All posts by nagaraj11081993

Video: ಮಾನಸಿಕ ಒತ್ತಡವೇ ಕೆಲಸ ಬಿಡಲು ಕಾರಣ; 20 ಲಕ್ಷ ರೂ ಸಂಬಳದ ಉದ್ಯೋಗ ತೊರೆದ ಯುವಕ – Kannada News | A young man quits a job that pays Rs 20 lakh

ಕೈಯಲ್ಲಿ ಒಂದು ಉದ್ಯೋಗವಿದ್ರೆ (Job) ಮರ್ಯಾದೆ. ಆದರೆ ಕೆಲಸ ಮಾಡುವ ಸ್ಥಳದಲ್ಲಿಯೇ ನೆಮ್ಮದಿ ಅನ್ನೋದೇ ಇಲ್ಲವಾದರೆ ಏನು ಮಾಡೋದು. ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಸಾಹಸ ಆದ್ರೆ, ಇಂತಹ ಸ್ಥಳದಲ್ಲಿ ಎಷ್ಟು ದುಡಿದ್ರು ಬೆಲೆಯೇ ಇಲ್ಲ. ಆದರೆ ಇಲ್ಲೊಬ್ಬ 25 ವರ್ಷದ ಯುವಕನಿಗೂ ಅದೇ ರೀತಿಯ ಅನುಭವ ಆಗಿದೆ. ಇಂಜಿನಿಯರ್ ಆಗಿರುವ ಸೌರಭ್ ಮಿತ್ತಲ್ (Sourabh Mittal) 22ನೇ ವಯಸ್ಸಿನಲ್ಲಿ ವರ್ಷಕ್ಕೆ 20 ಲಕ್ಷ ರೂ ಸಂಬಳದೊಂದಿಗೆ ಬಿಪಿಸಿಎಲ್‌ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕೈ ತುಂಬಾ ಸಂಬಳಯಿದ್ರೂ ಒತ್ತಡ ತಾಳಲಾರದೇ ಕೆಲಸಕ್ಕೆ ಗುಡ್ ಬೈ ಹೇಳಿದ್ದಾನೆ. ತನ್ನ ಕೆಲಸ ತೊರೆಯುವ ನಿರ್ಧಾರದ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೌರಭ್ ಮಿತ್ತಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಕೆಲಸದ ಜಾಗದಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಶೌಚಾಲಯ ಇಲ್ಲ, ಕುಡಿಯಲು ನೀರಿಲ್ಲ. ಅಲ್ಲದೆ ಹಿರಿಯ ಉದ್ಯೋಗಿಗಳ ಮಾನಸಿಕ ಒತ್ತಡವೇ ಕೆಲಸ ತ್ಯಜಿಸಲು ಕಾರಣ ಎಂದು ಬರೆದುಕೊಂಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಶೌಚಾಲಯ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಏನಾದ್ರೂ ತುರ್ತು ಅಗತ್ಯವಿದ್ದಾಗ ಗೋದಾಮಿನಿಂದ ಮನೆಗೆ ಹೋಗಬೇಕಾಗಿತ್ತು. ಬಹುತೇಕ ಉದ್ಯೋಗಿಗಳಿಗೆ ರಜೆಯೇ ಇರಲಿಲ್ಲ. ರಜೆಯಿಲ್ಲದೇ ಕಷ್ಟಪಟ್ಟು ಕೆಲಸ ಮಾಡಿದ್ರು ಸಂಬಳ ಹೆಚ್ಚಳ ಹಾಗೂ ಪ್ರಮೋಷನ್ ದೂರದ ಮಾತಾಗಿತ್ತು. ಸಂಬಳ ಹೆಚ್ಚಳ ಮಾಡಿದ್ರೂ ಹೆಚ್ಚೇನು ಇರಲಿಲ್ಲ. ಮೇಲಿನ ಅಧಿಕಾರಿಗಳು ಹೆಚ್ಚು ಒತ್ತಡ ಹಾಕುತ್ತಿದ್ದರು. ಅವರ ವೈಯುಕ್ತಿಕ ಕೆಲಸಗಳನ್ನು ನಮ್ಮ ಕೈಯಲ್ಲಿ ಮಾಡಿಸಿಕೊಳ್ಳುತ್ತಿದ್ದರು ಎಂದು ಕೆಲಸದ ಸ್ಥಳದಲ್ಲಿನ ವಾಸ್ತವ ಸ್ಥಿತಿಯಲ್ಲಿ ವಿವರಿಸಿದ್ದಾನೆ. ಹೆತ್ತವರ ಸಲಹೆ ಮೇರೆಗೆ ಕೆಲಸ ತೊರೆದ ಯುವಕ ಪ್ರಸ್ತುತ ಗುರಗಾಂವ್‌ನಲ್ಲಿ ಎಂಬಿಎ ಓಡುತ್ತಿದ್ದಾರೆ. ಯುವ ವೃತ್ತಿಪರರಿಗೆ ಮಾರ್ಗದರ್ಶನ ನೀಡಲು ಕಂಟೆಂಟ್ ಕ್ರಿಯೇಟರ್ ಆಗಿದ್ದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಸಂಪಾದನೆಗಿಂತ ನೆಮ್ಮದಿ ಮುಖ್ಯ ಎಂದಿದ್ದಾರೆ. ಮತ್ತೊಬ್ಬರು, ನಾನು ನಿಮ್ಮ ಪರಿಸ್ಥಿತಿಯನ್ನೇ ಎದುರಿಸಿ ಹೊರ ಬಂದಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಿಮ್ಮ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂತು ಹೈಟೆಕ್ ‘ಮೂವಿಂಗ್ ಆಫೀಸ್’: ನೆಟ್‌ವರ್ಕ್ ಇಲ್ಲದಿದ್ದರೂ ಕೆಲಸ ಮಾಡುತ್ತೆ ಈ ಸ್ಯಾಟಲೈಟ್ ವಾಹನ! – Kannada News | Hubballi Airport Gets Karnataka’s First Mobile Command Post Vehicle For Emergency And Hijack Crisis Management

