Headlines

nagaraj11081993

ನಾಯಿ ಕಡಿತ ನಿರ್ಲಕ್ಷಿಸಲು ಸಾಧ್ಯವಿಲ್ಲ, ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಖಡಕ್ ಆದೇಶ – Kannada News | Supreme Court of India Calls for Action on Rising Stray Dog Concerns

ನವದೆಹಲಿ, ಮೇ 19: ದೇಶಾದ್ಯಂತ ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳಿಂದ ಬೀದಿ ನಾಯಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಹಾಗೂ ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಅತ್ಯಂತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾನು ನವೆಂಬರ್ 2025 ರಲ್ಲಿ ನೀಡಿದ್ದ ಐತಿಹಾಸಿಕ ಆದೇಶವನ್ನು ಮಾರ್ಪಡಿಸಲು ಅಥವಾ ಹಿಂಪಡೆಯಲು ಕೋರಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯವು ಸಂಪೂರ್ಣವಾಗಿ ವಜಾಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಉಪಸ್ಥಿತಿಯು ಮತ್ತು ಅವುಗಳ ಜನಸಂಖ್ಯೆ ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ…

Read More

Video: ಆತುರದಿಂದ ಹಳಿ ದಾಟುವಾಗ ಬಂದೇ ಬಿಡ್ತು ರೈಲು, ಮಕ್ಕಳನ್ನು ಎದೆಗಪ್ಪಿ ಕುಳಿತ ಮಹಿಳೆ – Kannada News | Mother Shields Child on Railway Tracks as Train Passes Overhead

ಸಮಷ್ಟಿಪುರ, ಮೇ 19: ಬಿಹಾರದ ಸಮಷ್ಟಿಪುರದ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಮ್ಮ ಮಕ್ಕಳೊಂದಿಗೆ ಆತುರದಿಂದ ಹಳಿ ದಾಟುವಾಗ ರೈಲು ಬಂದಿರುವ ವಿಡಿಯೋ ವೈರಲ್ ಆಗಿದೆ. ಶಹಪುರ್ ಪಟೋರಿ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ತಾಯಿಯೊಬ್ಬರು ತನ್ನ ಪ್ರಾಣವನ್ನು ಪಣಕ್ಕಿಟ್ಟು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳೆಯ ಧೈರ್ಯ ಮತ್ತು ಸಹಾನುಭೂತಿಗೆ ಜನರಿಂದ ಪ್ರಶಂಸೆ ಗಳಿಸಿದೆ. ವರದಿಗಳ ಪ್ರಕಾರ, ಮೂವರು ಮಹಿಳೆಯರು ಇಬ್ಬರು ಚಿಕ್ಕ ಮಕ್ಕಳೊಂದಿಗೆ ರೈಲ್ವೆ ಹಳಿಗಳನ್ನು ದಾಟುತ್ತಿದ್ದರು. ಅವರು ಆತುರದಿಂದ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದಾಗ…

Read More

Gold Rate: ಚಿನ್ನದ ಬೆಲೆ ಅಲ್ಪ ಏರಿಕೆ, ಬೆಳ್ಳಿ ಬೆಲೆ ಇಳಿಕೆ – Kannada News | Gold Price Today on 19th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 19: ಸತತವಾಗಿ ಇಳಿಯುತ್ತಿದ್ದ ಚಿನ್ನದ ಬೆಲೆ (Gold Rates) ಇಂದು ಮಂಗಳವಾರ ಗ್ರಾಮ್​ಗೆ 75 ರೂನಷ್ಟು ಹೆಚ್ಚಿದೆ. ಕಳೆದ ಹತ್ತು ದಿನದಲ್ಲಿ ಇದರ ಬೆಲೆ ಸುಮಾರು 430 ರೂಗಳಷ್ಟು ಹೆಚ್ಚಿದಂತಾಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಇಂದು ಬಂಗಾರದ ದರ ಏರಿಕೆ ಆಗಿದೆ. ನಿನ್ನೆ ಏರಿದ್ದ ಬೆಳ್ಳಿ ಬೆಲೆ ಇವತ್ತು 5 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ…

