಕ್ರಾರ್ಯಕ್ರಮ ನೋಡುತ್ತಿದ್ದರು.
ಮೂವರ ವಿರುದ್ಧ ಎಫ್ಐಆರ್ ದಾಖಲು
ಈ ವೇಳೆ ಮೇಲಿಂದ ಕೆಳಗಡೆ ಕುಳಿತವರ ಮೇಲೆ ಯುವಕರ ಒಂದು ಗುಂಪು ಚಿಕ್ಕಚಿಕ್ಕ ಕಲ್ಲುಗಳನ್ನು ಎಸೆದು ಚುಡಾಯಿಸಿದೆ. ಈ ಮಧ್ಯೆ ಕೆಳಗೆ ಕುಳಿತವರು ಹಾಗೂ ಮೇಲೆ ಕುಳಿತ ಯುವಕರ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದೆ. ನಂತರ ದಲಿತ ಯುವಕ ಸುದೀಪ್ ಪಾಂಗೆ (೧೯) ಪ್ರಾಣಬಿಟ್ಟಿದ್ದಾನೆ. ಈ ಬಗ್ಗೆ ಸಾವಳಗಿ ಠಾಣೆಯಲ್ಲಿ ಕೊಲೆ ಎಂದು ಪ್ರಕರಣ ದಾಖಲಾಗಿದೆ. ಕ್ರೈಂ ನಂ.47/2026 ರಂತೆ ಕೊಲೆ ಪ್ರಕರಣದೊಂದಿಗೆ ಎಸ್.ಸಿ, ಎಸ್.ಟಿ (ಅತ್ಯಾಚಾರ ನಿರೋಧ)ಕಾಯ್ದೆಯ ಕಲಂ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಜಯ್ , ರಾಜು ಮತ್ತು ಮಲ್ಲಿಕಾರ್ಜುನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇನ್ನು ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದ ವೇಳೆ ಯುವಕರ ಒಂದು ಗುಂಪು ಚಿಕ್ಕ ಚಿಕ್ಕ ಕಲ್ಲು ಎಸೆದು ಚುಡಾಯಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಎಸ್ಡಿಎಂಸಿ ಸದಸ್ಯ ವಿಜಯ್ ಹಾಗೂ ಸ್ಥಳೀಯರಾದ ರಾಜು ಮತ್ತು ಮಲ್ಲಿಕಾರ್ಜುನ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ವಿಜಯ್, ರಾಜು, ಮಲ್ಲಿಕಾರ್ಜುನ ಸುದೀಪ್ ಪಾಂಗೆ(19) ಎನ್ನುವ ಯುವಕನ ಮೇಲೆ ಹಲ್ಲೆ ಮಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಮೃತನ ಕುಟುಂಬಸ್ಥರು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರನ್ನ ಬಂಧಿಸಲಾಗಿದ್ದು, ಸದ್ಯ ತನಿಖೆ ಮುಂದುವರೆದಿದೆ.
ದಲಿತ ಮುಖಂಡರು ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಮಾತಾಡಿದ ಸಾವಳಗಿ ಗ್ರಾಮದ ದಲಿತ ಮುಖಂಡ ರಾಜು ಮೇಲಿನಕೇರಿ, ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಸುದ್ದಿಗಳು ಪ್ರಸಾರವಾಗುತ್ತಿವೆ. ಯುವಕ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವುದನ್ನು ನೋಡಿ ಕಲ್ಲು ಎಸೆಯುತ್ತಿದ್ದ, ಇನ್ನು ಕೆಲ ಮಾಧ್ಯಮಗಳಲ್ಲಿ ಕಾಲ್ತುಳಿತಕ್ಕೆ ಸಾವನ್ನಪ್ಪಿದ ಎಂದು ಬರುತ್ತಿದೆ. ಅದೆಲ್ಲವು ಸತ್ಯಕ್ಕೆ ದೂರವಾದದ್ದು. ಆತ ಗ್ರಾಮ ಪಂಚಾಯಿತಿ ಮೇಲೆ ಕುಡಿದು ಮಲಗಿದ್ದ. ಯಾರು ಕಲ್ಲು ಎಸೆದಿದ್ದಾರಾ ಗೊತ್ತಿಲ್ಲ. ಮಲಗಿದ್ದ ದಲಿತ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿದೆ. ಎಫ್ಐಆರ್ ಪ್ರಕಾರ ವರದಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದರು.
ಒಟ್ಟಾರೆ ಗ್ರಾಮದಲ್ಲಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳ ಸಂಭ್ರಮ ಸಡಗರದಿಂದ ಸಮಾರೋಪವಾಗಬೇಕಿತ್ತು. ಆದರೆ ಯುವಕರ ನಡುವಿನ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಗತ್ಯವಾಗಿದ್ದು, ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ.
