Headlines

nagaraj11081993

ಸಿಗರೇಟ್‌ಗೆ ಗಾಂಜಾ ತುಂಬಿಸಿ ನಶೆ ಏರಿಸುತ್ತಿದ್ದವರನ್ನು ರೆಡ್​​ ಹ್ಯಾಂಡ್​​ ಆಗಿ ಹಿಡಿದ ಖಾಕಿ

ಬೆಂಗಳೂರು, ಮಾರ್ಚ್​ 09: ಕಬ್ಬನ್​ಪಾರ್ಕ್​ನ ಶೌಚಾಲಯದ ಸಮೀಪ ಸಿಗರೇಟ್‌ಗೆ ಗಾಂಜಾ ತುಂಬಿಸಿ ಸೇದುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಫೋಟೋಗ್ರಾಫರ್​ಗಳಾದ ವಿ.ಸಚಿನ್(21), ಪವನ್ ಕಲ್ಯಾಣ್(22) ಬಂಧಿತರಾಗಿದ್ದು, ಫೋಟೋ ತೆಗೆಯುವ ಉದ್ದೇಶದಿಂದ ಇವರು ಪಾರ್ಕ್‌ಗೆ ಬಂದಿದ್ದರು. ಆದರೆ ಗಾಂಜಾ ಸೇದುತ್ತಿದ್ದ ಇವರನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಕಬ್ಬನ್​ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢ ‌‌‌ಪಟ್ಟಿದೆ. ಈ ಹಿನ್ನೆಲೆ ಎನ್‌ಡಿಪಿಎಸ್‌ ಕಾಯ್ದೆ ಕಲಂ…

Read More

ಮೆಟ್ರೋದಲ್ಲಿ ಗನ್ ಪ್ರಾಂಕ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವಕ!

ಬೆಂಗಳೂರು, ಮಾರ್ಚ್​ 09: ನಮ್ಮ ಮೆಟ್ರೋದಲ್ಲಿ (Namma Metro) ಆಟಿಕೆ ಗನ್ ಬಳಸಿ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದ ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಈ ಕೃತ್ಯ ನಡೆಸಿರುವುದು ತಿಳಿದುಬಂದಿದೆ. ಸೋಶಿಯಲ್ ಮೀಡಿಯಾ ಹುಚ್ಚಿಗೆ ದಂಡ ಕಟ್ಟಿದ ಆಸಾಮಿ ಫೆಬ್ರವರಿ 6ರಂದು ಅರ್ಜುನ್ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ…

Read More

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ Vs ಮಾಜಿ ಶಾಸಕರ ವಾರ್​​: ದೇವರ ಅಂಗಳ ತಲುಪಿದ ರಾಜಕೀಯ ಕಚ್ಚಾಟ

ಉಡುಪಿ, ಮಾರ್ಚ್​ 09: ಕಂಬಳದ ವಿಚಾರವಾಗಿ ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶುರುವಾದ ರಾಜಕೀಯ ಕಚ್ಚಾಟವೀಗ ದೈವ ಮತ್ತು ದೇವರ ಅಂಗಳ ತಲುಪಿದೆ. ತನ್ನ ಮೇಲೆ ವೈಯಕ್ತಿಕ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಬೇಸರಗೊಂಡಿರುವ ಬಿಜೆಪಿ ಶಾಸಕ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ದೇವರು ಮತ್ತು ದೈವದ ಮೊರೆ ಹೋಗಿದ್ದಾರೆ. ಕಾಪು ಶ್ರೀ ಹೊಸ ಮಾರಿಗುಡಿ ಅಮ್ಮನ ದೇಗುಲ ಮತ್ತು ಪೇಟೆಬೆಟ್ಟು ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಈ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಕಾಂಗ್ರೆಸ್​​ನ ಮಾಜಿ…

