All posts by nagaraj11081993

ಮಂಗಳವಾರ ಈ ಕೆಲಸಗಳನ್ನು ಮಾಡಲೇಬೇಡಿ: ಮಾಡಿದ್ರೆ ಸಂಕಷ್ಟ ತಪ್ಪಿದ್ದಲ್ಲ!

ಮಂಗಳವಾರ ಈ ಕೆಲಸಗಳನ್ನು ಮಾಡಲೇಬೇಡಿ: ಮಾಡಿದ್ರೆ ಸಂಕಷ್ಟ ತಪ್ಪಿದ್ದಲ್ಲ!

ಮಂಗಳವಾರ ಮಂಗಳ ಗ್ರಹದ ದಿನ. ಮಂಗಳ ಗ್ರಹವು ಧರಿತ್ರಿಯ ಮಗ, ಮತ್ತು ಭೂಮಿಯ ಮೇಲೆ ವಾಸಿಸುವವರು ಮಂಗಳ ಗ್ರಹದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಮಂಗಳ ಗ್ರಹವು ಅಪಘಾತಗಳು, ಘರ್ಷಣೆಗಳು ಮತ್ತು ನಷ್ಟಗಳಿಗೆ ಕಾರಣವಾಗಿದೆ. ಅದಕ್ಕಾಗಿಯೇ ಸಾಮಾನ್ಯವಾಗಿ ಮಂಗಳವಾರದಂದು, ಮಂಗಳ ಗ್ರಹವು ತನ್ನ ಪ್ರಭಾವದಲ್ಲಿರುವಾಗ, ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಮಂಗಳವಾರದಂದು ಯಾವ ಕೆಲಸಗಳನ್ನೆಲ್ಲ ಮಾಡಬಹುದು? ಯಾವುದನ್ನೆಲ್ಲ ಮಾಡಿದರೆ ತೊಂದರೆ ಎಂಬುದನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತುತಜ್ಞರಾದ ಡಾ. ಬಸವರಾಜ ಗುರೂಜಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ.

ಮಂಗಳವಾರ ಮಾಡಬಾರದ ಕೆಲಸಗಳು ಯಾವುವು?

  • ಮಂಗಳವಾರ ಉಗುರುಗಳನ್ನು ಕತ್ತರಿಸಬೇಡಿ ಅಥವಾ ಕ್ಷೌರ ಮಾಡಬೇಡಿ.
  • ನೀವು ಮಂಗಳವಾರ ಸಾಲವನ್ನು ನೀಡಿದರೆ, ಆ ಹಣವನ್ನು ಮರಳಿ ಪಡೆಯುವುದು ತುಂಬಾ ಕಷ್ಟ.
  • ನೀವು ಸಾಲವನ್ನು ತೆಗೆದುಕೊಂಡರೆ, ಅದು ಅನೇಕ ದುಃಖಗಳು ಮತ್ತು ಅನಗತ್ಯ ಕೆಲಸಗಳಿಗೆ ಖರ್ಚು ಆಗುತ್ತದೆ ಮತ್ತು ಅದನ್ನು ಮರುಪಾವತಿಸಲು ಸಾಧ್ಯವಾಗದ ಅಪಾಯವಿದೆ.
  • ಮಂಗಳವಾರ ಹೊಸ ಬಟ್ಟೆಗಳನ್ನು ಧರಿಸಬೇಡಿ.
  • ತುರ್ತು ಇಲ್ಲದಿದ್ದರೆ ಮಂಗಳವಾರ ಪ್ರಯಾಣಿಸಬೇಡಿ.
  • ಮಂಗಳವಾರ ಉಪವಾಸ ಮಾಡುವವರು ರಾತ್ರಿಯಲ್ಲಿ ಉಪ್ಪು ಹಾಕಿದ ಆಹಾರವನ್ನು ಸೇವಿಸಬಾರದು.
  • ಮಂಗಳವಾರ ನದಿಯಲ್ಲಿ ಸ್ನಾನ ಮಾಡಬಾರದು.
  • ದೈವಿಕ ಕಾರ್ಯಗಳಿಗಾಗಿ ಯಾವುದೇ ಸಮಯದಲ್ಲಿ ಶೈಕ್ಷಣಿಕ ಮತ್ತು ವೈದ್ಯಕೀಯ ಸಾಲಗಳನ್ನು ನೀಡಬಹುದು.

ಮಂಗಳವಾರ ಮಾಡಬೇಕಾದ ಕೆಲಸಗಳು ಯಾವುವು?

  • ಮಂಗಳವಾರ ಆಂಜನೇಯನನ್ನು ಧ್ಯಾನಿಸುವುದರಿಂದ ಧೈರ್ಯ ಬರುತ್ತದೆ ಮತ್ತು ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.
  • ಸುಬ್ರಹ್ಮಣ್ಯ ದೇವರನ್ನು ಪೂಜಿಸುವುದರಿಂದ ಮಂಗಳನ ಪ್ರಭಾವದಿಂದ ಉಂಟಾಗುವ ಅಪಾಯಗಳನ್ನು ತಡೆಯಬಹುದು.
  • ಮಂಗಳವಾರ ಕಾಳಿ ದೇವಿಯನ್ನು ಧ್ಯಾನಿಸುವುದರಿಂದ ಶತ್ರುಗಳ ಮೇಲೆ ಜಯ ಸಿಗುತ್ತದೆ.
  • ಮಂಗಳವಾರ ಕೆಂಪು ಬಟ್ಟೆಗಳನ್ನು ಧರಿಸಿ ಮತ್ತು ಕೆಂಪು ಹೂವುಗಳಿಂದ ಬಯಸಿದ ದೇವರನ್ನು ಪ್ರಾರ್ಥಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
  • ಜಾತಕದಲ್ಲಿ ಮಂಗಳನು ​​ಕೆಟ್ಟ ದೃಷ್ಟಿಯಿಂದ ಕಾಣಿಸಿಕೊಂಡರೆ, ಕೆಂಪು ಬಟ್ಟೆಗಳನ್ನು ಧರಿಸಬಾರದು.
  • ಮಂಗಳವಾರ ಸಾಲವನ್ನು ತೀರಿಸಿದರೆ. ಆ ಸಾಲವನ್ನು ಬೇಗನೆ ತೀರಿಸಲಾಗುತ್ತದೆ.
  • ಮಂಗಳವಾರ ನಮ್ಮ ಬ್ಯಾಂಕ್ ಖಾತೆಯಲ್ಲಿ ಬಹಳಷ್ಟು ಹಣವನ್ನು ಠೇವಣಿ ಇಡುವುದರಿಂದ, ಅದು ಬೆಳೆಯುತ್ತದೆ.
  • ಮಂಗಳವಾರ ರಾಹುಕಾಲದಲ್ಲಿ (ಮಧ್ಯಾಹ್ನ 3 ರಿಂದ ಸಂಜೆ 4.30 ರವರೆಗೆ) ದುರ್ಗಾ ದೇವಿ ದರ್ಶನ, ದುರ್ಗಾ ಸ್ತೋತ್ರಗಳನ್ನು ಪಠಿಸುವುದರಿಂದ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುತ್ತದೆ.
  • ಹನುಮಂತನನ್ನು ಸಿಂಧೂರದಿಂದ ಪೂಜಿಸುವುದು ಮತ್ತು ಸುಬ್ರಹ್ಮಣ್ಯ ದೇವರಿಗೆ ಹನ್ನೊಂದು ಪ್ರದಕ್ಷಿಣೆ ಹಾಕುವುದರಿಂದ ದೋಷದ ಪರಿಣಾಮಗಳು ಕಡಿಮೆಯಾಗುತ್ತವೆ.

