Headlines

nagaraj11081993

ಅಬ್ಬಾ ಇಷ್ಟೊಂದಾ! ಟೀಮ್ ಇಂಡಿಯಾಗೆ ಬಹುಮಾನ ಘೋಷಣೆ

ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಬಿಸಿಸಿಐ ಬರೋಬ್ಬರಿ 131 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಬಹುಮಾನ ಮೊತ್ತವನ್ನು ಭಾರತ ತಂಡದ ಆಟಗಾರರಿಗೆ ಮತ್ತು ಸಿಬ್ಬಂದಿ ವರ್ಗಗಳಿಗೆ ಹಂಚಲಾಗುವುದು ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ಮೊತ್ತ ನೀಡಲಾಗಿತ್ತು. ಈ ಬಾರಿ 6 ಕೋಟಿ ರೂ. ಹೆಚ್ಚಿಸಲಾಗಿದೆ. ಅದರಂತೆ ಟೀಮ್ ಇಂಡಿಯಾ ಬರೋಬ್ಬರಿ 131 ಕೋಟಿ ರೂ.ಗಳ ನಗದು…

Read More

ಗಿಲ್ಲಿಗೆ ಇಷ್ಟ ಆಯ್ತು ಈ ಸೀರಿಯಲ್ ಟೈಟಲ್ ಟ್ರ್ಯಾಕ್

ರಾಣಿ ಸೀರಿಯಲ್ ಮಾರ್ಚ್ 9ರಿಂದ ಪ್ರಸಾರ ಆರಂಭಿಸಿದೆ. ಈ ಧಾರಾವಾಹಿಯ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಹಾಡನ್ನು ಗಿಲ್ಲಿ ನಟ ಅವರು ಇಷ್ಟಪಟ್ಟಿದ್ದಾರೆ. ಅವರ ಹೊಸ ವಿಡಿಯೋ ವೈರಲ್ ಆಗಿದೆ. ಅವರು ಹಾಡನ್ನು ಯಾಕೆ ಇಷ್ಟಪಟ್ಟಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಗಿಲ್ಲಿ ಮಾತಿನಿಂದ ಧಾರಾವಾಹಿಗೆ ಒಂದಷ್ಟು ಹೈಪ್ ಸಿಕ್ಕಿದೆ. ಅವರು ಹೇಳಿದ ಹಾಡಿನ ವಿಡಿಯೋ ಇಲ್ಲಿದೆ ನೋಡಿ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ಅಪ್ಪ ಏಳನೇ ಬಾರಿ ಮದುವೆಯಾಗ್ತಿದ್ದಾರೆ ಯಾರಾದ್ರೂ ತಡೀರಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗ

ಅಹ್ರೌಲಾ, ಮಾರ್ಚ್​ 10: ಅಪ್ಪ ಏಳನೇ ಮದುವೆ(Marriage)ಯಾಗುತ್ತಿರುವುದನ್ನು ತಡೆಯುವಂತೆ ಮಗ ಪೊಲೀಸರ ಬಳಿ ದೂರು ನೀಡಿರುವ ಘಟನೆ ಅಜಂಗಢದ ಅಹ್ರೌಲಾದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ವಿವಾಹ ಸಿದ್ಧತೆಗಳನ್ನು ತಡೆಯಲು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಪ್ಪನಿಗೆ ಎಷ್ಟೇ ಮನವಿ ಮಾಡಿದರೂ ಮತ್ತೊಂದು ಮದುವೆ ಆಗೇ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ, ನೀವಾದ್ರೂ ನಿಲ್ಲಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ. 55 ವರ್ಷದ ವ್ಯಕ್ತಿಯೊಬ್ಬನ ಮೇಲೆ ಅವನ ಸ್ವಂತ ಮಗನೇ…

Read More

ಸೂರ್ಯಕುಮಾರ್​ ಯಾದವ್​​ಗೆ ಅದೃಷ್ಟ ತಂದುಕೊಟ್ಟ ಕಾಪು ಮಾರಿಯಮ್ಮ: ಟಿ20 ವಿಶ್ವಕಪ್​​ ಗೆಲುವಿನ ಬೆನ್ನಲ್ಲೇ ವಿಶೇಷ ಪೂಜೆ

ಉಡುಪಿ, ಮಾರ್ಚ್​ 10: ನ್ಯೂಜಿಲೆಂಡ್​​ ತಂಡದ ವಿರುದ್ಧ ಸೆಣೆಸಾಡಿ ಟಿ20 ವಿಶ್ವಕಪ್​​ನ ಭಾರತ ಕ್ರಿಕೆಟ್​​ ತಂಡ ಮತ್ತೊಮ್ಮೆ ತನ್ನ ಮುಡಿಗೇರಿಸಿಕೊಂಡಿದೆ. ಸತತ ಎರಡನೇ ಬಾರಿಗೆ ಕಪ್​​ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ತಂಡದ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದೊಂದಿಗೆ ವಿಶೇಷ ಭಕ್ತಿಭಾವದ ನಂಟಿದ್ದು, ಉಡುಪಿಯ ಅಳಿಯನ ಹೆಸರಲ್ಲಿ ವಿಶೇಷ ಪೂಜೆಗೆ ಕಾಪು ಕ್ಷೇತ್ರದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು…