Read More

ಅನಾರೋಗ್ಯದ ಕಾರಣ ಕೊಟ್ಟು ‘ಜನ ನಾಯಗನ್’ ನೋಡೋದನ್ನು ಮುಂದಕ್ಕೆ ಹಾಕಿದ ರಿವಿಶನ್ ಸಮಿತಿ

‘ಜನ ನಾಯಗನ್’ ಸಿನಿಮಾ (Jana Nayagan Movie)  ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಮೂಲ ದಿನಾಂಕ ಮುಗಿದು ಎರಡು ತಿಂಗಳು ಕಳೆದರೂ ಸಿನಿಮಾಗೆ ರಿಲೀಸ್ ಭಾಗ್ಯ ಸಿಗುತ್ತಿಲ್ಲ. ಈ ಮಧ್ಯೆ, ‘ಜನ ನಾಯಗನ್’ ಸಿನಿಮಾ ಮಾರ್ಚ್ 19ರ ರಿಲೀಸ್ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೂ ಅವಕಾಶ ಸಿಗಬಾರದು ಎಂದು ಎಲ್ಲರೂ ನಿರ್ಧರಿಸಿದಂತೆ ಇದೆ. ಏಕೆಂದರೆ, ಸಿನಿಮಾ ವಿಮರ್ಶೆ ಮಾಡೋದಕ್ಕೆ ಪುರನ್ ವಿಮರ್ಶೆ ಸಮಿತಿ ರೆಡಿ ಇದ್ದಂತೆ ಕಾಣಿಸುತ್ತಿಲ್ಲ. ‘ಜನ ನಾಯಗನ್’ ಚಿತ್ರವನ್ನು…

Read More

Video: ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ, ತುಂಬಿಸಿಕೊಳ್ಳಲು ಮುಗಿಬಿದ್ದ ಜನ

ಕಡಪ, ಮಾರ್ಚ್​ 09: ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿತ್ತು.ಜನರು ಟಿನ್, ಬಕೆಟ್, ಬಾಟಲಿ ಮತ್ತು ಡ್ರಮ್‌ಗಳನ್ನು ಬಳಸಿ ತುಂಬಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.ಸರಿಸುಮಾರು 21,000 ಲೀಟರ್ ತುಪ್ಪದಲ್ಲಿ ಕೇವಲ 500 ಲೀಟರ್ ಮಾತ್ರ ಉಳಿದಿತ್ತು. ಪೊಲೀಸರು ಬರುವ ಮೊದಲೇ ಹೆಚ್ಚಿನ ಪ್ರಮಾಣದ ತುಪ್ಪವನ್ನು ತೆಗೆದುಕೊಂಡು ಹೋಗಲಾಗಿತ್ತು.ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆಯ ಬಳಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ.   ವಿಡಿಯೋ…

Read More

ಕಸ್ಟಮರ್ ಮನೆಯಲ್ಲಿ ಚಿನ್ನ ಕದ್ದ ಕ್ಯಾಬ್​​ ಚಾಲಕ ಲಾಕ್​​: ದೋಚಿದ್ದಿದ್ದು ಬರೋಬ್ಬರಿ 25 ಲಕ್ಷ ಮೌಲ್ಯದ ಬಂಗಾರ!

ಬೆಂಗಳೂರು, ಮಾರ್ಚ್​ 09: ಕಸ್ಟಮರ್ ಮನೆಯಲ್ಲಿ 25 ಲಕ್ಷ ಮೌಲ್ಯದ ಚಿನ್ನಾಭರಣ ದೊಚ್ಚಿದ್ದ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರೆಹಮಾನ್ ಬಂಧಿತ ಆರೋಪಿಯಾಗಿದ್ದು, ಚಿನ್ನಾಭರಣ ಸಮೇತ ಚಾಲಕನನ್ನು ಪೊಲೀಸರು ಲಾಕ್​​ ಮಾಡಿದ್ದಾರೆ. ಫೆಬ್ರವರಿ 11 ಶಾಪಿಂಗ್​​ಗೆ ಮುಂಬೈಗೆ ಹೊರಟಿದ್ದ ದಂಪತಿ, ಹೆಬ್ಬಾಳದಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಸೈಯದ್ ಸಲ್ಮಾನ್ ಪತ್ನಿಗೆ ಮನೆಯಲ್ಲಿ ಚಿನ್ನಾಭರಣ ಇರುವ ಕಪಾಟು ಲಾಕ್ ಮಾಡಿದ್ದೀಯಾ ಎಂದು ಕೇಳಿದ್ದರು. ಮಾರ್ಗ ಮಧ್ಯೆ ಮೂರು ದಿನಗಳ ಕಾಲ ಮನೆಗೆ…

Read More

ಟಿ20 ವಿಶ್ವಕಪ್​ ಗೆದ್ದರೂ ಸೂರ್ಯಕುಮಾರ್ ಯಾದವ್ ‘ಸ್ಥಾನ’ಕ್ಕೆ ಕುತ್ತು!

T20 World Cup 2026: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಯಶಸ್ಸಿನೊಂದಿಗೆ ಟೀಮ್ ಇಂಡಿಯಾ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ನಾಯಕನಾಗಿ ಮುಂದುವರೆಯುವುದು ಅನುಮಾನ. ಏಕೆಂದರೆ ಬಿಸಿಸಿಐ 2026ರ ಟಿ20 ವಿಶ್ವಕಪ್​ಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಇದೀಗ ಅವರು ವಯಸ್ಸು 35 ವರ್ಷ. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದೇ ಹೇಳಬಹುದು….

