Headlines

nagaraj11081993

ಲಕ್ಕುಂಡಿ ನಿಧಿ ಪ್ರಕರಣಕ್ಕೆ ಟ್ವಿಸ್ಟ್​​: ರಿತ್ತಿ ಕುಟುಂಬದಿಂದ ಹೊಸ ಡಿಮ್ಯಾಂಡ್​​

ಗದಗ, ಮಾರ್ಚ್​ 12: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆಗಾಗಿ ಅಡಿಪಾಯ ತೆಗೆಯುವಾಗ ಸುಮಾರು 470 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಸಿಕ್ಕ ನಿಧಿಯನ್ನು ಪ್ರಜ್ವಲ್ ರಿತ್ತಿ ಕುಟುಂಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿತ್ತು. ಆ ಬಳಿಕ ಬಹಳ ಬೆಳವಣಿಗೆಗಳು ನಡೆದಿದ್ದವು. ಈ ನಡುವೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಅಂದು ಸಿಕ್ಕಿದ್ದ ಬಂಗಾರದ ಬೆಲೆ ಇಂದಿಗೆ ಸುಮಾರು 80 ಲಕ್ಷ ರೂಪಾಯಿಗಳಾಗಿದ್ದು, ಆ್ಯಂಟಿಕ್​​ ಮೌಲ್ಯ ಸುಮಾರು 8 ಕೋಟಿ ಎಂದು ತಜ್ಞರು ಹೇಳಿದ್ದಾರೆ. ಈ ಬೆನ್ನಲ್ಲೇ ಪ್ರಜ್ವಲ್ ರಿತ್ತಿ‌ ಕುಟುಂಬ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

ಈ ದಿನ ಸಂಜೆಯ ಹೊತ್ತಿಗೆ ಅಶ್ವತ್ಥ ಮರದ ಕೆಳಗೆ ಕಡಲೆ ಹಿಟ್ಟಿನಿಂದ ಮಾಡಿದ ದೀಪ ಹಚ್ಚುವುದು ವಿಶೇಷ ಫಲ ನೀಡುತ್ತದೆ. ನಿಮ್ಮನ್ನು ಕಾಡುತ್ತಿರುವ ಗೊಂದಲಗಳು ಹಾಗೂ ಅಡೆತಡೆಗಳು ನಿವಾರಣೆ ಆಗಲಿವೆ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7): ಹಣಕಾಸು ವಿಚಾರದಲ್ಲಿ ಕಾಡುತ್ತಿರುವ ಗೊಂದಲಗಳು ಬಗೆಹರಿಯುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ನಿಮ್ಮೊಬ್ಬರಿಂದ ಏನಾದೀತು ಎಂಬಂತೆ ಇತರರು ಆಡಿದ ಮಾತುಗಳಿಗೆ ಉತ್ತರ ಎಂಬಂತೆ ಕೆಲವು ಅಸಾಧ್ಯವಾದ ಕೆಲಸ- ಕಾರ್ಯಗಳನ್ನು ಮಾಡಿ, ಮುಗಿಸುವುದಕ್ಕೆ…

Read More

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯಾರಿಂದಲಾದರೂ ಅನಿರೀಕ್ಷಿತ ಸಹಾಯ ಲಭ್ಯ

ಮೇಷ ರಾಶಿ: ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಸಮಾಧನ ಚಿತ್ತದಿಂದ ಇರಬೇಕು ಎಂದು ಅನಿಸಿದರೂ ಅದನ್ನು ಕಾರ್ಯರೂಪಕ್ಕೆ ತರಲಾಗದು. ಅನಿರೀಕ್ಷಿತ ಘಟನೆಯಿಂದ‌ ಸ್ತಬ್ಧವಾಗುವಿರಿ. ವ್ಯವಹಾರದ ವಿಷಯದಲ್ಲಿ ನಿಮಗೆ ಯಾವುದೇ ಔದಾರ್ಯ ಬೇಡ. ಸಹೋದರನ ಪ್ರೀತಿಯಿಂದ ಸಂತೋಷಪಡುವಿರಿ. ಬೇಕಾದವರ ಪ್ರೀತಿ ಸಿಗದೇ ಬೇಸರ. ವೃಷಭ ರಾಶಿ: ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. ಸ್ವಾರ್ಥಕ್ಕಾಗಿ ಯಾರನ್ನೂ ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

