All posts by nagaraj11081993

ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್ – Kannada News | Darshan met fis family in Jail with special permission spent half hour time

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್​​ಗೆ ಸಿಕ್ಕಿದ್ದ ಜಾಮೀನು ಕಳೆದ ವರ್ಷ ಆಗಸ್ಟ್​​ನಲ್ಲಿ ರದ್ದಾಗಿ ಅವರು ಮತ್ತೆ ಜೈಲು ಸೇರಿದ್ದು, ಆಗಿನಿಂದ ಈಗಿನ ವರೆಗೆ ಜೈಲಿನಲ್ಲಿದ್ದಾರೆ. ಇನ್ನೂ ಒಂದು ವರ್ಷ ಅವರು ಜಾಮೀನಿಗೆ ಅರ್ಜಿ ಸಹ ಹಾಕುವಂತಿಲ್ಲ. ಕುಟುಂಬವನ್ನು ಆಗಾಗ್ಗೆ ಭೇಟಿ ಮಾಡುತ್ತಿರುತ್ತಾರಾದರೂ ಅದು ಖಾಸಗಿ ಭೇಟಿ ಅಲ್ಲ, ಬದಲಿಗೆ ಪೊಲೀಸರ ಬೆಂಗಾವಲಿನಲ್ಲಿ ಸರಳುಗಳ ಆಚೆ-ಈಚೆ ನಿಂತು ನೋಡುವುದಷ್ಟೆ ಆಗಿತ್ತು. ಆದರೆ ಇಂದು (ಮೇ 19) ದರ್ಶನ್ ಸುಮಾರು ಹತ್ತು ತಿಂಗಳ ಬಳಿಕ ತಮ್ಮ ಕುಟುಂಬವನ್ನು ಮುಖಾ-ಮುಖಿ ಭೇಟಿ ಆಗಿದ್ದಾರೆ.

ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ವಿವಾಹ ವಾರ್ಷಿಕೋತ್ಸವ ಇಂದು (ಮೇ 19). ಹಾಗಾಗಿ ವಿಜಯಲಕ್ಷ್ಮಿ ಅವರು ಡಿಜಿಪಿ ಅಲೋಕ್ ಕುಮಾರ್ ಅವರನ್ನು ಭೇಟಿಯಾಗಿ, ತಮಗೆ ದರ್ಶನ್ ಅವರ ಮುಖಾಮುಖಿ ಭೇಟಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದರು. ನಟ ದರ್ಶನ್ ಸಹ ತಮ್ಮ ಕುಟುಂಬವನ್ನು ಮುಖಾ-ಮುಖಿ ಭೇಟಿಗೆ ಅವಕಾಶ ಕೊಡಬೇಕು ಎಂದು ಜೈಲಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಜೈಲಧಿಕಾರಿಗಳು ಮುಖಾ-ಮುಖಿ ಭೇಟಿಗೆ ಅವಕಾಶ ನೀಡಿದ್ದು, ಅರ್ಧ ಗಂಟೆ ಕಾಲಾವಕಾಶವನ್ನು ನೀಡಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಸುಳ್ಳು ಸಾಕ್ಷ್ಯ ಆರೋಪಕ್ಕೆ ಎಸ್​​ಪಿಪಿ ಪ್ರಸನ್ನ ತಿರುಗೇಟು

ದರ್ಶನ್ ಇರುವ ಜೈಲು ಕೊಠಡಿಯಲ್ಲಿಯೇ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಅವರು ದರ್ಶನ್ ಅನ್ನು ಭೇಟಿ ಆಗಿದ್ದಾರೆ. ಸುಮಾರು ಅರ್ಧ ಗಂಟೆ ಸಮಯವನ್ನು ನಟ ದರ್ಶನ್ ಅವರು ಕುಟುಂಬದ ಜೊತೆಗೆ ಕಳೆದಿದ್ದಾರೆ. ಜಾಮೀನು ರದ್ದಾಗುವ ಮುಂಚೆ ಕುಟುಂಬದ ಜೊತೆಗಿದ್ದ ದರ್ಶನ್ ಈಗ ಹತ್ತು ತಿಂಗಳ ಬಳಿಕ ಮೊದಲ ಬಾರಿಗೆ ಮಗ ಹಾಗೂ ಪತ್ನಿಯ ತಬ್ಬಿ ಮಾತನಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:35 pm, Tue, 19 May 26

Source link

ಭಾರತ ಏಕದಿನ ಹಾಗೂ ಟೆಸ್ಟ್​ ತಂಡಗಳು ಪ್ರಕಟ – Kannada News | India Squad For Afghanistan Series

ಅಫ್ಘಾನಿಸ್ತಾನ್ ವಿರುದ್ಧದ ಸರಣಿಗಾಗಿ ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳನ್ನು ಪ್ರಕಟಿಸಲಾಗಿದೆ. ಈ ಎರಡೂ ತಂಡಗಳ ನಾಯಕನಾಗಿ ಶುಭ್​ಮನ್ ಗಿಲ್ ಮುಂದುವರೆದರೆ ಟೆಸ್ಟ್ ತಂಡದ ಉಪನಾಯಕನಾಗಿ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ. ಇನ್ನು ಏಕದಿನ ತಂಡದ ವೈಸ್ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.

