All posts by nagaraj11081993

ದೇವಸ್ಥಾನಗಳ ಚಿನ್ನದ ನಗದೀಕರಣದ ಯಾವ ಯೋಜನೆಯೂ ಇಲ್ಲ; ವೈರಲ್ ಸುದ್ದಿ ಕೇವಲ ವದಂತಿ: ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | Temple Gold Monetization Rumor Debunked: PIB Confirms No New Scheme

ನವದೆಹಲಿ, ಮೇ 19: ದೇವಸ್ಥಾನದಲ್ಲಿರುವ ಚಿನ್ನವನ್ನು ನಗದೀಕರಣಗೊಳಿಸಲು (Gold Monetisation scheme) ಸರ್ಕಾರ ಯೋಜಿಸುತ್ತಿದೆ ಎಂಬಂತಹ ಕೆಲ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. “ಕೇಂದ್ರ ಸರ್ಕಾರವು ದೇಶದ ದೇವಸ್ಥಾನಗಳಿಗಾಗಿ ಹೊಸ ‘ಚಿನ್ನದ ಬಾಂಡ್ ಯೋಜನೆ’ (Gold Bond Scheme) ಯನ್ನು ಜಾರಿಗೊಳಿಸಲು ಮತ್ತು ದೇವಸ್ಥಾನದ ಗೋಪುರ ಇತ್ಯಾದಿ ಕಟ್ಟಡಗಳಲ್ಲಿ ಹಾಕಲಾಗಿರುವ ಗೋಲ್ಡ್ ಪ್ಲೇಟ್ ಇತ್ಯಾದಿ ಚಿನ್ನವನ್ನು ದೇಶದ ಸ್ಟ್ರಾಟಿಜಿಕ್ ರಿಸರ್ವ್ ಎಂದು ಪರಿಗಣಿಸಲು ಯೋಜಿಸುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ಭಾರತ ಸರ್ಕಾರ ಅಧಿಕೃತವಾಗಿ ನಿರಾಕರಿಸಿದೆ ಮತ್ತು ಇದು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಸುದ್ದಿಯ ಮುಖ್ಯಾಂಶಗಳು

  • ದೇವಸ್ಥಾನಗಳ ಚಿನ್ನದ ಮೇಲೆ ಸರ್ಕಾರ ನಿಯಂತ್ರಣ ಪಡೆದು ಅದರ ನಗದೀಕರಣ ಮಾಡಲು ಯೋಜಿಸಿದೆ ಎನ್ನುವಂತಹ ವದಂತಿಗಳು ಹರಿದಾಡುತ್ತಿವೆ.
  • ಈ ಸುದ್ದಿಯನ್ನು ಸರ್ಕಾರ ಅಲ್ಲಗಳೆದಿದೆ. ದೇವಸ್ಥಾನದ ಚಿನ್ನದ ಮೇಲೆ ನಿಯಂತ್ರಣ ಹೊಂದುವ ಯಾವ ಉದ್ದೇಶ ಇಲ್ಲ ಎಂದು ಪಿಐಬಿ ಹೇಳಿದೆ.
  • ದೇಶದಲ್ಲಿ ಚಿನ್ನಕ್ಕೆ ಬಹಳ ಬೇಡಿಕೆ ಇದ್ದು, ಹೆಚ್ಚಿನ ಚಿನ್ನವನ್ನು ಆಮದು ಮಾಡಬೇಕಿದೆ. ಚಿನ್ನದ ಖರೀದಿ ಕಡಿಮೆ ಮಾಡಿ ಎಂದು ಮೊನ್ನೆ ಪಿಎಂ ಹೇಳಿದ್ದರು.

ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ?

ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದುದು ವದಂತಿ…

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ವರದಿಗಳಲ್ಲಿ ಕೇಂದ್ರ ಸರ್ಕಾರವು ದೇವಸ್ಥಾನಗಳ ಬಳಿ ಇರುವ ಹೆಚ್ಚುವರಿ ಚಿನ್ನವನ್ನು ಬ್ಯಾಂಕುಗಳಲ್ಲಿ ಇಟ್ಟು ಅದರ ಮೂಲಕ ಬಾಂಡ್‌ಗಳನ್ನು ವಿತರಿಸುವ ಹೊಸ ಚಿನ್ನದ ನಗದೀಕರಣ ಯೋಜನೆಯನ್ನು (Gold Monetisation Scheme) ಜಾರಿಗೆ ತರುತ್ತಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಇದರಿಂದಾಗಿ ದೇವಸ್ಥಾನಗಳ ಒಡೆತನದ ಚಿನ್ನದ ಮೇಲೆ ಸರ್ಕಾರದ ನಿಯಂತ್ರಣ ಬರಲಿದೆ ಎಂಬಂತಹ ಚರ್ಚೆಗಳು ಶುರುವಾಗಿದ್ದವು.

ಈ ಸುದ್ದಿ ತೀವ್ರವಾಗಿ ಹರಡುತ್ತಿದ್ದಂತೆ, ಸರ್ಕಾರದ ಅಧಿಕೃತ ಮಾಹಿತಿ ಸಂಸ್ಥೆಯಾದ ಪಿಐಬಿ ಫ್ಯಾಕ್ಟ್ ಚೆಕ್ (PIB Fact Check) ಈ ಬಗ್ಗೆ ತನಿಖೆ ನಡೆಸಿ ಸ್ಪಷ್ಟನೆ ನೀಡಿದೆ. ಸರ್ಕಾರವು ದೇವಸ್ಥಾನಗಳಿಗಾಗಿ ಇಂತಹ ಯಾವುದೇ ಹೊಸ ಚಿನ್ನದ ಬಾಂಡ್ ಯೋಜನೆಯನ್ನು ಘೋಷಿಸಿಲ್ಲ ಅಥವಾ ಜಾರಿಗೆ ತರುತ್ತಿಲ್ಲ ಎಂದು ಪಿಐಬಿ ಖಚಿತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಸುದ್ಧಿ ಕೇವಲ ವದಂತಿ ಮತ್ತು ಸುಳ್ಳು (Fake News) ಎಂದು ಸರ್ಕಾರ ಹೇಳಿದೆ.