Read More

TV9 Kannada News Live: ಬೆಳಗಾವಿ ವಂಚನೆ ಪ್ರಕರಣದಲ್ಲಿ ನೂರಾರು ಕೋಟಿ ಹಣ ಪತ್ತೆ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Belagavi 4500 Crore Scam, Fuel Price Hike and Lahore’s Historic Name Change

ಬೆಂಗಳೂರು, ಮೇ 19: ಬೆಳಗಾವಿಯ 4,500 ಕೋಟಿ ರೂ. ಮಹಾವಂಚನೆ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ, ನೂರಾರು ಕೋಟಿ ರೂ. ಪತ್ತೆ ಮಾಡಿದೆ. ಇತ್ತ ವಾರದಲ್ಲೇ ಎರಡನೇ ಬಾರಿ ಇಂಧನ (Petrol) ದರ ಏರಿಕೆಯಾಗಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇವೆಲ್ಲದರ ನಡುವೆ, ಪಾಕಿಸ್ತಾನದ ಲಾಹೋರ್‌ನಲ್ಲಿ ಐತಿಹಾಸಿಕ ಸ್ಥಳಗಳಿಗೆ ಹಳೆಯ ಹಿಂದೂ ಮತ್ತು ಸಿಖ್ ಹೆಸರುಗಳನ್ನು ಮರುಸ್ಥಾಪಿಸುವ ಮಹತ್ವದ ಬದಲಾವಣೆ ನಡೆದಿದೆ. ಮುಖ್ಯಾಂಶಗಳು ಬೆಳಗಾವಿ ವಂಚನೆ ಪ್ರಕರಣದಲ್ಲಿ ಆರೋಪಿಯ ಹದಿನೈದು ಬ್ಯಾಂಕ್ ಖಾತೆಗಳನ್ನು ಸಿಐಡಿ ಫ್ರೀಜ್ ಮಾಡಿದೆ. ವಾರದಲ್ಲಿ ಎರಡನೇ ಬಾರಿ…

Read More

Garuda Purana: ಗರುಡ ಪುರಾಣವನ್ನು ಮನೆಯಲ್ಲಿ ಇಡಬಾರದು ಎಂಬುದು ನಿಜವೇ? ಇದರ ಹಿಂದಿನ ಅಸಲಿ ರಹಸ್ಯ ಇಲ್ಲಿದೆ! – Kannada News | Garuda Purana at Home: Myth vs. Truth. Is it Inauspicious? Find Out the Real Benefits

ಸನಾತನ ಧರ್ಮದಲ್ಲಿ 18 ಮಹಾಪುರಾಣಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಅವುಗಳಲ್ಲಿ ಭಗವಾನ್ ವಿಷ್ಣು ಮತ್ತು ಆತನ ವಾಹನವಾದ ಗರುಡನ ನಡುವಿನ ಸಂವಾದವೇ ‘ಗರುಡ ಪುರಾಣ‘. ಆದರೆ, ಇಂದಿಗೂ ಅನೇಕ ಮನೆಗಳಲ್ಲಿ ಗರುಡ ಪುರಾಣವನ್ನು ಇಡಲು ಅಥವಾ ಓದಲು ಜನರು ಹಿಂಜರಿಯುತ್ತಾರೆ. ಮನೆಯಲ್ಲಿ ಗರುಡ ಪುರಾಣವನ್ನು ಇಟ್ಟರೆ ಅಪಶಕುನವಾಗುತ್ತದೆ, ಸಾವು ಸಂಭವಿಸುತ್ತದೆ ಅಥವಾ ನಕಾರಾತ್ಮಕ ಶಕ್ತಿಗಳು ಆವರಿಸುತ್ತವೆ ಎಂಬ ಭೀತಿ ಅನೇಕರಲ್ಲಿದೆ. ಆದರೆ ಧರ್ಮಶಾಸ್ತ್ರಗಳ ಪ್ರಕಾರ ಇದು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ಕಲ್ಪನೆಯಾಗಿದೆ! ಹೌದು, ಗರುಡ ಪುರಾಣವನ್ನು…

