Daily Devotional: ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು! – Kannada News | The Significance of Adhika Jyeshtha Masa: Rituals and Benefits

ಅಧಿಕ ಜ್ಯೇಷ್ಠ ಮಾಸದಲ್ಲಿ ವಿಷ್ಣು ಪೂಜೆಯಿಂದ ಏನೆಲ್ಲಾ ಲಾಭವಿದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಅಧಿಕ ಜೇಷ್ಠ ಮಾಸವು ಹಿಂದೂ ಚಾಂದ್ರಮಾನ ಪದ್ಧತಿಯಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಮಾಸವಾಗಿದೆ. ಸೂರ್ಯ ಮತ್ತು ಚಂದ್ರರ ಚಲನೆಯನ್ನು ಅವಲಂಬಿಸಿ ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಈ ಮಾಸವನ್ನು ‘ಪುರುಷೋತ್ತಮ ಮಾಸ’ ಅಥವಾ ‘ಅಧಿಕ ಮಾಸ’ ಎಂದೂ ಕರೆಯುತ್ತಾರೆ. ‘ಅಧಿಕಸ್ಯ ಅಧಿಕ ಫಲಂ’ ಎಂಬ ನುಡಿಯಂತೆ ಈ ಮಾಸದಲ್ಲಿ ಮಾಡುವ ಪುಣ್ಯ ಕಾರ್ಯಗಳಿಗೆ ಹೆಚ್ಚಿನ ಫಲ ದೊರೆಯುತ್ತದೆ ಎಂದು ನಂಬಲಾಗಿದೆ.

ಪ್ರತಿ ಮಾಸಕ್ಕೂ ಒಬ್ಬ ಅಧಿಪತಿ ದೇವರಿರುತ್ತಾನೆ. ಆದರೆ ಅಧಿಕ ಮಾಸಕ್ಕೆ ಜವಾಬ್ದಾರಿ ವಹಿಸಿಕೊಳ್ಳಲು ದೇವರುಗಳು ಹಿಂಜರಿದಾಗ, ಸಾಕ್ಷಾತ್ ವಿಷ್ಣು ಭಗವಾನರು ಈ ಮಾಸದ ನಿರ್ವಹಣೆಯನ್ನು ವಹಿಸಿಕೊಂಡರು. ಹಾಗಾಗಿ ಇದನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ ಮತ್ತು ವಿಷ್ಣುವಿನ ಆರಾಧನೆಗೆ ಅತ್ಯಂತ ಪ್ರಶಸ್ತ ಮಾಸವಾಗಿದೆ. ಈ ತಿಂಗಳು ಪೂರ್ತಿ ವಿಷ್ಣುವೇ ಅಧಿಪತಿಯಾಗಿರುತ್ತಾನೆ. ವಿಷ್ಣು ಸಹಸ್ರನಾಮ ಪಾರಾಯಣ, ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಜಪ, ಭಗವದ್ಗೀತೆ ಹಾಗೂ ಭಾಗವತ ಪಾರಾಯಣ, ನಾಮಸ್ಮರಣೆ ಮತ್ತು ದಾನ ಧರ್ಮಗಳು ವಿಶೇಷ ಪುಣ್ಯವನ್ನು ತರುತ್ತವೆ. ಬಡವರಿಗೆ ಅನ್ನದಾನ, ಸಹಾಯ ಮಾಡುವುದು ಅತ್ಯಂತ ಶುಭಕರ. ಈ ಮಾಸದಲ್ಲಿ ವಿವಾಹ, ಉಪನಯನ, ಗೃಹಪ್ರವೇಶ ಮುಂತಾದ ಕಾರ್ಯಗಳನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ದೇವತಾರಾಧನೆ ಮತ್ತು ಪುಣ್ಯ ಸಂಗ್ರಹಕ್ಕೆ ಈ ಮಾಸ ಅತ್ಯಂತ ಯೋಗ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ

 

Source link

Leave a Reply

Your email address will not be published. Required fields are marked *