All posts by nagaraj11081993

ದರ್ಶನ್ ಜೈಲು ಡೈರಿ: ಬಹಿರಂಗವಾಯ್ತು ಹಲವು ಮಾಹಿತಿ – Kannada News | Darshan Jail Dairy details here is how many he met his family members

ನಟ ದರ್ಶನ್ (Darshan)​​, ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಇತ್ತೀಚೆಗಷ್ಟೆ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ದರ್ಶನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಇನ್ನೂ ಒಂದು ವರ್ಷಗಳ ಕಾಲ ದರ್ಶನ್​​ಗೆ ಜೈಲು ಖಾಯಂ ಆಗುವಂತೆ ಮಾಡಿದೆ. ಸುಪ್ರೀಂಕೋರ್ಟ್​​ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಸಿದ್ದ ದರ್ಶನ್, ಅರ್ಜಿಯಲ್ಲಿ ಜೈಲಿನ ಅವ್ಯವಸ್ಥೆಗಳ ಬಗ್ಗೆ ಹೇಳಿಕೊಂಡಿದ್ದರು. ಕುಟುಂಬದ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬುದು ಸಹ ಅವುಗಳಲ್ಲಿ ಒಂದಾಗಿತ್ತು. ಆರೋಪಕ್ಕೆ ಪ್ರತಿಯಾಗಿ ಜೈಲಧಿಕಾರಿಗಳು ದರ್ಶನ್ ಅವರ ಜೈಲು ಡೈರಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರ ಮಾಹಿತಿ ಇದೀಗ ಹೊರಬಿದ್ದಿದೆ.

ನಟ ದರ್ಶನ್ ಎಷ್ಟು ಬಾರಿ ಕುಟುಂಬದವರನ್ನು ಭೇಟಿ ಆಗಿದ್ದರು, ಎಷ್ಟು ಬಾರಿ ವಕೀಲರನ್ನು ಭೇಟಿ ಆಗಿದ್ದರು, ಎಷ್ಟು ಕರೆಗಳನ್ನು ಮಾಡಿದ್ದರು ಇನ್ನಿತರೆ ಮಾಹಿತಿಗಳನ್ನು ಜೈಲಧಿಕಾರಿಗಳು ನ್ಯಾಯಾಲಯಕ್ಕೆ ಒದಗಿಸಿದ್ದರು. ಅದರಂತೆ ದರ್ಶನ್ ಬರೋಬ್ಬರಿ 70ಕ್ಕೂ ಹೆಚ್ಚು ಬಾರಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. 28 ಬಾರಿ ವಕೀಲರನ್ನು ಭೇಟಿ ಮಾಡಿದ್ದಾರೆ. ಇಷ್ಟು ಬಾರಿ ವಕೀಲರ ಭೇಟಿ ಮಾಡಿದ್ದರೂ ಸಹ ಜಾಮೀನು ಸಿಗದೇ ಇರುವುದು ವಿಪರ್ಯಾಸ. ಇವುಗಳ ಜೊತೆಗೆ 73 ಬಾರಿ ಫೋನ್ ಕರೆಗಳನ್ನು ನಟ ದರ್ಶನ್ ಜೈಲಿನಿಂದ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್​ಗೆ ಸಿಗಲಿಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?

ಇನ್ನು ದರ್ಶನ್​​ಗೆ ಜೈಲಿನಲ್ಲಿ ಇತರೆ ಖೈದಿಗಳಿಗೆ ಒದಗಿಸುವ ಎಲ್ಲ ಸೌಕರ್ಯಗಳ ಜೊತೆಗೆ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಬೆಡ್ ಶೀಟ್, ಬಾಚಣಿಗೆ ಇತರೆ ಸೌಲಭ್ಯಗಳನ್ನು ಸಹ ನೀಡಲಾಗಿದೆ. ಜೈಲು ಖೈದಿಗಳಿಗೆ ಎಫ್​​ಎಸ್​​ಎಸ್​ಎಐ ನಿಯಮದಂತೆ ನೀಡುವ ಊಟದ ಜೊತೆಗೆ ಹೆಚ್ಚುವರಿಯಾಗಿ ಹಾಲು ಮತ್ತು ಮೊಟ್ಟೆ ಸಹ ನೀಡಲಾಗುತ್ತಿದೆ. ಹಾಗೂ ಸಂದರ್ಶಕರು ನೀಡುವ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಸ್ವೀಕರಿಸಲು ಸಹ ಅನುಮತಿ ನೀಡಲಾಗಿದೆ ಎಂದು ಜೈಲಧಿಕಾರಿಗಳು ಸುಪ್ರೀಂಕೋರ್ಟ್​​ಗೆ ಮಾಹಿತಿ ನೀಡಿದ್ದಾರೆ.

ಇತರೆ ಖೈದಿಗಳಿಂದ ಬೆದರಿಕೆ ಇದೆ ಎಂದು ಸಹ ದರ್ಶನ್, ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅದಕ್ಕೆ ಪ್ರತಿಯಾಗಿ ದರ್ಶನ್​​ಗೆ ನೀಡಲಾಗಿರುವ ಭದ್ರತೆ ಬಗ್ಗೆಯೂ ಜೈಲಧಿಕಾರಿಗಳು ಮಾಹಿತಿ ನೀಡಿದ್ದು, ಹಗಲಿನಲ್ಲಿ ಭದ್ರತೆಗೆ ಒಬ್ಬ ಸಹಾಯಕ ಜೈಲರ್ ಮತ್ತು ವಾರ್ಡನ್ ಒಬ್ಬರನ್ನು ನೇಮಿಸಲಾಗಿದೆ. ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್‌ಗಳು ದರ್ಶನ್ ಭದ್ರತೆ ಮತ್ತು ಕಾವಲಿಗೆ ನಿಯೋಜನೆಗೊಂಡಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಕೈದಿಗಳು ಕಾರಿಡಾರ್‌ಗೆ ಬಾರದಂತೆ ಭದ್ರತೆಗಾಗಿ ವ್ಯವಸ್ಥೆ ಮಾಡಲಾಗಿದ್ದು ಬ್ಯಾರಕ್ ಮುಂಭಾಗದ ಕಾರಿಡಾರ್‌ನಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಷ್ಯಾದ ಮಾಸ್ಕೋ ಮೇಲೆ ಉಕ್ರೇನ್ ಭಾರಿ ಡ್ರೋನ್ ದಾಳಿ: ಒಬ್ಬ ಭಾರತೀಯ ಕಾರ್ಮಿಕ ಸಾವು, ಮೂವರಿಗೆ ಗಾಯ – Kannada News | Ukraine drone attacks in Moscow kill one indian and injures 3 others

