All posts by nagaraj11081993

ಉತ್ತರಾಖಂಡದಲ್ಲಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್​​ಪ್ರೆಸ್ ರೈಲು – Kannada News | Three Coaches of Ujjain Express Derail Near Rishikesh, Inquiry Ordered

ಉತ್ತರಾಖಂಡ, ಮೇ 19: ಉತ್ತರಾಖಂಡದ ಋಷಿಕೇಶದ ಖಾಂಡ್ ಗಾಂವ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಯೋಗ ನಗರಿ ರೈಲು ನಿಲ್ದಾಣದ ಬಳಿ ಉಜ್ಜಯಿನಿ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಹಳಿತಪ್ಪಿವೆ. ರಾತ್ರಿ 9.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಹಳಿತಪ್ಪಿದ ಸಮಯದಲ್ಲಿ ಹಳಿಯಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಸೋಮವಾರ ಬೆಳಗ್ಗೆ, ಸಸಾರಂನಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿತ್ತು, ಮತ್ತು ಒಂದು ದಿನದ ಮೊದಲು ರತ್ಲಂ ಜಿಲ್ಲೆಯ ರಾಜಧಾನಿ ಎಕ್ಸ್‌ಪ್ರೆಸ್ 12431 ರ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಂಗಳೂರು: ಬಾವಿ ನೀರಿನಲ್ಲಿ ಡೀಸೆಲ್, ಸ್ಥಳೀಯರು ಹೇಳೋದೇನು ನೋಡಿ – Kannada News | Mangaluru Fuel Leak Chaos: Locals Alarmed as Open Wells Overflow with Diesel in Kavoor; Watch Ground Reality

ಮಂಗಳೂರು, ಮೇ 19: ಮಂಗಳೂರಿನ ಕಾವೂರು ಪ್ರದೇಶದಲ್ಲಿರುವ ಮೂರು ಮನೆಗಳ ಬಾವಿ ನೀರು ಡೀಸೆಲ್‌ನಿಂದ ಕಲುಷಿತಗೊಂಡಿರುವುದು ಪತ್ತೆಯಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ ತಿಂಗಳಿನಿಂದ ಈ ಸಮಸ್ಯೆ ಗಮನಕ್ಕೆ ಬಂದಿದ್ದು, ಬಾವಿಯ ನೀರನ್ನು ಖಾಲಿ ಮಾಡಿದರೂ ಡೀಸೆಲ್ ಪದರ ಮತ್ತೆ ಉಕ್ಕಿ ಬರುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯು ಬಾವಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ, ನೀರು ಕುಡಿಯಲು ಅನರ್ಹವೆಂದು ವರದಿ ನೀಡಿದೆ. ಒಂದು ಬಾವಿಯ ನೀರಿನಲ್ಲಿ ಶೇ 28ರಷ್ಟು ಡೀಸೆಲ್ ಅಂಶ ಪತ್ತೆಯಾಗಿದೆ. ನೀರಿನಲ್ಲಿ ಕಾಗದವನ್ನು ಅದ್ದಿ ಬೆಂಕಿ ಹಚ್ಚಿದಾಗ ಅದು ಉರಿಯುತ್ತಿರುವುದು ಡೀಸೆಲ್ ಅಂಶದ ಇರುವಿಕೆಯನ್ನು ದೃಢಪಡಿಸಿದೆ. ಕುಡಿಯುವ ನೀರಿಗಾಗಿ ಬಾವಿಯನ್ನೇ ಅವಲಂಬಿಸಿದ್ದ ಜನರು ಈಗ ಕಾರ್ಪೊರೇಷನ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಈ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ಮತ್ತು ಶಾಶ್ವತ ಪರಿಹಾರ ಒದಗಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಸಂತ್ರಸ್ತರು ಮನವಿ ಮಾಡಿದ್ದಾರೆ.

ವಿವರಗಳಿಗೆ ಓದಿ: ಮಂಗಳೂರಿನಲ್ಲಿ ಮಹಾ ಅಚ್ಚರಿ: ಬಾವಿಗಳಲ್ಲಿ ಉಕ್ಕಿ ಬಂತು ಡೀಸೆಲ್, ನೀರು ಕುಡಿಯಲಾಗದೆ ಕಾವೂರು ನಿವಾಸಿಗಳು ಕಂಗಾಲು!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ರಾಜ್ಯದಲ್ಲಿ ಇಂದೂ ವರುಣನ ಅಬ್ಬರ! ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News | Karnataka rain Update: Thunderstorm all over karnataka, Orange alert

ರಾಜ್ಯದಲ್ಲಿ ಇಂದೂ ವರುಣನ ಅಬ್ಬರ! ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಬೆಂಗಳೂರು, ಮೇ 19: ಬೆಂಗಳೂರಿನಾದ್ಯಂತ ಸೋಮವಾರ ಬಂದ ಜೋರು ಮಳೆಗೆ (Weather) ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಅಪಾರ್ಟ್​ಮೆಂಟ್​ಗಳಿಗೆಲ್ಲಾ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ಇಂದೂ ಸಹ ರಾಜ್ಯದ ಅನೇಕ ಕಡೆ ಮಳೆಯಾಗಲಿದ್ದು, ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಮುಂದಿನ ಮೂರು ದಿನ ಕರ್ನಾಟಕದಾದ್ಯಂತ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ.
  • ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​
  • ಸೋಮವಾರ ಸುರಿದ ಭಾರೀ ಮಳೆಗೆ ಬೆಂಗಳೂರಿನಲ್ಲಿ ಅವಾಂತರ

ಎಲ್ಲೆಲ್ಲಿ ಮಳೆ?

ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉಳಿದಂತೆ ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ನೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಮೈಸೂರಿನಲ್ಲಿಯೂ ಮಳೆಯ ಮುನ್ಸೂಚನೆ ಇದೆ.

ಗರಿಷ್ಠ ತಾಪಮಾನ

ರಾಜ್ಯದ ಹಲವೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಕಲಬುರಗಿಯಲ್ಲಿ ಅತ್ಯಂತ ಗರಿಷ್ಠ ಅಂದರೆ 42.4° C ಉಷ್ಣಾಂಶ ದಾಖಲಾಗಿದೆ. ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 1.6° C ನಿಂದ 3.0° C ವರೆಗೆ ಹೆಚ್ಚಾಗುವ ಸಾಧ್ಯತೆಯಿದ್ದು, ಕರಾವಳಿ ಕರ್ನಾಟಕದ ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕೊಂಚ ಕಡಿಮೆ ಇರಲಿದೆ ಎಂದು ವರದಿ ತಿಳಿಸಿದೆ.

ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇನ್ನುಳಿದಂತೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಕರಾವಳಿಯ ಜಿಲ್ಲೆಗಳಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ 7 ಜಿಲ್ಲೆಗಳಲ್ಲಿ ನಾಳೆ ಆರೆಂಜ್​​ ಅಲರ್ಟ್​​, ರಾಜ್ಯದಲ್ಲಿ ಮೇ 21ರವರೆಗೆ ಮಳೆ ಸಾಧ್ಯತೆ

ಭಾರಿ ಮಳೆ ಮತ್ತು ಗಾಳಿಯಿಂದಾಗಿ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಬಹುದು ಮತ್ತು ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆ ಉಂಟಾಗುವ ಆತಂಕವಿದೆ. ಹೀಗಾಗಿ ಸಾರ್ವಜನಿಕರು ಮಳೆ ಬರುವಾಗ ಮನೆಯ ಒಳಗೇ ಇರಲು, ಪ್ರಯಾಣವನ್ನು ಮುಂದೂಡಲು ಹಾಗೂ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಹವಾಮಾನ ಇಲಾಖೆ ಸುರಕ್ಷತಾ ಕ್ರಮಗಳನ್ನು ಪ್ರಕಟಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊನೆಯ ಸಂಚಿಕೆಯತ್ತ ‘ಭಾಗ್ಯಲಕ್ಷ್ಮೀ ಧಾರಾವಾಹಿ; ವೀಕ್ಷಕರಿಗೆ ಬೇಸರ – Kannada News | Bhagyalakshmi Serial Ending: Colors Kannada’s Hit Show Concludes | Final Episode and Story Update

ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಧಾರಾವಾಹಿಗಳಲ್ಲಿ ಒಂದಾದ ‘ಭಾಗ್ಯಲಕ್ಷ್ಮೀ’ (Bhagyalaxmi) ತನ್ನ ಸುದೀರ್ಘ ಪಯಣವನ್ನು ಮುಗಿಸಿ ಅಂತಿಮ ಸಂಚಿಕೆಯತ್ತ ಹೆಜ್ಜೆ ಇಡುತ್ತಿದೆ ಎಂಬ ಸುದ್ದಿ ಸದ್ಯ ಕಿರುತೆರೆ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಕೌಟುಂಬಿಕ ಮೌಲ್ಯಗಳು, ಅಕ್ಕ-ತಂಗಿಯ ಬಾಂಧವ್ಯ ಮತ್ತು ಗೃಹಿಣಿಯೊಬ್ಬಳ ಸ್ವಾಭಿಮಾನದ ಬದುಕನ್ನು ಮನೋಜ್ಞವಾಗಿ ಉಣಬಡಿಸಿದ್ದ ಈ ಧಾರಾವಾಹಿ, ಆರಂಭದಿಂದಲೂ ಟಿಆರ್‌ಪಿ ರೇಟಿಂಗ್‌ನಲ್ಲಿ ಮುಂಚೂಣಿಯಲ್ಲಿತ್ತು.

ಭಾಗ್ಯ ಮತ್ತು ಲಕ್ಷ್ಮಿ ಎಂಬ ಇಬ್ಬರು ಸಹೋದರಿಯರ ಕಥೆಯನ್ನಿಟ್ಟುಕೊಂಡು ಶುರುವಾದ ಈ ಸೀರಿಯಲ್, ನಂತರ ಪ್ರತ್ಯೇಕ ಧಾರಾವಾಹಿಗಳಾದವು. ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ಮೊದಲೇ ಮುಗಿದಿದೆ. ಈಗ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಪೂರ್ಣಗೊಳ್ಳುವ ಸಮಯ. ಈ ಧಾರಾವಾಹಿ ನಟಿ ಸುಷ್ಮಾ ರಾವ್ (ಭಾಗ್ಯ) ಅವರ ಅದ್ಭುತ ನಟನೆಯಿಂದಾಗಿ ಪ್ರತಿ ಮನೆಮಾತಾಗಿತ್ತು.

ಪತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ಮುಗ್ಧ ಗೃಹಿಣಿ ಭಾಗ್ಯ, ನಂತರದ ದಿನಗಳಲ್ಲಿ ಶಿಕ್ಷಣ ಪಡೆದು, ಸ್ವಾವಲಂಬಿಯಾಗಿ ಹೇಗೆ ನಿಲ್ಲುತ್ತಾಳೆ ಎಂಬ ಕಥಾಹಂದರ ಮಹಿಳಾ ವೀಕ್ಷಕರನ್ನು ಅಪಾರವಾಗಿ ಸೆಳೆದಿತ್ತು. ತಾಂಡವ್ ಎಂಬ ನೆಗೆಟಿವ್ ಪಾತ್ರ ಹಾಗೂ ಶ್ರೇಷ್ಠಾಳ ಕುತಂತ್ರಗಳ ಸುತ್ತ ನಡೆದ ಹೈ-ಡ್ರಾಮಾ ಸೀರಿಯಲ್‌ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.

ಇದನ್ನೂ ಓದಿ: ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕೊನೆಯಾಗುತ್ತಾ? ‘ತಾಂಡವ್’ ಪಾತ್ರಧಾರಿ ಸುದರ್ಶನ್ ಹೇಳೋದೇನು?