‘ಮೊಬೈಲ್ ಕಮಾಂಡ್ ಪೋಸ್ಟ್’ ವಾಹನImage Credit source: Times of India

ಹುಬ್ಬಳ್ಳಿ, ಮೇ 19: ವಿಮಾನ ನಿಲ್ದಾಣಗಳಲ್ಲಿ ಸಂಭವಿಸಬಹುದಾದ ತುರ್ತು ಪರಿಸ್ಥಿತಿಗಳು ಹಾಗೂ ಬಿಕ್ಕಟ್ಟುಗಳನ್ನು ಕ್ಷಿಪ್ರವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣವು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ತುರ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಭದ್ರತಾ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುವ ಅತ್ಯಾಧುನಿಕ ‘ಮೊಬೈಲ್ ಕಮಾಂಡ್ ಪೋಸ್ಟ್’ (MCP) ಅಥವಾ ಮೊಬೈಲ್ ಕ್ರಿಸಿಸ್ ಕಮಾಂಡ್ ವಾಹನವನ್ನು ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ನಿಯೋಜಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ವ್ಯಾಪ್ತಿಗೆ ಒಳಪಡುವ ಕರ್ನಾಟಕದ ವಿಮಾನ ನಿಲ್ದಾಣಗಳ ಪೈಕಿ ಈ ಅತ್ಯಾಧುನಿಕ ಸೌಲಭ್ಯ ಪಡೆದ ಮೊದಲ ಏರ್​ಪೋರ್ಟ್ ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿ ಪಾತ್ರವಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲೇ AAI ನಿರ್ವಹಿಸುವ ವಿಮಾನ ನಿಲ್ದಾಣಗಳಲ್ಲಿ ಇದೇ ಮೊದಲು.
  • ₹87 ಲಕ್ಷ ವೆಚ್ಚದ ಹೈಟೆಕ್ ವಾಹನ.
  • ಅಡ್ವಾನ್ಸ್ಡ್ ಕಮ್ಯುನಿಕೇಶನ್ ಸಿಸ್ಟಮ್.

ಮೊಬೈಲ್ ಕಮಾಂಡ್ ಪೋಸ್ಟ್ ವೆಹಿಕಲ್ ಎಂದರೇನು?

ಇದು ವಿಮಾನ ನಿಲ್ದಾಣದ ರನ್‌ವೇ ಅಥವಾ ಸುತ್ತಮುತ್ತಲಿನ ಪರಿಸರದಲ್ಲಿ ವಿಮಾನ ಅಪಘಾತ, ವಿಮಾನ ಹೈಜಾಕ್ (ಅಪಹರಣ) ನಂತಹ ತುರ್ತು ಪರಿಸ್ಥಿತಿಗಳು ಎದುರಾದಾಗ ಬಳಸಲಾಗುವ ಒಂದು ಸಂಚಾರಿ ನಿಯಂತ್ರಣ ಕೊಠಡಿಯಾಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ನಿರ್ಧಾರ ಕೈಗೊಳ್ಳುವುದು ಕಷ್ಟವಾಗುತ್ತದೆ. ಈ ವಾಹನವು ಘಟನಾ ಸ್ಥಳಕ್ಕೇ ಧಾವಿಸಿ, ಅಲ್ಲಿಯೇ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿ ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಅತ್ಯಾಧುನಿಕ ಮೀಟಿಂಗ್ ಕೊಠಡಿಯಾಗಿ ಮತ್ತು ತಾತ್ಕಾಲಿಕ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವಿವಿಧ ರಕ್ಷಣಾ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸಲು ಸಹಾಯ ಮಾಡುತ್ತದೆ.

ಮೊಬೈಲ್ ಕ್ರಿಸಿಸ್ ಕಮಾಂಡ್ ವೆಹಿಕಲ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ವಾಹನವು ಒಳಗಿನಿಂದ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನವನ್ನು ಹೊಂದಿದೆ. ವಿಮಾನ ನಿಲ್ದಾಣದ ಒಳಗೆ ಮತ್ತು ಸುತ್ತಮುತ್ತಲಿನ ಪರಿಸರದ ಮೇಲೆ ಹದ್ದಿನ ಕಣ್ಣಿಡಲು ಇದರಲ್ಲಿ 360-ಡಿಗ್ರಿ ವ್ಯೂವ್ (ವೀಕ್ಷಣೆ) ವ್ಯವಸ್ಥೆ ಇದೆ. ವಾಹನದ ಒಳಗಡೆ ದೊಡ್ಡ ವೀಡಿಯೊ ವಾಲ್‌ಗಳು (Screen) ಮತ್ತು ಮಲ್ಟಿಪಲ್ ಮಾನಿಟರ್‌ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ವಿಮಾನ ನಿಲ್ದಾಣದ ಸಿಸಿಟಿವಿ ಫೀಡ್‌ಗಳು ಮತ್ತು ಡ್ರೋನ್‌ಗಳು ಸೆರೆಹಿಡಿಯುವ ದೃಶ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಗೆ ಬಾಂಗ್ಲಾ ನುಸುಳುಕೋರರ ಲಗ್ಗೆ? ರೈಲ್ವೆ ಪೊಲೀಸರ ವಿರುದ್ಧ ಭುಗಿಲೆದ್ದ ಆಕ್ರೋಶ

ಅಲ್ಲದೆ, ಯಾವುದೇ ನೆಟ್‌ವರ್ಕ್ ಸಮಸ್ಯೆ ಎದುರಾಗದಂತೆ ತಡೆಯಲು ಈ ವಾಹನದಲ್ಲಿ ವೆರಿ ಹೈ ಫ್ರೀಕ್ವೆನ್ಸಿ (VHF) ಮತ್ತು ಅಲ್ಟ್ರಾ ಹೈ ಫ್ರೀಕ್ವೆನ್ಸಿ (UHF) ಕಮ್ಯುನಿಕೇಶನ್ ಸಿಸ್ಟಂ ಅಳವಡಿಸಲಾಗಿದೆ. ಇದು ಏರ್ ಟ್ರಾಫಿಕ್ ಕಂಟ್ರೋಲ್ (ATC), ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯೊಂದಿಗೆ ನಿರಂತರ ಮತ್ತು ತಡೆರಹಿತ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:42 am, Tue, 19 May 26

Source link

ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಹತ್ಯೆಗೆ ಸುಪಾರಿ ಕೊಟ್ಟಿತೇ ಇರಾನ್?