ಟೆಸ್ಟ್ ತಂಡದಲ್ಲಿ ಹೊಸ ಮುಖಗಳು:

  • ಮಾನವ್ ಸುತಾರ್ (ಸ್ಪಿನ್ನರ್)
  • ಗುರ್ನೂರ್ ಬ್ರಾರ್ (ವೇಗದ ಬೌಲರ್).

ಏಕದಿನ ತಂಡದಲ್ಲಿ ಹೊಸ ಮುಖಗಳು:

  • ಗುರ್ನೂರ್ ಬ್ರಾರ್ (ವೇಗದ ಬೌಲರ್)
  • ಪ್ರಿನ್ಸ್ ಯಾದವ್ (ವೇಗದ ಬೌಲರ್)
  • ಹರ್ಷ್ ದುಬೆ (ಸ್ಪಿನ್ನರ್)

ಭಾರತ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ಬಿ. ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡ್ಡಿಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್.

ಇದನ್ನೂ ಓದಿ:BBL 2026: ಭಾರತದಲ್ಲಿ ಬಿಗ್ ಬ್ಯಾಷ್ ಲೀಗ್..!

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.

Published On – 4:54 pm, Tue, 19 May 26

Source link

Video: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು – Kannada News | Children playing with a stray dog, video goes viral

ಈ ಜಗತ್ತಿನಲ್ಲಿ ಎಲ್ಲ ಬಂಧಗಳನ್ನು ಮೀರಿದ ಸಂಬಂಧವೇ ಈ ಸ್ನೇಹ (friendship). ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೌದು, ಈ ಮೂಕ ಪ್ರಾಣಿಗಳ ಜತೆಗೆ ಸ್ನೇಹ ಬೆಳೆಸಿದರೆ ಅವುಗಳು ಜೀವನ ಪರ್ಯಂತ ಜತೆಗಿರುತ್ತವೆ. ಇದೀಗ ಪುಟಾಣಿಗಳು ರಸ್ತೆ ಬದಿಯಲ್ಲಿದ್ದ ಶ್ವಾನದ ಜತೆಗೆ ಆಟ ಆಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

md_royal_teams ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಗಳ ಜತೆಗೆ ಶ್ವಾನದ ಸ್ನೇಹ ಸಂಬಂಧವನ್ನು ಕಾಣಬಹುದು. ರಸ್ತೆ ಬದಿಯಲ್ಲಿ ಕುಳಿತ ಮಕ್ಕಳ ಗುಂಪಿನಲ್ಲಿ ಶ್ವಾನವೊಂದಿರುವುದನ್ನು ನೀವು ಗಮನಿಸಬಹುದು. ಮೂವರು ಮಕ್ಕಳು ಶ್ವಾನದ ಜತೆಗೆ ಆಟ ಆಡುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ

ಈ ವಿಡಿಯೋ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮುದ್ದಾಗಿದೆ ಎಂದಿದ್ದಾರೆ. ಮತ್ತೊಬ್ಬರು, ನನ್ನ ಬಾಲ್ಯವು ಇದೆ ರೀತಿಯಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ದೃಶ್ಯವನ್ನು ಯಾರು ರೆಕಾರ್ಡ್ ಮಾಡುತ್ತಿದ್ದೀರೋ ಅವರು ದಯವಿಟ್ಟು ಈ ಶ್ವಾನಕ್ಕೆ ತಿನ್ನಲು ಆಹಾರ ಕೊಡಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಎಂದಿನಂತೆ ಬಸ್​​ ಸಂಚಾರ: ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಮುಷ್ಕರ ಹಿಂಪಡೆದ ಸಾರಿಗೆ ನೌಕರರು – Kannada News | KSRTC Bus Services Resume: Transport Workers Withdraw Strike After High Court Order

ಬೆಂಗಳೂರು, ಮೇ 19: ಹೈಕೋರ್ಟ್​​ ಆದೇಶದ ಬೆನ್ನಲ್ಲೇ ನಾಳೆ (ಮೇ 20) ಕರೆ ನೀಡಿದ್ದ ಮುಷ್ಕರವನ್ನು ಸಾರಿಗೆ ನೌಕರರು ಹಿಂಪಡೆದಿದ್ದಾರೆ. ಹೈಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಮುಷ್ಕರ ಹಿಂದಕ್ಕೆ ಪಡೆಯುತ್ತಿರೋದಾಗಿ KSRTC ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೆ ಅರಸ್ ತಿಳಿಸಿದ್ದಾರೆ. ನಾವು ಮುಷ್ಕರದ ಸಂಬಂಧ ಸರ್ಕಾರಕ್ಕೆ ಮೊದಲೇ ಮಾಹಿತಿ ಕೊಟ್ಟಿದ್ದೆವು. ಈ ನಡುವೆ ಹೈಕೋರ್ಟ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಿತ್ತು. ವಾದ-ಪ್ರತಿವಾದ ಆಲಿಸಿದ ನಂತರ ಮುಷ್ಕರ ಹಿಂದಕ್ಕೆ ಪಡೆಯಬೇಕು ಎಂದು ಕೋರ್ಟ್​​ ನಿರ್ದೇಶನ ಕೊಟ್ಟಿದೆ. ಸಿಎಂ ಅಥವಾ ಸಾರಿಗೆ ಸಚಿವರು ಶೀಘ್ರ ಸಮಯ ನಿಗದಿ ಮಾಡಿ ಸಭೆ ಮಾಡಬೇಕು ಅಂತಲೂ ಹೇಳಿದೆ. ಹೈಕೋರ್ಟ್ ಆದೇಶದ ಪ್ರಕಾರ ಮುಷ್ಕರ ಹಿಂಪಡೆದಿದ್ದೇವೆ ಎಂದವರು ತಿಳಿಸಿದ್ದಾರೆ.

