Headlines

nagaraj11081993

ಉತ್ತರಾಖಂಡದಲ್ಲಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್​​ಪ್ರೆಸ್ ರೈಲು – Kannada News | Three Coaches of Ujjain Express Derail Near Rishikesh, Inquiry Ordered

ಉತ್ತರಾಖಂಡ, ಮೇ 19: ಉತ್ತರಾಖಂಡದ ಋಷಿಕೇಶದ ಖಾಂಡ್ ಗಾಂವ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಯೋಗ ನಗರಿ ರೈಲು ನಿಲ್ದಾಣದ ಬಳಿ ಉಜ್ಜಯಿನಿ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಹಳಿತಪ್ಪಿವೆ. ರಾತ್ರಿ 9.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಹಳಿತಪ್ಪಿದ ಸಮಯದಲ್ಲಿ ಹಳಿಯಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಸೋಮವಾರ ಬೆಳಗ್ಗೆ, ಸಸಾರಂನಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿತ್ತು, ಮತ್ತು ಒಂದು ದಿನದ ಮೊದಲು ರತ್ಲಂ ಜಿಲ್ಲೆಯ ರಾಜಧಾನಿ ಎಕ್ಸ್‌ಪ್ರೆಸ್ 12431 ರ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.   ವಿಡಿಯೋ ಸುದ್ದಿಗಳಿಗಾಗಿ…

Read More

ಮಂಗಳೂರು: ಬಾವಿ ನೀರಿನಲ್ಲಿ ಡೀಸೆಲ್, ಸ್ಥಳೀಯರು ಹೇಳೋದೇನು ನೋಡಿ – Kannada News | Mangaluru Fuel Leak Chaos: Locals Alarmed as Open Wells Overflow with Diesel in Kavoor; Watch Ground Reality

ಮಂಗಳೂರು, ಮೇ 19: ಮಂಗಳೂರಿನ ಕಾವೂರು ಪ್ರದೇಶದಲ್ಲಿರುವ ಮೂರು ಮನೆಗಳ ಬಾವಿ ನೀರು ಡೀಸೆಲ್‌ನಿಂದ ಕಲುಷಿತಗೊಂಡಿರುವುದು ಪತ್ತೆಯಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ ತಿಂಗಳಿನಿಂದ ಈ ಸಮಸ್ಯೆ ಗಮನಕ್ಕೆ ಬಂದಿದ್ದು, ಬಾವಿಯ ನೀರನ್ನು ಖಾಲಿ ಮಾಡಿದರೂ ಡೀಸೆಲ್ ಪದರ ಮತ್ತೆ ಉಕ್ಕಿ ಬರುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯು ಬಾವಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ, ನೀರು ಕುಡಿಯಲು ಅನರ್ಹವೆಂದು ವರದಿ ನೀಡಿದೆ. ಒಂದು ಬಾವಿಯ ನೀರಿನಲ್ಲಿ…

Read More

Karnataka Weather Forecast: ರಾಜ್ಯದಲ್ಲಿ ಇಂದೂ ವರುಣನ ಅಬ್ಬರ! ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News | Karnataka rain Update: Thunderstorm all over karnataka, Orange alert

ರಾಜ್ಯದಲ್ಲಿ ಇಂದೂ ವರುಣನ ಅಬ್ಬರ! ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಬೆಂಗಳೂರು, ಮೇ 19: ಬೆಂಗಳೂರಿನಾದ್ಯಂತ ಸೋಮವಾರ ಬಂದ ಜೋರು ಮಳೆಗೆ (Weather) ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಅಪಾರ್ಟ್​ಮೆಂಟ್​ಗಳಿಗೆಲ್ಲಾ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ಇಂದೂ ಸಹ ರಾಜ್ಯದ ಅನೇಕ ಕಡೆ ಮಳೆಯಾಗಲಿದ್ದು, ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯಾಂಶಗಳು ಮುಂದಿನ ಮೂರು…

