Headlines

nagaraj11081993

‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ

ಪುನೀತ್ ರಾಜ್​​ಕುಮಾರ್ (Puneeth Rajkumar) ನಟನೆಯ ‘ಆಕಾಶ್’ ಸಿನಿಮಾ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದೆ. 2005 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾನಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. ಪುನೀತ್ ನಾಯಕನಾಗಿ ನಟಿಸಿದ ಐದನೇ ಸಿನಿಮಾ ಇದಾಗಿದ್ದು, ರಮ್ಯಾ ಜೊತೆಗೆ ನಟಿಸಿದ ಎರಡನೇ ಸಿನಿಮಾ ಆಗಿತ್ತು. ಮಹೇಶ್ ನಿರ್ದೇಶಿಸಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದ್ದು, ನಟಿ ರಮ್ಯಾ ಸೇರಿದಂತೆ, ರಾಘವೇಂದ್ರ ರಾಜ್​ಕುಮಾರ್ ಇನ್ನೂ ಹಲವರು…

Read More

ವರ್ಷಗಳಿಂದ ಅಭಿವೃದ್ಧಿ ಕಾಣದೆ ಉಳಿದ ಬಾಲಕಿಯರ ವಸತಿ ನಿಲಯ; ಮೌಢ್ಯವನ್ನೇ ನೆಪ ಮಾಡಿಕೊಂಡಿತಾ ಸರ್ಕಾರ?

ತುಮಕೂರು, ಮಾರ್ಚ್​ 13:  ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಬಾಲಕಿಯರ ವಸತಿ ನಿಲಯ (Girl’s Hostel) ಅಭಿವೃದ್ಧಿ ಕಾಣದೆ ಪಾಳು ಬಿದ್ದಿದೆ. ಗ್ರಾಮದಲ್ಲಿ ಇರುವ ಪಾರಂಪರಿಕ ನಂಬಿಕೆಯನ್ನು ನೆಪ ಮಾಡಿಕೊಂಡು ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಿಸುತ್ತಿದೆಯೇ ಎಂಬ ಪ್ರಶ್ನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಸುಮಾರು 69 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಸ್ತೂರಿಬಾ ಬಾಲಿಕಿಯರ ವಿದ್ಯಾರ್ಥಿನಿಲಯ ಕಳೆದ ಎಂಟು ವರ್ಷಗಳಿಂದ ಖಾಲಿ ಬಿದ್ದಿದ್ದು, ಇದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಿರ್ಮಾಣವಾದ ಒಂದು ತಿಂಗಳಲ್ಲೇ…

Read More

ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬದುಕಿದ್ದಾರಷ್ಟೇ, ಟ್ರಂಪ್ ಹೀಗ್ಯಾಕಂದ್ರು?

ವಾಷಿಂಗ್ಟನ್, ಮಾರ್ಚ್​ 13: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಹತ್ವದ ಹೇಳಿಕೆ ನೀಡಿದ್ದಾರೆ. ಮೊಜ್ತಾಬಾ ಖಮೇನಿ ಉಸಿರಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಇಡೀ ಮಧ್ಯಪ್ರಾಚ್ಯವನ್ನು ಆವರಿಸಿದೆ. ಅಮೆರಿಕ-ಇಸ್ರೇಲ್ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಗಲ್ಫ್ ರಾಷ್ಟ್ರಗಳಾದ ಯುಎಇ, ಬಹ್ರೇನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾಗಳ ಮೇಲೆ ದಾಳಿ ಮಾಡಿದೆ. ಯುದ್ಧದ ಮಧ್ಯೆ, ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ…

Read More

ಫರ್ಮಾನ್ ಖಾನ್ ಜೊತೆ ಮೊನಲಿಸಾ ಮದುವೆ: ತಂದೆ ಹೇಳಿದ್ದೇನು?

ಕುಂಭಮೇಳದ ಒಂದು ಚಿತ್ರದಿಂದ ಭಾರಿ ಜನಪ್ರಿಯತೆ ಪಡೆದ ಮೊನಲಿಸಾ ಭೋಸ್ಲೆಯ (Monalisa Bhosle) ಮದುವೆ ಇತ್ತೀಚೆಗಷ್ಟೆ ಕೇರಳದಲ್ಲಿ ನಡೆದಿದ್ದು, ಅವರ ಕುಂಭಮೇಳದ ಚಿತ್ರದಷ್ಟೆ ಅವರ ಮದುವೆಯೂ ವೈರಲ್ ಆಗುತ್ತಿದೆ. ಮೊನಲಿಸಾ ಭೋಸ್ಲೆ, ಫರ್ಮಾನ್ ಖಾನ್ ಎಂಬುವರನ್ನು ಅವರ ಕುಟುಂಬದ ಇಚ್ಛೆಯ ವಿರುದ್ಧವಾಗಿ ಕೇರಳದಲ್ಲಿ ಮದುವೆ ಆಗಿದ್ದಾರೆ. ಇವರ ಮದುವೆಯ ಮುಂದಾಳತ್ವವನ್ನು ಕೇರಳದ ಕೆಲವು ರಾಜಕೀಯ ಮುಖಂಡರು ವಹಿಸಿಕೊಂಡಿದ್ದು ವಿಶೇಷ. ಮೊನಲಿಸಾ ಮತ್ತು ಫರ್ಮಾನ್ ಖಾನ್ ಅವರ ಮದುವೆಯನ್ನು ಕೆಲವರು ‘ಲವ್ ಜಿಹಾದ್’ ಎಂದು ಸಹ ಕರೆದಿದ್ದಾರೆ, ಆದರೆ…