ಎಲ್ಲಾ ಕಾರ್ಮಿಕರಿಗೂ ಪ್ರತಿಭಟನೆ ಮಾಡುವ ಹಕ್ಕು ಇದ್ದು, ಏಕಪಕ್ಷೀಯವಾಗಿ ನೀವು ತೀರ್ಮಾನ ಮಾಡಿದ್ದೀರಿ. ಯಾರೋ ಹಾಕಿದ PILನಿಂದಾಗಿ ಸರ್ಕಾರ ನಮ್ಮ ಜೊತೆ ಸಭೆ ಮಾಡಬೇಕಿದೆ. ಅದನ್ನ ಸರ್ಕಾರವೇ ನಿರ್ಧಾರ ಮಾಡಿ ಸಭೆ ಮಾಡಬಹುದಿತ್ತು. ಹೈಕೋರ್ಟ್ ಸೂಚಿಸಿರುವ ಪ್ರಕಾರ ಸರ್ಕಾರದ ಜೊತೆಗಿನ ಸಭೆಯನ್ನು ಸದುಪಯೋಗ ಮಾಡಿಕೊಳ್ಳುತ್ತೇವೆ . ನಮ್ಮ ಒಂದಷ್ಟು ಮನವಿಯನ್ನು ಕೂಡ ಹೈಕೋರ್ಟ್ ಗಮನಿಸಿದೆ ಎಂದು ಜಂಟಿ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Published On – 4:40 pm, Tue, 19 May 26

Source link

BBL 2026: ಭಾರತದಲ್ಲಿ ಬಿಗ್ ಬ್ಯಾಷ್ ಲೀಗ್..!

ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ‘ಬಿಗ್ ಬ್ಯಾಷ್ ಲೀಗ್‘ನ (BBL) ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ. ಇದಕ್ಕಾಗಿ ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆ ಜೊತೆ ಕ್ರಿಕೆಟ್ ಆಸ್ಟ್ರೇಲಿಯಾ ಮಾತುಕತೆ ನಡೆಸಿದ್ದು, ಈ ವೇಳೆ ಬಿಸಿಸಿಐ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ವರದಿಯಾಗಿದೆ.

ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ:

2026-27ರ ಬಿಬಿಎಲ್ (BBL 16) ಸೀಸನ್‌ನ ಭರ್ಜರಿ ಉದ್ಘಾಟನಾ ಪಂದ್ಯವು ಭಾರತದಲ್ಲಿ ಆಯೋಜನೆಯಾಗಲಿದೆ. ಇದಕ್ಕಾಗಿ ತಮಿಳುನಾಡಿನ ಚೆನ್ನೈನಲ್ಲಿರುವ ಐತಿಹಾಸಿಕ ಎಂ.ಎ. ಚಿದಂಬರಂ (ಚೇಪಾಕ್) ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾ ನೆಲವನ್ನು ಬಿಟ್ಟು ಹೊರದೇಶವೊಂದರಲ್ಲಿ ಬಿಗ್ ಬ್ಯಾಷ್ ಲೀಗ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ಪ್ರಯತ್ನಕ್ಕೆ ಕೈ ಹಾಕಲು ನಿರ್ಧರಿಸಿದೆ.

ರೇಸ್‌ನಲ್ಲಿರುವ ಪ್ರಮುಖ ತಂಡಗಳು ಯಾವುವು?

ಚೆನ್ನೈನಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯಲು ಬಿಬಿಎಲ್‌ನ ಮೂರು ಪ್ರಮುಖ ಫ್ರಾಂಚೈಸಿಗಳು ಮುಂಚೂಣಿಯಲ್ಲಿವೆ.

  • ಪರ್ತ್ ಸ್ಕಾರ್ಚರ್ಸ್ (Perth Scorchers)
  • ಸಿಡ್ನಿ ಥಂಡರ್ (Sydney Thunder)
  • ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades)

ಈ ಮೂರರಲ್ಲಿ ಎರಡು ತಂಡಗಳು ಭಾರತದ ಕ್ರಿಕೆಟ್ ಪ್ರೇಮಿಗಳ ಸಮ್ಮುಖದಲ್ಲಿ ಸೆಣಸಾಡಲಿವೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್:

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಭಾರತವನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ಕೋಟಿ ಕೋಟಿ ಭಾರತೀಯ ಪ್ರೇಕ್ಷಕರು ಮತ್ತು ಹೂಡಿಕೆದಾರರು.

