ಪುಸ್ತಕ ಅನುವಾದಕ್ಕೂ ಬಂತು AI: ತಂತ್ರಜ್ಞಾನದ ಮೂಲಕ ಭಾಷಾಂತರಗೊಂಡ ಮೊದಲ ಬುಕ್ ಮಾ.15ರಂದು ಬಿಡುಗಡೆ
ಬೆಂಗಳೂರು, ಮಾರ್ಚ್ 13: ಬೇರೆ ಬೇರೆ ಭಾಷೆಗಳಲ್ಲಿರುವ ಪುಸ್ತಕ ಓದುಗರಿಗೆ ಅವರದ್ದೇ ಆದ ಭಾಷೆಯಲ್ಲಿ ಸಿಕ್ಕಿದಾಗ ಅದು ಹೆಚ್ಚಿನ ಸಂತ್ರಪ್ತಿ ನೀಡಬಲ್ಲದು. ಜೊತೆಗೆ ಬಹು ಭಾಷೆಗಳ ಅರಿವಿಲ್ಲದವರಿಗೂ ಆ ವಿಷಯವನ್ನು ಸುಲಭವಾಗಿ ಮುಟ್ಟಿಸಬಹುದು ಎಂಬ ಕಾರಣಕ್ಕೆ ಅದೆಷ್ಟೋ ಪುಸ್ತಗಳು ಈ ವರೆಗೆ ಕನ್ನಡಕ್ಕೆ ಅನುವಾದಗೊಂಡಿವೆ. ಓದುಗರ ಮನಸ್ಸನ್ನೂ ಗೆದ್ದಿವೆ. ಆದರೆ ಈ ಅನುವಾದದ ಕೆಲಸ ಬಹಳ ಕಠಿಣವಾದುದ್ದು. ಮೂಲ ಬರಹಗಾರರು ಹೇಳಿರುವ ವಿಷಯವನ್ನು ಅನರ್ಥಗೊಳಿಸದೆ ಮತ್ತೊಂದು ಭಾಷೆಗೆ ಭಟ್ಟಿ ಇಳಿಸಬೇಕಾಗುತ್ತದೆ. ಹೀಗಾಗಿ ಪುಸ್ತಕವೊಂದರ ಅನುವಾದಕ್ಕೆ ಬಹಳ ಸಮಯವೂ…