ಟೆಹ್ರಾನ್, ಮೇ 19: ಅಮೆರಿಕ, ಇಸ್ರೇಲ್ ಮತ್ತು ಇರಾನ್(Iran) ನಡುವಿನ ಶೀತಲ ಸಮರ ಈಗ ನೇರ ಕೊಲೆ ಬೆದರಿಕೆಯಾಗಿ ಮಾರ್ಪಟ್ಟಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಸರ್ಕಾರ ಮುಂದಾಗಿದ್ದು, ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತ್ಯೆಗೆ ಮುಂದಾಗಿದೆ. ಇವರಿಬ್ಬರನ್ನು ಕೊಲ್ಲುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ 50 ಮಿಲಿಯನ್ ಯುರೋ ($58.23 ಮಿಲಿಯನ್) ಬಹುಮಾನ ನೀಡುವ ಅಧಿಕೃತ ಮಸೂದೆಯೊಂದನ್ನು ಇರಾನ್ ಸಂಸತ್ತು ಸಿದ್ಧಪಡಿಸುತ್ತಿದೆ ಎಂದು ‘ದಿ ಟೆಲಿಗ್ರಾಫ್ ಯುಕೆ’ ಮತ್ತು ‘ಇರಾನ್ ವೈರ್’ ವರದಿ ಮಾಡಿವೆ.

ಕಳೆದ ಫೆಬ್ರವರಿ 28 ರಂದು ಟೆಹ್ರಾನ್ ಮೇಲೆ ನಡೆದ ಭೀಕರ ದಾಳಿಯಲ್ಲಿ ಇರಾನ್‌ನ ಅಂದಿನ ಸರ್ವೋಚ್ಚ ನಾಯಕ ಅಲಿ ಖಮೇನಿ ಸಾವನ್ನಪ್ಪಿದ್ದರು. ಈ ಹತ್ಯೆಯ ಹಿಂದೆ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಮತ್ತು ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ (CENTCOM) ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಅವರ ನೇರ ಪಾತ್ರವಿದೆ ಎಂದು ಇರಾನ್ ಗಂಭೀರವಾಗಿ ಆರೋಪಿಸಿದೆ.

ಇರಾನ್ ಸಂಸತ್ತು ಈ ಕಾನೂನು ತರುವ ಮೊದಲೇ, ಸರ್ಕಾರದ ಪರ ಮಾಧ್ಯಮ ಸಂಸ್ಥೆ ‘ಮಸಾಫ್’ ಇಸ್ಲಾಮಿಕ್ ಆಡಳಿತವು ಕಿಲ್ ಟ್ರಂಪ್ ಅಭಿಯಾನಕ್ಕಾಗಿ ಈಗಾಗಲೇ 50 ಮಿಲಿಯನ್ ಡಾಲರ್ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿದೆ ಎಂದು ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಇರಾನ್ ಪ್ರಾಯೋಜಿತ ಸೈಬರ್ ಗ್ರೂಪ್ ಹಂಡಾಲಾ ಕೂಡ ಹೇಳಿಕೆ ಬಿಡುಗಡೆ ಮಾಡಿ, ದಬ್ಬಾಳಿಕೆ ಮತ್ತು ಭ್ರಷ್ಟಾಚಾರದ ಸೃಷ್ಟಿಕರ್ತರಾದ ಟ್ರಂಪ್ ಮತ್ತು ನೆತನ್ಯಾಹು ಅವರನ್ನು ನಿರ್ಮೂಲನೆ ಮಾಡಲು ಕೋಟ್ಯಂತರ ರೂಪಾಯಿ ಮೀಸಲಿಟ್ಟಿರುವುದಾಗಿ ತಿಳಿಸಿದೆ.

ಮತ್ತಷ್ಟು ಓದಿ: ಪಶ್ಚಿಮ ಏಷ್ಯಾ ಉದ್ವಿಗ್ನತೆಯ ನಡುವೆ ಸೌದಿ ಅರೇಬಿಯಾಕ್ಕೆ 16 ಜೆಟ್, 8,000 ಸೈನಿಕರನ್ನು ಕಳುಹಿಸಿದ ಪಾಕಿಸ್ತಾನ

ಶಾಂತಿ ಮಾತುಕತೆ ವಿಫಲ?
ಅಚ್ಚರಿಯ ವಿಷಯವೆಂದರೆ, ಒಂದು ಕಡೆ ಈ ಹತ್ಯೆಯ ಬೆದರಿಕೆಗಳು ಬರುತ್ತಿರುವಾಗಲೇ, ಮತ್ತೊಂದು ಕಡೆ ಇರಾನ್ ಅಮೆರಿಕಕ್ಕೆ ಹೊಸ ಶಾಂತಿ ಪ್ರಸ್ತಾವನೆಯೊಂದನ್ನು ಕಳುಹಿಸಿದೆ. ಆದರೆ, ಈ ಪ್ರಸ್ತಾವನೆಯಲ್ಲಿ ಯಾವುದೇ ಗಂಭೀರತೆ ಇಲ್ಲ ಎಂದು ಅಮೆರಿಕ ತಳ್ಳಿಹಾಕಿದೆ. ನಾವು ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ನಾವು ಇಂದು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ‘ಆಕ್ಸಿಯಾಸ್’ ಮಾಧ್ಯಮಕ್ಕೆ ತಿಳಿಸಿದ್ದಾರೆ. ಒಟ್ಟಾರೆಯಾಗಿ, ಇರಾನ್ ಸಂಸತ್ತಿನ ಈ ಸುಪಾರಿ ಕಾನೂನು ಇಡೀ ಜಗತ್ತನ್ನು ಮತ್ತೊಂದು ಮಹಾ ಯುದ್ಧದ ಜ್ವಾಲೆಗೆ ತಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆಪಿಸಿಸಿ ಕಚೇರಿಯಲ್ಲೇ ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರ ಮಾರಾಮಾರಿ: ದೀಪಿಕಾ ರೆಡ್ಡಿ ಸೇರಿ ಹಲವರಿಗೆ ಶೋಕಾಸ್​​ ನೋಟಿಸ್​​ – Kannada News | KPCC Office Clash: Indian Youth Congress Issues Show Cause Notice to Deepika Reddy and Others

ದೀಪಿಕಾ ರೆಡ್ಡಿ ಬಣದ ಪದಾಧಿಕಾರಿಗಳಿಗೆ ಶೋಕಾಸ್ ನೋಟಿಸ್Image Credit source: Tv9 Kannada

ಬೆಂಗಳೂರು, ಮೇ 19: ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನ ವಜಾ ಮಾಡಿರುವ ವಿಚಾರ ಸಂಬಂಧ ಯೂತ್​ ಕಾಂಗ್ರೆಸ್​​ ಕಾರ್ಯಕರ್ತರ ನಡುವೆ ನಿನ್ನೆ (ಮೇ 18) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಯೇ ಮಾರಾಮಾರಿ ನಡೆದಿತ್ತು. ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರು ಕೈ ಕೈ ಮಿಲಾಯಿಸಿದ್ದರು. ಈ ಬೆನ್ನಲ್ಲೇ ಭಾರತೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ   ನಿಗಮ್, ದೀಪಿಕಾ ರೆಡ್ಡಿ ಬಣದ ಪದಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದೊಳಗೆ ಉತ್ತರ ನೀಡುವಂತೆ ದೀಪಿಕಾ ರೆಡ್ಡಿ, ಸಂದೀಪ್, ಮಂಜುನಾಥ್ ಶೆಟ್ಟಿ, ನಿಖಿಲ್ ಕೊಂಡಜ್ಜಿ ಸೇರಿ ಹಲವರಿಗೆ ನೋಟಿಸ್ ನೀಡಲಾಗಿದೆ.