ಸದ್ಯ ಕಥೆಯು ತಾರ್ಕಿಕ ಅಂತ್ಯದತ್ತ ಸಾಗುತ್ತಿದ್ದು, ಭಾಗ್ಯ ಮತ್ತು ತಾಂಡವ್ ವಿಚ್ಛೇದನದ ಬಳಿಕ ಕಥೆಗೆ ಸೂಕ್ತ ತಿರುವು ಸಿಕ್ಕಿದೆ.ಆದಿಯನ್ನು ಭಾಗ್ಯಾ ಮದುವೆ ಆಗಿದ್ದಾಳೆ. ಈಗ ವಾಹಿನಿಯು ಕಥೆಯನ್ನು ಎಳೆಯದೆ, ವೀಕ್ಷಕರಿಗೆ ನಿರಾಸೆ ಮೂಡಿಸದಂತೆ ಗೌರವಯುತವಾಗಿ ಮುಕ್ತಾಯಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರತಿದಿನ ಸಂಜೆ ವೀಕ್ಷಕರನ್ನು ರಂಜಿಸುತ್ತಿದ್ದ ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯವಾಗುತ್ತಿರುವುದು ಅದರ ಅಪ್ಪಟ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿರುವುದಂತೂ ನಿಜ. ಶೀಘ್ರದಲ್ಲೇ ಈ ಸಮಯಕ್ಕೆ ಅಗ್ನಿಸಾಕ್ಷಿ ಧಾರಾವಾಹಿ ಪ್ರಸಾರ ಕಾಣುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಗಳೂರಿನಲ್ಲಿ ಮಹಾ ಅಚ್ಚರಿ: ಬಾವಿಗಳಲ್ಲಿ ಉಕ್ಕಿ ಬಂತು ಡೀಸೆಲ್, ನೀರು ಕುಡಿಯಲಾಗದೆ ಕಾವೂರು ನಿವಾಸಿಗಳು ಕಂಗಾಲು! – Kannada News | Miracle or Danger? Diesel Starts Overflowing from Open Wells in Mangaluru’s Kavoor, Lab Detects 28 percent Fuel in Water

ಮಂಗಳೂರು, ಮೇ 19: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ತೈಲ ಬಿಕ್ಕಟ್ಟಿನ ಆತಂಕದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಬಂದರು ನಗರಿ ಮಂಗಳೂರಿನಲ್ಲಿ (Mangalore) ಅತ್ಯಂತ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಗರದ ಕಾವೂರು ಎಂಬ ಪ್ರದೇಶದ ಮೂರು ಮನೆಗಳ ಬಾವಿಗಳಲ್ಲಿ ದಿಢೀರನೆ ಡೀಸೆಲ್ (Diesel) ಉಕ್ಕಿ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಾವಿಯ ನೀರಿನಲ್ಲಿ ಬೇರೆ ಯಾವುದೇ ಕಲ್ಮಶಗಳಲ್ಲ, ಬರೋಬ್ಬರಿ ಶೇ 28 ರಷ್ಟು ಶುದ್ಧ ಡೀಸೆಲ್ ಅಂಶ ಇರುವುದು ಪ್ರಯೋಗಾಲಯದ ತಪಾಸಣೆಯಲ್ಲಿ ದೃಢಪಟ್ಟಿದ್ದು, ಈ ವಿಚಿತ್ರ ವಿದ್ಯಮಾನ ಇಡೀ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮುಖ್ಯಾಂಶಗಳು

  • ಬಾವಿ ನೀರಿನ ಮಾದರಿ ಪರೀಕ್ಷಿಸಿದಾಗ ಶೇಕಡಾ 28ರಷ್ಟು ಡೀಸೆಲ್ ಮಿಶ್ರಣವಾಗಿರುವುದು ದೃಢ.
  • ಬಾವಿಯಿಂದ ಮೇಲೆತ್ತಿದ ನೀರಿಗೆ ಕಾಗದವನ್ನು ಅದ್ದಿ ಬೆಂಕಿ ಹಚ್ಚಿದರೆ ಅದು ತಕ್ಷಣವೇ ಭುಗಿಲನೆ ಉರಿಯುತ್ತಿದೆ.
  • ಕಾವೂರು ಸುತ್ತಮುತ್ತಲಿನ ಅಂತರ್ಜಲ ಮೂಲಗಳು ವಿಷವಾಗುವ ಆತಂಕ.

ಬಂಕ್‌ನಿಂದ ಸೋರಿಕೆ ಶಂಕೆ: ಅಧಿಕಾರಿಗಳ ನಿರ್ಲಕ್ಷ್ಯ

ಬಾವಿಯ ನೀರನ್ನು ಎಷ್ಟು ಬಾರಿ ಮೋಟಾರ್ ಹಾಕಿ ಪೂರ್ತಿ ಖಾಲಿ ಮಾಡಿದರೂ ಸಹ, ಮತ್ತೆ ಜಿನುಗುವ ನೀರಿನೊಂದಿಗೆ ಡೀಸೆಲ್‌ನ ದಪ್ಪನೆಯ ಪದರ ಮೇಲೇಳುತ್ತಲೇ ಇದೆ. ಇದರಿಂದಾಗಿ ಕಾವೂರಿನ ಈ ಕುಟುಂಬಗಳಿಗೆ ಕುಡಿಯುವ ನೀರು ಇರಲಿ, ಕನಿಷ್ಠ ಮನೆ ಬಳಕೆ ಅಥವಾ ಪಾತ್ರೆ ತೊಳೆಯಲೂ ನೀರಿಲ್ಲದಂತಾಗಿದೆ. ಮನೆಗಳ ಅತ್ಯಂತ ಸಮೀಪದಲ್ಲೇ ಪೆಟ್ರೋಲ್ ಬಂಕ್‌ ಒಂದಿದ್ದು, ಅದರ ಅಂಡರ್‌ಗ್ರೌಂಡ್ ಟ್ಯಾಂಕ್‌ನಿಂದಲೇ ಡೀಸೆಲ್ ಲೀಕ್ ಆಗಿ ಅಂತರ್ಜಲ ಸೇರಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ, ‘ನಮ್ಮ ಡೀಸೆಲ್ ಸ್ಟಾಕ್‌ನಲ್ಲಿ ಯಾವುದೇ ವ್ಯತ್ಯಾಸ ಬಂದಿಲ್ಲ, ಸೋರಿಕೆಯೂ ಆಗುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಇತ್ತ ಬಾವಿ ನೀರು ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವ ಸೌಜನ್ಯ ತೋರಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ರಹಸ್ಯ ಸೋರಿಕೆ ಹೇಗೆ ಆಗುತ್ತಿದೆ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಿ, ಇಡೀ ಪ್ರದೇಶದ ಅಂತರ್ಜಲ ಕಲುಷಿತಗೊಳ್ಳುವುದನ್ನು ತಡೆಯಬೇಕೆಂದು ಕಾವೂರು ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