Read More

ಕೊನೆಯ ಸಂಚಿಕೆಯತ್ತ ‘ಭಾಗ್ಯಲಕ್ಷ್ಮೀ ಧಾರಾವಾಹಿ; ವೀಕ್ಷಕರಿಗೆ ಬೇಸರ – Kannada News | Bhagyalakshmi Serial Ending: Colors Kannada’s Hit Show Concludes | Final Episode and Story Update

ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಧಾರಾವಾಹಿಗಳಲ್ಲಿ ಒಂದಾದ ‘ಭಾಗ್ಯಲಕ್ಷ್ಮೀ’ (Bhagyalaxmi) ತನ್ನ ಸುದೀರ್ಘ ಪಯಣವನ್ನು ಮುಗಿಸಿ ಅಂತಿಮ ಸಂಚಿಕೆಯತ್ತ ಹೆಜ್ಜೆ ಇಡುತ್ತಿದೆ ಎಂಬ ಸುದ್ದಿ ಸದ್ಯ ಕಿರುತೆರೆ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಕೌಟುಂಬಿಕ ಮೌಲ್ಯಗಳು, ಅಕ್ಕ-ತಂಗಿಯ ಬಾಂಧವ್ಯ ಮತ್ತು ಗೃಹಿಣಿಯೊಬ್ಬಳ ಸ್ವಾಭಿಮಾನದ ಬದುಕನ್ನು ಮನೋಜ್ಞವಾಗಿ ಉಣಬಡಿಸಿದ್ದ ಈ ಧಾರಾವಾಹಿ, ಆರಂಭದಿಂದಲೂ ಟಿಆರ್‌ಪಿ ರೇಟಿಂಗ್‌ನಲ್ಲಿ ಮುಂಚೂಣಿಯಲ್ಲಿತ್ತು. ಭಾಗ್ಯ ಮತ್ತು ಲಕ್ಷ್ಮಿ ಎಂಬ ಇಬ್ಬರು ಸಹೋದರಿಯರ ಕಥೆಯನ್ನಿಟ್ಟುಕೊಂಡು ಶುರುವಾದ ಈ ಸೀರಿಯಲ್, ನಂತರ ಪ್ರತ್ಯೇಕ…

Read More

ಮಂಗಳೂರಿನಲ್ಲಿ ಮಹಾ ಅಚ್ಚರಿ: ಬಾವಿಗಳಲ್ಲಿ ಉಕ್ಕಿ ಬಂತು ಡೀಸೆಲ್, ನೀರು ಕುಡಿಯಲಾಗದೆ ಕಾವೂರು ನಿವಾಸಿಗಳು ಕಂಗಾಲು! – Kannada News | Miracle or Danger? Diesel Starts Overflowing from Open Wells in Mangaluru’s Kavoor, Lab Detects 28 percent Fuel in Water

ಮಂಗಳೂರು, ಮೇ 19: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ತೈಲ ಬಿಕ್ಕಟ್ಟಿನ ಆತಂಕದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಬಂದರು ನಗರಿ ಮಂಗಳೂರಿನಲ್ಲಿ (Mangalore) ಅತ್ಯಂತ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಗರದ ಕಾವೂರು ಎಂಬ ಪ್ರದೇಶದ ಮೂರು ಮನೆಗಳ ಬಾವಿಗಳಲ್ಲಿ ದಿಢೀರನೆ ಡೀಸೆಲ್ (Diesel) ಉಕ್ಕಿ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಾವಿಯ ನೀರಿನಲ್ಲಿ ಬೇರೆ ಯಾವುದೇ ಕಲ್ಮಶಗಳಲ್ಲ, ಬರೋಬ್ಬರಿ ಶೇ 28 ರಷ್ಟು ಶುದ್ಧ ಡೀಸೆಲ್ ಅಂಶ ಇರುವುದು ಪ್ರಯೋಗಾಲಯದ ತಪಾಸಣೆಯಲ್ಲಿ ದೃಢಪಟ್ಟಿದ್ದು,…