ಉಕ್ರೇನ್ ಭಾರಿ ಡ್ರೋನ್ ದಾಳಿImage Credit source: AI/Mediaforge/TV9

ನವದೆಹಲಿ, ಮೇ 17: ಉಕ್ರೇನ್ ಸೈನ್ಯವು ರಷ್ಯಾದ ರಾಜಧಾನಿ ಮಾಸ್ಕೋ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ (Ukraine drone attack) ಮಾಡಿದೆ. ಇತ್ತೀಚಿನ ದಿನಗಳಲ್ಲೇ ಅತಿ ದೊಡ್ಡದಾದ ಜಂಟಿ ಡ್ರೋನ್ ದಾಳಿ ಇದಾಗಿದೆ. ರಷ್ಯಾದ ವಾಯು ರಕ್ಷಣಾ ಪಡೆಗಳು (Russian defence forces) ನೂರಾರು ಡ್ರೋನ್‌ಗಳನ್ನು ಹೊಡೆದುರುಳಿಸಿದೆಯಾದರೂ, ಕೆಲವು ಡ್ರೋನ್‌ಗಳು ಜನವಸತಿ ಪ್ರದೇಶಗಳು ಮತ್ತು ಮೂಲಸೌಕರ್ಯಗಳ ಮೇಲೆ ಬಿದ್ದಿವೆ. ಈ ಭೀಕರ ದಾಳಿಯಲ್ಲಿ ಒಬ್ಬ ಭಾರತೀಯ ಕಾರ್ಮಿಕ ಮೃತಪಟ್ಟಿದ್ದಾರೆ, ಇತರ ಮೂವರಿಗೆ ತೀವ್ರ ಗಾಯಗಳಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ದುರಂತದ ಕುರಿತು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು (Embassy of India in Russia) ಅಧಿಕೃತ ಪ್ರಕಟಣೆ ಹೊರಡಿಸಿದೆ:

“ಮಾಸ್ಕೋ ಪ್ರದೇಶದಲ್ಲಿ ಇಂದು ನಡೆದ ಡ್ರೋನ್ ದಾಳಿಯಲ್ಲಿ ಓರ್ವ ಭಾರತೀಯ ಕಾರ್ಮಿಕ ತನ್ನ ಪ್ರಾಣ ಕಳೆದುಕೊಂಡಿದ್ದು, ಇತರ ಮೂವರು ಭಾರತೀಯರು ಗಾಯಗೊಂಡಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಮಾತನಾಡಿಸಿದ್ದಾರೆ.”

ಇದನ್ನೂ ಓದಿ: 18 ವರ್ಷದಿಂದ ಜಪಾನ್​ನಲ್ಲಿ ಬ್ಯುಸಿನೆಸ್ ಮಾಡ್ತಿದ್ದವನಿಗೆ ಅಂದ್ರು ‘ಗೋ ಬ್ಯಾಕ್ ಟು ಇಂಡಿಯಾ’

ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿರುವ ರಾಯಭಾರ ಕಚೇರಿಯು, ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಮತ್ತು ಕಾನೂನು ನೆರವು ನೀಡಲು ಸ್ಥಳೀಯ ಅಧಿಕಾರಿಗಳು ಹಾಗೂ ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.

ದಾಳಿಯ ತೀವ್ರತೆ ಮತ್ತು ಸಾವು-ನೋವುಗಳು

ರಷ್ಯಾ ರಕ್ಷಣಾ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 1,000 ಕ್ಕೂ ಹೆಚ್ಚು ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಆದರೆ ಮಾಸ್ಕೋ ನಗರಕ್ಕೆ ಸಮೀಪವಿರುವ ಖಿಮ್ಕಿ (Khimki) ಮತ್ತು ಮೈತಿಶ್ಚಿ (Mytishchi) ನಗರಗಳ ವಸತಿ ಸಂಕೀರ್ಣಗಳ ಮೇಲೆ ಡ್ರೋನ್ ಅವಶೇಷಗಳು ಬಿದ್ದಿದ್ದರಿಂದ ಭಾರಿ ಹಾನಿಯಾಗಿದೆ.

ಈ ದಾಳಿಗಳಲ್ಲಿ ಒಬ್ಬ ಭಾರತೀಯ ಕಾರ್ಮಿಕ ಸೇರಿದಂತೆ ಒಟ್ಟು ನಾಲ್ಕು ಜನರು ಸಾವನ್ನಪ್ಪಿದ್ದಾರೆ. 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಾಸ್ಕೋದ ಪ್ರಮುಖ ತೈಲ ಸಂಸ್ಕರಣಾಗಾರ (Oil Refinery) ಹಾಗೂ ವಸತಿ ಕಟ್ಟಡಗಳಿಗೆ ಹಾನಿಯಾಗಿದ್ದು, ಉಂಟಾದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಟಾಟಾ-ASML ಡೀಲ್; ಚಿಪ್ ಕ್ಷೇತ್ರದಲ್ಲಿ ಸಂಚಲನ; ಯಾಕಿದು ಮಹಾ ಡೀಲ್? ಎಲ್ಲರಿಗೂ ಅಚ್ಚರಿ ಎನಿಸುವಂಥದ್ದು ಏನಿದೆ?

ದಾಳಿಯನ್ನು ಸಮರ್ಥಿಸಿಕೊಂಡ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಈ ದಾಳಿಯ ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ದಾಳಿಯನ್ನು ದೃಢಪಡಿಸಿದ್ದಾರೆ. ರಷ್ಯಾವು ಉಕ್ರೇನ್ ನಗರಗಳ ಮೇಲೆ ಇತ್ತೀಚೆಗೆ ನಡೆಸಿದ ಕ್ಷಿಪಣಿ ದಾಳಿಗಳಿಗೆ ಪ್ರತಿಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ರಷ್ಯಾದ ಯುದ್ಧ ಸಾಮರ್ಥ್ಯವನ್ನು ಕುಂದಿಸಲು ನಮ್ಮ ಈ ದಾಳಿಗಳು ‘ನ್ಯಾಯಸಮ್ಮತವಾಗಿವೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:43 pm, Sun, 17 May 26

Source link

ಪಾನಿಪುರಿಯಲ್ಲಿ ಮೂಳೆ ಪತ್ತೆ; ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಯುವತಿಗೆ ಶಾಕ್ – Kannada News | Bone found in Panipuri at Ahmedabad