‘ಟ್ಯಾಂಕರ್ ನೀರೇ ನಮಗೆ ಆಸರೆ, ದಯವಿಟ್ಟು ನೆರವಿಗೆ ಬನ್ನಿ’: ಸಂತ್ರಸ್ತ ಸದಾಶಿವ ಅಳಲು

ಬಾವಿ ನೀರಿನಲ್ಲಿ ಡೀಸೆಲ್ ಪತ್ತೆಯಾಗಿರುವ ಕುರಿತು ಕಾವೂರಿನ ಸಂತ್ರಸ್ತರಾದ ಸದಾಶಿವ ಎಂಬವರು ‘ಟಿವಿ9’ ಜತೆ ಮಾತನಾಡಿ ಅಸಹಾಯಕತೆ ಮತ್ತು ಆಕ್ರೋಶ ಹೊರಹಾಕಿದ್ದಾರೆ. ‘ಬಾವಿಯಿಂದ ನೀರು ಸೇದುವಾಗಲೇ ಅದರಲ್ಲಿ ಡೀಸೆಲ್ ಮಿಕ್ಸ್ ಆಗಿರುವುದು ನಮಗೆ ಮೊದಲ ಬಾರಿಗೆ ಗೊತ್ತಾಯಿತು. ಬಳಸುವಾಗ ತೀವ್ರವಾದ ವಾಸನೆ ಬರುತ್ತಿತ್ತು. ಬಾವಿಯ ನೀರನ್ನು ಪೂರ್ತಿಯಾಗಿ ಖಾಲಿ ಮಾಡಿಸಿ ಕ್ಲೀನ್ ಮಾಡಿಸಿದರೂ ಸಹ ಮತ್ತೆ ಡೀಸೆಲ್ ಬರುತ್ತಲೇ ಇದೆ. ಈ ಆಯಿಲ್ ಭೂಮಿಯ ಒಳಗಿನಿಂದ ಎಲ್ಲಿಂದ ಜಿನುಗುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ. ಇದರಿಂದಾಗಿ ನಮಗೆ ದಿನಬಳಕೆಯ ನೀರಿಗೂ ಭಾರಿ ತೊಂದರೆಯಾಗಿದೆ. ಈಗ ಅನಿವಾರ್ಯವಾಗಿ ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಬಕೆಟ್‌ಗಳಲ್ಲಿ ತುಂಬಿಸಿಟ್ಟುಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ’ ಎಂದು ಸದಾಶಿವ ಬೇಸರ ವ್ಯಕ್ತಪಡಿಸಿದ್ದಾರೆ.

ಬಾವಿಯಿಂದ ತೆಗೆದ ನೀರಿಗೆ ಪೇಪರ್ ಮುಳುಗಿಸಿ ಬೆಂಕಿ ಹಚ್ಚಿದಾಗ ಉರಿಯುತ್ತಿರುವುದು!

ಪೆಟ್ರೋಲ್ ಬಂಕ್ ಮಾಲೀಕರ ನಡೆಯ ಬಗ್ಗೆಯೂ ಮಾತನಾಡಿದ ಅವರು, ‘ನಾವು ಈ ಬಗ್ಗೆ ಪಕ್ಕದ ಪೆಟ್ರೋಲ್ ಬಂಕ್‌ನವರ ಗಮನಕ್ಕೆ ತಂದಿದ್ದೆವು. ಆದರೆ ಇದು ನಮ್ಮಿಂದ ಆಗಿರುವ ಸಮಸ್ಯೆಯಲ್ಲ; ನಮ್ಮ ಟ್ಯಾಂಕ್‌ನಿಂದ ಲೀಕ್ ಆಗಿದ್ದರೆ ಸ್ಟಾಕ್‌ನಲ್ಲಿ ವ್ಯತ್ಯಾಸ ಬರುತ್ತಿತ್ತು ಎಂದು ಅವರು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಂದು ನೀರಿನ ಮಾದರಿಯನ್ನು ತಪಾಸಣೆಗೆ ಕೊಂಡೊಯ್ದಿದ್ದು, ಇದರಲ್ಲಿ ಬರೋಬ್ಬರಿ ಶೇ 28 ರಷ್ಟು ಆಯಿಲ್ ಅಂಶ ಇರುವುದು ವರದಿಯಲ್ಲಿ ದೃಢಪಟ್ಟಿದೆ. ಅಲ್ಲದೆ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾವಿಯಿಂದ ತೆಗೆದ ನೀರಿಗೆ ಪೇಪರ್ ಮುಳುಗಿಸಿ ಬೆಂಕಿ ಹಚ್ಚಿದರೆ ಅದು ಉರಿಯುತ್ತಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ವರದಿ ಪಡೆದು ಸುಮ್ಮನಾಗದೆ ತಕ್ಷಣವೇ ಸ್ಥಳಕ್ಕೆ ಬಂದು ನಮ್ಮ ನೆರವಿಗೆ ಧಾವಿಸಬೇಕು’ ಎಂದು ಸದಾಶಿವ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:59 am, Tue, 19 May 26

Source link

ಅಮೆರಿಕದ ಮಸೀದಿಯೊಳಗೆ ಮನಬಂದಂತೆ ಗುಂಡಿನ ದಾಳಿ, ಮೂವರು ಸಾವು, ಇಬ್ಬರು ಶಂಕಿತರು ಕೂಡ ಶವವಾಗಿ ಪತ್ತೆ – Kannada News | Shooting at Major Mosque in San Diego Leaves Three Dead

ಸ್ಯಾನ್ ಡಿಯಾಗೋ, ಮೇ 19: ಅಮೆರಿಕದ ಸ್ಯಾನ್ ಡಿಯಾಗೋದಲ್ಲಿರುವ ಇಸ್ಲಾಮಿಕ್ ಸೆಂಟರ್ ಮಸೀದಿ(Mosque)ಯೊಳಗೆ ಭೀಕರ ಗುಂಡಿನ ದಾಳಿ ನಡೆದಿದೆ. ಇಬ್ಬರು ಮಸೀದಿಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಮಸೀದಿಯ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಅಮಾಯಕರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇತ್ತ ಪೊಲೀಸರು ನಡೆಸಿದ ತಕ್ಷಣದ ಪ್ರತಿದಾಳಿಯಲ್ಲಿ ಇಬ್ಬರು ಶೂಟರ್‌ಗಳೂ ಸಹ ಸಾವನ್ನಪ್ಪಿದ್ದಾರೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ತಿಳಿಸಿದ್ದಾರೆ.