ಜ್ಯೋತಿಷ್ಯ ಸಂಬಂಧಿತ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 10ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿರ್ಭಾವುಕ ನಿರ್ಧಾರ ತೆಗೆದುಕೊಳ್ಳಬೇಕು, ಯಾರನ್ನೂ ಹಚ್ಚಿಕೊಳ್ಳಬಾರದು ಎಂದುಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುತ್ತಿರುವುದು ತಲುಪಲು ಸಾಧ್ಯ ಇಲ್ಲದಷ್ಟು ಎತ್ತರದಲ್ಲಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ. ನೀವು ಒಪ್ಪಿಸಿದ ಕೆಲಸ- ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವುದಾಗಿ ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವುದರಿಂದ ನೀವು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಪ್ರಯಾಣಕ್ಕೆ ಹೆಚ್ಚು ಖರ್ಚು ಮಾಡುವ ಯೋಗ ಇದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ನಿಮ್ಮ ಬದ್ಧತೆಗೆ ಸ್ನೇಹಿತರು- ಸಂಬಂಧಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಇತರರು ತಮ್ಮಿಂದ ಆಗದು ಎಂದು ಅರ್ಧಕ್ಕೇ ನಿಲ್ಲಿಸಿದಂಥ ಪ್ರಾಜೆಕ್ಟ್ ಅನ್ನು ನೀವು ಕೈಗೆತ್ತಿಕೊಂಡು, ಸಮಾಧಾನ ಆಗುವ ಮಟ್ಟಕ್ಕೆ ಪೂರ್ಣ ಮಾಡಲಿದ್ದೀರಿ. ಹಣಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಂಗಾತಿ ಜೊತೆಗೆ ಲಾಂಗ್ ಡ್ರೈವ್ ಗೆ ತೆರಳುವಂಥ ಯೋಗ ಇದೆ. ಇಷ್ಟು ಸಮಯ ನಿಮ್ಮ ಮನಸ್ಸಲ್ಲಿ ಇಟ್ಟುಕೊಂಡು, ಹೇಳದೇ ಇದ್ದಂಥ ಕೆಲವು ವಿಷಯಗಳನ್ನು ಹಂಚಿಕೊಳ್ಳಲಿದ್ದೀರಿ. ಹೊಸ ಕೋರ್ಸ್ ಸೇರಿಕೊಳ್ಳುವುದಕ್ಕೆ ವಿಚಾರಣೆ ನಡೆಸಲಿದ್ದೀರಿ. ವೃತ್ತಿಪರರು ನೀವಾಗಿದ್ದರೆ ನಿಮಗೆ ಗೊತ್ತಿರುವ ಮಾಹಿತಿಯೇ ಇದ್ದರೂ ಅದರ ಬಗ್ಗೆ ಇತರರಿಗೆ ಮಾಹಿತಿ ನೀಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಪರಿಶೀಲನೆ ಮಾಡಿಕೊಳ್ಳುವುದು ಒಳ್ಳೆಯದು.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸ್ನೇಹಿತರ ಜೊತೆಗೆ ದೂರ ಪ್ರಯಾಣ ಮಾಡುವಂಥ ಯೋಗ ಇದೆ. ಅದು ಕೂಡ ಯಾವುದೇ ಯೋಜನೆ ಇಲ್ಲದೆ ದಿಢೀರ್ ಹೊರಟುಬಿಡುವಂತೆ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರು ಯಾವುದೇ ಸನ್ನಿವೇಶವನ್ನು ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡುವುದಕ್ಕೆ ಹೋಗಬೇಡಿ. ಲಾಭಕ್ಕೆ ಬರಲಾರದು ಎಂದೆನಿಸಿದ್ದನ್ನು ನಿಲ್ಲಿಸಿಬಿಡುವುದು ಒಳ್ಳೆಯದು. ಆಯುರ್ವೇದ ಔಷಧಗಳ ವಿತರಣೆ ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮನೆಯ ಖರ್ಚು ವೆಚ್ಚಗಳು ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿಗೆ ಆಗಲಿದೆ. ಆದಾಯ ಹಾಗೂ ಅದನ್ನು ಬಳಸುವುದಕ್ಕೂ ತಾಳೆ ಆಗುತ್ತಿಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಆದಾಯದ ಮೂಲ ಜಾಸ್ತಿ ಮಾಡಿಕೊಳ್ಳಲು ಹಾಕುವಂಥ ಶ್ರಮ ಫಲ ನೀಡುತ್ತದೆ. ಸಂಗಾತಿ ಜತೆಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಅವರ ಬೇಕು- ಬೇಡಗಳನ್ನು ಕೇಳಿಕೊಂಡು, ಅದನ್ನು ಒದಗಿಸಿಕೊಡಲು ಆದ್ಯತೆ ನೀಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮ ನಿಲವು- ಉದ್ದೇಶದ ಬಗ್ಗೆ ಸಂಬಂಧಿಕರು ಆಕ್ಷೇಪದ ಮಾತುಗಳನ್ನು ಹೇಳಲಿದ್ದಾರೆ. ನೀವು ಸಹ ಇಂಥ ಮಾತುಗಳಿಗೆ ಅಲ್ಲಿಂದ ಅಲ್ಲಿಗೆ ಎಂಬಂತೆ ಉತ್ತರವನ್ನು ಸಹ ನೀಡುತ್ತೀರಿ. ದೊಡ್ಡ ಅಳತೆಯ ಸೈಟು ಇರುವವರು ಅದನ್ನು ಮಾರಾಟ ಮಾಡಿ, ಕಟ್ಟಿರುವ ಮನೆ ಖರೀದಿ ಮಾಡುವ ಬಗ್ಗೆ ಆಲೋಚಿಸುತ್ತೀರಿ. ಅದರಲ್ಲೂ ತಿಂಗಳಾ ತಿಂಗಳು ಬಾಡಿಗೆ ರೂಪದಲ್ಲಿ ನಿಗದಿತ ಆದಾಯ ಮಾಡಿಕೊಳ್ಳುವ ಕಡೆಗೆ ಗಮನ ಇರಲಿದೆ.