ಅಹಮದಾಬಾದ್‌, ಮೇ 17: ಪಾನಿಪುರಿ ಅಂದ್ರೆ ಎಲ್ಲರಿಗೂ ಇಷ್ಟನೇ. ಮಕ್ಕಳಿಂದ ಹಿಡಿದು ದೊಡ್ಡವವರೆಗೂ ಬಾಯಿಚಪ್ಪರಿಸಿಕೊಂಡು ತಿಂತಾರೆ. ಆದರೆ ಈ ಸ್ಟೋರಿ ಓದಿದ್ರೆ ನೀವು ಪಾನಿಪುರಿ ತಿನ್ನೋಕೆ ಹೋಗಲ್ಲ. ಹೌದು, ಅಹಮದಾಬಾದ್‌ನ (Ahmedabad) ರಾಣಿಪ್ ಪ್ರದೇಶದಲ್ಲಿ ಕೃಷ್ಣ ಪಾನಿಪುರಿ ತಿನ್ನುತ್ತಿದ್ದ ಯುವತಿಯೊಬ್ಬಳಿಗೆ ಪಾನಿಪುರಿಯೊಳಗೆ ಮೂಳೆಯ ತುಣುಕು ಪತ್ತೆಯಾಗಿದೆ. ಇದನ್ನು ನೋಡಿ ಯುವತಿ ಶಾಕ್ ಆಗಿದ್ದು, ಅಂಗಡಿ ಮಾಲೀಕನನ್ನು ಪ್ರಶ್ನಿಸಿದ್ದಾಳೆ. ಈ ಘಟನೆಯ ಸಂಬಂಧಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೀದಿ ಆಹಾರದ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

ಪಾನಿಪುರಿಯಲ್ಲಿ ಮೂಳೆ ಪತ್ತೆ

ಪಾನಿಪುರಿ ತಿನ್ನುತ್ತಿದ್ದ ಯುವತಿಗೆ ಪಾನಿಪುರಿಯೊಳಗೆ ಮೂಳೆಯ ಪತ್ತೆಯಾಗಿದೆ. ಈ ಬಗ್ಗೆ ಯುವತಿ ಅಂಗಡಿಯವನ ಬಳಿ ಪ್ರಶ್ನೆ ಮಾಡಿದ್ದಾಳೆ. ಅಂಗಡಿಯವನು ಅದು ಮೂಳೆಯಲ್ಲ ಮರದ ತುಂಡು ಎಂದು ವಾದಿಸಿದ್ದಾನೆ.

ಇದನ್ನೂ ಓದಿ: ಮಾನವೀಯತೆ ಅಂದ್ರೆ ಇದು: ಸುಡುವ ಬಿಸಿಲಿನಿಂದ ರಕ್ಷಿಸಲು ತನ್ನ ಅಂಗಡಿಯೊಳಗೆ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ವ್ಯಕ್ತಿ

ಕೊನೆಗೆ ಮಾಲೀಕನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಮೂಳೆ ಎಂದು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ. ಈ ಘಟನೆಯನ್ನು ಯುವತಿ ತಮ್ಮ ಮೊಬೈಲ್  ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ, ಎಲ್ಲೆಲ್ಲಿ? – Kannada News | Karnataka Weather Forecast: Heavy Rain, Thunderstorms Likely Across State for Next 7 Days; Bengaluru on Alert

ಬೆಂಗಳೂರು, ಮೇ 17: ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ವಾತಾವರಣದಲ್ಲಿ ಭಾರಿ ಏರುಪೇರಾಗಲಿದ್ದು, ದಕ್ಷಿಣ ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ (Rain) ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ. ರಾಜ್ಯದಲ್ಲಿ ಗರಿಷ್ಠ ತಾಪಮಾನ 35°C ಮತ್ತು ಕನಿಷ್ಠ ತಾಪಮಾನ 24°C ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

ಮುಖ್ಯಾಂಶಗಳು

  • ಬೆಂಗಳೂರು ಹಾಗೂ ದಕ್ಷಿಣ ಒಳನಾಡಿಗೆ ಭಾರಿ ಮಳೆ ಮುನ್ಸೂಚನೆ
  • ಉತ್ತರ ಒಳನಾಡು ಮತ್ತು ಕರಾವಳಿ ಕರ್ನಾಟಕದ ಹವಾಮಾನ ವರದಿ
  • ಕರ್ನಾಟಕದಲ್ಲಿ ಮುಂದಿನ 7 ದಿನಗಳ ಹವಾಮಾನ ವೈಪರೀತ್ಯ

ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

KSNDMC ಟ್ವೀಟ್​

ದಕ್ಷಿಣ ಒಳನಾಡುನಲ್ಲಿ ಭಾರಿ ಮಳೆ ಎಚ್ಚರಿಕೆ

ಮೇ 18 ಹಾಗೂ ಮೇ 19ರಂದು ಈ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜೊತೆಗೆ ಬಲವಾದ ಗಾಳಿ, ಗುಡುಗು ಮತ್ತು ಮಿಂಚಿನ ಆರ್ಭಟ ಇರಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೇ 20ರಂದು ಮಳೆಯ ತೀವ್ರತೆ ಕೊಂಚ ಕಡಿಮೆಯಾಗಲಿದ್ದರೂ, ಗುಡುಗು-ಮಿಂಚು ಸಹಿತ ಗಾಳಿ ಮಳೆ ಮುಂದುವರಿಯಲಿದೆ. ಇನ್ನು ಮೇ 21 ರಿಂದ 23ರ ವರೆಗೆ ಯಾವುದೇ ವಿಶೇಷ ಮುನ್ಸೂಚನೆ ಅಥವಾ ಅಪಾಯದ ಎಚ್ಚರಿಕೆ ಇರುವುದಿಲ್ಲ.

ಉತ್ತರ ಒಳನಾಡುನಲ್ಲಿ ಗುಡುಗು ಸಹಿತ ಗಾಳಿ

ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದ್ದರೆ, ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ ಎಂದಿನಂತೆ ಮುಂದುವರಿಯಲಿದ್ದು, ಸಂಜೆ ವೇಳೆಗೆ ತಂಪಾದ ಗಾಳಿ ಬೀಸುವ ಸಾಧ್ಯತೆ ಇದೆ. ಮೇ 19 ರಿಂದ ಮೇ 23ರ ವರೆಗೆ ವಾತಾವರಣ ಸಂಪೂರ್ಣ ಸಹಜ ಸ್ಥಿತಿಗೆ ಮರಳಲಿದ್ದು, ಯಾವುದೇ ಮಳೆಯ ಎಚ್ಚರಿಕೆ ಇಲ್ಲ.