2026 ರ ಟಿ20 ವಿಶ್ವಕಪ್ ( T20 World Cup) ಗೆದ್ದು ರೈಲಿನ ಪ್ರಯಾಣ ಬೆಳೆಸಿ ತವರಿಗೆ ಮರಳಿದ್ದ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಶಿವಂ ದುಬೆ (Shivam Dube) ತಮ್ಮ ಸರಳತೆಯಿಂದ ಸಖತ್ ಸದ್ದು ಮಾಡಿದ್ದರು. ಇದೀಗ ದುಬೆ ತಮ್ಮ ದುಬಾರಿ ಮನೆಯ ಬೆಲೆಯ ಮೂಲಕ ಸೋಶಿಯಲ್ ಮೀಡಿಯಾವನ್ನು ಹುಬ್ಬೇರುವಂತೆ ಮಾಡಿದ್ದಾರೆ. ಇಡೀ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರರ ಪೈಕಿ ಶಿವಂ ದುಬೆ ಕೂಡ ಒಬ್ಬರು. ತಂಡಕ್ಕೆ ಅಗತ್ಯವಿದ್ದ ಸಮಯದಲ್ಲಿ ಸಮಯೋಜಿತ ಪ್ರದರ್ಶನ ನೀಡಿದ ದುಬೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಈ ಪಂದ್ಯಾವಳಿಯಲ್ಲಿ ದುಬೆ ನೀಡಿದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು.
ದುಬೆ ಖರೀದಿಸಿರುವ ಫ್ಲಾಟ್‌ನ ಬೆಲೆ ಎಷ್ಟು?
ಮೇಲೆ ಹೇಳಿದಂತೆ ಭಾರತದ ಸತತ ಎರಡು ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡಗೈ ಬ್ಯಾಟ್ಸ್‌ಮನ್ ಶಿವಂ ದುಬೆ ಕಳೆದ ವರ್ಷ ಮುಂಬೈನಲ್ಲಿ ಕೋಟ್ಯಂತರ ಮೌಲ್ಯದ ಫ್ಲಾಟ್‌ಗಳನ್ನು ಖರೀದಿ ಮಾಡಿದ್ದಾರೆ. ಜೂನ್ 2025 ರಲ್ಲಿ ಮುಂಬೈನ ಜನಪ್ರಿಯ ಓಶಿವಾಡಾ ಪ್ರದೇಶದಲ್ಲಿ ವಸತಿ ಯೋಜನೆಯಲ್ಲಿ ಎರಡು ಫ್ಲಾಟ್‌ಗಳನ್ನು ದುಬೆ ಖರೀದಿಸಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಇದರ ಒಟ್ಟು ಮೌಲ್ಯ ₹27.50 ಕೋಟಿ ಎಂತಲೂ ವರದಿಯಲ್ಲಿ ತಿಳಿಸಲಾಗಿದೆ. ಎರಡೂ ಫ್ಲಾಟ್‌ಗಳು ಡಿಎಲ್‌ಎಚ್ ಎನ್‌ಕ್ಲೇವ್‌ನಲ್ಲಿದ್ದು, ಈ ಫ್ಲಾಟ್‌ಗಳನ್ನು ದುಬೆ, ದೇವ್ ಲ್ಯಾಂಡ್ ಮತ್ತು ಹೌಸಿಂಗ್ ಲಿಮಿಟೆಡ್‌ನಿಂದ ಖರೀದಿಸಿದ್ದಾರೆ.
ರಿಜಿಸ್ಟ್ರಿ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿರುವಂತೆ, ದುಬೆ ಖರೀದಿಸಿರುವ ಈ ಎರಡೂ ಫ್ಲಾಟ್‌ಗಳು ಒಂದೇ ಕಟ್ಟಡದಲ್ಲಿವೆ. ಒಂದು 17 ನೇ ಮಹಡಿಯಲ್ಲಿದ್ದರೆ, ಇನ್ನೊಂದು 18 ನೇ ಮಹಡಿಯಲ್ಲಿದ್ದು, ಒಟ್ಟು ವಿಸ್ತೀರ್ಣ ಸುಮಾರು 9,600 ಚದರ ಅಡಿ ಎಂದು ವರದಿಯಾಗಿದೆ. ಈ ಫ್ಲಾಟ್‌ಗಳನ್ನು ಖರೀದಿಸಲು ಶಿವಂ ದುಬೆ ₹1.65 ಕೋಟಿ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ . ಹಾಗೆಯೇ ದುಬೆ ಈ ಸೊಸೈಟಿಯಲ್ಲಿ ಮೂರು ಪಾರ್ಕಿಂಗ್ ಸ್ಲಾಟ್‌ಗಳನ್ನು ಸಹ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಶಿವಂ ದುಬೆಯ ಆದಾಯದ ಮೂಲ
ಪ್ರಸ್ತುತ ಭಾರತ ಟಿ20 ತಂಡದಲ್ಲಿ ಮಾತ್ರ ಆಡುತ್ತಿರುವ ದುಬೆ, ಆಡುವ ಪ್ರತಿ ಟಿ20 ಪಂದ್ಯಕ್ಕೆ ಬಿಸಿಸಿಐನಿಂದ 3 ಲಕ್ಷ ರೂ. ವೇತನ ಪಡೆಯುತ್ತಾರೆ. ಹಾಗೆಯೇ ಬಿಸಿಸಿಐ ಕೇಂದ್ರ ಒಪ್ಪಂದದ ಸಿ ದರ್ಜೆಯಲ್ಲಿ ಸ್ಥಾನ ಪಡೆದಿರುವ ದುಬೆ ವಾರ್ಷಿಕವಾಗಿ 1 ಕೋಟಿ ರೂ. ವೇತನ ಪಡೆಯುತ್ತಾರೆ. ಹಾಗೆಯೇ ಪ್ರಸ್ತುತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ದುಬೆಯನ್ನು 2025 ರ ಮೆಗಾ ಹರಾಜಿಗೂ ಮೊದಲು 12 ಕೋಟಿ ರೂ. ಗೆ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ.