ಈಗ ಜಾರಿಯಲ್ಲಿರುವ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಏನು?

ಸರ್ಕಾರ ಚಿನ್ನಕ್ಕೆ ಸಂಬಂಧಿಸಿದ ಕೆಲ ಯೋಜನೆಗಳನ್ನು ಮತ್ತು ಸ್ಕೀಮ್​ಗಳನ್ನು ಜಾರಿಗೊಳಿಸಿದೆ. ಸಾವರೀನ್ ಗೋಲ್ಡ್ ಬಾಂಡ್ ಮತ್ತು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, ಇವು ಪ್ರಮುಖವಾದುವು. ಸಾವರಿನ್ ಗೋಲ್ಡ್ ಬಾಂಡ್ 2015ರಲ್ಲಿ ಆರಂಭವಾಗಿದೆ. ಆದರೆ, ಕಳೆದ ಒಂದು ವರ್ಷದಿಂದ ಹೊಸ ಸರಣಿಯ ಬಾಂಡ್​ಗಳನ್ನು ಬಿಡುಗಡೆ ಮಾಡಲಾಗಿಲ್ಲ. ಇನ್ನು, ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ಅಲ್ಪಾವಧಿ ಪ್ಲಾನ್ ಅನ್ನು ಮಾತ್ರ ಮುಂದುವರಿಸಲಾಗಿದೆ. 3 ವರ್ಷ ಮೇಲ್ಪಟ್ಟ ಅವಧಿಯ ಪ್ಲಾನ್​ಗಳನ್ನು ನಿಲ್ಲಿಸಲಾಗಿದೆ. ಗೋಲ್ಡ್ ಮಾನಿಟೈಸೇಶನ್​ನಲ್ಲಿ ನೀವು ಬಳಸದೇ ಇರುವ ಚಿನ್ನವನ್ನು ಡೆಪಾಸಿಟ್ ಆಗಿ ಇಟ್ಟು ಅದರಿಂದ ಬಡ್ಡಿ ಪಡೆಯುವ ಅವಕಾಶ ಇರುತ್ತದೆ. 1ರಿಂದ 3 ವರ್ಷದ ಡೆಪಾಸಿಟ್​ಗೆ ಅವಕಾಶ ಇದೆ. ಬಡ್ಡಿ ಶೇ. 1ಕ್ಕಿಂತಲೂ ಕಡಿಮೆ ಇರುವುದರಿಂದ ಈ ಸ್ಕೀಮ್ ಹೆಚ್ಚು ಜನಪ್ರಿಯತೆ ಪಡೆದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಇದೇ ಮಾದರಿಯ ಮಾನಿಟೈಸೇಶನ್ ಸ್ಕೀಮ್ ಅನ್ನು ದೇವಸ್ಥಾನಗಳಿಗೆ ತರಲು ಹೊರಟಿದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಸರ್ಕಾರ ಈ ಸುದ್ದಿಯನ್ನು ಅಲ್ಲಗಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ (WhatsApp, Facebook, X) ಇಂತಹ ಸೂಕ್ಷ್ಮ ವಿಷಯಗಳ ಕುರಿತು ಬರುವ ಅನಧಿಕೃತ ಸುದ್ದಿಗಳನ್ನು ನಂಬಬೇಡಿ ಮತ್ತು ಅವುಗಳನ್ನು ಇತರರಿಗೆ ಶೇರ್ ಮಾಡುವ ಮುನ್ನ ಸರ್ಕಾರದ ಅಧಿಕೃತ ಮೂಲಗಳಿಂದ ಪರಿಶೀಲಿಸಿಕೊಳ್ಳಿ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಜನರಲ್ಲಿ ಮನವಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎರಡೆರಡು ಬಾರಿ ಸೆರೆ, ಮನೆಗಳ ಬಾಗಿಲು ಮುರಿದು ಪುಂಡಾಟ: ಕಾದಾಟದಲ್ಲಿ ಮೃತಪಟ್ಟ ಮಾರ್ತಾಂಡ ಆನೆಗಿತ್ತು ಭಯಂಕರ ಇತಿಹಾಸ – Kannada News | Dubare Camp Elephant Martanda Dies in Fight; Had a Fearsome Past

ಕಾದಾಟದಲ್ಲಿ ಮೃತಪಟ್ಟ ಮಾರ್ತಾಂಡ ಆನೆಗಿತ್ತು ಭಯಂಕರ ಇತಿಹಾಸ

ಮಡಿಕೇರಿ, ಮೇ 19: ಕುಶಾಲನಗರದ ದುಬಾರೆ ಕ್ಯಾಂಪ್​​ನಲ್ಲಿ ಕಾದಾಟದ ವೇಳೆ ಆನೆ ಕಂಜನ್​​ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಇಂದು (ಮೇ 19  ಮೃತಪಟ್ಟಿದೆ. ಮೂರು ವರ್ಷಗಳ ಹಿಂದೆ ಮೇ 19ರಂದೇ ಮಾರ್ತಾಂಡನನ್ನು ಸೆರೆಹಿಡಿಯಲಾಗಿತ್ತು.  ಕಾಕತಾಳೀಯ ಎಂಬಂತೆ ಅದೇ ತಾರೀಕಿನಂದು ಆನೆಯೀಗ ಮೃತಪಟ್ಟಿದೆ. 2023ರಲ್ಲಿ ಸೆರೆಯಾಗಿ ಪಳಗಿದ ಬಳಿಕ ಮಾರ್ತಾಂಡ ಶಾಂತ ಸ್ವಭಾವದಿಂದ ಇರುತ್ತಿತ್ತು ಎನ್ನಲಾಗಿದೆ. ಡಾ‌. ಚಿಟ್ಟಿಯಪ್ಪ ನೇತೃತ್ವದಲ್ಲಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ದುಬಾರೆ ಅರಣ್ಯದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ನಿರ್ಧರಿಸಲಾಗಿದೆ.