ಮುಖ್ಯಾಂಶಗಳು

  • ಕೆಪಿಸಿಸಿ ಕಚೇರಿಯಲ್ಲೇ ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರ ಜಗಳ
  • ಮಂಜುನಾಥ್​​ ಗೌಡ, ದೀಪಿಕಾ ರೆಡ್ಢಿ ಬೆಂಬಲಿಗರ ನಡುವೆ ವಾರ್​
  • ಕ್ರಮಕ್ಕೆ ಮುಂದಾದ AICC ಯೂತ್ ಕಾಂಗ್ರೆಸ್​​ನಿಂದ ಶೋಕಾಸ್​​ ನೋಟಿಸ್​​

ಇನ್ನು ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಗಲಾಟೆ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆ ಸಂಬಂಧ ಸತ್ಯಾಸತ್ಯತೆ ಪರಾಮರ್ಶೆ ನಡೆಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್​ಗೆ ಅವರು ಸೂಚನೆ ನೀಡಿದ್ದಾರೆ. ಅಧ್ಯಕ್ಷರ ಸೂಚನೆ ಹಿನ್ನೆಲೆ ಪದಾಧಿಕಾರಿಗಳಿಗೆ ಚಂದ್ರಶೇಖರ್ ಬುಲಾವ್ ನೀಡಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮೀಟಿಂಗ್ ನಡೆಯಲಿದೆ. ಘಟನೆ ಬಗ್ಗೆ ಜಿ.ಸಿ.ಚಂದ್ರಶೇಖರ್ ಈ ವೇಳೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಕರ್ನಾಟಕ ಯೂತ್ ಕಾಂಗ್ರೆಸ್​ ಗಲಾಟೆ; ಅಧ್ಯಕ್ಷ ವಿರುದ್ಧ ಗಂಭೀರ ಆರೋಪ

ಕರ್ನಾಟಕ ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನ ವಜಾ ಮಾಡಿರುವುದು ಕಾರ್ಯಕರ್ತರ ನಡುವೆಯೇ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ನೀಟ್​​​ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಭಟನೆ ನಡೆಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರು ಪರಸ್ಪರ ಬಡಿದಾಡಿಕೊಂಡಿದ್ದರು. ಆ ಬಳಿಕ ಪ್ರತಿಕ್ರಿಯಿಸಿದ್ದ
ದೀಪಿಕಾ ರೆಡ್ಡಿ ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು ಎಂದು ಅಧ್ಯಕ್ಷ ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ 2.95 ಲಕ್ಷ ಮತಗಳ ಪಡೆದಿದ್ದೇನೆ. ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ನಾನೂ ಒಬ್ಬಳು. ಪುರುಷ ಪ್ರಾಬಲ್ಯದ ರಾಜಕೀಯದಲ್ಲಿ ಅವರ ವಿರುದ್ಧ ಹೋರಾಟ ನಡೆಸಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಮಂಜುನಾಥ್ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಣ ಬಂದರೂ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದೇಕೆ ಸೈಫ್ ಅಲಿ ಖಾನ್? – Kannada News | Saif Ali Khan Reveals Why He Closed His Production House Illuminati Films

ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan), ಕೇವಲ ನಟನೆಯಷ್ಟೇ ಅಲ್ಲದೆ ಸಿನಿಮಾ ನಿರ್ಮಾಣದಲ್ಲೂ ಕೈಹಾಕಿ ಯಶಸ್ಸು ಕಂಡವರು. 2009ರಲ್ಲಿ ‘ಇಲ್ಯುಮಿನಾಟಿ ಫಿಲ್ಮ್ಸ್’ ಬ್ಯಾನರ್ ಆರಂಭಿಸಿ ‘ಲವ್ ಆಜ್ ಕಲ್’, ‘ಕಾಕ್‌ಟೇಲ್’, ‘ಗೋ ಗೋವಾ ಗಾನ್’ ನಂತಹ ಚಿತ್ರಗಳನ್ನು ನೀಡಿದ್ದರು. ಆದರೆ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅವರು ತಮ್ಮ ಪ್ರೊಡಕ್ಷನ್ ಹೌಸ್ ಅನ್ನು ದಿಢೀರ್ ಮುಚ್ಚಿ ಎಲ್ಲರಿಗೂ ಶಾಕ್ ನೀಡಿದ್ದರು. ಇದೀಗ ವರ್ಷಗಳ ಬಳಿಕ ತಾವು ಸಿನಿಮಾ ನಿರ್ಮಾಣದಿಂದ ದೂರ ಸರಿದಿದ್ದಕ್ಕೆ ಅಸಲಿ ಕಾರಣವನ್ನು ಸೈಫ್ ಅಲಿ ಖಾನ್ ಬಹಿರಂಗಪಡಿಸಿದ್ದಾರೆ.

ಸಿನಿಮಾ ನಿರ್ಮಾಣ ಅತಿ ದೊಡ್ಡ ತಲೆನೋವು!

ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೈಫ್, ‘ಸಿನಿಮಾ ನಿರ್ಮಾಣ ಎನ್ನುವುದು ಕೃತಜ್ಞತೆ ಇಲ್ಲದ ಕೆಲಸ. ಇದೊಂದು ಕ್ರಿಯೇಟಿವ್ ಕೆಲಸ ಹೌದು. ಸಿನಿಮಾ ಕಥೆ ಬಗ್ಗೆ, ಮ್ಯೂಸಿಕ್ ಬಗ್ಗೆ ಚರ್ಚಿಸುವುದು ನನಗೂ ಇಷ್ಟವಿತ್ತು. ಆದರೆ ಸಿನಿಮಾ ನಿರ್ಮಾಣ ಮಾಡುವುದು ಅತಿ ದೊಡ್ಡ ತಲೆನೋವು. ಹಾಗಾಗಿ ನಾನು ಅದರಿಂದ ದೂರ ಉಳಿದೆ’ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆಯ ಯಶಸ್ಸಿಗೆ ವಿತರಕರಾದ ‘ಇರೋಸ್ ಇಂಟರ್ನ್ಯಾಷನಲ್’ ಹಾಗೂ ತಮ್ಮ ಅಂದಿನ ಸಹ-ನಿರ್ಮಾಪಕ ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ಕಾರಣ ಎಂದು ಸೈಫ್ ನೆನೆದಿದ್ದಾರೆ. ಸದ್ಯ ದಿನೇಶ್ ವಿಜನ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಿರ್ಮಾಪಕರಾಗಿ ಹೊರಹೊಮ್ಮಿದ್ದು, ‘ಸ್ತ್ರೀ’ ಫ್ರಾಂಚೈಸಿ, ‘ಭೇಡಿಯಾ’, ‘ಮುಂಜ್ಯಾ’ ನಂತಹ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸೈಫ್, ‘ಕೆಲವು ವಿಷಯಗಳು ಎಷ್ಟು ದಿನ ಇರಬೇಕೋ ಅಷ್ಟು ದಿನ ಮಾತ್ರ ಇರುತ್ತವೆ’ ಎಂದಿದ್ದಾರೆ.

ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕ್ರೈಮ್ ಡ್ರಾಮಾ ‘ಕರ್ತವ್ಯ’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು. ಈ ಚಿತ್ರವನ್ನು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ‘ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ನಿರ್ಮಿಸಿದೆ.

ಇದನ್ನೂ ಓದಿ: ‘ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಹೋದ್ರೆ ಅದು ಜೀವನವೇ ಅಲ್ಲ’: ಸೈಫ್ ಅಲಿ ಖಾನ್

ತಮ್ಮ ‘ಕಲ್ ಹೋ ನಾ ಹೋ’ ಚಿತ್ರದ ಸಹನಟ ಶಾರುಖ್ ಅವರ ನಿರ್ಮಾಣ ಶೈಲಿಯನ್ನು ಸೈಫ್ ಅಲಿ ಖಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಒಳ್ಳೆಯ ನಿರ್ಮಾಪಕರು, ನಿರ್ದೇಶಕರಿಗೆ ಮತ್ತು ಚಿತ್ರತಂಡಕ್ಕೆ ಮುಕ್ತವಾಗಿ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ಶಾರುಖ್ ಖಾನ್ ಕೂಡ ಅದನ್ನೇ ಮಾಡಿದ್ದಾರೆ. ಶಾರುಖ್ ಅವರಿಗೆ ಸಿನಿಮಾಗಳ ಮೇಲೆ ಅಪಾರ ಪ್ರೀತಿ ಇದೆ. ಅದು ಅವರ ನಿರ್ಮಾಣದ ಚಿತ್ರಗಳ ಕಥೆಯ ಆಯ್ಕೆಯಲ್ಲೇ ಎದ್ದು ಕಾಣುತ್ತದೆ’ ಎಂದು ಸೈಫ್ ಅಲಿ ಖಾನ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಲ್ಮಾನ್ ಖಾನ್ ಮನೆಯಲ್ಲಿ ಹಾವು ರಕ್ಷಣಾ ಕಾರ್ಯ ಹೇಗಿತ್ತು? ಇಲ್ಲಿದೆ ವೈರಲ್ ವಿಡಿಯೋ – Kannada News | Snake rescue at Salman Khan home Galaxy Apartment video viral on social media

ಖ್ಯಾತ ನಟ ಸಲ್ಮಾನ್ ಖಾನ್ ಅವರ ಮನೆಗೆ ಹಾವು (Snake) ಬಂದಿದೆ. ಮುಂಬೈನ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಹಾವು ಕಾಣಿಸಿಕೊಂಡಿದೆ. ಕೂಡಲೇ ಹಾವು ಹಿಡಿಯುವವರನ್ನು ಕರೆಸಲಾಗಿದೆ. ಇದು ವಿಷಕಾರಿಯಲ್ಲದ ಹಾವು ಎಂಬುದು ಗೊತ್ತಾಗಿದೆ. ಸುರಕ್ಷಿತವಾಗಿ ಹಾವನ್ನು ಹಿಡಿದು ಸಾಗಿಸಲಾಗಿದೆ. ಈ ವೇಳೆ ಹಾವು ಹಿಡಿಯುವವರ ಜೊತೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಜೊತೆಗಿದ್ದರು. ಸ್ಟಾರ್ ನಟನ ಮನೆಯಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ರಕ್ಷಣಾ ಕಾರ್ಯವನ್ನು ನೋಡಲು ಜನರು ಮುಗಿಬಿದ್ದಿದ್ದರು. ಈ ಮೊದಲು ಸಲ್ಮಾನ್ ಖಾನ್ (Salman Khan) ಅವರಿಗೆ ಫಾರ್ಮ್​ಹೌಸ್​ನಲ್ಲಿ ಹಾವು ಕಚ್ಚಿತ್ತು. ಈ ಬಾರಿ ಯಾವುದೇ ತೊಂದರೆ ಆಗಿಲ್ಲ. ಸಲ್ಮಾನ್ ಖಾನ್ ಮನೆಯಲ್ಲಿ ಹಾವು ಹಿಡಿದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ರಗಡೋ ರಕ್ಕಿ’ ಹಾಡಿನಲ್ಲಿ ಹೀರೋ ಮಾಸ್ ಎಂಟ್ರಿ; ‘ಪಿಆರ್​ಕೆ ಆಡಿಯೋ’ ಮೂಲಕ ರಿಲೀಸ್ – Kannada News | Ragado Rakky new song ft Rakky Suresh released on PRK Audio

ರಕ್ಕಿ ಸುರೇಶ್ ಅಭಿನಯದ ‘ರಕ್ಕಿ’ (Rakky) ಸಿನಿಮಾದ ಪ್ರಚಾರ ಕಾರ್ಯ ಶುರುವಾಗಿದೆ. ಈ ಸಿನಿಮಾದಿಂದ ‘ರಗಡೋ ರಕ್ಕಿ’ ಹಾಡನ್ನು ರಿಲೀಸ್ ಮಾಡಲಾಗಿದೆ. ‘ಪಿಆರ್​ಕೆ ಆಡಿಯೋ’ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಯುವಜನತೆಗೆ ಇಷ್ಟವಾಗುವ ರೀತಿಯಲ್ಲಿ ಹಾಡು ಮೂಡಿಬಂದಿದೆ. ಇದು ಹೀರೋ ಆಗಿ ರಕ್ಕಿ ಸುರೇಶ್ (Rakky Suresh) ನಟಿಸಿರುವ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಅವರು ಯುವ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