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ 25 ಎಸೆತಗಳಲ್ಲಿ 43 ರನ್ ಮತ್ತು ಫೈನಲ್‌ನಲ್ಲಿ ಕೇವಲ 8 ಎಸೆತಗಳಲ್ಲಿ 26 ರನ್ ಗಳಿಸುವ ಮೂಲಕ, ಶಿವಂ ದುಬೆ ಟೀಂ ಇಂಡಿಯಾದ ಸತತ ಎರಡನೇ ಪ್ರಶಸ್ತಿಗೆ ಮಹತ್ವದ ಕೊಡುಗೆ ನೀಡಿದರು.ಶಿವಂ ದುಬೆ 2019 ರಲ್ಲಿ ಪಾದಾರ್ಪಣೆ ಮಾಡಿದರೂ, ಕಳೆದ ಮೂರು ವರ್ಷಗಳಿಂದ ಟೀಂ ಇಂಡಿಯಾ ಪರ ಟಿ20 ಸ್ವರೂಪದಲ್ಲಿ ಖಾಯಂ ಆಗಿ ಆಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಐಪಿಎಲ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶ್ವಾನಗಳ (Dog) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಈ ಮೂಕಪ್ರಾಣಿಗಳು ಮನುಷ್ಯನ ಆಪ್ತ ಸ್ನೇಹಿತನಾಗಿ ಬಿಡುತ್ತವೆ. ಮನೆಯ ಸದಸ್ಯರು ಎಲ್ಲಿಗಾದ್ರೂ ಹೊರಟು ನಿಂತರೆ ಸಾಕು, ಅವರನ್ನೇ ಹಿಂಬಾಲಿಸುತ್ತವೆ. ಇನ್ನು, ಮನೆಯಲ್ಲಿರುವ ಪುಟಾಣಿ ಮಕ್ಕಳಿಗೆ ಕಾವಲಾಗಿ ನಿಲ್ಲುತ್ತವೆ. ಈ ವಿಡಿಯೋದಲ್ಲಿ ಅಂತಹದ್ದೇ ದೃಶ್ಯವಿದೆ. ಪುಟ್ಟ ಹುಡುಗಿ ಶಾಲೆಗೆ ಹೊರಟು ನಿಂತಿದ್ದು, ಆಕೆಯನ್ನು ಸ್ಕೂಲ್ ಬಸ್‌ಗೆ ಹತ್ತಿಸಿ ಜೋಪಾನವಾಗಿ ಕಳುಹಿಸಿಕೊಟ್ಟಿದೆ. ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
StreetdogofBombay ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿ ಹಾಗೂ ಮನೆಯ ಮುದ್ದಿನ ಶ್ವಾನದ ನಡುವಿನ ಬಾಂಧವ್ಯವನ್ನು ನೋಡಬಹುದು. ಪುಟ್ಟ ಹುಡುಗಿಯೂ ಶಾಲೆಗೆ ಹೋಗಲು ಸಿದ್ಧವಾಗಿದ್ದು, ರಸ್ತೆಯತ್ತ ನಡೆದುಕೊಂಡು ಹೋಗುತ್ತಿರುವುದನ್ನು ನೀವು ಕಾಣಬಹುದು. ಶ್ವಾನವು ಆಕೆಯನ್ನೇ ಹಿಂಬಾಲಿಸಿದ್ದು, ಸ್ಕೂಲ್ ಬಸ್‌ಗೆ ಹತ್ತಿಸಿದೆ. ಆ ಬಳಿಕ ಬಸ್ಸಿನ ಮೆಟ್ಟಿಲನ್ನು ಹತ್ತಿ ಪುಟ್ಟ ಹುಡುಗಿಯೂ ಸೀಟಿನಲ್ಲಿ ಕುಳಿತುಕೊಂಡಿದ್ದಾಳೋ ಎಂದು ಪರೀಕ್ಷಿಸಿದೆ.
ಈ ವಿಡಿಯೋ ಹದಿಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆ ದಾರ ಬಾಡಿ ಗಾರ್ಡ್ ಎಂದರೆ, ಮತ್ತೊಬ್ಬರು, ಈ ಪುಟಾಣಿಗೆ ಸೀಟ್ ಸಿಕ್ಕಿತೇ ಎಂದು ಪರೀಕ್ಷಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತುಂಬಾ ಜವಾಬ್ದಾರಿಯುತ ಶ್ವಾನ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