ಪಾರಿಜಾತ ಅಥವಾ ಮಲ್ಲಿಗೆ ಹೂವುಗಳನ್ನು ಬಳಸಿ ದೇವರ ಪೂಜೆಯನ್ನು ಮಾಡುವುದರಿಂದ ನಿಮ್ಮ ಮಾನಸಿಕ ಒತ್ತಡಗಳಿಂದ ಹೊರಬಂದು ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಸಣ್ಣ ತಪ್ಪು ಮಾತು ಕೂಡ ದೊಡ್ಡ ಅವಮಾನಕ್ಕೆ ಕಾರಣ ಆಗುವಂಥ ಕಡೆಗೆ ಸುಮ್ಮನೆ ಇದ್ದರೆ ಒಳಿತು. ಪ್ರೀತಿ- ಪ್ರೇಮ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿದ್ದು, ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಲಿವೆ. ನೀವಾಗಿಯೇ ಕರೆ ಮಾಡುವುದರ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 12ರ ದಿನಭವಿಷ್ಯ

ಸಾಯಿಬಾಬಾ ಅಥವಾ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡುವುದು ಮತ್ತು ಮನೆಯಲ್ಲಿನ ಹಿರಿಯರ ಕಾಲಿಗೆ ನಮಸ್ಕರಿಸಿ ದಿನದ ಕೆಲಸ ಆರಂಭಿಸುವುದು ಸಕಲ ಕಾರ್ಯಸಿದ್ಧಿಗೆ ಕಾರಣವಾಗುತ್ತದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಮನೆಗೆ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವಂಥವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು, ಕಂಪನಿಗಳ ಸಿಇಒ, ಸಿಒಒ ಇಂಥ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಬಹಳ ಒಳ್ಳೆ ದಿನ ಇದು….

Read More

ಡೆಲಿವರಿ ಬಾಯ್​​ ಕೊಟ್ಟ ಪಂಚ್​​​ಗೆ ಗ್ರಾಹಕನ ಮೂಗಿನ ಮೂಳೆ ಮುರಿತ: ಆಗಿದ್ದೇನು?

ಬೆಂಗಳೂರು, ಮಾರ್ಚ್​ 11: ಇವಾಗೇನಿದ್ರೂ ಆನ್ ಲೈನ್ ಜಮಾನಾ. ಎಲ್ಲವೂ ಆನ್​ಲೈನ್​ನಲ್ಲೇ ಸಿಕ್ಕಿಬಿಡುತ್ತೆ. ಊಟ ತಿಂಡಿ, ದವಸ-ಧಾನ್ಯದಿಂದ ಹಿಡಿದು ಗೃಹಪಯೋಗಿ ವಸ್ತುಗಳು ಕೂಡ ದೊರಕಿಬಿಡುತ್ತೆ. ಇದೇ ರೀತಿ ಓರ್ವ ವ್ಯಕ್ತಿ ಬ್ಲಿಂಕ್ ಇಟ್ ಆ್ಯಪ್​ನಲ್ಲಿ ತಿನ್ನುವುದಕ್ಕೆ ಅಂತಾ ಸ್ನ್ಯಾಕ್ಸ್ ಆರ್ಡರ್ ಮಾಡಿದ್ದರು. ಆರ್ಡರ್ ತಗೊಂಡು ಬಂದ ಡೆಲಿವರಿ ಬಾಯ್ (Delivery Boy) ಗ್ರಾಹಕನ ಮೂಗಿನ ಮೂಳೆಯನ್ನೇ ಮುರಿದ ಘಟನೆ ಕೋರಮಂಗಲ 8ನೇ ಬಾಕ್ಲ್​ನಲ್ಲಿ ನಡೆದಿದೆ. ನಡೆದಿದ್ದೇನು? ಮಾರ್ಚ್ 7ರ ಬೆಳಗಿನ ಜಾವ 2ಗಂಟೆಯ ಸಮಯ. ಕೋರಮಂಗಲ 8ನೇ…

Read More

ದಾಳಿ ನಡೆಸಲು ಇನ್ನೇನೂ ಉಳಿದಿಲ್ಲ; ಇರಾನ್ ಮೇಲಿನ ಯುದ್ಧ ಬೇಗ ಕೊನೆಯಾಗಲಿದೆ ಎಂದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 11: ಇರಾನ್‌ನೊಂದಿಗಿನ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಳಿವು ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಈಗಾಗಲೇ ದೇಶದಲ್ಲಿ ಲಭ್ಯವಿರುವ ಹೆಚ್ಚಿನ ಟಾರ್ಗೆಟ್​​ಗಳನ್ನು ನಾಶಪಡಿಸಿವೆ. “ಇರಾನ್​​ನಲ್ಲಿ ಪ್ರಾಯೋಗಿಕವಾಗಿ ಗುರಿಯಿಡಲು ಇನ್ನೇನೂ ಉಳಿದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಮಿಲಿಟರಿ ಕಾರ್ಯಾಚರಣೆಯು ಇರಾನಿಗೆ ಈಗಾಗಲೇ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್​ನವರ ಕ್ಷಿಪಣಿಗಳು ಚದುರಿಹೋಗಿವೆ. ಅವರ ಡ್ರೋನ್‌ಗಳನ್ನು ಎಲ್ಲೆಡೆ ಸ್ಫೋಟಿಸಲಾಗುತ್ತಿದೆ, ಅವುಗಳ ಡ್ರೋನ್‌ಗಳ ತಯಾರಿಕೆಯೂ ನಿಂತಿದೆ. ಟೆಹ್ರಾನ್…

