All posts by nagaraj11081993

ಚಿಕನ್ ನೆಕ್ ಕಾರಿಡಾರ್ ಎಂದರೇನು? ಸಿಲಿಗುರಿಗೆ ಈ ಹೆಸರಿನಿಂದ ಕರೆಯುವುದೇಕೆ? – Kannada News | What is Chicken Neck Corridor in Indian Map why it is Important in Border Security Siliguri Corridor News

ನವದೆಹಲಿ, ಮೇ 19: ‘ಚಿಕನ್ ನೆಕ್’ (Chicken Neck) ಕಾರಿಡಾರ್ ಎಂಬುದಕ್ಕೆ ಅಧಿಕೃತವಾಗಿ ‘ಸಿಲಿಗುರಿ ಕಾರಿಡಾರ್’ (Siliguri Corridor) ಎಂದು ಕರೆಯಲಾಗುತ್ತದೆ. ಇದು ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಅತ್ಯಂತ ಕಿರಿದಾದ ಭೂಭಾಗವಾಗಿದೆ. ಇದನ್ನು ಭಾರತದ ಭೂಪಟದಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಆಯಕಟ್ಟಿನ ಮಿಲಿಟರಿ ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಇದು ಪಶ್ಚಿಮ ಬಂಗಾಳದ ಸಿಲಿಗುರಿ ನಗರದ ಸುತ್ತಲಿರುವ ಪ್ರದೇಶವಾಗಿದೆ.

ಚಿಕನ್ ನೆಕ್ ಎಂಬ ಹೆಸರು ಬಂದಿದ್ದೇಕೆ?:

ನೀವೇನಾದರೂ ಭಾರತದ ಭೂಪಟವನ್ನು ನೋಡಿದರೆ ಈ ಕಿರಿದಾದ ಭೂಭಾಗವು ಕೋಳಿಯ ಕತ್ತಿನಂತೆ ಕಾಣುತ್ತದೆ. ಕೋಳಿಯ ಕುತ್ತಿಗೆಯ ರೀತಿ ತೆಳುವಾದ ಮತ್ತು ಸೂಕ್ಷ್ಮವಾದ ಗಡಿಯನ್ನು ಹೊಂದಿರುವುದರಿಂದ ಈ ಭಾಗವನ್ನು ಚಿಕನ್ ನೆಕ್ ಕಾರಿಡಾರ್ ಎಂದು ಕರೆಯಲಾಗುತ್ತದೆ. ಇದು ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುತ್ತದೆ. ಈ ಚಿಕನ್ ನೆಕ್ ಕಾರಿಡಾರ್​ನ ಅತ್ಯಂತ ಕಿರಿದಾದ ಭಾಗವು ಕೇವಲ 17 ರಿಂದ 22 ಕಿಲೋಮೀಟರ್ ಮಾತ್ರ ಅಗಲವಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲೂ 2 ಚಿಕನ್ ನೆಕ್ ಕಾರಿಡಾರ್ ಇದೆ; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಎಚ್ಚರಿಕೆ

ಈ ಪ್ರದೇಶವು ಅತ್ಯಂತ ಸೂಕ್ಷ್ಮವಾಗಿದೆ. ಏಕೆಂದರೆ ಇದರ ಪಶ್ಚಿಮಕ್ಕೆ ನೇಪಾಳ, ದಕ್ಷಿಣಕ್ಕೆ ಬಾಂಗ್ಲಾದೇಶ, ಉತ್ತರಕ್ಕೆ ಭೂತಾನ್ ಹಾಗೂ ಚೀನಾ (ಟಿಬೆಟ್‌ನ ಚುಂಬಿ ಕಣಿವೆ) ದೇಶಗಳಿವೆ. ಹೀಗಾಗಿ, ಈ ಸಿಲಿಗುರಿ ಅಥವಾ ಚಿಕನ್ ನೆಕ್ ಕಾರಿಡಾರ್ ಭಾರತದ ಪಾಲಿಗೆ ಅತ್ಯಂತ ಮಹತ್ವದ ಮತ್ತು ನಿರ್ಣಾಯಕ ಸ್ಥಳವಾಗಿದೆ. ಇದೇ ಕಾರಿಡಾರ್​​ನ 120 ಎಕರೆ ಜಾಗವನ್ನು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ.

ಭಾರತದ ಮುಖ್ಯ ಭೂಭಾಗದಿಂದ ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯದ 8 ರಾಜ್ಯಗಳಿಗೆ ಹೋಗಲು ಇರುವ ಏಕೈಕ ರಸ್ತೆ ಮತ್ತು ರೈಲ್ವೆ ಮಾರ್ಗವೆಂದರೆ ಅದು ಚಿಕನ್ ನೆಕ್ ಕಾರಿಡಾರ್. ಎಲ್ಲಾ ತೈಲ ಪೈಪ್‌ಲೈನ್‌ಗಳು, ಇಂಟರ್ನೆಟ್ ಕೇಬಲ್‌ಗಳು ಮತ್ತು ಸೇನಾ ವಾಹನಗಳು ಇದೇ 22 ಕಿ.ಮೀ ಕಿರಿದಾದ ಮಾರ್ಗದ ಮೂಲಕವೇ ಹಾದುಹೋಗಬೇಕು. ಒಂದುವೇಳೆ ಯುದ್ಧದ ಸಮಯದಲ್ಲಿ ಚೀನಾ ದೇಶವು ಈ 22 ಕಿ.ಮೀ ಭಾಗದ ಮೇಲೆ ದಾಳಿ ನಡೆಸಿ ಇದನ್ನು ವಶಪಡಿಸಿಕೊಂಡರೆ, ಇಡೀ ಈಶಾನ್ಯ ಭಾರತವು ದೇಶದ ಉಳಿದ ಭಾಗದಿಂದ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಆದ್ದರಿಂದ ಭಾರತೀಯ ಸೇನೆ ಇಲ್ಲಿ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ.