ಕರಾವಳಿ ಕರ್ನಾಟಕ ನಿರಾಳ

ಮುಂದಿನ 7 ದಿನಗಳ ಕಾಲ (ಮೇ 17 ರಿಂದ ಮೇ 23 ರವರೆಗೆ) ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗದಲ್ಲಿ ಯಾವುದೇ ಮಳೆ ಅಥವಾ ಹವಾಮಾನ ವೈಪರೀತ್ಯದ ಎಚ್ಚರಿಕೆಯನ್ನು ನೀಡಿಲ್ಲ. ಇಲ್ಲಿ ವಾತಾವರಣ ಎಂದಿನಂತೆ ಸಾಮಾನ್ಯವಾಗಿರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ಬಳಿಕ ನಾಟಕವಾಡಿದ್ದ ತಂದೆಯ ಅಸಲಿ ಮುಖ ಬಯಲು – Kannada News | Tumakuru honor killing case: father arrested for kills daughter over Love

ತುಮಕೂರು (ಮೇ 17): ಮಗಳ  ಪಾಲಿಗೆ ತಂದೆಯೇ (Father) ಕಾಲಾಂತಕನಾದ ಘೋರ ಘಟನೆಯೊಂದು ತುಮಕೂರು (Tumakuru) ಜಿಲ್ಲೆಯ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.  ಹೌದು.. ಪ್ರೀತಿಯ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಂದೆ, ತನ್ನ 17 ವರ್ಷದ ಮಗಳನ್ನು (daughter) ಹತ್ಯೆ ಮಾಡಿ ಹಳ್ಳದಲ್ಲಿ ಹೂತು ಹಾಕಿದ್ದ ಆತಂಕಕಾರಿ ವಿಷಯ ಬಯಲಾಗಿದೆ. ಕೊಲೆಯಾದ ಯುವತಿಯನ್ನು ಮೇಘನಾ (17) ಎಂದು ಗುರುತಿಸಲಾಗಿದೆ. ಈಕೆಯ ತಂದೆ ತಿಮ್ಮರಾಯಪ್ಪ (48) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಹಂತಕ.

ಮೇಘನಾ ತನ್ನ ತಾಯಿಯ ಸಂಬಂಧಿಕರ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದ್ರೆ, ಇದಕ್ಕೆ ತಂದೆ ತಿಮ್ಮರಾಯಪ್ಪನ ತೀವ್ರ ವಿರೋಧವಿತ್ತು. ಈ ಸಂಬಂಧ ಮನೆಯಲ್ಲಿ ಹಲವು ಬಾರಿ ಗಲಾಟೆಗಳೂ ನಡೆದಿದ್ದವು. ಕೊನೆಗೆ ಮಗಳ ಹಠಕ್ಕೆ ಬೇಸತ್ತಿದ್ದ ತಿಮ್ಮರಾಯಪ್ಪ, ಕಳೆದ ಏಪ್ರಿಲ್ 16 ರಂದೇ ಮೇಘನಾಳನ್ನು ಕೊಲೆ ಮಾಡಿದ್ದು, ಯಾರಿಗೂ ಸಂಶಯ ಬಾರದಂತೆ ತನ್ನ ಜಮೀನಿನ ಪಕ್ಕದಲ್ಲೇ ಇರುವ ಹಳ್ಳವೊಂದರಲ್ಲಿ ಹೂತು ಹಾಕಿದ್ದ. ಮಗಳು ಮನೆಗೆ ಬಾರದೇ ಇದ್ದಾಗ ಏನೂ ಅರಿಯದವನಂತೆ ನಾಟಕವಾಡಿದ್ದ ಈತ, ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಮಗಳ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ತಿಮ್ಮರಾಯಪ್ಪನ ವರ್ತನೆ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದ್ರೆ, ಪೊಲೀಸರು ವಿಚಾರಣೆಗೆ ಕರೆದಾಗ ಗಾಬರಿಗೊಂಡ ನಾಪತ್ತೆಯಾಗಿದ್ದ ತಿಮ್ಮರಾಯಪ್ಪನನ್ನು ಪತ್ತೆ ಮಾಡಿದ್ದು, ಬಳಿಕ ವಿಚಾರಣೆಗೊಳಪಡಿಸಿದಾಗ ಮಗಳನ್ನು ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

PBKS vs RCB: ಐತಿಹಾಸಿಕ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್ – Kannada News | IPL 2026: RCB Dominates PBKS as Kohli, Venkatesh Iyer Shine; Shreyas Iyer’s 100th Match Disappointment

ಐಪಿಎಲ್ 2026 ರ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ 222 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪವರ್​ ಪ್ಲೇನಲ್ಲಿಯೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಅದರಲ್ಲೂ ಐಪಿಎಲ್‌ನಲ್ಲಿ 100ನೇ ಪಂದ್ಯವನ್ನಾಡುತ್ತಿದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್​ಗೆ ಈ ಪಂದ್ಯ ಐತಿಹಾಸಿಕವಾಗಿತ್ತು. ಆದರೆ ಈ ಪಂದ್ಯದಲ್ಲಿ ಅವರು ಕೇವಲ 1 ರನ್ ಬಾರಿಸಿ ಔಟಾದರು.

ಆರಂಭಿಕ ಪ್ರಿಯಾಂಶ್ ಆರ್ಯ, ಭುವಿ ಬೌಲ್ ಮಾಡಿದ ಓವರ್​ನ ಮೂರನೇ ಎಸೆತದಲ್ಲಿ ಖಾತೆ ತೆರೆಯದೆ ಔಟಾದರೆ ಮತ್ತೊಬ್ಬ ಆರಂಭಿಕ ಪ್ರಬ್ಸಿಮಾನ್ಸ್ ಕೂಡ ಭುವಿಗೆ ಬಲಿಯಾದರು. ಹೀಗಾಗಿ ಈ ಎರಡು ಆರಂಭಿಕ ಆಘಾತದ ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಮಾತ್ರವಲ್ಲದೆ ಮೇಲೆ ಹೇಳಿದಂತೆ ಅಯ್ಯರ್​ಗೆ ಇದು 100ನೇ ಐಪಿಎಲ್ ಪಂದ್ಯವಾಗಿತ್ತು. ಈ ಮೈಲಿಗಲ್ಲು ಪಂದ್ಯದಲ್ಲಿ ಅಯ್ಯರ್ ಸ್ಮರಣೀಯ ಇನ್ನಿಂಗ್ಸ್ ಆಡುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಅಯ್ಯರ್, ರಸಿಖ್ ಎಸೆದ 4ನೇ ಓವರ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗನ ‘ಪೆದ್ದಿ’ ಸಿನಿಮಾ ಸೆಟ್​ನಲ್ಲಿ ಅರ್ಧ ಗಂಟೆಯೂ ಇರಲಾಗಲಿಲ್ಲ ಚಿರಂಜೀವಿಗೆ: ಕಾರಣ? – Kannada News | Peddi director said Chiranjeevi could not stay for half hour in Peddi set

