‘ಪೆದ್ದಿ’ ಸಿನಿಮಾ ಟ್ರೈಲರ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದು ಹೀಗೆ – Kannada News | Rishab Shetty praised Ram Charan’s Peddi movie trailer

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ಯ (Peddi) ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಟ್ರೈಲರ್​​ಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಲಭಿಸುತ್ತಿದೆ. ಹಲವು ಸೆಲೆಬ್ರಿಟಿಗಳು ಸಹ ಟ್ರೈಲರ್​​ ನೋಡಿ ಮೆಚ್ಚು ಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಟ್ರೈಲರ್ ವೀಕ್ಷಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಪೆದ್ದಿ’ ಟ್ರೈಲರ್ ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ರಾಮ್ ಚರಣ್ ಅವರ ಮಾಸ್ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅನ್ನು ಕೊಂಡಾಡಿರುವ ರಿಷಬ್ ಶೆಟ್ಟಿ, ‘ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಪ್ರತಿಯೊಂದು ಫ್ರೇಮ್‌ನಲ್ಲೂ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅವರ ನಟನೆ ಮತ್ತು ಸ್ಕ್ರೀನ್ ಮೇಲಿನ ಎನರ್ಜಿ ಪ್ರತಿ ದೃಶ್ಯದಲ್ಲೂ ಬೆಂಕಿಯಂತೆ ಮೂಡಿಬಂದಿದೆ’ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿರುವ ಕನ್ನಡಿಗರ ನೆಚ್ಚಿನ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಅವರ ಬಗ್ಗೆಯೂ ರಿಷಬ್ ವಿಶೇಷವಾಗಿ ಉಲ್ಲೇಖಿಸಿದ್ದು, ‘ನಮ್ಮ ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್ ಈ ಸಿನಿಮಾಗೆ ಒಂದು ಭವ್ಯವಾದ ಹಾಗೂ ವಿಶಿಷ್ಟವಾದ ಮೆರುಗನ್ನು ನೀಡಿದೆ. ಇನ್ನು ನಾಯಕಿ ಜಾನ್ವಿ ಕಪೂರ್ ಅವರು ತಮ್ಮ ಸುಂದರ ಹಾಗೂ ರೋಮಾಂಚಕ ನಟನೆಯ ಮೂಲಕ ಚಿತ್ರಕ್ಕೆ ಒಂದು ಆಕರ್ಷಕ ಸ್ಪಾರ್ಕ್ ತಂದಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾ ನಾಯಕಿಯಾಗಿ ಆಯ್ಕೆ ಆಗಿದ್ದು ಈ ನಟಿ, ಕೈತಪ್ಪಿದ್ದೇಕೆ?

ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಅದ್ಭುತ ಕೆಲಸವನ್ನು ಶ್ಲಾಘಿಸಿರುವ ರಿಷಬ್, ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್‌ನ ಕೊನೆಯಲ್ಲಿ ಅವರು, ಛಾಯಾಗ್ರಾಹಕ ರತ್ನವೇಲು, ನಿರ್ಮಾಪಕರು, ವೃದ್ಧಿ ಸಿನಿಮಾಸ್, ಇನ್ನೂ ಹಲವರಿಗೆ ರಿಷಬ್ ಶೆಟ್ಟಿ ಅಭಿನಂದನೆಗಳನ್ನು ಹೇಳಿದ್ದು, ಸಿನಿಮಾದ ಯಶಸ್ಸಿಗೆ ಹಾರೈಸಿದ್ದಾರೆ.

‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಚರಣ್ ಕ್ರಿಕೆಟರ್ ಮತ್ತು ಕುಸ್ತಿ ಪಟುವಾಗಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಕುಸ್ತಿ ಹೇಳಿಕೊಡುವ ಗುರುವಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಜಗಪತಿ ಬಾಬು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Tue, 19 May 26

Source link

Leave a Reply

Your email address will not be published. Required fields are marked *