‘ರಗಡೋ ರಕ್ಕಿ’ ಹಾಡಿನಲ್ಲಿ ರಕ್ಕಿ ಸುರೇಶ್ ಅವರ ಎನರ್ಜಿಟಿಕ್ ಡ್ಯಾನ್ಸ್ ಮತ್ತು ಸ್ಟೈಲಿಶ್ ಲುಕ್ ಹೈಲೈಟ್ ಆಗಿದೆ. ಕಲರ್​ಫುಲ್ ಆಗಿ ಈ ಹಾಡು ಮೂಡಿಬಂದಿದೆ. ಈ ಸಿನಿಮಾದಲ್ಲಿ ಅವರನ್ನು ಹೊಸ ತಲೆಮಾರಿನ ಮಾಸ್ ಹೀರೋ ಆಗಿ ಪರಿಚಯಿಸಲಾಗುತ್ತಿದೆ. ಜೆನ್ ಜೀ ಟ್ರೆಂಡ್ ಪ್ರತಿಬಿಂಬಿಸುವ ರೀತಿಯಲ್ಲಿ ಹಾಡಿನ ಮೇಕಿಂಗ್ ಇದೆ. ಈ ಮೂಲಕ ಸಿನಿಮಾ ಬಗ್ಗೆ ಕುತೂಹಲ ಮೂಡುವಂತಾಗಿದೆ.

‘ರಕ್ಕಿ’ ಸಿನಿಮಾಗೆ ವೆಂಕಟ್ ಭಾರದ್ವಾಜ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಸಿನಿಮಾ ಸೆನ್ಸಾರ್ ಹಂತದಲ್ಲಿದೆ. ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬೆಂಬಲ ದೊರೆತಿದೆ. ಪಿಆರ್​ಕೆ ಆಡಿಯೋ ಮೂಲಕ ಹಾಡುಗಳು ರಿಲೀಸ್ ಆಗುತ್ತಿವೆ. ಇದರಿಂದ ಚಿತ್ರತಂಡದ ಬಲ ಹೆಚ್ಚಿದೆ.

‘ರಗಡೋ ರಕ್ಕಿ’ ಹಾಡು:

ಲೋಕಿ ತವಸ್ಯ ಅವರು ಈ ಹಾಡಿಗೆ ಸಂಗೀತ ನೀಡಿದ್ದಾರೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಕಂಬಿರಾಜು ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಐ ಸಾಕ್ ಪ್ರಭಾಕರ್ ಅವರ ಛಾಯಾಗ್ರಹಣದಲ್ಲಿ ಎಲ್ಲವೂ ಕಲರ್​ಫುಲ್ ಆಗಿವೆ. ಈ ಚಿತ್ರದಲ್ಲಿ ರಕ್ಕಿ ಸುರೇಶ್ ಜೊತೆ ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಸಂಪತ್ ಮೈತ್ರೇಯ, ಬಿ. ಸುರೇಶ, ರಮೇಶ್ ಪಂಡಿತ್, ಬಲ ರಾಜವಾಡಿ, ಜಿಜಿ, ಹರಿಣಿ ಶ್ರೀಕಾಂತ್ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ಚಾರ್ಜ್​ಶೀಟ್’, ‘ರಕ್ಕಿ’ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಳಿಸಿದ ವೆಂಕಟ್​ ಭಾರದ್ವಾಜ್

ಈ ಸಿನಿಮಾವನ್ನು ‘ಎಸ್​ಎನ್​ಆರ್​ ಪ್ರೊಡಕ್ಷನ್ಸ್’ ಮೂಲಕ ಸುರೇಶ್ ಸಾಲಿಗ್ರಾಮ ಅವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಆ್ಯಕ್ಷನ್, ಎಮೋಷನ್, ಸಂಗೀತ, ಪ್ರೇಮ ಮತ್ತು ಮಾಸ್ ಅಂಶಗಳು ಇರಲಿವೆ ಎಂದು ಚಿತ್ರತಂಡ ಹೇಳಿದೆ. ಆದ್ದರಿಂದ ಯುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂಬುದು ಚಿತ್ರತಂಡದ ನಂಬಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಿಲ್ಲಿಯಲ್ಲಿ ಟ್ಯಾಕ್ಸಿ, ಆಟೊ ಚಾಲಕರಿಂದ 3 ದಿನ ಮುಷ್ಕರ; ಏನಿವೆ ಅವರ ಬೇಡಿಕೆಗಳು? – Kannada News | Delhi Auto, tax drivers strike on May 21 23, demanding for fare increase due to rising fuel prices

ದೆಹಲಿಯಲ್ಲಿ ಟ್ಯಾಕ್ಸಿ ಚಾಲಕರಿಂದ ಮುಷ್ಕರImage Credit source: AI/Mediaforge/TV9

ನವದೆಹಲಿ, ಮೇ 19: ರಾಷ್ಟ್ರ ರಾಜಧಾನಿನಗರಿಯಲ್ಲಿನ ಕಮರ್ಷಿಯಲ್ ವಾಹನಗಳ ಚಾಲಕರ ಒಕ್ಕೂಟಗಳು (Commercial vehicle drivers unions ಮೂರು ದಿನಗಳ ಮುಷ್ಕರ (Strike) ನಡೆಸುವುದಾಗಿ ಘೋಷಿಸಿವೆ. ಮೇ 21, ಗುರುವಾರದಿಂದ ಮೇ 23, ಶನಿವಾರದವರೆಗೆ ಈ ಪ್ರತಿಭಟನೆ ನಡೆಯಲಿದೆ. ದೆಹಲಿಯಲ್ಲಿ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಟ್ಯಾಕ್ಸಿ ಮತ್ತು ಆಟೊರಿಕ್ಷಾ ದರಗಳನ್ನು (Taxi fares) ಹೆಚ್ಚಿಸಬೇಕೆಂದು ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ.