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾದ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ನಟಿಸಿದ್ದು, ಸಿನಿಮಾ ಅನ್ನು ನಿರ್​ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರ ಈಗಾಗಲೇ ಆರಂಭವಾಗಿದ್ದು, ಬುಚ್ಚಿ ಬಾಬು ಸನಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ‘ಪೆದ್ದಿ’ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡಿದ್ದರು. ಆ ವೇಳೆ ಮೆಗಾಸ್ಟಾರ್ ಚಿರಂಜೀವಿ ಅವರು ಸೆಟ್​​ಗೆ ಬಂದಿದ್ದರಾದರೂ ಅವರಿಗೆ ಅರ್ಧ ಗಂಟೆ ಸಹ ಸೆಟ್​​ನಲ್ಲಿ ಇರಲಾಗಲಿಲ್ಲ ಎಂದರು. ಅವರೇ ಕಾರಣವನ್ನೂ ತಿಳಿಸಿದ್ದಾರೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್​ ಶೂಟಿಂಗ್ ವೇಳೆ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಸೆಟ್​​ಗೆ ಭೇಟಿ ನೀಡಿದ್ದರು. ಚಿರಂಜೀವಿ ಅವರು ಸೆಟ್​​ಗೆ ಬಂದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಸರಿಯಾಗಿ ಕುಸ್ತಿ ಪಂದ್ಯದ ಶೂಟಿಂಗ್ ನಡೆಯುವಾಗಲೇ ಮೆಗಾಸ್ಟಾರ್ ಚಿರಂಜೀವಿ ಅವರು ಸೆಟ್​​ಗೆ ಹಾಜರಿ ಹಾಕಿದ್ದರು. ಆದರೆ ಅರ್ಧ ಗಂಟೆ ಸಹ ಅವರು ಇರಲಿಲ್ಲವಂತೆ. ಕೂಡಲೇ ಅಲ್ಲಿಂದ ಹೊರಟು ಬಿಟ್ಟರಂತೆ.

ಏಕೆಂದರೆ, ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ಫೈಟ್​​ನಲ್ಲಿ ರಾಮ್ ಚರಣ್ ಅವರಿಗೆ ಬಹಳಷ್ಟು ಅಪಾಯಕಾರಿ ಶಾಟ್​​ಗಳು ಇದ್ದವಂತೆ. ಎಲ್ಲವನ್ನೂ ಖುದ್ದು ರಾಮ್ ಚರಣ್ ಅವರೇ ಮಾಡುತ್ತಿದ್ದರಂತೆ. ಮಗ ತನ್ನನ್ನು ತಾನು ಅಷ್ಟು ಅಪಾಯಕ್ಕೆ ಒಡ್ಡಿಕೊಳ್ಳುವುದನ್ನು ನೋಡಲಾಗದೆ ಚಿರಂಜೀವಿ ಅವರು ಸೆಟ್​​ನಿಂದಲೇ ಹೊರಟು ಹೋದರಂತೆ. ಇದೇ ವಿಷಯವನ್ನು ಬುಚ್ಚಿ ಬಾಬು ಸನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಪೆದ್ದಿ’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಸಾಕಷ್ಟು ರಿಸ್ಕಿ ಶಾಟ್​​ಗಳನ್ನು ರಾಮ್ ಚರಣ್ ಅವರಿಗಾಗಿ ಕಂಪೋಸ್ ಮಾಡಲಾಗಿತ್ತಂತೆ. ಕೆಲ ಶಾಟ್​​ಗಳು ಅದೆಷ್ಟು ರಿಸ್ಕಿ ಆಗಿದ್ದುವೆಂದರೆ ರಾಮ್ ಚರಣ್ ಅವರನ್ನು ಆ ಸ್ಥಿತಿಯಲ್ಲಿ ನೋಡಲು ಸಹ ಚಿರಂಜೀವಿ ಅವರು ಭಯಪಟ್ಟು ಅಲ್ಲಿಂದ ಹೊರಟು ಹೋದರಂತೆ. ಬುಚ್ಚಿ ಬಾಬು ಸನಾ ಹೇಳಿರುವಂತೆ ಸಿನಿಮಾದ ಕ್ಲೈಮ್ಯಾಕ್ಸ್, ‘ಪೆದ್ದಿ’ ಸಿನಿಮಾದ ಜೀವ. ಆಕ್ಷನ್ ಜೊತೆಗೆ ಅತೀವ ಭಾವುಕವಾದ ದೃಶ್ಯಗಳು ಸಿನಿಮಾದ ಕ್ಲೈಮ್ಯಾಕ್ಸ್​​ನಲ್ಲಿ ಇವೆಯಂತೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರು ‘ಗೌಡನಾಯ್ಡು’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ಸಿನಿಮಾದ ನಾಯಕಿ. ಜಗಪತಿ ಬಾಬು ಸಹ ಸಿನಿಮಾನಲ್ಲಿದ್ದಾರೆ. ಶ್ರುತಿ ಹಾಸನ್, ಸಿನಿಮಾನಲ್ಲಿ ಐಟಂ ಹಾಡಿನಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​​ ಗಳು – Kannada News | Fishing Boats Parked In Baithkol Port over Wind Increases In Arabian Sea