ಈ ಇಸ್ಲಾಮಿಕ್ ಕೇಂದ್ರವು ಸ್ಯಾನ್ ಡಿಯಾಗೋ ಕೌಂಟಿಯಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿದ್ದು, ಇಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಅರೇಬಿಕ್ ಭಾಷೆ, ಇಸ್ಲಾಮಿಕ್ ಅಧ್ಯಯನಗಳು ಮತ್ತು ಕುರಾನ್ ಬೋಧನೆ ಮಾಡುವ ‘ಅಲ್ ರಶೀದ್’ ಶಾಲೆ ಕೂಡ ಇದೆ. ಗುಂಡಿನ ದಾಳಿ ನಡೆದ ತಕ್ಷಣ ಇಡೀ ಪ್ರದೇಶವನ್ನು ಹತ್ತಾರು ಪೊಲೀಸ್ ವಾಹನಗಳು ಸುತ್ತುವರೆದವು. ಮಸೀದಿಯ ಪಾರ್ಕಿಂಗ್ ಸ್ಥಳದಿಂದ ಡಜನ್‌ಗಿಂತಲೂ ಹೆಚ್ಚು ಪುಟ್ಟ ಮಕ್ಕಳು ಪ್ರಾಣಭಯದಿಂದ ಪರಸ್ಪರ ಕೈ ಕೈ ಹಿಡಿದುಕೊಂಡು ಸುರಕ್ಷಿತವಾಗಿ ಹೊರಗೆ ಬರುತ್ತಿರುವ ದೃಶ್ಯಗಳು ಹೆಲಿಕಾಪ್ಟರ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ನೋಡುಗರ ಕರುಳು ಹಿಂಡುವಂತಿತ್ತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಸೀದಿಯ ಇಮಾಮ್ ತಹಾ ಹಸಾನೆ, ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನಮ್ಮ ಕೇಂದ್ರವು ಸದಾ ಅಂತರ್​ಧರ್ಮೀಯ ಸೌಹಾರ್ದತೆ ಮತ್ತು ಸಮುದಾಯ ನಿರ್ಮಾಣದ ಮೇಲೆ ಕೆಲಸ ಮಾಡುತ್ತದೆ. ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಮುಸ್ಲಿಮೇತರರ ದೊಡ್ಡ ಗುಂಪೊಂದು ಮುಂಜಾನೆ ಮಸೀದಿಗೆ ಬಂದಿತ್ತು. ಅಂತಹ ಶಾಂತಿ ಬಯಸುವ ಜಾಗದಲ್ಲಿ ಈ ರಕ್ತಪಾತ ನಡೆದಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.\

ಮತ್ತಷ್ಟು ಓದಿ: ಹಫ್ತಾ ವಸೂಲಿ ಮಾಡುತ್ತ ಏರಿಯಾದಲ್ಲಿ ಹವಾ, ಮಸೀದಿ ಪಕ್ಕದ ಜಾಗಕ್ಕಾಗಿ ಬಿತ್ತು ಹೆಣ

ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ಮಾತನಾಡಿ, ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ ಇದನ್ನು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ‘ದ್ವೇಷಾಪರಾಧ’ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ದಾಳಿ ನಡೆಸಿದ ಹದಿಹರೆಯದ ಶೂಟರ್‌ಗಳು ಯಾರು ಮತ್ತು ಅವರ ಹಿನ್ನೆಲೆ ಏನು ಎಂಬ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ ಎಂದಿದ್ದಾರೆ.

ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಅವರ ಕಚೇರಿಯು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದೆ. “ಸಮುದಾಯವನ್ನು ರಕ್ಷಿಸಲು ಜೀವದ ಹಂಗು ತೊರೆದು ತಕ್ಷಣ ಸ್ಪಂದಿಸಿದ ರಕ್ಷಣಾ ಸಿಬ್ಬಂದಿಗೆ ಧನ್ಯವಾದಗಳು. ಸಾರ್ವಜನಿಕರು ಸ್ಥಳೀಯ ಅಧಿಕಾರಿಗಳ ಮಾರ್ಗದರ್ಶನವನ್ನು ಅನುಸರಿಸಬೇಕು” ಎಂದು ಗವರ್ನರ್ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಶಾಂತಿ ಮತ್ತು ಶಿಕ್ಷಣದ ಕೇಂದ್ರವಾಗಿದ್ದ ಸ್ಯಾನ್ ಡಿಯಾಗೋದ ಮಸೀದಿಯ ಸುತ್ತಮುತ್ತಲಿನ ಮುಸ್ಲಿಂ ಮಾರುಕಟ್ಟೆಗಳು ಮತ್ತು ನೆರೆಹೊರೆಯಲ್ಲಿ ಸದ್ಯ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

2026ರಲ್ಲಿ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ 5 ಜನಪ್ರಿಯ ಸೆಲೆಬ್ರಿಟಿ ಜೋಡಿಗಳು – Kannada News | Indian Celebrity Divorces 2026: 5 Star Couples Whose Marriages Ended Recently

2026ರಲ್ಲಿ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ 5 ಜನಪ್ರಿಯ ಸೆಲೆಬ್ರಿಟಿ ಜೋಡಿಗಳು

ಸಿನಿಮಾ ರಂಗದ ಸೆಲೆಬ್ರಿಟಿಗಳ ವೈವಾಹಿಕ ಜೀವನದ ಏಳುಬೀಳುಗಳು ಯಾವಾಗಲೂ ಸುದ್ದಿಯಲ್ಲಿರುತ್ತವೆ. ಅದರಲ್ಲೂ 2026ರ ಆರಂಭದಿಂದ ಹಿಡಿದು ಇತ್ತೀಚಿನವರೆಗಿನ ಕೆಲವೇ ತಿಂಗಳುಗಳಲ್ಲಿ ಭಾರತೀಯ ಚಿತ್ರರಂಗ ಹಾಗೂ ಕಿರುತೆರೆಯ ಹಲವು ಸ್ಟಾರ್ ಜೋಡಿಗಳು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ಮೂಲಕ ಅಭಿಮಾನಿಗಳಿಗೆ ತೀವ್ರ ಆಘಾತ ನೀಡಿವೆ. ಅಂತಹ ಪ್ರಮುಖ 5 ಸೆಲೆಬ್ರಿಟಿ ಜೋಡಿಗಳ ವಿವರ ಇಲ್ಲಿde.