ಬಿಬಿಎಲ್ ತಂಡಗಳನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸುತ್ತಿರುವ ಸಿಎ (CA), ಭಾರತದ ಐಪಿಎಲ್ (IPL) ಮಾಲೀಕರನ್ನು ಮತ್ತು ದೊಡ್ಡ ಬ್ರಾಂಡ್‌ಗಳನ್ನು ತನ್ನತ್ತ ಸೆಳೆಯಲು ಈ ಬಿಗ್ ಪ್ಲಾನ್ ರೂಪಿಸಿದೆ.

ವಿಶೇಷವೆಂದರೆ, ಭಾರತದಲ್ಲಿ ಈ ಪಂದ್ಯವನ್ನು ಆಯೋಜಿಸಲು ತಗಲುವ ಬಹುಪಾಲು ವೆಚ್ಚವನ್ನು ಕ್ರಿಕೆಟ್ ಆಸ್ಟ್ರೇಲಿಯಾವೇ ಭರಿಸಲಿದೆ.

ಇದನ್ನೂ ಓದಿ: 1 ಸ್ಥಾನಕ್ಕಾಗಿ 5 ತಂಡಗಳ ಪೈಪೋಟಿ: ಯಾರು ಹೇಗೆ ಪ್ಲೇಆಫ್​ಗೇರಬಹುದು?

ಮನರಂಜನೆಯ ರಸದೌತಣ:

ಡಿಸೆಂಬರ್ ಮಧ್ಯಭಾಗದಲ್ಲಿ (ಸಂಭಾವ್ಯವಾಗಿ ಡಿಸೆಂಬರ್ 12 ರಂದು) ಈ ಪಂದ್ಯ ನಡೆಯುವ ಸಾಧ್ಯತೆ ಇದೆ. ಅದರಂತೆ, ಭಾರತೀಯ ಕ್ರೀಡಾ ಪ್ರೇಮಿಗಳಿಗೆ ವರ್ಷಾಂತ್ಯದಲ್ಲಿ ಬಿಗ್ ಬ್ಯಾಷ್ ಲೀಗ್ ಅನ್ನು ಚೆನ್ನೈ ನಲ್ಲಿ ವೀಕ್ಷಿಸುವ ಅವಕಾಶ ದೊರೆಯಲಿದೆ. ಸದ್ಯಕ್ಕೆ ಬಿಸಿಸಿಐ ಪಂದ್ಯ ಆಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು, ಇನ್ನು ಸರ್ಕಾರದ ಮಟ್ಟದಲ್ಲಿ ಅನುಮೋದನೆಗಳನ್ನು ಪಡೆಯಬೇಕಿದೆ. ಇದಾದ ಬಳಿಕ ಪಂದ್ಯ ಆಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

 

Source link

ಡಿಜಿಟಲ್ ಪೇಮೆಂಟೇ ಎಲ್ಲಾ; ಅತಿಹೆಚ್ಚು ಜನಬಳಕೆಯಲ್ಲಿ ಯುಪಿಐ, ಅತಿಹೆಚ್ಚು ಪಾವತಿ ಮೌಲ್ಯದಲ್ಲಿ ಆರ್​ಟಿಜಿಎಸ್ ನಂ. 1 – Kannada News | India’s Digital Payment Surge: UPI Dominates Transactions, RTGS Leads High Value

ನವದೆಹಲಿ, ಮೇ 19: ಭಾರತದಲ್ಲಿ ಡಿಜಿಟಲ್ ಪೇಮೆಂಟ್​ಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನೂರಕ್ಕೆ ನೂರು ಡಿಜಿಟಲ್ ಪಾವತಿಯಾಗುವ ದಿನಗಳು ದೂರ ಇಲ್ಲ ಎನ್ನುವಂತಿದೆ ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶ. ಭಾರತದಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ಗಳು (Payment transactions) ನಾಲ್ಕು ವರ್ಷದ ಹಿಂದಕ್ಕೆ ಹೋಲಿಸಿದರೆ ಶೇ. 316ರಷ್ಟು ಹೆಚ್ಚಿದೆ. ಇದರಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಪಾಲು ಅತಿಹೆಚ್ಚು ಇದೆ. ಆದರೆ, ಪಾವತಿ ಮೌಲ್ಯದ (payment value) ವಿಚಾರಕ್ಕೆ ಬಂದರೆ ಆರ್ಟಿಜಿಎಸ್ ನಂಬರ್ ಒನ್ ಎನಿಸಿದೆ.