ಕಾರವಾರ, (ಮೇ 17): ಒಂದೆಡೆ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ (Arabian Sea) ಗಾಳಿಯ ವೇಗ ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದ ಗಂಟೆಗೆ 40 ರಿಂದ 55km.ವೇಗದಲ್ಲಿ ಗಾಳಿ ಬಿಸುತ್ತಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಬೈಥಕೊಲ್ ಬಂದರಿನಲ್ಲಿ (Baithkol Port) ನೂರಕ್ಕೂ ಹೆಚ್ಚು ಬೋಟ್ ಗಳಿಗೆ ಲಂಗರು ಹಾಕಲಾಗಿದೆ. ಪ್ರತಿ ವರ್ಷ ಜೂನ್ 1 ರಿಂದ ಅಧಿಕೃತ ಮೀನುಗಾರಿಕೆ ಬಂದ್ ಆಗುತ್ತೆ. ಆದ್ರೆ ಈ ವರ್ಷ ಹವಾಮಾನ ವೈಪರಿತ್ಯದಿಂದ. ಅವಧಿ ಪೂರ್ವ ಮೀನುಗಾರಿಕೆ ನಿರ್ಬಂಧಿಸುವ ಸಾಧ್ಯತೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

18 ವರ್ಷದಿಂದ ಜಪಾನ್​ನಲ್ಲಿ ಬ್ಯುಸಿನೆಸ್ ಮಾಡ್ತಿದ್ದವನಿಗೆ ಅಂದ್ರು ‘ಗೋ ಬ್ಯಾಕ್ ಟು ಇಂಡಿಯಾ’ – Kannada News | Japan Visa Crisis: Indian Entrepreneur Manish Kumar Faces Deportation After 30 Years

ಜಪಾನೀ ನಗರದ ಸಾಂದರ್ಭಿಕ ಚಿತ್ರImage Credit source: AI/Mediaforge/TV9

ಟೋಕಿಯೋ, ಮೇ 17: ಜಪಾನ್‌ನಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಾ, ಸೈತಾಮಾ ನಗರದಲ್ಲಿ (Saitama Prefecture) ಕಳೆದ 18 ವರ್ಷಗಳಿಂದ ಯಶಸ್ವಿಯಾಗಿ ಭಾರತೀಯ ರೆಸ್ಟೋರೆಂಟ್​ವೊಂದನ್ನು ನಡೆಸುತ್ತಿದ್ದ ಮನೀಶ್ ಕುಮಾರ್ ಎಂಬ ಭಾರತೀಯ ಉದ್ಯಮಿಗೆ ಜಪಾನ್ ಸರ್ಕಾರವು ದೇಶ ತೊರೆಯುವಂತೆ ಆದೇಶಿಸಿದೆ. ಜಪಾನ್‌ನ ವಲಸೆ ಸೇವಾ ಸಂಸ್ಥೆಯು (ISA) ಅವರ ಬಿಸಿನೆಸ್ ಮ್ಯಾನೇಜರ್ ವೀಸಾ (Business Manager Visa) ನವೀಕರಣವನ್ನು ತಿರಸ್ಕರಿಸಿರುವುದು ಇದಕ್ಕೆ ಕಾರಣವಾಗಿದೆ. ಟೋಕಿಯೋದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಮನೀಶ್ ಕುಮಾರ್, ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಕಣ್ಣೀರು ಹಾಕಿದ್ದಾರೆ.

“ಎರಡು ವಾರಗಳ ಹಿಂದೆ ಜಪಾನ್ ವಲಸೆ ಸಂಸ್ಥೆಯು (ISA) ನನಗೆ ಭಾರತಕ್ಕೆ ಮರಳಿ ಹೋಗುವಂತೆ ತಿಳಿಸಿತು. ನನ್ನ ಮಕ್ಕಳು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಜಪಾನ್‌ನಲ್ಲಿಯೇ. ಅವರಿಗೆ ಕೇವಲ ಜಪಾನಿ ಭಾಷೆ ಮಾತ್ರ ಗೊತ್ತು, ಅವರ ಸ್ನೇಹಿತರೆಲ್ಲರೂ ಜಪಾನಿಯರೇ ಆಗಿದ್ದಾರೆ. ನಾವಿಲ್ಲಿ ಕಷ್ಟಪಟ್ಟು ದುಡಿದು ಒಂದು ಮನೆಯನ್ನೂ ಖರೀದಿಸಿದ್ದೇವೆ. ಈಗ ಇದ್ದಕ್ಕಿದ್ದಂತೆ ಯಾವುದೇ ತಪ್ಪು ಮಾಡದ ನಮಗೆ ‘ಭಾರತಕ್ಕೆ ವಾಪಸ್ ಹೋಗಿ’ ಎಂದು ಹೇಳುತ್ತಿರುವುದು ಎಷ್ಟು ಮಾನವೀಯ? ನಾನು ಈಗ ಏನು ಮಾಡಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.

ಜಪಾನ್​ನಲ್ಲಿ ವೀಸಾ ನಿಯಮಗಳು ಕಟ್ಟುನಿಟ್ಟಾಗಲು ಕಾರಣವೇನು?

ಜಪಾನ್ ಸರ್ಕಾರವು ತನ್ನ ‘ಬಿಸಿನೆಸ್ ಮ್ಯಾನೇಜರ್ ವೀಸಾ’ ನೀತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಕಳೆದ ವರ್ಷ (ಅಕ್ಟೋಬರ್ 2025) ನಿಯಮಗಳನ್ನು ಬಹಳ ಕಠಿಣಗೊಳಿಸಿದೆ. ನಕಲಿ ವ್ಯಾಪಾರಗಳನ್ನು ತೋರಿಸಿ ವಿದೇಶಿಗರು ದೀರ್ಘಾವಧಿ ವಾಸದ ಹಕ್ಕು (Residency) ಪಡೆಯುವುದನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿತ್ತು.

ಇದನ್ನೂ ಓದಿ: ಟಾಟಾ-ASML ಡೀಲ್; ಚಿಪ್ ಕ್ಷೇತ್ರದಲ್ಲಿ ಸಂಚಲನ; ಯಾಕಿದು ಮಹಾ ಡೀಲ್? ಎಲ್ಲರಿಗೂ ಅಚ್ಚರಿ ಎನಿಸುವಂಥದ್ದು ಏನಿದೆ?

ಆದರೆ, ಈ ಹಠಾತ್ ಬದಲಾವಣೆಯು ಕಾನೂನುಬದ್ಧವಾಗಿ ಸಣ್ಣ ಉದ್ಯಮ ನಡೆಸುತ್ತಿದ್ದ ಮನೀಶ್ ಕುಮಾರ್ ಅವರಂತಹ ಪ್ರಾಮಾಣಿಕ ಉದ್ಯಮಿಗಳ ಬದುಕನ್ನು ಬೀದಿಗೆ ತಂದಿದೆ.