Read More

ತೆಲುಗು ಹೀರೋಗಳ ನೋಡಿ ಕಲಿಯಬೇಕಿದೆ ಕನ್ನಡದ ನಟರು

ಕನ್ನಡದಲ್ಲಿ ಕೆಲವು ಅದ್ಭುತವಾದ ನಟರುಗಳಿದ್ದಾರೆ. ಪ್ರತಿಭೆಯ ವಿಷಯವಾಗಿ, ವ್ಯಕ್ತಿತ್ವದ ವಿಷಯವಾಗಿ ಅವರು ಇತರೆ ಚಿತ್ರರಂಗದ ನಟರುಗಳಿಗೆ ಮಾದರಿ ಆಗಬಲ್ಲರು. ಆದರೆ ಕೆಲವು ವಿಷಯಗಳಲ್ಲಿ ವಿಶೇಷವಾಗಿ ಸ್ವತಃ ಚಿತ್ರರಂಗದ ವಿಷಯವಾಗಿ ಅವರಿಂದ ಇನ್ನಷ್ಟು ತೊಡಗಿಕೊಳ್ಳುವಿಕೆಯನ್ನು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಟರು ಮಾಡುತ್ತಿರುವ ಕಾರ್ಯವನ್ನು ಪ್ರೇಕ್ಷಕರು ಕನ್ನಡದ ಸ್ಟಾರ್ ನಟರು ತಂತ್ರಜ್ಞರಿಂದಲೂ ನಿರೀಕ್ಷಿಸುತ್ತಿದ್ದಾರೆ. ತೆಲುಗಿನ ಸ್ಟಾರ್ ನಟರುಗಳಾದ ಮಹೇಶ್ ಬಾಬು, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಇನ್ನೂ ಹಲವರು ತಮ್ಮದೇ ಆದ…

Read More

ಅಡ್ವಾನ್ಸ್ ಬುಕಿಂಗ್​​ನಿಂದ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಧುರಂಧರ್ 2’; ಹೊಸ ದಾಖಲೆ

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಹೊಸ ದಾಖಲೆ ಬರೆಯಲು ರೆಡಿ ಆಗಿದೆ. ಈ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಹಿಂದಿನ ದಿನ ಅಂದರೆ ಮಾರ್ಚ್​ 18ರಂದು ಸಿನಿಮಾಗೆ ಸಾಕಷ್ಟು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಶೋ ಹೌಸ್​​​ಫುಲ್ ಆಗಿದೆ. ಇದರಿಂದ ಸಿನಿಮಾಗೆ ದೊಡ್ಡ ಮೊಟ್ಟದಲ್ಲಿ ಹಣ ಹರಿದು ಬರುತ್ತಿದೆ. ಅಡ್ವಾನ್ಸ್ ಬುಕಿಂಗ್​​ನಿಂದ ಚಿತ್ರಕ್ಕೆ ವಿಶ್ವಾದ್ಯಂತ 60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ‘ಧುರಂಧರ್ 2’…

Read More

Video: ನೆಮ್ಮದಿಯಿಂದ ಚಹಾ ಕುಡಿಯಲು ಆಗ್ತಾ ಇಲ್ಲ; ಕಂದಮ್ಮನ ಆರೈಕೆಯನ್ನು ನೆನೆದು ಭಾವುಕಳಾದ ತಾಯಿ

ತಾಯಿ (mother) ಅಂದರೆ ತ್ಯಾಗ, ಪ್ರೀತಿಗೆ ಇನ್ನೊಂದು ಹೆಸರು. ಮಕ್ಕಳ ಆರೈಕೆ ಹಾಗೂ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ಮಕ್ಕಳು ಬೆಳೆದು ಸ್ವಲ್ಪ ದೊಡ್ಡವರಾಗುವವರೆಗೂ ತಾಯಿ ತನ್ನ ನಿದ್ದೆ, ಊಟ, ತಿಂಡಿ ಎಲ್ಲವನ್ನೂ ತ್ಯಾಗ ಮಾಡಬೇಕು. ಇದೀಗ ಎರಡು ವರ್ಷದ ಮಗುವಿನ ಆರೈಕೆ ಮಾಡುತ್ತಿರುವ ತಾಯಿಯೊಬ್ಬಳು ತನ್ನ ಕಂದಮ್ಮ ತನ್ನನ್ನು ಬಿಟ್ಟು ಒಂದು ನಿಮಿಷ ಕೂಡ ಇರಲಾರದು. ನನಗೆ ಊಟ, ತಿಂಡಿ ಮಾಡಲು ಸಮಯವಿಲ್ಲ ಎಂದು ಕಣ್ಣೀರು ಹಾಕಿರುವ ವಿಡಿಯೋ ವೈರಲ್‌ ಆಗಿದೆ. ಈ ಕ್ಲಿಪಿಂಗ್‌ ನೋಡಿದ…