Read More

ಮದ್ಯ ನೀತಿ ಪ್ರಕರಣ: ಕೇಜ್ರಿವಾಲ್ ಮತ್ತು ಇತರ 23 ಜನರಿಗೆ ಹೈಕೋರ್ಟ್ ನೋಟಿಸ್

ನವದೆಹಲಿ, ಮಾರ್ಚ್​ 09: ದೆಹಲಿಯ ಅಬಕಾರಿ ನೀತಿಯಲ್ಲಿನ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್(Arvind Kejriwal) ಮತ್ತು ರೌಸ್ ಅವೆನ್ಯೂ ನ್ಯಾಯಾಲಯದಿಂದ ಖುಲಾಸೆಗೊಂಡ ಎಲ್ಲಾ 23 ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಈಗ ಮಾರ್ಚ್ 16 ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮಕ್ಕೆ ನಿರ್ದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ತಡೆಹಿಡಿದಿದೆ. ಸೋಮವಾರ, ಸಿಬಿಐ ಅರ್ಜಿಯ ನಂತರ ಕೇಜ್ರಿವಾಲ್, ಸಿಸೋಡಿಯಾ ಮತ್ತು…

Read More

Iran Israel War: ಯುದ್ಧದ ಪರಿಣಾಮ ಕಾರವಾರ ಬಂದರಿಗೆ ಡಾಂಬರ್ ಸರಬರಾಜು ಬಂದ್; ತಿಂಗಳಿಗೆ 80 ಲಕ್ಷ ರೂ. ನಷ್ಟ!

ಕಾರವಾರ, ಮಾರ್ಚ್​ 09: ಉತ್ತರ ಕನ್ನಡ ಜಿಲ್ಲೆಯ (Uttara Kannada) ಕಾರವಾರದಲ್ಲಿ ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಪರಿಣಾಮ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಇರಾನ್‌ನಿಂದ ಕಾರವಾರದ ವಾಣಿಜ್ಯ ಬಂದರಿಗೆ ಬರುತ್ತಿದ್ದ ಕಚ್ಚಾ ಡಾಂಬರ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ತಿಂಗಳಿಗೆ 80 ಲಕ್ಷ ರೂ.ಗಳವರೆಗೂ ನಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ. ಡೀಸೆಲ್ ಸರಬರಾಜಿಗೂ ಸಂಕಷ್ಟ ಸಾಮಾನ್ಯವಾಗಿ ಪ್ರತಿ ತಿಂಗಳು ಇರಾನ್‌ನಿಂದ ಕಚ್ಚಾ ಡಾಂಬರ್ ಸಾಗಣೆ ಹಡಗುಗಳು ಕಾರವಾರ ಬಂದರಿಗೆ ಆಗಮಿಸುತ್ತಿದ್ದವು. ಆದರೆ ಯುದ್ಧ ಪರಿಸ್ಥಿತಿಯಿಂದ ಈಗ…

Read More

Video: ಬೆಂಗಳೂರಿನ ಜನ್ರು ತುಂಬಾ ಒಳ್ಳೆಯವ್ರು; ಪ್ರಾಮಾಣಿಕ ಅನುಭವ ಹಂಚಿಕೊಂಡ ಮಹಿಳೆ

ಬೆಂಗಳೂರು, ಮಾರ್ಚ್ 09 : ಬೆಂಗಳೂರು (Bengaluru) ಅಂದ್ರೆ ಯುವಕ ಯುವತಿಯರಿಗೆ ಅದೇನೋ ಸೆಳೆತ, ಹೀಗಾಗಿ ಅದೆಷ್ಟೋ ಯುವಕ ಯುವತಿಯರು ಉದ್ಯೋಗ ಅರಸುತ್ತಾ ಬರುತ್ತಾರೆ. ರಾಜಧಾನಿ ಬೆಂಗಳೂರಿನಲ್ಲಿ ಒಂದು ವರ್ಷ ಕಳೆದ ಬಳಿಕ ತನ್ನ ಪ್ರಯಾಣ ಹಾಗೂ ತನ್ನ ಪ್ರಾಮಾಣಿಕ ಅನುಭವದ ಬಗ್ಗೆ ಮಾತನಾಡಿದ್ದು, ಬೆಂಗಳೂರಿನ ಜನರನ್ನು ಹಾಡಿ ಹೊಗಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. atyacreates ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿನಮ್ಮ ಬೆಂಗಳೂರಿನಲ್ಲಿ ಒಂದು…

Read More