Read More

ನಾಳೆ ಸಾರಿಗೆ ಬಸ್ ಮಾತ್ರವಲ್ಲ, ಔಷಧಗಳು ಸಿಗೋದೂ ಡೌಟ್! ಕರ್ನಾಟಕದಲ್ಲೂ ಮೆಡಿಕಲ್ ಶಾಪ್ ಬಂದ್ – Kannada News | Nationwide Medical Shop Strike on May 20: Pharmacies in Karnataka to Shut Down Over Online Medicine Sales

ಬೆಂಗಳೂರು, ಮೇ 19: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ನಾಳೆ (ಮೇ 20) ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿರುವ ಬೆನ್ನಲ್ಲೇ, ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಆಘಾತ ಕಾದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ದೇಶವ್ಯಾಪಿ ಖಾಸಗಿ ಔಷಧ ಮಳಿಗೆಗಳ (Medical Shop Bandh) ಬಂದ್‌ಗೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲೂ ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇದರಿಂದಾಗಿ ನಾಳೆ ಬಸ್ ಸೌಲಭ್ಯ ಮಾತ್ರವಲ್ಲದೆ, ತುರ್ತು ಸಂದರ್ಭಗಳಲ್ಲಿ ಔಷಧಗಳು ಸಿಗುವುದೂ ಸಹ…

Read More

ನಟ ಸಲ್ಮಾನ್ ಖಾನ್ ಮನೆಯಲ್ಲಿ ಹಾವು ಪತ್ತೆ: ಸುರಕ್ಷಿತವಾಗಿ ಹಿಡಿದ ಸಿಬ್ಬಂದಿ – Kannada News | Snake rescued at Salman Khan Mumbai home Galaxy Apartment Photo Goes Viral

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ (Galaxy Apartment) ಆವರಣದಲ್ಲಿ ಸೋಮವಾರ (ಮೇ 18) ಹಾವೊಂದು ಪತ್ತೆಯಾಗಿದ್ದು, ಅದನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಅಪಾರ್ಟ್‌ಮೆಂಟ್‌ನ ನೆಲ ಅಂತಸ್ತಿನಲ್ಲಿ ಹಾವು (Snake) ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಯು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಾವು ಹಿಡಿಯುವ ತಜ್ಞರು ಅತ್ಯಂತ ಜಾಣ್ಮೆಯಿಂದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ (Salman Khan) ಅವರಿಗೆ ಹಾವು ಕಚ್ಚಿದ್ದ ಘಟನೆಯನ್ನು ಫ್ಯಾನ್ಸ್…

Read More

ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರಭಾವಿಗಳ ಜೊತೆ ಹೋರಾಟ ಮಾಡಬೇಕಾದೀತು – Kannada News | Horoscope May 19 Tuesday 2026; Dina Rashi Bhavishya Today, Checkout the details here

ಮೇಷ ರಾಶಿ: ನೀವು ಅಪಾರ ಆತ್ಮವಿಶ್ವಾಸವನ್ನು ಪಡೆದಿದ್ದರೂ ಸರಿಯಾದ ಸಹಕಾರ ಸಿಗದೇ ಕಾರ್ಯವು ಅಪೂರ್ಣವಾಗುವುದು. ಮನೆಯಲ್ಲಿ ನಿಮ್ಮ ಶಕ್ತಿಯು ಸಮಸ್ಯೆಗಳನ್ನು ನಿವಾರಿಸುತ್ತದೆ. ಯಾರ ಮೇಲೋ ಅನುಮಾನಪಡುವುದಕ್ಕಿಂತ ಸರಿಯಾದ ಮಾಹಿತಿಯನ್ನು ಪಡೆದು ಮುಂದಡಿ ಇಡಿ. ಬಂಧುಗಳ ಆರೋಗ್ಯದ ಆರೈಕೆಯನ್ನು ನೀವು ಮಾಡಬೇಕಾದೀತು. ನಿಕಟವರ್ತಿಗಳ ಮಾತನ್ನು ನಗಣ್ಯ ಮಾಡುವಿರಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌ ವೃಷಭ ರಾಶಿ: ಯಾರಿಗೂ ಗೊತ್ತಾಗದಂತೆ ದಾನ ಮಾಡುವಿರಿ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹಣಕಾಸಿನಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ. ಸಂಬಂಧಿಕರಿಗೆ…