ಸ್ವಾತಿ ಎನ್​​ಕೆ 

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 10ರ ದಿನಭವಿಷ್ಯ

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಹತ್ತಿರ ಏನಿದೆಯೋ ಅದು ಮಾತ್ರ ನಿಮ್ಮದು. ನೀವು ಬೇರೆಯವರಿಗೆ ಕೊಟ್ಟಂಥ ಸಾಲ, ಈಗಾಗಲೇ ಕೆಲಸ ಮಾಡಿಯಾಗಿದೆ ಅದರ ಹಣ ಬರಬೇಕಿದೆ, ಸ್ನೇಹಿತರು- ಸಂಬಂಧಿಕರು ಸಹಾಯ ಮಾಡುವುದಾಗಿ ಕೊಟ್ಟಂಥ ಮಾತು ಇದ್ಯಾವುದನ್ನೂ ನೆಚ್ಚಿಕೊಂಡು ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದಕ್ಕೆ ಹೋಗಬೇಡಿ. ಹೋಟೆಲ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಪ್ರೀತಿಯಲ್ಲಿ ಇರುವವರು ಜೊತೆಯಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಭವಿಷ್ಯದ ಬಗ್ಗೆ ಗಂಭೀರವಾದ ಚರ್ಚೆ ಸಹ ಮಾಡಲಿದ್ದೀರಿ. ಇಷ್ಟು ಸಮಯ ಮಾತನಾಡದೆ ಉಳಿದು ಹೋಗಿದ್ದ ಕೆಲವು ಸಂಗತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಯಾರ ಜತೆಗೂ ಅತಿಯಾದ ಸಲುಗೆ ಬೇಡ. ಇದನ್ನು ಮೀರಿಯೂ ನಡೆದುಕೊಂಡಲ್ಲಿ ಎಚ್ಚರಿಕೆ ಮಾತುಗಳನ್ನು ಕೇಳಿಸಿಕೊಳ್ಳುವಂತೆ, ಮುಜುಗರದ ಸನ್ನಿವೇಶ ಎದುರಿಸುವಂತೆ ಆಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಯೋಗ ಇದೆ. ಬಹಳ ಸಮಯದಿಂದ ನೀವು ಹೇಳಬೇಕು ಅಂದುಕೊಳ್ಳುತ್ತಾ ಇದ್ದ ಕೆಲವು ವಿಚಾರಗಳನ್ನು ಸಂಬಂಧ ಪಟ್ಟವರಿಗೆ ಹೇಳಲಿದ್ದೀರಿ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ನೀವು ಕೈಯಿಂದ ಹಣ ಹಾಕಿ, ಮಾಡಿಕೊಟ್ಟ ಕೆಲಸದ ಬಾಕಿ ವಸೂಲಿ ಮಾಡುವುದು ಈ ದಿನ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕುದುರುವುದು ಕಷ್ಟ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.

 

Source link

Horoscope Today 10 March : ಇಂದು ಈ ರಾಶಿಯವರಿಗೆ ದೊಡ್ಡ ಕಾರ್ಯ ನಿರ್ವಹಣೆ ಬರಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಸಪ್ತಮೀ ತಿಥಿಯ ಮಂಗಳವಾರ ಗೆಲ್ಲುವುದು ಸುಲಭವಲ್ಲ, ವಾಗ್ವಾದದಲ್ಲಿ ಹಿನ್ನಡೆ, ಅಧಿಕ ವಿಶ್ರಾಂತಿ ಮಾಡುವಿರಿ, ರಹಸ್ಯ ಮಾತು, ಉದಾತ್ತ ಚಿಂತನೆ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಮಂಗಳವಾರ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ಹರ್ಷಣ, ಕರಣ : ಬವ, ಸೂರ್ಯೋದಯ – 06 – 36 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:34 – 17:03, ಯಮಗಂಡ ಕಾಲ 09:36 – 11:5, ಗುಳಿಕ ಕಾಲ 14:04 – 15:34

ಮೇಷ ರಾಶಿ :

ಇಂದ ಕುಟುಂಬದ ಜೊತೆ ಹಾಸ್ಯ ಮತ್ತು ಸಂತೋಷ ಕಾಲವನ್ನು ಕಳೆಯುವಿರಿ. ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸುಬಿರಿ. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವು ಸಿಗಬಹುದು. ದೂರ ಪ್ರಯಾಣಕ್ಕೆ ವೈದ್ಯರು ನಿರ್ಬಂಧ ಹಾಕಬಹುದು. ಹಣಕ್ಕಾಗಿ ಯಾರನ್ನಾದರೂ ಕೇಳುವ ಸ್ಥಿತಿಯು ಬರಬಹುದು. ನಿಮ್ಮ ಸ್ಥಿರಮತಿಯಿಂದ ಕಷ್ಟದ ಸಂದರ್ಭವನ್ನು ಹಿಡಿತಕ್ಕೆ ತರುವಿರಿ. ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕಾಗುವುದು.

ವೃಷಭ ರಾಶಿ :

ಇಂದು ನಿಮ್ಮ ಸಹೋದರರು ಮತ್ತು ಪತ್ನಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಕುಟುಂಬ ವ್ಯವಸ್ಥೆ ಸರಿಯಾಗಲು ಕೆಲವನ್ನು ಬಿಟ್ಟುಕೊಡಬೇಕಾದೀತು. ಮನೆಯನ್ನು ಬಿಟ್ಟು ಹೋಗಲು ಚೋರ ಭಯವು ಕಾಡಬಹುದು. ಸ್ನೇಹಿತರು ನಿಮ್ಮ ನಿರ್ಲಕ್ಷ್ಯದ ಕಾರಣದಿಂದ ದೂರಾಗಬಹುದು. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಇರಲಿದ್ದು ಇತರರಿಗೆ ಇದು ಅನಿರೀಕ್ಷಿತವೂ ಆಗಬಹುದು. ಸ್ವಾಭಿಮಾನವು ನಿಮ್ಮ ಏಳಿಗೆಗೆ ತಡೆಯನ್ನು ಉಂಟು ಮಾಡಬಹುದು.