ಈ ಸುದ್ದಿಯ ಮುಖ್ಯಾಂಶಗಳು

  • ದೆಹಲಿಯಲ್ಲಿ ಸತತವಾಗಿ ಇಂಧನ ಏರಿಕೆ ಹಿನ್ನೆಲೆಯಲ್ಲಿ ಆಟೊರಿಕ್ಷಾ ಮತ್ತು ಟ್ಯಾಕ್ಸಿ ದರಗಳನ್ನು ಹೆಚ್ಚಿಸಬೇಕು ಎಂದು ಚಾಲಕರ ಒಕ್ಕೂಟಗಳ ಒತ್ತಾಯ.
  • ಪ್ರಯಾಣ ದರ ಹೆಚ್ಚಿಸುವಂತೆ ಆಗ್ರಹಿಸಿ ದೆಹಲಿಯ ಚಾಲಕರ ಒಕ್ಕೂಟಗಳು ಮೇ 21-23ರವರೆಗೆ ಮುಷ್ಕರ ನಡೆಸಲಿವೆ.
  • ಚಾಲಕರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮುಷ್ಕರ ಸ್ವರೂಪ ತೀವ್ರಗೊಳ್ಳಲಿದೆ ಎಂದು ಒಕ್ಕೂಟವು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ದೆಹಲಿಯಲ್ಲಿ ಸಿಎನ್​ಜಿ, ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಮರ್ಷಿಯಲ್ ವಾಹನಗಳ ಪ್ರಯಾಣ ದರ ಪರಿಷ್ಕರಣೆ ಮಾಡಬೇಕು ಮತ್ತು ಬೆಲೆ ಏರಿಕೆಯಿಂದ ಬಾಧಿತರಾದ ಚಾಲಕರಿಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಈ ಸಂಘಟನೆಗಳ ಪ್ರಮುಖ ಒತ್ತಾಯವಾಗಿದೆ. ಈ ಸಂಬಂಧ ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆಯು (All India Motor Transport Congress) ನಿನ್ನೆ ಸೋಮವಾರ (ಮೇ 18) ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರಿಗೆ ಪತ್ರ ಬರೆದು ಒತ್ತಾಯಪಡಿಸಿತ್ತು.

‘ಇಂಧನ ಬೆಲೆಗಳು ಸತತವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಚಾಲಕರು ತಮ್ಮ ಜೀವನ ನಿರ್ವಹಿಸಲು ಪರದಾಡುವಂತಾಗಿದೆ. ಆದ್ದರಿಂದ ದೆಹಲಿಯ ಇತರ ಸಂಘಟನೆಗಳೊಂದಿಗೆ ಸಹಕಾರದಲ್ಲಿ ಚಾಲಕ ಶಕ್ತಿ ಒಕ್ಕೂಟವು ಚಕ್ಕಾ ಜಾಮ್​ಗೆ (ಮುಷ್ಕರ) ಕರೆ ನೀಡಿದೆ. ಮೇ 21, 22 ಮತ್ತು 23ರಂದು ವಾಹನ ಚಲಾಯಿಸದಿರಿ ಎಂದು ಮನವಿ ಮಾಡಲಾಗಿದೆ’ ಎಂದು ಚಾಲಕ್ ಶಕ್ತಿ ಯೂನಿಯನ್ನ ಉಪಾಧ್ಯಕ್ಷ ಅನುಜ್ ಕುಮಾರ್ ರಾಥೋಡ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ಒಂದು ವೇಳೆ, ದೆಹಲಿ ಸರ್ಕಾರವು ಮುಂದಿನ ಒಂದೆರಡು ವಾರದೊಳಗೆ ಟ್ಯಾಕ್ಸಿ ಪ್ರಯಾಣದರವನ್ನು ಪರಿಷ್ಕರಿಸಲು ವಿಫಲವಾದಲ್ಲಿ ಈ ಪ್ರತಿಭಟನೆ ಉಗ್ರ ರೂಪ ಪಡೆಯುತ್ತದೆ. ದೊಡ್ಡ ಮಟ್ಟದಲ್ಲಿ ಮುಷ್ಕರ ನಡೆಸಲಾಗುತ್ತದೆ. ಇದಕ್ಕೆ ದೆಹಲಿ ಸರ್ಕಾರವೇ ಹೊಣೆಯಾಗುತ್ತದೆ ಎಂದೂ ಚಾಲಕರ ಒಕ್ಕೂಟವು ಎಚ್ಚರಿಕೆ ನೀಡಿದೆ.

ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಇತ್ತೀಚೆಗೆ ರಾಷ್ಟ್ರಾದ್ಯಂತ 3 ರೂ ಏರಿಕೆ ಆಗಿವೆ. ಇದಕ್ಕೆ ಹೆಚ್ಚುವರಿಯಾಗಿ ದೆಹಲಿಯಲ್ಲಿ ಸಿಎನ್​ಜಿ ಮತ್ತು ಪೆಟ್ರೋಲ್, ಡೀಸಲ್ ದರಗಳನ್ನು ಹೆಚ್ಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಾರಿಗೆ ನೌಕರರಿಗೆ ಬಿಗ್​​ ಶಾಕ್​​: ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ಆದೇಶ – Kannada News | Big Shock to Transport Employees: Karnataka High Court Bars Planned Strike on May 20

ಸಾರಿಗೆ ನೌಕರರಿಗೆ ಬಿಗ್​​ ಶಾಕ್​​

ಬೆಂಗಳೂರು, ಮೇ 19: ನಾಳೆ (ಮೇ 20) ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ಸಂಘಟನೆಗಳಿಗೆ ಕರ್ನಾಟಕ ಹೈಕೋರ್ಟ್​​ ಶಾಕ್​​ ಕೊಟ್ಟಿದೆ. ನ್ಯಾ.ಸೂರಜ್ ಗೋವಿಂದರಾಜ್ ಮತ್ತು ನ್ಯಾ.ಕೆ.ಮನ್ಮಥರಾವ್ ಅವರಿದ್ದ ಪೀಠ ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿದೆ. ಸಾರಿಗೆ ಸಂಘಟನೆಗಳೊಂದಿಗೆ ಸರ್ಕಾರ ಚರ್ಚೆ ನಡೆಸಲಿ, ಮುಷ್ಕರ ಬೇಡ ಎಂದು ಕೋರ್ಟ್​ ಹೇಳಿದೆ. ಸರ್ಕಾರ ಮತ್ತು ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು ಸಾರಿಗೆ ಸಚಿವರೊಂದಿಗೆ ಸಭೆ ನಡೆಸಲು ಸೂಚಿಸಿದೆ.