ಇದನ್ನೂ ಓದಿ: ಚಿಕನ್ ನೆಕ್ ಕಾರಿಡಾರ್​​ನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳದ ಸಿಎಂ

ಈ ಚಿಕನ್ ನೆಕ್ ಕಾರಿಡಾರ್‌ನಲ್ಲಿರುವ ಸುಮಾರು 120 ಎಕರೆ ಆಯಕಟ್ಟಿನ ಭೂಮಿಯನ್ನು ರಕ್ಷಣಾತ್ಮಕ ಕಾಮಗಾರಿಗಳಿಗಾಗಿ ಪಶ್ಚಿಮ ಬಂಗಾಳ ಸರ್ಕಾರವು ನೇರವಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ. ಇಲ್ಲಿನ ಉತ್ತರ ಬಂಗಾಳದ 7 ಪ್ರಮುಖ ಹೆದ್ದಾರಿಗಳ ನಿರ್ವಹಣೆಯನ್ನು ಕೇಂದ್ರದ ಏಜೆನ್ಸಿಗಳಾದ NHAI ಮತ್ತು NHIDCLಗೆ ವಹಿಸಿಕೊಡಲಾಗಿದೆ.

1947ರ ಭಾರತ ವಿಭಜನೆಗೂ ಮುನ್ನ ಈ ಚಿಕನ್ ನೆಕ್ ಕಾರಿಡಾರ್​​ನ ಸಮಸ್ಯೆ ಇರಲಿಲ್ಲ. ಆದರೆ ದೇಶ ವಿಭಜನೆಯಾಗಿ ‘ಪೂರ್ವ ಪಾಕಿಸ್ತಾನ’ (ಈಗಿನ ಬಾಂಗ್ಲಾದೇಶ) ಸೃಷ್ಟಿಯಾದಾಗ ಭಾರತದ ಪಶ್ಚಿಮ ಬಂಗಾಳದ ಬಹುದೊಡ್ಡ ಭೂಭಾಗ ಅದರ ಪಾಲಾಯಿತು. ಇದರಿಂದಾಗಿ ಈಶಾನ್ಯ ರಾಜ್ಯಗಳಿಗೆ ಹೋಗಲು ಭಾರತಕ್ಕೆ ಉಳಿದುಕೊಂಡಿದ್ದು ಸಿಲಿಗುರಿ ಸುತ್ತಮುತ್ತಲಿನ ಈ ಕಿರಿದಾದ ಸಣ್ಣ ಭೂಮಾರ್ಗ ಮಾತ್ರ. ಅದಕ್ಕಾಗಿಯೇ, ಭಾರತೀಯ ಸೇನೆಯು ಈ ‘ಚಿಕನ್ ನೆಕ್’ ಅನ್ನು ರಕ್ಷಿಸಲು ಸದಾ ಅಲ್ಲಿ ಅತ್ಯಂತ ಬಲಿಷ್ಠವಾದ ಮಿಲಿಟರಿ ಪಡೆಗಳನ್ನು ನಿಯೋಜಿಸಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:01 pm, Tue, 19 May 26

Source link

ಗಂಡನಿಂದ ದೂರಾದ ಬೆನ್ನಲ್ಲೇ ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್ – Kannada News | Mouni Roy attends Cannes Film Festival 2026 after separation from Suraj Nambiar

ತಮ್ಮ ವೈಯಕ್ತಿಕ ಜೀವನದ ಏರಿಳಿತಗಳ ನಡುವೆಯೂ ಬಾಲಿವುಡ್ ನಟಿ ಮೌನಿ ರಾಯ್ (Mouni Roy) ವೃತ್ತಿಜೀವನಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಉದ್ಯಮಿ ಪತಿ ಸೂರಜ್ ನಂಬಿಯಾರ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದ ಕೇವಲ ಕೆಲವೇ ದಿನಗಳಲ್ಲಿ, ಮೌನಿ ರಾಯ್ ಪ್ರತಿಷ್ಠಿತ ‘ಕಾನ್ ಫಿಲ್ಮ್ ಫೆಸ್ಟಿವಲ್’ (Cannes Film Festival) ರೆಡ್ ಕಾರ್ಪೆಟ್ ಮೇಲೆ ಮಿಂಚಲು ಫ್ರಾನ್ಸ್‌ಗೆ ಹಾರಿದ್ದಾರೆ. ಅಲ್ಲಿಂದ ಕೆಲವು ಸುಂದರವಾದ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

ಫ್ರೆಂಚ್ ರಿವೇರಾದಿಂದ ತಮ್ಮ ಗ್ಲಾಮರಸ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಮೌನಿ ರಾಯ್, ‘ಕಾನ್ ಮತ್ತು ಗೊಂದಲಗಳು! ಶುಭೋದಯ’ ಎಂದು ಕ್ಯಾಪ್ಷನ್ ನೀಡಿದಾರೆ. ಈ ಮೂಲಕ ಯಾವುದೇ ಪರಿಸ್ಥಿತಿಯಲ್ಲೂ ‘ಶೋ ಮಸ್ಟ್ ಗೋ ಆನ್’ ಎಂಬುದನ್ನು ನಟಿ ಸಾಬೀತುಪಡಿಸಿದ್ದಾರೆ. ಅವರ ಫೋಟೋಗಳು ವೈರಲ್ ಆಗುತ್ತಿವೆ.