2022ರ ಜೂನ್ 29ರಂದು ಸಕಲೇಶಪುರ ತಾಲೂಕಿನ ಕರೆಗರ್ಜೆ ಬಳಿ ಮಾರ್ತಾಂಡ ಆನೆಯನ್ನು ಮೊದಲ ಬಾರಿ ಅರಣ್ಯ ಇಲಾಖೆ ಸೆರೆ ಹಿಡಿತ್ತು. ಆ ಬಳಿಕ ರೇಡಿಯೊ ಕಾಲರ್ ಅಳವಡಿಸಿ ಬಂಡಿಪುರಕ್ಕೆ ಬಿಡಲಾಗಿತ್ತು. ಒಂದೇ ತಿಂಗಳಲ್ಲಿ ನೂರಾರು ಕಿಲೋ ಮೀಟರ್ ಸಾಗಿ ಮರಳಿ ಹಾಸನಕ್ಕೆ ಮರಳಿದ್ದ ಮಾರ್ತಾಂಡ, ಕೆಲ ತಿಂಗಳು ಸೈಲೆಂಟ್ ಆಗಿ ಮರೆಯಾಗಿತ್ತು. ಆ ಬಳಿಕ ಭತ್ತ ಅರಸಿ ಊರೂರು ಅಲೆಯಲು ಶುರುಮಾಡಿದ್ದು, ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುರಿದು ಭತ್ತ ತಿನ್ನಲು ಶುರು ಮಾಡಿತ್ತು. ಹೀಗಾಗಿ ಎರಡನೇ ಬಾರಿಗೆ 2023ರ ಮೇ 19ರಂದು ಮಾರ್ತಾಂಡ ಆನೆಯನ್ನು ಸಕಲೇಶಪುರ ತಾಲೂಕಿನ ಒಸ್ಸೂರು ಬಳಿಯ ಕಾಫಿತೋಟದಲ್ಲಿ ಸೆರೆ ಹಿಡಿಯಲಾಗಿತ್ತು.

ಇದನ್ನೂ ಓದಿ: ಕಾದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಸಾವು

ಈಶ್ವರ ಖಂಡ್ರೆ ಸಂತಾಪ

ದುಬಾರೆ ಆನೆ ಶಿಬಿರದಲ್ಲಿ ಮಾರ್ತಾಂಡ ಆನೆ ಮೃತಪಟ್ಟಿರುವ ಬಗ್ಗೆ ಅರಣ್ಯ ಸಚಿವ ಈಶ್ವರ್​​ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅನಿರೀಕ್ಷಿತವಾದ ಮತ್ತು ಊಹಿಸಲೂ ಆಗದ ದುರ್ಘಟನೆಯಲ್ಲಿ ಒಬ್ಬ ಪ್ರವಾಸಿ ಮಹಿಳೆ ಮತ್ತು ಒಂದು ಆನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ . ಹಾಸನ ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿದ್ದ ಮಾರ್ತಾಂಡ ಆನೆ 4,500 ಕೆ.ಜಿ. ತೂಕವಿತ್ತು ಎಂದು ತಿಳಿಸಿದ್ದಾರೆ. ಅಲ್ಲದೆ ಹಾಸನ ಜಿಲ್ಲೆ ಯಸಳೂರಿನ ಬಳಿ 2014ರಲ್ಲಿ ಸೆರೆ ಹಿಡಿಯಲಾಗಿದ್ದ 26 ವರ್ಷದ ಕಂಜನ್ ಆನೆ 3 ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ಆದರೆ ಇನ್ನು ಮುಂದೆ ದಸರಾಗೆ ಈ ಆನೆಯನ್ನು ಬಳಸದಂತೆ ಸೂಚಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.

ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಸೂಚನೆ

ಇನ್ನು ದುಬಾರೆಯಲ್ಲಿ ಪ್ರವಾಸಿ‌ ಮಹಿಳೆ ಮತ್ತು ಸಾಕಾನೆ ಸಾವು ವಿಚಾರ ಸಂಬಂಧ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಸೂಚಿಸಿದ್ದಾರೆ. ಘಟನೆ ಕುರಿತು ಜಿಲ್ಲಾಡಳಿತದ ಜೊತೆ ಸಚಿವರು ಚರ್ಚಿಸಿದ್ದು, ಪ್ರವಾಸಿ ಮಾರ್ಗಸೂಚಿಯಲ್ಲಿ ಲೋಪವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರವಾಸಿಗರು ಅರಣ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ಕಾಡು ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಪ್ರವಾಸಿಗರ ಸುರಕ್ಷತೆ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಯ ಬೇಡ ನಾನಿದ್ದೀನಿ, ಪತ್ನಿ ಸಮಾಧಿ ಪಕ್ಕ ತನ್ನ ಸಮಾಧಿ ನಿರ್ಮಿಸಿಕೊಂಡ ಪತಿ – Kannada News | Heartbroken Husband Builds Resting Place Beside Wife’s Grave in Andhra Pradesh

ಕಡಪ, ಮೇ 19: ಬದುಕಿನ ಪಯಣದಲ್ಲಿ ಸಪ್ತಪದಿ ತುಳಿದು ಒಂದಾದ ನಾವು, ಸಾವಿನ ನಂತರವೂ ಬೇರೆಯಾಗಬಾರದು ಎಂಬ ಈ ಮಾತುಗಳನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚಿನ್ನ ಚೌಕ್‌ನ ಸಹಕಾರಿ ಕಾಲೋನಿ ನಿವಾಸಿ ಪಿ. ರಾಮಮೋಹನ್ ರಾಜು. ಕ್ಯಾನ್ಸರ್‌(Cancer)ನಿಂದ ಮೃತಪಟ್ಟ ಪತ್ನಿಯ ಮೇಲಿನ ಪ್ರೀತಿಗಾಗಿ, ಅವರು ಸ್ಮಶಾನದಲ್ಲೇ ಆಕೆಯ ಸಮಾಧಿಯ ಪಕ್ಕದಲ್ಲಿ ತನಗಾಗಿಯೂ ಒಂದು ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ.

