ಮಹಾರಾಷ್ಟ್ರದ ಪಲ್ಘಾರ್ ಹೆದ್ದಾರಿಯಲ್ಲಿ ಭೀಕರ ಅಪಘಾತ; 13 ಜನ ಸಾವು, ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ – Kannada News | 13 people died 20 injured in Maharashtras Palghar highway accident CM announces Rs 5 lakh aid
ಮುಂಬೈ, ಮೇ 18: ಮಹಾರಾಷ್ಟ್ರದ ಪಲ್ಘಾರ್‌ನಲ್ಲಿ ಇಂದು ಭೀಕರ ಅಪಘಾತ (Accident) ಸಂಭವಿಸಿದೆ. ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಮದುವೆಗೆ ಹೋಗುತ್ತಿದ್ದ ಮತ್ತೊಂದು ಸಣ್ಣ ಟ್ರಕ್‌ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ 13 ಜನರು ಸಾವನ್ನಪ್ಪಿದ್ದಾರೆ. ಕಾಸಾದ ಪ್ರದೇಶ ಪೊಲೀಸರ ಪ್ರಕಾರ, 40ಕ್ಕೂ ಹೆಚ್ಚು ಜನರು ಈ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಕಂಟೇನರ್ ಅಪಘಾತ ಸಂಭವಿಸಿ, ಟ್ರಕ್ ನಜ್ಜುಗುಜ್ಜಾಗಿದೆ. ಎರಡೂ ವಾಹನಗಳು ಪಲ್ಟಿಯಾದ ಕಾರಣದಿಂದ ಅನೇಕ ಪ್ರಯಾಣಿಕರು ಅಡಿಗೆ ಸಿಲುಕಿಕೊಂಡರು. ಈ ಘಟನೆಯ ನಂತರ ಪೊಲೀಸರು…