1. ದಳಪತಿ ವಿಜಯ್ – ಸಂಗೀತಾ ಸ್ವರ್ಣಲಿಂಗಂ: ಕಾಲಿವುಡ್‌ನ ಸ್ಟಾರ್ ನಟ, ತಮಿಳುನಾಡು ಸಿಎಂ ದಳಪತಿ ವಿಜಯ್ ಮತ್ತು ಸಂಗೀತಾ ಅವರ ಸುದೀರ್ಘ 27 ವರ್ಷಗಳ ಸಂಸಾರ ಇತ್ತೀಚೆಗೆ ಮುರಿದುಬಿದ್ದಿದೆ. 1999ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ವಿಜಯ್ ಅವರಿಗೆ ಮತ್ತೊಬ್ಬ ನಟಿಯ ಜೊತೆ ಒಡನಾಟ ಇದೆ ಎಂದು ಆರೋಪಿಸಿ ಸಂಗೀತಾ ಅವರು 2026ರ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಈ ಹೈಪ್ರೊಫೈಲ್ ಜೋಡಿ ಬೇರ್ಪಡುವ ಸನಿಹದಲ್ಲಿದೆ.

2. ಮೌನಿ ರಾಯ್ – ಸೂರಜ್ ನಂಬಿಯಾರ್: ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಿಸಿದ್ದಾರೆ. 2022ರ ಜನವರಿಯಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಈ ಜೋಡಿ, ನಾಲ್ಕು ವರ್ಷಗಳ ದಾಂಪತ್ಯದ ನಂತರ ಪರಸ್ಪರ ಒಪ್ಪಿಗೆಯಿಂದಲೇ ಬೇರೆಯಾಗುತ್ತಿರುವುದಾಗಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ.

3. ಹನ್ಸಿಕಾ ಮೋಟ್ವಾನಿ – ಸೊಹೇಲ್ ಕತುರಿಯಾ: ದಕ್ಷಿಣ ಭಾರತದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೇಲ್ ಕತುರಿಯಾ ದಂಪತಿಗೆ 2026ರ ಮಾರ್ಚ್‌ನಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಮಂಜೂರಾಗಿದೆ. 2022ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಮದುವೆಯಾಗಿದ್ದ ಇವರು, ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ 2024ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಶೇಷವೆಂದರೆ ಹನ್ಸಿಕಾ ಯಾವುದೇ ಜೀವನಾಂಶ ಪಡೆದಿಲ್ಲ ಎನ್ನಲಾಗಿದೆ.

4. ಜಯ್ ಭಾನುಶಾಲಿ – ಮಾಹಿ ವಿಜ್: ಹಿಂದಿ ಕಿರುತೆರೆಯ ಅತ್ಯಂತ ನೆಚ್ಚಿನ ಜೋಡಿಯಾಗಿದ್ದ ಜಯ್ ಭಾನುಶಾಲಿ ಮತ್ತು ಮಾಹಿ ವಿಜ್ ಜನವರಿ 2026ರಲ್ಲಿ ತಮ್ಮ 14 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸುವುದಾಗಿ ಘೋಷಿಸಿ ಶಾಕ್ ನೀಡಿದರು. ಇಬ್ಬರ ನಡುವೆ ಯಾವುದೇ ದ್ವೇಷವಿಲ್ಲದೆ, ಒಮ್ಮತದಿಂದಲೇ ಈ ನಿರ್ಧಾರ ಕೈಗೊಂಡಿದ್ದು, ತಮ್ಮ ಮೂವರು ಮಕ್ಕಳನ್ನು ಜವಾಬ್ದಾರಿಯಿಂದ ಒಟ್ಟಿಗೆ ಸಾಕೋಣ ಎಂದು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಮೌನಿ ರಾಯ್​​​ಗೆ ಸಿಕ್ಕ ಜೀವನಾಂಶ ಎಷ್ಟು? ಮಾಜಿ ಪತಿ ಹೇಳಿದ್ದಿಷ್ಟು

5. ಎವೆಲಿನ್ ಶರ್ಮಾ – ತುಶಾನ್ ಭಿಂದಿ: ‘ಯೇ ಜವಾನಿ ಹೈ ದೀವಾನಿ’ ಖ್ಯಾತಿಯ ನಟಿ ಎವೆಲಿನ್ ಶರ್ಮಾ ತಮ್ಮ ಪತಿ, ಇಂಡೋ-ಆಸ್ಟ್ರೇಲಿಯನ್ ದಂತ ವೈದ್ಯ ತುಶಾನ್ ಭಿಂದಿ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಐದು ವರ್ಷಗಳ ಮದುವೆ ಜೀವನದ ನಂತರ ಪ್ರೀತಿಯಿಂದಲೇ ದೂರಾಗಿರುವ ಈ ಜೋಡಿ, ತಮ್ಮ ಇಬ್ಬರು ಪುಟ್ಟ ಮಕ್ಕಳ ಪಾಲನೆಯತ್ತ ಗಮನ ಹರಿಸುವುದಾಗಿ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು! – Kannada News | The Significance of Adhika Jyeshtha Masa: Rituals and Benefits

ಅಧಿಕ ಜ್ಯೇಷ್ಠ ಮಾಸದಲ್ಲಿ ವಿಷ್ಣು ಪೂಜೆಯಿಂದ ಏನೆಲ್ಲಾ ಲಾಭವಿದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಅಧಿಕ ಜೇಷ್ಠ ಮಾಸವು ಹಿಂದೂ ಚಾಂದ್ರಮಾನ ಪದ್ಧತಿಯಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಮಾಸವಾಗಿದೆ. ಸೂರ್ಯ ಮತ್ತು ಚಂದ್ರರ ಚಲನೆಯನ್ನು ಅವಲಂಬಿಸಿ ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಈ ಮಾಸವನ್ನು ‘ಪುರುಷೋತ್ತಮ ಮಾಸ’ ಅಥವಾ ‘ಅಧಿಕ ಮಾಸ’ ಎಂದೂ ಕರೆಯುತ್ತಾರೆ. ‘ಅಧಿಕಸ್ಯ ಅಧಿಕ ಫಲಂ’ ಎಂಬ ನುಡಿಯಂತೆ ಈ ಮಾಸದಲ್ಲಿ ಮಾಡುವ ಪುಣ್ಯ ಕಾರ್ಯಗಳಿಗೆ ಹೆಚ್ಚಿನ ಫಲ ದೊರೆಯುತ್ತದೆ ಎಂದು ನಂಬಲಾಗಿದೆ.