ಹೊಸ ನಿಯಮಗಳಲ್ಲಿನ ಕಠಿಣ ಷರತ್ತುಗಳು

ಈ ಹಿಂದೆ ವೀಸಾ ಪಡೆಯಲು ಕನಿಷ್ಠ 5 ಮಿಲಿಯನ್ ಯೆನ್ (ಸುಮಾರು 30 ಲಕ್ಷ ರೂ) ಹೂಡಿಕೆ ಸಾಕಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ ಅದನ್ನು 30 ಮಿಲಿಯನ್ ಯೆನ್‌ಗೆ (ಸುಮಾರು 1.8 ಕೋಟಿ ರೂ) ಏರಿಸಲಾಗಿದೆ. ಸಣ್ಣ ಉದ್ಯಮಿಗಳಿಗೆ ಈ ಮೊತ್ತವನ್ನು ಹೊಂದಿಸುವುದು ಅಸಾಧ್ಯವಾಗಿದೆ.

ಮತ್ತೊಂದು ಪ್ರಮುಖ ನಿಯಮವು ಸ್ಥಳೀಯ ನೌಕರರ ನೇಮಕದ್ದಾಗಿದೆ. ಪ್ರತಿಯೊಬ್ಬ ಉದ್ಯಮಿಯೂ ಕಡ್ಡಾಯವಾಗಿ ಕನಿಷ್ಠ ಒಬ್ಬ ಸ್ಥಳೀಯ (ಜಪಾನಿ) ಪೂರ್ಣಾವಧಿ ನೌಕರನನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು ಎಂದು ಹೇಳುತ್ತದೆ ಹೊಸ ನಿಯಮ.

ಮಗದೊಂದು ಕಠಿಣ ನಿಯಮಗಳಲ್ಲಿ ಜಪಾನೀ ಭಾಷೆಯಲ್ಲಿ ಪರಿಣಿತಿ ಸಾಧಿಸುವುದು ಸೇರಿದೆ. ಉದ್ಯಮಿ ಅಥವಾ ಅವರ ಸಿಬ್ಬಂದಿ ಜಪಾನಿ ಭಾಷೆಯ ಉನ್ನತ ಮಟ್ಟದ ಪ್ರಾವೀಣ್ಯತೆಯನ್ನು (JLPT N2 ಮಟ್ಟ) ಸಾಬೀತುಪಡಿಸಬೇಕು.

ಇದನ್ನೂ ಓದಿ: ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ

ವೀಸಾ ಅರ್ಜಿಗಳಲ್ಲಿ ಶೇ. 96 ರಷ್ಟು ಕುಸಿತ

ಜಪಾನ್ ಸರ್ಕಾರದ ಈ ಕಠಿಣ ನೀತಿಯಿಂದಾಗಿ ಉದ್ಯಮ ವೀಸಾಕ್ಕೆ ಸಲ್ಲಿಕೆಯಾಗುತ್ತಿದ್ದ ಅರ್ಜಿಗಳ ಸಂಖ್ಯೆ ಶೇಕಡಾ 96 ರಷ್ಟು ಕುಸಿದಿದೆ. ಈ ಹಿಂದೆ ತಿಂಗಳಿಗೆ ಸರಾಸರಿ 1,700 ಅರ್ಜಿಗಳು ಬರುತ್ತಿದ್ದರೆ, ಈಗ ಅದು ಕೇವಲ 70ಕ್ಕೆ ಇಳಿದಿದೆ. ಮನೀಶ್ ಕುಮಾರ್ ಅವರಂತೆಯೇ ಹಾಂಕಾಂಗ್ ಮೂಲದ ಮತ್ತೊಬ್ಬ ರೆಸ್ಟೋರೆಂಟ್ ಮಾಲೀಕರೂ ಸಹ ಬಂಡವಾಳದ ಕೊರತೆಯಿಂದಾಗಿ ತಮ್ಮ ಉದ್ಯಮವನ್ನು ಮುಚ್ಚಿ ತಾಯ್ನಾಡಿಗೆ ಮರಳುತ್ತಿದ್ದಾರೆ.

ಪ್ರಸ್ತುತ, ಜಪಾನ್‌ನ ಈ ಕಠಿಣ ವಲಸೆ ನೀತಿಯ ವಿರುದ್ಧ ಮತ್ತು ಮನೀಶ್ ಕುಮಾರ್ ಅವರಂತಹ ದೀರ್ಘಾವಧಿ ನಿವಾಸಿಗಳ ಪರವಾಗಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಪಾನ್‌ನಲ್ಲಿ ಸಾವಿರಾರು ಜನರು ಸಹಿ ಸಂಗ್ರಹಿಸಿ ಆನ್‌ಲೈನ್ ಅಭಿಯಾನವನ್ನು ನಡೆಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೇಗಿತ್ತು ‘ಟಾಕ್ಸಿಕ್’ ಸೆಟ್: ನಟಿಯ ಮಾತು ಕೇಳಿ ಯಶ್ ಬಗ್ಗೆ ಹೆಮ್ಮೆ ಆಗದೇ ಇರದು – Kannada News | Tara Sutaria said Toxic movie set is the most professional set she ever worked

ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ (Pan India) ಲೆವೆಲ್​​ಗೆ ಮತ್ತು ಈಗ ‘ಟಾಕ್ಸಿಕ್’ ಮೂಲಕ ಹಾಲಿವುಡ್​​ ಲೆವೆಲ್​​ಗೆ ಕೊಂಡೊಯ್ಯುವ ಕಾರ್ಯವನ್ನು ನಟ ಯಶ್ ಮಾಡುತ್ತಿದ್ದಾರೆ. ಅವರು ಸಿನಿಮಾವನ್ನು ಹಾಲಿವುಡ್​​ ಲೆವೆಲ್​​ನಲ್ಲಿ ನಿರ್ಮಾಣ ಮಾಡಿರುವುದು ಸಿನಿಮಾದ ಟೀಸರ್, ಪೋಸ್ಟರ್​​ಗಳಿಂದ ಈಗಾಗಲೇ ತಿಳಿದಿದೆ. ಆದರೆ ಯಶ್ ಅವರು ಸಿನಿಮಾದ ಸೆಟ್​​ನಲ್ಲೂ ನಟ-ನಟಿ ಸೇರಿದಂತೆ ಎಲ್ಲ ಸಿಬ್ಬಂದಿಗೂ ವಿಶ್ವ ದರ್ಜೆಯ ಟ್ರೀಟ್​​ಮೆಂಟ್ ಸಿಗುವಂತೆ ಮಾಡಿದ್ದರು. ‘ಟಾಕ್ಸಿಕ್’ ಸಿನಿಮಾ ಸೆಟ್​​ನಲ್ಲಿದ್ದ ವೃತ್ತಿಪರತೆ ಬಗ್ಗೆ ಕೆಲಸದ ಗುಣಮಟ್ಟ ಇನ್ನಿತರೆ ವಿಷಯಗಳ ಬಗ್ಗೆ ಸಿನಿಮಾದ ಐವರು ನಾಯಕಿಯರಲ್ಲಿ ಒಬ್ಬರಾದ ತಾರಾ ಸುತಾರಿಯಾ ಮಾತನಾಡಿದ್ದಾರೆ.