Read More

ಮೆಸೇಜ್ ಮಾಡಿ ಲಾಡ್ಜ್​ಗೆ ಕರೀತಿದ್ಲು; ಸ್ನಾನಕ್ಕೆ ಕಳಿಸಿ ಹಣ ದೋಚುತ್ತಿದ್ಲು! ಹನಿಟ್ರ್ಯಾಪ್ ಮಾಡುತ್ತಿದ್ದ ಕತರ್ನಾಕ್ ಲೇಡಿ ಅರೆಸ್ಟ್

ಬೆಳಗಾವಿ, ಮಾರ್ಚ್​ 10: ಶ್ರೀಮಂತ ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಲೆಗೆ ಬೀಳಿಸಿ ಮೋಸ ಮಾಡುತ್ತಿದ್ದ (Honey Trap) ಮಹಿಳೆಯನ್ನು ಬೆಳಗಾವಿ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಫೇಸ್​ಬುಕ್ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದ ಆಕೆ, ಲಾಡ್ಜ್​ಗೆ ಕರೆಸಿ ಅವರ ಹಣ, ಚಿನ್ನ ಸೇರಿ ಅಮೂಲ್ಯ ವಸ್ತುಗಳನ್ನೆಲ್ಲಾ ದೋಚುತ್ತಿದ್ದಳು ಎಂದು ತಿಳಿದುಬಂದಿದೆ. ಮೋಸ ಹೋಗಿದ್ದ ವ್ಯಕ್ತಿಯೊಬ್ಬರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಫೇಸ್​ಬುಕ್, ಇನ್ಸ್ಟಾಗ್ರಾಂ ಮೂಲಕ…

Read More

ವಿಪರೀತ ಕಿರುಕುಳ: ದೂರು ನೀಡಿದ ಮೆಗಾಸ್ಟಾರ್ ಕುಟುಂಬದ ಸೊಸೆ

ಮೆಗಾಸ್ಟಾರ್ (Megastar) ಕುಟುಂಬದ ಸೊಸೆ, ಸ್ವತಃ ಜನಪ್ರಿಯ ನಟಿಯಾಗಿರುವ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಲಾವಣ್ಯಾ ತ್ರಿಪಾಠಿ, ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಅವರೊಡನೆ ವಿವಾಹವಾಗಿದ್ದು ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ಸಹ ನೀಡಿದ್ದಾರೆ. ಇದೀಗ ನಟಿ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ದೂರು ನೀಡಿರುವುದು ಕುಟುಂಬದವರ ವಿರುದ್ಧ ಅಲ್ಲ ಬದಲಿಗೆ ಆನ್​​ಲೈನ್​​​ನಲ್ಲಿ ತಮಗೆ ಕಿರುಕುಳ ನೀಡುತ್ತಿರು ವ್ಯಕ್ತಿಗಳ ಬಗ್ಗೆ. ಲಾವಣ್ಯಾ ತ್ರಿಪಾಠಿ ಅವರನ್ನು ಹಾಗೂ…

Read More

ಪತ್ನಿ ಬಳಿಕ ತಾಯಿಗೆ ದುಬಾರಿ ಉಡುಗೊರೆ ಕೊಟ್ಟ ಅಲ್ಲು ಅರ್ಜುನ್

ಅಲ್ಲು ಅರ್ಜುನ್ (Allu Arjun) ಸ್ಟಾರ್ ಪ್ಯಾನ್ ಇಂಡಿಯಾ ನಟ. ಅವರ ನಟನೆಯ ‘ಪುಷ್ಪ 2’ ಸಿನಿಮಾ ಹಲವು ಹೊಸ ಬಾಕ್ಸ್ ಆಫೀಸ್ ದಾಖಲೆಗಳನ್ನು ಬರೆದಿವೆ. ‘ಪುಷ್ಪ 2’ ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರು ಸುಮಾರು 300 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಅಲ್ಲು ಅರ್ಜುನ್, ಭಾರತದ ಅತ್ಯಂತ ದುಬಾರಿ ಪ್ಯಾನ್ ಇಂಡಿಯಾ ನಟರುಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ತಮ್ಮ ಪತ್ನಿಗೆ ದುಬಾರಿಯಾದ ಮರ್ಸಿಡೀಸ್ ಬೆಂಜ್ ಕಾರೊಂದನ್ನು…