ಸುದ್ದಿಯ ಮುಖ್ಯಾಂಶಗಳು

  • ಪಾವತಿ ವಿಚಾರದಲ್ಲಿ ಅತಿಹೆಚ್ಚು ಜನರು ಯುಪಿಐ ಬಳಸುತ್ತಾರೆ. ಶೇ 97ಕ್ಕೂ ಅಧಿಕ ಡಿಜಿಟಲ್ ಪಾವತಿಗಳು ಯುಪಿಐ ಮೂಲಕ ಆಗುತ್ತವೆ
  • ಹೆಚ್ಚಿನ ಮೊತ್ತದ ಪೇಮೆಂಟ್​ಗಳಿಗೆ ಆರ್​ಟಿಜಿಎಸ್ ಬಳಕೆ ಆಗುತ್ತಿದೆ. ಶೇ. 65ಕ್ಕೂ ಅಧಿಕ ಮೌಲ್ಯದ ಪಾವತಿಗಳು ಆರ್​ಟಿಜಿಎಸ್ ಮೂಲಕ ಆಗುತ್ತವೆ.
  • ಆರ್​ಟಿಜಿಎಸ್ ಮತ್ತು ನೆಫ್ಟ್ ಮೂಲಕ ಅತಿಹೆಚ್ಚಿನ ಮೊತ್ತದ ಪೇಮೆಂಟ್​ಗಳು ಆಗುತ್ತವೆ.

ಸಣ್ಣ ಮೊತ್ತದ ಪಾವತಿಗಳಲ್ಲಿ ಯುಪಿಐ (UPI) ಕಿಂಗ್

ದೇಶದಲ್ಲಿ ನಡೆಯುವ ಒಟ್ಟು ಸಣ್ಣ ಮೊತ್ತದ (ಚಿಲ್ಲರೆ/Retail) ಡಿಜಿಟಲ್ ಪಾವತಿಗಳ ಪೈಕಿ ಯುಪಿಐ ಬರೋಬ್ಬರಿ ಶೇ. 85.5 ರಷ್ಟು ಪಾಲನ್ನು ಹೊಂದುವ ಮೂಲಕ ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿದೆ.

ದಿನಸಿ ಖರೀದಿ, ತರಕಾರಿ, ಸಣ್ಣ ಪುಟ್ಟ ಅಂಗಡಿಗಳು ಮತ್ತು ದೈನಂದಿನ ವೈಯಕ್ತಿಕ ವ್ಯವಹಾರಗಳಿಗೆ ಜನರು ಯುಪಿಐ ಅನ್ನು ಅತಿ ಹೆಚ್ಚಾಗಿ ಅವಲಂಬಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ದೊಡ್ಡ ಮೊತ್ತದ ವರ್ಗಾವಣೆಯಲ್ಲಿ ಆರ್‌ಟಿಜಿಎಸ್ (RTGS) ಕಿಂಗ್

ದೊಡ್ಡ ಮೊತ್ತದ (High-value) ಅಥವಾ ಸಗಟು ಹಣ ವರ್ಗಾವಣೆಯ ಮೌಲ್ಯದ ವಿಷಯಕ್ಕೆ ಬಂದರೆ ಆರ್‌ಟಿಜಿಎಸ್ ಶೇ. 68.6 ರಷ್ಟು ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ.

ಉದ್ಯಮಗಳು, ದೊಡ್ಡ ಕಂಪನಿಗಳು ಮತ್ತು ಸಂಸ್ಥೆಗಳ ನಡುವೆ ನಡೆಯುವ ಭಾರಿ ಪ್ರಮಾಣದ ಆರ್ಥಿಕ ವಹಿವಾಟುಗಳಿಗೆ ಆರ್‌ಟಿಜಿಎಸ್ ವ್ಯವಸ್ಥೆಯನ್ನೇ ಪ್ರಮುಖವಾಗಿ ಬಳಸಲಾಗುತ್ತಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯ ವಿಕಸನ

ಭಾರತದಲ್ಲಿ ಡಿಜಿಟಲ್ ಪಾವತಿ ಇಕೋಸಿಸ್ಟಂ (Digital Payments Ecosystem) ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಪ್ಲಾಟ್​ಫಾರ್ಮ್​ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರ್‌ಬಿಐ ವರದಿ ಉಲ್ಲೇಖಿಸಿದೆ.

ಸಣ್ಣ ಮತ್ತು ರಿಯಲ್ಟೈಮ್ ಪಾವತಿಗಳಿಗೆ ಯುಪಿಐ ಸುಲಭ ಹಾಗೂ ವೇಗದ ಆಯ್ಕೆಯಾಗಿದ್ದರೆ, ಸುರಕ್ಷಿತ ಹಾಗೂ ದೊಡ್ಡ ಮೊತ್ತದ ಸಾಂಸ್ಥಿಕ ವರ್ಗಾವಣೆಗೆ ಆರ್‌ಟಿಜಿಎಸ್ ಭರವಸೆಯ ಮಾಧ್ಯಮವಾಗಿದೆ. ಹಾಗೆಯೇ, ಯುಪಿಐ ಪಾವತಿಯಲ್ಲಿ ಹಣದ ಮೊತ್ತ ಮತ್ತು ಅವಧಿಗೆ ಮಿತಿ ಇರುವುದರಿಂದ ದೊಡ್ಡ ಮೌಲ್ಯದ ವಹಿವಾಟುಗಳಿಗೆ ಆರ್​ಟಿಜಿಎಸ್ ಬಳಸುವುದು ಜನರಿಗೆ ಅನಿವಾರ್ಯ ಹೌದು.