ಪ್ರತಿ ಮಾಸಕ್ಕೂ ಒಬ್ಬ ಅಧಿಪತಿ ದೇವರಿರುತ್ತಾನೆ. ಆದರೆ ಅಧಿಕ ಮಾಸಕ್ಕೆ ಜವಾಬ್ದಾರಿ ವಹಿಸಿಕೊಳ್ಳಲು ದೇವರುಗಳು ಹಿಂಜರಿದಾಗ, ಸಾಕ್ಷಾತ್ ವಿಷ್ಣು ಭಗವಾನರು ಈ ಮಾಸದ ನಿರ್ವಹಣೆಯನ್ನು ವಹಿಸಿಕೊಂಡರು. ಹಾಗಾಗಿ ಇದನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ ಮತ್ತು ವಿಷ್ಣುವಿನ ಆರಾಧನೆಗೆ ಅತ್ಯಂತ ಪ್ರಶಸ್ತ ಮಾಸವಾಗಿದೆ. ಈ ತಿಂಗಳು ಪೂರ್ತಿ ವಿಷ್ಣುವೇ ಅಧಿಪತಿಯಾಗಿರುತ್ತಾನೆ. ವಿಷ್ಣು ಸಹಸ್ರನಾಮ ಪಾರಾಯಣ, ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಜಪ, ಭಗವದ್ಗೀತೆ ಹಾಗೂ ಭಾಗವತ ಪಾರಾಯಣ, ನಾಮಸ್ಮರಣೆ ಮತ್ತು ದಾನ ಧರ್ಮಗಳು ವಿಶೇಷ ಪುಣ್ಯವನ್ನು ತರುತ್ತವೆ. ಬಡವರಿಗೆ ಅನ್ನದಾನ, ಸಹಾಯ ಮಾಡುವುದು ಅತ್ಯಂತ ಶುಭಕರ. ಈ ಮಾಸದಲ್ಲಿ ವಿವಾಹ, ಉಪನಯನ, ಗೃಹಪ್ರವೇಶ ಮುಂತಾದ ಕಾರ್ಯಗಳನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ದೇವತಾರಾಧನೆ ಮತ್ತು ಪುಣ್ಯ ಸಂಗ್ರಹಕ್ಕೆ ಈ ಮಾಸ ಅತ್ಯಂತ ಯೋಗ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ

 

Source link

ಕೊನೆ ಕ್ಷಣದಲ್ಲಿ ಇರಾನ್ ಮೇಲಿನ ಭೀಕರ ದಾಳಿ ಮುಂದೂಡಿದ ಅಮೆರಿಕ, ಗಲ್ಫ್ ರಾಷ್ಟ್ರಗಳ ಮನವಿಗೆ ಓಗೊಟ್ಟ ಟ್ರಂಪ್ – Kannada News | Donald Trump Says Planned Strike Was Delayed Amid Talks With Iran

ವಾಷಿಂಗ್ಟನ್, ಮೇ 19: ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾ ಯುದ್ಧದ ಭೀತಿ ಸೃಷ್ಟಿಸಿದ್ದ ಇರಾನ್ ಮೇಲಿನ ಅತ್ಯಂತ ಭೀಕರ ಮಿಲಿಟರಿ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಕೊನೆ ಕ್ಷಣದಲ್ಲಿ ಮುಂದೂಡಿದ್ದಾರೆ. ಅಮೆರಿಕದ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ  ವಿಷಯವನ್ನು ಖುದ್ದಾಗಿ ಹಂಚಿಕೊಂಡಿರುವ ಅಧ್ಯಕ್ಷ ಟ್ರಂಪ್, ಗಲ್ಫ್ ರಾಷ್ಟ್ರಗಳ ಉನ್ನತ ನಾಯಕರ ಮಧ್ಯಸ್ಥಿಕೆ ಮತ್ತು ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮವಾದ ‘ಟ್ರುತ್ ಸೋಶಿಯಲ್’ಪೋಸ್ಟ್ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನಾವು ನಾಳೆಯೇ (ಬುಧವಾರ) ಇರಾನ್ ಮೇಲೆ ಅತ್ಯಂತ ಬೃಹತ್ ಮಟ್ಟದ ಮಿಲಿಟರಿ ದಾಳಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ, ನಾನು ಈ ದಾಳಿಯನ್ನು ಸದ್ಯಕ್ಕೆ ಮುಂದೂಡಿದ್ದೇವೆ. ಇದು ಸ್ವಲ್ಪ ಸಮಯದವರೆಗೆ ಇರಬಹುದು ಅಥವಾ ಇರಾನ್ ಜೊತೆಗಿನ ಮಾತುಕತೆ ಯಶಸ್ವಿಯಾದರೆ ಶಾಶ್ವತವಾಗಿಯೂ ದಾಳಿ ರದ್ದಾಗಬಹುದು ಎಂದಿದ್ದಾರೆ.

ದಾಳಿ ಮುಂದೂಡಿಕೆಯ ಹಿಂದಿರುವ ಅಸಲಿ ರಹಸ್ಯವನ್ನು ಬಿಚ್ಚಿಟ್ಟ ಟ್ರಂಪ್, ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರಗಳು ಅಮೆರಿಕದ ಬೆನ್ನಿಗೆ ನಿಂತು ಮಾತುಕತೆ ನಡೆಸಿರುವುದನ್ನು ಬಹಿರಂಗಪಡಿಸಿದರು. ಸೌದಿ ಅರೇಬಿಯಾ, ಕತಾರ್, ಯುಎಇ ಮತ್ತು ಇತರ ಕೆಲವು ಪ್ರಮುಖ ದೇಶಗಳು ನನ್ನನ್ನು ನೇರವಾಗಿ ಸಂಪರ್ಕಿಸಿ, ದಾಳಿಯನ್ನು ಕನಿಷ್ಠ 2 ರಿಂದ 3 ದಿನಗಳ ಕಾಲ ಮುಂದೂಡುವಂತೆ ವಿನಂತಿಸಿಕೊಂಡವು. ಇರಾನ್ ಜೊತೆಗೆ ಒಂದು ಮಹತ್ವದ ಒಪ್ಪಂದವನ್ನು ಮಾಡಿಕೊಳ್ಳಲು ತಾವು ಅತ್ಯಂತ ಹತ್ತಿರದಲ್ಲಿದ್ದೇವೆ ಎಂದು ಆ ದೇಶಗಳು ನಮಗೆ ಮನವರಿಕೆ ಮಾಡಿಕೊಟ್ಟಿವೆ ಎಂದು ಟ್ರಂಪ್ ತಿಳಿಸಿದರು.