Read More

ಅಮೆರಿಕದ ಮಸೀದಿಯೊಳಗೆ ಮನಬಂದಂತೆ ಗುಂಡಿನ ದಾಳಿ, ಮೂವರು ಸಾವು, ಇಬ್ಬರು ಶಂಕಿತರು ಕೂಡ ಶವವಾಗಿ ಪತ್ತೆ – Kannada News | Shooting at Major Mosque in San Diego Leaves Three Dead

ಸ್ಯಾನ್ ಡಿಯಾಗೋ, ಮೇ 19: ಅಮೆರಿಕದ ಸ್ಯಾನ್ ಡಿಯಾಗೋದಲ್ಲಿರುವ ಇಸ್ಲಾಮಿಕ್ ಸೆಂಟರ್ ಮಸೀದಿ(Mosque)ಯೊಳಗೆ ಭೀಕರ ಗುಂಡಿನ ದಾಳಿ ನಡೆದಿದೆ. ಇಬ್ಬರು ಮಸೀದಿಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಮಸೀದಿಯ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಅಮಾಯಕರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇತ್ತ ಪೊಲೀಸರು ನಡೆಸಿದ ತಕ್ಷಣದ ಪ್ರತಿದಾಳಿಯಲ್ಲಿ ಇಬ್ಬರು ಶೂಟರ್‌ಗಳೂ ಸಹ ಸಾವನ್ನಪ್ಪಿದ್ದಾರೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ತಿಳಿಸಿದ್ದಾರೆ. ಈ ಇಸ್ಲಾಮಿಕ್ ಕೇಂದ್ರವು ಸ್ಯಾನ್ ಡಿಯಾಗೋ ಕೌಂಟಿಯಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿದ್ದು, ಇಲ್ಲಿ…

Read More

2026ರಲ್ಲಿ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ 5 ಜನಪ್ರಿಯ ಸೆಲೆಬ್ರಿಟಿ ಜೋಡಿಗಳು – Kannada News | Indian Celebrity Divorces 2026: 5 Star Couples Whose Marriages Ended Recently

2026ರಲ್ಲಿ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ 5 ಜನಪ್ರಿಯ ಸೆಲೆಬ್ರಿಟಿ ಜೋಡಿಗಳು ಸಿನಿಮಾ ರಂಗದ ಸೆಲೆಬ್ರಿಟಿಗಳ ವೈವಾಹಿಕ ಜೀವನದ ಏಳುಬೀಳುಗಳು ಯಾವಾಗಲೂ ಸುದ್ದಿಯಲ್ಲಿರುತ್ತವೆ. ಅದರಲ್ಲೂ 2026ರ ಆರಂಭದಿಂದ ಹಿಡಿದು ಇತ್ತೀಚಿನವರೆಗಿನ ಕೆಲವೇ ತಿಂಗಳುಗಳಲ್ಲಿ ಭಾರತೀಯ ಚಿತ್ರರಂಗ ಹಾಗೂ ಕಿರುತೆರೆಯ ಹಲವು ಸ್ಟಾರ್ ಜೋಡಿಗಳು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ಮೂಲಕ ಅಭಿಮಾನಿಗಳಿಗೆ ತೀವ್ರ ಆಘಾತ ನೀಡಿವೆ. ಅಂತಹ ಪ್ರಮುಖ 5 ಸೆಲೆಬ್ರಿಟಿ ಜೋಡಿಗಳ ವಿವರ ಇಲ್ಲಿde. 1. ದಳಪತಿ ವಿಜಯ್ – ಸಂಗೀತಾ ಸ್ವರ್ಣಲಿಂಗಂ: ಕಾಲಿವುಡ್‌ನ ಸ್ಟಾರ್…

Read More

Daily Devotional: ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು! – Kannada News | The Significance of Adhika Jyeshtha Masa: Rituals and Benefits