Read More

ಟಾಲಿವುಡ್​​​ನಲ್ಲಿ ಮತ್ತೊಂದು ಸಮಂತಾ ಆಗ್ತಾರಾ ಜಾನ್ವಿ ಕಪೂರ್ ? – Kannada News | Janhvi Kapoor’s Peddi Role: A Career Defining Moment After Ram Charan’s Trailer

ಟಾಲಿವುಡ್ ನಟ ರಾಮ್ ಚರಣ್ (Ram Charan) ನಟನೆಯ, ಬುಚ್ಚಿ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ಪೆದ್ದಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿ, ಭಾರಿ ಸದ್ದು ಮಾಡುತ್ತಿದೆ. ಗ್ರಾಮೀಣ ಹಿನ್ನೆಲೆಯಲ್ಲಿ ಸಾಗೋ ಈ ಚಿತ್ರ ಕ್ರೀಡಾ ಕಥೆಯನ್ನು ಹೊಂದಿದೆ. ‘ಪೆದ್ದಿ’ ಟ್ರೈಲರ್ ನೋಡಿದ ಸಿನಿಪ್ರಿಯರು, ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರವನ್ನು ‘ರಂಗಸ್ಥಲಂ’ ಚಿತ್ರದ ಸಮಂತಾ ಪಾತ್ರಕ್ಕೆ ಹೋಲಿಸಿ ಚರ್ಚೆ ಆರಂಭಿಸಿದ್ದಾರೆ. 2018ರಲ್ಲಿ ಬಿಡುಗಡೆಯಾಗಿದ್ದ ‘ರಂಗಸ್ಥಲಂ’ ಚಿತ್ರದಲ್ಲಿ ಸಮಂತಾ ನಟಿಸಿದ್ದ ರಾಮಲಕ್ಷ್ಮಿ ಹೆಸರಿನ ಹಳ್ಳಿ ಹುಡುಗಿಯ ಪಾತ್ರ…

Read More

ಗೃಹಲಕ್ಷ್ಮೀ ಹಣದಲ್ಲಿ ರೊಟ್ಟಿ ಕೇಂದ್ರ ತೆರೆದ ನಾರಿಯರು!

ಕೊಪ್ಪಳ, ಮೇ 19: ಜಿಲ್ಲೆಯ ಕುಷ್ಟಗಿಯ ತೆಗ್ಗಿಣ ಓಣಿಯ ಮೂವರು ಮಹಿಳೆಯರು ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಒಂದೇ ಕುಟುಂಬದ ಈ ಮೂವರು ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣವನ್ನು ಸಂಗ್ರಹಿಸಿ, ಅದನ್ನು ತಮ್ಮ ರೊಟ್ಟಿ ಕೇಂದ್ರದ ಸ್ಥಾಪನೆಗೆ ಹೂಡಿಕೆ ಮಾಡಿದ್ದಾರೆ. ಮೋಹಿನಿ ಮತ್ತು ಇನ್ನಿಬ್ಬರು ಸಹೋದರಿಯರು ಸೇರಿ ಗೃಹಲಕ್ಷ್ಮಿ ರೊಟ್ಟಿ ಕೇಂದ್ರವನ್ನು ಆರಂಭಿಸಿದ್ದು, ಇದು ಮಹಿಳೆಯರಿಗೆ ಜೀವನಪೂರ್ತಿ ದುಡಿದು ತಿನ್ನಲು ಒಂದು ದಾರಿಯಾಗಿದೆ ಎಂದು ಸಂತೋಷ…

Read More