ಹಾಲಿವುಡ್ ರಿಪೋರ್ಟರ್​ ಜೊತೆಗೆ ಮಾತನಾಡಿರುವ ನಟಿ ತಾರಾ ಸುತಾರಿಯಾ ‘ಟಾಕ್ಸಿಕ್’ ಸಿನಿಮಾದ ಸೆಟ್ ಮತ್ತು ಅಲ್ಲಿಯ ಶೂಟಿಂಗ್ ವಿಧಾನ, ಕಲಾವಿದರನ್ನು, ತಂತ್ರಜ್ಞರನ್ನು, ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತಿದ್ದ ವಿಧಾನ ಎಷ್ಟು ವೃತ್ತಿಪರವಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ‘ನನಗಂತೂ ‘ಟಾಕ್ಸಿಕ್’ ಸಿನಿಮಾನಲ್ಲಿ ಕೆಲಸ ಮಾಡಿದ್ದು ಬಹಳ ತೃಪ್ತಿ ತಂದಿದೆ. ಶೂಟಿಂಗ್ ಸೆಟ್‌ನಲ್ಲಿ ನನಗೆ ತುಂಬಾ ಒಳ್ಳೆಯ ಅನುಭವ ನೀಡಿದ ಸಿನಿಮಾ ಇದು’ ಎಂದಿದ್ದಾರೆ.

ಸಿನಿಮಾ ಸೆಟ್​​ಗಳಲ್ಲಿ ಅತಿಯಾದ ಕೆಲಸಕ್ಕೆ ಪ್ರಾಧಾನ್ಯತೆ ಹೆಚ್ಚು, ಶೂಟಿಂಗ್ ಬೇಗನೆ ಮುಗಿಯಬೇಕು ಮತ್ತು ರಿಚ್ ಆಗಿ ಬರಬೇಕೆಂದು ಚಿತ್ರತಂಡಗಳು ನಟ-ನಟಿಯರನ್ನು ಹೆಚ್ಚಿಗೆ ದುಡಿಸಿಕೊಳ್ಳುವುದು, ಭದ್ರತೆ, ಸುರಕ್ಷತೆಗೆ ಹೆಚ್ಚು ಗಮನ ವಹಿಸದೇ ಇರುವುದು ಮಾಡುತ್ತವೆ. ಆದರೆ ‘ಟಾಕ್ಸಿಕ್’ ಸೆಟ್​​ನಲ್ಲಿ ಇದೆಲ್ಲ ಇರಲೇ ಇಲ್ಲವಂತೆ. ‘ಸೆಟ್​​ನಲ್ಲಿ ಮಾನವೀಯತೆಗೆ ಮತ್ತು ಪ್ರಮಾಣಿಕತೆಗೆ ಮೊದಲ ಆದ್ಯತೆ ಇತ್ತು’ ಎಂದು ನಟಿ ತಾರಾ ಸುತಾರಿಯಾ ಹೇಳಿದ್ದಾರೆ.

ಇದನ್ನೂ ಓದಿ:ಚೈತ್ರಾ ಆಚಾರ್​​ಗೆ ಸಿಕ್ತು ದೊಡ್ಡ ಅವಕಾಶ, ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ

ಮುಂದುವರೆದು ಮಾತನಾಡಿ, ‘ನನಗೆ ಬಹಳ ವರ್ಷಗಳ ಬಳಿಕ ಒಳ್ಳೆಯ ತಂಡ ಸಿಕ್ಕಿತು, ಅದು ಕೂಡ ಗೀತು ಮೋಹನ್ ದಾಸ್ ಅವರ ನಾಯಕತ್ವದಲ್ಲಿ. ನಿಖಿಲ್ ನಾಗೇಶ್ ಭಟ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ ಬಳಿಕ ನನಗೆ ಸಿಕ್ಕ ಅದ್ಭುತ ನಿರ್ದೇಶಕಿ ಗೀತು ಮೋಹನ್​​ದಾಸ್. ಅವರ ಜೊತೆ ಕೆಲಸ ಮಾಡುವುದು ಮತ್ತು ಒಬ್ಬ ಮಹಿಳೆಯ ನೇತೃತ್ವದಲ್ಲಿ ಮುನ್ನಡೆಯುವುದು ನನ್ನ ಜೀವನದ ಅತ್ಯಂತ ಸಂತೋಷದ ವಿಷಯವಾಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಕೆಲಸ ಮಾಡಿರುವ ಯಾರನ್ನು ಬೇಕಾದರೂ ಕೇಳಿ ಎಲ್ಲರೂ ಇದೇ ಉತ್ತರ ನೀಡುತ್ತಾರೆ’ ಎಂದಿದ್ದಾರೆ ನಟಿ ತಾರಾ ಸುತಾರಿಯಾ.

ಯಶ್, ‘ಟಾಕ್ಸಿಕ್’ ಸಿನಿಮಾದ ಸಹ ನಿರ್ಮಾಪಕ ಆಗಿದ್ದು, ಯಶ್ ಅವರು ವೃತ್ತಿಪರತೆಯಿಂದ, ಕಾರ್ಪೊರೇಟ್ ಶೈಲಿಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ. ಸಾಮಾನ್ಯ ಸಿನಿಮಾ ಶೂಟಿಂಗ್​​ನ ಮಾದರಿಗಳನ್ನು ಕೈಬಿಟ್ಟು, ಕನ್ನಡ ಸಿನಿಮಾ ಶೂಟಿಂಗ್​​ಗೆ ಒಂದು ಕಾರ್ಪೊರೇಟ್ ಶೈಲಿಯನ್ನು ತಂದಿದ್ದಾರೆ. ಈಗ ಸಿನಿಮಾವನ್ನು ಸಹ ಹಾಲಿವುಡ್ ಲೆವೆಲ್​​ನಲ್ಲಿ ಬಿಡುಗಡೆ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾದ ಹೊಸ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:59 pm, Sun, 17 May 26

Source link