ಮಿಥುನ ರಾಶಿ :

ಇಂದು ಅಮೂಲ್ಯವಾದ ವಸ್ತುವು ನಿಮ್ಮ ಪಾಲಾಗಬಹುದು. ಯಶಸ್ಸಿನ ದಿನವಾಗಿರುವುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಹಾಗೂ ಕೊಡುಗೆ ಸಿಗಬಹುದು. ವ್ಯಾಪಾರ ಮಾಡುವವರಿಗೂ ಈ ದಿನ ಪ್ರಯೋಜನಕಾರಿ. ಸಾಲವನ್ನು ಹಿಂಪಡೆಯಲು ಇಂದು ತಿರುಗಾಟ ಮಾಡುವಿರಿ. ಕಲಾಕಾರರಿಗೆ ಉತ್ತಮ ಲಾಭವು ಆಗಬಹುದು. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಪೂರ್ಣವಾಗುವುದು‌. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ.

ಕರ್ಕಾಟಕ ರಾಶಿ :

ಇಂದು ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ಮನಸ್ಸು ಚಂಚಲವಾಗಿ ಇರುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಸರ್ಕಾರದಿಂದ ಸಾಲದ ಬೆಂಬಲ ದೊರೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ನೀವು ಮರೆತು ವ್ಯವಹರಿಸುವಿರಿ. ಇನ್ನೊಬ್ಬರ ಮಾತಿನಿಂದ ಸಿಟ್ಟಾಗಬಹುದು. ಕೆಲವು ವಿಷಯಕ್ಕೆ ಕುಟುಂಬದಿಂದ ವಿರೋಧವಿರುವುದು. ಸ್ನೇಹಿತರ ಜೊತೆ ಸುತ್ತಾಟ ಮತ್ತು ಉತ್ತಮ ಭೋಜನವನ್ನು ಮಾಡುವಿರಿ.

ಸಿಂಹ ರಾಶಿ :

ಇಂದು ಕೆಲಸದ ಸ್ಥಳದಲ್ಲಿ ಕಾರಣವಿಲ್ಲದೆ ಯಾರೊಂದಿಗೂ ಜಗಳವಾಡಬೇಡಿ. ತಂದೆಯಿಂದ ಬೆಂಬಲ ಸಿಗಲಿದೆ. ಆರ್ಥಿಕ ಲಾಭ ಉಂಟಾಗಲಿದೆ. ವ್ಯವಹಾರದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳು ಇಂದು ಫಲಪ್ರದವಾಗದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರುವನ್ನು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ಸಣ್ಣ ವಿಷಯಕ್ಕೆ ಸ್ನೇಹಿತರ ಜೊತೆಗಿನ ಸಂಬಂಧವು ಹಾಳಾಗಬಹುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡು ಕೈ ಬಿಡಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಯೋಗ್ಯ ಚಿಕಿತ್ಸೆಯನ್ನು ಕೊಡುವಿರಿ.

ಕನ್ಯಾ ರಾಶಿ :

ಇಂದಿನ ಸಮಯ ವಿವಾಹಿತರಿಗೆ ಸಂತೋಷದಿಂದ ತುಂಬಿರುತ್ತದೆ. ಅವಿವಾಹಿತರು ಹೊಸ ಸಂಬಂಧವನ್ನು ಕಂಡುಕೊಳ್ಳಬಹುದು. ಅದನ್ನು ಸರಿಯಾಗಿ ಮುಂದುವರಿಸುವುದು ನಿಮ್ಮ ಕೈಯಲ್ಲಿದೆ. ಸಂಗಾತಿಯ ಮಾತಿನಿಂದ ಸಾಲವನ್ನು ಮಾಡಬೇಕಾಗುವುದು. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ. ಮಕ್ಕಳನ್ನು ಸಂತೋಷವಾಗಿ ಇಡುವುದು ಆಗದು. ಬಹಳ ದಿನಗಳಿಂದ ಒತ್ತಡದಲ್ಲಿ ಇದ್ದ ಕಾರಣ ಇಂದು ಎಲ್ಲವನ್ನೂ ಮರೆಯು ದಿನದ ಹೆಚ್ಚಿನ ಸಮಯವನ್ನು ವಿಶ್ರಾಂತಿಯಲ್ಲಿಯೇ ಕಳೆಯುವಿರಿ.

ತುಲಾ ರಾಶಿ :

ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು. ವ್ಯವಹಾರದಲ್ಲಿ ಹಣದ ಲಾಭವಾಗಲಿದೆ. ತಂದೆ ತಾಯಿಯರ ಸೇವೆಯನ್ನು ಮಾಡುವ ಅವಕಾಶ ಸಿಗುವುದು. ಮನೆಯ ಕೆಲಸವು ಆಗಿಲ್ಲವೆಂದು ಕೋಪವು ಇರಲಿದ್ದು ಅದನ್ನು ಪ್ರಕಟಿಸುವಿರಿ. ಉದ್ಯೋಗವನ್ನು ಕೊಡಿಸಲು ನಿಮಗೆ ಹಣವನ್ನು ಕೇಳಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ಬೇರೆಯವರ ಒತ್ತಡದಿಂದಾಗಿ ಹೇಳದೇ ಮುಚ್ಚಿಡುವಿರಿ. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಪಾಪಪ್ರಜ್ಞೆಯಿಂದ ಹೊರಬರಲು ನಿಮಗೆ ಆಗದು.

ವೃಶ್ಚಿಕ ರಾಶಿ :

ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ಇದಲ್ಲದೆ ಮನೆಯಲ್ಲಿ ಹೊಸ ವಾಹನ ಖರೀದಿಸುವ ಸಾಧ್ಯತೆಯಿದೆ. ಆತಂಕ ಮತ್ತು ನಿರಾಸಕ್ತಿಯಿಂದ ನಿಮ್ಮ ಮೇಲೆ ನಿಮಗೆ ಹಿಡಿತ ಸಾಲದು. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಭೂಮಿಯಿಂದ ಇಂದು ಸಂಪತ್ತು ಸಿಗಬಹುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ಬೇಡಬೆಂದು ಬಿಟ್ಟಿದ್ದನ್ನು ಮತ್ತೆ ಎತ್ತಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾದೀತು.

ಧನು ರಾಶಿ :

ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಬಂಧುಗಳ ವಿಯೋಗವೂ ಆಗಬಹುದು. ಸ್ನೇಹಿತರು ಕೇಳಿದರೂ ಸಹಾಯ ಮಾಡದೇ ಇರುವುದು, ನಿಮಗೆ ಅನುಮಾನವು ಬರುವಂತೆ ಮಾಡುವುದು. ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾದುದ್ದು, ನಿಮಗೆ ಖುಷಿ ಕೊಡುವುದು.