ಇದನ್ನೂ ಓದಿ: ದೇವಸ್ಥಾನಗಳ ಚಿನ್ನದ ನಗದೀಕರಣದ ಯಾವ ಯೋಜನೆಯೂ ಇಲ್ಲ; ವೈರಲ್ ಸುದ್ದಿ ಕೇವಲ ವದಂತಿ: ಕೇಂದ್ರ ಸರ್ಕಾರ ಸ್ಪಷ್ಟನೆ

ಭಾರತದಲ್ಲಿ ಪೇಮೆಂಟ್ ವಿವರ

2021ರ ಕ್ಯಾಲಂಡರ್ ವರ್ಷದಲ್ಲಿ 6,437 ಕೋಟಿ ಸಂಖ್ಯೆಯಷ್ಟು ಪೇಮೆಂಟ್ ಟ್ರಾನ್ಸಾಕ್ಷನ್ ಆಗಿತ್ತು. 2025ರಲ್ಲಿ ಅದು 26,819 ಕೋಟಿಗೆ ಹಗಿದೆ. ಇನ್ನು, ಇದೇ ಅವಧಿಯಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ ಮೌಲ್ಯದ ವಿಚಾರಕ್ಕೆ ಬಂದರೆ 2021ರಲ್ಲಿ 1,741 ಲಕ್ಷ ಕೋಟಿ ರೂ ಮೌಲ್ಯದ ಪೇಮೆಂಟ್​ಗಳಾಗಿವೆ. 2025ರಲ್ಲಿ ಅದು 3,215 ಲಕ್ಷ ಕೋಟಿ ರೂಗೆ ಏರಿದೆ.

2025ರ ಜುಲೈನಿಂದ ಡಿಸೆಂಬರ್​ವರೆಗೆ ಆದ ಸಂಖ್ಯಾವಾರ ಪಾವತಿಗಳ ಪ್ರಮಾಣ ಹೀಗಿದೆ:

  • ಯುಪಿಐ: ಶೇ. 85.5
  • ಪಿಪಿಐ: ಶೇ. 3.6
  • ನೆಫ್ಟ್: ಶೇ. 3.6
  • ನ್ಯಾಕ್ (NACH- National Automated Clearing House): ಶೇ. 2.7
  • ಕಾರ್ಡ್ ಪೇಮೆಂಟ್: ಶೇ. 2.6
  • ಐಎಂಪಿಎಸ್: ಶೇ. 1.8
  • ಆರ್​ಟಿಜಿಎಸ್: ಶೇ. 0.1
  • ಚೆಕ್: ಶೇ. 0.2

ಪೇಮೆಂಟ್ ಮೌಲ್ಯದಲ್ಲಿ ವಿವಿಧ ಪ್ಲಾಟ್​ಫಾರ್ಮ್​ಗಳ ಪಾಲು

  • ಆರ್​ಟಿಜಿಎಸ್: ಶೇ. 68.6
  • ನೆಫ್ಟ್: ಶೇ. 14.9
  • ಯುಪಿಐ: ಶೇ. 9.5
  • ಐಎಂಪಿಎಸ್: ಶೇ. 2.3
  • ಚೆಕ್: ಶೇ. 2.1
  • ನ್ಯಾಕ್: ಶೇ. 1.6
  • ಪಿಪಿಐ: ಶೇ. 0.1

ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ?

ಆರ್‌ಬಿಐನ ಪೇಮೆಂಟ್ಸ್ ಸಿಸ್ಟಂ ರಿಪೋರ್ಟ್​ನ ಈ ದತ್ತಾಂಶವು ಭಾರತೀಯ ಆರ್ಥಿಕತೆಯಲ್ಲಿ ಡಿಜಿಟಲ್ ಕ್ರಾಂತಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಸಾಮಾನ್ಯ ನಾಗರಿಕನ ಚಹಾದ ಅಂಗಡಿಯ ಪಾವತಿಯಿಂದ ಹಿಡಿದು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಕೋಟ್ಯಂತರ ರೂಪಾಯಿಗಳ ವ್ಯವಹಾರದವರೆಗೆ ಎಲ್ಲವೂ ಡಿಜಿಟಲ್ ವ್ಯವಸ್ಥೆಯಡಿ ಸುರಕ್ಷಿತವಾಗಿ ಹಂಚಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

1 ಸ್ಥಾನಕ್ಕಾಗಿ 5 ತಂಡಗಳ ಪೈಪೋಟಿ: ಯಾರು ಹೇಗೆ ಪ್ಲೇಆಫ್​ಗೇರಬಹುದು?