‘ಬ್ರಹ್ಮಾಸ್ತ್ರ’ ಸಿನಿಮಾ ಖ್ಯಾತಿಯ ಮೌನಿ ರಾಯ್, ಕಾನ್ ಸಿನಿಮೋತ್ಸವದಲ್ಲಿ ಕಪ್ಪು ಮತ್ತು ಬಿಳುಪು ಉಡುಪಿನಲ್ಲಿ ಕಣ್ಮನ ಸೆಳೆದಿದ್ದಾರೆ. ಅವರು ಬಿಳಿ ಬಣ್ಣದ ಹಾಲ್ಟರ್-ಶೈಲಿಯ ಕಾಲರ್ ಹೊಂದಿರುವ ಕಪ್ಪು ಬಣ್ಣದ ಮಿನಿ ಡ್ರೆಸ್ ಧರಿಸಿದ್ದಾರೆ. ಫ್ರಾನ್ಸ್‌ನ ತಂಪಾದ ಹವಾಮಾನಕ್ಕೆ ತಕ್ಕಂತೆ ಈ ಡ್ರೆಸ್ ಜೊತೆಗೆ ಸುಂದರವಾದ ಕೋಟ್, ಕಪ್ಪು ಬಣ್ಣದ ಸ್ಟಾಕಿಂಗ್ಸ್ ಹಾಗೂ ಬೂಟುಗಳನ್ನು ಧರಿಸಿ ಹೈ-ಫ್ಯಾಶನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮೌನಿ ರಾಯ್ ಅವರು ತಮ್ಮ ಹೊಸ ಸಿನಿಮಾ ‘ಬಾಂಬೆ ಸ್ಟೋರೀಸ್’ ಪ್ರದರ್ಶನಕ್ಕಾಗಿ ಸಹ-ನಟಿ ಅನುಪ್ರಿಯಾ ಗೊಯೆಂಕಾ ಅವರೊಂದಿಗೆ ಕಾನ್ ಸಿನಿಮೋತ್ಸವಕ್ಕೆ ತೆರಳಿದ್ದಾರೆ. 2023ರಲ್ಲಿ ಮೊದಲ ಬಾರಿಗೆ ಕಾನ್ ಚಿತ್ರೋತ್ಸವಕ್ಕೆ ಬಂದಿದ್ದ ಅವರಿಗೆ ಈಗ 2ನೇ ಬಾರಿ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ನಾವು ದೂರಾಗುತ್ತಿದ್ದೇವೆ: ಡಿವೋರ್ಸ್ ವಿಷಯ ಒಪ್ಪಿಕೊಂಡ ಮೌನಿ ರಾಯ್, ಸೂರಜ್ ನಂಬಿಯಾರ್

ಇತ್ತೀಚೆಗಷ್ಟೇ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ವಿಚ್ಛೇದನದ ಸುದ್ದಿ ಹೊರಬಿದ್ದಿತ್ತು. ಈ ಬಳಿಕ ಹರಿದಾಡುತ್ತಿದ್ದ ವದಂತಿಗಳಿಗೆ ಸೂರಜ್ ನಂಬಿಯಾರ್ ಬ್ರೇಕ್ ಹಾಕಿದ್ದಾರೆ. ‘ನಮ್ಮ ವಿಚ್ಛೇದನದ ಬಗ್ಗೆ ಹರಡುತ್ತಿರುವ ಸುದ್ದಿಗಳು ತೀರಾ ದುರುದ್ದೇಶಪೂರಿತವಾಗಿವೆ. ನಮ್ಮ ನಡುವೆ ಯಾವುದೇ ಜೀವನಾಂಶದ ವಿವಾದಗಳಿಲ್ಲ ಅಥವಾ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ. ನಾವಿಬ್ಬರೂ ಪರಸ್ಪರ ಗೌರವದಿಂದಲೇ ದೂರಾಗಲು ನಿರ್ಧರಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಪಿಂಗ್ ಮಾಲ್​​​ನ ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ಹೇಗೆ ನೋಡಿ – Kannada News | Fire Department Staff recuses 9 People Who stuck In Shopping Mall Lift at Shivamogga

ಶಿವಮೊಗ್ಗ, (ಮೇ 19):  ಶಾಪಿಂಗ್ ಮಾಡಲೇಂದು ತೆರಳಿದ್ದ 9 ಜನರು ಲಿಫ್ಟ್​​ನಲ್ಲಿ (Lift) ಸಿಲುಕಿ ಪರದಾಡಿರುವ ಘಟನೆ ಶಿವಮೊಗ್ಗ ನಗರದ (Shivamogga) ಶಾಪಿಂಗ್ ಮಾಲ್​​​​​ನಲ್ಲಿ (Shopping Mall) ನಡೆದಿದೆ. ಶಿವಮೊಗ್ಗ ನಗರದ ಆಲ್ಕೋಳ ವೃತ್ತದ ಬಳಿ ಇರುವ ಶಾಪಿಂಗ್ ಮಾಲ್ ನ ಲಿಫ್ಟ್​​ನಲ್ಲಿ ಅರ್ಧ ಗಂಟೆ ಕಾಲ ಸಿಲುಕಿದ್ದು, ಕೊನೆಗೆ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ.

ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಎಂಬವರು ಶಾಪಿಂಗ್​​ ಮಾಲ್​​​ನಲ್ಲಿ ಲಿಫ್ಟ್ ಪ್ರವೇಶಿಸಿದ್ದಾರೆ. ಆದ್ರೆ,​ ಲಿಫ್ಟ್‌ ನಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅರ್ಧದಲ್ಲೇನಿಂತುಕೊಂಡಿದೆ. ಇದರಿಂದ ಆತಂಕಗೊಂಡ ಕೂಗಾಡಿದ್ದು, ಇದನ್ನು ಕೇಳಿಸಿಕೊಂಡ ಮಾಲ್ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಕರೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕಾಮಿಸಿದ ಅಗ್ನಿಶಾಮಕ ಸಿಬ್ಬಂದಿ ತಂಡ, ಲಿಫ್ಟ್ ಓಪನ್ ಮಾಡಲು ನಾನಾ ಕಸರತ್ತು ನಡೆಸಿದರು. ಕೊನೆಗೆ ಕಬ್ಬಿಣದ ಡೋರ್ ಕತ್ತರಿಸಿ ಲಿಫ್ಟ್​​ನಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ, ಅಗ್ನಿ ಶಾಮಕ ಸಿಬ್ಬಂದಿಯ ಹರಸಾಹಸ ಹೇಗಿತ್ತು ಎನ್ನುವುದನ್ನು ವಿಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೇಫ್ ಸಿಟಿ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೇ ಇಲ್ಲ ಬೆಂಗಳೂರಲ್ಲಿ ಸೇಫ್ಟಿ: ಬ್ಯಾಟರಿಗಳ ಕಳವು – Kannada News | Bengaluru Safe City CCTV Batteries Stolen on Langford Road; Police Launch Probe