ಮಕರ ರಾಶಿ :

ನಿಮ್ಮ ವ್ಯವಹಾರವನ್ನು ಮುನ್ನಡೆಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತೀರಿ. ಕಠಿಣ ಪರಿಶ್ರಮವು ನಿಷ್ಫಲವೆಂದು ಬೇಸರಿಸುವುದು ಬೇಡ.‌ ಯಾವುದೂ ನಿಷ್ಪ್ರಯೋನವಾಗದು. ಸಮಯ ಬೇಕಷ್ಟೇ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ಮಕ್ಕಳ ಶುಭವಾರ್ತೆಯು ಸಂತಸಕೊಡಬಹುದು.

ಕುಂಭ ರಾಶಿ :

ನಿಮ್ಮ ಜೀವನವನ್ನು ಬದಲಾಯಿಸಬಹುದಾದ ಕೆಲವು ಒಳ್ಳೆಯ ಸುದ್ದಿಗಳು ನಿಮಗೆ ಸಿಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗಲಿದೆ. ಹಳೆಯ ವಿವಾದಗಳು ಕೊನೆಗೊಳ್ಳಲಿವೆ ಯೋಜನೆಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡುವ ಅವಶ್ಯಕತೆ ಇದೆ. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು. ಕಳೆದುದ್ದು ಸಣ್ಣ ವಸ್ತುವೇ ಆದರೂ ಬಹಳ ಬೇಸರಗೊಳ್ಳುವಿರಿ.

ಮೀನ ರಾಶಿ :

ವ್ಯಾಪಾರ ಮಾಡುವವರಿಗೆ ಈ ದಿನ ಲಾಭದಾಯಕ. ಇಂದು ನೀವು ಸರ್ಕಾರದಿಂದ ಬರುವ ಹಣವನ್ನು ಪಡೆದುಕೊಳ್ಳಬಹುದು. ನಿಮ್ಮ ಸಂಗಾತಿಯಿಂದ ಕೆಲವು ಕಾರ್ಯಗಳಿಗೆ ಬೆಂಬಲವನ್ನು ಪಡೆಯಬಹುದು. ಅನಪೇಕ್ಷಿತ ಮಾತುಗಳನ್ನು ನೀವು ಯಾರ ಜೊತೆಯೂ ಆಡುವುದು ಬೇಡ. ಸರ್ಕಾರದ ಕಡೆಯಿಂದ ಆಗುವ ನಿಮ್ಮ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ. ಆರೋಗ್ಯವೂ ಕೆಡಬಹುದು. ನಿಮಗೆ ಬರುವ ಆಸ್ತಿಯಲ್ಲಿ ಹೆಚ್ಚಿನ ಲಾಭವನ್ನು ಅಪೇಕ್ಷಿಸುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಗಲ್ಫ್ ರಾಷ್ಟ್ರಗಳ ಯುದ್ಧ..ಬೆಂಗಳೂರಿಗೂ ಬಿಸಿ: ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು, (ಮಾರ್ಚ್ 09): ಗಲ್ಫ್​ ರಾಷ್ಟ್ರಗಳ ಯುದ್ಧದ ಬಿಸಿ ಬೆಂಗಳೂರಿಗೆ ತಟ್ಟಿದೆ. ಬೆಲೆ ಏರಿಕೆ ನಡುವೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಹೋಟೆಲ್ ಬಂದ್ ಆಗುವ ಆತಂಕ ಎದುರಾಗಿದೆ. ಏಕಾಏಕಿ ಗ್ಯಾಸ್ ಸರಬಾರದು ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಎಂದು ಹೊಟೆಲ್ ಮಾಲೀಕರ ಸಂಘ ಎಚ್ಚರಿಸಿದೆ.

ಹೋಟೆಲ್ ಅಸೋಸಿಯೇಷನ್ ನ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಈ ಕುರಿತು ಪ್ರತಿಕ್ರಿಯಿಸಿದ್ದು, ಇದು ನಮ್ಮ ನಿರ್ಧಾರ ಅಲ್ಲ ಸರ್ಕಾರ ನಮ್ಮ ಮೇಲೆ ಹಾಕುತ್ತಿರುವ ಒತ್ತಡ ಎಂದಿದ್ದಾರೆ. ಮೊದಲೇ ನಮಗೆ ಮುನ್ಸೂಚನೆ ನೀಡಿದ್ರೆ ಈ ರೀತಿಯ ಪರಿಸ್ಥಿತಿ ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ. ನಾವು ಬಂದ್ ಮಾಡೋದಕ್ಕೆ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ನಾಳೆ ಮಧ್ಯಾಹ್ನಕ್ಕೆ ಆಗುವಷ್ಟು ಸಿಲಿಂಡರ್ ಮಾತ್ರ ನಮ್ಮ ಹತ್ರ ಇದೆ. ಅಷ್ಟರೊಳಗೆ ಸರ್ಕಾರ ಪೂರೈಕೆ ಮಾಡದಿದ್ರೆ ಎಲ್ಲಾ ಹೋಟೆಲ್ ಗಳು ಬಂದ್ ಮಾಡಲಾಗುತ್ತೆ ಎಂದು ಕೃಷ್ಣರಾಜ್ ಹೇಳಿದ್ದಾರೆ. 15 ದಿನಗಳ ಮೊದಲೇ ಒಂದು ಸೂಚನೆ ನೀಡಬೇಕಿತ್ತು . ದಿಢೀರ್ ಪೂರೈಕೆ ಸ್ಥಗಿತಗೊಂಡರೆ ನಾವು ಬಂದ್ ಮಾಡದೇ ಬೇರೆ ದಾರಿ ಇಲ್ಲ ಎಂದಿದ್ದಾರೆ. ಹೊಟೆಲ್ ಮಾಲೀಕರ ಸಂಘ ಯಾವುದೇ ಬಂದ್‌ಗೆ ಕರೆ ಕೊಟ್ಟಿಲ್ಲ. ಆದರೆ ಆಹಾರ, ತಿನಿಸುಗಳು ಇಲ್ಲದಿದ್ದರೆ ಬಂದ್ ಮಾಡಲೇಬೇಕು ಎಂದಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

Source link

ಕಾಪು ಮಾರಿಯಮ್ಮನ ಸನ್ನಿಧಿಗೆ ಭೇಟಿ ನೀಡಿದ ಬಳಿಕ ನಾಯಕನಾಗಿ ಆಯ್ಕೆ; ಇಷ್ಟರಲ್ಲೇ ಉಡುಪಿಗೆ ಬರಲಿರುವ ಸೂರ್ಯ

ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು (T20 World Cup 2026) ಗೆದ್ದುಕೊಂಡಿತು. ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ತಮ್ಮ ಮೊದಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ವಿಶ್ವಕಪ್ ಗೆದ್ದ ಭಾರತದ ಐದನೇ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಸ್ತುತ ಭಾರತ ಕ್ರಿಕೆಟ್​ನ ಮನೆಮಾತಾಗಿರುವ ಸೂರ್ಯಕುಮಾರ್ ಯಾದವ್​ಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಸೂರ್ಯಕುಮಾರ್ ಯಾದವ್ ಕರ್ನಾಟಕದ ಅಳಿಯ ಎಂದರೂ ತಪ್ಪಾಗಲಾರದು. ಏಕೆಂದರೆ ಸೂರ್ಯಕುಮಾರ್ ಅವರ ಮಡದಿ ಕರ್ನಾಟಕದ ಉಡುಪಿ ಮೂಲದವರು.