ಅಧಿಕ ಜ್ಯೇಷ್ಠ ಮಾಸದಲ್ಲಿ ವಿಷ್ಣು ಪೂಜೆಯಿಂದ ಏನೆಲ್ಲಾ ಲಾಭವಿದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಅಧಿಕ ಜೇಷ್ಠ ಮಾಸವು ಹಿಂದೂ ಚಾಂದ್ರಮಾನ ಪದ್ಧತಿಯಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಮಾಸವಾಗಿದೆ. ಸೂರ್ಯ ಮತ್ತು ಚಂದ್ರರ ಚಲನೆಯನ್ನು ಅವಲಂಬಿಸಿ ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಈ ಮಾಸವನ್ನು ‘ಪುರುಷೋತ್ತಮ ಮಾಸ’ ಅಥವಾ ‘ಅಧಿಕ ಮಾಸ’ ಎಂದೂ ಕರೆಯುತ್ತಾರೆ. ‘ಅಧಿಕಸ್ಯ ಅಧಿಕ ಫಲಂ’ ಎಂಬ ನುಡಿಯಂತೆ ಈ ಮಾಸದಲ್ಲಿ ಮಾಡುವ ಪುಣ್ಯ…

Read More

ಕೊನೆ ಕ್ಷಣದಲ್ಲಿ ಇರಾನ್ ಮೇಲಿನ ಭೀಕರ ದಾಳಿ ಮುಂದೂಡಿದ ಅಮೆರಿಕ, ಗಲ್ಫ್ ರಾಷ್ಟ್ರಗಳ ಮನವಿಗೆ ಓಗೊಟ್ಟ ಟ್ರಂಪ್ – Kannada News | Donald Trump Says Planned Strike Was Delayed Amid Talks With Iran

ವಾಷಿಂಗ್ಟನ್, ಮೇ 19: ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾ ಯುದ್ಧದ ಭೀತಿ ಸೃಷ್ಟಿಸಿದ್ದ ಇರಾನ್ ಮೇಲಿನ ಅತ್ಯಂತ ಭೀಕರ ಮಿಲಿಟರಿ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಕೊನೆ ಕ್ಷಣದಲ್ಲಿ ಮುಂದೂಡಿದ್ದಾರೆ. ಅಮೆರಿಕದ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ  ವಿಷಯವನ್ನು ಖುದ್ದಾಗಿ ಹಂಚಿಕೊಂಡಿರುವ ಅಧ್ಯಕ್ಷ ಟ್ರಂಪ್, ಗಲ್ಫ್ ರಾಷ್ಟ್ರಗಳ ಉನ್ನತ ನಾಯಕರ ಮಧ್ಯಸ್ಥಿಕೆ ಮತ್ತು ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮವಾದ ‘ಟ್ರುತ್ ಸೋಶಿಯಲ್’ಪೋಸ್ಟ್ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ…

Read More

ಮಗಳಿಗೆ Miyou ಎಂದು ಹೆಸರಿಟ್ಟ ಅಟ್ಲಿ-ಪ್ರಿಯಾ; ಅರ್ಥವೇನು? – Kannada News | Atlee Priya Name Daughter Miyou: Meaning, Japanese Origin and Fan Reactions

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ (Atlee) ಮತ್ತು ಅವರ ಪತ್ನಿ ಪ್ರಿಯಾ ತಮ್ಮ ಎರಡನೇ ಮಗುವಿನ ಹೆಸರನ್ನು ಘೋಷಿಸಿದ್ದಾರೆ. ಏಪ್ರಿಲ್ 20ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದ ಈ ಜೋಡಿ, ಈಗ ಮಗಳಿಗೆ ‘ಮಿಯು’ (Miyou) ಎಂದು ನಾಮಕರಣ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಪುಟ್ಟ ಕೈಯನ್ನು ಹಿಡಿದುಕೊಂಡಿರುವ ಸುಂದರವಾದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅಟ್ಲಿ ದಂಪತಿ ಈ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಟ್ಲಿ ಮತ್ತು ಪ್ರಿಯಾ ಇಟ್ಟಿರುವ ಈ ‘ಮಿಯು’ ಹೆಸರು ಸದ್ಯ ಎಲ್ಲರ ಗಮನ…

Read More