ನಿವೃತ್ತ ಸರ್ಕಾರಿ ಉದ್ಯೋಗಿಯಾದ ಪಿ. ರಾಮಮೋಹನ್ ರಾಜು ಅವರು ಭವಿಷ್ಯ ನಿಧಿ (PF) ಕಚೇರಿಯಲ್ಲಿ ಅಧಿಕಾರಿಯಾಗಿ ಹಾಗೂ ಆಂಧ್ರಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಇವರಿಗೂ ಮತ್ತು ರಾಜ್ಯಲಕ್ಷ್ಮಿ ಅವರಿಗೂ 1978 ರಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಸುಮಾರು 33 ವರ್ಷಗಳ ಕಾಲ ಅತ್ಯಂತ ಸಾಮರಸ್ಯದಿಂದ ಸಂಸಾರ ನಡೆಸಿದ ಈ ಜೋಡಿಗೆ ವಿಧಿ 2011 ರಲ್ಲಿ ಕ್ರೂರ ಆಘಾತ ನೀಡಿತು. ರಾಮಮೋಹನ್ ಅವರ ಪತ್ನಿ ರಾಜ್ಯಲಕ್ಷ್ಮಿ ಕ್ಯಾನ್ಸರ್ ಕಾಯಿಲೆಯಿಂದಾಗಿ ನಿಧನರಾದರು.

ಪತ್ನಿ ತೀರಿಕೊಂಡ ನಂತರ ಮಕ್ಕಳ ಸಮ್ಮುಖದಲ್ಲಿ ಆಕೆಯ ಅಂತ್ಯಕ್ರಿಯೆ ನಡೆಸಿ, ಸಮಾಧಿ ನಿರ್ಮಿಸಲಾಯಿತು. ಆದರೆ, ಅರ್ಧಾಂಗಿಯ ಅಗಲಿಕೆಯನ್ನು ರಾಮಮೋಹನ್ ರಾಜು ಅವರಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೆಂಡತಿಯಿಲ್ಲದ ಜೀವನ ಅವರಿಗೆ ಶೂನ್ಯವೆನಿಸಿತು. ಸಾವು ನಮ್ಮನ್ನು ಕೇವಲ ದೈಹಿಕವಾಗಿ ಮಾತ್ರ ಬೇರ್ಪಡಿಸಿದೆ, ಆದರೆ ತನ್ನ ಆತ್ಮ ಸದಾ ಆಕೆಯೊಂದಿಗೇ ಇರಬೇಕೆಂದು ಅವರು ಬಯಸಿದರು. ಅದಕ್ಕಾಗಿಯೇ ಅವರು ಒಂದು ವಿಭಿನ್ನ ಹಾಗೂ ಭಾವನಾತ್ಮಕ ನಿರ್ಧಾರಕ್ಕೆ ಬಂದರು.

ರಾಮಮೋಹನ್ ರಾಜು ನೇರವಾಗಿ ಸ್ಮಶಾನದ ವ್ಯವಸ್ಥಾಪಕರನ್ನು ಸಂಪರ್ಕಿಸಿದರು. ನನ್ನ ಪತ್ನಿಯ ಸಮಾಧಿಯ ಪಕ್ಕದಲ್ಲೇ ನನಗೂ ಸ್ವಲ್ಪ ಜಾಗವನ್ನು ನೀಡಿ, ನಾನು ಬದುಕಿರುವಾಗಲೇ ನನಗಾಗಿ ಅಲ್ಲಿ ಸಮಾಧಿಯನ್ನು ನಿರ್ಮಿಸಿಕೊಳ್ಳುತ್ತೇನೆ ಎಂದು ವಿನಂತಿಸಿದರು. ಅವರ ಅಪರಿಮಿತ ಪ್ರೀತಿಯನ್ನು ಕಂಡು ಮನಕರಗಿದ ಸ್ಮಶಾನದ ಆಡಳಿತ ಮಂಡಳಿ ಅದಕ್ಕೆ ಒಪ್ಪಿಗೆ ನೀಡಿತು. ತಕ್ಷಣವೇ ಅವರು ತಮಗಾಗಿ ಹೆಂಡತಿಯ ಸಮಾಧಿಯ ಪಕ್ಕದಲ್ಲೇ ಮತ್ತೊಂದು ಸಮಾಧಿಯನ್ನು ನಿರ್ಮಿಸಿಕೊಂಡರು.

ಮತ್ತಷ್ಟು ಓದಿ: ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವು! ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ

ಕೇವಲ ಸಮಾಧಿ ನಿರ್ಮಿಸುವುದಷ್ಟೇ ಅಲ್ಲ, ತಾವು ಮರಣ ಹೊಂದಿದ ನಂತರ ಯಾವುದೇ ಅಡೆತಡೆಯಿಲ್ಲದೆ ಹೆಂಡತಿಯ ಪಕ್ಕದಲ್ಲೇ ತನ್ನನ್ನು ಮಲಗಿಸಬೇಕು ಎಂದು ತಮ್ಮ ನಾಲ್ಕು ಹೆಣ್ಣುಮಕ್ಕಳನ್ನು ಒಪ್ಪಿಸಿ, ಅದಕ್ಕಾಗಿ ತಮ್ಮ ಪಿಂಚಣಿ ಹಣದಿಂದ ಬರೋಬ್ಬರಿ 4 ಲಕ್ಷ ರೂಪಾಯಿಗಳನ್ನು ತೆಗೆದಿಟ್ಟಿದ್ದಾರೆ.