ಬೆಂಗಳೂರು, ಮೇ 19: ಮಹಿಳೆಯರ ಸುರಕ್ಷತೆಗೆ ನಗರದಾದ್ಯಂತ ಅಳವಡಿಸಲಾಗಿರುವ ‘ಸೇಫ್ ಸಿಟಿ’ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೆ ಸಂಪರ್ಕಿಸಲಾದ ಬ್ಯಾಟರಿಗಳನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿದ್ದ ಸಿಸಿಟಿವಿ ಜಂಕ್ಷನ್ ಬಾಕ್ಸ್‌ಗಳೊಳಗಿನ ಎರಡು ಬ್ಯಾಟರಿಗಳನ್ನು ಮೇ 16ರಂದು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಮುಖ್ಯಾಂಶಗಳು

  • ಸೇಫ್ ಸಿಟಿ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೇ ಇಲ್ಲ ಭದ್ರತೆ
  • ಕ್ಯಾಮರಾಗಳಿಗೆ ಸಂಪರ್ಕಿಸಲಾದ ಬ್ಯಾಟರಿ ಕದ್ದೊಯ್ದ ಕಳ್ಳರು
  • ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿ ನಡೆದ ಘಟನೆ ಸಂಬಂಧ ದೂರು

ಮಹಿಳೆಯರ ಸುರಕ್ಷತೆ ಮತ್ತು ನಗರದಲ್ಲಿ ನಿಗಾವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ‘ಸೇಫ್ ಸಿಟಿ’ ಯೋಜನೆಯಡಿ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳು ನಿರಂತರವಾಗಿ ಕಾರ್ಯನಿರ್ವಹಿಸಲು ಜಂಕ್ಷನ್ ಬಾಕ್ಸ್‌ಗಳಲ್ಲಿ ಬ್ಯಾಟರಿಗಳನ್ನು ಇರಿಸಲಾಗಿತ್ತು. ಪೊಲೀಸರ ಪ್ರಕಾರ, ಕಳ್ಳರು ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿದ್ದ ಎರಡು ಜಂಕ್ಷನ್ ಬಾಕ್ಸ್‌ಗಳನ್ನು ಗುರಿಯಾಗಿಸಿಕೊಂಡು ಅವುಗಳೊಳಗಿನ ಬ್ಯಾಟರಿಗಳನ್ನು ಕದ್ದೊಯ್ದಿದ್ದಾರೆ. ಈ ಕುರಿತು ಸರ್ವೆಲೆನ್ಸ್ ವ್ಯವಸ್ಥೆಯ ನಿರ್ವಹಣೆಯ ಹೊಣೆ ಹೊತ್ತಿರುವ ಹನಿವೆಲ್ ಕಂಪನಿಯ ಯೋಜನಾ ನಿರ್ದೇಶಕ ರಾಜೀವ್ ನಾಯ್ಕರ್ ದೂರು ನೀಡಿದ್ದಾರೆ. ಕಳುವಾದ ಬ್ಯಾಟರಿಗಳ ಮೌಲ್ಯ ಸುಮಾರು 46,000 ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಗುರುತಿಸಿ ಬಂಧಿಸಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಅರ್ಧ ಗಂಟೆಯ ಭಾರಿ ಮಳೆಗೇ ನಲುಗಿದ ಬೆಂಗಳೂರು, ಅವಾಂತರಗಳ ಸರಮಾಲೆ

ಏನಿದು ಸೇಫ್ ಸಿಟಿ ಪ್ರಾಜೆಕ್ಟ್?

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ವತಿಯಿಂದ ನಿರ್ಭಯಾ ನಿಧಿಯ ಅಡಿಯಲ್ಲಿ ಜಾರಿಗೆ ತರಲಾದ ಪ್ರಮುಖ ಮಹಿಳಾ ಸುರಕ್ಷತಾ ಯೋಜನೆಗಳ ಪೈಕಿ ಸೇಫ್ ಸಿಟಿ ಪ್ರಾಜೆಕ್ಟ್ ಕೂಡ ಒಂದು. ದೇಶದ ಪ್ರಮುಖ ಮಹಾನಗರಗಳಲ್ಲಿ ಅಪರಾಧಗಳನ್ನು ತಡೆಗಟ್ಟಲು ಮತ್ತು ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಈ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ವವಸ್ಥೆಯನ್ನು ಅಳವಡಿಸಲಾಗುತ್ತದೆ. ಯೋಜನೆಯಡಿ ಬೆಂಗಳೂರು ನಗರಾದ್ಯಂತ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾವಿರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:39 pm, Tue, 19 May 26

Source link

‘ಪೆದ್ದಿ’ ಸಿನಿಮಾ ಟ್ರೈಲರ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದು ಹೀಗೆ – Kannada News | Rishab Shetty praised Ram Charan’s Peddi movie trailer