Read More

ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಹೇಳಿಕೆಯಿಂದ ಕಾಂಗ್ರೆಸ್​​ಗೆ ಡ್ಯಾಮೇಜ್​​: ರಾಮಲಿಂಗಾರೆಡ್ಡಿ ಏನಂದ್ರು?

ಬೆಂಗಳೂರು, ಮಾರ್ಚ್​​ 13: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್​​ ಬಗ್ಗೆ ಸ್ವಪಕ್ಷ ಶಾಸಕ ಇಕ್ಬಾಲ್​​ ಹುಸೇನ್​​ ನೀಡಿದ್ದ ಹೇಳಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಇಕ್ಬಾಲ್ ಹುಸೇನ್ ಮಾತ್ರವಲ್ಲ, ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಚರ್ಚಿಸಬಾರದು. ಯಾವುದೇ ಸಮಸ್ಯೆಗಳಿದ್ದರೂ, ಮುಖ್ಯಮಂತ್ರಿಗಳು ಅಥವಾ ಉಪಮುಖ್ಯಮಂತ್ರಿಗಳೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಮಾಧ್ಯಮಗಳ ಮುಂದೆ ಮಾತನಾಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಜೆಟ್​​​ ಸಮಾಧಾನ ತಂದಿಲ್ಲ. ಆಯವ್ಯಯ…

Read More

ಪಿಎಂ ಕಿಸಾನ್ 22ನೇ ಕಂತಿನ ಹಣ ಇಂದು ಬಿಡುಗಡೆ; ಈ ರೀತಿಯ ಫಲಾನುಭವಿಗಳಿಗಿರೋದಿಲ್ಲ ಯೋಜನೆ ಭಾಗ್ಯ

ಗುವಾಹಟಿ, ಮಾರ್ಚ್ 13: ರೈತರಿಗೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan scheme) 22ನೇ ಕಂತಿನ ಹಣ ಇಂದು ಶುಕ್ರವಾರ ಬಿಡುಗಡೆ ಆಗುತ್ತಿದೆ. ಅಸ್ಸಾಮ್ ರಾಜಧಾನಿಯಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಪ್ರಧಾನಿಗಳು ಹಣ ಬಿಡುಗಡೆ ಮಾಡಲಿದ್ದಾರೆ. 9 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ನೇರವಾಗಿ ಜಮೆಯಾಗಲಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ 2025ರ ನವೆಂಬರ್ 19ರಂದು 21ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9 ಕೋಟಿಗೂ…

Read More

ಇದೆಂಥಾ ಕಾಲ ಬಂತಪ್ಪಾ… ಹೋಟೆಲ್​ಗಳ ಬಿಲ್​ನಲ್ಲಿ ಜಿಎಸ್​ಟಿ ಜತೆ ಸೇರ್ಪಡೆಯಾಯ್ತು ಗ್ಯಾಸ್ ಶುಲ್ಕ!

ಬೆಂಗಳೂರು, ಮಾರ್ಚ್ 13: ನಾವು ಯಾವುದೇ ದುಬಾರಿ ಹೋಟೆಲ್‌ಗೆ ಹೋದಾಗ ಬಿಲ್​ನ ಕೊನೆಯಲ್ಲಿ ಜಿಎಸ್‌ಟಿ (GST) ಶುಲ್ಕವನ್ನೂ ಸೇರಿಸುವುದು ಸಾಮಾನ್ಯ. ಆದರೆ ಈಗ, ಅದರ ಜೊತೆ ಮತ್ತೊಂದು ಶುಲ್ಕವನ್ನು ಸೇರಿಸುತ್ತಿದ್ದಾರೆ. ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ (Commercial cylinder) ಪೂರೈಕೆ ವ್ಯತ್ಯಯ, ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ವ್ಯವಸ್ಥಾಪಕರು ಗ್ರಾಹಕರ ಮೇಲೆ ಆ ಹೊರೆಯನ್ನು ಹಾಕುತ್ತಿದ್ದಾರೆ. ಗ್ಯಾಸ್ ಪೂರೈಕೆ ಸಮಸ್ಯೆ ಹೆಸರಿನಲ್ಲಿ ತಿಂಡಿಯ ಬಿಲ್‌ಗೆ ಹೆಚ್ಚುವರಿ ‘ಗ್ಯಾಸ್ ಶುಲ್ಕ (Gas Fee)’ ಸೇರಿಸುತ್ತಿದ್ದಾರೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ…

Read More