ಇದಲ್ಲದೆ, ತಾವು ಸತ್ತ ನಂತರ ತಮ್ಮ ಅಂತ್ಯಕ್ರಿಯೆಯು ಯಾವುದೇ ಅಳುಕಿಲ್ಲದೆ,ಸಾಂಪ್ರದಾಯಿಕ ಸಮಾರಂಭದಂತೆ ಸಾಗಬೇಕು ಎಂದು ತಮ್ಮ ಆಪ್ತ ಸ್ನೇಹಿತರೊಬ್ಬರಿಗೆ 50 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಿ ಜವಾಬ್ದಾರಿ ವಹಿಸಿದ್ದಾರೆ!

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಾಜ್ ಮಹಲ್ ಕಟ್ಟಿದವರ ನಡುವೆ, ತನ್ನ ನಿವೃತ್ತಿಯ ಹಣದಲ್ಲಿ ಹೆಂಡತಿಯ ಸಮಾಧಿಯ ಪಕ್ಕದಲ್ಲೇ ತನಗೊಂದು ಸಮಾಧಿ ನಿರ್ಮಿಸಿಕೊಂಡ ಈ ಸಾಮಾನ್ಯ ಅಧಿಕಾರಿಯ ಕಥೆ, ಕಡಪ ಜಿಲ್ಲೆಯಾದ್ಯಂತ ಮನೆಮಾತಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಿವರಾಜ್ ಕುಮಾರ್ ಗೀತಾ ದಂಪತಿಗಳ ವಿವಾಹ ವಾರ್ಷಿಕೋತ್ಸವ: ಇಲ್ಲಿವೆ ಚಿತ್ರಗಳು

Source link

ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ: ಯಶ್ ಸಿನಿಮಾದ ತೆರೆಹಿಂದೆ 10 ಸಾವಿರಕ್ಕೂ ಹೆಚ್ಚು ತಂತ್ರಜ್ಞರು – Kannada News | Yash starrer Ramayana is first Indian movie to have 10000 crew members

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಚಿತ್ರವಾಗಿ ‘ರಾಮಾಯಣ’ (Ramayana) ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ನಟ ಯಶ್ (Yash) ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ. ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾವನ್ನು ಭಾರಿ ದೊಡ್ಡ ಮಟ್ಟದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಅತಿ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗುತ್ತಿದೆ.

ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ, ಈ ಒಂದು ಸಿನಿಮಾಕ್ಕಾಗಿ ವಿಶ್ವದಾದ್ಯಂತ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ತಂತ್ರಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಅತ್ಯಂತ ದೊಡ್ಡ ತಾಂತ್ರಿಕ ತಂಡವನ್ನು ಹೊಂದಿದ ಮೊದಲ ಸಿನಿಮಾ ಇದಾಗಿದೆ. ಯಶ್ ಅವರು ಈ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೇ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ.

‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ‘ಡಿಎನ್‌ಇಜಿ’ ಮತ್ತು ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಸಂಸ್ಥೆಗಳು ಜಂಟಿಯಾಗಿ ‘ರಾಮಾಯಣ’ ಸಿನಿಮಾವನ್ನು ನಿರ್ಮಿಸುತ್ತಿವೆ. ಭಾರತದ ಸಾಂಪ್ರದಾಯಿಕ ಕಥಾ ಶೈಲಿಗೆ ಜಾಗತಿಕ ಮಟ್ಟದ ಅದ್ಭುತ ತಂತ್ರಜ್ಞಾನದ ಸ್ಪರ್ಶ ನೀಡಿ, ಈ ಚಿತ್ರವನ್ನು ಎರಡು ಭಾಗಗಳ ದೃಶ್ಯ ವೈಭವವಾಗಿ ಬೆಳ್ಳಿತೆರೆಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

ಈ ಬೃಹತ್ ತಂಡದಲ್ಲಿ ವಿಶ್ವದ ಅತ್ಯುತ್ತಮ ಪ್ರೊಡಕ್ಷನ್ ಡಿಸೈನರ್‌ಗಳು, ವಿಷುವಲ್ ಎಫೆಕ್ಟ್ಸ್ (VFX) ಪರಿಣಿತರು, ಸಾಹಸ ನಿರ್ದೇಶಕರು, ವಸ್ತ್ರ ವಿನ್ಯಾಸಕರು ಸೇರಿದಂತೆ ಹಲವು ಪ್ರಮುಖ ತಾಂತ್ರಿಕ ವಿಭಾಗಗಳ ಜಾಗತಿಕ ತಜ್ಞರು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಮಾಯಣದ ಭವ್ಯ ಜಗತ್ತನ್ನು ಮರುಸೃಷ್ಟಿಸಲು ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಇದು ಕೇವಲ ಒಂದು ಸಾಧಾರಣ ಚಿತ್ರವಾಗಿರದೆ ಚಿತ್ರಮಂದಿರಗಳಲ್ಲಿ ಒಂದು ಮೈಲಿಗಲ್ಲು ಎನಿಸುವಂತಹ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಅವಧಿ 6 ಗಂಟೆ; ಚಿತ್ರತಂಡದ ಎದುರಿಗೆ ಇದೆ ದೊಡ್ಡ ಸವಾಲು