ಕಾಪು ಮಾರಿಯಮ್ಮನ ಪರಮ ಭಕ್ತ

ವಾಸ್ತವವಾಗಿ ಸೂರ್ಯಕುಮಾರ್ ಯಾದವ್ ಅವರ ವಿಶ್ವಕಪ್ ವಿಜೇತ ಹಾದಿ ಅಷ್ಟು ಸುಲಭವಾಗಿರಲಿಲ್ಲ. 2024 ರ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ಬಳಿಕ ರೋಹಿತ್ ಶರ್ಮಾ ನಾಯಕತ್ವ ತೊರೆದಿಲ್ಲದೆ, ಈ ಮಾದರಿಗೆ ವಿದಾಯ ಹೇಳಿದರು. ರೋಹಿತ್ ಜತೆಗೆ ಕೊಹ್ಲಿ ಕೂಡ ನಿವೃತ್ತಿ ಘೋಷಿಸಿದರು. ಈ ಇಬ್ಬರು ದಿಗ್ಗಜರ ಅನುಪಸ್ಥಿತಿಯಲ್ಲಿ ಟಿ20 ತಂಡದ ನಾಯಕತ್ವವಹಿಸಿಕೊಂಡ ಸೂರ್ಯ, ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದರು. ಆದಾಗ್ಯೂ ಆಟಗಾರನಾಗಿ ಸೂರ್ಯಕುಮಾರ್ ಯಶಸ್ವಿಯಾಗಿದ್ದಕ್ಕಿಂತ ಎಡವಿದ್ದೆ ಹೆಚ್ಚು. ಅಂತಹ ಸಂದರ್ಭದಲ್ಲಿ ಸೂರ್ಯಕುಮಾರ್​ಗೆ ನೆನಪಾಗುತ್ತಿದ್ದದ್ದು, ಉಡುಪಿಯ ಕಾಪು ಮಾರಿಯಮ್ಮ.

ಹೌದು.. ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್​ನಿಂದ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಕಾಪು ಮಾರಿಯಮ್ಮನ ಸನ್ನಿಧಿಗೆ ಬಂದು ವಿಶೇಷ ಪೂಜೆಗಳಲ್ಲಿ ಭಾಗಿಯಾಗಿದ್ದಾರೆ. ಮೇಲೆ ಹೇಳಿದಂತೆ ಸೂರ್ಯಕುಮಾರ್ ಅವರ ಮಡದಿ ದೇವಿಶಾ ಶೆಟ್ಟಿ, ಉಡುಪಿ ಮೂಲದವರು. ಪ್ರಸ್ತುತ ಅವರು ಮುಂಬೈನಲ್ಲಿ ನೆಲೆಸಿದ್ದಾರೆ. ಆದಾಗ್ಯೂ ತನ್ನ ಮೂಲದ ನಂಟು ಬಿಡದ ದೇವಿಶಾ, ಆಗಾಗ್ಗೆ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.

9 ದಿನಗಳಲ್ಲಿ 9 ಕ್ಯಾಪ್ಟನ್ ಆಗಿ ಆಯ್ಕೆ

ಹೀಗಾಗಿ ಕಾಪು ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ದಂಪತಿಗಳು ಎರಡು ಬಾರಿ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ 2024, ಜುಲೈ 9 ರಂದು ಕಾಪು ಮಾರಿಗುಡಿಗೆ ಭೇಟಿ ನೀಡಿದ್ದ ಸೂರ್ಯ ಕುಮಾರ್ ಆಶೀರ್ವಾದ ಪಡೆದಿದ್ದರು. ಈ ವೇಳೆ ದೇಗುಲದ ಅರ್ಚಕರು, ಸೂರ್ಯ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಲೆಂದು ಶುಭಹಾರೈಸಿದ್ದರು. ಇದಾದ ಕೇವಲ ಒಂಬತ್ತು ದಿನಗಳಲ್ಲಿ ಸೂರ್ಯ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು.

ಟಿ20 ವಿಶ್ವಕಪ್ ಗೆದ್ದು ನಿವೃತ್ತಿಯ ಬಗ್ಗೆ ಮೌನ ಮುರಿದ ಸೂರ್ಯಕುಮಾರ್ ಯಾದವ್

ಹೀಗಾಗಿ ಕೋಟ್ಯಂತರ ವೆಚ್ಚದಲ್ಲಿ ಮರು ನಿರ್ಮಾಣಗೊಂಡ ಹೊಸ ಮಾರಿಗುಡಿ ನಿರ್ಮಾಣ ವೇಳೆ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಕಂಬವನ್ನು ಕೊಡುಗೆಯಾಗಿ ನೀಡಿದ್ದರು. ಇದೇ ವೇಳೆ ಟಿ20 ವಿಶ್ವಕಪ್ ಕಪ್ ಗದ್ದ ನಂತರ ಕ್ಷೇತ್ರಕ್ಕೆ ಬರಬೇಕೆಂದು ದೇಗುಲದ ಪ್ರಮುಖರು ಸಂಕಲ್ಪ ಮಾಡಿಕೊಂಡಿದ್ದು, ಅದರಂತೆ ಸೂರ್ಯಕುಮಾರ್ ಯಾದವ್ ಇಷ್ಟರಲ್ಲೇ ಉಡುಪಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ಎಂಟ್ರಿ? ರಾಜ್ ಮತ್ತು ಡಿಕೆ ಸಿನಿಮಾಗೆ ಹೆಚ್ಚಿದ ಹೈಪ್

ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ದಕ್ಷಿಣದ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಲಿದ್ದಾರೆಯೇ? ಇಂತಹದೊಂದು ದೊಡ್ಡ ಸುದ್ದಿ ಈಗ ಚಿತ್ರರಂಗದಲ್ಲಿ ಕೌತುಕ ಮೂಡಿಸಿದೆ. ಖ್ಯಾತ ನಿರ್ದೇಶಕರಾದ ರಾಜ್ ಮತ್ತು ಡಿಕೆ (Raj & DK) ಸಿದ್ಧಪಡಿಸುತ್ತಿರುವ ಹೊಸ ಬಿಗ್ ಬಜೆಟ್ ಸಿನಿಮಾದಲ್ಲಿ ಸಮಂತಾ ಮತ್ತು ಸಲ್ಮಾನ್ ಖಾನ್ (Salman Khan) ಅವರು ಜೋಡಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೊಂದು ಸೂಪರ್ ಹೀರೋ ಸಿನಿಮಾ ಆಗಿರಲಿದ್ದು, ಈ ಪ್ರಾಜೆಕ್ಟ್ ಮೂಲಕ ಸಮಂತಾ ಅವರು ಬಾಲಿವುಡ್​​ಗೆ ಕಾಲಿಟ್ಟಂತಾಗುತ್ತದೆ.