Source link

DRDO Internship 2026: ಯುವ ಎಂಜಿನಿಯರ್‌ಗಳಿಗೆ DRDO ನಿಂದ ಬಂಪರ್ ಕೊಡುಗೆ; 40 ಇಂಟರ್ನ್‌ಶಿಪ್ ಸೀಟುಗಳಿಗೆ ಅರ್ಜಿ ಆಹ್ವಾನ! – Kannada News | DRDO Internship 2026: Engineering Students! Apply for 40 Seats, Gain Defense Research Experience

ಯುವ ಎಂಜಿನಿಯರ್‌ಗಳಿಗೆ DRDO ನಿಂದ ಬಂಪರ್ ಕೊಡುಗೆ

ದೇಶದ ಹೆಮ್ಮೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ DRDO (Defence Research and Development Organisation) ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅದ್ಭುತ ಇಂಟರ್ನ್‌ಶಿಪ್ ಅವಕಾಶವನ್ನು ತಂದಿದೆ. ಈ ಇಂಟರ್ನ್‌ಶಿಪ್ ದೇಶದ ರಕ್ಷಣಾ ಸಂಶೋಧನೆಗೆ ಸಂಬಂಧಿಸಿದ ಅತ್ಯಾಧುನಿಕ ಯೋಜನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಮತ್ತು ಪ್ರಾಯೋಗಿಕ ಅನುಭವವನ್ನು ಪಡೆಯುವ ಅಪರೂಪದ ವೇದಿಕೆಯಾಗಿದೆ.

DRDO ಈ ಇಂಟರ್ನ್‌ಶಿಪ್‌ಗಾಗಿ ಒಟ್ಟು 40 ಸೀಟುಗಳನ್ನು ಬಿಡುಗಡೆ ಮಾಡಿದೆ. ಇದರ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಈಗಾಗಲೇ ಮೇ 18 ರಿಂದ ಪ್ರಾರಂಭವಾಗಿದ್ದು, ಮೇ 27, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು DRDO ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಅವಕಾಶವು ಯುಜಿ (UG) ಮತ್ತು ಪಿಜಿ (PG) ಹಂತಗಳಲ್ಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲಭ್ಯವಿದೆ.

ಯಾವ ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಗುತ್ತದೆ?

ಈ ಇಂಟರ್ನ್‌ಶಿಪ್ ಪೂರ್ಣ ಸಮಯದ (Full-Time) ಎಂಜಿನಿಯರಿಂಗ್ ಕೋರ್ಸ್ ಅನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಮುಕ್ತವಾಗಿದೆ.

  • ಪದವಿಪೂರ್ವ (UG) ವಿದ್ಯಾರ್ಥಿಗಳು: ಎಂಜಿನಿಯರಿಂಗ್‌ನ 7ನೇ ಅಥವಾ 8ನೇ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಸ್ನಾತಕೋತ್ತರ (PG) ವಿದ್ಯಾರ್ಥಿಗಳು: ಎರಡನೇ ವರ್ಷದ (M.Tech/ME) ವಿದ್ಯಾರ್ಥಿಗಳು ಸಹ ಅರ್ಹರಾಗಿರುತ್ತಾರೆ.
  • ಮಾನ್ಯತೆ: ಅಭ್ಯರ್ಥಿಯು ಓದುತ್ತಿರುವ ಶಿಕ್ಷಣ ಸಂಸ್ಥೆಯು ಕಡ್ಡಾಯವಾಗಿ AICTE ಅಥವಾ UGC ಯಿಂದ ಮಾನ್ಯತೆ ಪಡೆದಿರಬೇಕು.

ಅಗತ್ಯವಿರುವ ಶೈಕ್ಷಣಿಕ ಅಂಕಗಳು:

ಅರ್ಜಿದಾರರು ಅತ್ಯುತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರಬೇಕಾದುದು ಅತ್ಯಗತ್ಯ. ಅಭ್ಯರ್ಥಿಗಳು ತಮ್ಮ ಕೋರ್ಸ್‌ನಲ್ಲಿ ಕನಿಷ್ಠ ಶೇ.75 ಅಂಕಗಳನ್ನು ಅಥವಾ 10 ಕ್ಕೆ 7.5 CGPA ಅನ್ನು ಹೊಂದಿರಬೇಕು. ವಿದ್ಯಾರ್ಥಿಯು ಪ್ರಥಮ ದರ್ಜೆ (First Class) ಪದವಿಯೊಂದಿಗೆ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುತ್ತಿರಬೇಕು. ಆನ್‌ಲೈನ್ ಅರ್ಜಿ ನಮೂನೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ (Marksheet) ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಇಂಟರ್ನ್‌ಶಿಪ್ ಅವಧಿ ಎಷ್ಟು ಕಾಲ ಇರುತ್ತದೆ?