ಈ ಚಿತ್ರದ ಮತ್ತೊಂದು ದೊಡ್ಡ ವಿಶೇಷತೆಯೆಂದರೆ, ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ದೃಶ್ಯ ವೈಭವದ ಸಂಸ್ಥೆಯಾದ ‘DNEG’ ಜೊತೆಗಿನ ಸಹಭಾಗಿತ್ವ. ಈ ಹಿಂದೆ ಹಲವು ಅಂತಾರಾಷ್ಟ್ರೀಯ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಕೆಲಸ ಮಾಡಿರುವ ಈ ಸಂಸ್ಥೆಯು, ರಾಮಾಯಣದ ಕಥೆಯನ್ನು ಇಂದಿನ ಆಧುನಿಕ ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವಂತೆ ಅದ್ಭುತ ವಿಷುವಲ್ ಎಫೆಕ್ಟ್ಸ್ ಮೂಲಕ ಪ್ರಸ್ತುತಪಡಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಸಾಧನಾ ಸಮಾವೇಶದಲ್ಲಿ ಪ್ರಮಾಣಪತ್ರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ – Kannada News | Tumakuru Creates Guinness Record by Uploading 21,529 Land Titles; CM Siddaramaiah Receives Certificate

ತುಮಕೂರು, ಮೇ 19: ತುಮಕೂರು ಜಿಲ್ಲೆಯು 21,529 ಹಕ್ಕುಪತ್ರಗಳನ್ನು ಯಶಸ್ವಿಯಾಗಿ ಅಪ್‌ಲೋಡ್ ಮಾಡುವ ಮೂಲಕ ಗಿನ್ನಿಸ್​ ವಿಶ್ವ ದಾಖಲೆಯಲ್ಲಿ ನೋಂದಾಯಿತವಾಗಿದೆ. ಈ ಅಸಾಮಾನ್ಯ ಸಾಧನೆಗಾಗಿ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ಸ್‌ನ ಪ್ರತಿನಿಧಿಗಳಾದ ಮಿಸ್ಟರ್ ಸ್ವಪ್ನಿಲ್ ಡಂಗರಿಕರ್ ಮತ್ತು ಶ್ರೀಮತಿ ಶೈಲಜಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಹಸ್ತಾಂತರಿಸಿದರು. ನಂತರ, ಮುಖ್ಯಮಂತ್ರಿಗಳು ಈ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ ಅವರಿಗೆ ಹಸ್ತಾಂತರಿಸಿದರು. ಕಂದಾಯ ಗ್ರಾಮಗಳ ಗುರುತಿಸುವಿಕೆ, ಹಕ್ಕುಪತ್ರಗಳ ಸಿದ್ಧತೆ ಮತ್ತು ಇ-ಸ್ವತ್ತು ನೋಂದಣಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 10 ತಾಲೂಕುಗಳ ತಹಸೀಲ್ದಾರ್‌ಗಳಿಗೆ ಸರ್ಕಾರದಿಂದ ಪ್ರಶಂಸಾಪತ್ರಗಳನ್ನೂ ಈ ವೇಳೆ ವಿತರಿಸಲಾಯಿತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇದು ಮಾನ್ಯತಾ ಟೆಕ್ ಪಾರ್ಕ್ ಅಲ್ಲ, ಮಾನ್ಯತಾ ವಾಟರ್ ಪಾರ್ಕ್! ಮಳೆಯಿಂದ ಹೊಳೆಯಂತಾದ ರಸ್ತೆಯ ವಿಡಿಯೋ ವೈರಲ್ – Kannada News | Manyata Water Park? Netizens Troll Bengaluru’s Premium Tech Hub After Heavy Rains Flood Infrastructure, Viral Video

ಮಳೆಯಿಂದ ಹೊಳೆಯಂತಾದ ಮಾನ್ಯತಾ ಟೆಕ್ ಪಾರ್ಕ್ ರಸ್ತೆImage Credit source: @karnatakaportf

ಬೆಂಗಳೂರು, ಮೇ 19: ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರಿನ (Bengaluru) ಜಾಗತಿಕ ಐಟಿ ಇಮೇಜ್‌ಗೆ ಸೋಮವಾರ ಸಂಜೆ ಸುರಿದ ಭಾರಿ ಮಳೆ ಮತ್ತೊಮ್ಮೆ ಮಸಿ ಬಳಿದಿದೆ. ದೇಶದ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಟೆಕ್ ಪಾರ್ಕ್‌ಗಳಲ್ಲಿ ಒಂದಾದ ಹೆಣ್ಣೂರು ರಸ್ತೆಯ ‘ಮಾನ್ಯತಾ ಟೆಕ್ ಪಾರ್ಕ್’ ಏರಿಯಾವು ಕೇವಲ ಒಂದು ಸಂಜೆಯ ಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ. ಕಚೇರಿ ಮುಗಿಸಿ ಮನೆಗೆ ಹೊರಟ ಸಾವಿರಾರು ಐಟಿ ಉದ್ಯೋಗಿಗಳು ರಸ್ತೆಯಲ್ಲಿ ಮೊಣಕಾಲುದ್ದ ನಿಂತಿದ್ದ ನೀರಿನಲ್ಲಿ ಪರದಾಡಿದ್ದಾರೆ.

ಸದ್ಯ, ಮಾನ್ಯತಾ ಟೆಕ್ ಪಾರ್ಕ್‌ನ ಈ ದುಸ್ಥಿತಿಯ ವೀಡಿಯೊ ‘ಕರ್ನಾಟಕ ಪೋರ್ಟ್‌ಫೋಲಿಯೋ’ ಎಕ್ಸ್​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಇದನ್ನು ‘ಮಾನ್ಯತಾ ಟೆಕ್ ಪಾರ್ಕ್ ಅಲ್ಲ, ಮಾನ್ಯತಾ ವಾಟರ್ ಪಾರ್ಕ್’ ಅಥವಾ ‘ಮಾನ್ಯತಾ ಸರೋವರ’ ಎಂದು ಲೇವಡಿ ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಜಿಬಿಎ ಆಡಳಿತ ನಿರ್ಲಕ್ಷ್ಯದ ವಿರುದ್ಧ ಜನಾಕ್ರೋಶ.
  • ಐಟಿ ಉದ್ಯೋಗಿಗಳಿಂದ ತೀವ್ರ ಅಸಮಾಧಾನ.
  • ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ.