‘ದಿ ಫ್ಯಾಮಿಲಿ ಮ್ಯಾನ್’ ರೀತಿಯ ಸೂಪರ್ ಹಿಟ್ ವೆಬ್ ಸರಣಿಗಳನ್ನು ನೀಡಿದ ರಾಜ್ ಮತ್ತು ಡಿಕೆ, ಈಗ ದೊಡ್ಡ ಪರದೆಯ ಮೇಲೆ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಸಮಂತಾ ಈಗಾಗಲೇ ಈ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಅವರ ನಡುವೆ ಉತ್ತಮ ಬಾಂಧವ್ಯವಿದೆ. ಮೂಲಗಳ ಪ್ರಕಾರ, ಈ ಚಿತ್ರದ ಪ್ರಮುಖ ಪಾತ್ರಕ್ಕೆ ಸಮಂತಾ ಅವರೇ ಸೂಕ್ತ ಎಂದು ನಿರ್ದೇಶಕರು ಭಾವಿಸಿದ್ದಾರೆ. ಒಂದು ವೇಳೆ ಇದು ಅಧಿಕೃತವಾದರೆ, ಇದು ಸಮಂತಾ ಅವರ ಪೂರ್ಣ ಪ್ರಮಾಣದ ಹಿಂದಿ ಸಿನಿಮಾ ಆಗಲಿದೆ.

ಸದ್ಯ ಸಲ್ಮಾನ್ ಖಾನ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನೈಜ ಘಟನೆ ಆಧಾರಿತ ಈ ಚಿತ್ರವನ್ನು ಅಪೂರ್ವ ಲಖಿಯಾ ಅವರು ನಿರ್ದೇಶಿಸುತ್ತಿದ್ದು, ಚಿತ್ರಾಂಗದಾ ಸಿಂಗ್ ಕೂಡ ನಟಿಸಿದ್ದಾರೆ. ಇದು ಏಪ್ರಿಲ್ 17ರಂದು ತೆರೆಕಾಣಲಿದೆ. ಇದಲ್ಲದೆ, ಸಲ್ಮಾನ್ ಖಾನ್ ಅವರು ದಕ್ಷಿಣದ ಖ್ಯಾತ ನಿರ್ಮಾಪಕ ದಿಲ್ ರಾಜು ಅವರೊಂದಿಗೂ ಒಂದು ಸಿನಿಮಾ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.

ಇನ್ನು, ಸಮಂತಾ ಕೂಡ ನಟನೆಯ ಜೊತೆಗೆ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಅವರು ನಿರ್ಮಿಸಿ ನಟಿಸುತ್ತಿರುವ ತೆಲುಗಿನ ಆ್ಯಕ್ಷನ್ ಡ್ರಾಮಾ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಮೇ 15ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಶಿವಮೊಗ್ಗದಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಶಿವಮೊಗ್ಗದ ಹೊಸನಗರದಲ್ಲಿ ಸಮಂತಾ ಹೋಳಿ: ಗಂಡನ ಜೊತೆ ಸಂಭ್ರಮ

ಸಲ್ಮಾನ್ ಖಾನ್ ಮತ್ತು ಸಮಂತಾ ರುತ್ ಪ್ರಭು ಅವರು ಒಂದಾಗಿದ್ದೇ ಹೌದಾದರೆ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ. ಸಲ್ಲು, ಸ್ಯಾಮ್ ಮತ್ತು ರಾಜ್​-ಡಿಕೆ ಕಾಂಬಿನೇಷನ್ ಎಂದರೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಆಗಲಿದೆ. ಸದ್ಯಕ್ಕೆ ಈ ಬಗ್ಗೆ ಅಂತೆ-ಕಂತೆ ಮಾತ್ರ ಕೇಳಿಬಂದಿದೆ. ಅಧಿಕೃತ ಘೋಷಣೆ ಹೊರಬರುವುದು ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾಹನ ಸವಾರರಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಆತಂಕ ಬೇಡ

ದೆಹಲಿ, ಮಾ.9: ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆ ತಡೆಯಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೇ, ಜಾಗತಿಕ ರಾಜಕೀಯ ಉದ್ವಿಗ್ನತೆಯ ನಡುವೆಯೂ ಭಾರತದಲ್ಲಿ ಇಂಧನ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ಸರ್ಕಾರಿ ಮೂಲಗಳು ಭರವಸೆ ನೀಡಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸದ್ಯಕ್ಕೆ ಏರಿಕೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಸ್ಪಷ್ಟಪಡಿಸಲಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $130 (ಅಮೆರಿಕನ್ ಡಾಲರ್) ದಾಟದ ಹೊರತು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಸದ್ಯ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು $100 ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಲಾಗಿದೆ.

ಇಲ್ಲಿದೆ ನೋಡಿ ಪೋಸ್ಟ್​;

ದೇಶದ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಕೊರತೆ ಉಂಟಾಗುವುದಿಲ್ಲ. ನಮ್ಮಲ್ಲಿ ಬೇಕಾದಷ್ಟು ದಾಸ್ತಾನು ಲಭ್ಯವಿದೆ. ಸಂಘರ್ಷ ಪೀಡಿತ ಹಾರ್ಮುಜ್ ಜಲಸಂಧಿಯ (Strait of Hormuz) ಹೊರಗಿನ ಪರ್ಯಾಯ ಮಾರ್ಗಗಳ ಮೂಲಕ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಭಾರತ ವೇಗಗೊಳಿಸಿದೆ. ಇದು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಿದೆ.