ಮತ್ತಷ್ಟು ಓದಿ:

ಜಗತ್ತಿನ ಎರಡು ದೊಡ್ಡ ಶಕ್ತಿಗಳ ಸಮ್ಮಿಲನ: ಸಂಘರ್ಷ ಬೇಡ ಸಹಕಾರವಿರಲಿ ಎಂದ ಜಿನ್‌ಪಿಂಗ್

ಅಮೆರಿಕದ ಏಕೈಕ ಷರತ್ತು: ಪರಮಾಣು ಮುಕ್ತ ಇರಾನ್
ಇರಾನ್ ಜೊತೆಗಿನ ಯಾವುದೇ ಸಂಭಾವ್ಯ ಒಪ್ಪಂದಕ್ಕೆ ಅಮೆರಿಕ ವಿಧಿಸಿರುವ ಕಠಿಣ ನಿಲುವನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರಗಳನ್ನು ಹೊಂದುವಂತಿಲ್ಲ. ಈ ಷರತ್ತಿಗೆ ಒಪ್ಪಿ, ಮಧ್ಯಪ್ರಾಚ್ಯದ ನಮ್ಮ ಮಿತ್ರ ರಾಷ್ಟ್ರಗಳು ಆ ಒಪ್ಪಂದದಿಂದ ತೃಪ್ತರಾದರೆ, ಖಂಡಿತವಾಗಿಯೂ ಅಮೆರಿಕ ಕೂಡ ಸಮಾಧಾನಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಟ್ರಂಪ್ ಹೇಳಿದ್ದೇನು?

ಒಂದು ವೇಳೆ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ್ದರೆ ಅದು ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಜ್ವಾಲೆಗೆ ತಳ್ಳುತ್ತಿತ್ತು. ಆದರೆ ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ಜಂಟಿಯಾಗಿ ರಾಜತಾಂತ್ರಿಕ ಚದುರಂಗದಾಟ ಆಡಿ ಟ್ರಂಪ್ ಅವರನ್ನು ಸದ್ಯಕ್ಕೆ ಶಾಂತಗೊಳಿಸುವಲ್ಲಿ ಯಶಸ್ವಿಯಾಗಿವೆ. ಮುಂದಿನ 48 ಗಂಟೆಗಳಲ್ಲಿ ಗಲ್ಫ್ ರಾಷ್ಟ್ರಗಳು ಇರಾನ್‌ನಿಂದ ಎಂತಹ ಭರವಸೆ ತರಲಿವೆ ಎಂಬುದರ ಮೇಲೆ ಜಾಗತಿಕ ಶಾಂತಿ ನಿರ್ಧಾರವಾಗಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:41 am, Tue, 19 May 26

Source link

ಮಗಳಿಗೆ Miyou ಎಂದು ಹೆಸರಿಟ್ಟ ಅಟ್ಲಿ-ಪ್ರಿಯಾ; ಅರ್ಥವೇನು? – Kannada News | Atlee Priya Name Daughter Miyou: Meaning, Japanese Origin and Fan Reactions

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ (Atlee) ಮತ್ತು ಅವರ ಪತ್ನಿ ಪ್ರಿಯಾ ತಮ್ಮ ಎರಡನೇ ಮಗುವಿನ ಹೆಸರನ್ನು ಘೋಷಿಸಿದ್ದಾರೆ. ಏಪ್ರಿಲ್ 20ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದ ಈ ಜೋಡಿ, ಈಗ ಮಗಳಿಗೆ ‘ಮಿಯು’ (Miyou) ಎಂದು ನಾಮಕರಣ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಪುಟ್ಟ ಕೈಯನ್ನು ಹಿಡಿದುಕೊಂಡಿರುವ ಸುಂದರವಾದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅಟ್ಲಿ ದಂಪತಿ ಈ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅಟ್ಲಿ ಮತ್ತು ಪ್ರಿಯಾ ಇಟ್ಟಿರುವ ಈ ‘ಮಿಯು’ ಹೆಸರು ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಇದು ಅಪರೂಪದಲ್ಲೇ ಅಪರೂಪದ ಹೆಸರು. ಇದು ಭಾರತ ಅಥವಾ ಸಂಸ್ಕೃತ ಮೂಲದ ಹೆಸರಲ್ಲ. ಈ ಹೆಸರು ಜಪಾನ್ ಪ್ರಭಾವವನ್ನು ಹೊಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಸರಿನ ಅರ್ಥವನ್ನು ಹಂಚಿಕೊಂಡಿರುವ ದಂಪತಿ, ಮಿಯು ಎಂದರೆ ಸೌಂದರ್ಯ, ಸೌಮ್ಯತೆ ಮತ್ತು ಪ್ರೀತಿ ಎಂದು ಬರೆದುಕೊಂಡಿದ್ದಾರೆ.

ಜಪಾನಿ ಭಾಷೆಯ ಪ್ರಕಾರ, ಈ ಹೆಸರಿನಲ್ಲಿರುವ ಮಿ (Mi) ಎಂದರೆ ‘ಸುಂದರ’ ಮತ್ತು ‘ಯು’ ಎಂದರೆ ಸೌಮ್ಯ ಅಥವಾ ಶ್ರೇಷ್ಠ ಎಂಬ ಅರ್ಥ ಬರುತ್ತದೆ. ಈ ವಿಭಿನ್ನ ಹಾಗೂ ಅರ್ಥಪೂರ್ಣ ಹೆಸರನ್ನು ಕೇಳಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅಟ್ಲಿ-ಪ್ರಿಯಾ ದಂಪತಿಗೆ 2023ರ ಜನವರಿಯಲ್ಲಿ ಗಂಡು ಮಗು ಜನಿಸಿತ್ತು. ಆ ಮಗುವಿಗೆ ಮೀರ್ ಎಂದು ಹೆಸರನ್ನು ಇಟ್ಟಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಅಟ್ಲಿ ಪತ್ನಿ ಪ್ರಿಯಾ; ಸಂಭ್ರಮದಲ್ಲಿ ‘ರಾಕಾ’ ಸಿನಿಮಾ ನಿರ್ದೇಶಕ

ಸಿನಿಮಾ ವಿಷಯಕ್ಕೆ ಬರೋದಾದರೆ ಬಾಲಿವುಡ್‌ನಲ್ಲಿ ಜವಾನ್ ಮೂಲಕ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ ಬಳಿಕ, ಅಟ್ಲಿ ಈಗ ತಮ್ಮ ಮುಂದಿನ ಬಹುಭಾಷಾ ಚಿತ್ರ ‘ರಾಕಾ’ (Raaka) ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಅಲ್ಲು ಅರ್ಜುನ್ ಅವರ ಫಸ್ಟ್‌ ಲುಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link