‘ಗ್ಲಾಸ್ ಬಿಲ್ಡಿಂಗ್ ಇದ್ದರೆ ಸಾಲದು, ಸರಿಯಾದ ರಸ್ತೆ ಇರಬೇಕು’

ಪ್ರತಿ ವರ್ಷ ಮುಂಗಾರು ಆರಂಭವಾಗುವ ಮುನ್ನವೇ ಬೆಂಗಳೂರಿನಲ್ಲಿ ಇದೇ ಅವಸ್ಥೆ ಮರುಕಳಿಸುತ್ತಿದೆ. ಮಳೆ ಬಂದ ತಕ್ಷಣ ರಸ್ತೆಗಳು ಕಣ್ಮರೆಯಾಗುತ್ತವೆ, ಟ್ರಾಫಿಕ್ ವ್ಯವಸ್ಥೆ ಸಂಪೂರ್ಣ ಕುಸಿಯುತ್ತದೆ ಮತ್ತು ಸಾರ್ವಜನಿಕರು ರಸ್ತೆಯಲ್ಲೇ ಗಂಟೆಗಟ್ಟಲೆ ನರಕಯಾತನೆ ಅನುಭವಿಸುತ್ತಾರೆ. ಕೇವಲ ದೊಡ್ಡ ದೊಡ್ಡ ಗ್ಲಾಸ್ ಬಿಲ್ಡಿಂಗ್‌ಗಳು ಹಾಗೂ ಆಕರ್ಷಕ ಕಚೇರಿಗಳನ್ನು ನಿರ್ಮಿಸಿದರೆ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ, ಅದಕ್ಕೆ ತಕ್ಕಂತೆ ಸೂಕ್ತ ಒಳಚರಂಡಿ ಮತ್ತು ಪ್ರವಾಹ ನಿರ್ವಹಣಾ ವ್ಯವಸ್ಥೆ ಇರಬೇಕು ಎಂದು ಉದ್ಯೋಗಿಗಳು ಆಗ್ರಹಿಸಿರುವುದಾಗಿ ‘ಕರ್ನಾಟಕ ಪೋರ್ಟ್‌ಫೋಲಿಯೋ’ ಎಕ್ಸ್​​​​ ಖಾತೆಯಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋ

ದೇಶದ ನಂಬರ್ ಒನ್ ಐಟಿ ಹಬ್‌ನ ಸ್ಥಿತಿಯೇ ಹೀಗಾದರೆ, ಇನ್ನು ನಗರದ ಉಳಿದ ಸಾಮಾನ್ಯ ಪ್ರದೇಶಗಳ ಗತಿ ಏನು ಎಂದು ಸಾರ್ವಜನಿಕರು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Congress Sadhana Samavesha Live: ತುಮಕೂರಿನಲ್ಲಿ ಸರ್ಕಾರದಿಂದ ಸಾಧನಾ ಸಮಾವೇಶ ನೇರಪ್ರಸಾರ – Kannada News | Karnataka Congress Govt’s 3rd Year Sadhana Samavesha Today in Tumakuru

ತುಮಕೂರು, ಮೇ 19: ಇಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ 3ನೇ ವರ್ಷದ ಭವ್ಯ ಸಾಧನಾ ಸಮಾವೇಶ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಲಿದೆ.

ಈ ಮಹಾವೇದಿಕೆಯಲ್ಲಿ ಜಿಲ್ಲೆಯ 1.52 ಲಕ್ಷ ಫಲಾನುಭವಿಗಳಿಗೆ ಇ-ಖಾತಾ, ಹಕ್ಕುಪತ್ರ ಹಾಗೂ ನಿವೇಶನ ಪತ್ರಗಳು ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಜೊತೆಗೆ, 600 ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ಹಾಗೂ 687 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಲಿದೆ. ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, 3 ಸಾವಿರಕ್ಕೂ ಹೆಚ್ಚು ಬಸ್‌ಗಳು ಹಾಗೂ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ನೇರಪ್ರಸಾರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ಜಾತಿ ಯಾವುದೆಂದು ಗೊತ್ತೇ’; ಸಚಿವ ಗಡ್ಕರಿಗೆ ನಟ ನಾನಾ ಪಾಟೇಕರ್ ನೇರ ಪ್ರಶ್ನೆ – Kannada News | Nana Patekar Slams Caste Politics: Humanity is Your Only Religion at Jalakranti

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ (Nana Patekar) ತಮ್ಮ ನೇರ ನಡೆ-ನುಡಿಗೆ ಹೆಸರುವಾಸಿ. ಇತ್ತೀಚೆಗೆ ನಾಗ್ಪುರದ ರೇಷ್ಮಿಬಾಗ್‌ನಲ್ಲಿ ನಡೆದ ‘ಜಲಕ್ರಾಂತಿ’ ಸಮಾವೇಶದಲ್ಲಿ ಅವರು ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ಮತ್ತು ಧರ್ಮದ ರಾಜಕಾರಣದ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ. ವೇದಿಕೆಯ ಮೇಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ, ‘ಗಡ್ಕರಿ ಸಾಹೇಬರೇ, ನನ್ನ ಜಾತಿ ಯಾವುದು ಎಂದು ನಿಮಗೆ ಗೊತ್ತೇ?’ ಎಂದು ನೇರವಾಗಿ ಪ್ರಶ್ನಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಾನಾ ಪಾಟೇಕರ್, ‘ನಾನು ಯಾರಿಗೂ ನನ್ನ ಜಾತಿಯನ್ನು ಹೇಳಿಲ್ಲ, ಅದರ ಅಗತ್ಯವೂ ನನಗಿಲ್ಲ. ‘ಮಾನವ ಜನ್ಮವೇ ನಿನ್ನ ಜಾತಿ, ಮಾನವೀಯತೆಯೇ ನಿನ್ನ ಧರ್ಮ’ ಎಂದು ನನ್ನ ತಾಯಿ ನನಗೆ ಬಾಲ್ಯದಲ್ಲೇ ಕಲಿಸಿದ್ದರು. ಸಮಾಜದಲ್ಲಿನ ಈ ಜಾತಿ ಪದ್ಧತಿಯು ಕೇವಲ ಜ್ಞಾನ ಮತ್ತು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಕೊನೆಗೊಳ್ಳಲು ಸಾಧ್ಯ’ ಎಂದು ಭಾಷಣದಲ್ಲಿ ಮಾರ್ಮಿಕವಾಗಿ ನುಡಿದರು.