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್​​​ನಲ್ಲಿ ಮಹತ್ವದ ಬದಲಾವಣೆ

ಭಾರತವು ವಿಮಾನ ಇಂಧನದ (ATF) ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ. ನಮ್ಮಲ್ಲಿ ಎಟಿಎಫ್‌ನ ಸಾಕಷ್ಟು ದಾಸ್ತಾನು ಇರುವುದರಿಂದ ವಿಮಾನಯಾನ ಕ್ಷೇತ್ರದಲ್ಲಿ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಇಂಧನ ಭದ್ರತೆಯ ವಿಷಯದಲ್ಲಿ ಭಾರತವು ಇತರ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಇಂಧನ ದಾಸ್ತಾನು ಪಡೆಯಲು ಅನೇಕ ರಾಷ್ಟ್ರಗಳು ಈಗ ಭಾರತವನ್ನು ಸಂಪರ್ಕಿಸುತ್ತಿವೆ.ಯಾವುದೇ ರೀತಿಯ ಪ್ಯಾನಿಕ್ ಬೈಯಿಂಗ್ (ಭೀತಿಯಿಂದ ಹೆಚ್ಚಿನ ಇಂಧನ ಸಂಗ್ರಹಿಸುವುದು) ಮಾಡುವ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಇದ್ದಾಗ ಮತ್ತೊಂದು ನಿರ್ಣಯ ಹೇಗೆ ತರುತ್ತೀರಿ? ವಿಪಕ್ಷಗಳ ವರ್ತನೆಗೆ ಪ್ರಲ್ಹಾದ್ ಜೋಷಿ ಕಿಡಿ

ನವದೆಹಲಿ, ಮಾರ್ಚ್ 9: ಸ್ಪೀಕರ್ ಓಂ ಬಿರ್ಲಾ ವಿರುದ್ಧ ದೋಷಾರೋಪಣೆ ಕೋರಿ ನಿರ್ಣಯ ತರಲು ವಿಪಕ್ಷಗಳು ಮಾಡಿದ ಪ್ರಯತ್ನ ಫಲಿಸಲಿಲ್ಲ. ಲೋಕಸಭೆಯಲ್ಲಿ ಈ ನಿರ್ಣಯದ ಮೇಲಿನ ಚರ್ಚೆಗೆ ವಿಪಕ್ಷಗಳಿಂದಲೇ ಅಡ್ಡಿಯಾಯಿತು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರ ಚರ್ಚೆಗೆ ಬರಬೇಕೆಂದು ವಿಪಕ್ಷಗಳು ಹಿಡಿದ ಹಠಕ್ಕೆ ಸಮ್ಮತಿ ಸಿಗಲಿಲ್ಲ. ಪ್ರತಿಭಟನೆಗಳ ಮಧ್ಯೆ ಸೋಮವಾರದ ಕಲಾಪ ಅವಧಿಗೆ ಮುನ್ನವೇ ಅಂತ್ಯಗೊಂಡಿತು. ಸಂಸdಈಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಅವರು ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ವಿಪಕ್ಷಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಇವತ್ತು ಈ ವಿಚಾರವನ್ನು ಚರ್ಚೆ ಮಾಡಲಾಗುವುದು ಎಂದು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅವರು ನಿರ್ಣಯ ಮಂಡಿಸಬೇಕಿತ್ತು. ಅದರ ವಿಧಾನ ಏನಿದೆ ಹೇಳಿ? ನಿರ್ಣಯ ಮಂಡಿಸಿದಾಗ 50 ಜನರು ಅದಕ್ಕೆ ಬೆಂಬಲವಾಗಿ ನಿಲ್ಲಬೇಕು. ಇವತ್ತು ಲೋಕಸಭೆಯ ಅಧ್ಯಕ್ಷತೆ ವಹಿಸಿದ್ದ ಜಗದಾಂಬಿಕಾ ಪಾಲ್ ಅವರು, ನೀವು ನಿರ್ಣಯ ತರುವುದಾದರೆ ಚರ್ಚೆಗೆ ಅನುಮತಿಸುತ್ತೇನೆ ಎಂದು ಪದೇ ಪದೇ ಹೇಳಿದರು.

‘ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ತರುವ ಅಜೆಂಡಾ ಇದ್ದಾಗ ಮಧ್ಯದಲ್ಲಿ ಮತ್ತೊಂದು ನಿರ್ಣಯ, ಮತ್ತೊಂದು ನಿಲುವಳಿ ಸೂಚನೆ ಹೇಗೆ ತರುತ್ತೀರಿ? ನಿಯಮಗಳಿವೆಯೋ ಇಲ್ಲವೋ? ಸಂವಿಧಾನ ಇಲ್ಲವಾ? ರಾಹುಲ್ ಗಾಂಧಿ ಹೇಳಿದಂತೆ ಕಲಾಪ ನಡೆಸುವುದಾರೆ ನಿಯಮ ರಚಿಸಿರುವುದು ಯಾಕೆ? ಈ ವ್ಯಕ್ತಿಗಳು ಮೊದಲು ಬೇಡಿಕೆ ಇಡುತ್ತಾರೆ, ನಂತರ ಗಲಾಟೆ ಮಾಡುತ್ತಾರೆ. ಇದೆಂಥ ವಿಚಾರ ಹೇಳಿ? ನಾನು ಸಂಸದೀಯ ವ್ಯವಹಾರಗಳ ಸಚಿವನಾದ ಬಳಿಕ ಬಹಳಷ್ಟು ಬಾರಿ ಆಗಿದೆ. ಅವರು ಹೇಳಿದ್ದೇ ನಿಯಮ ಎಂದು ಭಾವಿಸಿದ್ದಾರೆ. ಯಾವ್ಯಾವುವು ಚರ್ಚೆಯಾಗಬೇಕು ಎಂಬುದನ್ನು ಬಿಎಸಿಯಲ್ಲಿ ಮೊದಲು ನಿರ್ಧಾರ ಆಗಬೇಕು’ ಎಂದು ಪ್ರಲ್ಹಾದ್ ಜೋಷಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಷ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್

ಇವತ್ತು ಮಧ್ಯಾಹ್ನದ ಕಲಾಪ ಶುರುವಾದಾಗ ವಿಪಕ್ಷಗಳ ಸದಸ್ಯರು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರವನ್ನು ಚರ್ಚೆಗೆ ತರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸದನದ ಅಜೆಂಡಾ ಪ್ರಕಾರ ಕಾರ್ಯನಿರ್ವಹಿಸಲು ಅವಕಾಶ ಕೊಡುವಂತೆ ಸಭಾಧ್ಯಕ್ಷರು ಪದೇ ಪದೇ ಮಾಡಿಕೊಂಡ ಮನವಿಗೆ ವಿಪಕ್ಷ ಸದಸ್ಯರು ಕಿವಿಗೊಡದೆ ಗದ್ದಲ ಮುಂದುವರಿಸಿದರು. ಇದರಿಂದಾಗಿ ಸದನದ ಕಲಾಪವನ್ನು ಸ್ಥಗಿತಗೊಳಿಸಬೇಕಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link