ಮುಖ್ಯಾಂಶಗಳು

  • ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ನೌಕರರಿಗೆ ಬಿಗ್​​ ಶಾಕ್​​
  • ಮುಷ್ಕರ ನಡೆಸದಂತೆ ನಿರ್ಬಂಧ ವಿಧಿಸಿದ ಹೈಕೋರ್ಟ್​​
  • ಸರ್ಕಾರ ಚರ್ಚೆ ನಡೆಸಲಿ, ಮುಷ್ಕರ ಬೇಡ ಎಂದ ನ್ಯಾಯಾಲಯ

ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್​ಗೆ ಕೆಲಸದ ಮಹಿಳೆ ಮತ್ತು ಕಟ್ಟಡ ಕಾರ್ಮಿಕ ಪಿಐಎಲ್ ಸಲ್ಲಿಸಿದ್ದರು. KESMA ಅಡಿ ಜ.1ರಿಂದ ಜೂ.30ರವರೆಗೆ ಮುಷ್ಕರ ನಿರ್ಬಂಧಿಸಲಾಗಿದೆ. 2025ರ ಜು.18ರ ಕಾರ್ಮಿಕ ಆಯುಕ್ತರ ರಾಜಿ ಸಂಧಾನ ಪ್ರಕ್ರಿಯೆ ಮುಂದುವರಿದಿದೆ. ರಾಜಿ ಸಂಧಾನದ ಮುಂದಿನ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಈ ಮಧ್ಯೆ ಮುಷ್ಕರ ನಡೆಸುವುದು ಕಾನೂನುಬಾಹಿರ. 14 ದಿನಗಳ ನೋಟಿಸ್ ಬದಲು ಮುಷ್ಕರಕ್ಕೆ 7 ದಿನಗಳ ನೋಟಿಸ್ ನೀಡಲಾಗಿದೆ. SSLC ಪೂರಕ ಪರೀಕ್ಷೆಗಳೂ ಇದೇ ಅವಧಿಯಲ್ಲಿ ನಿಗದಿಯಾಗಿರುವ ಕಾರಣ ಮೇ 20ರಂದು ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರ ನಿರ್ಬಂಧಿಸಲು ಮನವಿ ಮಾಡಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ನೀಡಿದ್ದು, ಇದೇ ವೇಳೆ ಪಿಐಎಲ್ ಅರ್ಜಿದಾರರ ಬಗ್ಗೆ ಅಚ್ಚರಿ ಕೂಡ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾತುಕತೆಗೆ ಪಟ್ಟು; ಸಾರಿಗೆ ನೌಕರರ ಸಂಧಾನ ವಿಫಲ

ವಿಫಲವಾಗಿದ್ದ ಸಂಧಾನ ಸಭೆ

ಸಾರಿಗೆ ನೌಕರರ ಮುಷ್ಕರ ವಿಚಾರ ಸಂಬಂಧ ಬೆಂಗಳೂರಿನಬನ್ನೇರುಘಟ್ಟದ ಕಾರ್ಮಿಕ ಭವನದಲ್ಲಿ ನಿನ್ನೆ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಸಾರಿಗೆ ನೌಕರರು ಪಟ್ಟು ಬಿಟ್ಟಿರಲಿಲ್ಲ. ಮತ್ತೆ ಮೇ 25ಕ್ಕೆ ಸಭೆಗೆ ಬರಲು ಅಧಿಕಾರಿಗಳು ಆಹ್ವಾನ ನೀಡಿದರೂ ನಿಗಮದ ಅಧಿಕಾರಿಗಳ ಮನವಿಗೆ ಒಪ್ಪದ ಸಾರಿಗೆ ಮುಖಂಡರು, ಸಿಎಂ ಜೊತೆಗೆ ಸಭೆಗೆ ಪಟ್ಟು ಹಿಡಿದಿದ್ದರು. ಯಾವುದೇ ಮನವೊಲಿಕೆಗೂ ಬಗ್ಗದ ನೌಕರರು, ಇಂದು (ಮೇ 19) ಮಧ್ಯಾಹ್ನದ ಒಳಗಾಗಿ ಸಭೆ ಕರೆದು ಬೇಡಿಕೆ ಈಡೇರಿಕೆ ಸಂಬಂಧ ಮಾತನಾಡುವಂತೆ ಆಗ್ರಹಿಸಿದ್ದರು. ಈ ವೇಳೆ ಸರ್ಕಾರ ಸದ್ಯದ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರೂ, ಸಿಎಂ ಜೊತೆ ಸಭೆಗೆ ಸಾರಿಗೆ ನೌಕರರ ಸಂಘಟನೆ ಆಗ್ರಹಿಸಿತ್ತು. ಅಲ್ಲದೆ ಸಭೆ ಮಾಡಿಲ್ಲ ಅಂದ್ರೆ ಮುಷ್ಕರ ಫಿಕ್ಸ್ ಎಂದು ವಾರ್ನಿಂಗ್ ಕೂಡ ನೀಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Guru Sanchara Rashi Phala 2026: ಗುರು ಸಂಚಾರ ಮೇಷ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Aries Horoscope 2026: Jupiter Transit Predictions by Dr. Basavaraj Guruji

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಪ್ರಪ್ರಥಮವಾಗಿ ಮೇಷ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮೇಷರಾಶಿಯ ನಾಲ್ಕನೇ ಮನೆಯಲ್ಲಿ ಗುರುವು (ಸುಖಸ್ಥಾನ) ಸಂಚಾರ ಮಾಡಲಿದ್ದಾನೆ. ಈ ಸಂಚಾರವು ಇವರ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ.

ಈ ಅವಧಿಯಲ್ಲಿ, ಮೇಷ ರಾಶಿಯವರಿಗೆ ಮನೆ ಕಟ್ಟುವ, ನಿವೇಶನ ಅಥವಾ ಭೂಮಿ ಖರೀದಿಸುವ ಯೋಗ ಬಲಗೊಳ್ಳಲಿದೆ. ವಾಹನ ಯೋಗವೂ ಚೆನ್ನಾಗಿದ್ದು, ಉದ್ಯೋಗದಲ್ಲಿ ಬಡ್ತಿ ಅಥವಾ ಬದಲಾವಣೆಗಳ ಸಾಧ್ಯತೆಗಳಿವೆ. ಆಂತರಿಕ ಶಾಂತಿ ಮತ್ತು ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣಬಹುದು. ರಿಯಲ್ ಎಸ್ಟೇಟ್, ಸೇನಾ ಮತ್ತು ಪೊಲೀಸ್ ವೃತ್ತಿಯಲ್ಲಿರುವವರಿಗೆ ಮನಸ್ಸಿನ ತೃಪ್ತಿ ಸಿಗಲಿದೆ. ಪಿತೃಾರ್ಜಿತ ಆಸ್ತಿ ದೊರೆಯುವ ಹಾಗೂ ಐಷಾರಾಮಿ ಜೀವನ ನಡೆಸುವ ಅವಕಾಶಗಳು ಒದಗಿ ಬರಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link