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ಯ (Peddi) ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಟ್ರೈಲರ್​​ಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಲಭಿಸುತ್ತಿದೆ. ಹಲವು ಸೆಲೆಬ್ರಿಟಿಗಳು ಸಹ ಟ್ರೈಲರ್​​ ನೋಡಿ ಮೆಚ್ಚು ಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಟ್ರೈಲರ್ ವೀಕ್ಷಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಪೆದ್ದಿ’ ಟ್ರೈಲರ್ ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ರಾಮ್ ಚರಣ್ ಅವರ ಮಾಸ್ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅನ್ನು ಕೊಂಡಾಡಿರುವ ರಿಷಬ್ ಶೆಟ್ಟಿ, ‘ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಪ್ರತಿಯೊಂದು ಫ್ರೇಮ್‌ನಲ್ಲೂ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅವರ ನಟನೆ ಮತ್ತು ಸ್ಕ್ರೀನ್ ಮೇಲಿನ ಎನರ್ಜಿ ಪ್ರತಿ ದೃಶ್ಯದಲ್ಲೂ ಬೆಂಕಿಯಂತೆ ಮೂಡಿಬಂದಿದೆ’ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿರುವ ಕನ್ನಡಿಗರ ನೆಚ್ಚಿನ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಅವರ ಬಗ್ಗೆಯೂ ರಿಷಬ್ ವಿಶೇಷವಾಗಿ ಉಲ್ಲೇಖಿಸಿದ್ದು, ‘ನಮ್ಮ ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್ ಈ ಸಿನಿಮಾಗೆ ಒಂದು ಭವ್ಯವಾದ ಹಾಗೂ ವಿಶಿಷ್ಟವಾದ ಮೆರುಗನ್ನು ನೀಡಿದೆ. ಇನ್ನು ನಾಯಕಿ ಜಾನ್ವಿ ಕಪೂರ್ ಅವರು ತಮ್ಮ ಸುಂದರ ಹಾಗೂ ರೋಮಾಂಚಕ ನಟನೆಯ ಮೂಲಕ ಚಿತ್ರಕ್ಕೆ ಒಂದು ಆಕರ್ಷಕ ಸ್ಪಾರ್ಕ್ ತಂದಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾ ನಾಯಕಿಯಾಗಿ ಆಯ್ಕೆ ಆಗಿದ್ದು ಈ ನಟಿ, ಕೈತಪ್ಪಿದ್ದೇಕೆ?

ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಅದ್ಭುತ ಕೆಲಸವನ್ನು ಶ್ಲಾಘಿಸಿರುವ ರಿಷಬ್, ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್‌ನ ಕೊನೆಯಲ್ಲಿ ಅವರು, ಛಾಯಾಗ್ರಾಹಕ ರತ್ನವೇಲು, ನಿರ್ಮಾಪಕರು, ವೃದ್ಧಿ ಸಿನಿಮಾಸ್, ಇನ್ನೂ ಹಲವರಿಗೆ ರಿಷಬ್ ಶೆಟ್ಟಿ ಅಭಿನಂದನೆಗಳನ್ನು ಹೇಳಿದ್ದು, ಸಿನಿಮಾದ ಯಶಸ್ಸಿಗೆ ಹಾರೈಸಿದ್ದಾರೆ.

‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಚರಣ್ ಕ್ರಿಕೆಟರ್ ಮತ್ತು ಕುಸ್ತಿ ಪಟುವಾಗಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಕುಸ್ತಿ ಹೇಳಿಕೊಡುವ ಗುರುವಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಜಗಪತಿ ಬಾಬು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Tue, 19 May 26

Source link

ಚಿಕನ್ ನೆಕ್ ಕಾರಿಡಾರ್​​ನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳದ ಸಿಎಂ – Kannada News | West Bengal CM Suvendu Adhikari Governmet decided to transfer 120 Acres In Chicken Neck Corridor To Centre

ಕೊಲ್ಕತ್ತಾ, ಮೇ 19: ಪಶ್ಚಿಮ ಬಂಗಾಳ ಸರ್ಕಾರವು ಸಿಲಿಗುರಿ ಕಾರಿಡಾರ್‌ನಲ್ಲಿರುವ (Siliguri Corridor) 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ. ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ “ಚಿಕನ್ ನೆಕ್” (Chicken Neck Corridor) ಕಾರಿಡಾರ್ ಉದ್ದಕ್ಕೂ ಭದ್ರತೆ, ಗಡಿ ಬೇಲಿ ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಹಿರಿಯ ಬಿಎಸ್ಎಫ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.

ಸಿಲಿಗುರಿ ಕಾರಿಡಾರ್ ಭಾರತದ ಈಶಾನ್ಯ ರಾಜ್ಯಗಳನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಕಿರಿದಾದ, 20-22 ಕಿಲೋಮೀಟರ್ ಅಗಲವಾದ ಪ್ರದೇಶವಾಗಿದೆ. ಇದು ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಚೀನಾದ ಗಡಿಗಳನ್ನು ಹೊಂದಿದೆ. ಈ ಕಾರಿಡಾರ್ ಮೇಲಿನ ನಿಯಂತ್ರಣವನ್ನು ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ ನಿರ್ಣಾಯಕವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: 78 ವರ್ಷ ಹಳೆಯದಾದ ಸಿಲಿಗುರಿ ಕಾರಿಡಾರ್ ಅನ್ನು 1971ರಲ್ಲೇ ಸರಿಪಡಿಸಬೇಕಿತ್ತು; ಸದ್ಗುರು ಅಭಿಮತ

ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಈ ದಿಕ್ಕಿನಲ್ಲಿ ದೃಢವಾದ ಕ್ರಮಗಳನ್ನು ತೆಗೆದುಕೊಂಡಿತು. ಕೇಂದ್ರ ಸರ್ಕಾರವು ಈಗ ಈ ಭೂಮಿಯಲ್ಲಿ ಗಡಿ ಭದ್ರತಾ ಪಡೆಗಳಿಗೆ ಮೂಲಸೌಕರ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದು ಈ ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಕಾರಿಡಾರ್ ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಭೂ ಮಾರ್ಗವಾಗಿದೆ. ಈ ಕಿರಿದಾದ ರಸ್ತೆಯು ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ವ್ಯಾಪಾರ, ಸರಕುಗಳ ಸಾಗಣೆ ಮತ್ತು ಮಿಲಿಟರಿ ಚಲನೆಗೆ ಇದು ಏಕೈಕ ಭೂ ಮಾರ್ಗವಾಗಿದೆ. ಈ ಪ್ರದೇಶವು ದೇಶದ ಭದ್ರತೆ ಮತ್ತು ಗಡಿ ರಕ್ಷಣೆಗೆ ಅತ್ಯಗತ್ಯ.

