ದೇವಸ್ಥಾನಗಳ ಚಿನ್ನದ ನಗದೀಕರಣದ ಯಾವ ಯೋಜನೆಯೂ ಇಲ್ಲ; ವೈರಲ್ ಸುದ್ದಿ ಕೇವಲ ವದಂತಿ: ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | Temple Gold Monetization Rumor Debunked: PIB Confirms No New Scheme
ನವದೆಹಲಿ, ಮೇ 19: ದೇವಸ್ಥಾನದಲ್ಲಿರುವ ಚಿನ್ನವನ್ನು ನಗದೀಕರಣಗೊಳಿಸಲು (Gold Monetisation scheme) ಸರ್ಕಾರ ಯೋಜಿಸುತ್ತಿದೆ ಎಂಬಂತಹ ಕೆಲ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. “ಕೇಂದ್ರ ಸರ್ಕಾರವು ದೇಶದ ದೇವಸ್ಥಾನಗಳಿಗಾಗಿ ಹೊಸ ‘ಚಿನ್ನದ ಬಾಂಡ್ ಯೋಜನೆ’ (Gold Bond Scheme) ಯನ್ನು ಜಾರಿಗೊಳಿಸಲು ಮತ್ತು ದೇವಸ್ಥಾನದ ಗೋಪುರ ಇತ್ಯಾದಿ ಕಟ್ಟಡಗಳಲ್ಲಿ ಹಾಕಲಾಗಿರುವ ಗೋಲ್ಡ್ ಪ್ಲೇಟ್ ಇತ್ಯಾದಿ ಚಿನ್ನವನ್ನು ದೇಶದ ಸ್ಟ್ರಾಟಿಜಿಕ್ ರಿಸರ್ವ್ ಎಂದು ಪರಿಗಣಿಸಲು ಯೋಜಿಸುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ಭಾರತ ಸರ್ಕಾರ ಅಧಿಕೃತವಾಗಿ…