ತುಮಕೂರನ್ನೇ ಬೆಚ್ಚಿ ಬೀಳಿಸಿದ್ದ ಮುಬಾರಕ್ ಕೊಲೆ ಕೇಸಿಗೆ ಸ್ಪೋಟಕ ಟ್ವಿಸ್ಟ್: ವಾಮಾಚಾರಕ್ಕೆ ಹೆದರಿ ಗೆಳೆಯನನ್ನೇ ಕೊಂದ
ತುಮಕೂರು, (ಮಾರ್ಚ್ 11): ನಗರದ ಇಸ್ರಾ ಶಾದಿ ಮಹಲ್ ಬಳಿ ನಡೆದಿದ್ದ ನಜರಾಬಾದ್ ಮುಬಾರಕ್ ಕೊಲೆ ಇಡೀ ತುಮಕೂರನ್ನೇ (Tumakuru) ಬೆಚ್ಚಿ ಬೀಳಿಸಿದ್ದು, ಇದೀಗ ಈ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮರಳೂರು ದಿಣ್ಣೆಯ ಮುಬಾರಕ್ ಎನ್ನುವಾತ ಮಾತನಾಡುವ ನೆಪದಲ್ಲಿ ನಜರಾಬಾದ್ ಮುಬಾರಕ್ ನನ್ನು ಕರೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನು ಘಟನೆ ನಡೆದ 24 ಗಂಟೆಯೊಳಗೆ ಹಂತಕ ಮರಳೂರು ದಿಣ್ಣೆಯ ಮುಬಾರಕ್ ನನ್ನು ಬಂಧಿಸುವಲ್ಲಿ ಪೊಲೀಸರು ಸಹ ಯಶಸ್ವಿಯಾಗಿದ್ದು, ವಾಮಾಚಾರಕ್ಕೆ ಹೆದರಿ ಗೆಳೆಯನನ್ನೇ ಕೊಂದಿದ್ದಾನೆ…