ಹೇಗಿತ್ತು ‘ಟಾಕ್ಸಿಕ್’ ಸೆಟ್: ನಟಿಯ ಮಾತು ಕೇಳಿ ಯಶ್ ಬಗ್ಗೆ ಹೆಮ್ಮೆ ಆಗದೇ ಇರದು – Kannada News | Tara Sutaria said Toxic movie set is the most professional set she ever worked
ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ (Pan India) ಲೆವೆಲ್ಗೆ ಮತ್ತು ಈಗ ‘ಟಾಕ್ಸಿಕ್’ ಮೂಲಕ ಹಾಲಿವುಡ್ ಲೆವೆಲ್ಗೆ ಕೊಂಡೊಯ್ಯುವ ಕಾರ್ಯವನ್ನು ನಟ ಯಶ್ ಮಾಡುತ್ತಿದ್ದಾರೆ. ಅವರು ಸಿನಿಮಾವನ್ನು ಹಾಲಿವುಡ್ ಲೆವೆಲ್ನಲ್ಲಿ ನಿರ್ಮಾಣ ಮಾಡಿರುವುದು ಸಿನಿಮಾದ ಟೀಸರ್, ಪೋಸ್ಟರ್ಗಳಿಂದ ಈಗಾಗಲೇ ತಿಳಿದಿದೆ. ಆದರೆ ಯಶ್ ಅವರು ಸಿನಿಮಾದ ಸೆಟ್ನಲ್ಲೂ ನಟ-ನಟಿ ಸೇರಿದಂತೆ ಎಲ್ಲ ಸಿಬ್ಬಂದಿಗೂ ವಿಶ್ವ ದರ್ಜೆಯ ಟ್ರೀಟ್ಮೆಂಟ್ ಸಿಗುವಂತೆ ಮಾಡಿದ್ದರು. ‘ಟಾಕ್ಸಿಕ್’ ಸಿನಿಮಾ ಸೆಟ್ನಲ್ಲಿದ್ದ ವೃತ್ತಿಪರತೆ ಬಗ್ಗೆ ಕೆಲಸದ ಗುಣಮಟ್ಟ ಇನ್ನಿತರೆ ವಿಷಯಗಳ ಬಗ್ಗೆ…