Read More

ವಾಹನ ಮಾಲೀಕರ ಗಮನಕ್ಕೆ: ಇನ್ಮುಂದೆ ಗಾಡಿ ಎಫ್ಸಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಬೆಂಗಳೂರು, (ಮಾರ್ಚ್ 11): ಬೆಂಗಳೂರಿನ ಆರ್‌ಟಿಒ ಕಚೇರಿಗಳಲ್ಲಿ ಹೊರರಾಜ್ಯದ ವಾಹನಗಳಿಗೆ ಯಾವುದೇ ತಪಾಸಣೆ ಮಾಡದೇ ಅಕ್ರಮವಾಗಿ ಅರ್ಹತಾ ಪತ್ರ (fitness certificate) ನೀಡಲಾಗುತ್ತಿದೆ. ಆರ್ಟಿಓ ಅಧಿಕಾರಿಗಳು ವಾಹನಗಳು ತಪಾಸಣೆ ಮಾಡದೆ,ಕೆಲ ವಾಹನಗಳು ರಾಜ್ಯಕ್ಕೆ ‌ಬಾರದಿದ್ದರೂ ಅಂತಹ ವಾಹನಗಳಿಗೆ ಅನಧಿಕೃತವಾಗಿ ಎಫ್ಸಿ ನೀಡಲಾಗುತ್ತಿದ್ದು, ಈ ಬಗ್ಗೆ ನಿಮ್ಮ ಟಿವಿ9, ಆರ್​​ಟಿಓಗಳ ಕರ್ಮಕಾಂಡದ ಬಗ್ಗೆ ಸುದ್ದಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡ ರಾಜ್ಯ ಸಾರಿಗೆ ಇಲಾಖೆ, ಎಫ್ಸಿ ಮಾಡಲು ಕಠಿಣ ರೂಲ್ಸ್ ಜಾರಿಗೆ ತಂದಿದ್ದು, ಇನ್ಮುಂದೆ ಎಫ್ಸಿ ಮಾಡಬೇಕು…

Read More

ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು

ವಿವಾದಿತ ಕಥಾಹಂದರ ಹೊಂದಿದೆ ಎಂಬ ಕಾರಣಕ್ಕೆ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈಗ ಈ ಸಿನಿಮಾವನ್ನು ಬಿಜೆಪಿಯ ಕೆಲವು ಶಾಸಕರು ವೀಕ್ಷಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿಮಾಲ್​​ನಲ್ಲಿ ಸಿನಿಮಾ ವೀಕ್ಷಣೆ ಮಾಡಲಾಗಿದೆ. ವಿಪಕ್ಷ ನಾಯಕರಾದ ಆರ್. ಅಶೋಕ್ (R Ashok), ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಶಾಸಕರು ಮತ್ತು ಪರಿಷತ್ ಸದಸ್ಯರು ಸಿನಿಮಾ ನೋಡಿದ್ದಾರೆ. ರಾಜ್ಯ ಬಿಜೆಪಿಯಿಂದ ಸಿನಿಮಾ ವೀಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಸಿನಿಮಾಗೆ ಕಾಮಾಕ್ಯ…

Read More

ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ

ಬೆಂಗಳೂರು, ಮಾರ್ಚ್​​ 11: ಆತ ಚಾಲಕ (Driver). ಕಳೆದ ಹತ್ತು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದ. ಆತ ಮನೆ ಮಾಲೀಕರ ನಂಬಿಕೆ ಗಳಿಸಿದ್ದ. ಅವರು ಕೂಡ ಈತನನ್ನ ಬಹಳ ಆತ್ಮೀಯತೆಯಿಂದಲೇ ನೋಡಿಕೊಳ್ಳುತ್ತಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆಸಾಮಿ ಮನೆಯಲ್ಲಿದ್ದ ಚಿನ್ನದ ಮೇಲೆಯೇ ಕಣ್ಣು ಹಾಕಿದ್ದ. ಆ ಮೂಲಕ ಉಂಡ ಮನೆಗೆ ಕನ್ನ ಹಾಕಿದ್ದ. ಚಾಲಕನ ಕಳ್ಳಾಟ ಬಯಲಾಗಿದ್ದೇ ನಿಜಕ್ಕೂ ರೋಚಕ. ಉಂಡ ಮನೆಗೆ ದ್ರೋಹ ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕನ ಹೆಸರು…

Read More