Read More

ಪಾಕಿಸ್ತಾನ್ ಸೂಪರ್​ ಲೀಗ್​ಗೆ ‘ಇಂಧನದ ಕೊರತೆ’

ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL) ಟಕ್ಕರ್ ಕೊಡಲು ಮುಂದಾಗಿದ್ದ ಪಾಕಿಸ್ತಾನ್ ಸೂಪರ್ ಲೀಗ್​ಗೆ (PSL) ಇದೀಗ  ‘ಇಂಧನದ ಕೊರತೆ’ ಎದುರಾಗಿದೆ. ಅಂದರೆ ಪಾಕ್​ನಲ್ಲಿ ತೈಲ ಬಿಕ್ಕಟ್ಟು ಎದುರಾಗಿದ್ದು, ಹೀಗಾಗಿ ಟೂರ್ನಿಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಐಪಿಎಲ್​ ಆರಂಭದ ಸಂದರ್ಭದಲ್ಲೇ ಟೂರ್ನಿ ಶುರು ಮಾಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದ್ದರು. ಅದರಂತೆ ಮಾರ್ಚ್ 26 ರಿಂದ ಪಿಎಸ್​ಎಲ್​ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೀಗ ಪಾಕಿಸ್ತಾನದಲ್ಲಿ ಇಂಧನದ ಕೊರತೆ ಎದುರಾಗಿರುವ ಕಾರಣ ಟೂರ್ನಿಯ ವೇಳಾಪಟ್ಟಿಯನ್ನು ಬದಲಿಸಲು…

Read More

Hindu Rituals: ಶುಭಕಾರ್ಯಗಳಲ್ಲಿ ಪುರುಷರು ಭುಜದ ಮೇಲೆ ಶಾಲು ಧರಿಸುವುದೇಕೆ? ಇದರ ಹಿಂದಿನ ಆಧ್ಯಾತ್ಮಿಕ ರಹಸ್ಯ ಇಲ್ಲಿದೆ

ಅನಾದಿಕಾಲದಿಂದಲೂ ಪೂಜಾ ಸಮಯ, ಹೋಮ, ಹವನ, ವಿವಾಹ ಹಾಗೂ ಇತರ ಶುಭಕಾರ್ಯಗಳಲ್ಲಿ ಪುರುಷರು ಭುಜದ ಮೇಲೆ ಅಂಗವಸ್ತ್ರ(ಶಾಲು) ವನ್ನು ಧರಿಸುತ್ತಾ ಬಂದಿದ್ದಾರೆ. ಇದು ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಒಂದು ಸಾಂಸ್ಕೃತಿಕ ಸಂಪ್ರದಾಯವಾಗಿದೆ. ಶುಭಕಾರ್ಯಕ್ಕೆ ಸಿದ್ಧರಾಗಿದ್ದೇವೆ ಎಂಬುದರ ಸಂಕೇತವಾಗಿ ಈ ವಸ್ತ್ರವನ್ನು ಧರಿಸಲಾಗುತ್ತದೆ. ಇದು ನಾವು ಒಂದು ಸಂಕಲ್ಪವನ್ನು ತೊಟ್ಟಿದ್ದೇವೆ, ವ್ರತಧಾರಿಗಳಾಗಿದ್ದೇವೆ ಮತ್ತು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದೇವೆ ಎಂಬುದರ ಸೂಚಕವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ…

Read More

ಎಸ್​​​ಪಿಬಿ ಅವರ ಮೇಲಾಗಿತ್ತು ಮಾಟ? ಮನೆಯವರಿಗೆ ಅನುಮಾನ ಏಕೆ ಬಂತು?

ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ (SPB) ಅವರ ಹಾಡುಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಹಲವು ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ. ಹಿಂದಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ಎದುರಿಸಿದ ಗಂಭೀರ ಗಾಯನ ಸಮಸ್ಯೆಗಳು, ಅವುಗಳಿಂದ ಉಂಟಾದ ಮಾನಸಿಕ ಯಾತನೆ, ಅವರ ಕುಟುಂಬ ಸದಸ್ಯರ ಆತಂಕ ಮತ್ತು ಅಂತಿಮವಾಗಿ ಶಸ್ತ್ರಚಿಕಿತ್ಸೆಯ ಮೂಲಕ ಚೇತರಿಸಿಕೊಂಡದ್ದನ್ನು ಹಂಚಿಕೊಂಡರು. ಗಂಟಲು ಸಮಸ್ಯೆ ಆದಾಗ ಅವರು ನರಕ ನೋಡಿದರು. ‘ಗೀತಾಂಜಲಿ’ ಚಿತ್ರಗಳಲ್ಲಿ ಲಾಲಾಲಿ ಹಾಡನ್ನು ರೆಕಾರ್ಡ್ ಮಾಡಬೇಕಾಯಿತು. ಆ ಸಮಯದಲ್ಲಿ, ಅವರ…

Read More