ವಿದ್ಯಾರ್ಥಿಗಳ ಕೋರ್ಸ್‌ಗೆ ಅನುಗುಣವಾಗಿ ಇಂಟರ್ನ್‌ಶಿಪ್ ಅವಧಿಯನ್ನು ನಿಗದಿಪಡಿಸಲಾಗಿದೆ:

  • UG ವಿದ್ಯಾರ್ಥಿಗಳಿಗೆ: 6 ತಿಂಗಳುಗಳ ಇಂಟರ್ನ್‌ಶಿಪ್ ಅವಧಿ ಇರುತ್ತದೆ.
  • PG ವಿದ್ಯಾರ್ಥಿಗಳಿಗೆ: 11 ತಿಂಗಳ ಕಾಲ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಅವಕಾಶವಿರುತ್ತದೆ.

ಈ ಅವಧಿಯಲ್ಲಿ ವಿದ್ಯಾರ್ಥಿಗಳು ಹಿರಿಯ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಪ್ರಮುಖ ತಾಂತ್ರಿಕ ಹಾಗೂ ಸಂಶೋಧನಾ ಯೋಜನೆಗಳಲ್ಲಿ ಕೆಲಸ ಮಾಡುವ ಸುದೀರ್ಘ ಅನುಭವವನ್ನು ಪಡೆಯಲಿದ್ದಾರೆ.

ವಿದ್ಯಾರ್ಥಿವೇತನ (Stipend) ಮತ್ತು ಪಾವತಿ ಮಾಹಿತಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಅವಧಿಯಲ್ಲಿ ಆರ್ಥಿಕ ನೆರವು ಕೂಡ ಸಿಗಲಿದೆ. ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ 5,000ರೂ. ಸ್ಟೈಫಂಡ್ ನೀಡಲಾಗುವುದು. 6 ತಿಂಗಳ ಅವಧಿಯನ್ನು ಪೂರ್ಣಗೊಳಿಸುವ ಯುಜಿ ವಿದ್ಯಾರ್ಥಿಗಳಿಗೆ ಒಟ್ಟು 30,000ರೂ. ಮೊತ್ತ ಸಿಗಲಿದೆ. ಈ ಪಾವತಿಯನ್ನು ಎರಡು ಕಂತುಗಳಲ್ಲಿ ಮಾಡಲಾಗುತ್ತದೆ. ಮೊದಲ 3 ತಿಂಗಳ ಇಂಟರ್ನ್‌ಶಿಪ್ ಯಶಸ್ವಿಯಾಗಿ ಮುಗಿದ ನಂತರ ಮೊದಲ ಕಂತು ಹಾಗೂ ಇಂಟರ್ನ್‌ಶಿಪ್ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಎರಡನೇ ಕಂತನ್ನು ಬಿಡುಗಡೆ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 4:19 pm, Tue, 19 May 26

Source link

ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?

ಕೊಡಗು (ಮೇ 19): ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ (Kodagu dubare elephant camp) ಎರಡು ಆನೆಗಳ ಮಧ್ಯೆ ನಡೆದ ಕಾದಾಟದಲ್ಲಿ ಸಿಲುಕಿ ಪ್ರವಾಸಿ ಮಹಿಳೆಯೋರ್ವಳು ಸಾವನ್ನಪ್ಪಿದ್ದು, ಈ ದುರಂತದಿಂದ ಇಡೀ ಜಿಲ್ಲೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ಕರಾಳ ಘಟನೆ ಮಾಸುವ ಮುನ್ನವೇ ಕಾದಾಟದಲ್ಲಿ ಗಾಯಗೊಂಡಿದ್ದ ‘ಮಾರ್ತಾಂಡ’ (Marthanda) ಆನೆ ಚಿಕಿತ್ಸೆ ಫಲಕಾರಿಯಾಗದೇ ಇಂದು(ಮೇ 19) ಕೊನೆಯುಸಿರೆಳೆದಿದೆ. ಹೌದು.. ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ‘ಮಾರ್ತಾಂಡ’ ಮತ್ತು ‘ಕಂಜನ್’ ಆನೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದೀಗ, ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಸಹ ಸಾವನ್ನಪ್ಪಿದೆ. ಹೀಗೆ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ 1 ಘಟನೆಯಲ್ಲಿ ಎರಡು ಸಾವಿಗೆ ಕಾರಣವೇನು? ಯಾರನ್ನ ದೂಷಿಸೋದು?

ಇದನ್ನೂ ಓದಿ: ಎರಡೆರಡು ಬಾರಿ ಸೆರೆ, ಮನೆಗಳ ಬಾಗಿಲು ಮುರಿದು ಪುಂಡಾಟ: ಕಾದಾಟದಲ್ಲಿ ಮೃತಪಟ್ಟ ಮಾರ್ತಾಂಡ ಆನೆಗಿತ್ತು ಭಯಂಕರ ಇತಿಹಾಸ

Source link

ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ

ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವ ಇಂದು (ಮೇ 19). ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಇದೀಗ ವಿಜಯಲಕ್ಷ್ಮಿ ಅವರು ವಿವಾಹ ವಾರ್ಷಿಕೋತ್ಸವದ ದಿನ ಪತಿಯ ಭೇಟಿಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಜೊತೆಗೆ ಪುತ್ರ ವಿನಿಶ್ ದರ್ಶನ್ ಸಹ ಆಗಮಿಸಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link