ಇಂದು ಸಮಾಜ ಮತ್ತು ರಾಜಕೀಯದಲ್ಲಿ ಜಾತಿವಾದ ಹೆಚ್ಚುತ್ತಿರುವುದಕ್ಕೆ ನಾನಾ ಪಾಟೇಕರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ‘ಒಬ್ಬ ವ್ಯಕ್ತಿಯ ಗುರುತನ್ನು ಆತನ ಗುಣ ಅಥವಾ ಸಾಧನೆಗಳಿಂದ ಅಳೆಯದೆ, ಆತ ಹುಟ್ಟಿದ ಜಾತಿಯಿಂದ ನಿರ್ಧರಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ನಾವೆಲ್ಲರೂ ಮನುಷ್ಯರಾಗಿ ಒಂದಾಗದಿದ್ದರೆ ಈ ಜಾತಿವಾದದ ಗೋಡೆಗಳನ್ನು ಉರುಳಿಸಲು ಸಾಧ್ಯವಿಲ್ಲ’ ಎಂದು ಕಟುವಾಗಿ ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಾನಾ ಪಾಟೇಕರ್ ಮುಕ್ತಕಂಠದಿಂದ ಶ್ಲಾಘಿಸಿದರು. ರಾಜಕೀಯದಲ್ಲಿ ನಿತಿನ್ ಗಡ್ಕರಿ ಅವರು ಅಜಾತಶತ್ರು ಎಂದು ಬಣ್ಣಿಸಿದ ನಟ, ನೀರಿನ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ‘ನಾಮ್ ಫೌಂಡೇಶನ್’ ಮತ್ತು ಆಮಿರ್ ಖಾನ್ ಅವರ ‘ಪಾನಿ ಫೌಂಡೇಶನ್’ ಕಾರ್ಯಗಳನ್ನು ಶ್ಲಾಘಿಸಿದರು.

ಇದನ್ನೂ ಓದಿ: ‘ನನ್ನ ಜೀವನ, ನನ್ನದೇ ಆದ ರೀತಿಯಲ್ಲಿ ಬದುಕಲು ಬಿಡಿ’; ನಟನೆಯಿಂದ ನಿವೃತ್ತಿ ಘೋಷಿಸಿದ ನಾನಾ ಪಾಟೇಕರ್

ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ನಾನಾ ಪಾಟೇಕರ್ ಇತ್ತೀಚೆಗೆ ನಟನೆಗೆ ವಿದಾಯ ಹೇಳುವ ಸುಳಿವು ನೀಡಿ ಸುದ್ದಿಯಾಗಿದ್ದರು. ಇತ್ತೀಚಿನ ತಮ್ಮ ಸಿನಿಮಾಗಳ ಪ್ರಚಾರದ ವೇಳೆ ಮಾತನಾಡಿದ್ದ ಅವರು, ತಮಗೆ ಈಗ ವಯಸ್ಸಾಗುತ್ತಿರುವುದರಿಂದ ಮತ್ತು ಚಿತ್ರರಂಗದಲ್ಲಿ ಹೊಸ ತಲೆಮಾರಿನ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಬೇಕಿರುವುದರಿಂದ ತಾವು ಶೀಘ್ರದಲ್ಲೇ ನಟನೆಯಿಂದ ಸಂಪೂರ್ಣವಾಗಿ ದೂರ ಸರಿಯುವುದಾಗಿ ಹೇಳಿ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮನೆ ಬಾಗಿಲಲ್ಲೇ ಮಲಗಿತ್ತು 10 ಅಡಿ ಕಾಳಿಂಗ ಸರ್ಪ! – Kannada News | 10 Foot King Cobra Found Sleeping Outside House Door in Mudigere

ಚಿಕ್ಕಮಗಳೂರು, ಮೇ 19: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆ. ತಲಗೂರು ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಗ್ರಾಮದ ಮಂಜುನಾಥ್ ಆಚಾರ್ ಎಂಬುವವರ ಮನೆ ಬಾಗಿಲಿಗೆ ತಂಪಾದ ನೆರಳು ಹುಡುಕಿಕೊಂಡು ಬಂದ ಈ ಹಾವು, ಹೊಸ್ತಿಲಲ್ಲೇ ತಣ್ಣಗೆ ಮಲಗಿತ್ತು. ಮುಂಜಾನೆ ಇದನ್ನು ಕಂಡ ಮನೆಯವರು ಭಯಭೀತರಾಗಿದ್ದಾರೆ.

ಸುಮಾರು 10 ಅಡಿ ಉದ್ದವಿದ್ದ ಈ ಬೃಹತ್ ಕಾಳಿಂಗ ಸರ್ಪವನ್ನು ಕಂಡು ಗ್ರಾಮಸ್ಥರು ತಕ್ಷಣವೇ ಉರಗ ತಜ್ಞ ಸ್ನೇಕ್ ಆರೀಫ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆರೀಫ್, ಹಾವನ್ನು ಜಾಗರೂಕತೆಯಿಂದ ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದ್ದು, ಸದ್ಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link