ಈ ಭೂಮಿಯನ್ನು ಮಿಲಿಟರಿ ಮೂಲಸೌಕರ್ಯವನ್ನು ನಿರ್ಮಿಸಲು, ರಸ್ತೆಗಳನ್ನು ಸುಧಾರಿಸಲು ಅಥವಾ ಭದ್ರತೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ ಎನ್ನಲಾಗಿದೆ. ಕೇಂದ್ರ ಸರ್ಕಾರಕ್ಕೆ ಬಂಗಾಳ ಸರ್ಕಾರ ಈ ಭೂಮಿಯನ್ನು ಏಕೆ ವರ್ಗಾಯಿಸಿದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಬಾಂಗ್ಲಾ ಗಡಿಗೆ ಫೆನ್ಸಿಂಗ್​ನಿಂದ ಹಿಡಿದು ಬಿಎನ್​ಎಸ್ ಜಾರಿವರೆಗೆ ಸುವೇಂದು ಕ್ಯಾಬಿನೆಟ್ ಕೈಗೊಂಡ ಪ್ರಮುಖ ನಿರ್ಧಾರಗಳಿವು

ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾದ ನಂತರ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಬಂಗಾಳದಲ್ಲಿ ಬಿಜೆಪಿ ಗೆದ್ದಿರುವುದು ಇದೇ ಮೊದಲು. ಸುವೇಂದು ಎರಡು ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡರಲ್ಲೂ ಗೆದ್ದರು. ಅಧಿಕಾರ ವಹಿಸಿಕೊಂಡಾಗಿನಿಂದ, ಅಧಿಕಾರಿ ನೇತೃತ್ವದ ಆಡಳಿತವು ಅಧಿಕಾರಿಗಳ ಪುನರ್ ರಚನೆ, ಕಾನೂನು ಮತ್ತು ಸುವ್ಯವಸ್ಥೆ ಕ್ರಮಗಳು, ಟಿಎಂಸಿ ನಾಯಕರ ವಿರುದ್ಧದ ಅಕ್ರಮಗಳ ಆರೋಪಗಳ ತನಿಖೆ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ಸಿನಿಮಾ ಟ್ರೈಲರ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದು ಹೀಗೆ – Kannada News | Rishab Shetty praised Ram Charan’s Peddi movie trailer

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ಯ (Peddi) ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಟ್ರೈಲರ್​​ಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಲಭಿಸುತ್ತಿದೆ. ಹಲವು ಸೆಲೆಬ್ರಿಟಿಗಳು ಸಹ ಟ್ರೈಲರ್​​ ನೋಡಿ ಮೆಚ್ಚು ಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಟ್ರೈಲರ್ ವೀಕ್ಷಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಪೆದ್ದಿ’ ಟ್ರೈಲರ್ ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ರಾಮ್ ಚರಣ್ ಅವರ ಮಾಸ್ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅನ್ನು ಕೊಂಡಾಡಿರುವ ರಿಷಬ್ ಶೆಟ್ಟಿ, ‘ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಪ್ರತಿಯೊಂದು ಫ್ರೇಮ್‌ನಲ್ಲೂ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅವರ ನಟನೆ ಮತ್ತು ಸ್ಕ್ರೀನ್ ಮೇಲಿನ ಎನರ್ಜಿ ಪ್ರತಿ ದೃಶ್ಯದಲ್ಲೂ ಬೆಂಕಿಯಂತೆ ಮೂಡಿಬಂದಿದೆ’ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿರುವ ಕನ್ನಡಿಗರ ನೆಚ್ಚಿನ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಅವರ ಬಗ್ಗೆಯೂ ರಿಷಬ್ ವಿಶೇಷವಾಗಿ ಉಲ್ಲೇಖಿಸಿದ್ದು, ‘ನಮ್ಮ ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್ ಈ ಸಿನಿಮಾಗೆ ಒಂದು ಭವ್ಯವಾದ ಹಾಗೂ ವಿಶಿಷ್ಟವಾದ ಮೆರುಗನ್ನು ನೀಡಿದೆ. ಇನ್ನು ನಾಯಕಿ ಜಾನ್ವಿ ಕಪೂರ್ ಅವರು ತಮ್ಮ ಸುಂದರ ಹಾಗೂ ರೋಮಾಂಚಕ ನಟನೆಯ ಮೂಲಕ ಚಿತ್ರಕ್ಕೆ ಒಂದು ಆಕರ್ಷಕ ಸ್ಪಾರ್ಕ್ ತಂದಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾ ನಾಯಕಿಯಾಗಿ ಆಯ್ಕೆ ಆಗಿದ್ದು ಈ ನಟಿ, ಕೈತಪ್ಪಿದ್ದೇಕೆ?

ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಅದ್ಭುತ ಕೆಲಸವನ್ನು ಶ್ಲಾಘಿಸಿರುವ ರಿಷಬ್, ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್‌ನ ಕೊನೆಯಲ್ಲಿ ಅವರು, ಛಾಯಾಗ್ರಾಹಕ ರತ್ನವೇಲು, ನಿರ್ಮಾಪಕರು, ವೃದ್ಧಿ ಸಿನಿಮಾಸ್, ಇನ್ನೂ ಹಲವರಿಗೆ ರಿಷಬ್ ಶೆಟ್ಟಿ ಅಭಿನಂದನೆಗಳನ್ನು ಹೇಳಿದ್ದು, ಸಿನಿಮಾದ ಯಶಸ್ಸಿಗೆ ಹಾರೈಸಿದ್ದಾರೆ.

‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಚರಣ್ ಕ್ರಿಕೆಟರ್ ಮತ್ತು ಕುಸ್ತಿ ಪಟುವಾಗಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಕುಸ್ತಿ ಹೇಳಿಕೊಡುವ ಗುರುವಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಜಗಪತಿ ಬಾಬು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Tue, 19 May 26

Source link

ಅಮ್ಮ-ಅಪ್ಪ ಸ್ವಾರಿ, ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ: ಪತ್ರ ಬರೆದಿಟ್ಟು ಸಹೋದರಿಯರು ನಾಪತ್ತೆ – Kannada News | Shocking incident In Mandya, two sisters went missing from their home after leaving a letter

ಮಂಡ್ಯ, (ಮೇ 19): ತಾಯಿ ಬೈದಿದ್ದಕ್ಕೆ ಅಪ್ರಾಪ್ತ ಸಹೋದರಿಯರು (Sisters) ಭಾವುಕವಾಗಿ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸಹೋದರಿಯರು. ಯಾವುದೋ ವಿಷಯಕ್ಕೆ ಮನೆತಲ್ಲಿ ತಾಯಿ ಬೈದಿದ್ದಾರೆ. ಇದರಿಂದ ಮನನೊಂದು ಸಹೋದರಿಯರು, ಮನೆಬಿಟ್ಟು ಹೋಗಿದ್ದಾರೆ.ಹೋಗುವ ಮುನ್ನ ಭಾವುಕ ಪತ್ರವೊಂದು ಬರೆದಿಟ್ಟಿದ್ದಾರೆ. ಅಮ್ಮ-ಅಪ್ಪ ಸ್ವಾರಿ. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ಆಗಲ್ಲ. ಹೀಗಾಗಿ ನಾವು ದೂರ ಹೋಗಿ ಸತ್ತಿದ್ದೇವೆ ಎಂದು ಆಘಾತಕಾರಿ ಪತ್ರ ಬರೆದಿಟ್ಟು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ತಾಯಿ ಬೈದಿದ್ದಕ್ಕೆ ಆಘಾತಕಾರಿ ಬರೆದಿಟ್ಟು ಸಹೋದರಿಯರು ನಾಪತ್ತೆ
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ಘಟನೆ
  • ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ನಾಪತ್ತೆ
  • ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಪೊಲೀಸರಿಂದ ಶೋಧ ಕಾರ್ಯ

ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ

ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದ ರಾಮಚಂದ್ರ ಎಂಬುವರ ಮಕ್ಕಳಾದ ಸುಜಾತ ಮತ್ತು ರುಕ್ಮಿಣಿ ಮನೆ ಬಿಟ್ಟು ಹೋಗಿದ್ದು, ಮನೆಯಿಂದ ಹೋಗುವ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಅಪ್ಪ-ಅಮ್ಮ ಸ್ಸಾರಿ ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ ಅಂತಾ ನಾವು ದೂರ ಹೋಗಿ ಸತ್ತಿದ್ದೇವೆ ಸ್ಸಾರಿ ಎಂದು ಪತ್ರದಲ್ಲಿ ಬರೆದಿದ್ದು, ಈ ಪತ್ರ ಪೋಷಕರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಆತಂಕದಿಂದಲೇ ಪೊಲಿಸರ ಮೊರೆ ಹೋದ ಪೋಷಕರು

ಈ ಪತ್ರ ಓದಿದ ಕೂಡಲೇ ಆತಂಕಗೊಂಡ ಪೋಷಕರು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಮಕ್ಕಳನ್ನ ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಕೂಡಲೇ ಪೊಲೀಸರು ದೂರು ದಾಖಲಿಸಿಕೊಂಡು ಮಕ್ಕಳ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಮಕ್ಕಳು ಏನಾದರೂ ಪ್ರಾಣಕ್ಕೆ ಅಪಾಯ ಮಾಡಿಕೊಂಡಿರಬಹುದೇ ಎಂದು ಕುಟುಂಬಸ್ಥರು ಆತಂಕಗೊಂಡು ಕಣ್ಣೀರು ಹಾಕುತ್ತಿದ್ದಾರೆ.

ಹುಟ್ಟಿಸಿ ಬೆಳೆಸಿದ ಪೋಷಕರು ಅಂದಮೇಲೆ ಮಕ್ಕಳು ತಪ್ಪು ಮಾಡಿದ್ರೆ ಬೈದು ಬುದ್ಧಿ ಹೇಳುತ್ತಾರೆ. ಆದ್ರೆ, ಮಕ್ಕಳಾದವರು, ತಂದೆ ತಾಯಿ ಬೈದರು ಎಂದು ಮನನೊಂದು ಈ ರೀತಿಯ ನಿರ್ಧಾರ ಕೈಗೊಳ್ಳುವುದು ತಪ್ಪು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಇಂಡಿಯಾಸ್ ಗಾಟ್ ಲೇಟೆಂಟ್ ಸೀಸನ್ 2’ ಮೊದಲ ಎಪಿಸೋಡ್​​ಗೆ ಬಾಲಿವುಡ್ ಸ್ಟಾರ್ ನಟಿ ಅತಿಥಿ – Kannada News | Alia Bhatt And Sharvari Leaked Photo From India’s Got Latent 2 Goes Viral

ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ಸಮಯ್ ರೈನಾ ಅವರ ಜನಪ್ರಿಯ ಹಾಗೂ ವಿವಾದಾತ್ಮಕ ರಿಯಾಲಿಟಿ ಶೋ ಎಂದರೆ ಅದು ‘ಇಂಡಿಯಾಸ್ ಗಾಟ್ ಲೇಟೆಂಟ್’. ಈ ಶೋಗೆ ಎರಡನೇ ಸೀಸನ್ ಬರಲಿದೆ ಎಂದು ಸಮಯ್ ಇತ್ತೀಚೆಗೆ ಹೇಳಿದ್ದರು. ಈಗ ಮೊದಲ ಎಪಿಸೋಡ್‌ನ ಶೂಟಿಂಗ್ ಸೆಟ್‌ನಿಂದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ಸೋರಿಕೆಯಾದ ಫೋಟೋದಲ್ಲಿ ಬಾಲಿವುಡ್ ತಾರೆಯರಾದ ಆಲಿಯಾ ಭಟ್ ಮತ್ತು ಶಾರ್ವರಿ ಜಡ್ಜ್‌ಗಳ ಸೀಟಿನಲ್ಲಿ ಕುಳಿತಿರುವುದು ಕಾಣಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋದಲ್ಲಿ ಆಲಿಯಾ ಮತ್ತು ಶಾರ್ವರಿ ಜೊತೆಗೆ ಹಾಸ್ಯನಟರಾದ ಬಾಲರಾಜ್ ಸಿಂಗ್ ಘಾಯ್ ಮತ್ತು ಆಶಿಶ್ ಸೋಲಂಕಿ ತೀರ್ಪುಗಾರರ ಪ್ಯಾನೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್‌ನ ಬಹುನಿರೀಕ್ಷಿತ ಮಹಿಳಾ ಪ್ರಧಾನ ಸ್ಪೈ ಯುನಿವರ್ಸ್ ಚಿತ್ರ ‘ಆಲ್ಫಾ’ ಪ್ರಚಾರಕ್ಕಾಗಿ ಇವರಿಬ್ಬರು ಈ ಶೋಗೆ ಆಗಮಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಎಲ್ಲರೂ ಕಲ್ಲು ಹೊಡೆಯುತ್ತಾರೆ’; ಕಪಿಲ್ ಶರ್ಮಾ ಶೋನಲ್ಲಿ ಸಮಯ್ ರೈನಾ ನೇರ ಮಾತು

ಸಮಯ್ ರೈನಾ ಕಾರ್ಯಕ್ರಮದ ಅಪ್ಪಟ ಅಭಿಮಾನಿಗಳು ಈ ಲೀಕ್ಡ್ ಫೋಟೋ ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಆಲಿಯಾ ಭಟ್ ಎಲ್ಲ ಕಡೆಯೂ ಕಾಣಿಸಿಕೊಳ್ಳುತ್ತಿದ್ದಾರೆ. ಕೇವಲ ಸಿನಿಮಾಗಳ ಪ್ರಚಾರಕ್ಕಾಗಿ ಇಂತಹ ಶೋಗಳನ್ನು ಬಳಸಿಕೊಂಡರೆ ಶೋನ ಅಸಲಿ ಆತ್ಮವೇ ಹೊರಟುಹೋಗುತ್ತದೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಹಳೆಯ ವಿವಾದ:

ಕಳೆದ ಸೀಸನ್‌ನಲ್ಲಿ ಪಾಡ್‌ಕಾಸ್ಟರ್ ರಣವೀರ್ ಅಲಹಾಬಾದಿಯಾ ಅವರು ಸ್ಪರ್ಧಿಯೊಬ್ಬರಿಗೆ ಕೇಳಿದ ಅಶ್ಲೀಲ ಮತ್ತು ವಿವಾದಾತ್ಮಕ ಪ್ರಶ್ನೆಯಿಂದಾಗಿ ಈ ಶೋ ದೊಡ್ಡ ಮಟ್ಟದ ಕಾನೂನು ಸಂಕಷ್ಟಕ್ಕೆ ಸಿಲುಕಿತ್ತು. ಸಮಯ್ ರೈನಾ ಸೇರಿದಂತೆ ಹಲವರ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು. ಹೀಗಾಗಿ ಸಮಯ್ ತಮ್ಮ ಯೂಟ್ಯೂಬ್ ಚಾನೆಲ್‌ನಿಂದ ಎಲ್ಲಾ ಎಪಿಸೋಡ್‌ಗಳನ್ನು ಡಿಲೀಟ್ ಮಾಡಬೇಕಾಗಿ ಬಂದಿತ್ತು. ಇದೀಗ ವರ್ಷಗಳ ಬಳಿಕ ಶೋ ಮತ್ತೆ ಆರಂಭವಾಗುತ್ತಿದ್ದು, ಸಿನಿಮಾ ಪ್ರಚಾರದ ನಡುವೆಯೂ ಹಳೆಯ ಕ್ರೇಜ್ ಉಳಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಶಾರ್ವರಿ, ಆಲಿಯಾ ನಟನೆಯ ‘ಆಲ್ಫಾ’ ಸಿನಿಮಾ ಜುಲೈ 10 ರಂದು ತೆರೆಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯತ್ನಾಳ್​​ ಹೇಳಿಕೆಗೆ ಬೆಂಬಲವಿದೆ ಎಂದ ಜನಾರ್ದನ ರೆಡ್ಡಿ: ಖಡಕ್​​ ರಿಯಾಕ್ಷನ್​​ ಕೊಟ್ಟ ಗಂಗಾವತಿ ಶಾಸಕ – Kannada News | Janardhana Reddy Backs Yatnals Jai Shri Ram Call in Schools

ಕೊಪ್ಪಳ, ಮೇ 19: ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರು ಶಾಲಾ ಹಾಜರಾತಿಯ ಸಂದರ್ಭದಲ್ಲಿ ಯೆಸ್ ಸರ್ ಬದಲು ಜೈ ಶ್ರೀರಾಮ್ ಎಂದು ಹೇಳಬೇಕೆಂಬ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕರೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ರೆಡ್ಡಿ, ಈ ವಿಷಯಕ್ಕೆ ನೂರಕ್ಕೆ ನೂರು ನನ್ನ ಬೆಂಬಲ ಇದೆ ಎಂದು ಘೋಷಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರೆಡ್ಡಿ, ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಷಯವಿದ್ದರೂ, ಸರ್ಕಾರವು ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಕ್ಷವು ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link