ಪ್ರತಿದಿನ ಮಲ್ಟಿವಿಟಮಿನ್ ತೆಗೆದುಕೊಳ್ಳುವುದು ನಿಜವಾಗಿಯೂ ಒಳ್ಳೆಯದೇ? ಏನ್ ಹೇಳ್ತಾರೆ ವೈದ್ಯರು?
ಇಂದಿನ ವೇಗದ ಜೀವನಶೈಲಿಯಲ್ಲಿ ಹಲವರಿಗೆ ತಮ್ಮ ಆಹಾರ ಪದ್ಧತಿಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸಲು ಹಲವರು ಮಲ್ಟಿವಿಟಮಿನ್ಗಳ (Multivitamin) ಮೇಲೆ ಅವಲಂಬಿತರಾಗುತ್ತಿದ್ದಾರೆ. ಮಲ್ಟಿವಿಟಮಿನ್ಗಳು ಎಂದರೆ ಹಲವು ವಿಧದ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿರುವ ಪೂರಕ ಆಹಾರಗಳು. ಉದಾಹರಣೆಗೆ ವಿಟಮಿನ್ A, B, C, D, E ಜೊತೆಗೆ ಐರನ್, ಕ್ಯಾಲ್ಸಿಯಂ, ಜಿಂಕ್ ಮುಂತಾದವುಗಳು ಒಂದೇ ಮಾತ್ರೆಯಲ್ಲಿ ಇವೆಲ್ಲವೂ ದೊರೆಯುತ್ತವೆ. ಇವು ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ತುಂಬಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ…